Categories
ತೀರ್ಥಹಳ್ಳಿ

ನಿಗೂಢ ಸಾವು – ಕನ್ನಂಗಿ ಸಮೀಪದ ಬಿಸಿಲು ಮನೆಯಲ್ಲಿ ಘಟನೆ!

ನಿಗೂಢ ಸಾವು!
– ಅಪಘಾತವೋ ? ಕೊಲೆಯೋ…?
– ಕನ್ನಂಗಿ ಸಮೀಪದ ಬಿಸಿಲು ಮನೆಯಲ್ಲಿ ಘಟನೆ!
– ಬೈಕ್ ಸವಾರ ಮೃತ್ಯು!

NAMMUR EXPRESS NEWS:
ತೀರ್ಥಹಳ್ಳಿ: ಕನ್ನಂಗಿಯಿಂದ ಬೆಜ್ಜವಳಿ ಮಾರ್ಗದಲ್ಲಿ ಸಿಗುವ ಬಿಸಿಲುಮನೆ ಎಂಬಲ್ಲಿ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆಯೊಂದು ಜನವರಿ 7ರ ರಾತ್ರಿ ನಡೆದಿದೆ. ಕನ್ನಂಗಿ ಸಮೀಪದ ಹೊನ್ನಾಸ್ ಗದ್ದೆ ನಿವಾಸಿ ವಿಘ್ನೇಶ್ ಎಂಬುವರು ಜ.7 ರ ಸಂಜೆ ಬೆಜ್ಜವಳ್ಳಿಗೆ ಹೋದವರು ಮತ್ತೆ ವಾಪಸ್ ಬಂದಿಲ್ಲ. ಬಿಸಿಲುಮನೆಯ ಸಮೀಪ ರಸ್ತೆಯ ಬದಿಯಲ್ಲಿ ಮೃತ ದೇಹ ಕಂಡು ಬಂದಿದ್ದು, ಬೈಕ್ ಪುಡಿ ಪುಡಿಯಾಗಿದೆ. ಆದರೆ ದೇಹದ ಮೇಲೆ ಅಂತಹ ಗಾಯದ ಗುರುತುಗಳು ಕಂಡುಬಂದಿಲ್ಲ ಎಂಬುದು ಸ್ಥಳೀಯರ ಮಾಹಿತಿಯಾಗಿದೆ. ಇದೀಗ ಅಪಘಾತವೋ, ಕೊಲೆಯೋ ಎಂಬ ಶಂಕೆ ತೀವ್ರವಾಗಿ ವ್ಯಕ್ತವಾಗಿದ್ದು, ಮೃತದೇಹವನ್ನು ತೀರ್ಥಹಳ್ಳಿಯ ಆಸ್ಪತ್ರೆಗೆ ಶವ ಪರೀಕ್ಷೆಗೆ ಕಳುಹಿಸಲಾಗಿದೆ. ಉಳಿದ ಮಾಹಿತಿಗಳು ತನಿಖೆಯ ನಂತರವಷ್ಟೇ ತಿಳಿಯಬೇಕಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.