ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ಸ್ 16ನೇ ವಾರ್ಷಿಕಾಚರಣೆ
– ಬಹುಮಾನ ಯೋಜನೆ ಉದ್ಘಾಟನಾ ಸಮಾರಂಭ
– ಗ್ರಾಹಕರಿಗೆ 25 ಲಕ್ಷ ಮೌಲ್ಯದ ಬಹುಮಾನಗಳ ಉದ್ಘಾಟನೆ
NAMMUR EXPRESS NEWS
ತೀರ್ಥಹಳ್ಳಿ: ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್‌ನ 16ನೇ ವಾರ್ಷಿಕೋತ್ಸವ ಮತ್ತು ಹಬ್ಬದ ಪ್ರಯುಕ್ತ 25 ಲಕ್ಷ ಮೌಲ್ಯದ ಬಹುಮಾನಗಳ ಉದ್ಘಾಟನಾ ಕಾರ್ಯಕ್ರಮವು ಜುಲೈ 1 ರಂದು ಸಂಸ್ಥೆಯ ಶೋರೂಂನಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕೆನರಾ ಬ್ಯಾಂಕ್ ಚೀಫ್ ಮ್ಯಾನೇಜರ್ ಎಂ.ಡಿ ಸಾಬಿರ್ ಭಾಗವಹಿಸಿದ್ದರು. ನ್ಯಾಷನಲ್ ಸಂಸ್ಥೆಯ ಮುಖ್ಯಸ್ಥರಾದ ಇಬ್ರಾಹಿಂ ಷರೀಫ್ ಬಂಪರ್ ಡ್ರಾ ಉದ್ಘಾಟನೆಯನ್ನು ನೇರವೇರಿಸಿದರು. ಮಾಸಿಕ ಡ್ರಾದ ಉದ್ಘಾಟನೆಯನ್ನು ಕೆನರಾ ಬ್ಯಾಂಕ್ ಚೀಫ್ ಮ್ಯಾನೇಜರ್ ಎಂ.ಡಿ ಸಾಬಿರ್ ನೇರವೇರಿಸಿದರು. ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ ಯುಸುಫ್ ಹೈದರ್ ಅವರು ಅತಿಥಿಗಳನ್ನು ಮತ್ತು ಗ್ರಾಹಕರನ್ನು ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿ ಬಹುಮಾನ ಯೋಜನೆಯ ಬಗ್ಗೆ ವಿವರಿಸಿದರು. ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್‌ನ ಮೊಯಿದ್ದೀನ್ ಕಬೀರ್, ಸಲ್ಮಾನ್, ಕೆನರಾ ಬ್ಯಾಂಕ್ ಮ್ಯಾನೇಜರ್ ಗಿರೀಶ.ಕೆ.ಹೆಚ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಾರ್ಷಿಕಾಚರಣೆಯ ಸಂಭ್ರಮದ ಅಂಗವಾಗಿ ಒಟ್ಟು ರೂ.25 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಉಡುಗೊರೆಯಾಗಿ ನೀಡಲಾಗುವುದು. ಪ್ರತೀ ರೂ.10,000/- ಖರೀದಿಗೆ ಒಂದು ಉಚಿತ ಕೂಪನ್ ನೀಡಲಾಗುವುದು.
