Categories
ತೀರ್ಥಹಳ್ಳಿ

ತೀರ್ಥಹಳ್ಳಿ ಬರಲಿದೆ ನಿರ್ಮಲ ತುಂಗಭದ್ರಾ ಅಭಿಯಾನ

ತೀರ್ಥಹಳ್ಳಿ ಬರಲಿದೆ ನಿರ್ಮಲ ತುಂಗಭದ್ರಾ ಅಭಿಯಾನ
– ಶೃಂಗೇರಿ, ಕೊಪ್ಪ ಮೂಲಕ ಬಸವಾನಿ ತಲುಪಿದ ಅಭಿಯಾನ
– ಆರಗ, ತಹಸೀಲ್ದಾರ್ ಸೇರಿ ಅನೇಕ ನಾಯಕರ ಸಾಥ್

NAMMUR EXPRESS NEWS
ತೀರ್ಥಹಳ್ಳಿ
: ನಿರ್ಮಲ ತುಂಗಭದ್ರಾ ಅಭಿಯಾನ ತೀರ್ಥಹಳ್ಳಿಗೆ ಆಗಮಿಸಿದ್ದು ಭಾರೀ ಜನ ಬೆಂಬಲ ವ್ಯಕ್ತವಾಗುತ್ತಿದೆ.
ಪಾದಯಾತ್ರೆ ಶೃಂಗೇರಿಯಿಂದ ಪೂರ್ಣ ಕುಂಭ ಸ್ವಾಗತದಿಂದ ಬಸವಾನಿಯ ಗ್ರಾಮ ಗ್ರಾಮಸ್ಥರು ಮತ್ತು ಗಣ್ಯರು ಅತ್ಯಂತ ಅದ್ದೂರಿಯಿಂದ ಬರಮಾಡಿಕೊಂಡು ನಂತರ ಅಭಿಯಾನದಲ್ಲಿ ಭಾಗವಹಿಸಿದ ಎಲ್ಲರಿಗೂ ಭೋಜನದ ವ್ಯವಸ್ಥೆ ಏರ್ಪಡಿಸಿ ನಂತರ ಸರಳವಾದ ವೇದಿಕೆ ಕಾರ್ಯಕ್ರಮ ನಡೆಸಿ ಕಾರ್ಯಕ್ರಮದಲ್ಲಿ ಶಾಸಕ ಆರಗ ಜ್ಞಾನೇಂದ್ರ ಮತ್ತು ತಾಲೂಕು ದಂಡಾಧಿಕಾರಿ ಮತ್ತು ಗಣ್ಯರು ಅಭಿಯಾನದ ಬಗ್ಗೆ ಮಾತನಾಡಿ ಜನರಲ್ಲಿ ನದಿಯ ಪ್ರಾಮುಖ್ಯತೆ ಬಗ್ಗೆ,ಮತ್ತು ಪರಿಸರದ ಬಗ್ಗೆ ಕಾಳಜಿ ಮೂಡಿಸಿದರು.

ಎಲ್ಲಿಂದ ಎಲ್ಲಿಗೆ ಅಭಿಯಾನ?

ಬಸವಾನಿಯಿಂದ ಹೊಸ ಆಗ್ರಹಾರ ತನಕ ಅಭಿಯಾನ ಬಂದಿದ್ದು ರಂಜದ ಕಟ್ಟೆಯ ಭೀಮೇಶ್ವರ ದೇವಸ್ಥಾನದಿಂದ ತೀರ್ಥಹಳ್ಳಿಗೆ ತಲುಪಲಿದೆ.

 

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.