ಗಾಂಜಾ ಮಾರಾಟ ಮಾಡಿ ಸಿಕ್ಕಿ ಬಿದ್ದ ಹುಡುಗರು!
– ಕೆರೆ ಬಳಿ ಗಾಂಜಾ ಮಾರಾಟ ಮಾಡಲು ಪ್ಲಾನ್
– ತೀರ್ಥಹಳ್ಳಿಯಲ್ಲಿ ಗಾಂಜಾ ಜಾಲ ಬೇರು..!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತೀರ್ಥಹಳ್ಳಿ ಪಟ್ಟಣದ ಸೀಬಿನಕೆರೆಯ ಕೆರೆ ದಂಡೆಯ ಮೇಲೆ ಮೂರು ಯುವಕರು ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು ಬಂಧಿತರೆಲ್ಲರೂ ಹುಡುಗರು!.
ಎಸ್ಪಿ ಮಿಥುನ್ ಕುಮಾರ್ ಜಿ. ಕೆ, ಹೆಚ್ಚುವರಿ ಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ, ಡಿವೈಎಸ್ಪಿ ಗಜಾನನ ವಾಮನ ಸುತಾರ ಮತ್ತು ಸಿಬ್ಬಂದಿಗಳ ನೇತೃತ್ವದಲ್ಲಿ ಸ್ಥಳಕ್ಕೆ ಹೋಗಿ ದಾಳಿ ನಡೆಸಿ, ಗಾಂಜಾ ಮಾರಾಟ ಮಾಡುತ್ತಿದ್ದ 1) ಆದಿತ್ಯ, 23 ವರ್ಷ, ತ್ಯಾರಂದೂರು ಗುಡ್ಡೆಕೊಪ್ಪ ಗ್ರಾಮ ತೀರ್ಥಹಳ್ಳಿ, 2) ಅಭಿಷೇಕ್, 21 ವರ್ಷ, ಬಿ ಅಗ್ರಹಾರ ಕುರುವಳ್ಳಿ, ತೀರ್ಥಹಳ್ಳಿ ಮತ್ತು 3) ಅಮೀರ್ ಕೆ, 20 ವರ್ಷ, ಆರಗ, ತೀರ್ಥಹಳ್ಳಿ ಇವರನ್ನು ದಸ್ತಗಿರಿಮಾಡಿ, 190 ಗ್ರಾಂ ತೂಕದ ಒಣ ಗಾಂಜಾ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಎರಡು ಬೈಕ್ ಗಳನ್ನು ಅಮಾನತುಪಡಿಸಿಕೊಂಡು ಮೂರು ಜನ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ತೀರ್ಥಹಳ್ಳಿಯಲ್ಲಿ ಗಾಂಜಾ ಜಾಲ ಬೇರೂರಿದ್ದು ಇದೀಗ ಹುಡುಗರು ಗಾಂಜಾ ಸಪ್ಲೈ ಜಾಲದಲ್ಲಿರುವುದು ತೀರ್ಥಹಳ್ಳಿಗೆ ಕಳಂಕವಾಗಿದೆ.
