Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ನಾಳೆ ಪುನೀತ್ ನಮನ ಕಾರ್ಯಕ್ರಮ

ತೀರ್ಥಹಳ್ಳಿಯಲ್ಲಿ ನಾಳೆ ಪುನೀತ್ ನಮನ ಕಾರ್ಯಕ್ರಮ
– ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಸಂಗೀತ ಸಂಜೆ
– ತೀರ್ಥಹಳ್ಳಿ ಟಿ. ಎಸ್. ಟಿ ಕನ್ವೆನ್ಷನ್ ಹಾಲ್ ಅಲ್ಲಿ ಕಾರ್ಯಕ್ರಮ

NAMMUR EXPRESS NEWS
ತೀರ್ಥಹಳ್ಳಿ: ಪುನೀತ್ ಬ್ರಿಗೇಡ್, ಕರ್ನಾಟಕ, ವಿಶ್ವಮಾನವ ಕನ್ನಡ ವೇದಿಕೆ, ತೀರ್ಥಹಳ್ಳಿ, ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಸಂಸ್ಥೆಗಳ ವತಿಯಿಂದ ದಿ.ಪುನೀತ್ ರಾಜಕುಮಾರ್ ಅವರ ಜನ್ಮ ದಿನದ ಪ್ರಯುಕ್ತ ಮಾ. 17ರಂದು ತೀರ್ಥಹಳ್ಳಿಯಲ್ಲಿ ಪುನೀತ್ ನಮನ -2025 ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಸಂಗೀತ ಸಂಜೆ ಇರಲಿದೆ. ಈ ಮೂಲಕ ಪುನೀತ್ ಅವರ ಸೇವೆ ಯನ್ನು ಸ್ಮರಣೆ ಮಾಡಲಾಗುತ್ತದೆ. ದಿನಾಂಕ: ಮಾ. 17, ಸೋಮವಾರ
ಸಮಯ: 5:30 ಗಂಟೆಯಿಂದ, ಸ್ಥಳ: ಟಿ. ಎಸ್. ಟಿ ಕನ್ವೆನ್ಷನ್ ಹಾಲ್
ಕುವೆಂಪು ಬಡಾವಣೆ, ತೀರ್ಥಹಳ್ಳಿ ಇಲ್ಲಿ ಕಾರ್ಯಕ್ರಮ ನಡೆಯಲಿದೆ.
ನಮ್ಮೂರ್ ಎಕ್ಸ್ ಪ್ರೆಸ್ ಮೀಡಿಯಾ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಲಿದೆ. ಪುನೀತ್ ಅಭಿಮಾನಿಗಳು, ಸಾರ್ವಜನಿಕರು, ಸಂಘ ಸಂಸ್ಥೆ ಗಳ ಪ್ರಮುಖರು ಆಗಮಿಸಲು ಕೋರಲಾಗಿದೆ.

ಸರ್ವರಿಗೂ ಸುಸ್ವಾಗತ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.