Categories
ತೀರ್ಥಹಳ್ಳಿ

ರಸ್ತೆಯಲ್ಲೇ ನೆಟ್ಟಿ ಮಾಡಿದ ಗ್ರಾಮಸ್ಥರು!

ರಸ್ತೆಯಲ್ಲೇ ನೆಟ್ಟಿ ಮಾಡಿದ ಗ್ರಾಮಸ್ಥರು!
– ತೀರ್ಥಹಳ್ಳಿ ಪಟ್ಟಣದ ಸಮೀಪದಲ್ಲೇ ರಸ್ತೆ ಅವ್ಯವಸ್ಥೆ
– ಇಂದಾವರ -ಕೊರೋಡಿ, ಮಕ್ಕಿಮನೆ ಗ್ರಾಮಸ್ಥರಿಂದ ಪ್ರತಿಭಟನೆ
– ಮುಂದಿನ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಸಮೀಪದ ಇಂದಾವರ -ಕೊರೋಡಿ ಮತ್ತು ಮಕ್ಕಿಮನೆ ಗ್ರಾಮಸ್ಥರು ತಮ್ಮ ಊರಿಗೆ ಹೋಗುವ ರಸ್ತೆ ಅವ್ಯವಸ್ಥೆ ಬಗ್ಗೆ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ. ತೀರ್ಥಹಳ್ಳಿ ಪಟ್ಟಣದ ಬೆಟ್ಟಮಕ್ಕಿ ಕಿತ್ತಿನಗದ್ದೆ ಕಡೆಯಿಂದಇಂದಾವರ -ಕೊರೋಡಿ ಮತ್ತು ಮಕ್ಕಿಮನೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹೊಂಡ ಗುಂಡಿಗಳಿದ್ದು ಓಡಾಡುವುದು ತುಂಬಾ ಕಷ್ಟ ಆಗಿದೆ. ವಾಹನಗಳು, ಮಕ್ಕಳು ಇದರಿಂದ ತೊಂದರೆಗೆ ಒಳಗಾಗಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿದರೂ, ದೂರು ಕೊಟ್ಟರೂ ಗಮನ ವಹಿಸಲಿಲ್ಲ. ಗ್ರಾಮಸ್ಥರು ರಸ್ತೆಯಲ್ಲಿ ಸಸಿ ನೆಡುವ ಮೂಲಕ ಪ್ರತಿಭಟನೆ ಮಾಡಿ ಸೌಲಭ್ಯಕ್ಕಾಗಿ ಅಗ್ರಹಿಸಿದ್ದಾರೆ. ಎಲ್ಲಾ ಗ್ರಾಮಗಳ ಸುಮಾರು 150ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು.

ಮುಂದಿನ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

ರಸ್ತೆ ಅವ್ಯವಸ್ಥೆ ಇರುವ ಗ್ರಾಮಗಳಿಗೆ ರಸ್ತೆ ಸರಿಪಡಿಸದಿದ್ದಲ್ಲಿ ಮುಂದಿನ ಲೋಕ ಸಭೆ, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ತರು ಎಚ್ಚರಿಸಿದ್ದಾರೆ.

ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.