ಉದ್ಯಮಿ ಶ್ರೀಧರ್ ಶೆಟ್ಟಿ ಮನೆಗೆ ರವಿಶಂಕರ್ ಗುರೂಜಿ!
– ತೀರ್ಥಹಳ್ಳಿ ರಾಮಕೊಂಡಕ್ಕೆ ಭೇಟಿ ನೀಡುವ ಮುನ್ನ ಭೇಟಿ
– ರವಿಶಂಕರ್ ಗುರೂಜಿ ಆಪ್ತರಾಗಿರುವ ಶ್ರೀಧರ್ ಶೆಟ್ಟಿ
– ರಾಮಕೊಂಡಕ್ಕೆ ಎರಡನೇ ಬಾರಿಗೆ: ಪುಣ್ಯ ತೀರ್ಥ ಸೇವನೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಮೂಲದ ಉದ್ಯಮಿ ಬಾಳಗಾರು ಶ್ರೀಧರ್ ಶೆಟ್ಟಿ ಮನೆಗೆ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿಶಂಕರ್ ಗುರೂಜಿ ಶುಕ್ರವಾರ ಭೇಟಿ ನೀಡಿ ಕುಟುಂಬಕ್ಕೆ ಆಶೀರ್ವಾದ ಮಾಡಿದರು. ತೀರ್ಥಹಳ್ಳಿ ರಾಮಕೊಂಡಕ್ಕೆ ಭೇಟಿ ನೀಡುವ ಮುನ್ನ ಫಾರ್ಮಾ ಕ್ಷೇತ್ರದ ಪ್ರಮುಖ ಉದ್ಯಮಿಯಾಗಿರುವ ಶ್ರೀಧರ್ ಶೆಟ್ಟಿ ಮನೆಗೆ ಭೇಟಿ ನೀಡಿ ಕೆಲ ಹೊತ್ತು ಕಳೆದರು. ಶ್ರೀಧರ್ ಶೆಟ್ಟಿ ದಂಪತಿಗಳ ಅತಿಥ್ಯ ಸ್ವೀಕರಿಸಿದರು. ಈ ವೇಳೆ ಶ್ರೀಧರ್ ಶೆಟ್ಟಿ ಪತ್ನಿ ವಾಣಿಶ್ರೀ, ಸಂಬಂಧಿ ಹಾಗೂ ಉದ್ಯಮಿ, ಖಂಡಿಲ್ ಮೋಟರ್ಸ್ ಮಾಲೀಕ ಸುನೀಲ್ ಶೆಟ್ಟಿ ಹಾಗೂ ಅವರ ಪತ್ನಿ ಶೈಲಾ ಹಾಗೂ ಕುಟುಂಬದವರು ಇದ್ದರು. ರವಿಶಂಕರ್ ಗುರೂಜಿ ಆಪ್ತರಾಗಿರುವ ಶ್ರೀಧರ್ ಶೆಟ್ಟಿ ಅವರು ತೀರ್ಥಹಳ್ಳಿಯ ಬಾಳಗಾರಿನವರು.
2ನೇ ಬಾರಿಗೆ ರಾಮಕೊಂಡ ಭೇಟಿ: ತೀರ್ಥ ಸ್ವೀಕಾರ!
ತೀರ್ಥಹಳ್ಳಿ ತಾಲೂಕಿನ ಪುರಾಣ ಪ್ರಸಿದ್ಧ ಶ್ರೀ ರಾಮ ಕೊಂಡಕ್ಕೆ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕರಾದ ರವಿಶಂಕರ್ ಗುರೂಜಿ ಎರಡನೇ ಬಾರಿಗೆ ಭೇಟಿ ನೀಡಿದರು. ಕೊಲ್ಲೂರು ಮುಕಾಂಬಿಕೆ ದರ್ಶನ ಮಾಡಿ ವಾಪಾಸ್ ಆಗುವ ವೇಳೆ ತೀರ್ಥಹಳ್ಳಿಗೆ ಭೇಟಿ ನೀಡಿದ ಅವರು ಪಾಪ ಪರಿಹಾರದ ಸಂಕೇತವಾದ ಪ್ರಸಿದ್ಧ ರಾಮ ಕೊಂಡದ ನೀರನ್ನು ಪ್ರೊಕ್ಷಣೆ ಮಾಡಿಕೊಂಡು ಪುನೀತರಾದರು. 2021ರಲ್ಲಿ ಒಮ್ಮೆ ಗುರೂಜಿ ರಾಮಕೊಂಡ ಮತ್ತು ರಾಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.