Categories
ತೀರ್ಥಹಳ್ಳಿ

ಭಾರತಿಪುರ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಭಾರತಿಪುರ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಪೂಜೆ
– ಬನದ ಹುಣ್ಣಿಮೆ ಪ್ರಯುಕ್ತ ಹೋಮ ಹವನ!
– ಉಡುಪಿ ಪುತ್ತಿಗೆ ಮಠದ ಆಸ್ಥಾನ ಗಾಯಕರಿಂದ ಭಕ್ತಿಗೀತೆ

NAMMUR EXPRESS NEWS
ತೀರ್ಥಹಳ್ಳಿ: ಭಾರತಿಪುರದ ಶ್ರೀ ಬನಶಂಕರಿ ದೇವಿ ಮತ್ತು ಪರಿವಾರ ದೇವತೆಗಳ ಸಾನಿಧ್ಯದಲ್ಲಿ ಬನದ ಹುಣ್ಣಿಮೆಯ ಪ್ರಯುಕ್ತ ಮತ್ತು ವರ್ದಂತೋತ್ಸವದ ಅಂಗವಾಗಿ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಹೋಮ ಹವನ ಮತ್ತು ಶ್ರೀ ರಘುವರೇಂದ್ರ ತೀರ್ಥ ಪಾದಂಗಳವರು ಪುರ ಪ್ರವೇಶ, ಮತ್ತು ಪಾದಪೂಜೆ ಹಾಗೂ ಆಶೀರ್ವಚನ ನೀಡಿದರು. ಆಶೀರ್ವಚನದ ನಂತರ ಭಕ್ತಾದಿಗಳಿಗೆ ಮಂತ್ರಾಕ್ಷತೆ ನೀಡಿ ಆಶೀರ್ವಾದ ಮಾಡಿದರು. ನಂತರ ಶ್ರೀ ಉಡುಪಿ ಪುತ್ತಿಗೆ ಮಠದ ಆಸ್ಥಾನ ಗಾಯಕರಾದ ಶ್ರೀಧರ ಉಡುಪ ಇವರಿಂದ ಭಕ್ತಿಗೀತೆಗಳ ಹಾಡುಗಾರಿಕೆ ನಡೆಸಿಕೊಟ್ಟರು.

ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಸಲಾಯಿತು. ಇಂದು ಸಂಜೆ 5:00ಗೆ ನಾರಾಯಣ ಪೂಜೆ ನಡೆಯಲಿದ್ದು ನಂತರ ತೀರ್ಥ ಪ್ರಸಾದ ವಿನಿಯೋಗ ಮತ್ತು ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 7 ಗಂಟೆಗೆ ಸರಿಯಾಗಿ ಶ್ರೀ ಬನಶಂಕರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ನಡೆಯಲಿದ್ದು, ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀದೇವಿಯ ಮುಡಿಗಂಧ ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಮಂಜುನಾಥ, ತಿಮ್ಮಯ್ಯ ಮತ್ತು ಸಹೋದರರು ಹಾಗು ಶ್ರೀ ಬನಶಂಕರಿ ದೇವಸ್ಥಾನ ಭಾರತಿಪುರದ ವತಿಯಿಂದ ಸರ್ವರನ್ನು ಸ್ವಾಗತಿಸಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.