Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ದ ಹೋರಾಟ

ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ದ ಹೋರಾಟ
– ರಾಜ್ಯ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಪ್ರತಿಭಟನೆ
– ಕೋಟಿ ಕೋಟಿ ಹಣದ ಭ್ರಷ್ಟಾಚಾರ: ಆರಗ

NAMMUR EXPRESS NEWS
ತೀರ್ಥಹಳ್ಳಿ: ಪ್ರಸ್ತುತ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ತೀರ್ಥಹಳ್ಳಿ ಬಿಜೆಪಿ ವತಿಯಿಂದ ತಾಲೂಕು ದಂಡಾಧಿಕಾರಿಗಳ ಮೂಲಕ ಬುಧವಾರ ಪ್ರತಿಭಟನೆಯೊಂದಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ, ಕಾಂಗ್ರೆಸ್ ಸರ್ಕಾರವು ಭ್ರಷ್ಟಾಚಾರದಲ್ಲಿ ತೊಡಗಿದೆ. ಐಟಿ ದಾಳಿ ಮಾಡಿದಾಗ ಪ್ರಮುಖ ನಾಯಕರ ಮನೆಯಲ್ಲಿ ಸಿಕ್ಕಂತ ಕೋಟಿ ಕೋಟಿ ಅಧಿಕೃತ ಹಣವೇ ಇದಕ್ಕೆ ಸಾಕ್ಷಿಯಾಗಿದೆ. ಇದನ್ನು ನೋಡಿದರೆ ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೆಗೆ ಎಟಿಎಂ ಆಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಅನುಮಾನ ಕಾಡುತ್ತಿದೆ.

ಈ ಸರ್ಕಾರ ಅಭಿವೃದ್ಧಿ ಶೂನ್ಯ ಆಡಳಿತ ನಡೆಸುತ್ತಿದ್ದು ಜನರ ನಿತ್ಯದ ಊಟದ ಅಕ್ಕಿಯ ದರವನ್ನು ಇತಿಹಾಸದಲ್ಲಿ ಎಂದು ಏರಿಕೆಯಾಗದಷ್ಟು ಏರಿಕೆ ಮಾಡಿದ್ದಲ್ಲದೆ ಕಿಸಾನ್ ಸಮ್ಮಾನ್ ಯೋಜನೆಯ ಹಣವನ್ನು ರೈತರಿಗೆ ಕೊಡದೆ ವಂಚಿಸಿದೆ, ರೈತರ ಮಕ್ಕಳಿಗೆ ನೆರವಾಗಿದ್ದ ವಿದ್ಯಾನಿಧಿಯನ್ನು ರದ್ದು ಮಾಡಿದೆ. ಮಧ್ಯದ ದರ ಹಾಗೂ ವಿದ್ಯುತ್ ದರವನ್ನು ವಿಪರೀತ ಹೆಚ್ಚಿಗೆ ಮಾಡಿ ಸಾಲದಕ್ಕೆ ರೈತರಿಗೆ ವಂಚಿಸಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟಿದೆ, ಇದೆಲ್ಲದರ ನಡುವೆಯೂ ರಾಷ್ಟ್ರಕವಿ ಕುವೆಂಪುರವರಿಗೆ ಅವಮಾನಿಸಿದ್ದಾರೆ. ಬಡವರಿಗೆ ದಲಿತರ ಮೇಲೆ ಹಲ್ಲೆ ನಡೆಸುವುದು ಜಾತಿ ನಿಂದನೆ ಮಾಡುವುದು, ಬಡವರ ವಿರೋಧಿ, ಶ್ರಮಿಕರ ವಿರೋಧಿ ನೀತಿಯನ್ನು ಖಂಡಿಸಿ ತೀರ್ಥಹಳ್ಳಿಯಲ್ಲಿ ಇಂದು ಬಿಜೆಪಿ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ರವರ ಮೂಲಕ ರಾಜ್ಯಪಾಲರಿಗೆ ರಾಜ್ಯ ಸರ್ಕಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಬೇಕೆಂದು ವಿನಂತಿಸಿ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು 5 ತಿಂಗಳುಗಳು ಕಳೆದಿವೆ, ರಾಜ್ಯದ ಇತಿಹಾಸದಲ್ಲಿ ಬಹುಶಃ ಈ ಮಟ್ಟದಲ್ಲಿ ಯಾವ ಸರ್ಕಾರವು ಆಡಳಿತ ಮಾಡಿರಲಿಲ್ಲ. ಸಣ್ಣ ಮಕ್ಕಳಿಂದ ಹಿಡಿದು ಎಲ್ಲರ ಬಾಯಲ್ಲೂ ಕೂಡ ಇದೊಂದು ಭ್ರಷ್ಟ ಸರ್ಕಾರ ಎನ್ನುವ ಮಾತನ್ನು ಬರುವ ಹಾಗೆ ಮಾಡುತ್ತಿದೆ. ಈ ಕೆಟ್ಟ ಆಡಳಿತಕ್ಕೆ ಜನರು ನರಳುತ್ತಿದ್ದಾರೆ. ಈ ರೀತಿ ಲೋಡ್ ಶೆಡ್ಡಿಂಗ್ ಮಾಡುವ ಪರಿಸ್ಥಿತಿ ಯಾವಾಗಲೂ ಬಂದಿರಲಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಪಕ್ಷದ ಅಧ್ಯಕ್ಷರಾದ ಬಾಳೆಬೈಲು ರಾಘವೇಂದ್ರರವರು ಮಾತನಾಡಿ, ಈ ಬಾರಿ ನಡೆದಂತಹ ವಿಧಾನಸಭಾ ಚುನಾವಣೆ ಕರ್ನಾಟಕದ ಜನರ ಪಾಲಿಗೆ ಒಂದು ಶಾಪವಾಗಿ ಪರಿಣಮಿಸಿದೆ. ಜನರಿಗೆ ಸುಳ್ಳು-ಸುಳ್ಳು ಆಶ್ವಾಸನೆಯನ್ನು ಕೊಟ್ಟು, ಬಿಟ್ಟಿ ಭಾಗ್ಯಗಳನ್ನು ಘೋಷಣೆ ಮಾಡಿ ಯಾವ ಭಾಗ್ಯಗಳನ್ನು ನೆರವೇರಿಸದೆ ಅಲ್ಲಲ್ಲೇ ಅದನ್ನು ಅನುಷ್ಠಾನಕ್ಕೆ ತರುವ ಪ್ರಯತ್ನ ಮಾಡಿ, ಖಜಾನೆ ಹಣವನ್ನು ಲೂಟಿ ಮಾಡಿ ಈ ರೀತಿ ಆಡಳಿತ ಮಾಡುತ್ತಿರುವುದು ನಾವು ನೋಡಿದ್ದೇವೆ.

ಅಲ್ಪಸ್ವಲ್ಪ ಭಾಗ್ಯಗಳ ಈಡೇರಿಕೆಗಾಗಿ ಎಲ್ಲಾ ದರವನ್ನು ಹೆಚ್ಚಿಗೆ ಮಾಡಿ ಜನರಿಗೆ ಸಂಕಷ್ಟ ತಂದಿದ್ದಾರೆ. ಮುದ್ರಾಂಕ ಶುಲ್ಕವನ್ನು 30ರಷ್ಟು ಹೆಚ್ಚಿಸಿದ್ದರೆ ಮಧ್ಯ, ವಿದ್ಯುತ್ ಸೇರಿದಂತೆ ಎಲ್ಲಾ ದರಗಳನ್ನು ಹೆಚ್ಚಿಸಿರುವುದಲ್ಲದೆ ಲೋಡ್ ಶೆಡ್ಡಿಂಗ್ ಕೂಡ ಶುರುವಾಗಿದೆ. ನೀರನ್ನು ಕೂಡ ಮುಂದಿನ ದಿನಗಳಲ್ಲಿ ಬೇರೆ ರಾಜ್ಯಗಳಿಂದ ತರಿಸಿಕೊಳ್ಳುವ ಪರಿಸ್ಥಿತಿ ರಾಜ್ಯಕ್ಕೆ ಬರಲಿದೆ ಎನ್ನುವುದು ಅನುಮಾನ. ಹಿಂದೂ ವಿರೋಧಿ ನೀತಿಯ ರಾಜ್ಯಭಾರವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಾರೆ ಎಂದರು.

ಪ್ರತಿಭಟನೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ, ಬಿಜೆಪಿ ಮಂಡಲದ ಅಧ್ಯಕ್ಷರಾದ ಬಾಳೆಬೈಲು ರಾಘವೇಂದ್ರ, ಕುಕ್ಕೆ ಪ್ರಶಾಂತ್, ಯುವ ನಾಯಕ ಆರ್ ಮದನ್, ಹಿಂದುಳಿದ ವರ್ಗಗಳ ಮೋರ್ಚದ ನಾಯಕರಾದ ಅಶೋಕ ಮೂರ್ತಿ, ಜಿಲ್ಲಾ ರೈತ ಮೋರ್ಚದ ಅಧ್ಯಕ್ಷರಾದ ಸಾಲೆಕೊಪ್ಪ ರಾಮಚಂದ್ರ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಹೆದ್ದೂರು ನವೀನ್, ಮ್ಯಾಮ್ ಕೋಸ್ ನಿರ್ದೇಶಕರಾದ ಸಿ ಬಿ ಈಶ್ವರ್, ಜಿಲ್ಲಾ ಎಸ್ ಸಿ ಮೋರ್ಚಾದ ಅಧ್ಯಕ್ಷರಾದ ಶ್ರೀಧರ್, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ರಕ್ಷಿತ್ ಮೇಗರವಳ್ಳಿ ಹಾಗೂ ಕರುಣಾಕರ್, ಹಾಗೂ ಹಿರಿಯರಾದ ಶಾಮಣ್ಣ, ಹಿಂದುಳಿದ ವರ್ಗದ ಮೋರ್ಚಾದ ಅಧ್ಯಕ್ಷರಾದ ಮಂಜುನಾಥ್ , ಸಂದೇಶ್ ಜವಳಿ, ಸೊಪ್ಪುಗುಡ್ಡೆ ರಾಘವೇಂದ್ರ, ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಅನಿಲ್, ಗ್ರಾಮ ಪಂಚಾಯಿತಿ ಒಕ್ಕೂಟಗಳ ಅಧ್ಯಕ್ಷರಾದ ಅನಿಲ್ ವಿಧಾತ ಸೇರಿದಂತೆ ಪಕ್ಷದ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ಮುಖಂಡರು, ಗ್ರಾ ಪಂ ಅಧ್ಯಕ್ಷರು, ಸದಸ್ಯರು, ಪ. ಪಂ ಸದಸ್ಯರು, ಎಲ್ಲಾ ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಪದಾಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.