Categories
ತೀರ್ಥಹಳ್ಳಿ

ತೀರ್ಥಹಳ್ಳಿಯ ಮೇಗರವಳ್ಳಿ ಬಳಿ ಭೀಕರ ಅಪಘಾತ!

ತೀರ್ಥಹಳ್ಳಿಯ ಮೇಗರವಳ್ಳಿ ಬಳಿ ಭೀಕರ ಅಪಘಾತ!
– ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ
– ಒಬ್ಬರಿಗೆ ಗಂಭೀರ ಗಾಯ, ತೀರ್ಥಹಳ್ಳಿ ಸರಕಾರಿ ಆಸ್ಪತ್ರೆಗೆ ದಾಖಲು
– ಮಾನವೀಯತೆ ಮೆರೆದ ಟಿಂಬರ್ ಉದ್ಯಮಿ ಮಹೇಶ್

NAMMUR EXPRESS NEWS
ತೀರ್ಥಹಳ್ಳಿ: ಮೇಗರವಳ್ಳಿ ಸಮೀಪದ ಅರೆಕಲ್ಲು ಬಳಿ ಗುರುವಾರ ಬೆಳಗಿನ ಜಾವ 7 ಗಂಟೆ ಸುಮಾರಿಗೆ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಕಾರು ಜಖಂ ಆಗಿದೆ. ಕಾರು ಗುದಿದ್ದ ರಭಸಕ್ಕೆ ಕಾರು ಸಂಪೂರ್ಣ ನುಜುಗುಜ್ಜು ಆಗಿದೆ. ಶಿವಮೊಗ್ಗದ ಅಸಿಸ್ಟೆಂಟ್ ಇಂಜಿನಿಯರ್ ಹಾಗೂ ಅವರ ಪತ್ನಿ,16 ವರ್ಷದ ಮಗಳು, ಎಂಟು ವರ್ಷದ ಮಗ ಕಾರಿನಲ್ಲಿ ಇದ್ದರು ಎಂಬ ಮಾಹಿತಿ ತಿಳಿದು ಬಂದಿದೆ. ಮೂರು ಜನಕ್ಕೆ ಗಾಯ ಆಗಿದ್ದು ಮಗಳಿಗೆ ತೀವ್ರ ತಲೆಗೆ ಪೆಟ್ಟು ಬಿದ್ದಿದೆ ಮುಖಕ್ಕೆ ತೀವ್ರ ಪೆಟ್ಟಾಗಿದೆ.

ಮಾನವೇಯತೆ ಮೆರೆದ ಮಹೇಶ್

ಅಪಘಾತದ ವೇಳೆ ಘಟನಾ ಸ್ಥಳದಲ್ಲಿದ್ದ ಟಿಂಬರ್ ಉದ್ಯಮಿ ಮಹೇಶ್ ಎಂಬುವರು ತಕ್ಷಣವೇ ತೀರ್ಥಹಳ್ಳಿಯ ಸರಕಾರಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರದಿದ್ದಾರೆ. ಈ ಪ್ರಕರಣ ಆಗುಂಬೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.