Categories
ತೀರ್ಥಹಳ್ಳಿ

ಇಂಡಿಯನ್ ಬುಕ್ ಆಫ್ ರೆಕಾರ್ಡ್ ನಲ್ಲಿ ತೀರ್ಥಹಳ್ಳಿಯ ಹುಡುಗನ ಸಾಧನೆ

ಇಂಡಿಯನ್ ಬುಕ್ ಆಫ್ ರೆಕಾರ್ಡ್ ನಲ್ಲಿ ತೀರ್ಥಹಳ್ಳಿಯ ಹುಡುಗನ ಸಾಧನೆ
– ಭದ್ರಾವತಿ: ದಕ್ಷಿಣ ಭಾರತೀಯ ಮಹಿಳಾ ಸಾಧನೆಯ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ಭದ್ರಾವತಿ ಯುವತಿ

NAMMUR EXPRESS NEWS
ಇಂಡಿಯನ್ ಬುಕ್ ಆಫ್ ರೆಕಾರ್ಡ್ ನಲ್ಲಿ ತೀರ್ಥಹಳ್ಳಿಯ ಹುಡುಗನ ಸಾಧನೆ ಜಿ. ಅಭಿಷಿಕ್ತ ಸಾಮ್ರಾಟ್ ತಂದೆಯ ಹೆಸರು ಗುರುರಾಜ ಡಿ .ಸಿ ತಾಯಿಯ ಹೆಸರು ಅರ್ಪಿತಾ ಎಂ .ಜೆ ಇಂದಿರಾನಗರ ದೇವಂಗಿ ಪೋಸ್ಟ್ ತೀರ್ಥಹಳ್ಳಿ ತಾಲೂಕ್ ಇವರ ಮಗನಾದ ಅಭಿಷಿಕ್ತ ಸಾಮ್ರಾಟ್ ಎರಡು ವರ್ಷ ಒಂದು ತಿಂಗಳಿದಾಗಲೇ ಸಾಧನೆ 10 ತರಕಾರಿ ಹೆಸರು, 12 ಪ್ರಾಣಿಗಳ ಹೆಸರು, 8 ವಾಹನಗಳ ಹೆಸರು, ಆರು ಪಕ್ಷಿಗಳ ಹೆಸರು, 14 ಹಣ್ಣಿನ ಹೆಸರು, 9 ಮಾನವನ ದೇಹದ ಅಂಗಗಳ ಹೆಸರು 52 ವಿವಿಧ ಬಗೆಯ ಚಿತ್ರಗಳ ಗುರುತಿಸುವುದರ ಜೊತೆಗೆ ಹೆಸರಿಸುವ ಮೂಲಕ ಇಂಡಿಯನ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸಾಧನೆ ಮಾಡಿದ್ದಾನೆ.

– ಭದ್ರಾವತಿ: SWIAA 2024 ರಾಷ್ಟ್ರ ಪ್ರಶಸ್ತಿ ಪಡೆದುಕೊಂಡು ಭದ್ರಾವತಿ ಯುವತಿ

ಭದ್ರಾವತಿ : ದಕ್ಷಿಣ ಭಾರತೀಯ ಮಹಿಳಾ ಸಾಧನೆಯ ರಾಷ್ಟ್ರ ಪ್ರಶಸ್ತಿ SWIAA 2024 ನ್ನು ಮುಡಿಗೇರಿಸಿಕೊಳ್ಳುವ ಮೂಲಕ ನಗರದ ಲಕ್ಷ್ಮಿ ಭದ್ರಾವತಿ ಶಿವಮೊಗ್ಗ ಜಿಲ್ಲೆ ಮಾತ್ರವಲ್ಲ ರಾಜ್ಯಕ್ಕೆ ಕೀರ್ತಿ ಂದ್ದಾೆ. ಇಡೀ ದಕ್ಷಿಣ ಭಾರತದಲ್ಲೇ ರಂಗಭೂಮಿ ಕಲಾವಿದೆಯ ಸಾಧನೆಯ ಪ್ರಶಸ್ತಿಗೆ ಆಯ್ಕೆಯಾದ ಏಕೈಕ ಕಲಾವಿದೆ ಎಂಬ ಕೀರ್ತಿ, ಹೆಗ್ಗಳಿಕೆಗೆ ಪಾತ್ರವಾಗಿರುವ ಇವರು, ಕರುನಾಡಿಗೇ ಕೀರ್ತಿ ತಂದಿದ್ದಾರೆ. ಸೌಂದರ್ಯ ಮತ್ತು ಪ್ರತಿಭೆ She born to play… strong roles… ಎಂದೆನಿಸಿಕೊಂಡ ನಮ್ಮ ಮಲೆನಾಡಿನ ಮಹಿಳಾ ಕಲಾವಿದೆ ತೆರೆಯ ಮೇಲೆ ತಾನು ನಿಭಾಯಿಸುವ ಎಲ್ಲಾ ಪಾತ್ರಗಳಿಗೂ ಜೀವ ತುಂಬುವ ಕಡೆ ಸದಾ ಗಮನ ಹರಿಸುವ ಸ್ವಯಂ ಕಲಿತ ಕಲಾವಿದೆ ಲಕ್ಷ್ಮಿ ಭದ್ರಾವತಿ.
9ನೇ ತರಗತಿಯಲ್ಲೇ ತಂದೆಯ ಪ್ರೇರಣೆಯಿಂದ ರಂಗಲೋಕಕ್ಕೆ ಬಣ್ಣ ಹಚ್ಚುವ ಮುಖೇನ ವಿದ್ಯಾಭ್ಯಾಸದ ಜೊತೆ ಜೊತೆಗೆ ಅನೇಕ ಕಲಾ ಕ್ಷೇತ್ರಗಳಲ್ಲಿಯೂ ಯಶಸ್ಸನ್ನು ಪಡೆದು ವ್ಯಾಸಂಗದಲ್ಲಿಯೂ ಯಾಂಕ್ ಪಡೆದು ಪ್ರತಿಭಾನ್ವಿತೆ ಈಕೆ.

ವೃತ್ತಿಯಲ್ಲಿ ಶಿಕ್ಷಕಿಯಾದರೂ ಶಾಲೆಗೆ ಗೈರಾಗದೇ ಅಲ್ಲಿಯೂ ಸಹ ವಿದ್ಯಾರ್ಥಿಗಳಲ್ಲಿ ಸುಧಾರಣೆ ತರುವಲ್ಲಿ ಸೈ ಎನಿಸಿಕೊಂಡು, ಅನೇಕ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಎನ್ನುವ ಪ್ರಶಸ್ತಿ ಪಡೆದಿದ್ದಾರೆ. ಶಾಲೆ ಮುಗಿದ ಬಳಿಕ ರಂಗ ಶಿಬಿರಗಳಲ್ಲಿ ಭಾಗವಹಿಸುವ ಇವರು, ಅದೆಷ್ಟೋ ಶಾಲಾ ಕಾಲೇಜುಗಳಿಗೆ ನಾಟಕ ಹಾಗೂ ನೃತ್ಯಗಳನ್ನು ಉಚಿತವಾಗಿ ಕಲಿಸಿಕೊಡುತ್ತಾರೆ. ಅಷ್ಟೇ ಅಲ್ಲದೇ, ಯಾವುದೇ ವಿಷಯ ನೀಡಿದರೂ ಅದ್ಭುತವಾಗಿ ಉಪನ್ಯಾಸ ಮಂಡಿಸುವ ಲಕ್ಷ್ಮಿಯವರ ವಾಕ್ಚಾತುರ್ಯ ಅನೇಕರಿಗೆ ಪ್ರೇರೇಪಿಸಯತ್ತದೆ. ಸಂಗೀತ, ನೃತ್ಯ, ನಾಟಕ, ಲೇಖನ, ಉಪನ್ಯಾಸ, ಶಿಕ್ಷಕರಿಗೆ ತರಬೇತಿ ನೀಡುವ ಶೈಲಿ, ನಿರೂಪಣೆಗಳು ಹೀಗೆ ಹಲವು ಕ್ಷೇತ್ರಗಳಲ್ಲಿ ಬದ್ಧತೆಯಿಂದ ತೊಡಗಿಸಿಕೊಂಡು ತಮ್ಮದೇ ಆದ ಛಾಪನ್ನು ಮೂಡಿಸುವ ಇವರು ನಿಜಕ್ಕೂ ಒಂದು ವಿಸ್ಮಯ. ಇಷ್ಟು ಪ್ರಸಿದ್ದಿ ಪಡೆದಿದ್ದರೂ ಒಂದು ಸಾಮಾಜಿಕ ಜಾಲತಾಣಗಳ ಬಳೆ ಮಾಡದ ಸರ ಜೀವಿ ಕೆ. ಸ್ವಯಂ ಕಲಿತ ಕಲಾವಿದೆಯಾಗಿರುವ ಲಕ್ಷ್ಮಿ ಸಾಕಷ್ಟು ವೈಫಲ್ಯಗಳನ್ನು ಅನುಭವಿಸಿದ್ದಾರೆ. ಆದರೆ, ಪ್ರತಿ ವಿಫಲ ಪ್ರಯತ್ನದಿಂದ ಯಶಸ್ಸು ದೊರೆತಿದೆ. ಕುಟುಂಬದ ಬೆಂಬಲ, ಅಭಿಮಾನಿಗಳ ಪ್ರೀತಿಯಿಂದ ಇಷ್ಟೆಲ್ಲಾ ಸಾಧನೆ ಮಾಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.