ತೀರ್ಥಹಳ್ಳಿಯಲ್ಲಿ ಡಿ.7ಕ್ಕೆ ರಘು ದೀಕ್ಷಿತ್ ಸಂಗೀತದ ಮೋಡಿ!
– ಮಳೆಯ ಆವಾಂತರ, ವಾಗ್ದೇವಿ ಬೆಳ್ಳಿಹಬ್ಬ ಕಾರ್ಯಕ್ರಮ ಮುಂದೂಡಿಕೆ
– ವಾಗ್ದೇವಿ ವಿದ್ಯಾಸಂಸ್ಥೆಗೆ ಡಿ. 7,9,10 ರಂದು ಬೆಳ್ಳಿ ಬೆಳ್ಳಿ ಮಹೋತ್ಸವ
– ವಿದ್ಯಾಸಂಸ್ಥೆ 25ನೇ ವರ್ಷ: ವಿಭಿನ್ನ ಕಾರ್ಯಕ್ರಮ
NAMMUR EXPRESS NEWS
ತೀರ್ಥಹಳ್ಳಿ: ವಾಗ್ದೇವಿ ಪಿಯು ಕಾಲೇಜು, ಮೇಲಿನಕುರುವಳ್ಳಿ ಯಲ್ಲಿ ಬೆಳ್ಳಿಹಬ್ಬ, ಬೆಳ್ಳಿ ಮಹೋತ್ಸವ ಅಯೋಜಿಸಲಾಗಿದೆ.
1999ರಲ್ಲಿ ಆರಂಭಗೊಂಡ ಸತ್ಪಥ ಎಜ್ಯುಕೇಷನ್ ಟ್ರಸ್ಟ್ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಾಗ್ದೇವಿ ವಿದ್ಯಾಸಂಸ್ಥೆ 25ನೇ ವರ್ಷಕ್ಕೆ ಕಾಲಿಡುತ್ತಿದೆ. ಆದ್ದರಿಂದ ಬೆಳ್ಳಿಹಬ್ಬ ಸ್ಮರಣೀಯಗೊಳಿಸಲು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು,ಮಳೆ ಆವಾಂತರದಿಂದ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಅದರಲ್ಲಿ ಪ್ರಮುಖವಾದುದು ಕನ್ನಡದ ಖ್ಯಾತ ಗಾಯಕ ರಘು ದೀಕ್ಷಿತ್ ಸಂಗೀತ ಡಿ. 7 ರಂದೇ ನಡೆಯುತ್ತದೆ. ಹೌದು, 25 ವರ್ಷದ ಸಂಭ್ರಮಾಚರಣೆ ಹಿನ್ನಲೆಯಲ್ಲಿ ಈಗಾಗಲೇ ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡಿರುವ ಸಂಸ್ಥೆಯಲ್ಲಿ ಮಳೆಯ ಕಾರಣಕ್ಕೆ ಡಿಸೆಂಬರ್ 9,10ಕ್ಕೆ ಬೆಳ್ಳಿ ಬೆಡಗು ಸಂಭ್ರಮ ಕಾರ್ಯಕ್ರಮವನ್ನು ಮುಂದೂಡಲು ತೀರ್ಮಾನಿಸಿದ್ದಾರೆ. ಬೆಳ್ಳಿ ಹಬ್ಬದ ಸಂಭ್ರಮಾಚರಣೆ 3 ದಿನಗಳು ನಡೆಯಲಿದ್ದು, ಡಿ.7ರ ಸಂಜೆ ಖ್ಯಾತ ಸಂಗೀತಗಾರ ರಘು ದೀಕ್ಷಿತ್ ತಂಡದಿಂದ ಸಂಗೀತ ಸಂಜೆ ನಡೆಯಲಿದೆ.ಮಕ್ಕಳ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಮನ ಸೆಳೆಯಲಿವೆ.
