ತೀರ್ಥಹಳ್ಳಿಯಲ್ಲಿ ಡಿ.7ಕ್ಕೆ ರಘು ದೀಕ್ಷಿತ್ ಸಂಗೀತದ ಮೋಡಿ!
– ವಾಗ್ದೇವಿ ವಿದ್ಯಾಸಂಸ್ಥೆಗೆ ಡಿ. 5, 6, 7 ರಂದು ಬೆಳ್ಳಿ ಬೆಡಗು ಸಂಭ್ರಮ
– ವಿದ್ಯಾಸಂಸ್ಥೆ 25ನೇ ವರ್ಷ: ವಿಭಿನ್ನ ಕಾರ್ಯಕ್ರಮ
NAMMUR EXPRESS NEWS
ತೀರ್ಥಹಳ್ಳಿ: ಕೇವಲ ಇಬ್ಬರಿಂದ ಆರಂಭಗೊಂಡ ವಾಗ್ಗೇವಿ ಶಾಲೆಯಲ್ಲಿ ಈಗ 1,800 ವಿದ್ಯಾರ್ಥಿಗಳು ಪ್ರಸ್ತುತ ಶಿಕ್ಷಣ ಪಡೆಯುತ್ತಿದ್ದಾರೆ.1999ರಲ್ಲಿ ಆರಂಭಗೊಂಡ ಸತ್ಪಥ ಎಜ್ಯುಕೇಷನ್ ಟ್ರಸ್ಟ್ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಾಗ್ದೇವಿ ವಿದ್ಯಾಸಂಸ್ಥೆ 25ನೇ ವರ್ಷಕ್ಕೆ ಕಾಲಿಡುತ್ತಿದೆ. ಬೆಳ್ಳಿಹಬ್ಬ ಸ್ಮರಣೀಯಗೊಳಿಸಲು ವಿವಿಧ ಕಾರ್ಯಕ್ರಮಗಳನ್ನು ಅಯೋಜಿಸಲಾಗಿದೆ. ಅದರಲ್ಲಿ ಪ್ರಮುಖವಾದುದು ಕನ್ನಡದ ಖ್ಯಾತ ಗಾಯಕ ರಘು ದೀಕ್ಷಿತ್ ಸಂಗೀತ. ಹೌದು. 25 ವರ್ಷದ ಸಂಭ್ರಮಾಚರಣೆ ಹಿನ್ನಲೆಯಲ್ಲಿ ಈಗಾಗಲೇ ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡಿರುವ ಸಂಸ್ಥೆಯಲ್ಲಿ ಡಿಸೆಂಬರ್ 5, 6, 7 ರಂದು ಬೆಳ್ಳಿ ಬೆಡಗು ಸಂಭ್ರಮ ನಡೆಯಲಿದೆ. ಬೆಳ್ಳಿ ಹಬ್ಬದ ಸಂಭ್ರಮಾಚರಣೆಯನ್ನು 3 ದಿನಗಳು ನಡೆಯಲಿದೆ. ಡಿ.7ರ ಸಂಜೆ ಖ್ಯಾತ ಸಂಗೀತಗಾರ ರಘು ದೀಕ್ಷಿತ್ ತಂಡದಿಂದ ಸಂಗೀತ ಸಂಜೆ ನಡೆಯಲಿದೆ
ಮಕ್ಕಳ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಮನ ಸೆಳೆಯಲಿವೆ.