ತೀರ್ಥಹಳ್ಳಿಯಲ್ಲೂ ಕಾವೇರಿ ಹೋರಾಟ ಜೋರು
– ಯಡೂರು ಸುರೇಂದ್ರ ಗೌಡ ನೇತೃತ್ವದಲ್ಲಿ ಕಾವೇರಿ ತೀರ್ಪಿಗೆ ವಿರೋಧ
– ತೀರ್ಥಹಳ್ಳಿ ತಾಲೂಕು ಕಚೇರಿ ಮುತ್ತಿಗೆ ಯಶಸ್ವಿ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲೂ ಕಾವೇರಿ ಹೋರಾಟ ಜೋರಾಗಿದೆ. ತೀರ್ಥಹಳ್ಳಿ ಕರವೇ ಅಧ್ಯಕ್ಷ ಯಡೂರು ಸುರೇಂದ್ರ ಗೌಡ ನೇತೃತ್ವದಲ್ಲಿ ಕಾವೇರಿ ತೀರ್ಪಿಗೆ ವಿರೋಧ ವ್ಯಕ್ತಪಡಿಸಿ ನೂರಾರು ಕರವೇ ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಹಾಜರಿದ್ದರು.
ಕಾವೇರಿ ಬಿಡಬಾರದು…!
ಕಾವೇರಿ ನೀರಿನ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರಾಜಕೀಯ ಒತ್ತಡದ ಕಾರಣ ರೈತರು ಜನಸಾಮಾನ್ಯರು ತೊಂದರೆಗೆ ಸಿಲುಕುತ್ತಿದ್ದಾರೆ. ಹಾಗಾಗಿ ಅವೈಜ್ಞಾನಿಕ ಆದೇಶ ನೀಡಿರುವ ಕಾವೇರಿ ನೀರು ಪ್ರಾಧಿಕಾರ ಹಾಗೂ ನೀರು ನಿರ್ವಹಣಾ ಪ್ರಾಧಿಕಾರ ರದ್ದುಗೊಳಿಸಿ’ ವಿಶೇಷ ಅಧಿಕಾರವುಳ್ಳ ಸ್ವಾತಂತ್ರ ಸಮಿತಿ ರಚನೆಗೆ ಕರ್ನಾಟಕ ಜಲ ಸಂರಕ್ಷಣಾ ಸಮಿತಿಗೆ ಒತ್ತಾಯಿಸುವುದು ಮತ್ತು ತಮಿಳುನಾಡಿಗೆ ನೀರು ಹರಿಸುವ ಪ್ರಾಧಿಕಾರದ ಆದೇಶವನ್ನು ಪಾಲಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು ಪ್ರಸ್ತುತ ರಾಜ್ಯದ ಮುಕ್ಕಾಲು ಭಾಗ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ ಎಂದು ಕರವೇ ಅಧ್ಯಕ್ಷ ನೇತೃತ್ವದಲ್ಲಿ ಯಡೂರು ಸುರೇಂದ್ರ ತಾಲ್ಲೂಕು ಕಛೇರಿ ಮುತ್ತಿಗೆಯ ಸಂದರ್ಭದಲ್ಲಿ ಮಾತನಾಡಿದರು.
ಬಂಗಾರಪ್ಪ ನೆನಪು ಮಾಡಿಕೊಂಡ ಹೋರಾಟಗಾರರು!
ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಆರ್. ವೆಂಕಟೇಶ್ ಹೆಗ್ಡೆ ಮಾತನಾಡಿ, ಕಾವೇರಿಯಲ್ಲಿ ನಮಗೆ ಸಾಕಾಗುವಷ್ಟು ನಮ್ಮ ಬೆಳೆಗೆ ಸಾಕಾಗುವಷ್ಟು ನೀರು ಇಲ್ಲದೆ ಇರುವುದರಿಂದ ಇದು ಅವೈಜ್ಞಾನಿಕವಾಗಿ ಯಾವ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಎಸ್.ಬಂಗಾರಪ್ಪನವರು ಸುಪ್ರೀಂ ಕೋರ್ಟ್ ಆದೇಶವನ್ನು ಧಿಕ್ಕರಿಸಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸಿದ್ದರು. ತಾಲ್ಲೂಕು ಕರವೇ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ದಿಲೀಪ್ ಮಾತನಾಡಿ, ಕೂಡಲೇ ಕಾವೇರಿ ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರ ಕೂಡಲೇ ನೀರುಬಿಡುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕರವೇ ಸಂಚಾಲಕ ಪಡುವಳ್ಳಿ ಹರ್ಷೇಂದ್ರಕುಮಾರ್, ಕರವೇ ಗೌರವಾಧ್ಯಕ್ಷ ಮಲ್ಲಕ್ಕಿ ರಾಘವೇಂದ್ರ, ಕರವೇ ಯುವ ಘಟಕದ ಅಧ್ಯಕ್ಷ ಶ್ರೀಕಾಂತ್, ಉಪಾಧ್ಯಕ್ಷ ಸುರೇಶ್, ಜೀವನ್, ಪ್ರತಿಮ, ಕಡೂರು ಮಹಮ್ಮದ್, ಅರ್ಜುನ್, ನೂತನ್, ಪ್ಲವರ್ ಚಂದ್ರಶೇಖರ್, ಆದರ್ಶ ಮುತ್ತುಗುಂಡಿ, ಹಳ ಮ ಗಣೇಶ, ಲಕ್ಷ್ಮೀದೇವಿ, ನಾಗವೇಣಿ, ರೇಖಾ, ಶಕುಂತಳ ಮುಂತಾದವರಿದ್ದರು.