Categories
ತೀರ್ಥಹಳ್ಳಿ

ತೀರ್ಥಹಳ್ಳಿ ಹಳ್ಳಿ ಹಳ್ಳಿಯ ವಿಶೇಷ ಗಣಪತಿಗಳು!

ತೀರ್ಥಹಳ್ಳಿ ಹಳ್ಳಿ ಹಳ್ಳಿಯ ವಿಶೇಷ ಗಣಪತಿಗಳು!
– ಜಟಾಯು ಮೇಲೆ ಕುಳಿತ ಗಣಪ, ರಾಮಮಂಟಪದಲ್ಲಿ ಮೂಡಿದ ಗಣಪತಿ
– ಯಡೂರಲ್ಲಿ ಮಾಣಿ ಡ್ಯಾಮ್ ಒಳಗೆ ವಿಶೇಷ ಗಣಪತಿ
– ತೀರ್ಥಹಳ್ಳಿ ತಾಲೂಕಿನ ವಿವಿಧ ಊರಿನ ವಿಶೇಷ ಗಣಪತಿ ನೋಡಿ!

NAMMUR NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಹೊದಲ-ಅರಳಾಪುರ ಗ್ರಾ.ಪಂ.ವ್ಯಾಪ್ತಿಯ ಹೊದಲದ ಶ್ರೀ ಗಣಪತಿ ಸೇವಾ ಸಮಿತಿಯವರು ಪ್ರತಿಷ್ಠಾಪಿಸಿದ ಹೊದಲ ಉಪೇಂದ್ರ ಆಚಾರ್ಯ ಅವರ ಕೈ ಚಳಕದಿಂದ ಮೂಡಿಬಂದ ಜಠಾಯು ಮೇಲೆ ಕುಳಿತ ಗಣಪತಿ ಈಗ ಗಮನ ಸೆಳೆದಿದೆ.
ಪ್ರತಿ ವರ್ಷ ಒಂದಲ್ಲ ಒಂದು ವಿಶೇಷತೆ ಹೊಂದಿರುವ ಹೊದಲ ಗಣಪತಿ ಈ ವರ್ಷವೂ ಗಮನ ಸೆಳೆಯುತ್ತಿದೆ.
ಹೆದ್ದೂರು ಸಂತೆಕೊಪ್ಪದಲ್ಲಿ ರಾಮಮಂಟಪದಲ್ಲಿ ಮೂಡಿದ ಗಣಪತಿ ಈಗ ಗಮನ ಸೆಳೆಯುತ್ತಿದೆ.

ಯಡೂರಲ್ಲಿ ಮಾಣಿ ಡ್ಯಾಮಲ್ಲಿ ಕುಳಿತ ಗಣೇಶ

ತೀರ್ಥಹಳ್ಳಿ ಹೊಸನಗರ ಗಡಿಯ ಯಡೂರು ಬಳಿ ಪಶ್ಚಿಮ ಘಟಟದ ಬೆಟ್ಟ ಗುಡ್ಡಗಳ ನಡುವೆ ನಲಿಯುತ್ತ ಝರಿ ತೊರೆಗಳನ್ನು ತನ್ನೆಡೆಗೆ ಸೆಳೆಯುತ್ತ ಹಸಿರು ಕಾನನದ ಸ್ವಚ್ಛಂದ ದಾರಿಯಲ್ಲಿ ಹರಿಯುತ್ತಿದ್ದ ವಾರಾಹಿ ನದಿಗೆ ಅಂದಿನ ಸರ್ಕಾರವು ಜಲ ವಿದ್ಯುತ್ ಉತ್ಪಾದನೆಯ ಉದ್ದೇಶದಿಂದ ಯಡೂರು ಸಮೀಪದ ಮಾಣಿ ರಾಜ್ಯಕ್ಕೆ ಬೆಳಕು ನೀಡುವ ಯೋಜನೆಗೆ ತಮ್ಮ ಬದುಕನ್ನು ಕತ್ತಲಾಗಿಸಿಕೊಂಡು ಮನೆ ಜಮೀನಿನ ಜೊತೆಗೆ ಬಾಲ್ಯದ ನೆನಪುಗಳು ಹಾಗೂ ಭವಿಷ್ಯಕ್ಕಾಗಿ ಕಂಡ ಕನಸುಗಳನ್ನು ವರಾಹಿಗೆ ಅರ್ಪಿಸಿ, ಗ್ರಾಮ ದೇವರಿಗೆ ನಮಿಸಿ ನಿರಾಶ್ರಿತರಾಗಿ ಹೊರಟೇ ಹೋದರು ಮುಳುಗಡೆ ಸಂತ್ರಸ್ತರ ಚಿತ್ರಣದ ಒಳಗಿನ ಗಣೇಶ ಇಲ್ಲಿ ಮೂಡಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.