Categories
ತೀರ್ಥಹಳ್ಳಿ

ತೀರ್ಥಹಳ್ಳಿ ರಾಮಮಂಟಪ ಮುಳುಗುವ ಹಂತದಲ್ಲಿ!

ತೀರ್ಥಹಳ್ಳಿ ರಾಮಮಂಟಪ ಮುಳುಗುವ ಹಂತದಲ್ಲಿ!
– ಮಳೆಗೆ ಬಾಳಗಾರು ಬಳಿ ಅಡಿಕೆ ತೋಟ ಮುಳುಗಡೆ
– ಮಳೆಗೆ ಕರೆಂಟ್ ಇಲ್ಲ… ನೆಟ್ವರ್ಕ್ ಕೂಡ ಇಲ್ಲ
– ಹಲವೆಡೆ ಮರ ಬಿದ್ದು ಅನಾಹುತ: ಕಾರು ಜಖo
– ಹಿರೇಸರದಲ್ಲಿ ಭೀಕರ ಅಪಘಾತ: ಕಾರು ಮರಕ್ಕೆ ಡಿಕ್ಕಿ!

NAMMUR EXPRESS NEWS
ತೀರ್ಥಹಳ್ಳಿ: ಮಳೆ ಈ ಬಾರಿ ಜನರ ಜೀವನಕ್ಕೆ ಭಾರೀ ತೊಂದರೆ ಮಾಡಿದೆ. ಮೇ ಇಂದ ಶುರುವಾಗಿರುವ ಮಳೆ ಎಡೆಬಿಡದೆ ಸುರಿಯುತ್ತಿದೆ. ಒಂದು ಕಡೆ ಜನ ಮನೆಯಿಂದ ಹೊರ ಬಾರದೆ ಪರದಾಟ ನಡೆಸುತ್ತಿದ್ದಾರೆ. ಇನ್ನೊಂದು ಕಡೆ ಕೊಳೆ ರೋಗ ಮಳೆ ಹೆಚ್ಚಳ ಕಾರಣ ವ್ಯಾಪಿಸುತ್ತಿದೆ.
ಪುಷ್ಯ ಮಳೆಯ ಆರ್ಭಟಕ್ಕೆ ತುಂಗಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ಪುರಾಣ ಪ್ರಸಿದ್ಧ ರಾಮ ಮಂಟಪ ಮುಳುಗಲು ಕೆಲವೇ ಅಡಿಗಳು ಮಾತ್ರ ಬಾಕಿ ಇದೆ. ತುಂಗಾ ನದಿ ನೀರಿನ ಮಟ್ಟದಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಕೆಲವೇ ಗಂಟೆಗಳಲ್ಲಿ ತುಂಗಾ ನದಿ ರಾಮ ಮಂಟಪ ಮುಚ್ಚುವ ಸಾಧ್ಯತೆ ಇದೆ.

ಭಾರೀ ಗಾಳಿಗೆ ಕರೆಂಟ್ ಇಲ್ಲ…ನೆಟ್ವರ್ಕ್ ಇಲ್ಲ..!

ಮಲೆನಾಡಲ್ಲಿ ಭಾರೀ ಮಳೆ ಕಾರಣ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಇನ್ನು ಭಾರೀ ಗಾಳಿಗೆ ಕರೆಂಟ್ ಇಲ್ಲ…ನೆಟ್ವರ್ಕ್ ಇಲ್ಲದೆ ಅನೇಕ ಹಳ್ಳಿಗಳು ಕತ್ತಲೆಯಲ್ಲಿ ಮುಳುಗಿವೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ನದಿ ನೀರು ರಸ್ತೆ ಮೇಲೆ ಹತ್ತಿದೆ. ನದಿಯ ತೀರಕ್ಕೆ ಹೋಗಬಾರದೆಂದು ಪೊಲೀಸ್ ಇಲಾಖೆ ತಿಳಿಸಿದೆ.

ದೇಮ್ಲಾಪುರದಿಂದ ಆಲೂರು ಹೋಗುವ ರಸ್ತೆ ಬಂದ್ !

ತೀರ್ಥಹಳ್ಳಿ ತಾಲೂಕಿನ ದೇಮ್ಲಾಪುರ ಗ್ರಾಮ ಪಂಚಾಯಿತಿಯಲ್ಲಿ ಜುಲೈ 25 ರಂದು ರಾತ್ರಿ ಸುರಿದ ಭಾರಿ ಮಳೆಗೆ ದೇಮ್ಲಾಪುರದಿಂದ ಆಲೂರಿಗೆ ತೆರಳುವ ಮಾರ್ಗ ಮಧ್ಯದಲ್ಲಿ ಭಾರಿ ಗಾತ್ರದ ಒಣಮರ ಧರೆಗುರುಳಿದೆ. ಇದರಿಂದ ಸಾರ್ವಜನಿಕರ ಸಂಚಾರ ಅಸ್ತವ್ಯಸ್ತವಾಗಿದೆ. ಜನರು ಅನಿವಾರ್ಯ ಕಾರಣದಿಂದ ಅಲ್ಲೇ ಪಕ್ಕದಲ್ಲಿದ್ದ ಕಾಲು ಹಾದಿಯಲ್ಲಿ ತೆರಳುತ್ತಿದ್ದಾರೆ. ಮರ ಬಿದ್ದರ ರಭಸಕ್ಕೆ ವಿದ್ಯುತ್ ತಂತಿ ಹರಿದು ಬಿದ್ದಿದೆ. ಈ ಘಟನೆಯು ರಾತ್ರಿ ವೇಳೆ ಸಂಭವಿಸಿದ್ದರಿಂದ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ.

ಹಿರೇಸರದಲ್ಲಿ ಭೀಕರ ಅಪಘಾತ: ಕಾರು ಮರಕ್ಕೆ ಡಿಕ್ಕಿ

ತೀರ್ಥಹಳ್ಳಿ ತಾಲೂಕಿನ ಹಿರೇಸರ ಗ್ರಾಮದಲ್ಲಿ ಜುಲೈ 25ರ ರಾತ್ರಿ ವೇಳೆ ಅರಗ ಕಡೆಯಿಂದ ಕೋಣಂದೂರು ಕಡೆ ತೆರಳುತ್ತಿದ್ದ ಫಿಯಾಟ್ ಪಂಟೋ ಕಾರು ಅತಿಯಾದ ವೇಗದಿಂದ ಬಂದು ಹಿರೇಸರದ ತಿರುವಿನಲ್ಲಿಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ನುಚ್ಚುಗುಜ್ಜಾಗಿದೆ. ರಾತ್ರಿ ವೇಳೆ ಆದ ಕಾರಣ ಕಾರಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಮಾಹಿತಿ ದೊರಕಿಲ್ಲ.

ತೋಟಕ್ಕೆ ನುಗ್ಗಿದ ನದಿ ನೀರು..ಹಲವೆಡೆ ಭಾರೀ ಹಾನಿ

ಕುಡುಮಲ್ಲಿಗೆ ಸಮೀಪದ ಬಾಳಗಾರಿನಲ್ಲಿ ಅಡಿಕೆ ತೋಟದ ಮೇಲೆ ನೀರು ನುಗ್ಗಿ ಭಾರೀ ಹಾನಿಯಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.