Categories
ತೀರ್ಥಹಳ್ಳಿ

ತೀರ್ಥಹಳ್ಳಿ ಕ್ರೀಡಾ ಪ್ರೋತ್ಸಾಹಕ ಶಶಿ ಅಣ್ಣ ಇನ್ನಿಲ್ಲ!

ತೀರ್ಥಹಳ್ಳಿ ಕ್ರೀಡಾ ಪ್ರೋತ್ಸಾಹಕ ಶಶಿ ಅಣ್ಣ ಇನ್ನಿಲ್ಲ!

– ಮೇಲಿನಕುರುವಳ್ಳಿಯ ಶಶಿಧರ್ ಹೃದಯಘಾತದಿಂದ ನಿಧನ
– ಖಾಸಗಿ ಸಂಸ್ಥೆಯಲ್ಲಿ ವಾಹನ ಚಾಲಕರಾಗಿ ಕಾರ್ಯ ನಿರ್ವಹಣೆ

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿಯ ಅನೇಕ ಕ್ರೀಡಾಪಟುಗಳನ್ನು ರಾಜ್ಯ, ರಾಷ್ಟ್ರ ಮಟ್ಟಕ್ಕೆ ತರಬೇತಿ, ಪ್ರೋತ್ಸಾಹ ನೀಡಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಖಾಸಗಿ ಸಂಸ್ಥೆಯಲ್ಲಿ ವಾಹನ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಮೇಲಿನಕುರುವಳ್ಳಿಯ ಶಶಿಧರ್ (45) ಹೃದಯಘಾತದಿಂದ ನಿಧನ ಹೊಂದಿದ್ದಾರೆ.
ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಕೆಲಸದ ನಿಮಿತ್ತ ಹೋಗುತ್ತಿದ್ದ ಶಶಿಧರ್ ಅವರಿಗೆ ಮಂಡಗದ್ದೆ ಬಳಿ ಹೃದಯಘಾತವಾಗಿದೆ. ವಿಷಯ ತಿಳಿದು ಅವರನ್ನು ಶಿವಮೊಗ್ಗ ಆಸ್ಪತ್ರೆಗೆ ರವಾನಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರೆ. ಶಶಿಧರ್, ಪತ್ನಿ, ಪುತ್ರಿ ಹಾಗೂ ತಂದೆ ಸೇರಿದಂತೆ ಬಂಧು ಬಳಗ ಸ್ನೇಹಿತರನ್ನು ಅಗಲಿದ್ದಾರೆ. ಶಶಿಧ‌ರ್ ಅವರ ಅಗಲಿಕೆಗೆ ಸ್ನೇಹಿತರು ಕಂಬನಿ ಮಿಡಿದಿದ್ದಾರೆ.
ಕಾರ್ಕಳದ ಮುನಿಯಾಲು ಮೂಲದ ಶಶಿ ಅವರ ಅಂತ್ಯ ಕ್ರಿಯೆ ಬಗ್ಗೆ ಇನ್ನು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ನಮ್ಮೂರ್ ಎಕ್ಸ್ ಪ್ರೆಸ್ ಕೂಡ ಇವರ ಸಾವಿಗೆ ಶ್ರದ್ಧಾಂಜಲಿ ಅರ್ಪಿಸುತ್ತದೆ.

 

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.