ಆ.23ರಂದು ತೀರ್ಥಹಳ್ಳಿ ಟು ಧರ್ಮಸ್ಥಳ ಧರ್ಮ ರಕ್ಷಣೆ ಯಾತ್ರೆ
– ಆರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ಯಾತ್ರೆ
– ತೀರ್ಥಹಳ್ಳಿಯಿಂದ ಧರ್ಮಸ್ಥಳಕ್ಕೆ 200ಕ್ಕೂ ಅಧಿಕ ಕಾರುಗಳಲ್ಲಿ ಭಕ್ತಾದಿಗಳ ಯಾತ್ರೆ
NAMMUR EXPRESS NEWS
ತೀರ್ಥಹಳ್ಳಿ: ಆಗಸ್ಟ್ 23ರ ಶನಿವಾರ ಬೆಳಿಗ್ಗೆ 6 ಗಂಟೆಗೆ ತೀರ್ಥಹಳ್ಳಿಯಿಂದ 200ಕ್ಕೂ ಅಧಿಕ ಖಾಸಗಿ ಕಾರು ಹಾಗೂ ಇನ್ನಿತರೆ ವಾಹನಗಳಲ್ಲಿ ಭಕ್ತಾದಿಗಳು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳುತ್ತಿದ್ದಾರೆ.
ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಅಪಪ್ರಚಾರವನ್ನು ಖಂಡಿಸಿ, ಸಂಚುಕೋರರ ಶೀಘ್ರ ಬಂಧನಕ್ಕೆ ಆಗ್ರಹಿಸಿ ಆಗಸ್ಟ್ 19ರಂದು ತೀರ್ಥಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಪಕ್ಷಾತೀತ ಪ್ರತಿಭಟನೆ ಯಶಸ್ವಿಯಾಗಿತ್ತು. ಶನಿವಾರ ಧರ್ಮಸ್ಥಳದ ಭಕ್ತರು ಬೆಳಿಗ್ಗೆ 6 ಗಂಟೆಗೆ ತೀರ್ಥಹಳ್ಳಿ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಧರ್ಮಸ್ಥಳಕ್ಕೆ ತೆರಳುವರು. ಅಲ್ಲಿ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಸಂಜೆ ತೀರ್ಥಹಳ್ಳಿಗೆ ಹಿಂದಿರುಗುವರು.
ಈ ನಿಯಮಗಳು ಕಡ್ಡಾಯ
1. ಎಲ್ಲಾ ವಾಹನ ಚಾಲಕರು ಮಾನ್ಯ ಡ್ರೈವಿಂಗ್ ಲೈಸೆನ್ಸ್, ಪೂರಕ ದಾಖಲೆಗಳನ್ನು ಹೊಂದಿರಬೇಕು.
2. ಟ್ರಾಫಿಕ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
3. ಪ್ರತಿಯೊಬ್ಬರೂ ತಮ್ಮ ವಾಹನದಲ್ಲಿ ಭದ್ರತಾ ನಿಯಮಗಳನ್ನು ಪಾಲಿಸಬೇಕು ( ಸೀಟ್ ಬೆಲ್ಟ್ ಇತ್ಯಾದಿ)
4. ಎಲ್ಲರೂ ಸಮಯಕ್ಕೆ ಸರಿಯಾಗಿ ಸೇರುವಂತೆ ವಿನಂತಿ.
5. ವಾಹನಗಳನ್ನು ಶ್ರದ್ಧಾ ಭಕ್ತಿ ಪೂರಕವಾಗಿ ಅಲಂಕರಿಸಬಹುದು, ಆದರೆ ಶಬ್ದ ಮಾಲಿನ್ಯ ಉಂಟಾಗದಂತೆ ನೋಡಿಕೊಳ್ಳಬೇಕು.
6. ಯಾತ್ರೆಯಲ್ಲಿ ಭಾಗವಹಿಸುವವರು ತಮ್ಮ ಸ್ವಂತ ಹೊಣೆಗಾರಿಕೆಯಲ್ಲಿ ಪಾಲ್ಗೊಳ್ಳಬೇಕು.
7. ಹೊರಡುವ ಮುನ್ನವೇ ಹೋಗಿಬರಲು ಬೇಕಾಗುವಷ್ಟು ಇಂಧನ ತುಂಬಿಸಿಕೊಳ್ಳುವುದು.
8. ಬರುವಾಗ ಪಂಜೆ, ಕೇಸರಿ ಶಾಲು ಧರಿಸುವುದು. ಛತ್ರಿ ಕುಡಿಯುವ ನೀರು ವೈಯಕ್ತಿಕ ಅಗತ್ಯ ವಸ್ತುಗಳನ್ನು ವಾಹನದಲ್ಲಿ ತರುವುದು.
