ತೀರ್ಥಹಳ್ಳಿ ಕ್ರೀಡಾಪಟು ಅಭಿಷೇಕ್ ಆಕ್ಸಿಡೆಂಟ್!
– ಕೋಮಾ ಸ್ಥಿತಿಯಲ್ಲಿ ಚಿಕಿತ್ಸೆ: ಹಣ ಸಹಾಯಕ್ಕೆ ಮನವಿ
– ದೀಪಾವಳಿ ದಿನವೇ ಯುವಕನ ಬಾಳಲ್ಲಿ ವಿಧಿಯಾಟ
NAMMUR EXPRESS NEWS
ತೀರ್ಥಹಳ್ಳಿ: ರಂಜದಕಟ್ಟೆಯ ಕ್ರೀಡಾಪಟು ಅಭಿಷೇಕ್ ಜಾದವ್ ಎಂಬುವರಿಗೆ ಬೈಕೊಂದು ಗುದ್ದಿದ ಪರಿಣಾಮ ಇದೀಗ ಅವರು ಕೋಮಾ ಹಂತದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಅವರ ಬಾಳಲಿ ವಿಧಿ ಘೋರವಾಟವಾಡಿದೆ. ಖೋ ಖೋ ಆಟಗಾರನಾಗಿ, ತರಬೇತಿದಾರನಾಗಿಯೂ ಕ್ರೀಡಾಲೋಕದಲ್ಲಿ ಉತ್ತಮ ಹೆಸರು ಗಳಿಸಿದ್ದ ಅಭಿಷೇಕ್‌ರವರಿಗೆ ದೀಪಾವಳಿಯಂದು ರಸ್ತೆ ಬದಿಯಲಿದ್ದವನಿಗೆ ಬೈಕೊಂದು ಗುದ್ದಿದ ಪರಿಣಾಮ ತೀವ್ರಫಾಸಿಯಾಗಿದ್ದು, ಕೋಮಾವಸ್ಥೆಯಲ್ಲಿದ್ದಾರೆ. ಈಗಾಗಲೇ 3 ಲಕ್ಷಕ್ಕೂ ಅಧಿಕ ಹಣ ಖರ್ಚಾಗಿದ್ದು, ಇನ್ನೂ ಕೂಡ ಲಕ್ಷಾಂತರ ರೂಪಾಯಿ ಹಣದ ಅವಶ್ಯಕತೆ ಇರುತ್ತದೆ. ಅಭಿಷೇಕ್ ಸ್ನೇಹಿತ ವಲಯ ನಿಮ್ಮ ಸಹಾಯದ ನಿರೀಕ್ಷೆಯಲ್ಲಿದ್ದು, ತಾವು ನಮ್ಮೊಂದಿಗೆ ಕೈಜೋಡಿಸಿ ಒಂದು ಜೀವ ಉಳಿಸುವ ಕಾರ್ಯಕ್ಕೆ ಜೊತೆಗೂಡಬೇಕಾಗಿ ವಿನಂತಿ ಮಾಡಲಾಗಿದೆ.
ಸಹಾಯ ಮಾಡುವವರು ಕೆಳಗಿನ ಅಕೌಂಟಿಗೆ ಹಣ ಹಾಕಬಹುದು
Account Holder Name: YATHISH S. JADAV
Account number: 922010036421848
IFSC Code: UTIB0004057
Axis Bank, Thirthahalli Branch.
G-pay / Phone Pe: 94484 47125
