Categories
ತೀರ್ಥಹಳ್ಳಿ

ಕ್ರಿಕೆಟಲ್ಲಿ ತೀರ್ಥಹಳ್ಳಿ ಹುಡುಗ ನಿತಿನ್ ಈಗ ಮತ್ತೊಂದು ಸಾಧನೆ!

ಕ್ರಿಕೆಟಲ್ಲಿ ತೀರ್ಥಹಳ್ಳಿ ಹುಡುಗ ನಿತಿನ್ ಈಗ ಮತ್ತೊಂದು ಸಾಧನೆ!
– ಕೆ. ಪಿ. ಎಲ್ ಅಲ್ಲಿ ಹುಬ್ಬಳ್ಳಿ ತಂಡದಲ್ಲಿ ರನ್ನರ್ ಪ್ರಶಸ್ತಿ
– ಈಗ ರಾಜ್ಯದ ಪ್ರತಿಷ್ಠಿತ ತಿಮ್ಮಪ್ಪಯ್ಯ ಟ್ರೋಫಿಗೆ ಆಯ್ಕೆ
– ತೀರ್ಥಹಳ್ಳಿಯ ಕಚೇರಿಯಲ್ಲಿ ಸಾಧಕನಿಗೆ ಸನ್ಮಾನದ ಗೌರವ

NAMMUR EXPRESS NEWS
ತೀರ್ಥಹಳ್ಳಿ: ಕರ್ನಾಟಕ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಮಲೆನಾಡ ಹುಡುಗ ತೀರ್ಥಹಳ್ಳಿ ಮೂಲದ ನಿತಿನ್ ತಮ್ಮ ಬೌಲಿಂಗ್ ಮೂಲಕ ಸಾಧನೆ ಮಾಡಿದ್ದು, ತಂಡ ರನ್ನರ್ ಅಪ್ ಸ್ಥಾನ ಪಡೆದಿದ್ದು ಗೊತ್ತೇ ಇದೆ. ಇದೀಗ ನಿತಿನ್ ರಾಜ್ಯದ ಪ್ರತಿಷ್ಠಿತ ತಿಮ್ಮಪ್ಪಯ್ಯ ಟ್ರೋಫಿಗೆ ಕರ್ನಾಟಕ ಪ್ರೆಸಿಡೆಂಟ್ ಇಲೆವೆನ್ ಗೆ ಆಯ್ಕೆಯಾಗಿದ್ದಾರೆ.
ನಿತಿನ್ ಅವರು ಮೂಲತ ತೀರ್ಥಹಳ್ಳಿಯ ಶಾಂತವೇರಿಯವರು.
ತಂದೆ ನಾಗರಾಜ ಗೌಡ, ತಾಯಿ ಗಾಯತ್ರಿ, ಸಹೋದರಿ ನೇಹಾ.
ತೀರ್ಥಹಳ್ಳಿಯ ಅಬ್ದುಲ್ ಕಲಾಂ ಅವರ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಯಲ್ಲಿ ತರಬೇತಿ ಪಡೆದ ಶಾಂತವೇರಿ ಗ್ರಾಮದ ನಿತಿನ್ ರಾಜ್ಯ ಕ್ರಿಕೆಟ್ ಅಲ್ಲಿ ಮಿಂಚುತ್ತಿದ್ದಾರೆ.
ಅತ್ಯುತ್ತಮ ಕ್ರಿಕೆಟ್ ಕ್ರೀಡಾ ಪಟುವಾಗಿರುವ ನಿತಿನ್ ಐಪಿಎಲ್ ಕದ ತಟ್ಟುವ ಸಾಧ್ಯತೆ ಕೂಡ ಹೆಚ್ಚಿದೆ. ಸ್ನೇಹಿತರು, ಅಭಿಮಾನಿಗಳು ಶುಭ ಕೋರಿದ್ದಾರೆ.

ಟೀಮ್ ವೈ ಸಿ ಎಲ್ ನಿಂದ ಅಭಿನಂದನೆ

ಮಹಾರಾಜ ಟ್ರೋಫಿಯ ರನ್ನರ್ಸ್ ಪ್ರಶಸ್ತಿ ಪಡೆದ ಹುಬ್ಬಳ್ಳಿ ಟೈಗರ್ಸ್ ತಂಡದ ಪ್ರಮುಖ ಆಟಗಾರ ಮಲೆನಾಡಿನ ಹೆಮ್ಮೆಯ ಆಟಗಾರ ತೀರ್ಥಹಳ್ಳಿ ಎಕ್ಸ್ಪ್ರೆಸ್ ನಿತಿನ್ ಶಾಂತವೇರಿ ಅವರಿಗೆ ಟೀಮ್ ವೈ ಸಿ ಎಲ್ ನಿಂದ ಅಭಿನಂದನೆ ಸಲ್ಲಿಸಲಾಯಿತು.

ತೀರ್ಥಹಳ್ಳಿಯ ನಮ್ಮೂರ್ ಎಕ್ಸ್ ಪ್ರೆಸ್ ಕಚೇರಿಯಲ್ಲಿ ಸನ್ಮಾನ

ಮಲೆನಾಡಿನ ಪ್ರತಿಭೆ ನಿತಿನ್ ಅವರಿಗೆ ನಮ್ಮೂರ್ ಎಕ್ಸ್ ಪ್ರೆಸ್ ಮಲೆನಾಡು ಪ್ರಾದೇಶಿಕ ಕಚೇರಿಯಲ್ಲಿ ಸನ್ಮಾನಿಸಲಾಯಿತು. ಈ ವೇಳೆ ಪ್ರೇಮ್ ಯಡೂರು, ಮಾಧ್ಯಮ ಸಂಸ್ಥೆಯ ಅಮೃತಾ, ಅವಿನಾಶ್, ವಿಶಾಲಾಕ್ಷಿ, ಸೌಂದರ್ಯ ಇದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.