Categories
ತೀರ್ಥಹಳ್ಳಿ

ಆವಿಷ್ಕಾರ್ ಸೌಹಾರ್ದ ಸಹಕಾರಿಯ ಸರ್ವ ಸದಸ್ಯರ ಸಾಮಾನ್ಯ ಸಭೆ ಯಶಸ್ವಿ

ಆವಿಷ್ಕಾರ್ ಸೌಹಾರ್ದ ಸಹಕಾರಿಯ ಸರ್ವ ಸದಸ್ಯರ ಸಾಮಾನ್ಯ ಸಭೆ ಯಶಸ್ವಿ
– ಅನಿಲ್ ಕುಮಾರ್ ರವರ ಅದ್ಯಕ್ಷತೆಯಲ್ಲಿ ಯಶಸ್ವಿಯಾಗಿ ನೆರವೇರಿತು
– ಆವಿಷ್ಕಾರ್ ಹೆಲ್ತ್ ಕ್ಲಿನಿಕ್ ಸೆಂಟರ್ ನಲ್ಲಿ ಸದಸ್ಯರುಗಳಿಗೆ ಆರೋಗ್ಯ ತಪಾಸಣೆ

NAMMUR EXPRESS NEWS
1-09-2025 ರಂದು ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಡೆದ ಆವಿಷ್ಕಾರ್ ಸಹಕಾರಿಯ ಸರ್ವಸದಸ್ಯರ ಸಾಮಾನ್ಯ ಸಭೆಯು ಉಚಿತ ಆರೋಗ್ಯ ತಪಾಸಣೆ ಮಾಡುವುದರ ಮೂಲಕ ಉದ್ಘಾಟಿಸಿ ಪ್ರಾರಂಭವಾಯಿತು. ನೂತನವಾಗಿ ಪ್ರಾರಂಭಿಸಲಾದ “ಆವಿಷ್ಕಾರ್ ಹೆಲ್ತ್ ಕ್ಲಿನಿಕ್ ಸೆಂಟರ್ “ನ ಡಾಕ್ಟರ್ ರಾದ ಭವ್ಯ ಕೆ ಪಿ ಇವರು ಮಣಿಪಾಲ್ ಆಸ್ಪತ್ರೆಯಲ್ಲಿ ಕೆಲಸ ಮಾಡಿದ ಅನುಭವವುಳ್ಳ ಹೆಸರಾಂತ ಸರ್ಜನ್ ಇವರಿಂದ ಸಭೆಗೆ ಬಂದಂತ ಸದಸ್ಯರುಗಳಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು. ನಂತರ ಇವರು ಸಭೆಗೆ ವಿವಿಧ ರೀತಿಯ ಕ್ಯಾನ್ಸರ್ ಕುರಿತು PPT ಪ್ರೆಸೆಂಟೇಷನ್ ನೀಡುವುದರ ಮೂಲಕ ಮಾಹಿತಿ ನೀಡಿದರು. ಸಹಕಾರಿಯಿಂದ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಹಾಗೇ ತೀರ್ಥಹಳ್ಳಿಯ ಮೇಡಫಾರ್ಮ್ ಮೆಡಿಕಲ್ ನಲ್ಲಿ ಪ್ರತಿದಿನ ಸಂಜೆ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಜನರಲ್ ಫಿಸಿಷಿಯನ್ ಆದ ಡಾಕ್ಟರ್ ವಿಜಯರಾಜ್ ರವರು ಸದಸ್ಯರ ತಪಾಸಣೆ ನಡೆಸುವುದರ ಜೊತೆಗೆ ವೇದಿಕೆಯಲ್ಲಿ ಸಹಕಾರಿಯಿಂದ ಪ್ರಾರಂಬಿಸಲಿರುವ ಸಾಣೆಕಟ್ಟಾ”ಆವಿಷ್ಕಾರ್ ನೈಸರ್ಗಿಕ ಉಪ್ಪು” ಇದರ ಪ್ರಾಯೋಜನ ಮತ್ತು ಉಪಯೋಗದ ಕುರಿತು PPT ಪ್ರೆಸೆಂಟೇಷನ್ ಮಾಡುವುದರ ಮೂಲಕ ಮಾಹಿತಿ ನೀಡಿದರು. ಅವರನ್ನು ಸಹಕಾರಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಅದರಂತೆ ತೀರ್ಥಹಳ್ಳಿಯ ಖ್ಯಾತ ಮಕ್ಕಳ ತಜ್ಞರಾದ ಡಾಕ್ಟರ್ ಮೇಜರ್ ಅಭಿಜಿತ್ ವೈ ವಿ, “ಅರಿವು ಕ್ಲಿನಿಕ್”,ತೀರ್ಥಹಳ್ಳಿ ಇವರು ದೈನಂದಿನ ಜೀವನದಲ್ಲಿ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದು ಈ ಕುರಿತು ಮಾಹಿತಿ ಕಾರ್ಯಗಾರವನ್ನು ನೀಡಿದರು. ಡಾಕ್ಟರ್ ಮೇಜರ್ ಅಭಿಜಿತ್ ಇವರನ್ನು ಸಹಕಾರಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಹಾಗೇ ತೀರ್ಥಹಳ್ಳಿಯ ಖ್ಯಾತ ದಂತ ವೈದ್ಯರು ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿ ಸಮಾಜ ಸೇವೆಯನ್ನು ಮಾಡುತ್ತಿರುವ ಡಾಕ್ಟರ್ ಯು ಕೆ ನಂದಕಿಶೋರ್ ಇವರು ಸಭೆಗೆ “ಬಾಯಿಯ ಸುಚಿತ್ವ ಮತ್ತು ಹಲ್ಲಿನ ರಕ್ಷಣೆ ” ಈ ಕುರಿತು ಮಾಹಿತಿ ಕಾರ್ಯಗಾರವನ್ನು ಮಾಡಿದರು. ಇವರನ್ನು ಸಹಕಾರಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಬಹುಮುಖ್ಯವಾಗಿ ಸಹಕಾರಿಯು ಈ ಒಂದು ಹಂತಕ್ಕೆ ಬರಲು ಮೂಲ ಕಾರಣಕರ್ತರಾದ ತೀರ್ಥಹಳ್ಳಿಯ ಖ್ಯಾತ ವಕೀಲರು ಹಾಗೂ ಆವಿಷ್ಕಾರ್ ಸಹಕಾರಿಯ ವೃತ್ತಿ ಪರ ನಿರ್ದೇಶಕರಾದ ವಿಠಲ್ ಕೆ ಜಿ ಇವರನ್ನು ಅತ್ಯಂತ ಗೌರವದಿಂದ ಗೌರವಿಸಿ ಸನ್ಮಾನಿಸಲಾಯಿತು. ನಂತರ ಸಹಕಾರಿಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಪಿಗ್ಮಿ ಸಂಗ್ರಹಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಆವಿಷ್ಕಾರ್ ಸಂಸ್ಥೆಯ ಅಧ್ಯಕ್ಷರಾದ ಅನಿಲ್ ಕುಮಾರ್ ರವರು ಸಹಕಾ ರಿಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಎಲ್ಲಾ ನಿರ್ದೇಶಕರನ್ನು ಹೊಗಳಿ ಕೊಂಡಾಡಿದರು. CEO ರವರ ಕಾರ್ಯವೈಖರಿ ಗೆ ಪ್ರಶಂಸೆ ವ್ಯಕ್ತ ಪಡಿಸಿದರು. ಸಹಕಾರಿಯ ಸಿಬ್ಬಂದಿಗಳ ನಿಷ್ಠಾವಂತ ಸೇವೆಯನ್ನು ಕೊಂಡಾಡಿದರು.

ಸಭೆಯಲ್ಲಿದ್ದ ಎಲ್ಲರೂ ಮಾತನಾಡಿ ಇಂತಹ ಒಂದು ಅಚ್ಚುಕಟ್ಟಾದ ಸಾಮಾನ್ಯ ಸಭೆ ಜರುಗಿರೋದು ಎಲ್ಲೂ ನೋಡಲೇ ಇಲ್ಲಾ ಎಂದು ಅಚ್ಚರಿ ಪಟ್ಟು ಸಂತೋಷವನ್ನು ವ್ಯಕ್ತ ಪಡಿಸಿದರು. ತದನಂತರ ಸಭೆಯು ವಂದನಾರ್ಪಣೆ ಮಾಡುವುದರ ಮೂಲಕ ಯಶಸ್ವಿ ಯೊಂದಿಗೆ ಮುಕ್ತಾಯಗೊಳಿಸಲಾಯಿತು.
ಎಲ್ಲರಿಗೂ ಭೋಜನದ ವ್ಯವಸ್ಥೆಯನ್ನು ಮಾಡಲಾಯಿತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.