Categories
ತೀರ್ಥಹಳ್ಳಿ

ಪೋಸ್ಟ್ ಮ್ಯಾನ್ ಕಷ್ಟ ಕೇಳದ ಸರ್ಕಾರ!

ಪೋಸ್ಟ್ ಮ್ಯಾನ್ ಕಷ್ಟ ಕೇಳದ ಸರ್ಕಾರ!
– ಅಂಚೆ ಕಚೇರಿ ಮುಚ್ಚಿ ಪ್ರತಿಭಟನೆಗೆ ಮುಂದಾದ ನೌಕರರು
– 3 ಬಾರಿಯ ಮುಷ್ಕರಕ್ಕೂ ಬೆಲೆ ಕೊಡದ ಸರ್ಕಾರ ಮತ್ತು ಇಲಾಖೆ
– ಅನಿರ್ದಿಷ್ಟ ಅವಧಿಯ ಮುಷ್ಕರಕ್ಕೆ ಸಜ್ಜು

NAMMUR EXPRESS NEWS
ತೀರ್ಥಹಳ್ಳಿ: ಅಂಚೆ ಇಲಾಖೆಯಲ್ಲಿ ಹಗಲಿರುಳು ದುಡಿಯುವ ಪೋಸ್ಟ್ ಮ್ಯಾನ್ ನೌಕರರ ಕಷ್ಟ ಕೇಳದ ಸರ್ಕಾರದ ವಿರುದ್ದ ಇದೀಗ ನೌಕರರು ಅಂಚೆ ಸೇವೆ ನಿಲ್ಲಿಸಿ ಹೋರಾಟ ಶುರು ಮಾಡಿದ್ದಾರೆ. 3 ಬಾರಿ ನಡೆಸಿದ ಮುಷ್ಕರಕ್ಕೂ ಬೆಲೆ ಕೊಡದ ಸರ್ಕಾರ ಮತ್ತು ಇಲಾಖೆಯ ನಿರ್ಧಾರ ಇದೀಗ ಬಡ ನೌಕರರ ಅನಿರ್ದಿಷ್ಟ ಅವಧಿಯ ಮುಷ್ಕರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ತೀರ್ಥಹಳ್ಳಿ ಗ್ರಾಮೀಣ ಅಂಚೆ ನೌಕರರ ಸಂಘದ ಸುಮಾರು 176 ಮಂದಿ ಹೋರಾಟ ಮಾಡುತ್ತಿದ್ದಾರೆ. ಅಖಿಲ ಭಾರತ ಅಂಚೆ ನೌಕರರ ಸಂಘ. ಶಿವಮೊಗ್ಗ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಅಂಚೆ ಇಲಾಖೆಗೆ 169 ವರ್ಷ ಕಳೆದಿದ್ದರೂ ಇಲಾಖೆಯಲ್ಲಿ ಜೀತ ಪದ್ಧತಿ ಶೋಷಣೆ ನಡೆಯುತ್ತಿದೆ. ಬ್ರಿಟಿಷರ ಕಾಲದಲ್ಲಿ ಇದ್ದಂತಹ ಕಾನೂನೇ ಇಂದಿಗೂ ಪ್ರಸ್ತುತವಾಗಿದ್ದು, 4-5 ಗಂಟೆ ನಿಗದಿಪಡಿಸಿ 8-10 ಗಂಟೆ ದುಡಿಸಿಕೊಳ್ಳುವುದು,15 ರಿಂದ 16 ಹಳ್ಳಿಗೆ ಒಬ್ಬ ಪೋಸ್ಟರ್ ನ ನೇಮಿಸುವುದು.

ಆತನು ನಾಲ್ಕು ಗಂಟೆಗಳಲ್ಲಿ 15 ಸೆಕೆಂಡಿನಲ್ಲಿ ಒಂದು ಪತ್ರವನ್ನು ಬಟವಾಡೆ ಮಾಡುವಂತೆ ಕಾನೂನಿನಲ್ಲೇ ಸೂಚಿಸಿದೆ. ಆದರೆ ಜೆಡಿಎಸ್ ನೌಕರರಿಗೆ 30 ರಿಂದ 40 ವರ್ಷಗಳ ಕಾಲ ಸೇವೆ ಸಲ್ಲಿಸಿದರು ಅವರಿಗೆ ಯಾವುದೇ ರೀತಿಯ ಸಾಮಾಜಿಕ ಭದ್ರತೆ ಇರುವುದಿಲ್ಲ. ಕೇಂದ್ರ ಸರ್ಕಾರ ನಮ್ಮ ಹೋರಾಟಕ್ಕೆ ಮಣಿದು 2016ನೇ ಇಸವಿಯಲ್ಲಿ ಶ್ರೀ ಕಮಲೇಶ್ ಚಂದ್ರ ಕಮಿಟಿ ಆಯೋಗ ನೇಮಕ ಮಾಡಿ ಗ್ರಾಮೀಣ ಅಂಚೆ ನೌಕರರ ಸ್ಥಿತಿ ಗತಿಗಳ ಬಗ್ಗೆ ವರದಿ ಕೇಳಿತು. ಆ ಕಮಿಟಿ ವರದಿ ಸಲ್ಲಿಸಿ ಆರು ವರ್ಷಗಳು ಕಳೆದರೂ ಅದನ್ನು ಸಂಪೂರ್ಣವಾಗಿ ಜಾರಿಗೊಳಿಸದೆ ಕೇಂದ್ರ ಸರ್ಕಾರ ಮತ್ತು ಅಂಚೆ ಆಡಳಿತ ತಾರತಮ್ಯ ನೀತಿ ಅನುಸರಿಸುತ್ತಿದ್ದು ಇದರ ವಿರುದ್ಧವಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ.

ಕಳೆದ ದಿನಾಂಕ 14-06-2022 ರಂದು ದೆಹಲಿಯಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಂದರ್ಭದಲ್ಲಿ ಅದೇ ದಿನ ಪಿಜೆಸಿಎ ನಾಯಕರುಗಳೊಂದಿಗೆ ಅಂಚೆ ಅಧಿಕಾರಿಗಳು ಸಭೆ ನಡೆಸಿ ಇನ್ನು ಒಂದು ತಿಂಗಳೊಳಗೆ ಕಮಲೇಶ್ ಚಂದ್ರ ಕಮಿಟಿಯ ವರದಿಯನ್ನು ಸಂಪೂರ್ಣವಾಗಿ ಜಾರಿಗೊಳಿಸಿ ಈಡೇರಿಸುತ್ತೇವೆ ಎಂದು ಭರವಸೆ ನೀಡಿದ್ದರಿಂದ ಉಪವಾಸ ಸತ್ಯಾಗ್ರಹ ನಿಲ್ಲಿಸಿದ್ದೆವು.ಆದರೆ ಕಮಲೇಶ್ ಚಂದ್ರ ಕಮಿಟಿ ವರದಿ ಸಲ್ಲಿಸಿ ಐದು ವರ್ಷಗಳು ಕಳೆದರೂ ಕೆಲವೊಂದು ಬೇಡಿಕೆಗಳನ್ನು ಈಡೇರಿಸದೆ ಇರುವುದರಿಂದ ಹೋರಾಟ ಮಾಡುವುದು ಅನಿವಾರ್ಯವಾಗಿದೆ.

ಕೇಂದ್ರ ಸರ್ಕಾರ ಮತ್ತು ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ನಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ನಮ್ಮ ಕೇಂದ್ರ ಸಂಘಟನೆಯು, ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಪತ್ರ ಸಲ್ಲಿಸಿದ್ದರೂ ಸಹ ಇಲಾಖೆ ಮತ್ತು ಸರ್ಕಾರ ಯಾವುದೇ ರೀತಿಯಲ್ಲಿ ನಮಗೆ ಸ್ಪಂದಿಸುತ್ತಿಲ್ಲ. ಇದೀಗ ರಾಷ್ಟ್ರ ಮಟ್ಟದಲ್ಲಿ ಹೋರಾಟ ಶುರುವಾಗಿದೆ ಗ್ರಾಮೀಣ ಅಂಚೆ ನೌಕರರ ಸಂಘದ ಶಿವಮೊಗ್ಗ ವಿಭಾಗ ಅಧ್ಯಕ್ಷರಾದ ವೆಂಕಟೇಶ್ ಎಚ್. ಜಿ, ಕಾರ್ಯದರ್ಶಿ ಭಾಸ್ಕರ್ ಶೆಟ್ಟಿ, ಉಪಾಧ್ಯಕ್ಷರಾದ ನರೇಂದ್ರ ಅಡಿಗ, ಪದಾಧಿಕಾರಿಗಳಾದ ಜಾನಕಿ, ಅರುಣ್, ಶಿವಾನಂದ, ರವೀಶ್ ಇತರರು ಇದ್ದರು.

ಪ್ರಮುಖ ಬೇಡಿಕೆಗಳು ಯಾವುವು?

– 8 ಗಂಟೆಗಳ ಕಾಲ ಕೆಲಸ ನೀಡುವುದು ಮತ್ತು ಪಿಂಚಣಿ ಸೇರಿದಂತೆ ಎಲ್ಲ ಸವಲತ್ತುಗಳನ್ನು ಒದಗಿಸುವುದು.
– 12,24,36 ವರ್ಷಗಳ ಕಾಲ ಸೇವೆ ಸಲ್ಲಿಸಿದ ನೌಕರರಿಗೆ ಸೇವಾ ಹಿರಿತನದ ಆಧಾರದ ಮೇಲೆ ವಿಶೇಷ ಇನ್ ಕ್ರಿಮೆಂಟ್ ನೀಡುವುದು.
– ಗ್ರೂಪ್ ಇನ್ಸೂರೆನ್ಸ್ ಕವರೇಜ್ ರೂ 5 ಲಕ್ಷದವರೆಗೆ ಹೆಚ್ಚಿಸುವುದು.
– ಜಿಡಿಎಸ್ ಗ್ರಾಚ್ಯುಟಿ ಹಣ ರೂ.1.5 ಲಕ್ಷಗಳ ಮಿತಿ ತೆಗೆದುಹಾಕಿ ಶ್ರೀ ಕಮಲೇಶ್ ಚಂದ್ರ ಸಮಿತಿ ಶಿಫಾರಸು ಮಾಡಿದಂತೆ ರೂ.5 ಲಕ್ಷದವರೆಗೆ ಹೆಚ್ಚಿಸುವುದು.
– 180 ದಿನಗಳ ಕಾಲ ರಜೆ ಉಳಿಸಿಕೊಳ್ಳುವ ಸೌಲಭ್ಯ ಕಲ್ಪಿಸುವುದು.
– ಜಿಡಿಎಸ್ ಮತ್ತು ಅವರ ಕುಟುಂಬದ ಸದಸ್ಯರಿಗೆ ವೈದ್ಯಕೀಯ ಸೌಲಭ್ಯ ಒದಗಿಸುವುದು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.