Categories
ತೀರ್ಥಹಳ್ಳಿ

ತೀರ್ಥಹಳ್ಳಿ ಟಾಪ್ ನ್ಯೂಸ್

ಕಲಗೋಡು ರತ್ನಾಕರ ಅವರಿಗೆ ಪ್ರಶಸ್ತಿ!
– 34 ವರ್ಷಗಳ ಸುಧೀರ್ಘ ಸೇವೆಗೆ ಸಂದ ಗೌರವ
– ಕೋಣಂದೂರು: ಕೆರೆ ಕೋಡಿ ರಸ್ತೆಗೆ ಅಭಿವೃದ್ಧಿ ಭಾಗ್ಯ!
– ಕೊಪ್ಪ: ಹರಿಹರಪುರ ಶ್ರೀ ಆಶೀರ್ವಾದ ಪಡೆದ ಶೌರ್ಯ ಸೇವಕರು

NAMMUR EXPRESS NEWS
ತೀರ್ಥಹಳ್ಳಿ : ತಮ್ಮ 34 ವರ್ಷಗಳ ಸುಧೀರ್ಘ ರಾಜಕೀಯ ಜೀವನದ ಜನಸೇವೆ ಪರಿಗಣಿಸಿ ಕರ್ನಾಟಕ ಪಂಚಾಯತ್ ರಾಜ್ ಪರಿಷತ್ ವ್ಯವಸ್ಥೆಯಡಿ ನೀಡಲಾಗುವ ‘ಅತ್ಯುತ್ತಮ ಪಂಚಾಯತ್ ರಾಜ್ ಜನಪ್ರತಿನಿಧಿ’ ಪ್ರಶಸ್ತಿಗೆ ಭಾಜನರಾಗಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಶಿವಮೊಗ್ಗ ಜಿಲ್ಲೆಯ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ ಅವರಿಗೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ಡಾ. ಅಂಬೇಡ್ಕರ್ ಸಮುದಾಯ ಭವನದಲ್ಲಿ 2021-22ನೇ ಸಾಲಿನ ಡಾ. ಚಿಕ್ಕಕೋಮಾರಿಗೌಡ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುಮಾರು 34 ವರ್ಷಗಳ ನಿರಂತರ ಜನಸೇವೆ ಪರಿಗಣಿಸಿ ಕರ್ನಾಟಕ ಪಂಚಾಯತ್ ರಾಜ್ ಪರಿಷತ್‌ ವತಿಯಿಂದ ಕೊಡಮಾಡುವ ಈ ಪ್ರಶಸ್ತಿಗೆ ಶ್ರೀ ಕಲಗೋಡು ರತ್ನಾಕರ ಭಾಜನರಾಗಿರುವುದು ಈ ಬಾರಿ ವಿಶೇಷ.

ಕೆರೆ ಕೋಡಿ ರಸ್ತೆಗೆ ಅಭಿವೃದ್ಧಿ ಭಾಗ್ಯ – 20 ಲಕ್ಷ ರೂಪಾಯಿಗಳ ಅನುದಾನ: ಆರಗ ಜ್ಞಾನೇಂದ್ರ ಗುದ್ದಲಿಪೂಜೆ

ಕೋಣಂದೂರು ಪಂಚಾಯತ್ ಕೆರೆ ಕೋಡಿ ರಸ್ತೆಗೆ ಕಳೆದ ಅವಧಿಯಲ್ಲಿ 20 ಲಕ್ಷ ರೂಪಾಯಿಗಳ ಅನುದಾನ ಕೊಡಿಸಿದ್ದ ಶಾಸಕ ಆರಗ ಜ್ಞಾನೇಂದ್ರ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಸಭೆಯಲ್ಲಿ ಕೋಣಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಂಗಳ ಗೋಪಿ, ಟಿ ಎ ಪಿ ಸಿ ಎಂ ಎಸ್ ಅಧ್ಯಕ್ಷರಾದ ನಾಗರಾಜ ಶೆಟ್ಟಿ, ಸ್ಥಳೀಯ ಕೆ ಎಂ ಮೋಹನ್, ಸತೀಶ್ ಶೆಟ್ಟಿ, ದೇವರಾಜ್ ಶೆಟ್ಟಿ, ಚಂದ್ರಶೇಖರ್, ಕಂಠಿ,ಜಯಂತ್, ಕೈಮರ ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು

ಹರಿಹರಪುರ ಶ್ರೀ ಆಶೀರ್ವಾದ ಪಡೆದ ಶೌರ್ಯ ಸೇವಕರು – ತೀರ್ಥಹಳ್ಳಿಯ ಬಸವಾನಿ ಶೌರ್ಯ ಘಟಕ

ಹರಿಹರಪುರ ಮಠದಲ್ಲಿ ನಡೆದ ವೈಕುಂಠ ಏಕಾದಶಿ ಹಾಗೂ ಅಖಂಡ ಭಜನೋತ್ಸವದಲ್ಲಿ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಬಸವಾನಿ ಶೌರ್ಯ ವಿಪತ್ತು ಘಟಕದ ಸ್ವಯಂ ಸೇವಕರು ಸೇವೆಯನ್ನು ಮಾಡಿ ಪರಮಾಪೂಜ್ಯ ಶ್ರೀ ಮಹಾಸ್ವಾಮಿಗಳಿಂದ ಆಶೀರ್ವಾದ ಪಡೆದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.