ತೀರ್ಥಹಳ್ಳಿ ಮಲ್ನಾಡ್ ಕ್ಲಬ್ ನೂತನ ಸಾರಥಿಗಳು!
– ನೂತನ ಪದಾಧಿಕಾರಿಗಳ ನೇಮಕ: ಅಭಿನಂದನೆಗಳು
– ಸಾಮಾಜಿಕ ಕಾರ್ಯಗಳ ಮೂಲಕ ರಾಜ್ಯಕ್ಕೆ ಮಾದರಿಯಾದ ಕ್ಲಬ್
ನೂತನ ಪದಾಧಿಕಾರಿಗಳು
ನೂತನ ಅಧ್ಯಕ್ಷರಾಗಿ ಬಿ ಎಸ್ ಪ್ರವೀಣ್ ಬಿಳುವೆ, ಉಪಾಧ್ಯಕ್ಷರಾಗಿ ಕೆ ಪಿ ಮಿಲನ್ ಕುಣಜೆ, ಇನ್ನೋರ್ವ ಉಪಾಧ್ಯಕ್ಷರಾಗಿ ಶ್ರೇಷ್ಠ ಮುರಳಿ ನಂಬಳ, ಕಾರ್ಯದರ್ಶಿಯಾಗಿ ಎಸ್ ರಾಘವೇಂದ್ರ, ಖಜಾಂಚಿಯಾಗಿ ಕೆ ಕೆ ಶಶಿಧರ್ ಭಟ್, ಸಹಕಾರ್ಯದರ್ಶಿಯಾಗಿ ಆರ್ ಎಂ ಪ್ರವೀಣ್ ನಾಯಕ್, ಕ್ರೀಡಾ ಕಾರ್ಯದರ್ಶಿಯಾಗಿ ಕೆ ಎಲ್ ಪೃಥ್ವಿ ಕೆರೆಕೊಪ್ಪ.
NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿಯ ಮಲ್ನಾಡ್ ಕ್ಲಬ್ ನ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು 2024 ರಿಂದ 26 ರ ವರೆಗಿನ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆಯು ಮಕ್ಕಿಮನೆ ಪ್ರಶಾಂತ್ ಅವರ ಸಭಾಧ್ಯಕ್ಷತೆಯಲ್ಲಿ ನಡೆಯಿತು.ನೂತನ ಅಧ್ಯಕ್ಷರಾಗಿ ಬಿ ಎಸ್ ಪ್ರವೀಣ್ ಬಿಳುವೆ, ಉಪಾಧ್ಯಕ್ಷರಾಗಿ ಕೆ ಪಿ ಮಿಲನ್ ಕುಣಜೆ, ಇನ್ನೋರ್ವ ಉಪಾಧ್ಯಕ್ಷರಾಗಿ ಶ್ರೇಷ್ಠ ಮುರಳಿ ನಂಬಳ, ಕಾರ್ಯದರ್ಶಿಯಾಗಿ ಎಸ್ ರಾಘವೇಂದ್ರ, ಖಜಾಂಚಿಯಾಗಿ ಕೆ ಕೆ ಶಶಿಧರ್ ಭಟ್, ಸಹಕಾರ್ಯದರ್ಶಿಯಾಗಿ ಆರ್ ಎಂ ಪ್ರವೀಣ್ ನಾಯಕ್, ಕ್ರೀಡಾ ಕಾರ್ಯದರ್ಶಿಯಾಗಿ ಕೆ ಎಲ್ ಪೃಥ್ವಿ ಕೆರೆಕೊಪ್ಪ ಆಯ್ಕೆಯಾಗಿದ್ದಾರೆ.
ನಿರ್ದೇಶಕರರಾಗಿ ಎಂ ಪ್ರಶಾಂತ್ ಮಕ್ಕಿಮನೆ, ಎಸ್ ನಾಗರಾಜ್ ಬೆಟ್ಟಮಕ್ಕಿ, ಎ ಎಂ ಗಿರೀಶ್ ಅಂಬಳಿಕೆ, ಡಾ. ಕೆ. ಪಿ ಶ್ರೀರಾಮ್ ಕಡಿದಾಳ್, ಡಾ. ವಿಕೆ ಮಂಜುನಾಥ್, ಜಿ ವಿ ಶಿವಪಾಲ್ ಗೋವಿನಹಳ್ಳಿ, ಎಸ್ ಜಿ ಸದಾನಂದ ಸುರಳಿ ಬಾಳೆಬೈಲು, ರಂಜಿತ ಚಂದ್ರಶೇಖರ್ ಆಯ್ಕೆಯಾಗಿದ್ದಾರೆ.
ಮನೋರಂಜನೆ ಜತೆಗೆ ಸಮಾಜ ಸೇವೆಗೂ ಸೈ..!
ಮಲ್ನಾಡ್ ಕ್ಲಬ್ ಮಲೆನಾಡಿನಲ್ಲಿ ಅತ್ಯುತ್ತಮ ಚಟುವಟಿಕೆ ಇರುವಂತಹ ಒಂದು ಕ್ಲಬ್ ಆಗಿದೆ. ಬರೀ ಮನರಂಜನೆ ಅಥವಾ ಮೋಜು ಮಸ್ತಿಗೆ ಸೀಮಿತವಾಗದೆ, ಸಾಮಾಜಿಕ ಕಾರ್ಯಗಳಿಗೂ ಕೈ ಜೋಡಿಸಿದೆ. ಈ ಮೂಲಕ ಮಲೆನಾಡು ಹಾಗೂ ತೀರ್ಥಹಳ್ಳಿ ಕ್ಲಬ್ ಒಂದು ಸಮಾಜ ಸೇವೆಗೂ ನಾಂದಿ ಹಾಡಿದೆ. ಜೊತೆಗೆ ಸಾಮಾಜಿಕ ಕಾರ್ಯಗಳ ಮೂಲಕ ರಾಜ್ಯಕ್ಕೂ ಮಾದರಿಯಾಗಿದೆ. ಮುಂದಿನ ದಿನಗಳಲ್ಲೂ ಕೂಡ ಒಂದಷ್ಟು ಸಾಮಾಜಿಕ ಕಾರ್ಯಗಳನ್ನು ಕ್ಲಬ್ ಮಾಡಲಿದೆ ಎಂದು ಪದಾಧಿಕಾರಿಗಳು ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮ ಸಂಸ್ಥೆಗೆ ಹೇಳಿದ್ದಾರೆ.
