ತೀರ್ಥಹಳ್ಳಿಯಲ್ಲಿ ಭಾನುಪ್ರಕಾಶ್ ಅವರಿಗೆ ನುಡಿನಮನ
– ಭಾನುಪ್ರಕಾಶ್ ಸೇವೆ ನೆನೆದ ಶಾಸಕ ಆರಗ ಜ್ಞಾನೇಂದ್ರ
– ನಾನು ಈ ಸ್ಥಾನದಲ್ಲಿರಲು ಬಾನು ಅವರ ಕೊಡುಗೆ ಇದೆ: ಆರಗ
NAMMUR EXPRESS NEWS NEWS
ತೀರ್ಥಹಳ್ಳಿ : ಇತ್ತೀಚಿಗೆ ನಿಧನರಾದ ಬಿಜೆಪಿ ಪಕ್ಷದ ಮಾಜಿ ವಿಧಾನ ಪರಿಷತ್ ಸದಸ್ಯ, ಹಿರಿಯ ಬಿಜೆಪಿ ನಾಯಕ ಭಾನುಪ್ರಕಾಶ್ ಅವರಿಗೆ ಭಾವಪೂರ್ವ ಶ್ರದ್ಧಾಂಜಲಿ ಹಾಗೂ ನುಡಿ ನಮನ ಕಾರ್ಯಕ್ರಮ ತೀರ್ಥಹಳ್ಳಿಯ ಬಂಟರ ಭವನದಲ್ಲಿ ನೆರವೇರಿಸಲಾಯಿತು.
ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ ನಾನು ಕಾಲೇಜಿಗೆ ಶಿವಮೊಗ್ಗಕ್ಕೆ ಹೋದಾಗಿನಿಂದಲೂ ಭಾನು ಪ್ರಕಾಶ್ ಅವರು ನನಗೆ ಪರಿಚಯ. ನನಗಿಂತ ಎರಡು ಮೂರು ವರ್ಷ ಕಿರಿಯರು. ಸಂಘದ ಶಾಖೆಗೆ ನಾವು ಒಟ್ಟಿಗೆ ಹೋದವರು. ಈಗಲೂ ಕೂಡ ಭಾನು ನನ್ನ ಜೊತೆ ಇಲ್ಲ ಎಂದು ನನಗೆ ಒಪ್ಪಿಕೊಳ್ಳಲು ಆಗುತ್ತಿಲ್ಲ. ಭಾನು ಇಲ್ಲ ಎಂದು ಮಾನಸಿಕವಾಗಿ ಒಪ್ಪಿಕೊಳ್ಳಲು ನನಗೆ ಆಗುತ್ತಿಲ್ಲ ಎಂದರು. ನಾವು ಒಟ್ಟಿಗೆ ಹೋಗಿ ಕಾರ್ಯಕರ್ತರನ್ನು ಭೇಟಿ ಮಾಡುವುದು ಅವರ ಜೊತೆ ಮಾತನಾಡುವುದು, ಸಂಘಟನೆ ಬಗ್ಗೆ ಹೇಳುವುದು ಮಾಡುತ್ತಿದ್ದೆವು. ಅವರ ಊರೇ ಸಂಸ್ಕಾರವಂತರ ಊರು. ನಾನು ಇಂದು ಈ ಸ್ಥಾನದಲ್ಲಿ ಇರಲು ಭಾನು ಅವರ ತುಂಬಾ ಕೊಡುಗೆ ಇದೆ ಎಂದರು.
ಬಿಜೆಪಿ ಮಂಡಲದ ಅಧ್ಯಕ್ಷ ಹೆದ್ದೂರು ನವೀನ್ ಅವರು ಭಾನುಪ್ರಕಾಶ್ ಅವರು ಆಸ್ಪತ್ರೆ ಸೇರಿದಾಗ ನನಗೆ ಬಹಳ ದುಃಖವಾಯಿತು. ನಾವು ಚಿಕ್ಕವರು ಎಂದು ಯಾವುದೇ ತಾರತಮ್ಯವಿಲ್ಲದೆ ಅಷ್ಟು ಸಲಿಗೆಯಿಂದ ಪ್ರೀತಿಯಿಂದ ಭಾನುಪ್ರಕಾಶ್ ಅವರು ನಮ್ಮನ್ನು ಮಾತನಾಡಿಸುತ್ತಿದ್ದರು. ಶ್ರದ್ಧಾಂಜಲಿ ಸಭೆ ನಮ್ಮ ಸಂಸ್ಕೃತಿಯ ಒಂದು ಭಾಗವಾಗಿದೆ ಎಂದರು.
ಭಾರತಿಪುರ ದಿನೇಶ್ ಮಾತನಾಡಿ, ಭಾನುಪ್ರಕಾಶ್ ಹಾಗೂ ನನ್ನ ಸಂಬಂಧ 1977 ರಿಂದ ಇದೆ. ಭಾನುಪ್ರಕಾಶ್ ಅವರು ಜಿಲ್ಲಾಧ್ಯಕ್ಷರಾಗಿ, ಪ್ರಾಂತ್ಯದ ಉಪಾಧ್ಯಕ್ಷರಾಗಿ ಸಂಘಟನೆ ಏನೇನು ಅಪೇಕ್ಷೆ ಪಟ್ಟಿದೆ ಎಲ್ಲಾ ಕೆಲಸಗಳನ್ನು ಅತ್ಯಂತ ನಿಷ್ಠೆಯಿಂದ ಪ್ರಾಮಾಣಿಕವಾಗಿ ಪ್ರಭಾವಶಾಲಿಯಾಗಿ ನಿರ್ವಹಿಸಿದಂತ ವ್ಯಕ್ತಿ ಅವರು ಎಂದರು.
ಕುಕ್ಕೆ ಪ್ರಶಾಂತ್ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಬಿಜೆಪಿಯ ಹಿರಿಯ ನಾಯಕರು, ಯುವ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
