Categories
ತೀರ್ಥಹಳ್ಳಿ

ಮಲ್ನಾಡ್ ಕ್ಲಬ್ಬಲ್ಲಿ ಜೆ.ಟಿ.ಸುಂದರೇಶ್ ನುಡಿ ನಮನ

ಮಲ್ನಾಡ್ ಕ್ಲಬ್ಬಲ್ಲಿ ಜೆ.ಟಿ.ಸುಂದರೇಶ್ ನುಡಿ ನಮನ
– ಗಣ್ಯರ ಸಂತಾಪ: ಶ್ರದ್ದಾಂಜಲಿ ಸಭೆ
– ಸಹ್ಯಾದ್ರಿ ಪಾಲಿಟೆಕ್ನಿಕ್ ನಲ್ಲಿ ಪ್ರಿನ್ಸಿಪಾಲ್ ಆಗಿ 32 ವರ್ಷಗಳ ಸುಧೀರ್ಘ ಸೇವೆ

NAMMUR EXPRESS NEWS
ತೀರ್ಥಹಳ್ಳಿ: ಇತ್ತೀಚಿಗೆ ಹೃದಯಾಘಾತದಿಂದ ನಿಧನರಾದ ಜೆ.ಟಿ.ಸುಂದರೇಶ್ ಅವರಿಗೆ ಇಡೀ ಮಲೆನಾಡು ಕಂಬನಿ ವ್ಯಕ್ತಪಡಿಸುತ್ತಿದೆ. ಮಲ್ನಾಡ್ ಕ್ಲಬ್ ಹಾಗೂ ವಿವಿಧ ಸಂಘ ಸಂಸ್ಥೆಗಳಾದ ಸಹ್ಯಾದ್ರಿ ಪಾಲಿಟೆಕ್ನಿಕ್ ಕಾಲೇಜಿನ ಆಡಳಿತ ಮಂಡಳಿ, ಹಳೆಯ ವಿದ್ಯಾರ್ಥಿಗಳು, ಲಯನ್ಸ್ ಕ್ಲಬ್ ತೀರ್ಥಹಳ್ಳಿ, ಇಂಜಿನಿಯರ್ ಅಸೋಸಿಯೇಷನ್ ತೀರ್ಥಹಳ್ಳಿ, ಬಾಲ್ ಬ್ಯಾಟ್ಮಿಟ್ಟನ್ ಕ್ಲಬ್, ತುಂಗಾ ವಿದ್ಯಾವರ್ಧಕ ಸಂಸ್ಥೆ, ಏಕಲವ್ಯ ಸ್ಪೋರ್ಟ್ಸ್ ಕ್ಲಬ್, ಕುಟುಂಬದವರು, ಬಂಧು ಮಿತ್ರರು, ಕ್ಲಬ್ ನ ಆಡಳಿತ ಮಂಡಳಿಯ ಸದಸ್ಯರು ಹಾಗೂ ಕ್ಲಬ್ ನ ಸದಸ್ಯರುಗಳ ಉಪಸ್ಥಿತಿಯಲ್ಲಿ ಜಿ ಟಿ ಸುಂದರೇಶ್ ಅವರಿಗೆ ಶ್ರದ್ಧಾಂಜಲಿ ಹಾಗೂ ನುಡಿ ನಮನ ಸಲ್ಲಿಸಲಾಯಿತು. ಪ್ರೋ. ಜಿ ಟಿ ಸುಂದರೇಶ್ ರವರು 1983 ರಲ್ಲೇ ಸಿವಿಲ್ ಇಂಜಿನಿಯರ್ ಪದವಿ ಪಡೆದು ಒಂದು ವರ್ಷ ಲ್ಯಾಂಡ್ ಆರ್ಮಿ ಲಿ ಕಮಾಂಡರ್ ಆಗಿ ಕರ್ತವ್ಯ ನಿರ್ವಹಿಸಿದ್ದರು.

1985ರಲ್ಲಿ 26ನೇ ವಯಸ್ಸಿನಲ್ಲಿ ಸಹ್ಯಾದ್ರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿ 32 ವರ್ಷ ಸುಧೀರ್ಘ ಅವಧಿಯ ಸೇವೆ ಸಲ್ಲಿಸಿದ್ದಾರೆ.ಇಂಜಿನಿಯರ್ ಅಸೋಸಿಯೇಷನ್ ಅಧ್ಯಕ್ಷರಾಗಿ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಹಾಗೂ ಖಜಾಂಚಿಯಾಗಿ , ಹಾಲಿ ತುಂಗಾ ವಿದ್ಯಾ ವರ್ಧಕ ಸಂಸ್ಥೆಯ ಖಜಾಂಚಿಯಾಗಿ, ಮಲ್ನಾಡ್ ಕ್ಲಬ್ ಅಧ್ಯಕ್ಷರಾಗಿ ವಿವಿಧ ಸಂಘ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿರುತ್ತಾರೆ. ಮಲ್ನಾಡ್ ಕ್ಲಬ್ ಅವರ ಅಧಿಕಾರವಧಿಯಲ್ಲಿ ಅತೀ ಹೆಚ್ಚು ಕಾರ್ಯಕ್ರಮ, ಅಭಿವೃದ್ಧಿ ಕಾರ್ಯ ನಡೆದಿರುವುದು ಉಲ್ಲೇಖನಿಯ. ಕ್ಲಬ್ ಕುರಿತಾಗಿ ಅವರ ಕಲ್ಪನೆ ಹಾಗೂ ದೂರದೃಷ್ಟಿ ಪ್ರಶಂಸನಾರ್ಹ. ಅವರ ಜೀವಿತಾವಧಿಯಲ್ಲಿ ಅವರ ತತ್ವ ಸಿದ್ಧಾಂತಗಳನ್ನು ಪಾಲಿಸುತ್ತಲೇ ಗೌರವಾನ್ವಿತವಾಗಿ ಬದುಕಿದ ಹಾಗೂ ನೂರಾರು ಜನಕ್ಕ     ( ವಿದ್ಯಾರ್ಥಿಗಳಿಗೆ ) ಬದುಕನ್ನು ಕಲ್ಪಿಸಿದ ಶ್ರೇಯಸ್ಸು ಸಲ್ಲುತ್ತದೆ.

ಮಲ್ನಾಡ್ ಕ್ಲಬ್ ವತಿಯಿಂದ ಕಡಿದಾಳ್ ದಯಾನಂದ್ ವಿಹಂಗಮ, ಹೆಚ್. ಆರ್. ತಪಸ್ವಿ, ಸಹಕಾರಿ ನಾಯಕ ಡಾ.ಆರ್.ಎಂ. ಮಂಜುನಾಥ್ ಗೌಡ, ಟೇಬಲ್ ಟೆನಿಸ್ ವತಿಯಿಂದ ಡಾ. ಯು.ಕೆ. ನಂದಕಿಶೋರ್ ರಾಜ್ ಕುಮಾರ್, ಆದಾಯ ತೆರಿಗೆ ಇಲಾಖೆ, ಬಾಲ್ ಬ್ಯಾಡ್ಮಿಂಟನ್ ಕ್ಲಬ್ ವತಿಯಿಂದ ಸುಧೀರ್ ಪಿ ರಾವ್ ಎಂ‌.ಎನ್. ಶ್ರೀಧರ ಮೂರ್ತಿ, ಕ್ಲಬ್ ಆಡಳಿತ ಮಂಡಳಿ ವತಿಯಿಂದ ಎಸ್‌. ರಾಘವೇಂದ್ರ ಕಾರ್ಯದರ್ಶಿ ಪ್ರಸಿಲ್ಲಾ ಎನ್. ಪಿಂಟೋ ನಿರ್ದೇಶಕರು, ಸಹ್ಯಾದ್ರಿ ಪಾಲಿಟೆಕ್ನಿಕ್ ಕಾಲೇಜು ವತಿಯಿಂದ ಅನಿತಾ ನಾಗರಾಜ್ ಆಡಳಿತ ಮಂಡಳಿ ಪ್ರಶಾಂತ್ ಹೆಗ್ಗಾರ್ ಹಳೆ ವಿದ್ಯಾರ್ಥಿ ಮುಕುಂದ ಸಹೋದ್ಯೋಗಿಗಳ ವತಿಯಿಂದ ತುಂಗಾ ವಿದ್ಯಾವರ್ಧಕ ಸಂಘದ ವತಿಯಿಂದ ಡಾನ್ ರಾಮಣ್ಣ, ಕುಟುಂಬದವರಿಂದ ಕೆ.ಸಿ. ದಿನೇಶ್ ಕಡ್ತೂರು, ಶಿವಪ್ಪ, ಕೆ.ಆರ್. ಪ್ರಕಾಶ್ ಕಡಿದಾಳು, ಲಯನ್ಸ್ ಕ್ಲಬ್ ವತಿಯಿಂದ ಕಾರ್ತಿಕ್ ಬೊಬ್ಬಿ ಕಾರ್ಯದರ್ಶಿ, ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸಂತೋಶ್ ಪೂಜಾರಿ ಹಾಗೂ ಮಲ್ನಾಡ್ ಕ್ಲಬ್ ಹಾಗೂ ಇತರ ಸಂಘ ಸಂಸ್ಥೆಗಳ ವತಿಯಿಂದ ಶ್ರೀಯುತರ ಆತ್ಮಕ್ಕೆ ಶಾಂತಿ ಕೋರಲಾಯಿತು. ಸಂಘ ಸಂಸ್ಥೆಗಳ ಪ್ರಮುಖರು, ಗಣ್ಯರು ಹಾಜರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.