Categories
ಬೆಂಗಳೂರು

ಮನೆ ಬಾಗಿಲಿಗೆ ಇ – ಪೌತಿ: ಈಗ್ಲೇ ನಿಮ್ಮ ಅಸ್ತಿ ಹಕ್ಕು ಮಾಡಿಕೊಳ್ಳಿ!

ಮನೆ ಬಾಗಿಲಿಗೆ ಇ – ಪೌತಿ: ಈಗ್ಲೇ ನಿಮ್ಮ ಅಸ್ತಿ ಹಕ್ಕು ಮಾಡಿಕೊಳ್ಳಿ!
– ರೈತರ ಖಾತೆ ಸಮಸ್ಯೆಗೆ ಕಂದಾಯ ಇಲಾಖೆ ಪರಿಹಾರ
– ಸರ್ಕಾರದ ಸೌಲಭ್ಯ ಪಡೆಯಲು ಇದೀಗ ಸುವರ್ಣ ಅವಕಾಶ

NAMMUR EXPRESS NEWS
ಬೆಂಗಳೂರು: ಘನ ಕರ್ನಾಟಕ ಸರ್ಕಾರದ ಹಾಗೂ ಕಂದಾಯ ಇಲಾಖೆಯ ಮಹತ್ವಕಾಂಕ್ಷಿ ಯೋಜನೆಯಾದ ಪೌತಿ / ವಾರಸಾ ಖಾತೆ ಆಂದೋಲನ ಇದೀಗ ಶುರುವಾಗಿದೆ. ಜನರು ತಮ್ಮ ಅಸ್ತಿ ಹಕ್ಕನ್ನು ಮಾಡಿಕೊಳ್ಳಬಹುದಾಗಿದೆ.
ಕೃಷಿ ಜಮೀನಿನ ಮಾಲೀಕರು ಮರಣ ಹೊಂದಿದ ನಂತರ ಪೌತಿ/ವಾರಸಾರೀತ್ಯಾ ಮಾಲೀಕತ್ವವು ಮೃತರ ಉತ್ತಾರಧಿಕಾರಿಗಳ ಹೆಸರಿಗೆ ಬದಲಾವಣೆಯಾಗಸಿದ್ದಲ್ಲಿ ,ಅಂತಹ ಜಮೀನುಗಳ ಸ್ವಾಧೀನವನ್ನು ಹೊಂದಿದ್ದರೂ ಸಹ ಕುಟುಂಬಸ್ಥರಿಗೆ ಜಮೀನು ಅಭಿವೃದ್ಧಿಪಡಿಸಲು ಸಾಲ ಸೌಕರ್ಯಗಳು ದೊರೆಯದೇ, ಪ್ರಕೃತಿ ವಿಕೋಪದಂತಹ ಆಚಾತುರ್ಯಗಳಿಂದಾಗಿ ಫಸಲು ನಾಶವಾದಾಗ ಸರ್ಕಾರದಿಂದ ನೀಡಲಾಗುವ ವಿಮೆ/ ಪರಿಹಾರದ ಮೊಬಲಗನ್ನು ಪಡೆಯುವುದು ಕಷ್ಟವಾಗಿದೆ. ಹಾಗೆಯೇ ಸರ್ಕಾರ ವಿವಿಧ ಯೋಜನೆ ಹಣವನ್ನು ಪಡೆಯಲು ವಿವಿಧ ಕಛೇರಿಗಳಿಗೆ ಅಲೆದಾಡಬೇಕಾದ ಪರಿಸ್ಥಿತಿಗಳನ್ನು ಗಮನಿಸಿ ರೈತಾಪಿ ವರ್ಗದವರ ಸಮಸ್ಯೆಗಳನ್ನು ಪರಿಹರಿಸಿ ಪೌತಿ/ವಾರಸಾ ಸ್ವರೂಪದ ಪ್ರಕ್ರಿಯೆಗಳನ್ನು ಸರಳಿಕೃತಗೊಳಿಸುವ ಉದ್ದೇಶದಿಂದಾಗಿ ಕರ್ನಾಟಕ ಸರ್ಕಾರದಿಂದ ಇ-ಪೌತಿ ಖಾತಾ ಆಂದೋಲನವನ್ನು ಹಮ್ಮಿಕೊಳ್ಳಲಾಗಿರುತ್ತದೆ.
ಆದ್ದರಿಂದ, ಮರಣ ಹೊಂದಿರುವ ಪಟ್ಟಾದಾರರ ಕುಟುಂಬಸ್ಥರು ಪೌತಿ ಖಾತಾ ಬದಲಾವಣೆಗೆ ತಮ್ಮ ಗ್ರಾಮದ ಗ್ರಾಮ ಆಡಳಿತ ಅಧಿಕಾರಿಗಳ ಕಛೇರಿಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಿಗೆ ಈ ಕೆಳಗಿನ ದಾಖಲೆಗಳೊಂದಿಗೆ ಅರ್ಜಿಯನ್ನು ತಕ್ಷಣವೇ ಸಲ್ಲಿಸಲು ಸೂಚಿಸಿದೆ.

:- ಅರ್ಜಿಗಳ ಜೊತೆಗೆ ಸಲ್ಲಿಸಬೇಕಾದ ದಾಖಲೆಗಳು :-

ವಂಶವೃಕ್ಷ
ಪಹಣಿ ಪತ್ರಿಕೆ
ಮೃತರ ಮರಣ ಪ್ರಮಾಣ ಪತ್ರ
ಎಲ್ಲಾ ವಾರಸುದಾರರ ಆಧಾರ ಕಾರ್ಡ್

ವಿಶೇಷ ಸೂಚನೆ :- ಅರ್ಜಿದಾರರು ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ ಮೊಬೈಲ್ ನಂಬರ್ ಮತ್ತು ಆಧಾರ್ ಕಾರ್ಡ್ ಕಡ್ಡಾಯವಾಗಿ ಅವಶ್ಯಕವಾಗಿದ್ದು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.