Categories
ತೀರ್ಥಹಳ್ಳಿ

ಬಿಜೆಪಿ ವಿರುದ್ಧ ಯುವ ಕಾಂಗ್ರೆಸ್ ಗರಂ!

ಬಿಜೆಪಿ ವಿರುದ್ಧ ಯುವ ಕಾಂಗ್ರೆಸ್ ಗರಂ!

– ಕೇಂದ್ರ ಸರ್ಕಾರ ಶೇ.35% ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡಿದಾಗ ನಮ್ಮ ಶಾಸಕರು ಮೌನ ವ್ರತ ಮಾಡುತ್ತಿದ್ದರು.!
– ನೀಟ್ ಸ್ಕ್ಯಾಮ್ ಗೆ ಕೇಂದ್ರ ಸರ್ಕಾರದ ಹುಮ್ಮಕ್ಕು
– ಯುವ ಕಾಂಗ್ರೆಸ್ ಒಕ್ತಾರ ಆದರ್ಶ ಹುಂಚದಕಟ್ಟೆ ಆರೋಪ

NAMMUR EXPRESS NEWS
ತೀರ್ಥಹಳ್ಳಿ: ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ತೀರ್ಥಹಳ್ಳಿ ಯುವ ಕಾಂಗ್ರೆಸ್ ಗರಂ ಆಗಿದೆ.
ಕೇಂದ್ರ ಸರ್ಕಾರ ಶೇ.35% ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡಿದಾಗ ನಮ್ಮ ಶಾಸಕರಾದ ಆರಗ ಜ್ಞಾನೇಂದ್ರ ಅವರು ಮೌನ ವ್ರತ ಮಾಡುತ್ತಿದ್ದರು.!. ಈಗ ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಆದರ್ಶ ಹುಂಚದಕಟ್ಟೆ ಹೇಳಿದ್ದಾರೆ.

ತೀರ್ಥಹಳ್ಳಿಯಲ್ಲಿ ಯುವ ಕಾಂಗ್ರೆಸ್ ಸೋಮವಾರ ಕಾಂಗ್ರೆಸ್ ಕಚೇರಿಯ ಗಾಂಧಿ ಭವನದಲ್ಲಿ ಯುವ ಕಾಂಗ್ರೆಸ್ ಒಕ್ತಾರ ಆದರ್ಶ ಹಂಚದಕಟ್ಟೆ ನೇತೃತ್ವದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು. ಪತ್ರಿಕಾಗೋಷ್ಠಿಯ ಕುರಿತು ಮಾತನಾಡಿದ ಆದರ್ಶ ಅವರು, ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 3 ರೂ ಹೆಚ್ಚಳ ಮಾಡಿತ್ತು, ಇದರ ಬಗ್ಗೆ ಇತ್ತೀಚಿಗೆ ತೀರ್ಥಹಳ್ಳಿಯ ಶಾಸಕ ಆರಗ ಜ್ಞಾನೇಂದ್ರ ಅವರು ಪ್ರತಿಭಟನೆಯನ್ನು ಮಾಡಿದ್ದರು. ಮೊದಲಿಗೆ ನಾನು ಅವರಿಗೆ ಅಭಿನಂದನೆಯನ್ನು ತಿಳಿಸಲು ಇಷ್ಟಪಡುತ್ತೇನೆ ಏಕೆಂದರೆ ಕೇಂದ್ರ ಸರ್ಕಾರ ಪದೇ ಪದೇ ಪೆಟ್ರೋಲ್ ಹಾಗೂ ಡೀಸೆಲ್ ಗ್ಯಾಸ್ ಸೇರಿದಂತೆ ಇತರ ಎಲ್ಲಾ ವಸ್ತುಗಳ ಬೆಲೆ ಹೆಚ್ಚಳ ಮಾಡಬೇಕಾದರೆ ನಮ್ಮ ಶಾಸಕರು ಮೌನ ವ್ರತ ಮಾಡುತ್ತಿದ್ದರು. ಕೇಂದ್ರ ಸರ್ಕಾರ ಹತ್ತಾರು ಬಾರಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿದೆ. ಅವಾಗ ಯಾವಾಗಲೂ ಇವರ ಧ್ವನಿ ಎದ್ದಿರಲಿಲ್ಲ, ಆದರೆ ಈಗ ರಾಜ್ಯ ಸರ್ಕಾರ 3 ರೂ ಹೆಚ್ಚಳ ವಾಗುತ್ತಿದ್ದಂತೆ ಇವರು ರಸ್ತೆಗಿಳಿದು, ಸಿದ್ದರಾಮಯ್ಯ ಕಳ್ಳ, ಡಿಕೆ ಶಿವಕುಮಾರ್ ಕಳ್ಳ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಇವರು ನಿಜವಾಗಿಯೂ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಗೆ ಪ್ರತಿಭಟನೆ ಮಾಡಿದ್ದಾರೋ ಅಥವಾ ಸುಮ್ಮನೆ ಮಾಧ್ಯಮದಲ್ಲಿ ಬರುವುದಿಕ್ಕಾಗಿ ಇಂತಹ ಪ್ರತಿಭಟನೆ ಮಾಡಿದ್ದಾರೋ ಎನ್ನುವುದನ್ನು ಅವರೇ ಸ್ಪಷ್ಟಪಡಿಸಬೇಕು ಎಂದರು.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಪ್ರತಿಭಟನೆ ಮಾಡುವುದಾದರೆ ಹಿಂದೆ ಆದ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಹಾಗೂ ವಿಶ್ವದಲ್ಲೇ ಅತಿ ಹೆಚ್ಚು ಟ್ಯಾಕ್ಸ್ ಹಾಕುವ ದೇಶ ಭಾರತ ಎನ್ನುವುದು ಎಲ್ಲರಿಗೂ ಗೊತ್ತಿದೆ , ಆವಾಗ ಪ್ರತಿಭಟನೆ ಮಾಡಲು ಎಲ್ಲಿ ಹೋಗಿದ್ದರು? ಇವರು ಗೃಹ ಮಂತ್ರಿಗಳಾಗಿದ್ದಾಗ ಈ ಎಕ್ಸೈಸ್ ಡ್ಯೂಟಿ ರಾಜ್ಯ ಸರ್ಕಾರ 35% ಬರೆ ಹಾಕಿದ್ದರು. ಅದನ್ನು ಚುನಾವಣೆ ಹತ್ರ ಬರುತ್ತಿದ್ದಂತೆ 25% ಕಡಿಮೆಗೊಳಿಸಿದ್ದರು. ಈಗ ರಾಜ್ಯ ಸರ್ಕಾರ 4% ಹೆಚ್ಚಳ ಮಾಡಿದೆ. ಇವರ ಅವಧಿಯಲ್ಲಿ 35% ಹೆಚ್ಚಳ ಮಾಡಿ ಇವಾಗ ಯಾರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ? ಇದಕ್ಕೆ ಇವರು ಉತ್ತರಿಸಬೇಕಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೀಟ್ ಸ್ಕ್ಯಾಮ್ ಗೆ ಕೇಂದ್ರ ಸರ್ಕಾರದ ಹುಮ್ಮಕ್ಕು ಇದೆ

ನಂತರ ನೀಟ್ ಸ್ಕ್ಯಾಮ್ ಬಗ್ಗೆ ಮಾತನಾಡಿದ ಅವರು ಸಿಇಟಿ ಇಂಟ್ರಡ್ಯೂಸ್ ಆದಾಗ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಸೀಟ್ ಬಹಳ ಸುಲಭವಾಗಿ ಇಲ್ಲಿನ ಮಕ್ಕಳಿಗೆ ಸಿಗಲಿ ಎನ್ನುವ ಉದ್ದೇಶದಿಂದ ಸಿಇಟಿ ಅನ್ನು ಇಂಟ್ರೊಡ್ಯೂಸ್ ಮಾಡಲಾಗಿತ್ತು, ಅದು ಪಾರದರ್ಶಕ ವ್ಯವಸ್ಥೆಯಾಗಿ ನಡೆದುಕೊಂಡು ಬಂದಿತ್ತು. ಆದರೆ ಕೇಂದ್ರ ಸರ್ಕಾರದಲ್ಲಿ ಮೋದಿ ಅವರ ಆಡಳಿತ ಬಂದ ಮೇಲೆ ಅಧಿಕಾರ ವಿಕೇಂದ್ರೀಕರಣವನ್ನು ಅಧಿಕಾರ ಕೇಂದ್ರೀಕರಣ ದತ್ತ ತೆಗೆದುಕೊಂಡು ಹೋಗುವ ಬರದಲ್ಲಿ ನೀಟ್ ಅನ್ನು ಇಂಟ್ರೊಡ್ಯೂಸ್ ಮಾಡಿದ್ದರು. ಇಡೀ ಭಾರತದಲ್ಲಿ ಒಂದು ವ್ಯವಸ್ಥೆ ತರಬೇಕು ಒಂದು ಪರೀಕ್ಷೆ ತರಬೇಕು, ಅದರಲ್ಲಿ ಮೆಡಿಕಲ್ ಇಂಜಿನಿಯರಿಂಗ್ ಕೊಡಬೇಕು ಎಂದು ಹೊರಟರು. ಅದು ರಾಜ್ಯ ಸರ್ಕಾರದ ಶಾಲೆಗಳಲ್ಲಿ ಕೊಡುವುದು ತೊಂದರೆಯಾಗುತ್ತದೆ ಎಂಬ ಗೊಂದಲ ಶುರುವಾಯಿತು. ಅದರಲ್ಲೂ ಸಿಬಿಎಸ್ ಇ ಶಾಲೆಗಳಿಗೆ ಡಿಮ್ಯಾಂಡ್ ಹೆಚ್ಚಾಗಿ ಕನ್ನಡ ಶಾಲೆಗಳಿಗೆ ಹೊಡೆತ ಬಿತ್ತು.

ಈಗ ಇಡೀ ದೇಶದಲ್ಲಿ 24 ಲಕ್ಷ ಮಕ್ಕಳು ನೀಟ್ ಬರೆಯುತ್ತಾರೆ, ಒಂದು ಲಕ್ಷ ಮೆಡಿಕಲ್ ಸೀಟ್ ಗಳಿವೆ, ಅದರಲ್ಲೂ ಕರ್ನಾಟಕದಲ್ಲಿ ಅತಿ ಹೆಚ್ಚು ಮೆಡಿಕಲ್ ಸೀಟ್ ಇದೆ. ಕನ್ನಡದ ಮಕ್ಕಳಿಗೆ ಸಿಗಬೇಕಾದ ಅವಕಾಶವನ್ನು ನಾವು ಬೇರೆಯವರಿಗೆ ಬಿಟ್ಟು ಕೊಡುವಂತಾಗಿದೆ. ನೀಟ್ ಪೇಪರ್ ಗಳನ್ನು ಪರೀಕ್ಷೆಯ ಮುಂಚೆಯೇ ಬಿಹಾರ ಗುಜರಾತ್ ಮಧ್ಯ ಪ್ರದೇಶದಲ್ಲಿ ದುಡ್ಡು ತೆಗೆದುಕೊಂಡು ಮನೆ ಮನೆಗೆ ತಲುಪಿಸಲಾಗುವ ಸ್ಕ್ಯಾಮ್ ಶುರುವಾಗಿದೆ. ಇದರಿಂದ ಕನ್ನಡದ ಎಷ್ಟೋ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಿದೆ. ಒಂದು ವರುಷದಿಂದ ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳಿಗೆ ಸೀಟ್ ಸಿಗದೆ ಪ್ರಶ್ನೆ ಪತ್ರಿಕೆ ಎಕ್ಸಾಮ್ ಗಿಂತ ಮೊದಲೇ ಸಿಕ್ಕ ಬೇರೆ ರಾಜ್ಯದ ವಿದ್ಯಾರ್ಥಿಗಳಿಗೆ ಸಿಗುತ್ತಿದೆ. ಇಂತಹ ವಿದ್ಯಾರ್ಥಿಗಳು ವೈದ್ಯರಾಗಿ ಹೊರ ಬರುತ್ತಿದ್ದಾರೆ. ಇಂತಹದೊಂದು ಸ್ಕ್ಯಾಮ್ ಗೆ ಕೇಂದ್ರ ಸರ್ಕಾರದ ಒಂದು ಕುಮ್ಮಕ್ಕು ಇದೆ ಎಂದು ಆರೋಪ ಮಾಡಿದರು. ಹಾಗೂ ನೀಟ್ ವ್ಯವಸ್ಥೆಯನ್ನು ತೆಗೆದುಹಾಕಿ ಸಿಇಟಿ ವ್ಯವಸ್ಥೆ ಮಾಡುವಂತೆ ಆಗ್ರಹ ಮಾಡಿದರು.

ಆರಗ ಜ್ಞಾನೇಂದ್ರ ತೀರ್ಥಹಳ್ಳಿ ಅಭಿವೃದ್ಧಿಯತ್ತ ಗಮನಹರಿಸಲಿ!

ನಮ್ಮ ಶಾಸಕರು ಇಂತಹ ಪ್ರತಿಭಟನೆಗಳನ್ನು ಬಿಟ್ಟು, ತೀರ್ಥಹಳ್ಳಿಗೆ ಬೇಕಾಗಿರುವಂತಹ ಮೂಲಸೌಕರ್ಯಗಳ ಬಗ್ಗೆ ಚರ್ಚಸಬೇಕು. ತಾಲೂಕ್ ಆಫೀಸ್ ನಲ್ಲಿ ಕಚೇರಿಗೆ ಲೇಟಾಗಿ ಬಂದ ಕೆಲಸಗಾರರಿಗೆ ವಿಡಿಯೋ ಮಾಡಿ ಗದರಿಸುವುದರ ಬದಲು, ಸಭೆಯನ್ನು ಮಾಡಿ ಮುಂದಿನ ದಿನಗಳಲ್ಲಿ ಹೀಗೆ ಆಗದಂತೆ ಸಮಸ್ಯೆ ಬಗೆಹರಿಸಲಿ, ಅಭಿವೃದ್ಧಿ ಕೆಲಸಗಳ ಬಗ್ಗೆ ಗಮನ ಹರಿಸಲಿ ಎಂದರು.

ಬಿಜೆಪಿ ಶ್ರೀಮಂತರ ಪರ: ಅಮರನಾಥ್ ಶೆಟ್ಟಿ

ಯುವ ಕಾಂಗ್ರೆಸ್ ಅಧ್ಯಕ್ಷ ಅಮರನಾಥ ಶೆಟ್ಟಿ ಮಾತನಾಡಿ ಬಿಜೆಪಿಯವರು ಹಿಂದಿನಿಂದಲೂ ಬಡವರ ವಿರೋಧಿ ವ್ಯವಸ್ಥೆಯನ್ನೇ ಹೊಂದಿದವರು. ಅವರು ಯಾವಾಗಲೂ ಬಡವರ ಪರ ನಿಲ್ಲಲಿಲ್ಲ ಬಡವರ ದಲಿತರ ವಿರೋಧದ ನಿಲುವನ್ನೇ ಹೊಂದಿದವರು. ಇವರು ಸಾಧ್ಯವಾದರೆ ಒಂದು ನೂರು ಜನ ಫಲಾನುಭವಿಗಳಲ್ಲಿ ಈ ಗ್ಯಾರಂಟಿ ಯೋಜನೆಯಿಂದ ಬಡವರಿಗೆ ಅನುಕೂಲವಾಗುತ್ತಿಲ್ಲ ಇದು ವ್ಯರ್ಥ ಯೋಜನೆ ಎಂದು ಹೇಳಿಸಲಿ. ಇವರು ಹಿಂದಿನ 10 ವರ್ಷದಿಂದ ಪೆಟ್ರೋಲ್ ಹಾಗೂ ಇನ್ನಿತರ ದಿನ ಬಳಕೆ ವಸ್ತುಗಳು ಎಷ್ಟು ಬಾರಿ ಏರಿಕೆ ಯಾಗಿದೆ ಆದರೆ ಅವಾಗ ಇವರ ಪ್ರತಿಕ್ರಿಯೆ ಏನಿತ್ತು? ಕಾಂಗ್ರೆಸ್ ಯಾವಾಗಲೂ ಬಿಜೆಪಿ ಅವರ ತರ ದೊಡ್ಡ ದೊಡ್ಡ ಉದ್ಯಮಿಗಳ ಸಾವಿರಾರು ಕೋಟಿ ಸಾಲ ಮನ್ನ ಮಾಡಿಲ್ಲ, ಯಾವುದೇ ಯೋಜನೆ ಕಾಂಗ್ರೆಸ್ ಸರ್ಕಾರ ತಂದಿದ್ರೆ ಅದು ಬಡವರು ರೈತರು ಹಾಗೂ ಹಿಂದುಳಿದವರ ಪರವಾಗಿತ್ತು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪುಟ್ಟೋಡ್ಲು ರಾಘವೇಂದ್ರ, ಶ್ರೇಯಸ್, ಅಶ್ವಲ್ ಗೌಡ, ವಿಲಿಯಂ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.