Categories
gutka ಅಡಿಕೆ-ದರ ಕೃಷಿ ರಾಜ್ಯ ವ್ಯವಹಾರ

ಗುಟ್ಕಾ ನಿಷೇಧ ವಾಪಾಸ್! – ಅಡಿಕೆ ಬೆಳೆಗಾರರಿಗೆ ನೆಮ್ಮದಿಯ ಸುದ್ದಿ – ಲಕ್ಷ ಲಕ್ಷ ರೈತರ ಪರ ನಿಂತ ಡಿಕೆಶಿ

ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೊಳಿಸಿದ್ದ ಗುಟ್ಕಾ ಹಾಗೂ ನಿಕೋಟಿನ್ ಅಥವಾ ತಂಬಾಕು ಅಂಶ ಹೊಂದಿರುವ ಪಾನ್ ಮಸಾಲಾ ಉತ್ಪನ್ನಗಳ ಮೇಲಿನ ಒಂದು ವರ್ಷದ ನಿಷೇಧ ಆದೇಶ ಹಿಂಪಡೆದಿದೆ..
ಲಕ್ಷ ಲಕ್ಷ ಅಡಿಕೆ ಬೆಳೆಗಾರರ ಬದುಕು ಅಡಿಕೆ ಮೇಲೆ ನಿಂತಿದ್ದು ಏಕಾಏಕಿ ಈ ನಿಯಮ ಹಿಂಪಡೆಯಲು ಸಿಎಂ ಡಿಕೆ ಶಿವಕುಮಾರ್ ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಅಧಿಕೃತ ಆದೇಶ ಹೊರ ಬಿದ್ದಿದೆ.
ಕೆಲವೇ ದಿನಗಳ ಹಿಂದೆ ಹೊರಡಿಸಿದ್ದ ನಿಷೇಧ ಆದೇಶದಿಂದ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ದಾವಣಗೆರೆ ಸೇರಿದಂತೆ ಅಡಿಕೆ ಬೆಳೆಗೆ ಅವಲಂಬಿತ ಪ್ರದೇಶಗಳ ರೈತರು ಆತಂಕಕ್ಕೆ ಒಳಗಾಗಿದ್ದರು. ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆದೇಶವನ್ನು ಮರುಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದೀಗ ಲಕ್ಷ ಲಕ್ಷ ಕುಟುಂಬಗಳ ಬದುಕಿನ ಭದ್ರತೆಗಾಗಿ ಈ ಆದೇಶ ಮಾಡಲಾಗಿದೆ.

ಸಿಎಂ ಭೇಟಿ ಮಾಡಿದ ಮಲೆನಾಡು ಭಾಗದ ನಿಯೋಗ

ಗುರುವಾರ ಬಿಜೆಪಿ ಶಾಸಕ, ಅಡಿಕೆ ಮಹಾ ಮಂಡಲ ಅಧ್ಯಕ್ಷರಾದ ಆರಗ ಜ್ಞಾನೇಂದ್ರ ಹಾಗೂ ಕಾಂಗ್ರೆಸ್ ಶಾಸಕ ಡಿ.ಜಿ. ಶಾಂತನೇಗೌಡ ನೇತೃತ್ವದ ನಿಯೋಗವು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಆದೇಶವನ್ನು ಹಿಂಪಡೆಯುವಂತೆ ಮನವಿ ಸಲ್ಲಿಸಿತ್ತು. ಅಡಿಕೆ ಬೆಳೆಯೇ ಮಲೆನಾಡಿನ ಆರ್ಥಿಕ ಜೀವನಾಡಿಯಾಗಿದ್ದು, ನಿಷೇಧದಿಂದ ರೈತರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ನಿಯೋಗವು ಮುಖ್ಯಮಂತ್ರಿಯ ಗಮನ ಸೆಳೆದಿತ್ತು. ಇದೀಗ ಆದೇಶ ಹಿಂಪಡೆಯಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.