Categories
ಉಡುಪಿ

ಉಡುಪಿ: ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ!

ಉಡುಪಿ ಟಾಪ್ ನ್ಯೂಸ್

ಉಡುಪಿ: ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ!

– ಉಡುಪಿ: ಗರುಡ ಗ್ಯಾಂಗ್ ಸದಸ್ಯ ಇಸಾಕಿಗೆ ಪೊಲೀಸ್ ಕಸ್ಟಡಿ ಅವಧಿ ವಿಸ್ತರಣೆ!
– ಕೋಟ: ಬೈಕ್ ಡಿಕ್ಕಿ, ಪಾದಚಾರಿಗೆ ಗಂಭೀರ ಗಾಯ!

NAMMUR EXPRESS NEWS
ಉಡುಪಿ: ಗುಡ್ಡದ ಇಳಿಜಾರು ತಗ್ಗು ಕಾಡು ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಗಂಡಸಿನ ಶವವು, ಏ. 02ರಂದು ತಡ ಸಂಜೆಯಲ್ಲಿ ಪತ್ತೆಯಾಗಿರುವ ಘಟನೆಯು ನಡೆದಿದೆ.
ಮೃತ ವ್ಯಕ್ತಿಯನ್ನು ವಾರದ ಹಿಂದೆ ನಾಪತ್ತೆಯಾಗಿರುವ ಮಣಿಪಾಲ ಪ್ರಗತಿನಗರದ ನಿವಾಸಿ ಚೌರಪ್ಪ ದಂಡಾವತಿ (51ವ) ಎಂದು ಗುರುತಿಸಲಾಗಿದೆ. ಸಾವಿನ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳದಲ್ಲಿದ್ದು ಮಣಿಪಾಲ ಪೋಲಿಸ್ ಠಾಣೆಯ ಎ ಎಸ್ ಐ ವಿವೇಕಾನಂದ, ಎ ಎಸ್‌ ಐ ವಿಜಯ, ಪ್ರಸನ್ನ ಉಳ್ಳೂರು, ಸಂಗೀತ ಮಣಿಪಾಲ ಮಹಜರು ಪ್ರಕ್ರಿಯೆ ನಡೆಸಿದರು.
ಶವ ಪತ್ತೆಯಾದ ಸ್ಥಳವು ಗಿಡಗಂಟಿ ಬೆಳೆದು ಪೊದೆಗಳಾಗಿರುವ ಕಾಡು ಪ್ರದೇಶವಾಗಿತ್ತು. ಕತ್ತಲಲ್ಲಿ ಶವವನ್ನು ಆಂಬುಲೆನ್ಸ್ ವಾಹನ ನಿಲುಗಡೆ ಇರುವ ಸ್ಥಳದೆಡೆಗೆ ಶವ ಹೊತ್ತು ತರಲು ಪೋಲಿಸರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಕತ್ತಲಲ್ಲಿ ಪ್ರಯಾಶ ಪಡಬೇಕಾಯಿತು. ಶವವನ್ನು ಮರಣೋತ್ತರ ಪರೀಕ್ಷೆ ನಡೆಸಲು, ಅಜ್ಜರಕಾಡು ಜಿಲ್ಲಾಸ್ಪತ್ರೆಯ ವೈದಕೀಯ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಒಳಕಾಡುವರು ನೆರವಾದರು.

– ಗರುಡ ಗ್ಯಾಂಗ್ ಸದಸ್ಯ ಇಸಾಕಿಗೆ ಪೊಲೀಸ್ ಕಸ್ಟಡಿ ಅವಧಿ ವಿಸ್ತರಣೆ!

ಉಡುಪಿ: ಅನೇಕ ಪ್ರಕರಣಗಳಲ್ಲಿ ತಲೆಮರೆಸಿಕೊಂಡು ಮತ್ತೆ ಪೊಲೀಸರ ಬಲೆಗೆ ಬಿದ್ದ ಗರುಡ ಗ್ಯಾಂಗ್ ಸದಸ್ಯ ಆರೋಪಿ ಇಸಾಕ್ ನ ಪೊಲೀಸ್ ಕಸ್ಟಡಿ ಅವಧಿಯನ್ನು ವಿಸ್ತರಿಸಿ ನ್ಯಾಯಾಲಯ ಆದೇಶ ನೀಡಿದೆ.
ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಪೊಲೀಸರು ಇಸಾಕನನ್ನು ಕೋರ್ಟಿಗೆ ಹಾಜರುಪಡಿಸಿದ್ದರು. ನಂತರ ಎಪ್ರಿಲ್ ಒಂದರವರೆಗೆ ಪೊಲೀಸ್ ಕಸ್ಟಡಿಗೆ ಪಡೆದಿದ್ದರು. ತನಿಖೆ ಬಾಕಿ ಇರುವ ಕಾರಣ ನ್ಯಾಯಾಲಯ ಆತನ ಪೊಲೀಸ್ ಕಸ್ಟಡಿ ಅವಧಿಯನ್ನು ವಿಸ್ತರಿಸಿ ಆದೇಶ ನೀಡಿದೆ.

– ಕೋಟ: ಬೈಕ್ ಡಿಕ್ಕಿ, ಪಾದಚಾರಿಗೆ ಗಂಭೀರ ಗಾಯ!

ಕೋಟ : ರಸ್ತೆ ದಾಟಲು ನಿಂತಿದ್ದ ಪಾದಚಾರಿಗೆ ಬೈಕೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ ಗಂಭೀರ ಗಾಯಗೊಂಡ ಘಟನೆ ಏ. 2 ರಂದು ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 66ರ ಕೋಟ ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಬಳಿ ನಡೆದಿದೆ.
ವಸಂತ ಅಣ್ಣಪ್ಪ ಗಂಭೀರ ಗಾಯಗೊಂಡ ವ್ಯಕ್ತಿ. ಅಣ್ಣಪ್ಪ ಅವರು ರಸ್ತೆ ದಾಟಲು ಹೆದ್ದಾರಿ ಪಕ್ಕದಲ್ಲಿ ನಿಂತಿದ್ದ ಸಂದರ್ಭ ಗಣೇಶ್‌ ಎಂಬುವವನು ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಬೈಕ್ ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರ ಎಡಬದಿಗೆ ಬಂದು ರಸ್ತೆ ದಾಟಲು ನಿಂತಿದ್ದ ವಸಂತ ಅಣ್ಣಪ್ಪ ರವರಿಗೆ ಡಿಕ್ಕಿ ಹೊಡೆದಿರುತ್ತಾನೆ.
ಬೈಕ್ ಡಿಕ್ಕಿಯಾದ ಪರಿಣಾಮ ವಸಂತರವರು ರಸ್ತೆಗೆ ಬಿದ್ದಿದ್ದು ಅವರ ತಲೆಗೆ, ಕಾಲಿಗೆ ತೀವ್ರ ಸ್ವರೂಪದ ಗಾಯವಾಗಿರುತ್ತದೆ. ಅಲ್ಲದೇ ಮೋಟಾರ್‌ ಸೈಕಲ್‌ ಸವಾರನಿಗೂ ಗಾಯ ಉಂಟಾಗಿರುತ್ತದೆ. ತಕ್ಷಣ ಕೋಟ ಜೀವನ್ ಮಿತ್ರ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.