Categories
ಮಂಗಳೂರು

ಬೆಳ್ತಂಗಡಿ ಕಾಡಲ್ಲಿ ಸಿಕ್ಕಿದ್ದ ಹೆಣ್ಣು ಮಗುವಿನ ಕ್ರೂರ ಅಪ್ಪ ಅಮ್ಮ ಕೊನೆಗೂ ಪತ್ತೆ!

ಬೆಳ್ತಂಗಡಿ ಕಾಡಲ್ಲಿ ಸಿಕ್ಕಿದ್ದ ಹೆಣ್ಣು ಮಗುವಿನ ಕ್ರೂರ ಅಪ್ಪ ಅಮ್ಮ ಕೊನೆಗೂ ಪತ್ತೆ!

– ತನಿಖಾ ನಿರತ ತಂಡಕ್ಕೆ ತಿಳಿದು ಬಂದ ಬಹಳ ರೋಚಕ ವಿಚಾರ!
– ಕ್ರೂರಿ ಪೋಷಕರಿಗೆ ಮಗುವನ್ನು ಒಪ್ಪಿಸಿ ಮಗುವಿನ ರಕ್ಷಣೆ

NAMMUR EXPRESS NEWS
ಬೆಳ್ತಂಗಡಿ: ನಿಗೂಢತೆ, ಕುತೂಹಲದ ಜೊತೆಗೆ ಸಾರ್ವಜನಿಕರ ತೀವ್ರ ಆಕ್ರೋಶಕ್ಕೂ ಕಾರಣವಾಗಿದ್ಧ ಬೆಳಾಲಿನ ಕೂಡೋಲುಕೆರೆ ಕಾಡಿನಲ್ಲಿ ಅನಾಥ ಸ್ಥಿತಿಯಲ್ಲಿ ಪತ್ತೆಯಾದ ಹೆಣ್ಣು ಮಗುವಿನ ನಿಜವಾದ ವಾರಸುದಾರರು ಯಾರೆಂದು ಇದೀಗ ಕೊನೆಗೂ ಬಹಿರಂಗವಾಗಿದೆ. ಆದರೆ ಈ ಮಗುವಿನ ಕ್ರೂರಿ ಅಪ್ಪ ಮಾತ್ರ ಧರ್ಮಸ್ಥಳ ದೇವಸ್ಥಾನದ ಮುಖ್ಯ ಕೌಂಟರಿನ ನೌಕರ ಎನ್ನುವುದೇ ಬಹಳ ಇವತ್ತಿನ ಮುಖ್ಯ ಸಮಾಚಾರ.
ತನಿಖಾ ನಿರತ ತಂಡಕ್ಕೆ ಬಹಳ ರೋಚಕ ವಿಚಾರವೊಂದು ತಿಳಿದು ಬಂತು. ಅದೇನೆಂದರೆ ಈ ಮಗುವನ್ನು ಕಾಡಿನಲ್ಲಿ ಬಿಟ್ಟು ಹೋಗಿರುವುದು ಬೆಳಾಲು ಗ್ರಾಮದ ಬಾಗಿದಡಿ ನಿವಾಸಿ ತಿಮ್ಮಪ್ಪ ಗೌಡರ ಮಗ ಧರ್ಮಸ್ಥಳ ದೇವಸ್ಥಾನದ ಮುಖ್ಯ ಕೌಂಟರ್ನಲ್ಲಿ ಕೆಲಸ ನಿರ್ವಹಿಸುತ್ತಿರುವ ಮುಖ್ಯ ನೌಕರ ರಂಜಿತ್ ಎಂಬಾತನಾಗಿದ್ದಾನೆ. ಮತ್ತು ಈ ಹೆಣ್ಣು ಮಗುವನ್ನು ಹೆತ್ತ ಆ ಕರುಣಾಮಯಿ ಕೂಡಾ ಹಿಂದೆ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟ ಸಮೀಪದ ಪಾಂಗಾಳ ನಿವಾಸಿ ಧರ್ಮಸ್ಥಳ ದೇವಸ್ಥಾನದಲ್ಲಿ ಮುಖ್ಯ ನೌಕರನಾಗಿರುವ ವ್ಯಕ್ತಿಯೊಬ್ಬರ ಮಗಳೆಂದು ತಿಳಿದುಬಂದಿದೆ.
ಈಗ ತನಿಖೆಯ ನಂತರ ಕೊನೆಗೂ ಅನಾಥ ಮಗುವಿನ ನಿಜವಾದ ಕ್ರೂರಿ ತಂದೆ ತಾಯಿಗಳು ಯಾರೆಂದು ಬಯಲಾದಂತಾಗಿದೆ. ಹೀಗಾಗಿ ಧರ್ಮಸ್ಥಳದವರೇ ಮುಂದೆ ನಿಂತು ಇಬ್ಬರಿಗೂ ರಿಜಿಸ್ಟರ್ಡ್ ಮದುವೆ ಮಾಡಿಸಲು ಮತ್ತೆ ಅದೇ ಮುಗ್ದ ಮಗುವನ್ನು ಇದೇ ಕ್ರೂರಿ ಪೋಷಕರಿಗೆ ಒಪ್ಪಿಸಿ ಮಗುವಿನ ರಕ್ಷಣೆ ಮಾಡಿಸಲು ಮುಂದಾಗಿದ್ದಾರೆಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.