Categories
Uncategorized

ಆಟೋ ಡ್ರೈವರ್ ಮಗ ಐಪಿಎಲ್ ಸಾಧಕ!

  • ಪಂದ್ಯವೊಂದರಲ್ಲಿ ಎರಡು ಮೇಡಿನ್ ಓವರ್
  • ಆರ್‍ಸಿಬಿಯ ಮೊಹಮ್ಮದ್ ಸಿರಾಜ್ ದಾಖಲೆ

ದುಬೈ: ಐಪಿಎಲ್ ಪಂದ್ಯವೊಂದರಲ್ಲಿ ಎರಡು ಮೇಡಿನ್ ಓವರ್ ಮಾಡಿದ ಹೊಸ ದಾಖಲೆಯನ್ನು ಆರ್ ಸಿಬಿಯ ಮೊಹಮ್ಮದ್ ಸಿರಾಜ್ ಬರೆದಿದ್ದಾರೆ. ಐಪಿಎಲ್ ಪಂದ್ಯದಲ್ಲಿ ಇದೇ ಮೊದಲ ದಾಖಲೆ ಇದಾಗಿದೆ.
ಅಷ್ಟಕ್ಕೂ ಹೈದರಾಬಾದ್‍ನ ಬಡ ಆಟೋ ಚಾಲಕನ ಪುತ್ರ ಇದೀಗ ಹೊಸ ಭರವಸೆ ಮೂಡಿಸಿದ್ದಾರೆ. ಐಪಿಎಲ್-2020ಯ 39ನೇ ಪಂದ್ಯದಲ್ಲಿ ಕೆಕೆಆರ್-ಆರ್‍ಸಿಬಿ ನಡುವಿನ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಈ ಸಾಧನೆ ಮಾಡಿದ್ದು, ಮೊದಲ ಎರಡು ಓವರ್‍ಗಳಲ್ಲಿ ಯಾವುದೇ ರನ್ ನೀಡದೇ ಮೂರು ವಿಕೆಟ್ ಪಡೆದಿದ್ದಾರೆ. ತಮ್ಮ ಮೊದಲ ನಾಲ್ಕು ಓವರ್‍ಗಳಲ್ಲಿ ಕೆಕೆಆರ್ ತಂಡವನ್ನು ಬಿಡದೇ ಕಾಡಿದ ಸಿರಾಜ್ 30 ಪಂದ್ಯಗಳಲ್ಲಿ 34 ವಿಕೆಟ್ ಪಡೆದಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.