ಕೆಸರು ಗದ್ದೆ ಕ್ರೀಡಾಕೂಟಕ್ಕೆ ಕ್ಷಣಗಣನೆ..!
– ಸೆ. 28ರಂದು ಕುರುವಳ್ಳಿ ಗದ್ದೆಯಲ್ಲಿ ಆಟ: 1000 ಜನ ಭಾಗಿ ಸಾಧ್ಯತೆ
– ತುಂಗಾ ಕಾಲೇಜಲ್ಲಿ ಯಶಸ್ವಿಗೊಂಡ ದಸರಾ ಕವಿಗೋಷ್ಠಿ
– ಬನ್ನಿಮಂಟಪ ಕುಶಾವತಿ ಪಾರ್ಕಿನ ಆವರಣ ಸ್ವಚ್ಛತೆ!
NAMMUR EXPRESS NEWS
ತೀರ್ಥಹಳ್ಳಿ: ಯುವ ದಸರಾ ಮತ್ತು ಮಹಿಳಾ ದಸರಾದ ಆಯೋಜನೆಯಲ್ಲಿ ಕೆಸರುಗದ್ದೆ ಕ್ರೀಡಾಕೂಟ ಸೆ. 28ರಂದು ಗಮನ ಸೆಳೆಯಲಿದೆ.ಈಗಾಗಲೇ 60ಕ್ಕೂ ಹೆಚ್ಚು ತಂಡಗಳು ನೋಂದಣಿ ಮಾಡಿಕೊಂಡಿವೆ. ಸುಮಾರು 600 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಈಗಾಗಲೇ ವೇದಿಕೆ ಸಿದ್ಧಗೊಂಡಿದ್ದು, ಯುವ ಪ್ರಮುಖರಾದ ಶಿವು ಹೊದಲ, ಅಂಜುರ ಕುಡುಮಲ್ಲಿಗೆ, ಪ್ರೇಮ್ ಯಡೂರು ಸಾರಥ್ಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ದಿನಾಂಕ:- 28-09-2025 ರ ಭಾನುವಾರ ಬೆಳಿಗ್ಗೆ 11.00 ಗಂಟೆಯಿಂದ ತೀರ್ಥಹಳ್ಳಿಯ ಕುರುವಳ್ಳಿಯ ರಿಂಗ್ ರೋಡ್ ಸಮೀಪ ನಿರ್ಮಾಣ ಮಾಡಲಾದ ಕೆಸರುಗದ್ದೆಯಲ್ಲಿ ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸಲಾಗಿದ್ದು. ಈ ಕ್ರೀಡಾಕೂಟದಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ, ಕೆಸರು ಗದ್ದೆ ಓಟ ಮತ್ತು ಗಿರಿಗಿಟ್ಟೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಕ್ರೀಡಾಕೂಟದ ಉದ್ಘಾಟನೆಯನ್ನು ಕಿರುತೆರೆಯ ನಟ ತೀರ್ಥಹಳ್ಳಿಯ ಪ್ರತಿಭೆ ಹುಲಿ ಕಾರ್ತಿಕ್ ನೆರವೇರಿಸಲಿದ್ದಾರೆ.
ತೀರ್ಥಹಳ್ಳಿ: ಯಶಸ್ವಿಗೊಂಡ ದಸರಾ ಕವಿಗೋಷ್ಠಿ
ಶ್ರೀ ರಾಮೇಶ್ವರ ದಸರಾ ಉತ್ಸವ 2025ರ ಸಾಂಸ್ಕೃತಿಕ ದಸರಾದ ಮೊದಲ ಕಾರ್ಯಕ್ರಮವಾದ ದಸರಾ ಹಾಸ್ಯ ಕವಿಗೋಷ್ಠಿಯು ದಿನಾಂಕ 26.09.2025ರ ಶುಕ್ರವಾರ ಬೆಳಗ್ಗೆ 11:00ಗಂಟೆಗೆ ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಈ ಹಾಸ್ಯ ಕವಿಗೋಷ್ಠಿಯಲ್ಲಿ ಜಿಲ್ಲೆಯ 20ಕ್ಕೂ ಹೆಚ್ಚು ಕವಿಗಳು ತಮ್ಮ ನಗೆಗವನವನ್ನು ವಾಚಿಸುವ ಮೂಲಕ ಕಾರ್ಯಕ್ರಮದಲ್ಲಿ ನೆರೆದಿದ್ದ ವಿದ್ಯಾರ್ಥಿಗಳನ್ನು, ಸಾಹಿತ್ಯಾಭಿಮಾನಿಗಳನ್ನು ಹಾಗೂ ಸಾರ್ವಜನಿಕರನ್ನು ರಂಜಿಸಿದರು. ಕವಿಗೋಷ್ಠಿಯನ್ನು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿಗಳಾದ ಕಡಿದಾಳ್ ಪ್ರಕಾಶ್ ಉದ್ಘಾಟನೆ ಮಾಡಿದರು. ಇತ್ತೀಚೆಗೆ ಅಗಲಿದ ಕನ್ನಡದ ಖ್ಯಾತ ಕಾದಂಬರಿಕಾರ ಎಸ್. ಎಲ್. ಭೈರಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವುದರೊಂದಿಗೆ , ಪ್ರಾಸ್ತಾವಿಕವಾಗಿ ದಸರಾ ಸಮಿತಿಯ ಸಂಚಾಲಕರಾದ ಸಂದೇಶ ಜವಳಿ ಮಾತನಾಡಿದರು. ದಸರಾ ಸಮಿತಿ ಸಂಚಾಲಕ ಅಮರನಾಥ ಶೆಟ್ಟಿ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀಮತಿ ಗೀತಾ ರಮೇಶ್, ಸದಸ್ಯರಾದ ಜ್ಯೋತಿಮೋಹನ್, ತುಂಗಾ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ. ಬಿ.ಗಣಪತಿ ಉಪಸ್ಥತರಿದ್ದರು. ತುಂಗಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಆರ್. ಕುಮಾರಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಭಾ ಕಾರ್ಯಕ್ರಮದ ನಂತರ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಕವಿಗಳ ಹಾಸ್ಯಕವನ ವಾಚನ ನೆರವೇರಿತು. ಲೇಖಕಿ ಶ್ರೀಮತಿ ಉಮಾದೇವಿ ಉರಾಳ್, ಸಾಹಿತಿ ಹಾಗೂ ಪರ್ತಕತ್ರ ಶಿವಾನಂದ ಕರ್ಕಿ ಹಾಗೂ ವಿಶ್ರಾಂತ ಪ್ರಾಂಶುಪಾಲರು, ಸಾಹಿತಿಗಳು, ತುಂಗಾ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ. ಬಿ.ಗಣಪತಿ ತೀರ್ಪುಗಾರರಾಗಿ ಕವಿಗೋಷ್ಠಿಯಲ್ಲಿ ಹಾಜರಿದ್ದು, ಐದು ಕವಿತೆಗಳನ್ನು ಪುರಸ್ಕಾರಕ್ಕೆ ಆಯ್ಕೆಮಾಡಲಾಯಿತು. ಕವಿಗೋಷ್ಠಿಯಲ್ಲಿ ಭಾಗವಹಿಸಿದ ಎಲ್ಲಾ ಕವಿಗಳಿಗೆ ಪ್ರಶಂಸಾ ಪತ್ರ ಮತ್ತು ಮಾಜಿ ಶಾಸಕ ಪಟ್ಟಮಕ್ಕಿ ರತ್ನಾಕರ್ ನೆನಪಿನ ಪುಸ್ತಕವನ್ನು ನೀಡಲಾಯಿತು. ಕವಿಗೋಷ್ಠಿಯನ್ನು ಸಾಂಸ್ಕೃತಿಕ ಸಮಿತಿ ಸದಸ್ಯರಾದ ಶ್ರೀ ಬಿ.ಕೆ. ಉದಯಕುಮಾರ್ ಹಾಗೂ ಶ್ರೀ ನಿರಂಜನ ವಿ ನಿರ್ವಹಿಸಿದರು, ಸಾಂಸ್ಕೃತಿಕ ಸಮಿತಿ ಸಂಚಾಲಕ ಶ್ರೀ ಚೇತನ್ ಜಿ ಸರ್ವರನ್ನೂ ಸ್ವಾಗತಿಸಿದರು, ಶ್ರೀ ಅಂಬುತೀರ್ಥ ರಾಘವೇಂದ್ರ ಸರ್ವರನ್ನೂ ವಂದಿಸಿದರು, ಸಾಂಸ್ಕೃತಿಕ ಸಮಿತಿಯ ಆದಿತ್ಯ ರಾವ್, ಆಶಾ ಡೇನಿಯಲ್, ವಿನಂತಿ ಪೈ, ಕ್ಷಿತಿಜ್, ಕೆಳಕೆರೆ ಪೂರ್ಣೇಶ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರಾಯೋಜಿಸಿದ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳಿ, ಪುಸ್ತಕವನ್ನು ನೀಡಿದ ಶ್ರೀಮತಿ ನೈಜಲಾ ರತ್ನಾಕರ್, ಸ್ಥಳಾವಕಾಶ ನೀಡಿದ ತುಂಗಾ ಮಾಹಾವಿದ್ಯಾಲಯ ಹಾಗೂ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಕನ್ನಡ ಸಾಹಿತ್ಯ ಪರಿಷತ್ತು, ತೀರ್ಥಹಳ್ಳಿ ಇವರಿಗೆ ಸಾಂಸ್ಕೃತಿಕ ಸಮಿತಿಯ ವತಿಯಿಂದ ಕೃತಜ್ಞತೆ ಸಲ್ಲಿಸಿದರು. ಪುರಸ್ಕಾರಕ್ಕೆ ಆಯ್ಕೆಯಾದ ಕವಿಗಳು ನಿತಿನ್ ಹೆಗಡೆ, ಮೇಗರವಳ್ಳಿ, ರಾಘವೇಂದ್ರ ಕೆ. ಕೆ., ಗಾರ್ಡಗದ್ದೆ, ಶ್ರುತಿ ಗದ್ದೆಗಲ್ಲು, ಡಾ. ಮುರುಳಿಧರ ಕಿರಣಕೆರೆ, ನಾಗರತ್ನ ನಿಲ್ಸ್ಕಕಲ್.
ಬನ್ನಿಮಂಟಪ ಕುಶಾವತಿ ಪಾರ್ಕಿನ ಆವರಣ ಸ್ವಚ್ಛತೆ!
ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವತಿಯಿಂದ ನಾಡಹಬ್ಬ ದಸರಾ ಆಚರಿಸುವಂತಹ ಬನ್ನಿಮಂಟಪ ಕುಶಾವತಿ ಪಾರ್ಕಿನ ಆವರಣವನ್ನು ಸುಮಾರು 25 ಸಂಘ ಸಂಸ್ಥೆಗಳು ಸರ್ಕಾರಿ ಇಲಾಖೆಗಳ ಸಹಯೋಗದೊಂದಿಗೆ ಸ್ವಚ್ಛತಾ ಕಾರ್ಯಕ್ರಮವನ್ನು ಮಾಡಲಾಯಿತು. ರೋಟರಿ, ಲಯನ್ಸ್, ವರ್ತಕರ ಸಂಘ, ಭಜರಂಗಿ ಮಹಿಳಾ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ವಾಕಿಂಗ್ ಬಡ್ಡಿಸ್, ಯೋಗ ಶಿಕ್ಷಣ ಸಂಸ್ಥೆ, ಬೀದಿ ವ್ಯಾಪಾರಿಗಳ ಸಂಘ, ತೋಟಗಾರಿಕೆ ಇಲಾಖೆ
ಯುವ ಮೋರ್ಚಾ, ಯೂಥ್ ಕಾಂಗ್ರೆಸ್, ಕುರುವಳ್ಳಿ ಯುವಕ ಸಂಘ ಕುರುವಳ್ಳಿ ಜೋಪಡಿ ಸಮುದಾಯ ಇನ್ನು ಅನೇಕ ಸಂಘಟನೆಗಳು ಪಾಲ್ಗೊಂಡಿದ್ದವು. ಸದಸ್ಯರಾದಂತಹ ಸುಶೀಲ ಶೆಟ್ಟಿ , ಸೊಪ್ಪುಗುಡ್ಡೆ ರಾಘವೇಂದ್ರ ಜ್ಯೋತಿ ಗಣೇಶ್ ಮುಖಾಧಿಕಾರಿ ನಾಗರಾಜ್ ಆರೋಗ್ಯ ಅಧಿಕಾರಿ ಇನ್ಸೆಂಟ್ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು
