ಮಲ್ನಾಡ್ ಟಾಪ್ 3 ನ್ಯೂಸ್
ತೀರ್ಥಹಳ್ಳಿ : ಬೆಟ್ಟಮಕ್ಕಿಯ ಆರ್ ಎಂ ಮಂಜುನಾಥ ಗೌಡರ ಆಪ್ತರಾದ ಕೃಷ್ಣಮೂರ್ತಿ ಭಟ್ ಮನೆ ಮೇಲೆ ಇ.ಡಿ ದಾಳಿ ..!
– ದೆಮ್ಲಾಪುರ: ಮನೆಯ ಬೀಗ ಮುರಿದು ಕದಿಯಲು ಬಂದಿದ್ದ ಕಳ್ಳನಿಗೆ ಕಾದಿತ್ತು ಶಾಕ್..!!
– ಶಿವಮೊಗ್ಗ : ಪತ್ನಿಯನ್ನು ಕೊಂದ ವ್ಯಕ್ತಿಗೆ ಜೀವಾವಧಿ ಶಿಕ್ಷೆ..!!
NAMMUR EXPRESS NEWS
ತೀರ್ಥಹಳ್ಳಿ : ಡಿಸಿಸಿ ಬ್ಯಾಂಕ್ ವಿಚಾರದಲ್ಲಿ ಈಗಾಗಲೇ ಆರ್ ಎಂ ಮಂಜುನಾಥ ಗೌಡರ ಬೆಂಗಳೂರಿನ ನಿವಾಸದಲ್ಲಿ ಹಾಗೂ ಶಿವಮೊಗ್ಗದ ಡಿಸಿಸಿ ಬ್ಯಾಂಕ್ ನ ಮ್ಯಾನೇಜರ್ ಶೋಭಾ, ಡ್ರೈವರ್ ಮನೆ ಸೇರಿ ಒಟ್ಟು ಎಂಟು ಕಡೆ ದಾಳಿ ಮಾಡಲಾಗಿತ್ತು. ಈಗ ಇದೆ ವಿಚಾರವಾಗಿ ಆರ್ ಎಂ ಮಂಜುನಾಥ ಗೌಡರ ಆಪ್ತರಾಗಿರುವ ಕೃಷ್ಣಮೂರ್ತಿ ಭಟ್ ಮನೆ ಮೇಲೆ ಇ. ಡಿ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ. ಬೆಟ್ಟಮಕ್ಕಿಯ ಅವರ ನಿವಾಸದ ಮೇಲೆ ಇ. ಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಮಾಡುತ್ತಿದ್ದಾರೆ. 15 ಕ್ಕೂ ಹೆಚ್ಚು ವರ್ಷಗಳಿಂದ ಆರ್ ಎಂ ಮಂಜುನಾಥ ಗೌಡರ ಜೊತೆಗೆ ಇರುವ ಕೃಷ್ಣಮೂರ್ತಿ ಭಟ್ ಮನೆ ಸಹ ಆರ್ ಎಂ ಎಂ ಮನೆ ಪಕ್ಕದಲ್ಲೇ ಇದೆ. ಅತ್ಯಂತ ಆಪ್ತರಾಗಿದ್ದ ಕೃಷ್ಣಮೂರ್ತಿ ಭಟ್ ಮನೆ ಮೇಲೆ ದಾಳಿ ನಡೆಸಿರುವ ಇ.ಡಿ ಅಧಿಕಾರಿಗಳು ಯಾವ ವಿಚಾರದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ ಎಂಬುದೇ ಕುತೂಹಲ ಮೂಡಿಸಿದೆ. ಕೃಷ್ಣಮೂರ್ತಿ ಭಟ್ ಗೂ ಡಿಸಿಸಿ ಬ್ಯಾಂಕ್ ಗೂ ಲಿಂಕ್ ಏನು? ಎಂಬ ಪ್ರಶ್ನೆ ಕಾಡುತ್ತಿದೆ. ಮತ್ತೊರ್ವರ ಮನೆಗೂ ಇ.ಡಿ ಅಧಿಕಾರಿಗಳು ಭೇಟಿ ನೀಡಿದ್ದರು ಎನ್ನಲಾಗುತ್ತಿದ್ದು ಇನ್ನು ಸ್ಪಷ್ಟವಾಗಿ ಮಾಹಿತಿ ತಿಳಿಯಬೇಕಾಗಿದೆ.
– ದೆಮ್ಲಾಪುರ: ಮನೆಯ ಬೀಗ ಮುರಿದು ಕದಿಯಲು ಬಂದಿದ್ದ ಕಳ್ಳನಿಗೆ ಕಾದಿತ್ತು ಶಾಕ್..!!
ದೆಮ್ಲಾಪುರ: ಬೀಗ ಒಡೆದು ಮನೆ ಕಳ್ಳತನಕ್ಕೆಂದು ಬಂದ ಕಳ್ಳನೊಬ್ಬ ಜಲಜೀವನ್ ಮಿಷನ್ ಯೋಜನೆ ಹೊಂಡಕ್ಕೆ ಬಿದ್ದಿದ್ದು, ಆತನನ್ನು ಗ್ರಾಮಸ್ಥರು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ ಘಟನೆ ತೀರ್ಥಹಳ್ಳಿ ತಾಲೂಕಿನ ದೇಮ್ಲಾಪುರ ಗ್ರಾಮದಲ್ಲಿ ನಡೆದಿದೆ. ದೆಮ್ಲಾಪುರ ಗ್ರಾಮದ ಚಂದ್ರಶೇಖರ್ ತಮ್ಮ ತೋಟಕ್ಕೆ ಔಷದಿ ಸಿಂಪಡಿಸಲು ತೆರಳಿದ್ದರು. ಅವರ ಹೆಂಡತಿ ಮಕ್ಕಳು ಸಹ ಬೇರೆ ಕಾರ್ಯಕ್ರಮಕ್ಕೆ ತೆರಳಿದ್ದು ಮನೆಯಲ್ಲಿ ಯಾರು ಇರಲಿಲ್ಲ. ಈ ವೇಳೆ ಚಂದ್ರಶೇಖರ್ ಔಷದಿ ಸಿಂಪಡಿಸಿ ಮನೆಗೆ ಬರುವಾಗ ಯಾರೋ ಕಳ್ಳ ಬಾಗಿಲು ಒಡೆಯುವ ಶಬ್ದ ಅವರಿಗೆ ಕೇಳಿದೆ. ಇದನ್ನು ಗಮನಿಸಿದ ಮನೆಮಾಲೀಕರು ಜೋರಾಗಿ ಕೂಗಿದ್ದಾರೆ. ಆಗ ಮನೆಯ ಸುತ್ತಮುತ್ತಲಿನವರೆಲ್ಲಾ ಸ್ಥಳಕ್ಕೆ ಬಂದಿದ್ದಾರೆ. ಇದರಿಂದ ಆತಂಕಗೊಂಡ ಕಳ್ಳ ಸ್ಥಳದಿಂದ ಚಲಿಸುವ ಭರದಲ್ಲಿ ಜಲಜೀವನ ಪೈಪ್ ಅಳವಡಿಸಲು ತೆಗೆದಿದ್ದ ಚರಂಡಿಗೆ ಬಿದ್ದಿದೆ. ನಂತರ ಆತನನ್ನು ಅಕ್ಕಪಕ್ಕದ ಮನೆಯವರು ಮೇಲಕ್ಕೆ ಎತ್ತಿ ಉಪಚರಿಸಿ ನಂತರ ಆತನಿಗೆ ಪೆಟ್ಟಾಗಿರಬಹುದೆಂದು ತಿಳಿದು ಚಿಕಿತ್ಸೆ ಕೊಡಿಸುವ ಸಲುವಾಗಿ ತೀರ್ಥಹಳ್ಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳ್ಳತನಕ್ಕೆ ಯತ್ನಿಸಿದಾತನ ಹೆಸರನ್ನು ಹನೀಫ್ ಎಂದು ತಿಳಿದು ಆತನ ಮೇಲೆ ಶೀಘ್ರವೇ ಕಾನೂನು ಕ್ರಮ ಕೈಗೊಳ್ಳಿ ಚಂದ್ರುಶೇಖರ್ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
– ಶಿವಮೊಗ್ಗ : ಪತ್ನಿಯನ್ನು ಕೊಂದ ವ್ಯಕ್ತಿಗೆ ಜೀವಾವಧಿ ಶಿಕ್ಷೆ..!!
ಶಿವಮೊಗ್ಗ : ದುಮ್ಮಳ್ಳಿ ಗ್ರಾಮದಲ್ಲಿ ವರದಕ್ಷಿಣೆ ವಿಚಾರವಾಗಿ ಪತ್ನಿಯನ್ನು ಕೊಲೆ ಮಾಡಿದ್ದ ಆರೋಪಿಗೆ ಶಿವಮೊಗ್ಗ 2ನೇ ಹೆಚ್ಚುವರಿ ಜಿಲ್ಲಾಸ್ಪತ್ರೆ ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 1.85 ಲಕ್ಷ ದಂಡವನ್ನು ವಿದಿಸಿದೆ. ಅಕ್ಟೋಬರ್ ನಲ್ಲಿ ಕರುಣಾಕರ ಎಂಬಾತ ತನ್ನ ಪತ್ನಿಗೆ ವರದಕ್ಷಿಣೆ ವಿಚಾರವಾಗಿ ಹಿಂಸಿಸಿ ಆಕೆಯನ್ನು ಚುಚ್ಚಿ ಕೊಂದಿದ್ದನೆಂದು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿ ತುಂಗಾ ನಗರದ ಪೊಲೀಸ್ ಠಾಣೆಯ ಪಿಐ ಬಿ ಮಂಜುನಾಥ್ ತನಿಖೆ ನಡೆಸಿದ್ದರು. ಶಿವಮೊಗ್ಗದ ಡಿವೈಎಸ್ ಪಿ ಬಾಲರಾಜ್, ಪ್ರಕರಣದ ತನಿಖೆಯನ್ನು ಪೂರೈಸಿ ಆರೋಪಿಯ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಈ ಹಿನ್ನಲೆ ವಕೀಲರ ವಾದವನ್ನು ಆಲಿಸಿದ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು ರೂ 1,85 ಲಕ್ಷ ರೂಪಾಯಿ ದಂಡ ವಿಧಿಸಿದೆ.
