ಮೈಸೂರು ಜಂಬೂ ಸವಾರಿಗೆ ಸಜ್ಜು!
– ಜಂಬೂ ಸವಾರಿ ನೋಡಲು ಲಕ್ಷ ಲಕ್ಷ ಜನ: ಅರಮನೆ ಅದ್ದೂರಿ ಸಿಂಗಾರ
– 6ನೇ ಬಾರಿ ಅಂಬಾರಿ ಹೊರುತ್ತಿರುವ ಅಭಿಮನ್ಯು
NAMMUR EXPRESS NEWS
ಮೈಸೂರು: ಮೈಸೂರಿನಲ್ಲಿ ದಸರಾ ಸಂಭ್ರಮ ಜೋರಾಗಿದೆ. ಮೈಸೂರಿನಲ್ಲಿ ಜಂಬೂ ಸವಾರಿ ಅತ್ಯಂತ ಆಕರ್ಷಣೀಯವಾಗಿದ್ದು ಜಂಬೂಸವಾರಿಗೆ ಈಗಾಗಲೇ ಸಿದ್ಧತೆ ಆರಂಭವಾಗಿದ್ದು, ಪೊಲೀಸರ ಕಣ್ಗಾವಲಿದೆ. ಅಭಿಮನ್ಯು ಆನೆ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊರಲಿದೆ. ಅರಮನೆಯೊಳಗಿನಿಂದ ಜಂಬೂ ಸವಾರಿ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಆನಂತರ ರಾತ್ರಿ 7 ಗಂಟೆಗೆ ಬನ್ನಿಮಂಪಟದಲ್ಲಿ ಪಂಜಿನ ಕವಾಯತು ಇರಲಿದೆ. ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ‘ಜಂಬೂಸವಾರಿ’ಯನ್ನು ವಿಜಯದಶಮಿಯಂದು ಕಣ್ತುಂಬಿಕೊಳ್ಳಲು ದೇಶ ವಿದೇಶಗಳಿಂದ ಉತ್ಸವ ವೀಕ್ಷಿಸಲು ಲಕ್ಷಾಂತರ ಮಂದಿ ಕಾತರರಾಗಿದ್ದಾರೆ. ಅರಮನೆ ಆವರಣದಲ್ಲಿ 48 ಸಾವಿರ ಮಂದಿ ಕೂರಲು ಆಸನ ವ್ಯವಸ್ಥೆ ಮಾಡಲಾಗಿದೆ.
ವಿಜಯದಶಮಿ ಮೆರವಣಿಗೆಯಲ್ಲಿ 58 ಸ್ತಬ್ಧಚಿತ್ರಗಳು, 125ಕ್ಕೂ ಹೆಚ್ಚು ಕಲಾತಂಡಗಳು ಹಾಗೂ 14 ಆನೆಗಳ ಗಜಪಡೆ, ಅಶ್ವಾರೋಹಿ ಪಡೆಗಳು ಭಾಗವಹಿಸಲಿವೆ. 6ನೇ ಬಾರಿ ಕ್ಯಾಪ್ಟನ್ ‘ಅಭಿಮನ್ಯು’ ಅಂಬಾರಿ ಹೊತ್ತು ಬನ್ನಿಮಂಟಪದವರೆಗೂ ಸಾಗಲಿದ್ದಾನೆ. ‘ಕಾವೇರಿ’ ಮತ್ತು ‘ರೂಪ’ ಕುಮ್ಕಿ ಆನೆಗಳಾಗಿ ಸಾಥ್ ನೀಡಲಿವೆ. ನಿಶಾನೆ ಆನೆಯಾಗಿ ಧನಂಜಯ ಹಾಗೂ ನೌಪತ್ ಆನೆಯಾಗಿ ಗೋಪಿ ಕಾರ್ಯ ನಿರ್ವಹಿಸಲಿವೆ.








