ಶ್ರೀ ಚೌಡೇಶ್ವರಿ ದೇವಸ್ಥಾನ ಕಾನಳ್ಳಿ ತ್ಯಾರ್ಸಿ, ತಾ. ಸಿದ್ದಾಪುರ (ಉ.ಕ)
– ಮಾತೋಬಾರ ಶ್ರೀ ಚೌಡೇಶ್ವರಿ ದೇವಿಯ 29ನೇ ವಾರ್ಷಿಕೋತ್ಸವ
– ಏಪ್ರಿಲ್ 24 ರಿಂದ 26 ರವರೆಗೆ ದುರ್ಗಾ ಹೋಮ, ಪಲ್ಲಕ್ಕಿ ಉತ್ಸವ, ಸತ್ಯನಾರಾಯಣ ವೃತ ವಿವಿಧ ಧಾರ್ಮಿಕ ಕಾರ್ಯಕ್ರಮ
NAMMUR EXPRESS NEWS
ಸಿದ್ದಾಪುರ : ಮಾತೋಬಾರ ಶ್ರೀ ಚೌಡೇಶ್ವರಿ ದೇವಿಯ 29ನೇ ವಾರ್ಷಿಕೋತ್ಸವ ಕಾನಳ್ಳಿ ತ್ಯಾರ್ಸಿ, ತಾ. ಸಿದ್ದಾಪುರ (ಉ.ಕ) ಇಲ್ಲಿ ನೆರವೇರಲಿದೆ. ಏಪ್ರಿಲ್ 24 ರಿಂದ 26 ರವರೆಗೆ ದುರ್ಗಾ ಹೋಮ, ಪಲ್ಲಕ್ಕಿ ಉತ್ಸವ, ಸತ್ಯನಾರಾಯಣ ವೃತ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ದಿನಾಂಕ : 24/04/2025 ಗುರುವಾರ ಚೈತ್ರ ಕೃಷ್ಣ ದ್ವಾದಶಿ ಬೆಳಿಗ್ಗೆ ಶ್ರೀ ದೇವರಲ್ಲಿ ಸಾಮೂಹಿಕ ಪ್ರಾರ್ಥನೆ ಬ್ರಹ್ಮಕೂರ್ಚ ಹವನ, ಶ್ರೀ ಗಣೇಶ ಪೂಜೆ, ದೇವಾನಾಂದಿ, ಪುಣ್ಯಾಹವಾಚನೆ, ಸಂಕಲ್ಪ ಕೌತುಕ ಪೂಜೆ, ಮಾತ್ರಕಾಪೂಜೆ, ಶ್ರೀ ಚೆನ್ನಮ್ಮ ದೇವಿ (ಜಲದೇವತೆ) ಗೆ ಕಲಾವೃದ್ಧಿ ಹೋಮ ಹಾಗೂ ವಿಶೇಷ ಪೂಜೆ, ಮಂಗಳಾರತಿ ತೀರ್ಥಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ, ಸಂಜೆ 07:00 ರಿಂದ ಶ್ರೀ ಸತ್ಯಸಾಯಿ ಸೇವಾ ಸಮಿತಿ ಸಿದ್ದಾಪುರ ಇವರಿಂದ ಭಜನಾ ಕಾರ್ಯಕ್ರಮ. ರಾತ್ರಿ 09:00 ಕ್ಕೆ ಶ್ರೀ ಮೂಖಭೂತೇಶ್ವರನ ಸನ್ನಿಧಿಯಲ್ಲಿ ಉಗ್ರನರಸಿಂಹ ಹೋಮ ಹಾಗೂ ಮಹಾಭೂತ ಬಲಿ.
ದಿನಾಂಕ : 25/04/2025 ಶುಕ್ರವಾರದಂದು ಚೈತ್ರ ಕೃಷ್ಣ ತ್ರಯೋದಶಿ ಶ್ರೀ ಯಕ್ಷಿಣಿ ದೇವಿಗೆ ಕಲಾವೃದ್ಧಿ ಹೋಮ ಹಾಗೂ ನಾಗಪ್ರತಿಷ್ಠೆ, ಮಂಗಳಾರತಿ, ತೀರ್ಥಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ. ಸಂಜೆ 07:00 ರಿಂದ ರಾಮಾಂಜನೇಯ ಕಲಾಮಂಡಳ, ಕಂದಳ್ಳಿ, ಕುಮಟಾ ಇವರಿಂದ ಭಜನಾ ಕಾರ್ಯಕ್ರಮ, ರಾತ್ರಿ 09:00 ಕ್ಕೆ ಶ್ರೀ ಹೂಣಸೂರು ಭೂತೇಶ್ವರನ ಇನ್ನಿಧಿಯಲ್ಲಿ ಉಗ್ರನರಸಿಂಹ ಹೋಮ ಹಾಗೂ ಮಹಾಭೂತಬಲಿ.
ದಿನಾಂಕ : 26-04-2025 ರ ಶನಿವಾರದಂದು ಮುಂಜಾನೆ ಸ್ಥಾನಶುದ್ಧಿ, ಬಿಂಬ ಶುದ್ಧಿ, ಕಲಾವೃದ್ಧಿ “ಶ್ರೀ ದುರ್ಗಾ ಹೋಮ” ಪಲ್ಲಕ್ಕಿ ಉತ್ಸವ, ಮಹಾಪೂರ್ಣಾಹುತಿ, ಗುರುಪಾದುಕಾ ಪೂಜೆ, ಆಶೀರ್ವಾದ ಗ್ರಹಣ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಬ್ರಹ್ಮ ಕಲಶೋತ್ಸವ, ಮಹಾ ಮಂಗಳಾರತಿ, ಪ್ರಾರ್ಥನೆ, ತೀರ್ಥಪ್ರಸಾದ ವಿತರಣೆ, ಶ್ರೀ ಅನ್ನಪೂರ್ಣೇಶ್ವರಿ ಪೂಜೆ, ಅನ್ನ ಸಂತರ್ಪಣೆ ನೆರವೇರಲಿದೆ.
ಶ್ರೀ ಚೌಡೇಶ್ವರಿ ದೇವಿಯ 29ನೇ ವಾರ್ಷಿಕೋತ್ಸವದ ದಿವ್ಯ ಸಾನಿಧ್ಯದಲ್ಲಿ ಶ್ರೀ ಶ್ರೀ ಶ್ರೀ ಮ॥ ನಿ॥ ಪ್ರ|| ಸ್ವ।। ಶಿವಲಿಂಗ ಮಹಾಸ್ವಾಮಿಗಳವರು ಬಣ್ಣದ ಮಠ, ತಾ|| ಶಿರಸಿ ಹಾಗೂ ಶ್ರೀ ಶ್ರೀ ಶ್ರೀ ಶ್ರೀಮದ್ ನಿರಂಜನ ಪ್ರಭು ಮಹಾಂತ ಮಹಾಸ್ವಾಮಿಗಳವರು ಶ್ರೀ ಸಂಸ್ಥಾನಮಠ, ಜಡೆ, ತಾ|| ಸೊರಬ, ಸಂಜೆ 07:00 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾತ್ರಿ 10.00 ಗಂಟೆಗೆ ಕಾಳಿಕಾಂಬಾ ಕಲಾಮಿತ್ರ ಮಂಡಳಿ ತ್ಯಾರ್ಸಿ ಇವರಿಂದ ನಾಟಕ ಬಡವ ಸಾಕಿದ ಬಹದ್ದೂರ ಹುಲಿ ನಡೆಸಿಕೊಡದಿದ್ದಾರೆ. ಶ್ರೀ ಭಾಸ್ಕರ ಸಿ. ಕಾನಳ್ಳಿಧರ್ಮದರ್ಶಿಗಳು, ಶ್ರೀ ಚೌಡೇಶ್ವರಿ ದೇವಸ್ಥಾನ ಕಾನಳ್ಳಿ, ಹಾಗೂ ಕಾನಳ್ಳಿ ಊರಿನ ಎಲ್ಲಾ ಗ್ರಾಮಸ್ಥರು ಸರ್ವರಿಗೂ ಆದರದ ಸ್ವಾಗತವನ್ನು ಕೋರಿದ್ದಾರೆ.
