ತೀರ್ಥಹಳ್ಳಿಯಲ್ಲಿ ಅ.2ಕ್ಕೆ ಹುಲಿ ಕುಣಿತ ಸ್ಪರ್ಧೆ ರಂಗು!
– ಪ್ರೇಕ್ಷಕರನ್ನು ರಂಜಿಸುವ ಹುಲಿ ಹೆಜ್ಜೆ ಕಾರ್ಯಕ್ರಮ
– – ಕಲಾ ಪ್ರದರ್ಶನ ನೀಡಲು ಆಸಕ್ತಿ ಹೊಂದಿದ ಕಲಾವಿದರಿಗೆ ಅವಕಾಶ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ದಸರಾ ಅಂಗವಾಗಿ ಈ ವರ್ಷವೂ ಹುಲಿ ಹೆಜ್ಜೆ ಸದ್ದು ಮಾಡಲಿದೆ. ದಸರಾ ವೈಭವಕ್ಕೆ ಹುಲಿಕುಣಿತದ ಮೆರಗು ನೀಡಲಿದೆ. ಕಳೆದ ವರ್ಷ ತೀರ್ಥಹಳ್ಳಿ ತಾಲ್ಲೂಕಿನಾದ್ಯಂತ ಭಾರೀ ಸದ್ದು ಮಾಡಿದ್ದ ಹುಲಿ ಹೆಜ್ಜೆ ಕಾರ್ಯಕ್ರಮ ಈ ವರ್ಷವೂ ಪ್ರೇಕ್ಷಕರನ್ನು ರಂಜಿಸಲು ಆಯೋಜನೆಗೊಂಡಿದೆ.
ದಸರಾ ಉತ್ಸವದ ಕೊನೆಯ ದಿನ ಅಕ್ಟೋಬರ್ 2ರ ಸಂಜೆ ಕುಶಾವತಿಯ ನೆಹರೂ ಪಾರ್ಕಿನ ಭವ್ಯ ವೇದಿಕೆಯಲ್ಲಿ ಪುರುಷರ ಹುಲಿ ಕುಣಿತ ಸ್ಪರ್ಧೆ ಏರ್ಪಡಿಸಲಾಗಿದ್ದು ಆಯ್ದ ತಂಡಗಳು ಈ ಸ್ಪರ್ಧೆಯಲ್ಲಿ ಪ್ರದರ್ಶನ ನೀಡಲಿವೆ.
ಉದ್ಯಮಿ ಆರ್.ಮದನ್ ಸಾರಥ್ಯದ ಗೆಳೆಯರ ಬಳಗ ಸ್ಪರ್ಧೆಯನ್ನು ನಿರ್ವಹಿಸಲಿದ್ದು ತೀರ್ಥಹಳ್ಳಿ ದಸರಾ ಉತ್ಸವ ಸಮಿತಿ ಸ್ಪರ್ಧೆಗೆ ನೆರವು ನೀಡಿದೆ. ಮದನ್ ಮತ್ತು ಗೆಳೆಯರ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಲಿದ್ದು ಹುಲಿ ಹೆಜ್ಜೆ ಸಂಚಾಲಕರಾಗಿ ಮಹೇಶ್ ಕುರುವಳ್ಳಿ ಮತ್ತು ಸೈಯ್ಯದ್ ಜಾವೇವ್ ಉಸ್ತುವಾರಿ ವಹಿಸಲಿದ್ದಾರೆ.
ಕಳೆದ ವರ್ಷ ಅದ್ಭುತ ಪ್ರದರ್ಶನದೊಂದಿಗೆ ಮನೆ ಮಾತಾಗಿದ್ದ ಹುಲಿ ಕುಣಿತ ಸ್ಪರ್ಧೆ ಈ ಬಾರಿ ಇನ್ನಷ್ಟು ಮೆರಗಿನೊಂದಿಗೆ ಪ್ರೇಕ್ಷಕರ ಕಣ್ಮನ ತಣಿಸಲಿದೆ. ಹುಲಿ ಸ್ಪರ್ಧೆ ಪ್ರದರ್ಶನ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸುವಂತೆ ದಸರಾ ಉತ್ಸವ ಸಮಿತಿ ಸಂಚಾಲಕರು ಹಾಗೂ ಪದಾಧಿಕಾರಿಗಳು ವಿನಂತಿಸಿದ್ದಾರೆ.
– ಕಲಾ ಪ್ರದರ್ಶನ ನೀಡಲು ಆಸಕ್ತಿ ಹೊಂದಿದ ಕಲಾವಿದರಿಗೆ ಅವಕಾಶ
ತೀರ್ಥಹಳ್ಳಿ ಶ್ರೀರಾಮೇಶ್ವರ ದೇವರ ದಸರಾ ಉತ್ಸವವನ್ನು ಅತ್ಯಂತ ವೈಭವಯುತವಾಗಿ ನಡೆಸಲು ಸಮಿತಿಯು ತೀರ್ಮಾನಿಸಲಾಗಿದೆ. ಸಾಂಸ್ಕೃತಿಕ ಸಮಿತಿಯು ಕುಶಾವತಿ ನೆಹರು ಪಾರ್ಕ್ನಲ್ಲಿ ನಡೆಯುವ ದಸರಾ ಕಲಾಪ್ರದರ್ಶನಕ್ಕಾಗಿ ತೀರ್ಥಹಳ್ಳಿ ತಾಲ್ಲೂಕಿನ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ. ವನ್ಯಜೀವಿ ಛಾಯಾಚಿತ್ರ, ಚಿತ್ರಕಲೆ, ವರ್ಣಕಲೆ, ಕಸೂತಿಕಲೆ ಮುಂತಾದ ಪ್ರದರ್ಶನ ಕಲೆಗಳನ್ನು ಕುಶಾವತಿ ಪಾರ್ಕ್ ನಲ್ಲಿ ಪ್ರದರ್ಶಿಸಲು ಕಲಾವಿದರು ವಿನಂತಿಪೈ (886712337) ಅಥವಾ ಆದಿತ್ಯರಾವ್ (9880725437) ಇವರಲ್ಲಿ ಹೆಸರು ನೋಂದಾಯಿಸಬೇಕು.
ಕಲಾಪ್ರದರ್ಶನ ನೀಡಲು ಆಸಕ್ತಿ ಹೊಂದಿದ ಕಲಾವಿದರು ತಮ್ಮ ಕಲಾಪ್ರಕಾರದ ಛಾಯಾಚಿತ್ರ, ಕಲಾವಿದರ ಮಾಹಿತಿ ಹಾಗೂ ಕಲಾಪ್ರಕಾರದ ಮಾಹಿತಿಯನ್ನು ಕಡ್ಡಾಯವಾಗಿ ನೀಡತಕ್ಕದ್ದು.
ಹೆಸರು ನೋಂದಾಯಿಸಲು ಕಡೆಯ ದಿನಾಂಕ 26.09.2025.
ಗೀತಾರಮೇಶ್
ಉಪಾಧ್ಯಕ್ಷರು
ಪಟ್ಟಣ ಪಂಚಾಯಿತಿ,ತೀರ್ಥಹಳ್ಳಿ
ಜ್ಯೋತಿಮೋಹನ್
ಸದಸ್ಯರು
ಪಟ್ಟಣ ಪಂಚಾಯಿತಿ, ತೀರ್ಥಹಳ್ಳಿ
ಚೇತನ್ ಜಿ
ಸಂಚಾಲಕರು
8618893484








