* ಉಡುಪಿ: ಬಸ್ ಮಾಲೀಕನ ಬರ್ಬರ ಹತ್ಯೆ
ಉಡುಪಿ: ಬೆಳ್ಳಂಬೆಳಗ್ಗೆ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಹತ್ಯೆಗೈದ ಘಟನೆ ಮಲ್ಪೆಯ ಕೊಡವೂರಿನಲ್ಲಿ ನಡೆದಿದೆ. ಎಕೆಎಂಎಸ್ ಬಸ್ ಮಾಲೀಕ, ಉದ್ಯಮಿಯಾದ ಅತ್ರಾಡಿ ನಿವಾಸಿ ಸೈಪುದ್ದೀನ್ ಕೊಲೆಗೀಡಾದ ವ್ಯಕ್ತಿ ಎಂದು ತಿಳಿದುಬಂದಿದೆ. ಹೂಡೆಯಲ್ಲಿರುವ ಅವರ ಮನೆಯಲ್ಲಿಯೇ ದುಷ್ಕರ್ಮಿಗಳು ಸೈಪುದ್ದೀನ್ ಅವರನ್ನು ಕೊಲೆ ಮಾಡಿ, ಪರಾರಿಯಾಗಿದ್ದಾರೆ ಎನ್ನಲಾಗಿದ್ದು, ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಲಭಿಸಬೇಕಿದೆ.