Categories
ಬೆಂಗಳೂರು

ಸಿಗಂದೂರು ಮುಜರಾಯಿ ವ್ಯಾಪ್ತಿಗಿಲ್ಲ!

  • ಈಡಿಗ ಸಮುದಾಯದ ನಿಯೋಗಕ್ಕೆ ಸಿಎಂ ಅಭಯ
  • 21 ಮಂದಿ ಹಿಂದುಳಿದ ವರ್ಗಗಳ ಸ್ವಾಮೀಜಿಗಳ ಭೇಟಿ

ಬೆಂಗಳೂರು: ಪ್ರಸಿದ್ಧ ಸಿಗಂದೂರು ಶ್ರೀ ಚೌಡೇಶ್ವರಿ ದೇವಾಲಯ ಇನ್ಮುಂದೆ ರಾಮಪ್ಪ ಅವರ ನೇತೃತ್ವದಲ್ಲೇ ನಡೆಯಲಿದೆ. ಉಸ್ತುವಾರಿ ಸಮಿತಿ ನಿಗಾ ಇಡಲಿದೆ. ದೇವಸ್ಥಾನವನ್ನು ಮುಜರಾಯಿ ವ್ಯಾಪ್ತಿಗೆ ತರುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.


ಶಾಸಕ ಹರತಾಳು ಹಾಲಪ್ಪ, ರಾಜ್ಯ ಬಿಜೆಪಿ ನಾಯಕ ಬೇಗುವಳ್ಳಿ ಸತೀಶ್ ಮುಂತಾದ ಈಡಿಗ ನಾಯಕರ ನೇತೃತ್ವದಲ್ಲಿ ಈಡಿಗ ಸಮುದಾಯದ ನಿಯೋಗ 21 ಮಂದಿ ಹಿಂದುಳಿದ ವರ್ಗದ ವಿವಿಧ ಮಠಾಧೀಶರ ಜತೆ ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಭೇಟಿ ಮಾಡಿ ಸಭೆ ನಡೆಸಲಾಯಿತು.


ಸಿಗಂದೂರು ದೇವಾಲಯದ ಮೇಲುಸ್ತುವಾರಿ ಸಮಿತಿ ಕುರಿತ ಗೊಂದಲ ಹಾಗೂ ಭಕ್ತರು ನೀಡುವ ಹಣಕಾಸು, ದೇಣಿಗೆ ವಿಚಾರದಲ್ಲಿ ಪಾರದರ್ಶಕತೆ ತರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.


ಶಿವಮೊಗ್ಗ ಜಿಲ್ಲಾಡಳಿತ ನೇತೃತ್ವದ ದೇಗುಲ ಸಲಹಾ ಸಮಿತಿಗೆ ಈಡಿಗ ಸಮುದಾಯದ ಶ್ರೀ ರೇಣುಕಾನಂದ ಸ್ವಾಮೀಜಿ ಸೇರ್ಪಡೆ ಮಾಡಿಕೊಳ್ಳಲು ಇದೇ ವೇಳೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಶ್ರೀಗಳ ಸಲಹೆ, ಮಾರ್ಗದರ್ಶನ ತೆಗೆದುಕೊಂಡು ಸಮಿತಿ ಕಾರ್ಯ ನಿರ್ವಹಿಸಲಿದೆ. ಈಗ ರಚನೆಯಾಗಿರುವ ಸಮಿತಿ ನಾಲ್ಕು ತಿಂಗಳವರೆಗೆ ಮುಂದುವರೆಯಲಿದೆ. ದೇವಸ್ಥಾನದ ಆಡಳಿತ ರಾಮಪ್ಪ ಅವರ ನೇತೃತ್ವದಲ್ಲೇ ನಡೆಯಲಿದ್ದು, 4 ತಿಂಗಳ ಬಳಿಕ ಸಮಿತಿ ಇರಬೇಕೋ ಅಥವಾ ಕೈ ಬಿಡಬೇಕೋ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಯಡಿಯೂರಪ್ಪ ಸಭೆಯಲ್ಲಿ ತಿಳಿಸಿದ್ದಾರೆ.
ದೇವಾಲಯದ ಆಡಳಿತ ಈ ಹಿಂದೆ ನಡೆಯುತ್ತಿದ್ದ ಮಾದರಿಯಲ್ಲೇ ನಡೆಸಿಕೊಂಡು ಹೋಗಲು ಅನುವು ಮಾಡಿಕೊಡಿ ಎಂದು ನಿಯೋಗ ಸಿಎಂಗೆ ಮನವಿ ಮಾಡಿದಾಗ ದೇಗುಲವನ್ನು ಮುಜರಾಯಿ ವ್ಯಾಪ್ತಿಗೆ ತರುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದರು.

Categories
ಕೃಷಿ

ರೈತರಿಗೆ ಮತ್ತೆ 2000 ರೂ.ಹಣ!

ಡಿಸೆಂಬರ್‍ನಲ್ಲಿ ಹಣ ಜಮಾವಣೆ

ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಫಲಾನುಭವಿಗಳಿಗೆ ಹಣ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. 7ನೇ ಕಂತಿನ ಹಣ ವರ್ಗಾವಣೆ ಡಿಸೆಂಬರ್ 1ರಿಂದ 6000 ರೂಪಾಯಿಗಳನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ.

ಈವರೆಗೆ 6 ಕಂತುಗಳನ್ನು ರೈತರಿಗೆ ನೀಡಲಾಗಿದೆ. ಕಳೆದ 23 ತಿಂಗಳಲ್ಲಿ 11.17 ಕೋಟಿ ರೈತರಿಗೆ ಕೇಂದ್ರ ಸರ್ಕಾರ ನೇರವಾಗಿ 95 ಕೋಟಿ ರೂಪಾಯಿ ನೀಡಿದೆ.
ಮೊದಲ ಕಂತು ಡಿಸೆಂಬರ್ 1ರಿಂದ ಮಾರ್ಚ್ 31ರ ನಡುವೆ ಬರುತ್ತದೆ. ಎರಡನೇ ಕಂತು ಏಪ್ರಿಲ್ 1ರಿಂದ ಜುಲೈ 31 ರವರೆಗೆ ಮತ್ತು ಮೂರನೇ ಕಂತು ಆಗಸ್ಟ್ 1ರಿಂದ ನವೆಂಬರ್ 30ರ ನಡುವೆ ಬರುತ್ತದೆ. ದಾಖಲೆಗಳು ಸರಿಯಾಗಿದ್ದರೆ, ಎಲ್ಲಾ 11.17 ಕೋಟಿ ನೋಂದಾಯಿತ ರೈತರಿಗೂ ಏಳನೇ ಕಂತಿನ ಲಾಭ ಸಿಗಲಿದೆ.


ಫಲಾನುಭವಿಗಳು ದಾಖಲೆಯನ್ನು ಪರಿಶೀಲಿಸಬೇಕಾದ ಅಗತ್ಯತೆಯಿದೆ.ಅರ್ಜಿ ಸಲ್ಲಿಸಿದ 1.3 ಕೋಟಿ ರೈತರಿಗೆ ಹಣ ಬಂದಿಲ್ಲ. ತಪ್ಪು ದಾಖಲಾತಿ ಹಾಗೂ ಆಧಾರ್ ಕಾರ್ಡ್ ಇಲ್ಲದಿರುವುದು ಇದಕ್ಕೆ ಕಾರಣವಾಗಿದೆ. ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆಯ ಅಧಿಕೃತ ವೆಬ್‍ಸೈಟ್ pmkisan.gov.in ಟಿಗೆ ಲಾಗಿನ್ ಮಾಡಬೇಕು. ಅಲ್ಲಿ ಫಾರ್ಮರ್ಸ್ ಕಾರ್ನರ್ ಟ್ಯಾಬ್ ಕ್ಲಿಕ್ ಮಾಡಬೇಕು. ಈಗಾಗಲೇ ಅರ್ಜಿ ಸಲ್ಲಿಸಿದ್ದು, ಆಧಾರ್ ಸರಿಯಾಗಿ ಅಪ್‍ಲೋಡ್ ಮಾಡದಿದ್ದರೆ ಅಥವಾ ಕೆಲವು ಕಾರಣಗಳಿಂದಾಗಿ ಆಧಾರ್ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದ್ದರೆ ಅಲ್ಲಿ ಮಾಹಿತಿ ಸಿಗುತ್ತದೆ. ಇಲ್ಲಿಯೇ ನೀವು ಯೋಜನೆಗೆ ಹೆಸರು ನೋಂದಾಯಿಸಬಹುದು.

Categories
ಬೆಂಗಳೂರು

ಕೆಎಎಸ್ ಅಧಿಕಾರಿ ಮನೆಯಲ್ಲಿ ಕೆಜಿ ಕೆಜಿ ಚಿನ್ನ!

  • ಹತ್ತಾರು ಕಡೆ ಮನೆ: ಲಕ್ಷಾಂತರ ಹಣ
  • ಎಸಿಬಿ ದಾಳಿಯಿಂದ ಮಹಿಳಾ ಅಧಿಕಾರಿಗೆ ಸಂಕಷ್ಟ

ಬೆಂಗಳೂರು: ಕೆಎಎಸ್ ಅಧಿಕಾರಿ, ಶಿವಮೊಗ್ಗ ಜಿಲ್ಲೆ ಸೊರಬದಲ್ಲಿ ಈ ಹಿಂದೆ ತಹಶೀಲ್ದಾರ್ ಆಗಿದ್ದ ಡಾ.ಬಿ.ಸುಧಾ ಅವರ ಭವ್ಯ ಬಂಗಲೆಯಲ್ಲಿ ಕೆಜಿಗಟ್ಟಲೆ ಚಿನ್ನಾಭರಣ, ಸುಮಾರು ಹತ್ತು ಲಕ್ಷ ನಗದು, ಹಲವು ಆಸ್ತಿ ಪತ್ರಗಳು ಪತ್ತೆಯಾಗಿವೆ.


ಭ್ರಷ್ಟಾಚಾರದ ಆರೋಪದಲ್ಲಿ ಕೆಎಎಸ್ ಅಧಿಕಾರಿ ಡಾ.ಬಿ.ಸುಧಾ ಅವರ ಮನೆ, ಕಚೇರಿಗಳ ಮೇಲೆ ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಗಳೂರು, ಉಡುಪಿಯ ಹೆಬ್ರಿ, ಮೈಸೂರಿನಲ್ಲಿರುವ ಡಾ. ಸುಧಾ ಅವರ ಮನೆ ಮತ್ತು ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆಸಲಾಗಿದೆ. ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿರುವ ಅವರ ಭವ್ಯ ಬಂಗಲೆಯಲ್ಲಿ ಕೆಜಿಗಟ್ಟಲೆ ಚಿನ್ನಾಭರಣ, ಸುಮಾರು ಹತ್ತು ಲಕ್ಷ ನಗದು, ಹಲವು ಆಸ್ತಿ ಪತ್ರಗಳು ಪತ್ತೆಯಾಗಿವೆ. ಈ ಹಿಂದೆ ಬಿಡಿಎನಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿದ್ದ ಡಾ.ಸುಧಾ ಅವರ ವಿರುದ್ಧ ಎಸಿಬಿಯಲ್ಲಿ ಅಕ್ರಮ ಆಸ್ತಿ ಗಳಿಕೆ ಹಾಗೂ ಅವ್ಯವಹಾರದ ಕುರಿತಾಗಿ ದೂರು ದಾಖಲಾಗಿತ್ತು.

ಪ್ರಸ್ತುತ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನದ ಆಡಳಿತ ಅಧಿಕಾರಿ ಆಗಿರುವ ಕೆಎಎಸ್ ಅಧಿಕಾರಿ ಡಾ.ಬಿ.ಸುಧಾ ಅವರ ಮನೆ ಮೇಲೆ ಶನಿವಾರ ಎಸಿಬಿ ದಾಳಿ ನಡೆಸಲಾಗಿದೆ. ಬೆಂಗಳೂರಿನ ಕೊಡಿಗೇಹಳ್ಳಿ ನಿವಾಸ, ಯಲಹಂಕದಲ್ಲಿ ಒಂದು ಫ್ಲ್ಯಾಟ್, ಬ್ಯಾಟರಾಯನಪುರ ಹಾಗೂ ಬಿಇಎಂಎಲ್ ಮನೆ ಮೇಲೆ ದಾಳಿ ನಡೆಸಲಾಗಿದೆ. ಜೊತೆಗೆ, ಉಡುಪಿ ಜಿಲ್ಲೆಯ ಹೆಬ್ರಿ ಬಳಿಯ ತೆಂಕಬಟ್ಟಿನ ಮನೆ ಮೇಲೂ ದಾಳಿ ನಡೆಸಲಾಗಿದೆ. ಮೈಸೂರಿನಲ್ಲಿರುವ ಮನೆ ಮೇಲೂ ಎಸಿಬಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ಎಸಿಬಿ ಡಿವೈಎಸ್ಪಿ ಪ್ರತಾಪ್ ರೆಡ್ಡಿ ಮತ್ತು ತಂಡದಿಂದ ಡಾ. ಸುಧಾ ಅವರ ಮನೆಯಲ್ಲಿ ಕಾರ್ಯಾಚರಣೆ ಮುಂದುವರೆದಿದೆ. ಈ ಹಿಂದೆ ಸೊರಬದಲ್ಲಿ ತಹಸೀಲ್ದಾರ್ ಆಗಿದ್ದರು.

Categories
ಅಂತಾರಾಷ್ಟ್ರೀಯ ಸುದ್ದಿ

ಇನ್ನೂ ಮುಗಿಯದ ಅಮೆರಿಕಾ ಸಸ್ಪೆನ್ಸ್!

  • ನಿರ್ಗಮನದ ಹಾದಿಯಲ್ಲಿ ಟ್ರಂಪ್..?
  • 264 ಸ್ಥಾನ ಜೋ ಬಿಡೆನ್, 214 ಸ್ಥಾನ ಟ್ರಂಪ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಸ್ಪೆನ್ಸ್ ಈಗ ಕುತೂಹಲದ ಘಟ್ಟಕ್ಕೆ ಬಂದು ನಿಂತಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಫಲಿತಾಂಶ ಘೋಷಣೆಯಾಗುವ ಸಾಧ್ಯತೆಗಳಿವೆ. ಬಹುತೇಕ ಈಗಿನ ವಿಧ್ಯಾಮಾನಗಳ ಪ್ರಕಾರ ನಿರ್ಗಮನದ ಹಾದಿಯಲ್ಲಿ ಟ್ರಂಪ್ ಇದ್ದಾರೆ. ಶ್ವೇತ ಭವನದ ಹೊಸ್ತಿಲಲ್ಲಿರುವ ಜೋ ಬಿಡೆನ್ ಪರ ಭಾರೀ ಟ್ರೆಂಡ್ ಕಾಣುತ್ತಿದೆ.


ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯನ್ನು ಗೆಲ್ಲಲು 270 ಸ್ಥಾನಗಳ ಅಗತ್ಯವಿದ್ದು, ಟ್ರಂಪ್ 214 ಸ್ಥಾನಗಳಲ್ಲಿ ಗೆದ್ದು 15 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದಾರೆ. ಜೋ ಬಿಡೆನ್ 264 ಸ್ಥಾನಗಳನ್ನು ಗೆದ್ದಿದ್ದು, ಅವರಿಗೆ ಗೆಲ್ಲಲು 6 ಸ್ಥಾನಗಳ ಅಗತ್ಯವಿದೆ. ಜೋ ಬಿಡೆನ್ 42 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಎರಡನೇ ಬಾರಿ ಅಧ್ಯಕ್ಷ ಹುದ್ದೆಗೆ ಏರುವ ಟ್ರಂಪ್ ಕನಸು ನನಸಾಗುವುದು ಬಹುತೇಕ ಕಷ್ಟ ಎನ್ನಲಾಗುತ್ತಿದೆ. ಮತ ಎಣಿಕೆ ನಡೆಯುತ್ತಿದ್ದು, ಅಧೀಕೃತ ಪ್ರಕಟಣೆ ಹೊರ ಬಿದ್ದಿಲ್ಲ.
ಮತದಾನದಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸುತ್ತಿರುವ ಟ್ರಂಪ್ ಸರಣಿ ಟ್ವೀಟ್‍ಗಳನ್ನು ಮಾಡುತ್ತಿದ್ದಾರೆ. ಅಮೆರಿಕದ ಎಲ್ಲಾ ರಾಜ್ಯಗಳಲ್ಲೂ ಬಿಡೆನ್ ಪರವಾಗಿ ಸಾಕಷ್ಟು ಮತಗಳು ಚಲಾವಣೆಯಾಗಿವೆ. ಒಟ್ಟಿನಲ್ಲಿ ಹಿರಿಯಣ್ಣನ ದೊರೆ ಯಾರಾಗ್ತಾರೆ ಎಂಬ ಕುತೂಹಲ ಇಡೀ ಜಗತ್ತಿಗೆ ಇದೆ.

Categories
ಮಲ್ನಾಡ್

ಮಲೆನಾಡಿನಲ್ಲಿ ಹೋರಾಟ ಶುರು..!

  • ಕಸ್ತೂರಿ ರಂಗನ್ ವರದಿ ವಿರೋಧಿಸಿ ಪಾದಯಾತ್ರೆ
  • ಪಕ್ಷಾತೀತವಾಗಿ 1000 ಜನರ ಬೆಂಬಲ: ಹಚ್ಚಿತು ಕಿಡಿ..!

ತೀರ್ಥಹಳ್ಳಿ: ಮಲೆನಾಡಿನ ರೈತರ ಬದುಕಿಗೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿ ವಿರೋಧಿಸಿ ಸಹಕಾರಿ ನಾಯಕ ಮಂಜುನಾಥ ಗೌಡ ನಾಯಕತ್ವದಲ್ಲಿ ಮಲೆನಾಡಿನ ಹೃದಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ಬಿದರಗೋಡಿನಿಂದ ಪಾದಯಾತ್ರೆ ಶುರುವಾಗಿದೆ.


ಕಸ್ತೂರಿ ರಂಗನ್ ವರದಿಯಿಂದ ಮಲೆನಾಡಿನ ಸಾವಿರಾರು ಹಳ್ಳಿಗಳ ರೈತರು ತಮ್ಮ ಮನೆ ಮಠ ಕಳೆದುಕೊಳ್ಳಲಿದ್ದಾರೆ. ಹೀಗಾಗಿ ಸಹಕಾರಿ ನಾಯಕ ಡಾ.ಮಂಜುನಾಥ ಗೌಡ ನೇತೃತ್ವದಲ್ಲಿ 3 ದಿನಗಳ 42 ಕಿಮೀ ಪಾದಯಾತ್ರೆ ಮೊದಲ ದಿನ ಬಿದರಗೋಡಿನಿಂದ ಕುಂದಾದ್ರಿ-ಕೆಂದಾಳಬೈಲ್-ಗುಡ್ಡೇಕೇರಿ ಮಾರ್ಗವಾಗಿ ನಾಲೂರು ತಲುಪಿದೆ. ಬಿದರಗೋಡಿನ ಶ್ರೀರಾಮ ಮಂದಿರದಲ್ಲಿ ಪೂಜೆ ಮಾಡಿಸಿ ಬಳಿಕ ಸಭೆ ನಡೆಸಲಾಯಿತು.
ರಾಜ್ಯ ನಾಯಕರಾದ ಮಧು ಬಂಗಾರಪ್ಪ, ಬೇಳೂರು ಗೋಪಾಲಕೃಷ್ಣ, ಸಹಕಾರಿ ನಾಯಕರಾದ ವಿಜಯದೇವ್, ದುಗ್ಗಪ್ಪ ಗೌಡ, ಆನಂದ್, ವಿಧ್ಯಾಧರ, ಪ್ರಶಾಂತ್ ಸಾಗರ ಸೇರಿದಂತೆ ಅನೇಕ ನಾಯಕರು ಆಗಮಿಸಿ ಪಾದಯಾತ್ರೆಗೆ ರಂಗು ತುಂಬಿದರು. ಜೊತೆಗೆ ಕೇಂದ್ರ, ರಾಜ್ಯ ಸರ್ಕಾರಗಳ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹೋರಾಟಗಾರರಾದ ಕಲ್ಕುಳಿ ವಿಠಲ ಹೆಗ್ಡೆ, ಶ್ರೀಧರ್ ಕಲ್ಲಹಳ್ಳ, ಕೆ.ಎಲ್.ಅಶೋಕ ಮಾತನಾಡಿ, ಕಸ್ತೂರಿ ರಂಗನ್ ವರದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತೀರ್ಥಹಳ್ಳಿ ಕಾಂಗ್ರೆಸ್ ನಾಯಕರಾದ ಬಾಳೇಹಳ್ಳಿ ಪ್ರಭಾಕರ್, ಪದ್ಮನಾಭ, ಕೆಳಕೆರೆ ದಿವಾಕರ್, ಹೊಸಹಳ್ಳಿ ಸುಧಾಕರ್, ಕೇಳೂರು ಮಿತ್ರ, ಕಂಪನಕೊಡಿಗೆ ಸುರೇಶ, ಈಚನಬೈಲ್ ಶಶಿಧರ್, ಶಂಕರಮನೆ ಅರುಣ್, ಮಹಾಬಲೇಶ್ ಹಸಿರುಮನೆ ಸೇರಿದಂತೆ ಬಹುತೇಕ ನಾಯಕರು ಪಕ್ಷಾತೀತವಾಗಿ ಭಾಗವಹಿಸಿದ್ದರು.
3 ದಿನಗಳ 42 ಕಿಲೋ ಮೀಟರ್ ಈ ಪಾದಯಾತ್ರೆಯಲ್ಲಿ ಪಕ್ಷ,ಜಾತಿ, ಭೇದ, ಮರೆತು ಮಲೆನಾಡಿನ ರೈತರು ಭಾಗವಹಿಸುತ್ತಿದ್ದಾರೆ. ಸುಮಾರು 1000 ಮಂದಿ ಮೊದಲ ದಿನ ಭಾಗವಹಿಸಿದ್ದಾರೆ.

Categories
ಮಲ್ನಾಡ್

ಮಲೆನಾಡಿನ ಕಾಂಗ್ರೆಸ್ ನಾಯಕ ಕರೋನಾಕ್ಕೆ ಬಲಿ

  • ಕಳಸ ಕಾಂಗ್ರೆಸ್ ಅಧ್ಯಕ್ಷ ಹೆಬ್ಬಾರ್
  • ಕರೋನಾ ಡೇಂಜರ್ ಡೇಂಜರ್..!

ಕಳಸ: ಕರೋನಾ ಸೋಂಕಿಗೆ ತುತ್ತಾಗಿ ಬೆಂಗಳೂರಿನ ಮಣಿಪಾಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂಡಿಗೆರೆ ತಾಲೂಕಿನ ಕಳಸ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ‌ ತೋಟದೂರು ಶ್ರೀನಿವಾಸ್ ಹೆಬ್ಬಾರ್ ಸಾವನ್ನಪ್ಪಿದ್ದಾರೆ. ಈ ಮೂಲಕ ಮಲೆನಾಡಿನ ಮತ್ತೊಬ್ಬ ನಾಯಕ ಕರೋನಾಗೆ ಬಲಿಯಾದಂತಾಗಿದೆ. ಒಂದು ತಿಂಗಳಿನಿಂದ ಕರೊನಾ ಸೋಂಕಿನಿಂದ ಬಳಲುತ್ತಿದ್ದ ತೋಟದೂರು ಶ್ರೀನಿವಾಸ್ ಹೆಬ್ಬಾರ್ (54) ಬೆಂಗಳೂರು ಮಣಿಪಾಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಶ್ರೀನಿವಾಸ್ ಹೆಬ್ಬಾರ್ ಪ್ರಸ್ತುತ ಕಳಸ ಬ್ಲಾಕ್ ಕಾಂಗ್ರೆಸ್​​ ಸಮಿತಿ ಅಧ್ಯಕ್ಷರಾಗಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾಗಿ, ರೋಟರಿ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳು ಮತ್ತು ಧಾರ್ಮಿಕ ಕ್ಷೇತ್ರ, ಕನ್ನಡ ಸಾಹಿತ್ಯ ಪರಿಷತ್ತು, ಕ್ರೀಡಾ ಕ್ಷೇತ್ರದಲ್ಲಿ ಹೆಸರು ಮಾಡಿದ್ದರು.
ಭದ್ರಾವತಿ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನದ ಬಳಿಕ ಮತ್ತೊಬ್ಬ ನಾಯಕನನ್ನು ಮಲೆನಾಡು ಕಳೆದುಕೊಂಡಿದೆ.

Categories
ಬೆಂಗಳೂರು

ಇನ್ಮುಂದೆ ಹೈಟೆಕ್ ಆಂಬುಲೆನ್ಸ್ ಸೇವೆ?!

  • ಆಧುನಿಕ ತಂತ್ರಜ್ಞಾನ ವ್ಯವಸ್ಥೆ
  • ಹೊಸ ಟೆಂಡರ್ ನೀಡಲು ಸಿದ್ಧತೆ

ಬೆಂಗಳೂರು: ಅರೋಗ್ಯ ಪ್ರತಿ ಜನರ ಮೊದಲ ಆಧ್ಯತೆ. ಆದರೆ ಇಂದು ಕೆಲವು ಸೇವೆಗಳು ಜನತೆಗೆ ಸಿಗುತ್ತಿಲ್ಲ ಎಂಬ ಆರೋಪ ಇದೆ. ಈ ನಡುವೆ ರಾಜ್ಯಾದ್ಯಂತ ಗುಣಮಟ್ಟದ ಆಂಬ್ಯುಲೆನ್ಸ್ ಸೇವೆ ಒದಗಿಸುವ ನಿಟ್ಟಿನಲ್ಲಿ ಜಾರಿಯಲ್ಲಿರುವ ವ್ಯವಸ್ಥೆಯನ್ನು ಬದಲಾವಣೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸೂಚನೆ ನೀಡಿದ್ದಾರೆ.
ತುರ್ತು ಆರೋಗ್ಯ ಸೇವೆ ನೀಡುವ ಆಂಬ್ಯುಲೆನ್ಸ್ ಗಳ ಸೇವೆ ಮಹತ್ವದ್ದಾಗಿದೆ. ಸದ್ಯ ನಮ್ಮಲ್ಲಿರುವ ವ್ಯವಸ್ಥೆಯಲ್ಲಿ ಸಾಕಷ್ಟು ಲೋಪಗಳಿದ್ದು, ಅವುಗಳನ್ನು ನಿವಾರಿಸಿ ಆಧುನಿಕ ತಂತ್ರಜ್ಞಾನ ಮತ್ತು ಜಾಗತಿಕ ಗುಣಮಟ್ಟದ ನಿರ್ವಹಣಾ ಪದ್ಧತಿ ಅಳವಡಿಸಿಕೊಳ್ಳಬೇಕಿದೆ.


108 ಆಂಬ್ಯುಲೆನ್ಸ್ ಸೇವೆಗೆ ರಾಜ್ಯ ಸರ್ಕಾರ ದೊಡ್ಡ ಮೊತ್ತದ ಹಣ ನೀಡುತ್ತದೆ. ಆದರೆ ಅದಕ್ಕೆ ತಕ್ಕಂತೆ ಗುಣಮಟ್ಟದ ಸೇವೆ ಲಭ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ದೇಶದಲ್ಲೇ ಮಾದರಿ ಆಗುವಂತಹ ವ್ಯವಸ್ಥೆ ಜಾರಿಗೊಳಿಸಬೇಕಿದೆ. ಅದಕ್ಕಾಗಿ ಹೊಸದಾಗಿ ಟೆಂಡರ್ ನೀಡುವಾಗ ಲೋಪಗಳಿಗೆ ಅವಕಾಶವಿಲ್ಲದಂತೆ ಜಾಗತಿಕ ಮಟ್ಟದ ಸೇವೆ ನೀಡುವ ಸಂಸ್ಥೆ ಅಥವಾ ಕಂಪನಿಗಳ ಒಕ್ಕೂಟಕ್ಕೆ ಗುತ್ತಿಗೆ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.
ಕರೆ ಅಥವಾ ಸಂದೇಶ ನೀಡಿದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿ ರೋಗಿಯನ್ನು ಕರೆದೊಯ್ಯುವಂತಿರಬೇಕು. ಆಂಬ್ಯುಲೆನ್ಸ್ ನಿಗದಿ ಆಗುವ ಮೊದಲು ಕಾಲ್ ಸೆಂಟರ್ ನಲ್ಲಿ ಕರೆ ಸ್ವೀಕರಿಸಿ ಸಮೀಪದಲ್ಲಿ ಇರುವುದನ್ನು ಕಳುಹಿಸಬೇಕು. ಪ್ರಾಥಮಿಕ ಚಿಕಿತ್ಸೆ ನೀಡುವ ತರಬೇತಾದ ಸಿಬ್ಬಂದಿ ಇರಲೇಬೇಕು. ಉಬರ್ ಮತ್ತು ಓಲಾ ಮಾದರಿಯ ಆ್ಯಪ್ ವ್ಯವಸ್ಥೆ ಇರಬೇಕು. ಜಿಪಿಎಸ್, ಬಯೋಮೆಟ್ರಿಕ್, ಕಾಲ್ ಸೆಂಟರ್ ವ್ಯವಸ್ಥೆ ಸದೃಢವಾಗಿರಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.


ವಾಹನ ಬದಲಾವಣೆ!: ಆಂಬುಲೆನ್ಸ್ ವಾಹನಗಳ ಸಾಮರ್ಥ್ಯ ಕೂಡ ಕಡಿಮೆ ಇದೆ.ಓಮ್ನಿ, ಕಡಿಮೆ ಸಿಸಿ ವಾಹನಗಳು ಕೂಡ ನಿಗದಿತ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ ಎಂಬ ದೂರು ಇದೆ.

Categories
ಮಲ್ನಾಡ್

ಸಿಗಂದೂರಿಗಾಗಿ ಈಡಿಗರ ಕಿಚ್ಚು ಶುರು!

  • ರಾಜ್ಯದೆಲ್ಲೆಡೆ ಪ್ರತಿಭಟನೆ ಸಜ್ಜು
  • ಈಡಿಗ ಬಿಜೆಪಿ ನಾಯಕರಿಂದ ಸಿಎಂ ಭೇಟಿ
  • ಈಡಿಗ ಸಮುದಾಯ ಸಭೆ


ಬೆಂಗಳೂರು/ಶಿವಮೊಗ್ಗ: ದೇಶದ ಪ್ರತಿಷ್ಠಿತ ದೇವಾಲಯದಲ್ಲಿ ಒಂದಾದ ಸಿಗಂದೂರು ವಿಚಾರದಲ್ಲಿ ಸರಕಾರದ ನಡೆ ವಿರೋಧಿಸಿ ರಾಜ್ಯದೆಲ್ಲೆಡೆ ಇದೀಗ ಭಾರಿ ಹೋರಾಟಕ್ಕೆ ಸಿದ್ಧತೆ ನಡೆದಿದೆ.
ಸಿಗಂದೂರು ಗೊಂದಲಗಳ ನಿವಾರಣೆಗಾಗಿ ಮುಖ್ಯಮಂತ್ರಿಗಳ ಜತೆ ಜನಾಂಗದ ಪ್ರಮುಖರ ಸಭೆ ನಡೆಯಿತು.ಯಡಿಯೂರಪ್ಪ ಅವರನ್ನು ಸಾಗರ ಶಾಸಕ ಹರತಾಳು ಹಾಲಪ್ಪ ಅವರು ಸಮುದಾಯದ ಶ್ರೀಗಳಾದ ರೇಣುಕಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣಾ ದಲ್ಲಿ ಭೇಟಿ ಮಾಡಿ ಮಾಡಿ ಚರ್ಚೆ ನಡೆಸಲಾಯಿತು. ಬಳಿಕ ಸಂಸದ ರಾಘವೇಂದ್ರ ಅವರನ್ನು ಭೇಟಿಯಾಗಿ ಸಭೆ ನಿಗದಿ ಕುರಿತು ಚರ್ಚೆ ನಡೆಸಿದರು. ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಕಾಂಪೋಸ್ಟ್ ಅಭಿವೃದ್ಧಿ ನಿಗಮ ಉಪಾಧ್ಯಕ್ಷ ಬೇಗುವಳ್ಳಿ ಸತೀಶ್ ಹಾಜರಿದ್ದರು. ಇತ್ತ ಶಿವಮೊಗ್ಗ ಈಡಿಗರ ಭವನದಲ್ಲಿ ಮುಖಂಡರೊಂದಿಗೆ ನಡೆದ ಅನೌಪಚಾರಿಕ ಸಭೆಯಲ್ಲಿ ಕಾಂಗ್ರೆಸ್ ರಾಷ್ಟ್ರ ನಾಯಕ ಬಿ.ಕೆ.ಹರಿಪ್ರಸಾದ್ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಹಿಂದುತ್ವದ ಹೆಸರಲ್ಲಿ ಹಿಂದುಳಿದವರನ್ನು ಹೋರಾಟಕ್ಕೆ ಬಳಸಿಕೊಳ್ಳುವ ಬಿಜೆಪಿ, ಇಂದು ಹಿಂದುಳಿದವರ ಆಡಳಿತ ಮಂಡಳಿ ಇರುವ ದೇಗುಲಕ್ಕೆ ಮೇಲ್ವಿಚಾರಣಾ ಸಮಿತಿ ಮಾಡಿರುವುದು ಸರಿಯಲ್ಲ. ಸಿಗಂದೂರು ಹಿಂದುಳಿದವರ ಚೌಡಮ್ಮ ದೇವಿ ಅದನ್ನು ಚೌಡೇಶ್ವರಿ ಮಾಡಿರುವ ವೈದಿಕಶಾಹಿ ಅಲ್ಲಿ ಹಿಂದುಳಿದ ವರ್ಗಗಳ ಸಂಪ್ರದಾಯಕ್ಕೆ ತಿಲಾಂಜಲಿ ಹೇಳಿದೆ. ಇದು ಹಿಂದುಳಿದವರ ಮೇಲೆ ನಡೆಸಿದ ಧಾರ್ಮಿಕ ಪ್ರಹಾರ. ನನಗೆ ಯಾವುದೇ ಜಾತಿಯ ಬೇಧಭಾವ ಇಲ್ಲ. ಎಲ್ಲಿ ಶೋಷಣೆ ಆದರೂ ನೊಂದವರ ಪರ ನಿಲ್ಲುತ್ತೇನೆ.


ಸಿಗಂದೂರು ಚೌಡಮ್ಮ ದೇವಿ ದೇಗುಲಕ್ಕೆ ಭೇಟಿ ನೀಡುತ್ತೇನೆ. ಅಲ್ಲಿನ ಭಕ್ತರ ಭಾವನೆಗೆ ಧಕ್ಕೆಯಾಗುವಂತಹ ಯಾವುದೇ ಕ್ರಮಗಳಿಗೆ ಸ್ಪಷ್ಟ ವಿರೋಧ ಇದೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿಯೊಂದಿಗೆ ಮಾತನಾಡುತ್ತೇನೆ. ಸಮುದಾಯದ ಪರ ಯಾವುದೇ ಹೋರಾಟದಲ್ಲಿ ನಾನಿರುತ್ತೇನೆ ಎಂದು ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್, ಜಿಲ್ಲಾ ಪಂಚಾಯಿತಿ ಸದಸ್ಯ ಕಲಗೋಡು ರತ್ನಾಕರ್, ಜಿ.ಡಿ.ಮಂಜುನಾಥ್, ಕೆ.ವೈ. ರಾಮಚಂದ್ರ, ಪ್ರೊ.ಕಲ್ಲನ, ತೇಕಲೆ ರಾಜಪ್ಪ, ವೀಣಾ ವೆಂಕಟೇಶ್, ಲಲಿತಾ ಹೊನ್ನಪ್ಪ ಮತ್ತಿತರರು ಭಾಗವಹಿಸಿದ್ದರು.

Categories
ಮಲ್ನಾಡ್

ಪಾದಯಾತ್ರೆಗೆ ಯುವ ಸಮುದಾಯದ ಸಾಥ್!

  • ಯುವಕರ ಸಂಘಟನೆ ಜೋರು
  • ಶಶಾಂಕ್, ಅಶ್ವಲ್, ನಾಗರಾಜ್, ಗಗನ್, ಪ್ರವೀಣ್ ಸಾರಥ್ಯ!


ತೀರ್ಥಹಳ್ಳಿ: ನ.7ರಿಂದ ಸಹಕಾರಿ ನಾಯಕ ಡಾ.ಮಂಜುನಾಥ ಗೌಡ ನಾಯಕತ್ವದಲ್ಲಿ ಆಯೋಜಿಸಲಾಗಿರುವ ರೈತ ಕಲ್ಯಾಣ ನಡಿಗೆಗೆ ಯುವ ಸಮುದಾಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ತೀರ್ಥಹಳ್ಳಿ ತಾಲೂಕಿನ ಪ್ರಮುಖ ಯುವ ನಾಯಕರಾದ ಶಶಾಂಕ್ ಹೆಗ್ಡೆ ಗುಡ್ಡೇಕೇರಿ, ಅಶ್ವಲ್ ಗೌಡ, ಪ್ರವೀಣ್ ಕಟ್ಟೆ, ನಾಗರಾಜ್ ಪೂಜಾರಿ, ಗಗನ್, ಪೂರ್ಣೇಶ್ ಕೊಡಿಗೆಬೈಲ್, ವಿಕ್ಕಿ ಶೆಟ್ಟಿ ಸೇರಿದಂತೆ ನೂರಾರು ಯುವಕರು ಗ್ರಾಮ ಮಟ್ಟದಲ್ಲಿ ಸಾಥ್ ನೀಡುತ್ತಿದ್ದಾರೆ. ಎಲ್ಲಾ ಕಡೆಯಿಂದ ಸಂಘಟನೆ ಮಾಡುತ್ತಿದ್ದಾರೆ.
ಕಸ್ತೂರಿ ರಂಗನ್ ವರದಿ ವಿರೋಧಿಸಿ ಹೋರಾಟ ಪಕ್ಷಾತೀತ, ರೈತರ ಹಾಗೂ ಮಲೆನಾಡಿನ ಜನರ ಪರವಾದ ಹೋರಾಟ. ಹೀಗಾಗಿ ಮುಂದಿನ ರೈತರಾದ ಯುವಕರು ಹೋರಾಟಕ್ಕೆ ಜೊತೆಯಾಗಿದ್ದಾರೆ.


ಯುವ ಮುಖಂಡ ಗುಡ್ಡೆಕೇರಿ ಶಶಾಂಕ್ ಹೆಗಡೆ ಮಾತನಾಡಿ, ಅನ್ನದಾತನ ನಿರ್ಣಾಯಕ ಹೋರಾಟದಲ್ಲಿ ನಮ್ಮ ರೈತರ ಒಗ್ಗಟ್ಟು ತೋರಿಸೋಣ ಎಂದು ರೈತರಲ್ಲಿ ಮನವಿ ಮಾಡಿದ್ದಾರೆ. ಮಲೆನಾಡಿನ ದನಿಯಾಗಿ ಈ ಹೋರಾಟ ರೂಪುಗೊಳ್ಳಲಿದೆ. ಎಲ್ಲರೂ ಪಾಲ್ಗೊಳ್ಳಲು ಹುಂಚದಕಟ್ಟೆ ಪ್ರವೀಣ್ ಮನವಿ ಮಾಡಿದ್ದಾರೆ. ಇನ್ನು ಯುವ ಸಂಘಟಕರಾದ ಅಶ್ವಲ್ ಗೌಡ, ಪೂರ್ಣೇಶ್ ಕೊಡಿಗೆಬೈಲ್, ನಾಗರಾಜ್ ಪೂಜಾರಿ, ವಿಕ್ರಂ ಶೆಟ್ಟಿ, ಗಗನ್ ಸೇರಿದಂತೆ ಅನೇಕ ಯುವ ನಾಯಕರು ಹೋರಾಟಕ್ಕೆ ಧುಮುಕಿದ್ದಾರೆ. ಇಷ್ಟು ದಿನ ಬಿಜೆಪಿಯಲ್ಲಿ ಮಾತ್ರ ಕಾಣುತ್ತಿದ್ದ ಯುವ ಸಂಘಟನೆ ಈಗ ಮಂಜುನಾಥ ಗೌಡರ ಪಾಳಯದಲ್ಲಿ ಹೆಚ್ಚುತ್ತಿರುವುದು ಹೊಸ ಬೆಳವಣಿಗೆಗೆ ಸಾಕ್ಷಿಯಾಗಿದೆ.


Categories
ಮಲ್ನಾಡ್

ರೈತ ಕಲ್ಯಾಣ ನಡಿಗೆಗೆ ಕ್ಷಣಗಣನೆ ಶುರು!

  • ನ.7ರ ಬೆಳಿಗ್ಗೆ ಬಿದರಗೋಡಿನಿಂದ ಪಾದಯಾತ್ರೆ
  • ತೀರ್ಥಹಳ್ಳಿ ತಾಲೂಕಿನಲ್ಲಿ ಹೊಸ ಸಂಚಲನ!


ತೀರ್ಥಹಳ್ಳಿ: ಸಾವಿರಾರು ಮಲೆನಾಡಿಗರ ಬದುಕನ್ನು ಆತಂಕದಲ್ಲಿಟ್ಟಿರುವ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ಸಹಕಾರ ನಾಯಕ ಡಾ.ಮಂಜುನಾಥ ಗೌಡ ಸಾರಥ್ಯದಲ್ಲಿ ಹಮ್ಮಿಕೊಂಡಿರುವ ಕಲ್ಯಾಣ ನಡಿಗೆಗೆ ಕ್ಷಣಗಣನೆ ಆರಂಭವಾಗಿದೆ.
ನ.7ರ ಬೆಳಗ್ಗೆ 8ರಿಂದ ಪಾದಯಾತ್ರೆ ಬಿದರಗೋಡು ಶ್ರೀರಾಮ ಮಂದಿರದಿಂದ ಶುರುವಾಗಲಿದೆ. ನ.8 ಮತ್ತು 9ರಂದು ಪಾದಯಾತ್ರೆ ನಡೆದು ನ.9ರ ಬೆಳಿಗ್ಗೆ ತೀರ್ಥಹಳ್ಳಿ ತಾಲೂಕು ಕಚೇರಿ ಮುಂಭಾಗ ಬಹಿರಂಗ ಸಭೆ ನಡೆಯಲಿದೆ. ಸುಮಾರು 42 ಕಿ.ಮೀ ಪಾದಯಾತ್ರೆಯಲ್ಲಿ ಜೆಡಿಎಸ್, ಕಾಂಗ್ರೆಸ್, ರೈತ ಸಂಘ ಸೇರಿ ಪಕ್ಷಾತೀತವಾಗಿ ನಾಯಕರು, ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಈಗಾಗಲೇ ಸಿದ್ಧತೆ ನಡೆದಿದೆ.


ತೀರ್ಥಹಳ್ಳಿ ಪಟ್ಟಣ ಸೇರಿ ಹಳ್ಳಿ ಹಳ್ಳಿಗಳಲ್ಲಿ ಸಂಘಟನೆ ನಡೆದಿದೆ.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಉದ್ಘಾಟನೆ ಮಾಡಲಿದ್ದಾರೆ. ಯುವ ನಾಯಕ ಮಧು ಬಂಗಾರಪ್ಪ, ಯುವ ನಾಯಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ ಅನೇಕ ನಾಯಕರು ಭಾಗಿಯಾಗಲಿದ್ದಾರೆ.
ಮಲೆನಾಡಿನ ಬಹು ದೊಡ್ಡ ಹೋರಾಟಕ್ಕೆ ಇದು ವೇದಿಕೆಯಾಗಲಿದೆ.
ಜೊತೆಗೆ ಮಂಜುನಾಥ ಗೌಡರ ರಾಜಕೀಯ ಜೀವನಕ್ಕೆ ಹೊಸ ರೂಪ ಸಿಗಲಿದೆ ಎನ್ನಲಾಗಿದೆ.