Categories
ಮಲ್ನಾಡ್

ಶಾಸಕರೆ ಜೇಬಿಗೆ ಕೈ ಹಾಕಿದ ಕಳ್ಳ!

  • ತೀರ್ಥಹಳ್ಳಿಯಲ್ಲಿ ಘಟನೆ: ಹಿಗ್ಗಾಮುಗ್ಗಾ ಥಳಿತ
  • ಚುನಾವಣಾ ವಿಜಯೋತ್ಸವದ ವೇಳೆ ಕಳ್ಳನ ಆಟ

ತೀರ್ಥಹಳ್ಳಿ: ಮಾಮೂಲಿ ಜನರ ಜೇಬಿಗೆ ಕೈ ಹಾಕಿ ಕಡಿಯೋದು ಮಾಮೂಲಿ. ಆದರೆ ಇಲ್ಲೊಬ್ಬ ಕಳ್ಳ ಶಾಸಕರ ಜೇಬಿಗೆ ಕತ್ತರಿ ಹಾಕಲು ಹೋಗಿ ಇದೀಗ ಆಸ್ಪತ್ರೆಗೆ ಸೇರಿರುವ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ.


ಗುರುವಾರ ತೀರ್ಥಹಳ್ಳಿಯ ಟಿಎಪಿಸಿಎಂಎಸ್‍ನ ಚುನಾವಣೆ ಬೆಳಗ್ಗೆಯಿಂದ ಸಂಜೆವರೆಗೆ ನಡೆದಿತ್ತು. ರಾತ್ರಿ ವೇಳೆ ಫಲಿತಾಂಶ ಬಂದಿತ್ತು. ಈ ವೇಳೆ ಬಿಜೆಪಿ ನೇತೃತ್ವದ ಸಹಕಾರ ಭಾರತಿಯ ತಂಡ 10 ಸ್ಥಾನಗಳ ಮೂಲಕ ಗೆಲುವು ಸಾಧಿಸಿತ್ತು. ಈ ವೇಳೆ ಬಿಜೆಪಿ ನಾಯಕರು, ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ವಿಜಯೋತ್ಸವದ ವೇಳೆ ಅಭಿಮಾನಿಗಳು, ಕಾರ್ಯಕರ್ತರು ಶಾಸಕ ಆರಗ ಜ್ಞಾನೇಂದ್ರರನ್ನು ಹೆಗಲ ಮೇಲೆ ಹೊತ್ತು ಕುಣಿಯಲು ಶುರು ಮಾಡಿದರು. ಈ ವೇಳೆ ಕಳ್ಳನೊಬ್ಬ ಶಾಸಕರ ಜೇಬಿಗೆ ಕೈಹಾಕಿ ಹಣ ಕದಿಯಲು ಯತ್ನಿಸಿದ್ದಾನೆ. ಇದನ್ನು ಗಮನಿಸಿದ್ದ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಕಳ್ಳನಿಗೆ ಹಿಗ್ಗಾಮುಗ್ಗಾ ಹೊಡೆದಿದ್ದಾರೆ. ಬಳಿಕ ಆತನನ್ನು ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

Categories
ಮಲ್ನಾಡ್

2 ಕೋಟಿ ಮೌಲ್ಯದ ಚಿನ್ನಾಭರಣ ದರೋಡೆ!

  • ಚಿಕ್ಕಮಗಳೂರು ನಗರದಲ್ಲಿ ನಡೆದ ಘಟನೆ
  • ಮದುವೆಗೆ ಹೋಗಿ ಬರುವಾಗ ಚಿನ್ನ ಇಲ್ಲ

ಚಿಕ್ಕಮಗಳೂರು: ಮಲೆನಾಡಿನಲ್ಲಿ ಕಳ್ಳತನ, ದರೋಡೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ನಡುವೆ ಕಾಫಿ ಜಿಲ್ಲೆ ಚಿಕ್ಕಮಗಳೂರು ನಗರದಲ್ಲಿ ಮಗಳ ಮದುವೆ ಮುಗಿಸಿ ಬರುವಷ್ಟರಲ್ಲಿ ಮನೆಯಲ್ಲಿದ್ದ ಸುಮಾರು 2 ಕೆ.ಜಿ ಗೂ ಅಧಿಕ ಚಿನ್ನಾಭರಣ ಹಾಗೂ 10 ಕೆ.ಜಿಗೂ ಅಧಿಕ ಬೆಳ್ಳಿ ವಸ್ತುಗಳು ಕಳ್ಳತನವಾಗಿದೆ. ಇದರ ಮೌಲ್ಯ 2.5 ಕೋಟಿ ಮೌಲ್ಯದ ಚಿನ್ನಾಭರಣ ದರೋಡೆಯಾಗಿದೆ ಎಂದು ಹೇಳಲಾಗಿದೆ.
ಚಿಕ್ಕಮಗಳೂರು ನಗರದ ಎಂ.ಜಿ.ರಸ್ತೆಯ ಸ್ವಣಾರ್ಂಜಲಿ ಜ್ಯುವೆಲರಿ ಶಾಪ್ ಮಾಲೀಕ ಸುರೇಶ್ ಮನೆಯಲ್ಲಿ ಕಳ್ಳವಾಗಿದೆ. ಇವರು ಕರೋನಾ ಕಾರಣದಿಂದ ವ್ಯಾಪಾರದಲ್ಲಿ ನಷ್ಟವಾಗಿ ಅಂಗಡಿಯಲ್ಲಿದ್ದ ಚಿನ್ನವನ್ನು ಮನೆಗೆ ತಂದಿಟ್ಟಿದ್ದರು. ಅಕ್ಟೋಬರ್ 27ರಂದು ಹಾಸನದಲ್ಲಿ ಮಗಳ ಮದುವೆ ಇತ್ತು. ಕುಟುಂಬಸ್ಥರೆಲ್ಲಾ ಮದುವೆಗೆ ಹೋಗಿ ಬರುವಷ್ಟರಲ್ಲಿ ಮನೆಯಲ್ಲಿದ್ದ ಚಿನ್ನ-ಬೆಳ್ಳಿಯನ್ನು ಕಳ್ಳತನ ಮಾಡಲಾಗಿದೆ ಎಂದು ದೂರು ನೀಡಿದ್ದಾರೆ.


ಮನೆಯ ಹಿಂಭಾಗದ ರಾಜಕಾಲುವೆಯ ಕಡೆಯಿಂದ ಮನೆಯಿಂದ ಮನೆಗೆ ಹತ್ತಿ ರಮೇಶ್ ಅವರ ಬಾಲ್ಕನಿಗೆ ಕಳ್ಳರು ಮನೆಯ ಮೇಲಿನ ಬಾಗಿಲು ಮುರಿದು ಒಳ ಪ್ರವೇಶಿಸಿ ಲಾಕರ್‍ನಲ್ಲಿದ್ದ ಚಿನ್ನ-ಬೆಳ್ಳಿಯನ್ನು ದೋಚಿದ್ದಾರೆ. ಅಚ್ಚರಿ ಎಂದರೆ ಸುರೇಶ್ ಅಂಗಡಿಯಲ್ಲಿದ್ದ ಚಿನ್ನ ಮನೆಯಲ್ಲಿ ಲಾಕರ್‍ನಲ್ಲಿಟ್ಟು ಲಾಕರ್ ಕೀಯನ್ನು ಮನೆಯ ಡ್ರಾದಲ್ಲಿ ಇಟ್ಟಿದ್ದರು. ಇದು ಕಳ್ಳರಿಗೆ ಸಹಕಾರಿಯಾಗಿದೆ. ಮನೆ ಮುಂಭಾಗದಲ್ಲಿ ಸಿಸಿಟಿವಿ ಹಾಕಿದ್ದು, ಹಿಂಬಾಗಿಲಿನಿಂದ ಬಂದ ಕಾರಣ ಕಳ್ಳರ ಸುಳಿವು ಸಿಕ್ಕಿಲ್ಲ. ಚಿನ್ನವನ್ನು ಕದ್ದ ಕಳ್ಳರು ಬೆಳ್ಳಿಯ ಸಾಮಾನುಗಳನ್ನು ಹೊತ್ತೊಯ್ಯಲಾಗದೆ ಅಲ್ಲೇ ಬಿಟ್ಟು ಹೋಗಿದ್ದಾರೆಂದು ಹೇಳಲಾಗುತ್ತಿದೆ. ಒಂದೂವರೆ ತಿಂಗಳ ಹಿಂದಷ್ಟೆ ಹೊಸ ಮನೆಗೆ ಬಂದಿದ್ದ ಸುರೇಶ್ ಕುಟುಂಬ ಅಂಗಡಿಯಲ್ಲಿದ್ದ ಚಿನ್ನವನ್ನು ಮನೆಯಲ್ಲಿ ಜೋಪಾನ ಮಾಡಿಟ್ಟಿದ್ದರು. ಈ ಘಟನೆ ಇಡೀ ಮಲೆನಾಡಿಗೆ ಆತಂಕ ತಂದಿದೆ. ಪೊಲೀಸರು ಇನ್ನೂ ನಿರ್ಲಕ್ಷ್ಯ ಮಾಡಿದರೆ ಅಪಾಯ ಕಟ್ಟಿಟ್ಟಬುತ್ತಿ.

Categories
ಬೆಂಗಳೂರು

ಪಟಾಕಿ ಮಾರಾಟ ನಿಷೇಧ

  • ಬೆಳಕಿನ ಹಬ್ಬಕ್ಕಿಲ್ಲ “ಪಟಾಕಿ ರಂಗು”

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಗೆ ಈ ಬಾರಿ ಪಟಾಕಿ ರಂಗು ಇಲ್ಲ. ಕರೋನಾ ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪಟಾಕಿ ನಿಷೇಧಕ್ಕೆ ಸರ್ಕಾರ ಚಿಂತಿಸಿದೆ.
ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಯಡಿಯೂರಪ್ಪ ಅವರು, ದೀಪಾವಳಿಗೆ ಯಾವುದೇ ರೀತಿಯ ಪಟಾಕಿಗೆ ಅವಕಾಶ ಇಲ್ಲ. ಕರೋನಾ ಹೆಚ್ಚಾಗುತ್ತಿರುವುದರಿಂದ ಪಟಾಕಿ ನಿಷೇಧಕ್ಕೆ ನಿರ್ಧಾರ ಮಾಡಲಾಗಿದೆ. ಅಲ್ಲದೆ ಪಟಾಕಿ ನಿಷೇಧಿಸಿ ಸರ್ಕಾರದಿಂದ ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. ಈ ಮೂಲಕ ಈ ಬಾರಿ ಪಟಾಕಿ ರಂಗು ಮರೆಯಾಗಲಿದೆ. ಜನರ ಹಣ ಉಳಿಯಲಿದೆ.

Categories
ಮಲ್ನಾಡ್

ಮತ್ತೆ ಸಹಕಾರ ಭಾರತಿ ಮಡಿಲಿಗೆ ತೀರ್ಥಹಳ್ಳಿ ಟಿಎಪಿಸಿಎಂಎಸ್!

  • ಸಹಕಾರ ಭಾರತಿಗೆ 10, ಸಹಕಾರ ವೇದಿಕೆಗೆ 4 ಸ್ಥಾನ

ತೀರ್ಥಹಳ್ಳಿ: ತೀರ್ಥಹಳ್ಳಿ ಟಿಎಪಿಸಿಎಂಎಸ್ ಕೊನೆಗೂ ನಾಗರಾಜ ಶೆಟ್ಟರ ನಾಯಕತ್ವದ ಸಹಕಾರಿ ಭಾರತಿ ಪಾಲಾಗಿದೆ.
ನ.5ರಂದು ನಡೆದ ಚುನಾವಣೆ ಬೆಳೆಗ್ಗೆಯಿಂದಲೇ ಚುರುಕು ಪಡೆದಿತ್ತು. ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಶಾಸಕ ಆರಗ ಜ್ಞಾನೇಂದ್ರ, ಸಹಕಾರಿ ನಾಯಕ ಮಂಜುನಾಥ ಗೌಡ ಸೇರಿ ಎಲ್ಲಾ ತಾಲೂಕಿನ ನಾಯಕರ ನಡುವೆ ನಡೆದ ಚುನಾವಣೆಯಲ್ಲಿ ಸಹಕಾರಿ ಭಾರತಿ ಚುಕ್ಕಾಣಿ ಹಿಡಿದಿದೆ.

ಸಹಕಾರ ಭಾರತಿ ತಂಡ ಒಟ್ಟು ಒಂಬತ್ತು ಸ್ಥಾನಗಳನ್ನು ತನ್ನದಾಗಿಸಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದಿದೆ ಗೆಲುವಿನ ಜಯಭೇರಿ ಬಾರಿಸಿದೆ.
ಚುನಾವಣೆ ನಡೆದ ಎಂಟು ಸ್ಥಾನಗಳಲ್ಲಿ ಸ್ಥಾನದಲ್ಲಿ ಷೇರುದಾರರ ಮತದಾನದಿಂದ ಆರು ಮಂದಿ ಸಹಕಾರ ಭಾರತಿ ಸದಸ್ಯರು ಆಯ್ಕೆಯಾಗಿದ್ದಾರೆ. ಸೊಸೈಟಿ ಮೂಲಕ ಇಬ್ಬರು ಮತ್ತು ಒಬ್ಬರು ಅವಿರೋಧ ಆಯ್ಕೆಯಾಗಿದ್ದಾರೆ. ವಿಜಯದೇವ್ ನಾಯಕತ್ವದ ಸಹಕಾರ ವೇದಿಕೆ ಎರಡು ಸ್ಥಾನ ಷೇರುದಾರರಿಂದ ಮತ್ತು 2 ಸ್ಥಾನ ಸೊಸೈಟಿ ಕಡೆಯಿಂದ ಪಡೆದಿದೆ.
ಸೊಸೈಟಿಯ ಮತದಾನದ ಮೂಲಕ ಎಂಟು ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರುಗಳು ಸಹಕಾರ ಭಾರತಿ ಹಾಗೂ ಸಹಕಾರ ವೇದಿಕೆಯಿಂದ ಚುನಾವಣೆಯನ್ನು ಎದುರಿಸಿದ್ದರು. ಇದರಲ್ಲಿ ಕಡಿದಾಳ್ ತಾರಾನಾಥ್, ಆರ್.ಆರ್.ಚಂದ್ರಪ್ಪ,ಅರಳಸುರಳಿ ನಾರಾಯಣ್ ರಾವ್,ಅಗಳಬಾಗಿಲು‌ ಮಹೇಶ್, ಕೇಳೂರು ರಮೇಶ್ ಐದು ಮಂದಿ 23 ಮತದಲ್ಲಿ ತಲಾ 12 ಮತಗಳನ್ನು ಪಡೆದಿದ್ದರು. ಇಲ್ಲಿ ಸಹಕಾರ ವೇದಿಕೆ ಮೇಲುಗೈ ಸಾಧಿಸಿತ್ತು.ಆದರೆ ನಾಲ್ಕು ಸ್ಥಾನ ಮಾತ್ರ ಆಯ್ಕೆಯಾಗಬೇಕಿದ್ದರಿಂದ ಓರ್ವರನ್ನು ಚೀಟಿ ಮೂಲಕ ಆಯ್ಕೆ ಮಾಡಲು ಚೀಟಿ ಹಾಕಿದಾಗ ಅಗಳಬಾಗಿಲು ಮಹೇಶ್ ಆಯ್ಕೆಯಾದರು. ಹೀಗಾಗಿ ಸಹಕಾರ ವೇದಿಕೆಗೆ ಒಂದು ಸ್ಥಾನ‌ ಕಡಿತಗೊಂಡಿತು.


ಯಾರು ಯಾರು ಆಯ್ಕೆ? : ಸಹಕಾರ ಭಾರತಿಯಿಂದ ನಾಗರಾಜ ಶೆಟ್ಟಿ, ಗಿರಿಯಪ್ಪ ಗೌಡ ,ರಾಜ್ ಕಮಲ್, ಚಂದ್ರಶೇಖರ.ಎಂ.ವಿ.,ನಾಗರತ್ನ ಮುರುಘರಾಜ್, ಮೋಹನ್. ಟಿ,ಚಂದ್ರನಾಯ್ಕ್(ಅವಿರೋಧ ಆಯ್ಕೆ),ಅರಳಸುರಳಿ ನಾರಾಯಣ್ ರಾವ್, ರಮೇಶ್ ಕೇಳೂರು ಗೆಲುವಿನ ನಗೆ ಬೀರಿದ್ದಾರೆ.


ಸಹಕಾರ ವೇದಿಕೆಯಿಂದ ರೇವತಿ ಅನಂತ ಮೂರ್ತಿ ಮಂಗಳ ಗೋಪಿ, ತಾರಾನಾಥ್, ಆರ್.ಆರ್.ಚಂದ್ರಪ್ಪ ಟಿಎಪಿಸಿಎಂಎಸ್ ನ ನೂತನ ನಿರ್ದೇಶಕರಾಗಿದ್ದಾರೆ.
ಸರ್ಕಾರದ ನಾಮನಿರ್ದೇಶನ ಸದಸ್ಯರಾಗಿರುವ ವಿ.ಎಸ್.ಮೋಹನ್ ಸಹಕಾರ ಭಾರತಿ ತಂಡದವರಾಗಿದ್ದರಿಂದ ಸಹಕಾರ ಭಾರತಿ 10 ಸದಸ್ಯರ ಮೂಲಕ ಟಿಎಪಿಸಿಎಂಎಸ್ ಚುಕ್ಕಾಣಿ ಹಿಡಿದಿದೆ. ನಾಗರಾಜ ಶೆಟ್ಟರ ಸಾರಥ್ಯ ಮುಂದುವರಿಯಲಿದೆ.
ಚುನಾವಣೆ ವೇಳೆ ಎಲ್ಲಾ ನಾಯಕರು ಭಾಗವಹಿಸಿದ್ದರು. ಭಾರಿ ಕುತೂಹಲ ಮೂಡಿತ್ತು. ಈ ಫಲಿತಾಂಶದ ಬಗ್ಗೆ Nammur Express ವರದಿ ಕೂಡ ಮಾಡಿತ್ತು.

Categories
ಬೆಂಗಳೂರು

ದೇಶದಲ್ಲಿ ಆನ್‍ಲೈನ್ ಗೇಮ್ ಬಂದ್?!

  • ಆಂಧ್ರ ಬಳಿಕ ತಮಿಳುನಾಡು ಸರ್ಕಾರ ನಿಷೇಧ
  • ದೇಶದ ತಾರೆಗಳೇ ಈ ಜೂಜಿನ ರಾಯಭಾರಿಗಳು!

ಚೆನ್ನೈ: ಕರೋನಾ ಇಡೀ ದೇಶದ ಅರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡಿದೆ. ಪ್ರತಿ ಊರಲ್ಲೂ ಯುವ ಜನತೆ ಉದ್ಯೋಗ ಕಳೆದುಕೊಂಡಿದ್ದಾರೆ. ಆದರೆ ಆನ್‍ಲೈನ್ ಗೇಮ್‍ಗಳು ಯುವ ಜನತೆಯ ಬದುಕು ಹಾಳು ಮಾಡುತ್ತಿದೆ. ಹೀಗಾಗಿ ಅನೇಕ ರಾಜ್ಯಗಳು ಆನ್‍ಲೈನ್ ಗೇಮ್ ನಿಷೇಧ ಮಾಡಿವೆ. ಈಗ ತಮಿಳುನಾಡು ಸರ್ಕಾರ ಈಗ ಎಲ್ಲಾ ರೀತಿಯ ಆನ್‍ಲೈನ್ ಗೇಮ್‍ಗಳನ್ನು ನಿಷೇಧ ಮಾಡಲು ನಿರ್ಧರಿಸಿದೆ.


ದುಡ್ಡು ನೀಡಿ ಆನ್‍ಲೈನ್ ಗೇಮ್, ಫ್ಯಾಂಟಸಿ ಲೀಗ್, ಆಪ್ ಆಧಾರಿತ ಗೇಮಿಂಗ್ ನಿಷೇಧಕ್ಕೆ ತಮಿಳುನಾಡು ಸರ್ಕಾರ ಮುಂದಾಗಿದೆ. ಆನ್ಲೈನ್ ಜೂಜು ಪ್ರಚಾರ ಮಾಡುತ್ತಿರುವ ಈ ಸೆಲೆಬ್ರಿಟಿಗಳಿಂದ ಜನ ಸಾಮಾನ್ಯರಿಗೆ ತೊಂದರೆಯಾಗಿವೆ ಸಾವು ನೋವು ಸಂಭವಿಸಿದೆ ಎಂದು ನಟ ಸುದೀಪ್ ಸೇರಿ ಅನೇಕ ಸೆಲೆಬ್ರಿಟಿಗಳಿಗೆ ಮದ್ರಾಸ್ ಹೈಕೋರ್ಟ್ ನೋಟಿಸ್ ನೀಡಿದೆ. ಹೀಗಾಗಿ ದುಡ್ಡು ಕೊಟ್ಟು ಆಡುವಂಥ ಎಲ್ಲಾ ಬಗೆಯ ಆನ್ ಲೈನ್ ಗೇಮಿಂಗ್ ಮೇಲೆ ನಿಷೇಧ ಹೇರಲು ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಪಳನಿಸ್ವಾಮಿ ಹೇಳಿದ್ದಾರೆ.


ಆನ್‍ಲೈನ್ ರಮ್ಮಿ, ನಮ್ಮ 11, ಡ್ರೀಮ್ 11 ಸೇರಿದಂತೆ ಅನೇಕ ಆನ್‍ಲೈನ್ ಆಟದ ಚಟಕ್ಕೆ ಬಿದ್ದು ಅನೇಕ ಮಂದಿ ಹಣ ಕಳೆದುಕೊಂಡಿದ್ದಲ್ಲದೆ, ಕೆಲ ಆತ್ಮಹತ್ಯೆ ಪ್ರಕರಣಗಳು ನಡೆದಿವೆ. ಸರ್ಕಾರ ಏನು ಕ್ರಮ ತೆಗೆದುಕೊಂಡಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಸಿಎಂ ಉತ್ತರಿಸಿದ್ದಾರೆ.


ಶೀಘ್ರದಲ್ಲೇ ಈ ಕುರಿತಂತೆ ಕಾನೂನು ರೂಪಿಸಿ, ಅಗತ್ಯ ಕ್ರಮ ಜರುಗಿಸಲಾಗುತ್ತದೆ. ಇಂಥ ಗೇಮಿಂಗ್, ಬೆಟ್ಟಿಂಗ್‍ನಲ್ಲಿ ತೊಡಗಿದವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ, ಜೈಲಿಗೆ ಹಾಕಲಾಗುವುದು ಎಂದು ಹೇಳಿದರು.


ಆಂಧ್ರಪ್ರದೇಶದಲ್ಲಿ ಆನ್‍ಲೈನ್ ಗೇಮಿಂಗ್, ಆನ್ ಲೈನ್ ಬೆಟ್ಟಿಂಗ್ ನಿಷೇಧಿಸಲಾಗಿದೆ. ಈ ಕುರಿತಂತೆ ಕೂಡಲೇ ಕ್ರಮ ಜರುಗಿಸಿದ್ದು, ಕೇಂದ್ರ ಮಾಹಿತಿ ಮತ್ತು ಟೆಲಿಕಾಂ ಸಚಿವ ರವಿ ಶಂಕರ್ ಪ್ರಸಾದ್ ಅವರಿಗೆ ಅಕ್ಟೋಬರ್ 27ರಂದೇ ಪತ್ರ ಬರೆದಿದ್ದು, ಆನ್ ಲೈನ್ ಗೇಮಿಂಗ್ ನಿಷೇಧ ಮಾಡಲಾಗಿದೆ ಎಂದು ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ. ಅಚ್ಚರಿ ಎಂದರೆ ದೇಶದ ಪ್ರಮುಖ ಸೆಲೆಬ್ರಿಟಿಗಳು ಈ ಜೂಜಿನ ಆಟಕ್ಕೆ ರಾಯಭಾರಿಗಳಾಗಿರುವುದು ಮಾತ್ರ ದುರಂತ.

Categories
ಬೆಂಗಳೂರು

ಮಸೀದಿಗಳಲ್ಲಿ ಇನ್ನು ಮೈಕ್ ಬಳಕೆ ಬಂದ್!?

  • ಮಕ್ಕಳು, ವಯಸ್ಸಾದವರಿಗೆ ತೊಂದರೆ ಹಿನ್ನೆಲೆ
  • ಪೊಲೀಸ್ ಇಲಾಖೆ ಆದೇಶ

ಬೆಂಗಳೂರು: ರಾಜ್ಯಾದ್ಯಂತ ಮಸೀದಿಗಳಲ್ಲಿ ಅಳವಡಿಸಿರುವ ಅನಧಿಕೃತ ಧ್ವನಿವರ್ಧಕಗಳನ್ನು ತೆರವು ಮಾಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶ ಮಾಡಿದ್ದಾರೆ. ಈ ಮೂಲಕ ಇನ್ಮುಂದೆ ಮಸೀದಿಗಳಲ್ಲಿ ಧ್ವನಿ ವರ್ಧಕ ಬಳಕೆಗೆ ನಿಷೇಧ ಹೇರಿದಂತಾಗಿದೆ.


ಕಳೆದ ತಿಂಗಳು ವಕೀಲರಾದ ಹರ್ಷ ಮುತಾಲಿಕ್, ಮಸೀದಿಯಲ್ಲಿನ ಧ್ವನಿ ವರ್ಧಕಗಳಿಂದ ತೊಂದರೆ ಆಗುತ್ತಿದೆ. ದಿನಕ್ಕೆ ಐದಾರು ಬಾರಿ ಪ್ರಾರ್ಥನೆ ಮಾಡಲಾಗುತ್ತದೆ. ಇದ್ದರಿಂದ ಮಕ್ಕಳಿಗೆ, ವಯಸ್ಸಾದವರಿಗೆ, ಹೃದಯ ಸಂಬಂಧಿ ಖಾಯಿಲೆ ಇರುವವರಿಗೆ ಹೆಚ್ಚಿನ ತೊಂದರೆಯಾಗುತ್ತಿದೆ. ಹಾಗಾಗಿ ಮಸೀದಿಯಲ್ಲಿ ಧ್ವನಿವರ್ಧಕ ಬಳಕೆ ನಿಷೇಧ ಮಾಡಬೇಕು ಎಂದು ದೂರು ನೀಡಿದ್ದರು. ಈ ದೂರಿನ ಹಿನ್ನೆಲೆ ಮಹತ್ವದ ಆದೇಶ ಹೊರ ಬಿದ್ದಿದೆ.

Categories
ಕಲಬುರಗಿ

ಮಾಜಿ ಸಚಿವ ಕುಲಕರ್ಣಿ ಕೊನೆಗೂ ಅರೆಸ್ಟ್!

  • ಒಂದು ದಿನ ನ್ಯಾಯಾಂಗ ಬಂಧನ
  • ಹಿಂಡಲಗ ಜೈಲಿಗೆ ರವಾನೆ

ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿ ಕೊನೆಗೂ ಬಂಧನಕ್ಕೆ ಒಳಗಾಗಿದ್ದಾರೆ.
ಜಿಲ್ಲಾ ಪಂಚಾಯತ್ ಸದಸ್ಯನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶೆ ಪಂಚಾಕ್ಷರಿ ಈ ಆದೇಶ ಹೊರಡಿಸಿದ್ದು, ಕುಲಕರ್ಣಿ ಹಿಂಡಲಗಾ ಜೈಲು ಸೇರಿದ್ದಾರೆ.
ಧಾರವಾಡದ ಎರಡನೇ ಹೆಚ್ಚುವರಿ ಪ್ರಧಾನ ಮತ್ತು ಸತ್ರ‌ ನ್ಯಾಯಾಲಯ ಈ ಆದೇಶ ನೀಡಿದೆ. ಹೀಗಾಗಿ ಧಾರವಾಡದಿಂದ ಬೆಳಗಾವಿಗೆ ಹಿಂಡಲಗಾ ಜೈಲಿಗೆ ಸಿಬಿಐ ಅಧಿಕಾರಿಗಳು ಕರೆದುಕೊಂಡು ಹೋಗಿದ್ದಾರೆ.


ಧಾರವಾಡ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಯೋಗೇಶಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ ಕುಲಕರ್ಣಿ, ಸಹೋದರ ವಿಜಯ ಕುಲಕರ್ಣಿ ಸೇರಿದಂತೆ ಮಾಜಿ ಸಚಿವರ ಆಪ್ತನ ಮನೆ ಮೇಲೆ ಸಿಬಿಐ ಅಧಿಕಾರಿಗಳು ಗುರುವಾರ ಬೆಳಗಿನ ಜಾವ ದಾಳಿ ನಡೆಸಿ, ಮೂವರನ್ನು ಸುದೀರ್ಘ ವಿಚಾರಣೆಗೊಳಪಡಿಸಿದ್ದಾರೆ.
ಧಾರವಾಡದ ಕಲ್ಯಾಣನಗರದಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಮನೆ ಮೇಲೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳ ತಂಡ, ಉಪನಗರ ಠಾಣೆಯಲ್ಲಿ ವಿಚಾರಣೆಗೊಳಪಡಿಸಿತು. ಏತನ್ಮಧ್ಯೆ, ಸಚಿವರ ಸಹೋದರ ಹುಬ್ಬಳ್ಳಿಯ ಪ್ರಗತಿ ಕಾಲನಿಯಲ್ಲಿರುವ ಮನೆ ಮೇಲೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳ ತಂಡ ಅವರನ್ನೂ ವಿಚಾರಣೆಗೆ ಕರೆದ್ಯೊಯ್ದಿದಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆಯೇ, ಉಪನಗರ ಠಾಣೆ ಎದುರು ಹೈಡ್ರಾಮಾವೇ ನಡೆಯಿತು. ಧಾರವಾಡ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಅನಿಲಕುಮಾರ್ ಪಾಟೀಲ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಠಾಣೆ ಎದುರು ಜಮಾಯಿಸಿದ ಪರಿಣಾಮ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು.
ವಿನಯ ಆಪ್ತನ ಬಂಧನ
ಇಷ್ಟೆಲ್ಲ ಪ್ರಹಸನಗಳ ಮಧ್ಯೆಯೇ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಆಪ್ತ ಶ್ರೀಷ್ ಪಾಟೀಲ್‍ನನ್ನು ಆತನ ಮಾಳಮಡ್ಡಿಯ ನಿವಾಸದಿಂದ ಸಿಬಿಐ ಅಧಿಕಾರಿಗಳು ಬಂಧಿಸಿ ವಿಚಾರಣೆಗೊಳಪಡಿಸಿದರು.


ಏನಿದು ಘಟನೆ..?:2016 ಜೂನ್ 15ರಂದು ತನ್ನದೇ ಮಾಲೀಕ್ವತದ ಉದಯ್ ಜಿಮ್‍ನಲ್ಲಿ ಜಿಪಂ ಅಧ್ಯಕ್ಷ ಯೋಗೇಶಗೌಡ ಗೌಡರ್‍ನನ್ನು ಬರ್ಬರವಾಗಿ ಹತ್ಯೆಗೈಯಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಒಟ್ಟು 8 ಜನರ ವಿರುದ್ಧ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು.
ಈ ಪೈಕಿ ಮಾಜಿ ಸಚಿವ ವಿನಯ ಕುಲಕರ್ಣಿ ಒಂದನೇ ಆರೋಪಿಯಾಗಿದ್ದರೇ, ಕ್ರಮವಾಗಿ ಬಸವರಾಜ ಮುತಗಿ, ವಿಕಾಸ ಕಲಬುರ್ಗಿ, ಈರಣ್ಣ ಮಳಿವಾಡ, ಬಸಯ್ಯ ಹಿರೇಮಠ, ಬಾಬು ಕಟಗಿ, ಅಮಿತ ದೊಡ್ಡಮನಿ ಹಾಗೂ ಯೋಗೇಂದ್ರ ಬಾಬು ಉರ್ಫ್ ಬಾಬು ವಿಕೆ ಆರೋಪಿಗಳಾಗಿದ್ದರು.


ಸಾಕ್ಷ್ಯ ನಾಶ ಆರೋಪ
ಸಾಕ್ಷ್ಯ ನಾಶಪಡಿಸುವ ಆರೋಪ ಎದುರಿಸುತ್ತಿದ್ದ ಮಾಜಿ ಸಚಿವ ವಿನಯ ಕುಲಕರ್ಣಿ, ವಿಚಾರಣೆ ಈವರೆಗೂ ಅಂತ್ಯವಾಗದೇ ಇರುವ ಹಿನ್ನೆಲೆಯಲ್ಲಿ ಗುರುವಾರ ಸಿಬಿಐ ಅಧಿಕಾರಿಗಳು ಮತ್ತೇ ಅವರನ್ನು ವಿಚಾರಣೆಗೊಳಪಡಿಸಿದ್ದರು.
ಇನ್ಸಪೆಕ್ಟರ್‍ಗಾಗಿ ಹುಡುಕಾಟ!:
ಯೋಗೇಶಗೌಡ ಹತ್ಯೆ ನಡೆದ ಸಂದರ್ಭದಲ್ಲಿ ತನಿಖಾಧಿಕಾರಿಯಾಗಿದ್ದ ಚನ್ನಕೇಶವ ಟಿಂಗರಿಕರ್ ಸದ್ಯ ಹುಬ್ಬಳ್ಳಿಯ ಸಿಸಿಬಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ವೈದ್ಯಕೀಯ ರಜೆಯ ಮೇಲೆ ತೆರಳಿರುವ ಚನ್ನಕೇಶಗಾಗಿ ಸಿಬಿಐ ಅಧಿಕಾರಿಗಳು ಬೆಳಗ್ಗೆಯಿಂದಲೇ ಹುಡುಕಾಟ ನಡೆಸಿದ್ದಾರೆ.
ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಮಾತನಾಡಿ, ಈ ಹಿಂದೆ ಬಿಜೆಪಿಯವರು ಸಿಬಿಐ ಕಾಂಗ್ರೆಸ್ ಕೈಗೊಂಬೆ ಅಂತಿದ್ರು, ಈಗ ಕಾಂಗ್ರೆಸ್‍ನವರು ಸಿಬಿಐ ಬಿಜೆಪಿ ಕೈಗೊಂಬೆ ಅನ್ನುತ್ತಿದ್ದಾರೆ.
ಇದು ರಾಜಕೀಯ ಪ್ರೇರಿತವಾಗಬಾರದು. ಕಾನೂನು ಎಲ್ಲರಿಗೂ ಒಂದೇ. ಇದರಲ್ಲಿ ರಾಜಕೀಯ ಮಾಡಬಾರದು. ಸಿಬಿಐ ಆಗಲಿ ಯಾರೇ ಆಗಲಿ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಕಾನೂನು ಎಲ್ಲರಿಗೂ ಒಂದೇ. ಇಂತಹ ಸಂಸ್ಥೆಗಳನ್ನು ಯಾವುದೇ ಪಕ್ಷಗಳು ಅಧಿಕಾರಕ್ಕೆ ಬಂದಾಗ ದುರುಪಯೋಗಪಡಿಸಿಕೊಳ್ಳಬಾರದು. ವಿನಯ ಕುಲಕರ್ಣಿ ಬಿಜೆಪಿಗೆ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದೇ ಕಾರಣಕ್ಕೆ ಇಂದು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತೀವೆ ಎಂದೂ ಹೊರಟ್ಟಿ ಆರೋಪಿಸಿದರು.


ಬಿಜೆಪಿ ಹೈಕಮಾಂಡ್ ಭೇಟಿಗೆ ವಿನಯ ಕುಲಕರ್ಣಿ ಹೋಗಿದ್ದು ನಿಜ. ಆದರೆ ಯಾರು ಯಾರನ್ನು ಕರೆದಿದ್ದರು ಎಂಬುದು ಗೊತ್ತಿಲ್ಲ. ಈ ದಾಳಿ ರಾಜಕೀಯ ಒತ್ತಡದಿಂದಲೇ ಆಗಿದೆ ಎಂದೂ ಅವರು ದೂರಿದರು.
ವಿನಯ ಹಾಗೂ ವಿಜಯ ಕುಲಕರ್ಣಿಯವರನ್ನು ವಶಕ್ಕೆ ನೀಡಿಸುವಂತೆ ಸಿಬಿಐ ಅಧಿಕಾರಿಗಳು ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

Categories
ಬೆಂಗಳೂರು

ದೀಪಾವಳಿಗೆ ಬೆಲೆ ಏರಿಕೆ ಬಿಸಿ!

  • ತರಕಾರಿ, ಹಣ್ಣು, ಅಗತ್ಯ ವಸ್ತು ಬೆಲೆ ಏರಿಕೆ
  • ಕರೋನಾ ನಡುವೆ ಮತ್ತೆ ಜನತೆಗೆ ಶಾಕ್

ಬೆಂಗಳೂರು: ದೀಪಾವಳಿ ಹಬ್ಬ ಈ ಬಾರಿ ಸಾರ್ವಜನಿಕರಿಗೆ ದುಬಾರಿಯಾಗುವ ಸಾಧ್ಯತೆಗಳಿವೆ. ಕರೋನಾ ನಡುವೆ ಬೆಲೆ ಏರಿಕೆಯ ಬಿಸಿ ಜನ ಸಾಮಾನ್ಯರಿಗೆ ಜೋರಾಗಿಯೇ ತಟ್ಟಿದೆ. ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗಿದ್ದು ಜನರನ್ನು ಕಂಗಾಲಾಗಿಸಿದೆ.
ತರಕಾರಿ, ಬೇಳೆ ಕಾಳುಗಳ ಬೆಲೆ ದುಬಾರಿಯಾಗಿದ್ದು, ದೀಪಾವಳಿ ಹೊಸ್ತಿಲಲ್ಲಿ ಎದುರಾದ ಬೆಲೆ ಏರಿಕೆ ಬಡ ಹಾಗೂ ಮಧ್ಯಮ ವರ್ಗದ ಜನರು ಅಕ್ಷರಶಃ ತತ್ತರಿಸುವಂತೆ ಮಾಡಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬೆಳೆಯಲಾಗುತ್ತದೆ. ಆದರೆ ಈ ಬಾರಿ ಪ್ರವಾಹದಿಂದ ಬೆಳೆ ನೀರು ಪಾಲಾಗಿದೆ. ಇತ್ತ ಕರೋನಾ ಕೂಡ ಜನರ ಹಣಕಾಸಿನ ವ್ಯವಹಾರವನ್ನು ಶೂನ್ಯಕ್ಕಿಳಿಸಿದೆ. ಆದ್ದರಿಂದ ಒಂದು ಕಡೆ ಹಣ ಇಲ್ಲ, ಇನ್ನೊಂದು ಕಡೆ ಬೆಳೆ ಇಲ್ಲ. ಹೀಗಾಗಿ ಈ ಬಾರಿಯ ದೀಪಾವಳಿ ಕೈ ಸುಡಲಿದೆ ಎಂದು ಹೇಳಲಾಗಿದೆ.


ಪ್ರವಾಹದಿಂದ ತರಕಾರಿ ಸೇರಿದಂತೆ ಇನ್ನಿತರ ಬೆಳೆ ನೀರು ಪಾಲಾಗಿದೆ. ಪರಿಣಾಮ ತರಕಾರಿ, ಆಹಾರ ಧಾನ್ಯಗಳ ಕೊರತೆ ಸೃಷ್ಟಿಯಾಗಿ, ಬೆಲೆ ಏರಿಕೆಯಾಗಿದೆ. ಈರುಳ್ಳಿ ಬೆಲೆ ಕೆಜಿಗೆ 80ರಿಂದ 100 ರೂಪಾಯಿ, ಆಲೂಗಡ್ಡೆ 50 ರಿಂದ 70 ರೂಪಾಯಿ, ಬೆಂಡೆಕಾಯಿ, ಚವಳಿಕಾಯಿ, ಹಾಗಲಕಾಯಿ, ಬದನೆಕಾಯಿ 80ರಿಂದ 100 ರೂಪಾಯಿ ಕೆಲವೆಡೆ ಇದೆ. ಇನ್ನು ಹೂವು ಕೂಡ ದುಬಾರಿಯಾಗಿದೆ. ಬೇಳೆ, ದವಸ ಧಾನ್ಯಗಳ ಬೆಲೆ ಕೂಡ ಹೆಚ್ಚಾಗುವ ಸಾಧ್ಯತೆ ಇದೆ.

Categories
ಬೆಂಗಳೂರು

ರಾಜ್ಯ ಸಾರಿಗೆ ನೌಕರರ “ಹೋರಾಟ ಶುರು”

  • ಖಾಸಗೀಕರಣದ ವಿರುದ್ಧ ಆಕ್ರೋಶ

ಬೆಂಗಳೂರು: ರಾಜ್ಯ ಸಾರಿಗೆ ಸಂಸ್ಥೆಯನ್ನು ಖಾಸಗಿ ಸಹಭಾಗಿತ್ವದ ಹೆಸರಿನಲ್ಲಿ ಖಾಸಗೀಕರಣ ಮಾಡುವುದನ್ನು ನಿಲ್ಲಿಸಬೇಕು. ಕರೋನಾ ಸಂಕಷ್ಟದಲ್ಲಿ ಸಾರಿಗೆ ನೌಕರರಿಗೆ ಪೂರ್ಣ ವೇತನ ಒದಗಿಸಬೇಕು ಮುಂತಾದ ವಿವಿಧ ಬೇಡಿಕೆಗಳನ್ನ ಮುಂದಿಟ್ಟು ರಾಜ್ಯ ಸಾರಿಗೆ ನೌಕರರು ಗುರುವಾರ ಪ್ರತಿಭಟನೆ ಶುರು ಮಾಡಿದ್ದಾರೆ.
ಸಿಐಟಿಯು ಕಾರ್ಮಿಕ ಸಂಘಟನೆಯ ವತಿಯಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಒಕ್ಕೂಟ ನೇತೃತ್ವದಲ್ಲಿ 4 ಸಾರಿಗೆ ನಿಗಮಗಳ ಕಾರ್ಮಿಕರು ಗುರುವಾರ ಫ್ರೀಡಂ ಪಾರ್ಕ್‍ನಲ್ಲಿ ಬೆಳಗ್ಗೆ 11:30 ಗಂಟೆಗೆ ಪ್ರತಿಭಟನೆ ಪ್ರಾರಂಭವಾಗಿದ್ದು, ಸರ್ಕಾರಕ್ಕೆ ಮತ್ತು ಆಡಳಿತ ವರ್ಗಕ್ಕೆ ಮನವಿ ಪತ್ರ ಸಲ್ಲಿಸಿದ್ದಾರೆ.


ಸಾರಿಗೆ ನಿಗಮಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸರಿಯಾದ ಸುರಕ್ಷತಾ ಸಾಮಗ್ರಿಗಳನ್ನ ಒದಗಿಸಿಲ್ಲ. 50ಕ್ಕೂ ಹೆಚ್ಚು ಕಾರ್ಮಿಕರು ಕೊರೋನಾಗೆ ಬಲಿಯಾಗಿದ್ದಾರೆ. ಮೃತರ ಕುಟುಂಬಗಳಿಗೆ ಸರ್ಕಾರವೇ 30 ಲಕ್ಷ ರೂ ಪರಿಹಾರ ಘೋಷಿಸಿದರೂ ನಿಗಮಗಳಿಂದ ಈ ಆದೇಶ ಜಾರಿ ಆಗಿಲ್ಲ. ಕೂಡಲೇ ಪರಿಹಾರ ಒದಗಿಸುವ ವ್ಯವಸ್ಥೆ ಮಾಡಬೇಕ. ನಿಗಮಗಳಲ್ಲಿ ವಾಹನಗಳ ಕಾರ್ಯಾಚರಣೆ ಯಥಾಸ್ಥಿತಿಗೆ ಬರುವವರೆಗೂ ಕಾರ್ಮಿಕರಿಗೆ ಪೂರ್ಣ ವೇತನ ನೀಡಬೇಕು. ಕಾರ್ಮಿಕರು ಗಳಿಸಿದ್ದ ರಜೆಗಳನ್ನು ಅವರ ಖಾತೆಗೆ ಪುನಃ ವಾಪಸ್ ನೀಡಬೇಕು ಎಂಬ ಹತ್ತಾರು ಬೇಡಿಕೆ ಮುಂದಿಟ್ಟು ಹೋರಾಟ ನಡೆಸುತ್ತಿದ್ದಾರೆ.

Categories
Uncategorized

ಮಾಜಿ ಸಚಿವ ವಿನಯ್ ಕುಲಕರ್ಣಿ ವಿಚಾರಣೆ!

  • ಜಿಪಂ ಸದಸ್ಯನ ಕೊಲೆ ಪ್ರಕರಣದ ತನಿಖೆ
  • ಸಿಬಿಐ ಅಧಿಕಾರಿಗಳಿಂದ ನಾಯಕನ ವಿಚಾರಣೆ

ಹುಬ್ಬಳ್ಳಿ: ರಾಜ್ಯದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಮತ್ತು ಅವರ ಸಹೋದರನ ಸಿಬಿಐ ವಿಚಾರಣೆ ಭಾರೀ ಕುತೂಹಲ ಮೂಡಿಸಿದೆ. ಜೊತೆಗೆ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಒಂದೆಡೆ ವಿಚಾರಣೆ ನಡೆಯುತ್ತಿದ್ದರೆ ಇನ್ನೊಂದೆಡೆ ಹೊರಗೆ ಪ್ರತಿಭಟನೆ ನಡೆಯುತ್ತಿದೆ.


ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಮಾತನಾಡಿ, ಸಿಬಿಐ ರಾಜಕೀಯ ದಾಳವಾಗಬಾರದು ಎಂದು ಪ್ರತಿಕ್ರಿಯಿಸಿದ್ದಾರೆ. ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳು ಗುರುವಾರ ಬೆಳಗ್ಗೆ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಧಾರವಾಡದ ಬರಾಕೂಟ್ರಿಯಲ್ಲಿರುವ ನಿವಾಸದಲ್ಲಿ ವಿನಯ್ ಕುಲಕರ್ಣಿ ಅವರನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಕುಲಕರ್ಣಿ ಸಹೋದರ ವಿಜಯ್ ಕುಲಕರ್ಣಿ ಅವರನ್ನು ಕೂಡ ವಶಕ್ಕೆ ಪಡೆದಿದ್ದಾರೆ. ಈ ವಿಷಯ ರಾಜ್ಯ ಮಟ್ಟದಲ್ಲಿ ಭಾರೀ ಸುದ್ದಿ ಮಾಡಿದೆ. ಸಿಬಿಐ ಅಧಿಕಾರಿ ರಾಕೇಶ್ ರಂಜನ್ ನೇತೃತ್ವದ ತಂಡ ವಶಕ್ಕೆ ಪಡೆದುಕೊಂಡಿದ್ದು, ಧಾರವಾಡದ ಉಪನಗರ ಪೆÇಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಯಿತು.


ಮಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಸಚಿವ ಜಗದೀಶ್ ಶೆಟ್ಟರ್, ಕಾನೂನು ಪ್ರಕಾರ ಸಿಬಿಐ ವಿಚಾರಣೆ ನಡೆಯುತ್ತಿದೆ. ಇದಕ್ಕಿಂತ ಹೆಚ್ಚು ಹೇಳಲು ಸಾಧ್ಯ ಇಲ್ಲ ಎಂದಿದ್ದಾರೆ. ಮಂಗಳೂರಿನಲ್ಲಿ ಬಿಜೆಪಿ ಸಭೆ ನಡೆಸಲು ಸಜ್ಜಾಗಿರುವ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಿಬಿಐನ ಕ್ರಮ ರಾಜಕೀಯ ಪ್ರೇರಿತ ಎಂಬ ಟೀಕೆಯನ್ನು ತಳ್ಳಿ ಹಾಕಿದ್ದಾರೆ. ಯೋಗೇಶ್ ಗೌಡ ಕೊಲೆಯಾದಾಗ ತನಿಖೆ ನಡೆಸುವಂತೆ ಬಿಜೆಪಿ ಆಗಲೇ ಆಗ್ರಹಿಸಿತ್ತು. ಅವರ ಮನೆ, ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂಬುದು ಒತ್ತಾಯವಾಗಿತ್ತು. ಈಗ ಎಲ್ಲಾ ತನಿಖೆ ಪರಿಶೀಲನೆ ಬಳಕ ಸಿಬಿಐ ಕಾನೂನು ಕ್ರಮ ಕೈಗೊಂಡಿದೆ ಎಂದಿದ್ದಾರೆ. ಇಬ್ಬರನ್ನೂ ಕೋರ್ಟ್‍ಗೆ ಹಾಜರುಪಡಿಸುವ ಸಾಧ್ಯತೆ ಇದೆ. ಜೊತೆಗೆ ಆಗ ಪೊಲೀಸ್ ಅಧಿಕಾರಿಯಾಗಿದ್ದವರಿಗೂ ಉರುಳು ಬಿದ್ದಿದೆ. ಇಬ್ಬರಿಗೂ ಬಂಧನದ ಭೀತಿ ಎದುರಾಗಿದೆ.