Categories
ವ್ಯವಹಾರ

ಕಾಫಿ ಡೇ ಸಿದ್ಧಾರ್ಥ್ ಪತ್ನಿಗೆ “ಬಂಧನ ಭೀತಿ”!

  • ಕಾಫಿ ಬೆಳೆಗಾರರಿಗೆ ಹಣ ಕೊಡದ ಆರೋಪ
  • ಚಿಕ್ಕಮಗಳೂರು, ಹಾಸನ ರೈತರಿಂದ ದೂರು

ಬೆಂಗಳೂರು: ಕಾಫಿ ಡೇ ಮಾಲಿಕ ಸಿದ್ಧಾರ್ಥ ಸಾವಿನ ಬಳಿಕ ಗೊಂದಲದ ಗೂಡಾಗಿರುವ ಕಾಫಿ ಡೇ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದೆ. ಕಾಫಿ ಡೇ ಕಂಪನಿಗೆ ಕಾಫಿ ಬೀಜಗಳನ್ನು ಮಾರಾಟ ಮಾಡಿದ ಕಾಫಿ ಬೆಳೆಗಾರರಿಗೆ ಕಂಪನಿ ಕೊಟ್ಟ ಚೆಕ್‍ಗಳು ಬೌನ್ಸ್ ಆಗಿದೆ. ಸುಮಾರು 300ಕ್ಕೂ ಅಧಿಕ ಕಾಫಿ ಬೆಳೆಗಾರರಿಗೆ 100 ಕೋಟಿಗೂ ಅಧಿಕ ಹಣ ಬಾಕಿ ಇದೆ. ಹೀಗಾಗಿ ಕಾಫಿ ಬೆಳೆಗಾರರು ಇದೀಗ ಕೋರ್ಟ್ ಕಟಕಟೆ ಏರಿದ್ದಾರೆ. ಸಾವಿರಾರು ಜನತೆಗೆ ಉದ್ಯೋಗ ಬದುಕು ಕೊಟ್ಟು ಕಾಫಿ ಕಿಂಗ್, ಬ್ಯುಸಿನೆಸ್ ಐಕಾನ್ ಆಗಿದ್ದ ಸಿದ್ಧಾರ್ಥ ಕನಸಿನ ಕಂಪನಿ ಇದೀಗ ಮತ್ತಷ್ಟು ಸಮಸ್ಯೆಗೆ ಬಂದು ನಿಂತಿದೆ.
ಕಾಫಿ ಸಾಮ್ರಾಜ್ಯವನ್ನೇ ಕಟ್ಟಿದ ಉದ್ಯಮಿ ಸಿದ್ಧಾರ್ಥ್ ಕುಟುಂಬ ಈಗ ಸಂಕಷ್ಟದಲ್ಲಿ ಸಿಲುಕಿದೆ. ಪತ್ನಿ ಮಾಳವಿಕಾ ಮೇಲೆ ಚೆಕ್ ಬೌನ್ಸ್ ಕೇಸ್ ದಾಖಲಾಗಿದೆ. ಗ್ರಾಮೀಣ ಭಾಗದ ಸಾವಿರಾರು ಯುವಕ, ಯುವತಿಯರಿಗೆ ತರಬೇತಿ ನೀಡಿ ಉದ್ಯೋಗ ಕೊಟ್ಟ ಸಿದ್ಧಾರ್ಥ ಹೆಗ್ಡೆ ಕುಟುಂಬ ಈಗ ತೊಂದರೆಯಲ್ಲಿದೆ. 2019ರ ಜುಲೈ ತಿಂಗಳಲ್ಲಿ ಮಂಗಳೂರು ಬಳಿಯ ನೇತ್ರಾವತಿ ನದಿಗೆ ಹಾರಿ ಸಿದ್ಧಾರ್ಥ ಆತ್ಮಹತ್ಯೆ ಮಾಡಿಕೊಂಡಿದ್ದರು. ಬಳಿಕ ಕಂಪನಿ ನಷ್ಟದತ್ತ ಸಾಗಿತ್ತು.

Categories
ಬೆಂಗಳೂರು

ಶಾಲೆಗಳು ಆರಂಭ ಆಗಬೇಕೇ..?, ಬೇಡವೇ..?

  • ರಾಜ್ಯದಲ್ಲಿ ಇನ್ನು ಅಂತಿಮ ನಿರ್ಧಾರ ಇಲ್ಲ

ದೇಶಾದ್ಯಂತ ಶಾಲೆಗಳ ಆರಂಭಕ್ಕೆ ಸಿದ್ಧತೆ ನಡೆಯುತ್ತಿದೆ. ಕರೋನಾ ಒಂದು ಕಡೆ ಕಡಿಮೆ ಆಗುತ್ತಿದ್ದರೆ ಮತ್ತೊಂದು ಕಡೆ ಮುಂದಿನ ತಿಂಗಳು ಕರೋನಾ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಈ ನಡುವೆ ಶಾಲೆಗಳು ಆರಂಭ ಆಗಬೇಕೇ..ಬೇಡವೇ ಎಂಬ ಬಗ್ಗೆ ಸರಕಾರದ ಬಳಿಯೇ ಸ್ಪಷ್ಟತೆ ಇಲ್ಲ.
ಅಂದ್ರ, ತೆಲಂಗಾಣದಲ್ಲಿ ಈಗಾಗಲೇ ಶಾಲೆ ಓಪನ್ ಆಗಿವೆ. ಆದರೆ ಅಲ್ಲಿ ನಿಯಮ ಪಾಲನೆ ಇದೆ. ಇಲ್ಲಿಯೂ ಅದೇ ರೀತಿ ನಿಯಮ ಅನುಸರಿಸಿ ಶಾಲೆ ಶುರು ಮಾಡುವ ಸಾಧ್ಯತೆ ಇದೆ. ಆದರೆ ಪೋಷಕ ವಲಯದಲ್ಲಿ ಈ ಬಗ್ಗೆ ಅಪಸ್ವರ ಕೇಳಿ ಬಂದಿದೆ.
ಸಚಿವ ಸುರೇಶ ಕುಮಾರ್ ಈ ಬಗ್ಗೆ ಎಲ್ಲಾ ಅಧ್ಯಯನ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಇತ್ತ ಶಾಲೆಗಳಲ್ಲಿ ಶಿಕ್ಷಕರು, ಆಡಳಿತ ಮಂಡಳಿಗಳು ಸಿದ್ಧತೆ ನಡೆಸಿಕೊಂಡಿವೆ.
ಮುಂದಿನ ವಾರದಿಂದ ಪಿಯುಸಿ, ಡಿಗ್ರಿ ಆರಂಭವಾಗುವ ಸಾಧ್ಯತೆಗಳಿವೆ.
ಶಾಲೆಗಳು ಆರಂಭ ಆಗಬೇಕೇ..?, ಬೇಡವೇ..?
ನೀವು ಕಾಮೆಂಟ್ ಮಾಡಿ ತಿಳಿಸಿ..!

Categories
ಕರಾವಳಿ

ಮಂಗಳೂರು ಕಾರ್ಯಕಾರಣಿ ಸಸ್ಪೆನ್ಸ್!

  • ಗ್ರಾಮ ಪಂಚಾಯತ್ ಚುನಾವಣೆಗೆ ಪ್ಲಾನ್
  • ಸಿಎಂ ಬದಲಾವಣೆ ಎಂದ ಸಿದ್ದು!

ಮಂಗಳೂರು: ರಾಜ್ಯ ಬಿಜೆಪಿ ಕಾರ್ಯಕಾರಣಿ ಕರಾವಳಿ ನಗರಿ ಮಂಗಳೂರಿನಲ್ಲಿ ಆರಂಭವಾಗಿದ್ದು, ಬಿಜೆಪಿ ಮಾಸ್ಟರ್ ಪ್ಲಾನ್ ಹೊರ ಬರುವ ಸಾಧ್ಯತೆ ಇದೆ.
ಚುನಾವಣಾ ಪರಾಮರ್ಶೆ, ಗ್ರಾಮ ಪಂಚಾಯತ್ ಚುನಾವಣೆ ತಂತ್ರಗಾರಿಕೆ, ಸಚಿವ ರ ಮೌಲ್ಯ ಮಾಪನ, ಸಂಪುಟ ವಿಸ್ತರಣೆ, ಪಕ್ಷ ಬಲವರ್ಧನೆ ಸೇರಿ ಅನೇಕ ವಿಷಯಗಳು ಚರ್ಚೆಗೆ ಬರಲಿವೆ ಎನ್ನಲಾಗಿದೆ.
ಯಡಿಯೂರಪ್ಪ ಅವರು ನ.4ರ ರಾತ್ರಿಯೆ ಆಗಮಿಸಿ ಎಲ್ಲರ ಜೊತೆ ಮಾತುಕತೆ ನಡೆಸಿದರು.




ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನಾಯಕತ್ವದಲ್ಲಿ ಈ ಕಾರ್ಯಕಾರಣಿ ನಡೆಯಲಿದೆ.
ಈ ನಡುವೆ ಸಿಎಂ ಬದಲಾವಣೆ ಆಗಲಿದೆ ಎಂಬ ಸುದ್ದಿ ಬಂದಿದೆ ಎಂದು ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ.

Categories
ಕರಾವಳಿ

ದತ್ತಾತ್ರಿ ಅವರಿಗೆ ಅಭಿನಂದನೆ

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ ಉಪಾಧ್ಯಕ್ಷರಾಗಿ ನೇಮಕಗೊಂಡ ಶಿವಮೊಗ್ಗದ ಬಿಜೆಪಿ ನಾಯಕ ದತ್ತಾತ್ರಿ ಅವರ ನ್ನು ಬೆಂಗಳೂರಿನಲ್ಲಿ ಅಭಿನಂದಿಸಲಾಯಿತು. ಸ್ನೇಹಿತರು ಹಾಗೂ ರಾಜ್ಯ ಪಶುಸಂಗೋಪನಾ ಮತ್ತು ಗೋ ರಕ್ಷಣಾ ಸಮಿತಿ ವತಿಯಿಂದ ಶುಭಕೋರಲಾಯಿತು.

Categories
ವ್ಯವಹಾರ

ಅಡಿಕೆ ಸುಲಿಯುವ ಮಿಷನ್ ವಿ ಟೆಕ್ ಇಂಜಿನಿಯರ್ಸ್ ನಲ್ಲಿ ಲಭ್ಯ!

  • ವಿಶೇಷ ಆಫರ್: ಅತ್ಯಂತ ಗುಣಮಟ್ಟ
  • ಆಪ್ ಬಿಡುಗಡೆಗೊಳಿಸಿದ ಸಂಸ್ಥೆ

ನಿಮ್ಮ ಅಡಿಕೆ-ನಿಮ್ಮ ಕೊಯ್ಲು ನಮ್ಮ ವಿ ಟೆಕ್ ಇಂಜಿನಿಯರ್ ಸಂಸ್ಥೆಯ ಯಂತ್ರಗಳ ಜೊತೆ
ವಿ ಟೆಕ್ ಇಂಜಿನಿಯರ್ಸ್…! ವಿ ಟೆಕ್ ಸಂಸ್ಥೆಯ ಎಲ್ಲಾ ಸೇವೆಗೆ ನಮ್ಮ ಆಪ್ ಡೌನ್ ಲೋಡ್ ಮಾಡಿಕೊಳ್ಳಿ. ಯಂತ್ರಗಳ ಬುಕಿಂಗ್, ಯಂತ್ರಗಳ ಸರ್ವಿಸ್ ಬುಕಿಂಗ್, ಗ್ರಾಹಕ ಸಹಾಯಾವಾಣಿಗೆ ನೇರ ಕರೆ , ಗ್ರಾಹಕ ಸಹಾಯವಾಣಿಗೆ ನೇರ ವಾಟ್ಸ್ ಆಪ್ ಸಂದೇಶ ಎಲ್ಲಾ ಸೇವೆಗಳು ಬೆರಳ ತುದಿಯಲ್ಲಿ.

https://play.google.com/store/apps/details?id=com.vtechengineer

Categories
ಬೆಂಗಳೂರು

ಪ್ರೇಮಿಗಳ ದಿನಕ್ಕೆ ಲವ್ ಮ್ಯಾರೇಜ್!

  • ಲವ್ ಮಾಕ್ಟೆಲ್ ಜೋಡಿಯ ಮದುವೆ

ಫೆಬ್ರವರಿ 14. ಪ್ರೇಮಿಗಳ‌ ದಿನ..!. ಈ ವಿಶೇಷ ದಿನವೇ ಕನ್ನಡ ಚಿತ್ರರಂಗದಲ್ಲಿ ಮೋಡಿ ಮಾಡಿರುವ ಲವ್ ಮಾಕ್ಟೆಲ್ ಜೋಡಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಮದುವೆಯಾಗುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಮತ್ತೊಂದು ಸಿನಿ ಜೋಡಿ ನೈಜ ಜೀವನದಲ್ಲೂ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ.

Categories
ಬೆಂಗಳೂರು

ಜನತೆಗೆ ವಿದ್ಯುತ್ ಶಾಕ್!

  • ವಿದ್ಯುತ್ ದರ ಏರಿಸಿ ಬರೆ
  • ಪ್ರತಿ ಯೂನಿಟ್ 40 ಪೈಸೆ ಹೆಚ್ಚಳ


ಬೆಂಗಳೂರು: ವಿದ್ಯುತ್ ದರ ಏರಿಸಿ ಜನರಿಗೆ ಸರ್ಕಾರ ಶಾಕ್ ನೀಡಿದೆ.
ನ.1ರಿಂದಲೇ ಹೊಸ ದರ ಜಾರಿಯಾಗಲಿದೆ. ಹೆಚ್ಚುವರಿ ವಿದ್ಯುತ್ ಬಳಕೆಯಾಗಿರುವ ಜೊತೆಗೆ ಥರ್ಮಲ್ ಪವರ್ ಪ್ಲಾಂಟ್ ಸ್ಥಾಪನೆಗೂ ಹೆಚ್ಚು ಖರ್ಚಾಗಿದೆ. ಇದನ್ನು ಸರಿದೂಗಿಸಲು ದರ ಏರಿಕೆ ಮಾಡಲಾಗಿದೆ. ಪ್ರತಿ ಯೂನಿಟ್​ಗೆ 40 ಪೈಸೆ ಹೆಚ್ಚಳ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಕರೋನಾ ಕಾರಣದಿಂದ ತಡೆಹಿಡಿಯಲಾಗಿದ್ದ ವಿದ್ಯುತ್ ದರ ಏರಿಕೆಯನ್ನು ಇದೀಗ ಏರಿಕೆ ಮಾಡಿರುವ ಕೆಇಆರ್​ಸಿ (ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ) ರಾಜ್ಯದ ಜನರಿಗೆ ಶಾಕ್ ನೀಡಿದೆ.
ಮಾರ್ಚ್ ನಲ್ಲಿ ವಿದ್ಯುತ್ ದರ ಏರಿಕೆಯಾಗಬೇಕಿತ್ತು. ಆದರೆ ಕರೋನಾ ಕಾರಣದಿಂದ ದರ ಏರಿಕೆಯನ್ನು ತಡೆ ಹಿಡಿಯಲಾಗಿತ್ತು. ಈಗ ವಿದ್ಯುತ್ ದರವನ್ನು ಪ್ರತಿ ಯೂನಿಟ್​ಗೆ 40 ಪೈಸೆ ಹೆಚ್ಚಳ ಮಾಡಲಾಗಿದೆ. ಐದು ತಿಂಗಳ ಮಟ್ಟಿಗೆ ಹೊಸ ಪರಿಷ್ಕೃತ ದರ ಇರಲಿದೆ. 

Categories
ಮಲ್ನಾಡ್

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಭೂತ!

  • ಶಿವಮೊಗ್ಗದಲ್ಲಿ ಮೂವರ ಬಂಧನ: ಬೆಟ್ಟಿಂಗ್ ಬೆಟ್ಟಿಂಗ್
  • ಕೊಪ್ಪದಲ್ಲಿ ವ್ಯಕ್ತಿ ಸಾವು

ಶಿವಮೊಗ್ಗ: ದೇಶದಲ್ಲಿ ಐಪಿಎಲ್ ಕ್ರಿಕೆಟ್ ಜ್ವರ ಇದೀಗ ಎಲ್ಲಾ ಕಡೆ ಯುವ ಸಮುದಾಯವನ್ನು ಬೆಟ್ಟಿಂಗ್ ಚಟಕ್ಕೆ ದಾಸನಾಗಿಸಿದೆ. ಪ್ರತಿ ದಿನ ಒಂದಲ್ಲ ಒಂದು ಪ್ರಕರಣ ವರದಿಯಾಗುತ್ತಿದೆ. ಈ ನಡುವೆ ಬೆಟ್ಟಿಂಗ್ ಆಡುತ್ತಿದ್ದ ಮೂವರನ್ನು ಶಿವಮೊಗ್ಗ ಜಯನಗರ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ 2.21ಲಕ್ಷ ರೂ. ಹಾಗೂ 3 ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಶಿವಮೊಗ್ಗ ನಗರದ ಜಯನಗರ ಠಾಣಾ ವ್ಯಾಪ್ತಿಯ
ತಿಲಕ್ ನಗರ ಮುಖ್ಯ ರಸ್ತೆಯ ವಿಶ್ವೇಶ್ವರಯ್ಯ
ಕಾಂಪ್ಲೆಕ್ಸ್‌ನಲ್ಲಿರುವ ಮೊಬೈಲ್ ಆಂಗಡಿಯಲ್ಲಿ
ಆರೋಪಿಗಳು ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್
ಮಾಡುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ
ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯ
ಪೊಲೀಸ್ ಇನ್ಸ್ಪೆಕ್ಟರ್ ಹಾಗೂ
ಸಿಬ್ಬಂದಿಗಳನ್ನೊಳಗೊಂಡ ತಂಡವು
ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ದಾಖಲಿಸಿ,
ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಪ್ಪದಲ್ಲಿ ಸಾವು!: ಕೊಪ್ಪದ ಜೆಎಂಜೆ ಕ್ರೀಡಾಂಗಣದಲ್ಲಿ ಪತ್ತೆಯಾದ ಅನಾಮಧೇಯ ಪುರುಷ ಶವ ದೇವಂಗಿ ಮೂಲದ ಸಂಜೀವ ಎಂಬಾತನದು ಎಂದು ತಿಳಿದು ಬಂದಿದೆ.
ಕೊಪ್ಪ ಸರ್ಕಲ್ ಇನ್ಸ್‌ಪೆಕ್ಟರ್ ರವಿ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯ ಕೆ.ಸುಬ್ರಹ್ಮಣ್ಯ ಶೆಟ್ಟಿಯವರ ಪ್ರಯತ್ನದಿಂದ ಸಾರ್ವಜನಿಕ ಪ್ರಕಟಣೆಯನ್ನು ಪ್ರಕಟಿಸಿದ್ದು, ಇದೀಗ ಗುರುತು ಪತ್ತೆಯಾಗಿದೆ.
ತೀರ್ಥಹಳ್ಳಿ ಪಟ್ಟಣದ ಕೆ.ಸಿ ರಸ್ತೆಯಲ್ಲಿ ಹಿಂದೆ ವಾಸವಾಗಿದ್ದ ಪರಮೇಶ್ವರ ಪೂಜಾರಿಯವರ ಪುತ್ರ ಸಂಜೀವ ಎಂದು ತಿಳಿದು ಬಂದಿದೆ. ಇವರು ದೇವಂಗಿ ವಾಸಿ ಎಂದು ಹೇಳಲಾಗಿದೆ.

Categories
ಮಲ್ನಾಡ್

ಲಂಚ ಸ್ವೀಕರಿಸುತ್ತಿದ್ದ ವಿಎ ಅರೆಸ್ಟ್!

  • ಹೊಸನಗರ ತಾಲೂಕಿನ ರಿಪ್ಪಿನಪೇಟೆಯಲ್ಲಿ ಘಟನೆ
  • ಖಾತೆ ಬದಲಾವಣೆಗೆ 1000 ರೂ.ಲಂಚ!

ರಿಪ್ಪನ್‌ಪೇಟೆ(ಹೊಸನಗರ): ಕರೋನಾ ಸಂಕಷ್ಟದಲ್ಲಿ ಜನರ ಬದುಕು ಬೀದಿಗೆ ಬಂದಿದೆ. ಈ ನಡುವೆ ಅಧಿಕಾರಿಗಳ ಲಂಚದ ದಾಹ ಜನರನ್ನು ಮತ್ತಷ್ಟು ತೊಂದರೆಗೆ ಸಿಲುಕಿಸಿದೆ.
ಈ ನಡುವೆ ರಿಪ್ಪಿನಪೇಟೆ ನಾಡ ಕಛೇರಿಯಲ್ಲಿ ಖಾತೆ ಬದಲಾವಣೆ ಮಾಡಿಕೊಡಲು ಗ್ರಾಮ ಲೆಕ್ಕಿಗನಾಗಿ (ವಿಎ) ಕರ್ತವ್ಯ ನಿರ್ವಹಿಸುತ್ತಿರುವ ರಾಘವೇಂದ್ರ ಎಂಬಾತ ಒಂದು ಸಾವಿರ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆಂದು ರಿಪ್ಪನ್‌ಪೇಟೆಯ ಕೆರೆಹಳ್ಳಿ ಗ್ರಾಮದ ನಿವಾಸಿ ಜೋಸೆಫ್ ಚಾಕೋ ಶಿವಮೊಗ್ಗ ಭ್ರಷ್ಟಾಚಾರ ನಿಗ್ರಹದಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ರಾಘವೇಂದ್ರ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ.
ಗ್ರಾಮ ಲೆಕ್ಕಿಗ ರಾಘವೇಂದ್ರ ರಿಪ್ಪನ್‌ಪೇಟೆ ನಾಡ ಕಛೇರಿಯಲ್ಲಿ ಒಂದು ಸಾವಿರ ರೂ. ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಶಿವಮೊಗ್ಗ ಭ್ರಷ್ಟಾಚಾರ ನಿಗ್ರಹದಳದ ಡಿವೈಎಸ್‌ಪಿ ಲೋಕೇಶ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ತನಿಖಾಧಿಕಾರಿಯಾದ ಪೊಲೀಸ್ ಇನ್ಸ್ಪೆಕ್ಟರ್ ಎನ್. ವೀರೇಂದ್ರ ಹಾಗೂ ಪೊಲೀಸ್ ಸಿಬ್ಬಂದಿಯವರಾದ ವಸಂತ, ನಾಗರಾಜ, ಸುರೇಂದ್ರ, ರಘುನಾಯ್ಕ, ಯೋಗೇಶ್ವರಪ್ಪ, ಹರೀಶ್, ಶ್ರೀನಿವಾಸ, ಇವರುಗಳು ಈ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು. ಆರೋಪಿಯನ್ನು ಬಂಧಿಸಿ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ.
ನಿಮ್ಮ ಊರಲ್ಲಿ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟರೆ ಕೆಲಸ ಮಾಡಿಕೊಡದಿದ್ದರೆ ತಕ್ಷಣ ದೂರು ನೀಡಿರಿ.

Categories
ಮಲ್ನಾಡ್

ತೀರ್ಥಹಳ್ಳಿ ಟಿಎಪಿಸಿಎಂಎಸ್: ನ.5ಕ್ಕೆ “ಚುನಾವಣೆ ರಂಗು”..!

  • ಸಹಕಾರ ಭಾರತಿ-ಸಹಕಾರ ವೇದಿಕೆ ನಡುವೆ ಬಿಗ್ ಫೈಟ್!
  • ನಾಗರಾಜ ಶೆಟ್ಟಿ, ವಿಜಯ್ ದೇವ್ ತಂಡಕ್ಕೆ ಪ್ರತಿಷ್ಠೆ

ತೀರ್ಥಹಳ್ಳಿ: ಪ್ರತಿಷ್ಠಿತ ತೀರ್ಥಹಳ್ಳಿಯ ಟಿಎಪಿಸಿಎಂಎಸ್ ಸಂಸ್ಥೆಯ ಚುನಾವಣೆ ನ.5ರಂದು ನಡೆಯಲಿದ್ದು, ಸಹಕಾರ ಭಾರತಿ-ಸಹಕಾರ ವೇದಿಕೆ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ.
12 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಸಹಕಾರಿ ಸಂಸ್ಥೆಗಳ ಚುನಾವಣೆಯಲ್ಲಿ ರಾಜಕೀಯ ಪಕ್ಷದ ಹೆಸರು,ಚಿಹ್ನೆ ಇತ್ಯಾದಿ ಬಳಸುವಂತಿಲ್ಲ. ಆದರೂ ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿತರು ಈಗಾಗಲೇ ಪಕ್ಷದ ಆಧಾರದಲ್ಲಿ ಮತ ಕೇಳಿದ್ದಾರೆ.
ಬಿಜೆಪಿ ಸಹಕಾರ ಭಾರತಿ ಹೆಸರಲ್ಲಿ ಅಖಾಡಕ್ಕಿಳಿಸಿದೆ.


ಇನ್ನು ಸಿಂಡಿಕೇಟ್ ಸಹಕಾರಿ ವೇದಿಕೆ ಹೆಸರಲ್ಲಿ ಇನ್ನಿತರರು ಸ್ಪರ್ಧೆ ಮಾಡಿದ್ದಾರೆ. ಆದರೆ ಇಲ್ಲಿ ಪಕ್ಷದಷ್ಟೇ ವ್ಯಕ್ತಿತ್ವವೂ ಮುಖ್ಯ.
ಸಹಕಾರ ಭಾರತಿಗೆ ನಾಗರಾಜ ಶೆಟ್ಟಿ ನಾಯಕತ್ವ, ಸಹಕಾರಿ ವೇದಿಕೆಗೆ ಹಿರಿಯ ಸಹಕಾರಿ ಹೆಚ್.ಎನ್.ವಿಜಯದೇವ್ ನಾಯಕತ್ವ ಹೊಂದಿದ್ದಾರೆ.


ಒಟ್ಟು 15 ನಿರ್ದೇಶಕರ ಸ್ಥಾನಗಳಿದ್ದು ಆ ಪೈಕಿ 9 ಜನ ಶೇರುದಾರರಿಂದ ನೇರ ಆಯ್ಕೆಯಾಗಬೇಕು. 4 ಮಂದಿ ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಒಬ್ಬರು ಡಿಸಿಸಿ ಬ್ಯಾಂಕ್ ನಿಂದ ಒಬ್ಬರು ಸರ್ಕಾರದಿಂದ ಆಯ್ಕೆಯಾಗುತ್ತಾರೆ. ಶೇರುದಾರರಿಂದ ಆಯ್ಕೆಯಾಗಬೇಕಿದ್ದ 9 ಸ್ಥಾನದ ಪೈಕಿ ಎಸ್ ಟಿ ಮೀಸಲು ಸ್ಥಾನಕ್ಕೆ ಸಹಕಾರ ಭಾರತೀಯ ಚಂದ್ರನಾಯ್ಕ್ ಒಬ್ಬರೇ ಸ್ಪರ್ದಿಸಿದ್ದು ಅವರ ಅವಿರೋಧ ಆಯ್ಕೆ ಖಚಿತವಾಗಿದೆ.


“ಸಹಕಾರಿ ವೇದಿಕೆ”
*ಟಿ. ಸಿ. ಪ್ರಸನ್ನಕುಮಾರ್ ತೋರಳಿ (ನಂ.06)ಸಾಮಾನ್ಯ ಕ್ಷೇತ್ರ ಗುರುತು :-ಟೇಬಲ್
*ಮೈಥಿಲಿ(ನಂ. 07)ಮಹಿಳಾ ಮೀಸಲು ಗುರುತು:-ಹೊಲಿಗೆ ಯಂತ್ರ
*ಬಿ. ಎಸ್.ಯಲ್ಲಪ್ಪ (ನಂ.09)ಪರಿಶಿಷ್ಟ ವರ್ಗ ಗುರುತು:-ಉಂಗುರ
*ರೇವತಿ ಅನಂತಮೂರ್ತಿ ಕೆ.ಎಂ(ನಂ.11)ಮಹಿಳಾ ಮೀಸಲು ಗುರುತು:-ದ್ರಾಕ್ಷಿ ಹಣ್ಣು
*ಸಿ. ಜಿ.ವೆಂಕಟೇಶ್ ಚಿಪ್ಪಿನಕೊಡಿಗೆ (ನಂ.12)ಬಿ .ಸಿ .ಎಂ(ಎ)ಮೀಸಲು ಗುರುತು:-ಸ್ಟೂಲ್
*ಶಶಿಧರ ಈ.ಜಿ.(ಈಚಲಬೈಲು)(ನಂ.13)ಸಾಮಾನ್ಯ ಕ್ಷೇತ್ರ ಗುರುತು:-ಪ್ರಶರ್ ಕುಕ್ಕರ್
*ಸತೀಶ್ ಎಂ.ಆರ್.(ಮಂಗಳ ಗೋಪಿ )(ನಂ.15)ಬಿ. ಸಿ. ಎಂ.(ಬಿ)ಗುರುತು:-ತೆಂಗಿನ ಕಾಯಿ
*ಹರೀಶ್ ಡಿ. ಜಿ.(ದಾಸನಕೊಡಿಗೆ)(ನಂ.16)ಸಾಮಾನ್ಯ ಕ್ಷೇತ್ರ ಗುರುತು:-ಆಟೋ ರಿಕ್ಷಾ


ಸಹಕಾರ ಭಾರತಿಯಲ್ಲಿ ಸ್ಪರ್ಧೆ!:
೧. ಗಿರಿಯಪ್ಪ ಗೌಡ ಜೆ(ಸಾಮಾನ್ಯ), ಲೋಟ ೨.ಚಂದ್ರಶೇಖರ್ ಎಂ.ವಿ(ಹಿಂದುಳಿದ ವರ್ಗ ಎ), ನಲ್ಲಿ, ೩.ನಾಗರತ್ನ ಮುರುಘರಾಜ್( ಮಹಿಳಾ ಮೀಸಲು), ಫ್ಯಾನ್ ೪.ನಾಗರಾಜ ಶೆಟ್ಟಿ(ಸಾಮಾನ್ಯ),ಕಿರೀಟ ೫.ಪವಿತ್ರ ಚಂದ್ರ( ಮಹಿಳಾ ಮೀಸಲು), ವ್ಯಾನಿಟಿ ಬ್ಯಾಗ್, ೮. ಮೋಹನ್ ಟಿ(ಪರಿಶಿಷ್ಟ ಜಾತಿ ಮೀಸಲು),ಸಿಲಿಂಡರ್ ೧೦.ರಾಜಕಮಲ್ ಎಚ್(ಸಾಮಾನ್ಯ), ಪಂಪ್ ಸೆಟ್, ೧೪. ಶಿವಕುಮಾರ್ ಕಾನುಕೊಪ್ಪ ಕೆ.ಎಸ್( ಹಿಂದುಳಿದ ಪ್ರವರ್ಗ-ಬಿ).ಕೊಡಪಾನ ಚಿನ್ಹೆಯಿಂದ ಸ್ಪರ್ಧೆ ಮಾಡಿದ್ದಾರೆ.
ಮತದಾನದ ಸ್ಥಳ:ಸುವರ್ಣ ಸಹಕಾರ (ಟಿ. ಸಿ ಪಿ. ಸಿ. ಎಂ. ಎಸ್.) ಭವನ ತೀರ್ಥಹಳ್ಳಿ
ಸಮಯ :ಬೆಳಿಗ್ಗೆ 09.00 ರಿಂದ ಸಂಜೆ 04.00ವರೆಗೆ
ಮತದಾನ ದಿನಾಂಕ.05-11-2020 ಗುರುವಾರ.