Categories
ಮಲ್ನಾಡ್

ಬೇಗುವಳ್ಳಿ ಸತೀಶ್ ಅವರಿಗೆ ಮಹತ್ವದ ಹುದ್ದೆ!

  • ರಾಜ್ಯ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾಗಿ ನೇಮಕ
  • ರಾಜ್ಯ ಬಿಜೆಪಿ ನಾಯಕನಿಗೆ ಶುಭಾಶಯ


ಬೆಂಗಳೂರು: ರಾಜ್ಯ ಬಿಜೆಪಿ ನಾಯಕ, ಹಿಂದುಳಿದ ವರ್ಗ ಬಿಜೆಪಿ ಮೋರ್ಚಾ ಮಾಜಿ ಉಪಾಧ್ಯಕ್ಷ, ಉದ್ಯಮಿ ಬೇಗುವಳ್ಳಿ ಸತೀಶ್ ಅವರನ್ನು ರಾಜ್ಯ ಸರ್ಕಾರದ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದೆ.
ತೀರ್ಥಹಳ್ಳಿಯ ಬಿಜೆಪಿ ನಾಯಕರಾಗಿ ಶಿವಮೊಗ್ಗ ಜಿಲ್ಲೆ ಮತ್ತು ರಾಜ್ಯದಲ್ಲಿ ಬಿಜೆಪಿ ಸಂಘಟನೆಯಲ್ಲಿ ತೊಡಗಿರುವ ಸತೀಶ್ ಅವರು ಈಗಾಗಲೇ ಬೆಂಗಳೂರು ಕೇಂದ್ರೀಯ ವಿಶ್ವ ವಿದ್ಯಾಲಯದ ಸೆನೆಟ್ ಸದಸ್ಯರಾಗಿ ಸರ್ಕಾರದಿಂದ ನೇಮಕಗೊಂಡಿದ್ದು, ಇದೀಗ ಮತ್ತೊಂದು ಮಹತ್ವದ ಹುದ್ದೆ ಸಿಕ್ಕಿದೆ.


ಕಳೆದ ಅವಧಿಯಲ್ಲಿ ಬಿಜೆಪಿ ರಾಜ್ಯ ಹಿಂದುಳಿದ ಮೋರ್ಚಾದ ಉಪಾಧ್ಯಕ್ಷರಾಗಿದ್ದ ಸತೀಶ್ ಸಿಎಂ ಯಡಿಯೂರಪ್ಪ, ನಾಯಕರಾದ ರಾಘವೇಂದ್ರ, ವಿಜಯೇಂದ್ರ ಸೇರಿದಂತೆ ರಾಜ್ಯದ ಬಹುತೇಕ ಸಚಿವರು, ಶಾಸಕರು, ನಾಯಕರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.
ಈಡಿಗ ಸಮುದಾಯದಲ್ಲಿ ಪ್ರಮುಖ ನಾಯಕರಾಗಿ ಹೊರ ಹೊಮ್ಮುತ್ತಿರುವ ಸರಳ ನಾಯಕನಿಗೆ ಈ ಹುದ್ದೆ ಮತ್ತಷ್ಟು ಕೆಲಸಕ್ಕೆ ಅವಕಾಶ ನೀಡಿದೆ. ಬಿಜೆಪಿ ನಾಯಕರು, ಕಾರ್ಯಕರ್ತರು, ಅವರ ಅಭಿಮಾನಿಗಳು ಸತೀಶ್ ಅವರಿಗೆ ಶುಭಾಶಯ ಕೋರಿದ್ದಾರೆ.


Categories
ಮಲ್ನಾಡ್

ಮಂಜುನಾಥ ಗೌಡರಿಗೆ “ಕಿಮ್ಮನೆ ಗುದ್ದು”!

  • ಕಾಂಗ್ರೆಸ್ ಪಕ್ಷಕ್ಕೆ ಬೇಡ: ಕಿಮ್ಮನೆ ಗುಟುರು
  • ಕಾಂಗ್ರೆಸ್ ನಾಯಕರ ಫೋಟೋ ಬಳಸಿ ಗಿಮಿಕ್

ತೀರ್ಥಹಳ್ಳಿ: ತೀರ್ಥಹಳ್ಳಿ ರಾಜಕೀಯದಲ್ಲಿ ತಮ್ಮದೇ ಹಿಡಿತ ಹೊಂದಿರುವ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮತ್ತು ಮಾಜಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಡಾ.ಮಂಜುನಾಥ ಗೌಡರ ನಡುವಿನ ಮುಸುಕಿನ ಗುದ್ದಾಟಕ್ಕೆ ಮತ್ತೆ ಇದೀಗ ವೇದಿಕೆ ಸೃಷ್ಟಿಯಾಗಿದೆ.


ಶಿವಮೊಗ್ಗ ಜಿಲ್ಲಾ ಜೆಡಿಎಸ್ ಅಧ್ಯಕ್ಷರ ನೇತೃತ್ವದಲ್ಲಿ ನ.7ರಿಂದ ಆರಂಭವಾಗುವ ಕಸ್ತೂರಿ ರಂಗನ್ ವರದಿ ವಿರೋಧಿ ಪಾದಯಾತ್ರೆಯ ಪ್ರಚಾರದಲ್ಲಿ ಕಾಂಗ್ರೆಸ್ ಮುಖಂಡರ photo ಹಾಕಿ ಕಾಂಗ್ರೆಸ್ ಮುಖಂಡರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರು ಕಸ್ತೂರಿ ರಂಗನ್ ವರದಿ ವಿರುದ್ದ ಬಿದರಗೋಡಿನಿಂದ ತೀರ್ಥಹಳ್ಳಿವರೆಗೆ ಪಾದಯಾತ್ರೆಯನ್ನು ಮುಂದೆ ದೆಹಲಿವರೆಗೆ ಮುಂದುವರಿಸಲಿ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಪ್ರಧಾನ ಮಂತ್ರಿ ದೇವೇಗೌಡರ ಬೆಂಬಲ ಪಡೆದು ಮಾಡಲಿ. ಅವರುಗಳ photo ಹಾಕಲಿ. ಕಾಂಗ್ರೆಸ್ ಮುಖಂಡರ photo ಹಾಕಿ ಕಾಂಗ್ರೆಸ್ಸಿಗರನ್ನು ದಾರಿ ತಪ್ಪಿಸುವ ಅಗತ್ಯವಿಲ್ಲ ಎಂದು ಕಿಮ್ಮನೆ ಕಿಡಿಕಾರಿದ್ದಾರೆ. ಈ ಮೂಲಕ ಇಬ್ಬರು ನಾಯಕರ ಜಂಗೀಕುಸ್ತಿ ಶುರುವಾದಂತಾಗಿದೆ.


ಬಿಜೆಪಿಯ ಅಶೋಕ್ ಮೂರ್ತಿ, ಆರ್.ಮದನ್ ಅವರಿಗೆ ಮೋಸ ಮಾಡಿದ್ದಾಯಿತು. 2018ರಲ್ಲಿ ನನಗೆ ಮೋಸ ಮಾಡಿದ್ದಾಯಿತು. ಬಿಜೆಪಿಯವರು ಬಿಜೆಪಿಗೆ ಸೇರಿಸಿಕೊಳ್ಳಲು ತಿರಸ್ಕಾರ ಮಾಡಿದರು. ಕುಮಾರಸ್ವಾಮಿಯವರು ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ತಕ್ಷಣ ಜೆಡಿಎಸ್ ಬೇಡವಾಯಿತು, ಜೆಡಿಎಸ್‍ನಲ್ಲಿ ರಾಜಕೀಯ ಭವಿಷ್ಯ ಮಂಕಾಗಿದೆ ಎಂದು ತಿಳಿದು ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿದರಲ್ಲದೆ ಕಾಂಗ್ರೆಸ್‍ಗೆ ನೋ ಎಂಟ್ರಿ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ.


ಕಳೆದ 30 ವರ್ಷಗಳಿಂದ ಪ್ರತಿದಿನ ಡಿಸಿಸಿ ಬ್ಯಾಂಕ್‍ನಲ್ಲಿ ಪ್ರತಿದಿನ ಚಿನ್ನದ ಮೊಟ್ಟೆ ಇಡುವ ಕೋಳಿ ಸಾಯುವ ಹಂತಕ್ಕೆ ಬಂದಿದೆ. ದೀರ್ಘ ಕಾಲದ ನ್ಯಾಯಾಲಯದ ರಕ್ಷಣೆ ಪಡೆಯವುದು ಕಷ್ಟವೆಂದು 65ನೇ ವಯಸ್ಸಿನಲ್ಲಿ ಕಸ್ತೂರಿರಂಗನ್ ವರದಿ ನೆನಪಾದದ್ದು, ಹೋರಾಟದ ಅಗತ್ಯ ಕಂಡದ್ದು ಸಂತೋಷವೇ. ತೀರ್ಥಹಳ್ಳಿ ಜೆಡಿಎಸ್, ಕಟ್ಟಿ ಬೆಳೆಸಿ ಪುನಃ ಜೆಡಿಎಸ್ ಟಿಕೇಟ್ ಪಡೆದು ಶಾಸನಸಭೆಗೆ ಸ್ಪರ್ಧೆ ಮಾಡಿ ಜೆಡಿಎಸ್ ಸಿದ್ಧಾಂತವನ್ನು ನಾಡಿಗೆ ತಿಳಿಸಲಿ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲಾ ಪಕ್ಷಕ್ಕೂ ಮೋಸ ಮಾಡಿ, ಕೀರ್ತಿ ಪಡೆಯುವುದು ಬೇಡ. ಜೆಡಿಎಸ್ ಮನೆಯಲ್ಲಿ ಖಾಯಂ ಆಗಿ ವಾಸ ಮಾಡಲಿ ಎಂದು ಕಿಮ್ಮನೆ ರತ್ನಾಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಮೂಲಕ ತೀರ್ಥಹಳ್ಳಿ ರಾಜಕಾರಣದಲ್ಲಿ ಮತ್ತೆ ಒಳ ಪೆಟ್ಟು ಶುರುವಾಗಿದೆ.

Categories
ಕಲಬುರಗಿ

ಕಲಬುರ್ಗಿಯಲ್ಲಿ ಭೂಮಿಗಾಗಿ ಕೊಲೆ!

  • ಗ್ರಾಮ ಪಂಚಾಯತ್ ಸದಸ್ಯ ದ್ವೇಷಕ್ಕೆ ಬಲಿ

ಕಲಬುರ್ಗಿ: ಜಮೀನು ವಿವಾದಕ್ಕೆ ಸಂಬಂಧಿಸಿ ಗ್ರಾಮ ಪಂಚಾಯತ್ ಸದಸ್ಯನೋರ್ವನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಕಲಬುರ್ಗಿ ನಗರದಲ್ಲಿ ನಡೆದಿದೆ. ಆಳಂದ ತಾಲೂಕಿನ ಕಡಗಂಚಿ ಗ್ರಾಮದ ಶಿವಲಿಂಗಪ್ಪ ಭೋಗಶೆಟ್ಟಿ(53) ಕೊಲೆಯಾದಾತ. ಏಳು ಜನರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಕಲಬುರ್ಗಿ ಡಿಸಿಪಿ ಕಿಶೋರ್ ಬಾಬು ಮಾಹಿತಿ ನೀಡಿದ್ದಾರೆ.


ಗ್ರಾಮ ಪಂಚಾಯತ್ ಸದಸ್ಯನೂ ಆಗಿದ್ದ ಈತ ಕಾಂಗ್ರೆಸ್ ಮುಖಂಡನಾಗಿ ಒಂದಷ್ಟು ರಾಜಕೀಯ ಚಟುವಟಿಕೆಗಳನ್ನು ಮಾಡುತ್ತಿದ್ದ. ಕಲಬುರ್ಗಿ ನಗರದ ಕೈಲಾಶ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಸೋಮವಾರ ರಾತ್ರಿ ಮನೆ ಬಳಿ ನಿಂತಾಗ ಏಕಾಏಕಿ ಬಂದೆರಗಿದ ದುಷ್ಕರ್ಮಿಗಳ ಗುಂಪು, ಕೊಲೆ ಮಾಡಿ ಪರಾರಿಯಾಗಿದೆ.


ತೀವ್ರ ರಕ್ತಸ್ರಾವದಿಂದ ಬಿದ್ದ ಸ್ಥಳದಲ್ಲಿಯೇ ವ್ಯಕ್ತಿ ಸಾವನ್ನಪ್ಪಿದ್ದಾನೆ. ಭೂ ವಿವಾದದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಪೆÇಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಕಡಗಂಚಿ ಗ್ರಾಮದ ಕಮಲಾಬಾಯಿ ಎನ್ನುವ ಮಹಿಳೆಯಿಂದ ಶಿವಲಿಂಗಪ್ಪ, 4 ಎಕರೆ, 4 ಗುಂಟೆ ಜಮೀನು ಖರೀದಿಸಿದ್ದ. ಹೊಲ ಖರೀದಿ ಮಾಡಿದಾಗಿನಿಂದಲೂ ಹೊಲ ಮಾರಾಟ ಮಾಡಿದ ಮಹಿಳೆಯ ಸಂಬಂಧಿಕರು ತಕರಾರು ತೆಗೆಯುತ್ತಲೇ ಇದ್ದರು. ಈ ಭೂಮಿ ತಮಗೆ ಸೇರಬೇಕಾದದ್ದೆಂದು ತಕರಾರು ತೆಗೆದು, ಶಿವಲಿಂಗಪ್ಪನಿಗೆ ಬಿತ್ತನೆ ಮಾಡಲೂ ಅವಕಾಶ ನೀಡಿರಲಿಲ್ಲ. ಹೀಗಾಗಿ ಖರೀದಿ ಮಾಡಿದ್ದ ಭೂಮಿ ಹಾಗೆಯೂ ಬೀಳಾಗಿ ಬಿದ್ದಿತ್ತು. ಇಷ್ಟಕ್ಕೆ ಸುಮ್ಮನಾಗದ ದುಷ್ಕರ್ಮಿಗಲು ಶಿವಲಿಂಗಪ್ಪನ ಮೇಲೆ ಒಮ್ಮೆ ಹಲ್ಲೆಯನ್ನೂ ಮಾಡಿದ್ದರು.


ಇತ್ತೀಚೆಗೆ ಹಣಕ್ಕಾಗಿ ಗೆಳೆಯನೇ ವ್ಯಕ್ತಿಯನ್ನು ಅಪಹರಿಸಿ, ಕೊಲೆಗೈದು ನದಿಗೆ ಎಸೆದಿದ್ದ ಸಿನಿಮೀಯ ಮಾದರಿಯ ಕೊಲೆ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿತ್ತು. ಇದೀಗ ಕಲಬುರ್ಗಿ ನಗರದಲ್ಲಿ ಮತ್ತೋರ್ವ ವ್ಯಕ್ತಿಯ ಬರ್ಬರ ಹತ್ಯೆಯಾಗಿದೆ.

Categories
ಬೆಂಗಳೂರು

ನಟ ದಿಗಂತ್ ಈಗ ಅಡಿಕೆ ಬೆಳೆಗಾರ!

  • ಗೊಬ್ಬರದ ವ್ಯಾಪಾರಿಯಾಗಿಯೂ ಕೆಲಸ
  • “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ” ಚಿತ್ರದ ಸಸ್ಪೆನ್ಸ್ !

ಬೆಂಗಳೂರು: ಮಲೆನಾಡಿನ ಪ್ರತಿಭೆ, ನಟ ದಿಗಂತ್ ಇದೀಗ ಮೊದಲ ಬಾರಿಗೆ ಅಡಿಕೆ ಬೆಳೆಗಾರರಾಗಲಿದ್ದಾರೆ.
ಅಚ್ಚರಿ ಆದರೂ ಸತ್ಯ. ಅಂದ ಹಾಗೆ ದಿಗಂತ್ ಯಾವುದಾದರೂ ಅಡಿಕೆ ತೋಟ ಖರೀದಿಸಿ ಅಡಿಕೆ ಬೆಳೆದಿದ್ದಾರಾ..ಖಂಡಿತ ಇಲ್ಲ..!


ಕಿರುಚಿತ್ರಗಳ ನಿರ್ದೇಶಕ, ಪತ್ರಕರ್ತ ವಿನಾಯಕ ಕೊಡ್ಸರ ನಿರ್ದೇಶನದಲ್ಲಿ ಉಪ್ಪಿ ಎಂಟರ್ಟೈನ್ಮೆಂಟ್ ಮೂಲಕ ಸಿಲ್ಕ್ ಮಂಜು ನಿರ್ಮಾಣ ಮಾಡುತ್ತಿರುವ ” ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಎಂಬ ಸಿನಿಮಾ ಸೆಟ್ಟೇರುತ್ತಿದೆ.


ದಿಗಂತ್ ನಟನಾಗಿ, ಅವರ ರಿಯಲ್ ಪತ್ನಿ ಐಂದ್ರಿತಾ ಹಾಗೂ ಕನ್ನಡತಿ ಧಾರವಾಹಿಯ ನಟಿ ರಂಜನಿ ರಾಘವನ್ ನಾಯಕಿಯರಾಗಿ ನಟನೆ ಮಾಡುತ್ತಿದ್ದಾರೆ.
ಮಲೆನಾಡಿನ ಸಾಗರ, ಸಿಗಂದೂರು, ತೀರ್ಥಹಳ್ಳಿ ಪ್ರದೇಶದಲ್ಲಿ ಸಿನಿಮಾ ಶೂಟಿಂಗ್ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.


ಚಿತ್ರದ poster ನಟ ಉಪೇಂದ್ರ ಬಿಡುಗಡೆ ಮಾಡಿದ್ದು, ಭಾರಿ ಟ್ರೆಂಡ್ ಪಡೆದಿದೆ. ಇನ್ನು ದಿಗಂತ್ ಈ ಸಿನಿಮಾದಲ್ಲಿ ಮಲೆನಾಡಿನ ಅಡಿಕೆ ಬೆಳೆಗಾರ ಮತ್ತು ಗೊಬ್ಬರದ ವ್ಯಾಪಾರಿಯಾಗಿ ನಟನೆ ಮಾಡಲಿದ್ದಾರೆ. ಹಳೆ ಒ-80 ಬೈಕಲ್ಲಿ ಮಲೆನಾಡು ರೌಂಡ್ಸ್ ಹೊಡೆಯಲಿದ್ದಾರೆ.


ಮೊದಲೇ ದಿಗಂತ್ ಅಡಿಕೆ ತವರೂರು ತೀರ್ಥಹಳ್ಳಿ ಹುಡುಗ. ಕಾಮಿಡಿ ಕಥಾ ವಸ್ತುವಿನ ಈ ಪಾತ್ರ ಹೇಗೆ ಮಾಡುತ್ತಾರೆ ಎಂಬ ಕುತೂಹಲ ಇದೀಗ ಮೂಡಿದೆ.

Categories
ಹುಬ್ಬಳ್ಳಿ

ವಾಣಿಜ್ಯ ನಗರಿಯಲ್ಲಿ ಚಾಕು ಇರಿತ

  • ಗುಪ್ತಾಂಗಕ್ಕೆ ಚಾಕು ಇರಿದ ಆಗಂತುಕರು
  • ಹುಬ್ಬಳ್ಳಿಯ ಎರಡು ಕಡೆ ಘಟನೆ: ಆತಂಕ

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸೋಮವಾರ ರಾತ್ರಿ ಮತ್ತೇ ಚಾಕು ಇರಿತ ಪ್ರಕರಣ ಸದ್ದು ಮಾಡಿದ್ದು ಶಾಂತಿಪ್ರೀಯ ಜನತೆಯ ಮನದಲ್ಲಿ ಆತಂಕ ಮಡಗುಟ್ಟುವಂತೆ ಮಾಡಿದೆ.
ಎರಡು ಪ್ರತ್ಯೇಕ ಕಡೆಗಳಲ್ಲಿ ನಡೆದ ಎರಡು ಪ್ರಕರಣಗಳಲ್ಲಿ ಇಬ್ಬರು ಚಾಕುವಿನ ಇರಿತಕ್ಕೆ ಮಾರಣಾಂತಿಕ ಗಾಯಗೊಂಡಿದ್ದು ಸಾವು-ಬದುಕಿನ ಮಧ್ಯೆ ಜೂಜಾಟ ನಡೆಸಿದ್ದಾರೆ. ಗಾಯಾಳುಗಳಿಬ್ಬರನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.


ಟಿಪ್ಪುನಗರ ನಿವಾಸಿ ಶೋಯಬ್ ಅಬ್ಬನ್ನವರ ಹಾಗೂ ಮಾಧವ ನಗರ ನಿವಾಸಿ ರಮೇಶ ಕಟ್ಟಿಮನಿ ಎಂಬಿಬ್ಬರು ಗಂಭೀರ ಗಾಯಗೊಂಡಿದ್ದಾರೆ. ಚಾಕು ಇರಿತ ಪ್ರಕರಣಕ್ಕೆ ನಿಖರವಾಗಿ ಕಾರಣವೇನು ಎಂಬುದು ಗೊತ್ತಾಗಿಲ್ಲ. ಆದರೆ, ಘಟನೆ ನಂತರ ಹಳೆ ಹುಬ್ಬಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯ ಟಿಪ್ಪುನಗರ ಹಾಗೂ ಅಶೋಕನಗರ ಪೆÇಲೀಸ್ ಠಾಣೆ ವ್ಯಾಪ್ತಿಯ ಮಾಧವ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು.


ನಿರ್ಗಮಿತ ಪೆÇಲೀಸ್ ಆಯುಕ್ತ ಆರ್.ದಿಲೀಪ್ ಅವರ ಅಧಿಕಾರವಧಿಯಲ್ಲಿ ಅತಿ ಹೆಚ್ಚು ಚಾಕು ಇರಿತ ಪ್ರಕರಣಗಳು ನಡೆದು ಅವಳಿ ನಗರದಲ್ಲಿ ಪೆÇಲೀಸ್ ವ್ಯವಸ್ಥೆ ಇದೆಯೋ ಎಲ್ಲವೋ ಎಂದು ಜನತೆ ಪ್ರಶ್ನಿಸಿಕೊಳ್ಳುವಂತಾಗಿತ್ತು. ಚಾಕು ಇರಿತ ಪ್ರಕರಣಗಳಿಂದ ಬೇಸತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಸಹಾ ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ ಪೆÇಲೀಸ್ ಇಲಾಖೆ ಖದರು ತೋರ್ಪಡಿಸಬೇಕು ಎಂದು ಇಲಾಖೆಗೆ ತಾಕಿತ್ತು ಮಾಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.


ಇದೀಗ ಮಹಾನಗರ ಪೆÇಲೀಸ್ ಇಲಾಖೆಯ ಚುಕ್ಕಾಣಿ ಹಿಡಿದಿರುವ ಲಾಭುರಾಮ, ಕಟ್ಟುನಿಟ್ಟಿನ ಅಧಿಕಾರಿಯಾಗಿದ್ದು ಈ ಚಾಕು ಇರಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅವಳಿನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಬರಲು ಯಾವ ರೀತಿಯ ಕ್ರಮಕೈಗೊಳ್ಳಿದ್ದಾರೆ ಎಂಬುದನ್ನು ಅವಳಿ ನಗರದ ಜನತೆ ಎದುರು ನೋಡುವಂತೆ ಮಾಡಿದ್ದು ಸುಳ್ಳಲ್ಲ.


ದೀಪಗಳ ಹಬ್ಬ ದೀಪಾವಳಿ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಚಾಕು ಇರಿತ ಪ್ರಕರಣ ನಡೆದಿದ್ದು ಸಹಜವಾಗಿಯೇ ಮಹಾನಗರದ ಜನತೆಯಲ್ಲಿ ಮನದಲ್ಲಿ ಅಶಾಂತಿ ಮೂಡಿಸಿದೆ. ಸಣ್ಣಪುಟ್ಟ ಘಟನೆಗಳಿಗೂ ಚಾಕು, ಮಚ್ಚು, ಲಾಂಗ್‍ನಿಂದ ಹಲ್ಲೆ ನಡೆಸುವ ಮೂಲಕ ಸಾರ್ವಜನಿಕ ಶಾಂತಿಗೆ ಭಂಗ ತರಲು ಯತ್ನಿಸುವ ಆರೋಪಿಗಳಿಗೆ ಪೆÇಲೀಸ್ ಇಲಾಖೆ ಖಾಕಿ ಖದೀರಿಸುವ ತೋರಿಸಬೇಕಾದ ಕಾಲ ಕೂಡಿ ಬಂದಿದೆ ಎಂದರೇ ತಪ್ಪಾಗಲಾರದು. ಈ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಹಳೇ ಹುಬ್ಬಳ್ಳಿ ಹಾಗೂ ಅಶೋಕ ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ಕಲಬುರಗಿ

1500 ಪೊಲೀಸ್ ರಿಂದ ತನಿಖೆ!

  • ಭೀಮಾ ತೀರದ ಶೂಟೌಟ್ ಕೇಸ್: ರಾಜ್ಯದಲ್ಲೇ ಪ್ರಥಮ

ವಿಜಯಪುರ: ಭೀಮಾತೀರದ ನಟೋರಿಯಸ್ ಕ್ರಿಮಿನಲ್ ಮೇಲೆ ನಡೆದಿರುವ ಗುಂಡಿನ ದಾಳಿ ತನಿಖೆಗೆ ರಾಜ್ಯ ಇದೇ ಪ್ರಥಮ ಬಾರಿಗೆ 1500 ಪೆÇಲೀಸರಿಗೆ ನಿಯೋಜಿಸಿದೆ.
ಗುಂಡಿನ ದಾಳಿಯ ಕಾರ್ಯಾಚರಣೆ ಬೆನ್ನು ಹತ್ತಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪೆÇಲೀಸರು, ಆರೋಪಿಗಳ ಜಾಡು ಹಿಡಿಯಲು ಹೊರಟಿದ್ದು ಇದೇ ಮೊದಲು ಅದು ಭೀಮಾತೀರದ ರಕ್ತತರ್ಪಣಕ್ಕಾಗಿ..


ವಿಜಯಪುರ ಜಿಲ್ಲೆ ಹಾಗೂ ಕಲಬುರ್ಗಿ ಜಿಲ್ಲೆಯ ಈ ಭೀಮಾತೀರದ ದಶಕಗಳಿಂದಲೂ ರಕ್ತಸಿಕ್ತ ಕ್ಷಣಗಳನ್ನು ನೋಡುತ್ತಲೇ ಬಂದಿದೆ. ಇಲ್ಲಿ ಹತ್ಯೆ ಮುಖ್ಯ. ಹೊರತಾಗಿ ಯಾರದ್ದೂ ಎನ್ನುವುದು ಆ ಎರಡು ಕುಟುಂಬಗಳ ಮಾತ್ರ ನಿರ್ಧಾರ ಮಾಡುತ್ತವೆ. ಹಾಗಾಗಿಯೇ ನಿರ್ಧಾರ ಮಾಡಿದ್ದಂತೆ ನಡೆದದ್ದೇ ಮಹಾದೇವ ಬೈರಗೊಂಡನ ಮೇಲೆ ಗುಂಡಿನ ದಾಳಿ ಎಂಬ ಮಾತುಗಳು ಕೇಳಿ ಬರುತ್ತೀವೆ.


ಸೋಮವಾರ ನಡೆದ ಘಟನೆಗೆ ಸಂಬಂಧಿಸಿದಂತೆ ಮಂಗಳವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹಿರಿಯ ಪೆÇಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 5 ಬೈಕ್, ಒಂದು ಟಿಪ್ಪರ್ ಸೇರಿದಂತೆ ಪೆಟ್ರೋಲ್ ಬಾಂಬ್, ಲಾಂಗ್ ಜಪ್ತಿ ಮಾಡಿದ್ದಾರೆ. ಹತ್ಯೆಯ ಹಿಂದೆ 15 ರಿಂದ 20 ಜನರು ಇರಬಹುದೆಂದು ಹಿರಿಯ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.


ಗುಂಡಿನ ದಾಳಿಯಲ್ಲಿ ಈಗಾಗಲೇ ಬೈರಗೊಂಡನ ಮ್ಯಾನೇಜರ್ ಬಾಬೂರಾಯ ಕಂಚನಾಳಕರ ಹಾಗೂ ಚಾಲಕ ಲಕ್ಷ್ಮಣ ದಿಂಡೋರೆ ಮೃತಪಟ್ಟಿದ್ದಾರೆ. ಸಾಹುಕಾರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಘಟನೆಗೆ ಸಂಬಂಧಿಸಿದಂತೆ 3 ಜಿಲ್ಲೆಗಳಲ್ಲಿ 1500 ಪೆÇಲೀಸರು ಕಾರ್ಯಾಚರಣೆ ನಡೆಸಿದ್ದು ಆದಷ್ಟು ಬೇಗನೇ ಆರೋಪಿಗಳ ಪತ್ತೆ ಮಾಡುವ ವಿಶ್ವಾಸವನ್ನು ಮೂಲಗಳು ವ್ಯಕ್ತಪಡಿಸಿವೆ.


ಭೀಮಾತೀರದ ಹಂತಕ ಮಹಾದೇವ ಬೈರಗೊಂಡ ಉರ್ಫ್ ಸಾವುಕಾರ, ಎರಡು ವರ್ಷಗಳ ಹಿಂದೆ ಧರ್ಮರಾಜ ಚಡಚಣ ಮತ್ತು ಗಂಗಾಧರ ಚಡಚಣ ಅವರನ್ನು ಪೆÇಲೀಸರ ಸಹಾಯದಿಂದಲೇ ಕೊಲೆ ಮಾಡಿದ್ದ ಎಂಬ ಆರೋಪವೂ ಕೇಳಿ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿ ಜಾಮೀನಿನ ಮೇಲೆ ಹೊರ ಬಂದ ಮೇಲೆಯೂ ತನ್ನ ಪ್ರಾಣ ರಕ್ಷಣೆಗಾಗಿ ಸಾವುಕಾರ ಗ್ಯಾಂಗ್ ಅನ್ನು ಸುತ್ತಲೂ ಕಟ್ಟಿಕೊಂಡು ಓಡಾಡುತ್ತಿದ್ದ. ಕೊನೆಗೂ ಮತ್ತದೇ ಘಟನೆ ಪುನರಾವರ್ತನೆಯಾಗಿದೆ ಎಂಬುದನ್ನು ಇಲ್ಲಿ ಉಲ್ಲೇಖನೀಯ.

Categories
ಬೆಂಗಳೂರು

ಸಂಜನಾ-ರಾಗಿಣಿಗೆ “ಜೈಲು ಫಿಕ್ಸ್”!

  • ಹೈಕೋರ್ಟ್‍ನಲ್ಲಿ ಜಾಮೀನು ಅರ್ಜಿ ವಜಾ

ಬೆಂಗಳೂರು: ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ ಅವರಿಗೆ ಜೈಲು ಫಿಕ್ಸ್ ಆಗಿದೆ. ಏಕೆಂದರೆ ಅವರು ಹಾಕಿದ್ದ ಜಾಮೀನು ಅರ್ಜಿ ವಜಾಗೊಂಡಿದೆ.
ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ, ರಾಹುಲ್, ರವಿ ಶಂಕರ್, ಲೂಮ್ ಪೆಪ್ಪರ್ ಸೇರಿ ಆರು ಜನರು ಜಾಮೀನು ಕೋರಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿದ್ದರು. ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದಾರೆ. ಈ ಮೂಲಕ ಡ್ರಗ್ಸ್ ದಂಧೆಕೋರರಿಗೆ ನಡುಕ ಶುರುವಾಗಿದೆ.


ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ, ರಾಹುಲ್ , ರವಿಶಂಕರ್, ಲೂಮ್ ಪೆಪ್ಪರ್ ಸೇರಿ ಆರು ಜನರು ಜಾಮೀನು ಕೋರಿ ಹೈಕೋರ್ಟ್?ಗೆ ಅರ್ಜಿ ಸಲ್ಲಿದ್ದರು. ನ್ಯಾಯಮೂರ್ತಿ ಶ್ರೀನಿವಾಸ್? ಹರೀಶ್? ಕುಮಾರ್ ಅವರನ್ನು ಒಳಗೊಂಡಿರುವ ಏಕಸದಸ್ಯ ಪೀಠ, ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದಾರೆ. ಈ ಹಿಂದೆ ಕೂಡ ಇವರ ಜಾಮೀನು ಅರ್ಜಿ ವಿಚಾರಣಾ ನ್ಯಾಯಾಲಯ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ನಟಿಯರಿಬ್ಬರು ಜಾಮೀನು ಕೋರಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಗಳ ವಿಚಾರಣೆ ನಡೆಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ಈ ಮಧ್ಯೆ ಸಿಸಿಬಿ ನಟಿ ಮಣಿಯರಿಗೆ ಜಾಮೀನು ನೀಡದಂತೆ ಜಾಮೀನು ನೀಡದಂತೆ ಮನವಿ ಮಾಡಿತ್ತು. ಮಂಗಳವಾರ ಹೈಕೋರ್ಟ್ ತೀರ್ಪು ನೀಡಿದ್ದು ಜಾಮೀನು ವಜಾ ಮಾಡಿದೆ.

Categories
ಬೆಂಗಳೂರು

ಸರ್ಕಾರದ ಸಾಲ: ಆಟಕ್ಕುಂಟು ಲೆಕ್ಕಕ್ಕಿಲ್ಲ!

  • ಮತ್ತೆ ಸಾಲದ ಅವಧಿ ವಿಸ್ತರಣೆ: ಆದ್ರೆ ಷರತ್ತುಗಳು ಅನ್ವಯ

ನವ ದೆಹಲಿ: ಕರೋನಾ ನಂತರದಲ್ಲಿ ಆರ್ಥಿಕ ಸ್ಥಿತಿ ಸುಧಾರಿಸುವ ಸಲುವಾಗಿ ಕೇಂದ್ರ ಸರ್ಕಾರ 3 ಲಕ್ಷ ಕೋಟಿ ರೂ. ಮೌಲ್ಯದ ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ ಅನ್ನು ನವೆಂಬರ್ 30ರವರೆಗೆ ವಿಸ್ತರಣೆ ಮಾಡಿದೆ.


ಪ್ರಸ್ತುತ ಹಬ್ಬದ ಸೀಸನ್ ಆಗಿರುವ ಹಿನ್ನೆಲೆ ಸಣ್ಣ ಹಾಗೂ ಮಧ್ಯಮ ಉದ್ಯಮದವರಿಗೆ ಅನುಕೂಲವಾಗಬಹುದೆಂಬ ಕಾರಣಕ್ಕೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಆತ್ಮ ನಿರ್ಭರ್ ಭಾರತ್ ಪ್ಯಾಕೇಜ್?ನ ಭಾಗವಾಗಿ ಎಂಎಸ್‍ಎಂಇಗಳು, ವ್ಯಾಪಾರೋದ್ಯಮ ಹಾಗೂ ವ್ಯಾಪಾರ ಉದ್ದೇಶಕ್ಕೆ ವೈಯಕ್ತಿಕ ಸಾಲ ಮತ್ತು ಮುದ್ರಾ ಸಾಲಗಾರರಿಗೆ ಹೆಚ್ಚಿನ ಅನುಕೂಲ ನೀಡುವುದಕ್ಕೋಸ್ಕರ 20.97 ಲಕ್ಷ ಕೋಟಿ ರೂಪಾಯಿ ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ ಅನ್ನು ಘೋಷಣೆ ಮಾಡಿತ್ತು. ಫೆಬ್ರವರಿ 29ರ ವೇಳೆಯಲ್ಲಿ 50 ಕೋಟಿ ರೂಪಾಯಿವರೆಗೆ ಸಾಲ ಹೊಂದಿರುವವರು ಹಾಗೂ ವಾರ್ಷಿಕ 250 ಕೋಟಿ ವಹಿವಾಟು ನಡೆಸುವವರು ಈ ಯೋಜನೆ ಲಾಭ ಪಡೆಯಬಹುದು. ಈ ಯೋಜನೆಯಡಿಯಲ್ಲಿ ನಾಲ್ಕು ವರ್ಷಗಳವರೆಗೆ ಸಾಲ ವಿತರಣೆ ಮಾಡಲಾಗುತ್ತೆ. ಅಲ್ಲದೇ ಒಂದು ವರ್ಷದವರೆಗೆ ಮೊರಟೋರಿಯಂ ಅವಧಿ ಕೂಡ ನೀಡಲಾಗಿದೆ.

Categories
ಬೆಂಗಳೂರು

ಮತ್ತೆ ಮಳೆ ಕೊನೆ ಆಟ!

  • ನ.7ರವರೆಗೂ ರಾಜ್ಯದ ಹಲವೆಡೆ ಮಳೆ
  • ಕೃಷಿಕರೇ ಎಚ್ಚರ ಎಚ್ಚರ

ಬೆಂಗಳೂರು: ಕರ್ನಾಟಕದಲ್ಲಿ ಮತ್ತೆ ಮಳೆಕಾಟ ಆರಂಭವಾಗುವ ಸೂಚನೆ ಇದ್ದು, ಜನತೆಗೆ ಮತ್ತೊಂದು ಸಂಕಟ ಆರಂಭವಾಗಲಿದೆ.
ಮಂಗಳವಾರದಿಂದ ನ.7ರವರೆಗೂ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗಲಿದೆ. ಈಗಾಗಲೇ ಮಲೆನಾಡು, ಕರಾವಳಿಯಲ್ಲಿ ಮಳೆ ಆಗುತ್ತಿದ್ದು, ಅಡಿಕೆ, ಭತ್ತ, ಕಾಳು ಮೆಣಸು ಬೆಳೆಗಾರರಿಗೆ ಭಾರಿ ಹಾನಿಯಾಗಿದೆ.


ಏಕೆ ಮಳೆ?: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಈಗಾಗಲೇ ತಮಿಳುನಾಡು, ಆಂಧ್ರ ಪ್ರದೇಶ, ಕೇರಳದಲ್ಲಿ ಮಳೆಯಾಗುತ್ತಿದೆ.
ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ನವೆಂಬರ್ 5ರಿಂದ ನ.7ರವರೆಗೆ ಮಲೆನಾಡು, ಕರಾವಳಿಯ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಲಿದೆ.


ಅರುಣಾಚಲ ಪ್ರದೇಶ, ಅಸ್ಸಾಂ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ, ಮೇಘಾಲಯ, ಕೇರಳ, ತಮಿಳುನಾಡು ರಾಜ್ಯಗಳಲ್ಲಿಯೂ ಮಳೆಯಾಗುತ್ತಿದೆ. ಇದರ ಪರಿಣಾಮದಿಂದ ಕರ್ನಾಟಕದಲ್ಲೂ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ. ನ.7ರವರೆಗೂ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಮಳೆ ಹೆಚ್ಚಾಗಲಿದೆ. ನ.5ರಿಂದ 7ರವರೆಗೆ ಕರಾವಳಿ ಜಿಲ್ಲೆಗಳ ಜೊತೆಗೆ ಕೊಡಗು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಮಳೆಯಾಗಲಿದೆ. ನ.5ರ ಬಳಿಕ ರಾಜ್ಯದಲ್ಲಿ 2-3 ದಿನ ಭಾರೀ ಮಳೆಯ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.


ಕರ್ನಾಟಕದಲ್ಲಿ ಈಗಾಗಲೇ ಹಿಂಗಾರು ಮಳೆ ಆರಂಭವಾಗಿದ್ದು, ಡಿಸೆಂಬರ್ ತಿಂಗಳ ಅಂತ್ಯದವರೆಗೂ ಆಗಾಗ ಮಳೆಯಾಗುವ ಸಾಧ್ಯತೆಯಿದೆ. ನ. 5ರಿಂದ 2 ದಿನಗಳ ಕಾಲ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ. ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದಲ್ಲಿ ನ.5ರಿಂದ ಸಾಧಾರಣ ಮಳೆಯಾಗಲಿದೆ.


ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವುದರಿಂದ ನ. 7ರವರೆಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ
ನವೆಂಬರ್ 3 ರಿಂದ 7ರವರೆಗೂ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಮಳೆಯಾಗಲಿದೆ. ಹಿಂಗಾರು ಮಳೆ ಆರಂಭವಾಗಿದೆ. ಅಲ್ಲದೆ ವಾತಾವರಣದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿದ್ದು, ನವೆಂಬರ್ 4ರ ನಂತರ ರಾಜ್ಯದಲ್ಲಿ ಮತ್ತೊಂದು ಸುತ್ತಿನ ಮಳೆಯಾಗುವ ಸಾಧ್ಯತೆಗಳಿವೆ. ಅಕ್ಟೋಬರ್ 28ಕ್ಕೆ ನೈರುತ್ಯ ಮುಂಗಾರು ಮರಳುವಿಕೆ ಮುಗಿದಿದ್ದು, ಈಶಾನ್ಯ ಹಿಂಗಾರು ಆರಂಭವಾಗಿದೆ.

Categories
ಕಲಬುರಗಿ

ಭೀಮಾ ತೀರದ ದ್ವೇಷಕ್ಕೆ ಇನ್ನಿಬ್ಬರ ಬಲಿ!

  • ಕಾರಿನ ಮೇಲೆ ಟಿಪ್ಪರ್ ಹರಿಸಿ ಫೈರಿಂಗ್
  • ಇಬ್ಬರ ಸಾವು: ನಮ್ಮೂರ್ ಎಕ್ಸ್‍ಪ್ರೆಸ್ ವಿಶೇಷ ವರದಿ

ವಿಜಯಪುರ: ಭೀಮಾ ತೀರದ ನಟೋರಿಯಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹದೇವ ಬೈರಗೊಂಡ ಉರ್ಫ್ ಮಹದೇವ ಸಾವುಕಾರನ ಕಾರು ಚಾಲಕ ಉಪಚಾರ ಫಲಿಸದೇ ಮಂಗಳವಾರ ಸಾವನ್ನಪ್ಪಿದ್ದಾನೆ.


ಟಿಪ್ಪರ್ ಮೂಲಕ ಅಪಘಾತಪಡಿಸಿ ಸಾವುಕಾರನ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದ ದುಷ್ಕರ್ಮಿಗಳ, ಸಂಚಿನಲ್ಲಿ ಆತನ ಕಾರ್ ಚಾಲಕ ಲಕ್ಷ್ಮಣ ದಿಂಡೋರ್ (27) ಮಾರಣಾಂತಿಕ ಗಾಯಗೊಂಡಿದ್ದ. ಗುಂಡು ತಗುಲು ಗಂಭೀರ ಗಾಯಗೊಂಡಿದ್ದ ಲಕ್ಷ್ಮಣ ಉಪಚಾರ ಫಲಿಸದೇ ಮಂಗಳವಾರ ಕೊನೆಯುಸಿರೆಳೆದಿದ್ದಾನೆ.


ಸೋಮವಾರ ನಡೆದ ಗುಂಡಿನ ದಾಳಿಯಲ್ಲಿ ಬೈರಗೊಂಡ ಸಾವುಕಾರನ ಮ್ಯಾನೇಜರ್ ಬಾಬುರಾಯ ಕಂಚನಾಳಕರ ಸ್ಥಳದಲ್ಲೇ ಸಾವನ್ನಪ್ಪಿದ್ದ. ಮಹದೇವ ಬೈರಗೊಂಡ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು ಆತ ಪ್ರಾಣಾಪಾಯದಿಂದ ಪಾರಾಗುವ ಸಾಧ್ಯತೆ ಇದೆ ಎಂದು ಆತನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.


ಟಿಪ್ಪರ್ ಡಿಕ್ಕಿ ಹೊಡೆಸಿ ಫೈರಿಂಗ್!: ಮಹಾದೇವ ಸಾಹುಕಾರ ಬೈರಗೊಂಡ ತನ್ನ ಸಹಚರರೊಂದಿಗೆ ಸೋಮವಾರ 3 ವಾಹನದೊಂದಿಗೆ ನಗರದ ಹೊರ ವಲಯದ ಹೆದ್ದಾರಿ ಬಳಿಯ ಭೂತನಾಳ ಕ್ರಾಸ್ ಹತ್ತಿರದ ಹಣಮಂತ ಚಿಂಚಲಿ ಅವರ ಪೈಪ್ ಫ್ಯಾಕ್ಟರಿಗೆ ಭೇಟಿ ನೀಡಿ, ಮರಳಿ ಚಡಚಣ ಕಡೆಗೆ ತೆರಳುತ್ತಿದ್ದಾಗ ಕನ್ನಾಳ ಕ್ರಾಸ್ ಬಳಿ ಬೈರಗೊಂಡನ ಕಾರಿಗೆ ಟಿಪ್ಪರ್‍ವೊಂದು ಡಿಕ್ಕಿಯಾದ ಕ್ಷಣ 8-10 ಜನರು ಕಾರನ್ನು ಸುತ್ತಗಟ್ಟಿ ಕಲ್ಲು ತೂರಾಟ ನಡೆಸಿದ್ದರಲ್ಲದೇ, ಗುಂಡಿನ ದಾಳಿ ನಡೆಸಿ ಟಿಪ್ಪರ್ ಬಿಟ್ಟು ಪರಾರಿಯಾಗಿದ್ದರು.


ಗಂಭೀರ ಗಾಯ: ಗುಂಡಿನ ದಾಳಿಯಲ್ಲಿ ಮಹದೇವ ಸಾಹುಕಾರ ಬೈರಗೊಂಡನ ಹೊಟ್ಟೆ ಹಾಗೂ ಬೆನ್ನಿನ ಪಕ್ಕೆಲುಬು ಸೇರಿದಂತೆ ಮೂರು ಗುಂಡು ತಗುಲಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾನೆ.


ಹಳೆ ವೈಷಮ್ಯ: ಭೀಮಾತೀರದ ನಟೋರಿಯಸ್ ಹಂತಕ ಚಂದಪ್ಪ ಹರಿಜನ, ಬಾಗಪ್ಪ ಹರಿಜನ ಇವರುಗಳ ರಕ್ತಪಾತದ ಕಥೆ ಒಂದೆಡೆಯಾದರೆ, ಇನ್ನು ಬೈರಗೊಂಡ ಹಾಗೂ ಚಡಚಣ ಕುಟುಂಬದ ವೈಷಮ್ಯದ ಕುಲುಮೆಯಲ್ಲಿ ಸದಾ ಬೇಯುತ್ತಿದ್ದ ಈ ಎರಡು ಕುಟುಂಬಗಳು ಭೀಮೆಯ ಒಡಲಲ್ಲಿ ರಕ್ತಪಾತ ಹರಿಸುತ್ತಲೇ ಬಂದಿವೆ.


ಈ ವೈಷಮ್ಯದ ಬೆಂಕಿಗೆ ಅದೆಷ್ಟೋ ಜನರು ಬಲಿಯಾದರೂ ಈ ಹೇಗೆತನ ಇನ್ನೂ ಆರುತ್ತಿಲ್ಲ. ಬೈರಗೊಂಡ ಹಾಗೂ ಚಡಚಣ ಕುಟುಂಬದ ವೈಷಮ್ಯಕ್ಕೆ ಮಹಾದೇವ ಸಾಹುಕಾರ ಬೈರಗೊಂಡನ ಅಣ್ಣ ಪುತ್ರಪ್ಪ ಸಾಹುಕಾರ ಬೈರಗೊಂಡ ಹಲವು ವರ್ಷಗಳ ಹಿಂದೆ ಗುಂಡಿನ ದಾಳಿಗೆ ಗಂಭೀರ ಗಾಯಗೊಂಡು ನೆಲ ಹಿಡಿದು ಸಾವಿಗೀಡಾಗಿದ್ದ. ಈ ವೈಷಮ್ಯ ಹೀಗೆ ಮುಂದುವರೆದ ಪರಿಣಾಮ ಮಲ್ಲಿಕಾರ್ಜುನ ಚಡಚಣನ ಮಕ್ಕಳಾದ ಧರ್ಮರಾಜ ಚಡಚಣ ಹಾಗೂ ಗಂಗಾಧರ ಚಡಚಣ ಸಾವಿನವರೆಗೂ ಹೊತ್ತಿಕೊಂಡು ಬಂದಿತ್ತು.


ನಕಲಿ ಎನ್‍ಕೌಂಟರ್‍ನಿಂದ ಜೈಲು!: ಅ.30 2017ರಂದು ಧರ್ಮರಾಜ ಚಡಚಣ ನಕಲಿ ಎನ್‍ಕೌಂಟರ್ ಹಾಗೂ ಗಂಗಾಧರ ಚಡಚಣ ನಿಗೂಢ ಕೊಲೆ ಪ್ರಕರಣಕ್ಕೆ ಮಹಾದೇವ ಸಾಹುಕಾರ ಬೈರಗೊಂಡ ಸೇರಿದಂತೆ ಕೆಲ ಪೆÇಲೀಸ್ ಅಧಿಕಾರಿಗಳು ದರ್ಗಾ ಜೈಲು ಸೇರಿದ್ದರು. ಅನಂತರ ಜಾಮೀನಿನ ಮೇಲೆ ಮಹಾದೇವ ಸಾಹುಕಾರ ಬೈರಗೊಂಡ ಹೊರಗೆ ಬಂದಿದ್ದ. ಅಲ್ಲದೇ ಈಚೆಗೆ ಮಹಾದೇವ ಸಾಹುಕಾರ ಬೈರಗೊಂಡ ಹಾಗೂ ಬಾಗಪ್ಪ ಹರಿಜನ ಸೇರಿದಂತೆ ಮೂವರು ಚಿನ್ನದ ವ್ಯಾಪಾರಿಯನ್ನು ಹೆದರಿಸಿ 5 ಕೋಟಿ ರೂ.ಗಳು ಹಾಗೂ 3 ಕೆಜಿ ಚಿನ್ನಕ್ಕೆ ಬೇಡಿಕೆಯಿಟ್ಟು ಮತ್ತೇ ಮೈಮೇಲೆ ಪ್ರಕರಣ ಹಾಕಿಕೊಂಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.


ದಾಳಿ ಶಂಕೆ: ಧರ್ಮರಾಜ ಚಡಚಣ ನಕಲಿ ಎನ್‍ಕೌಂಟರ್ ಹಾಗೂ ಗಂಗಾಧರ ಚಡಚಣ ನಿಗೂಢ ಸಾವಿನ ಕುರಿತು ಸಿಬಿಐ ತನಿಖೆ ನಡೆಸುವಂತೆ ಕೆಲ ದಿನಗಳ ಹಿಂದೆ ಚಡಚಣ ಸಹೋದರರ ತಾಯಿ ವಿಮಲಾಬಾಯಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಳು.ಸೋಮವಾರ ನಡೆದ ಘಟನೆಗೆ ಸಂಬಂಧಿಸಿದಂತೆ ವಿಜಯಪುರ ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.


ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಉನ್ನತ ಪೊಲೀಸ್ ಅಧಿಕಾರಿಗಳ ತಂಡದ ಮೂವರು ಸದಸ್ಯರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಸಿಕ್ಕ ಜೀವಂತ ಗುಂಡುಗಳು ಹಾಗೂ ಬೈಕ್‍ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ವಿಶೇಷ ತಂಡಕ್ಕೆ ಎಸ್ಪಿ ಅನುಪಮ್ ಅಗರವಾಲ್ ಸಾಥ್ ನೀಡಿದ್ದಾರೆ.