Categories
Uncategorized

ಸಂಸ್ಕೃತ ಭಾಷೆ ಸಂಸ್ಕಾರ ತಿಳಿಸಿಕೊಡುವ ಭಾಷೆ

ಸಂಸ್ಕೃತ ಭಾಷೆ ಸಂಸ್ಕಾರ ತಿಳಿಸಿಕೊಡುವ ಭಾಷೆ
– ಪದ್ಮರಾಜ ವೇದಾಗಮ ಸಂಸ್ಕೃತ ಪಾಠಶಾಲೆಯ ಉದ್ಘಾಟನೆ
– ಒಂದಾನೊಂದು ಕಾಲದಲ್ಲಿ ಸಂಸ್ಕೃತ ವಿಶ್ವ ವ್ಯಾಪಿ ಹರಡಿತ್ತು

ಸಿಂದಗಿ: ಸಂಸ್ಕೃತ ಭಾಷೆ ಸಂಸ್ಕಾರ ತಿಳಿಸಿಕೊಡುವ ಭಾಷೆ ಎಂದು ಅರ್ಚಕ ವಿಠ್ಠಲ ಆಚಾರ್ಯ ಹೇಳಿದರು.
ಪಟ್ಟಣದ ಸಾರಂಗ ಮಠದಲ್ಲಿ ಬುಧವಾರದಂದು ಶ್ರೀ ಪದ್ಮರಾಜ ವೇದಾಗಮ ಸಂಸ್ಕೃತ ಪಾಠಶಾಲೆಯ ಉದ್ಘಾಟನೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು ಈ ಸಂಸ್ಕೃತ ಶಾಲೆಯನ್ನು ತೆರೆಯುವ ಮೂಲಕ ಸನಾತನ ಸಂಸ್ಕೃತಿಯನ್ನು ಉಳಿಸುವ ಕಾರ್ಯ ನಡೆಯುತ್ತಿದೆ. ಸನಾತನ ಸಂಸ್ಕೃತಿಯ ಹಬ್ಬಗಳನ್ನು ವೇದ ಹಾಗೂ ಪುರಾಣಗಳಲ್ಲಿ ನೋಡಬಹುದಾಗಿದೆ. ತಂದೆ ತಾಯಿಗೆ ಗೌರವ ಸೂಚಿಸುವದನ್ನು ವೇದದಲ್ಲಿ ಹೇಳಲಾಗಿದೆ ಎಂದರು.
ತಂದೆ ತಾಯಿ ಜೀವ ಕೊಟ್ಟರೆ ಜೀವನ ಕೊಟ್ಟಿದ್ದು ವಿದ್ಯೆ ಕಲಿಸುವ ಗುರು. ತಂದೆ, ತಾಯಿ, ಗುರು, ಅತಿಥಿ, ಈ ನಾಲ್ಕು ಜನರು ದೇವರ ಸಮಾನ ಸಂಸ್ಕೃತ ಪ್ರಾಚೀನವಾದ ಭಾಷೆ , ಈ ಭಾಷೆಯನ್ನು ಸಾಮಾನ್ಯ ಪುರುಷರಿಂದ ಸೃಷ್ಠಿಯಾಗಿಲ್ಲ ಕಾರಣ ಅತ್ಯಂತ ಶ್ರೇಷ್ಠತೆಯನ್ನು ಕಾಯ್ದುಕೊಂಡಿದೆ. ನಮ್ಮ ಸಂಸ್ಕೃತದಿಂದ ಇನ್ನಿತರ ಭಾಷೆಗಳು ಪ್ರೇರಣೆ ಪಡೆದಿವೆ ಎಂದು ಹೇಳಿದರು.

ಮಾತನಾಡಿದ ಪ್ರೊ ವಿ ಡಿ ವಸ್ತ್ರದ ಚನ್ನವೀರ ಸ್ವಾಮೀಜಿಯವರಿಗೆ ಇಷ್ಟವಾದ ಭಾಷೆ ಸಂಸ್ಕೃತ  ಇಂದು ಅವರ ಕನಸನ್ನು ನನಸು ಮಾಡಿದ್ದು ಸಾರಂಗ ಶ್ರೀಗಳು ಸಂಸ್ಕೃತ , ವಿವಿಧ ಜ್ಞಾನ ಹಾಗೂ ಎದೆಗಾರಿಕೆಯನ್ನು ಗಟ್ಟಿಗೊಳಿಸುತ್ತದೆ. ಒಂದಾನೊಂದು ಕಾಲದಲ್ಲಿ ಸಂಸ್ಕೃತ ವಿಶ್ವ ವ್ಯಾಪಿ ಹರಡಿತ್ತು. ವಿದ್ಯಾರ್ಥಿ ದೆಸೆಯಲ್ಲಿ ಮಕ್ಕಳು ಸೋಮಾರಿಯಾಗಿ ಇರದೇ ಸದಾ ಚಟುವಟಿಕೆಯಿಂದ ಇರಬೇಕು , ವಿನಯ ಸಂಪನ್ನರಾಗಿ ಇರಬೇಕು ಎಂದು ಹೇಳಿದರು. ಡಾ ವಿಶ್ವ ಪ್ರಭು ಶಿವಾಚಾರ್ಯರು ಹೊರಗಿನ ಮಠ ಕೊಣ್ಣೂರ ಮಾತನಾಡಿದರು. ಡಾ. ಪ್ರಭುಸಾರಂಗ ಶಿವಾಚಾರ್ಯರು ಆಶಿರ್ವಚನ ನೀಡಿದರು. ವೇದಿಕೆ ಮೇಲೆ ಕನ್ನೋಳ್ಳಿ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು , ಬಿ.ಎಂ.ಗೋಟಬಂಡಿಮಠ. ಸಿ.ಜಿ. ಕತ್ತಿ ಇದ್ದರು. ಈ ವೇಳೆ ಅಶೋಕ ವಾರದ, ವಿಶ್ವನಾಥ್ ಜೋಗೂರ, ಶ್ರೀಶೈಲ ನಂದಿಕೋಲ, ಸಿ ಎಂ ಪೂಜಾರ , ಎಂ ಎಸ್ ಹೈಯಾಳಕರ ಇದ್ದರು.

ಇದನ್ನೂ ಓದಿ : ತೀರ್ಥಹಳ್ಳಿ ವಿನಾಯಕ ಥಿಯೆಟರ್ ಕುಸಿದಿದ್ದು ಹೇಗೆ?

[embedyt] https://www.youtube.com/watch?v=vBu-hwgmnrs%5B/embedyt%5D

Categories
ಬೆಂಗಳೂರು ರಾಜ್ಯ

ಜೈ ಹೋ ಇಂಡಿಯಾ.. ಜೈ ಹೋ ಇಸ್ರೋ..!

ಜೈ ಹೋ ಇಂಡಿಯಾ.. ಜೈ ಹೋ ಇಸ್ರೋ..!
– ಚಂದ್ರನ ಅಂಗಳದಲ್ಲಿ ಭಾರತದ ಮೈಲುಗಲ್ಲು?
– 140 ಕೋಟಿ ಭಾರತೀಯರ ಹಾರೈಕೆ, ಪೂಜೆ
– ಲ್ಯಾಂಡಿಂಗ್ ತಪ್ಪಿದ್ರೆ ಆ. 27ಕ್ಕೆ ಮತ್ತೊಂದು ಮುಹೂರ್ತ

NAMMUR EXPRESS NEWS
ಬೆಂಗಳೂರು : ಚಂದ್ರಯಾನ 3ಕ್ಕೆ ಕ್ಷಣಗಣನೆ ಆರಂಭವಾಗಿದ್ದು ಚಂದ್ರನ ಅಂಗಳದಲ್ಲಿ ಭಾರತ ಮತ್ತೊಂದು ಮೈಲುಗಲ್ಲು ಸಾಧಿಸಲು ಸಿದ್ಧತೆ ನಡೆಸಿದೆ. ವಿಕ್ರಂ ಲ್ಯಾಂಡರ್ ಚಂದ್ರಯಾನ 2ರ ಆರ್ಬೀಟರೊಂದಿಗೆ ಸಂಪರ್ಕ ಸಾಧಿಸಿದೆ. ಸಾಮಾನ್ಯವಾಗಿ ವಿಕ್ರಂ ಲ್ಯಾಂಡರ್ ಚಂದ್ರಯಾನ 3ರ ಜೊತೆಗೆ ಮಾತ್ರ ಸಂಪರ್ಕದಲ್ಲಿ ಇರಬೇಕಿತ್ತು. ಆದರೆ ಚಂದ್ರಯಾನ 2 ಆರ್ಬಿಟರ್ ಅಂದಿಗೂ ಸಂಪರ್ಕ ಸಾಧಿಸುವ ಮೂಲಕ ಮಹತ್ವದ ಸಾಧನೆ ಮೆರೆದಿದೆ. ಏಕಕಾಲಕ್ಕೆ ಎರಡು ನೌಕೆಗಳೊಂದಿಗೆ ವಿಕ್ರಂ ಲ್ಯಾಂಡರ್ ಸಂಪರ್ಕ ಹೊಂದಿರುವುದರಿಂದ ಭವಿಷ್ಯದಲ್ಲಿ ಭಾರತಕ್ಕೆ ಭಾರಿ ಲಾಭವಾಗಲಿದೆ. ಭವಿಷ್ಯದಲ್ಲಿ ಯಾವುದಾದರೂ ಒಂದರ ಸಂಪರ್ಕ ಕಡಿತಗೊಂಡರೂ ಮತ್ತೊಂದರ ಮೂಲಕ ಭಾರತಕ್ಕೆ ಚಂದ್ರನ ಚಿತ್ರಗಳು ಮತ್ತು ವಿಶ್ಲೇಷಣೆಗಳನ್ನು ಕಳುಹಿಸಲು ಇದು ನೇರವಾಗಲಿದೆ.

ಇಸ್ರೋ ಚಂದ್ರಯಾನ-3 ಬಗ್ಗೆ ದೊಡ್ಡ ಅಪ್‌ಡೇಟ್ ನೀಡಿದೆ. ಚಂದ್ರಯಾನ-3 ಮತ್ತು ಚಂದ್ರಯಾನ-2 ಆರ್ಬಿಟರ್ ನಡುವೆ ಸಂವಹನವನ್ನು ಯಶಸ್ವಿಯಾಗಿ ಸ್ಥಾಪಿಸಲಾಗಿದೆ. ಎಂದು ಇಸ್ರೋ ಮಾಹಿತಿ ನೀಡಿದೆ. 2023ರ ಆಗಸ್ಟ್ 21ರಂದು ಚಂದ್ರಯಾನ-3 ಚಂದ್ರನ ಕಡೆಗೆ ಚಲಿಸುವ ಮೂಲಕ ಚಂದ್ರಯಾನ-2ರ ಆರ್ಬಿಟರ್‌ನೊಂದಿಗೆ ಸಂಪರ್ಕವನ್ನು ಯಶಸ್ವಿಯಾಗಿ ಸ್ಥಾಪಿಸಲಾಗಿದೆ ಎಂದು ಇಸ್ರೋ ತಿಳಿಸಿದೆ. ಸಮಯವನ್ನು ಆಗಸ್ಟ್ 23ರಂದು ಸಂಜೆ 6.04ಕ್ಕೆ ಇರಿಸಲಾಗಿದೆ ಎಂದು ಹೇಳಿದರು. ಈ ಸಮಯದಲ್ಲಿ, ಚಂದ್ರನ ಮೇಲ್ಕೆಯಲ್ಲಿ ಸುರಕ್ಷಿತ ಮತ್ತು ಸಾಫ್ಟ್ ಲ್ಯಾಂಡಿಂಗ್ಗಾಗಿ ಪ್ರಯತ್ನಿಸಲಾಗುತ್ತದೆ. ಸ್ಥಳೀಯ ಕಾಲಮಾನ ಸಂಜೆ 5.20ಕ್ಕೆ ಲ್ಯಾಂಡಿಂಗ್ ಕಾರ್ಯಕ್ರಮದ ನೇರ ಪ್ರಸಾರ ಆರಂಭವಾಗಲಿದೆ ಎಂದು ಇಸ್ರೋ ತಿಳಿಸಿದೆ. ಆಗಸ್ಟ್ 23ರಂದು ಭಾರತವು ಚಂದ್ರನ ಮೇಲ್ಮಯಲ್ಲಿ ಮೃದುವಾದ ಲ್ಯಾಂಡಿಂಗ್ ಮಾಡಲು ಸಿದ್ಧರಿದ್ದೇವೆ. ಒಂದು ಅಂದು ಸಾಧ್ಯವಾಗದೆ ಇದ್ದರೆ ಆಗಸ್ಟ್ 27ರಂದು ಮತ್ತೊಮ್ಮೆ ಪ್ರಯತ್ನಿಸುವುದಾಗಿ ಇಸ್ರೋದ ಹಿರಿಯ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.

ಚಂದ್ರನ ಮೇಲೆ ಚಂದ್ರಯಾನ 3 ಲ್ಯಾಂಡಿಂಗ್ ಮಾಡಿದರೆ ಭಾರತ ಇತಿಹಾಸವನ್ನು ಸೃಷ್ಟಿಸುತ್ತದೆ. ಹಾಗೆ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರವಾಗಲಿದೆ. ಇಲ್ಲಿಯವರೆಗೆ ಅಮೆರಿಕ, ರಷ್ಯಾ ಮತ್ತು ಚೀನಾ ಮಾತ್ರ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್‌ನಲ್ಲಿ ಯಶಸ್ವಿಯಾಗಿದ್ದವು. ಅಷ್ಟೇ ಅಲ್ಲ, ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ ವಿಶ್ವದ ಮೊದಲ ದೇಶ ಭಾರತ ಆಗಲಿದೆ.

ದೇಶದೆಲ್ಲೆಡೆ ಜನರ ಪ್ರಾರ್ಥನೆ: ವಿಶೇಷ ಪೂಜೆ

ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಆಗಲಿ ಎಂದು ದೇಶದೆಲ್ಲೆಡೆ ಕೋಟಿ ಕೋಟಿ ಜನ ಪೂಜೆ, ಪ್ರಾರ್ಥನೆ ಮಾಡುತ್ತಿದ್ದಾರೆ. ದೇವಾಲಯ, ಮಸೀದಿ, ಚರ್ಚ್ ಎಲ್ಲಾ ಕಡೆ ಪ್ರಾರ್ಥನೆ ಮಾಡಲಾಗುತ್ತಿದೆ. ಮುಸ್ಲಿಂ ಸಮುದಾಯದವರು ಲಕ್ನೋ ದ ಇಸ್ಲಾಮಿಕ್ ಸೆಂಟರ್ ಆಫ್ ಇಂಡಿಯಾದಲ್ಲಿ ನಮಾಜ್ ಮಾಡಿದ್ದಾರೆ. ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್‌ಗಾಗಿ ಮುಸ್ಲಿಂ ಸಮುದಾಯದ ಸದಸ್ಯರು ಪ್ರಾರ್ಥನೆ ಸಲ್ಲಿಸುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ : 63ರ ಅಜ್ಜಿ ಲವ್ ಮಾಡಿ ವಂಚಿಸಿದ 70ರ ಅಜ್ಜ!

Categories
ಕರಾವಳಿ

ಸೌಜನ್ಯ ಪ್ರಕರಣ: ಆ.26ಕ್ಕೆ ಪಾದಯಾತ್ರೆ!

ಸೌಜನ್ಯ ಪ್ರಕರಣ: ಆ.26ಕ್ಕೆ ಪಾದಯಾತ್ರೆ!
– ಧರ್ಮಸ್ಥಳದಿಂದ ಬೆಂಗಳೂರಿನವರೆಗೆ ಪಾದಯಾತ್ರೆ
– ಅಮರನಾಥದಲ್ಲಿ ಪುತ್ತೂರು ಯುವಕರ ಪ್ರಾರ್ಥನೆ

NAMMUR EXPRESS NEWS
ಮೂಡುಬಿದಿರೆ: ಸೌಜನ್ಯ ಮೇಲಿನ ಅತ್ಯಾಚಾರವನ್ನು ವಿರೋಧಿಸಿ ಕರ್ನಾಟಕ ರಾಷ್ಟ ಸಮಿತಿ ಪಕ್ಷ ವತಿಯಿಂದ ಧರ್ಮಸ್ಥಳದಿಂದ ಬೆಂಗಳೂರಿನವರೆಗೆ ಆ.26ರಿಂದ ದೌರ್ಜನ್ಯ ವಿರುದ್ಧ ಸೌಜನ್ಯ ಪಾದಯಾತ್ರೆಗೆ ಸಿದ್ಧತೆ ನಡೆದಿದೆ.
ಮೂಡುಬಿದಿರೆಯಲ್ಲಿ ಕೆಆರ್‌ಎಸ್ ಕಾರ್ಯಕರ್ತರು ಮಾತ್ರವಲ್ಲದೆ, ಮೂಡುಬಿದಿರೆ ಜನರು ಬೆಂಬಲ ಸೂಚಿಸಿದ್ದಾರೆ. ಆನ್‌ಲೈನ್ ಮೂಲಕ ನೂರಾರು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಕೆಆರ್‌ಎಸ್ ಜಿಲ್ಲಾ ಕಾರ್ಯದರ್ಶಿ ದಯಾನಂದ ಮಾಹಿತಿ ನೀಡಿದ್ದು, ಸುಮಾರು 14 ದಿನ ನಡೆಯಲಿರುವ ಸುಮಾರು 330 ಕಿ.ಮೀ ಈ ಪಾದಯಾತ್ರೆಯಲ್ಲಿ ಕೆಆರ್‌ಎಸ್ ಪಕ್ಷವು ಕರ್ನಾಟಕ ರಾಜ್ಯ ಸರ್ಕಾರಕ್ಕೆ ರಾಜ್ಯದ ಜನತೆಯ ಪರವಾಗಿ ಹಕ್ಕೋತ್ತಾಯ ಮಂಡಿಸಲಿದೆ ಎಂದರು.

ಸೌಜನ್ಯ ಹತ್ಯೆ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ತಕ್ಷಣವೇ ಮರು ತನಿಖೆ ನಡೆಸಲು ಕ್ರಮ ಕೈಗೊಳ್ಳಬೇಕು. ಪ್ರಕರಣಕ್ಕೆ ಸಂಬoಧಿಸಿದಂತೆ ವಿಶೇಷ ಪೊಲೀಸ್ ತನಿಖಾ ತಂಡ ರಚಿಸಿ ಪರ್ಯಾಯವಾಗಿ ಈಗಾಗಲೇ ತನಿಖೆ ಮಾಡಿರುವ ತನಿಖಾಧಿಕಾರಿಗಳು ಸಮರ್ಪಕವಾಗಿ ಮತ್ತು ವೃತ್ತಿಪರವಾಗಿ ತನಿಖೆ ನಡೆಸಿಲ್ಲ ಎನ್ನುವ ಆರೋಪಗಳ ಹಿನ್ನಲೆಯಲ್ಲಿ ಅವರನ್ನೂ ತನಿಖೆ ಒಳಪಡಿಸಬೇಕು. ಸೌಜನ್ಯ ಪ್ರಕರಣ ಹಾಗೂ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವ ಕುರಿತು ಕೆಆರ್‌ಎಸ್ ಸರ್ಕಾರವನ್ನು ಈ ಪಾದಯಾತ್ರೆಯ ಮೂಲಕ ಒತ್ತಾಯಿಸಲಿದೆ ಎಂದು ತಿಳಿಸಿದ್ದಾರೆ.

ಅಮರನಾಥದಲ್ಲಿ ಪುತ್ತೂರು ಯುವಕರ ಪ್ರಾರ್ಥನೆ

ಸೌಜನ್ಯಳಿಗೆ ನ್ಯಾಯ ಸಿಗುವಂತೆ ಅಮರನಾಥದಲ್ಲಿ ಪುತ್ತೂರು ವಿಶ್ವ ಹಿಂದೂ ಪರಿಷದ್ ಬಜರಂಗದಳ ವತಿಯಿಂದ ವಿಶೇಷ ಪ್ರಾರ್ಥನೆ ಮಾಡಲಾಗಿದೆ. ಕಾಶ್ಮೀರದ ಅಮರನಾಥದಲ್ಲಿ ಪುತ್ತೂರಿನ ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಯಕರ್ತರಿಂದ ಸೌಜನ್ಯಳ ಹತ್ಯೆ ಆರೋಪಿಗಳಿಗೆ ಶೀಘ್ರವಾಗಿ ಶಿಕ್ಷೆ ಸಿಗುವಂತೆ ಹಾಗೂ ಸೌಜನ್ಯಳಿಗೆ ನ್ಯಾಯ ಸಿಗುವಂತೆ ಅಮರನಾಥದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಇದನ್ನೂ ಓದಿ : 63ರ ಅಜ್ಜಿ ಲವ್ ಮಾಡಿ ವಂಚಿಸಿದ 70ರ ಅಜ್ಜ!

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

– ವಾಶ್ ರೂಂನಲ್ಲಿ ವಿಡಿಯೋ: ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ
– ಬೈಕಂಪಾಡಿ ಕೊಲೆ ಪ್ರಕರಣ ಕಣ್ಣೂರಿನ ವ್ಯಕ್ತಿ ಅರೆಸ್ಟ್.
– ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನ: ವಿಡಿಯೋ ವೈರಲ್!
– ವ್ಯಕ್ತಿಯೋರ್ವನಿಂದ ಇಬ್ಬರು ಮಹಿಳೆಯರ ಮೇಲೆ ಹಲ್ಲೆ

NAMMUR EXPRESS NEWS
ಉಡುಪಿ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜಿನ ಬಾಲಕಿಯರ ವಾಶ್ ರೂಂನಲ್ಲಿ ವಿದ್ಯಾರ್ಥಿನಿಯೊಬ್ಬಳನ್ನು ಮೂವರು ಹಿರಿಯ ವಿದ್ಯಾರ್ಥಿನಿಯರು ಚಿತ್ರೀಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಕಾಲೇಜು ವಿರುದ್ಧದ ತನಿಖೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಉಡುಪಿಯ ಮಲ್ಪೆ ಪ್ರದೇಶದಲ್ಲಿ ಜುಲೈ 25 ರಂದು ಸಂಸ್ಥೆಯ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕಾಲೇಜು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭ ಮಧ್ಯಂತರ ತಡೆಯಾಜ್ಞೆ ನೀಡಿದೆ. ಜುಲೈ 18 ರಂದು ಘಟನೆ ನಡೆದಾಗ ಕಾಲೇಜಿನಿಂದ ಘಟನೆಯ ಬಗ್ಗೆ ನಮಗೆ ತಿಳಿಸಲಾಗಿಲ್ಲ ಎಂದು ಪೊಲೀಸರು ತಪ್ಪಾಗಿ ಹೇಳಿಕೆ ನೀಡಿದ್ದಾರೆ ಎಂದು ಹೈಕೋರ್ಟ್‌ಗೆ ತಿಳಿಸಲಾಗಿದೆ. ಆರೋಪಿ ನಂ.4, ಕಾಲೇಜಿನ ಘಟನೆಯನ್ನು ಪೊಲೀಸರಿಗೆ ತಿಳಿಸಿಲ್ಲ ಎಂಬ ಆರೋಪವು ವಾಸ್ತವಿಕವಾಗಿ ಸರಿಯಾಗಿಲ್ಲ, ಇದು ಕಾಲೇಜಿನ 22.7.2023 ರಂದು ಸಂಬಂಧಿಸಿದ ಪೊಲೀಸ್ ಠಾಣೆಗೆ ಸಲ್ಲಿಸಿದ ಸಂವಹನದಿಂದ ಸ್ಪಷ್ಟವಾಗಿದೆ” ಎಂದು ಹೈಕೋರ್ಟಿಗೆ ತಿಳಿಸಲಾಗಿದೆ. ತನಿಖೆಗೆ ತಡೆ ನೀಡುವ ಮಧ್ಯಂತರ ಆಜ್ಞೆಯನ್ನು ನೀಡುವಾಗ ಹೈಕೋರ್ಟ್‌ ಈ ವಾದವನ್ನು ಗಮನಿಸಿದೆ.

ಬೈಕಂಪಾಡಿ ಕೊಲೆ ಪ್ರಕರಣ ಕಣ್ಣೂರಿನ ವ್ಯಕ್ತಿ ಅರೆಸ್ಟ್.

ಬೈಕಂಪಾಡಿ ಎಪಿಎಂಸಿ ಕಟ್ಟಡದ ಬಳಿ ನಡೆದ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕೇರಳದ ಮನು ಸೆಬಾಸ್ಟಿಯನ್(33) ಎಂದು ಗುರುತಿಸಲಾಗಿದೆ. ಸಂದೇಹಾಸ್ಪದ ಮೃತ ಸ್ಥಿತಿಯಲ್ಲಿ 45 ವರ್ಷ ಪ್ರಾಯದ ಓರ್ವನ ಶವ ಪತ್ತೆಯಾಗಿತ್ತು. ಮೈಯಲ್ಲಿ ಗಾಯದ ಗುರುತು ಕಂಡು ಬಂದು ಕೊಲೆ ಶಂಕೆಯಲ್ಲಿ ತನಿಖೆ ಮುಂದುವರಿಸಿದಾಗ ಕಣ್ಣೂರಿನ ನಿವಾಸಿ ಮನು ಸೆಬಾಸ್ಟಿಯನ್ ಬಲೆಗೆ ಬಿದ್ದಿದ್ದಾನೆ.

ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನ: ವಿಡಿಯೋ ವೈರಲ್!

ಪುತ್ತೂರು ತಾಲೂಕು ಕಟ್ಟತ್ತಾರಿನಲ್ಲಿ ವೀಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಯುವಕ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಸೆಲ್ಸಿ ವೀಡಿಯೋ ಮಾಡಿದ ನಂತರ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.ವೃತ್ತಿಯಲ್ಲಿ ತಾನು ಚಾಲಕನಾಗಿದ್ದು ಮಾಲಕರು ತನ್ನ ಮೇಲೆ ಹಲ್ಲೆ ನನ್ನ ಮೇಲೆ ಹಲ್ಲೆ ನಡೆಸಿದ್ದು ಈ ಒಂದು ಕಾರಣಕ್ಕೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದೆಂದು ವೀಡಿಯೋದಲ್ಲಿ ಹೇಳಿದ್ದು ಈ ವೀಡಿಯೋ ಗಳು ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ವಿಷ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿದ ಯುವಕನ ಸ್ಥಿತಿ ಗಂಭೀರವಾಗಿದ್ದು ಆತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು ತದನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕರೆದೊಯ್ದು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ವ್ಯಕ್ತಿಯೋರ್ವನಿಂದ ಇಬ್ಬರು ಮಹಿಳೆಯರ ಮೇಲೆ ಹಲ್ಲೆ

ವ್ಯಕ್ತಿಯೋರ್ವ ಇಬ್ಬರು ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಡಗನ್ನೂರಿನಲ್ಲಿ ನಡೆದಿದೆ. ಸುಳ್ಯ ನಿವಾಸಿ ಸುರೇಶ್ ಎಂಬಾತ, ಬಡಗನ್ನೂರು ನಿವಾಸಿ ಸುರೇಖ(54) ಹಾಗು ಆಲಂಕಾರ್ ಕುಂತೂರು ನಿವಾಸಿ ಗಿರಿಜಾ(52) ಎಂಬುವರ ಮೇಲೆ ಹಲ್ಲೆ ನಡೆಸಿದ್ದಾನೆ. ಸುರೇಖ ಹಾಗು ಗಿರಿಜಾ ಅವರು ಗುಡ್ಡದಲ್ಲಿ ಅಣಬೆ ಹೆಕ್ಕುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಸುರೇಶ್ ಕುತ್ತಿಗೆಯನ್ನು ಬೀಗಿಯಾಗಿ ಹಿಡಿದು, ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾನೆ.
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಸುರೇಶ್‌ ನನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಇನ್ನು ಗಿರಿಜಾ ಹಾಗು ಸುರೇಖ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ : 63ರ ಅಜ್ಜಿ ಲವ್ ಮಾಡಿ ವಂಚಿಸಿದ 70ರ ಅಜ್ಜ!

Categories
ತೀರ್ಥಹಳ್ಳಿ

ಚಂದ್ರಯಾನ-3 ಯಶಸ್ವಿ ಗಾಗಿ ರಾಮೇಶ್ವರನಿಗೆ ಪೂಜೆ

ಚಂದ್ರಯಾನ-3 ಯಶಸ್ವಿ ಗಾಗಿ ರಾಮೇಶ್ವರನಿಗೆ ಪೂಜೆ
– ತೀರ್ಥಹಳ್ಳಿಯಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಪೂಜೆ
– ಮನೆ ಮನೆಯಲ್ಲೂ ದೇಶದ ಹೆಮ್ಮೆಯ ಕ್ಷಣಕ್ಕೆ ಕಾತುರ
– ತೀರ್ಥಹಳ್ಳಿ ಬಂಧು ಸಂಸ್ಥೆಯ ಪ್ರಸನ್ನ ಹೊಳ್ಳ ಪೂಜೆ

NAMMUR EXPRESS NEWS
ತೀರ್ಥಹಳ್ಳಿ: ಚಂದ್ರಯಾನ-3 ಯಶಸ್ವಿಗಾಗಿ ಇಡೀ ದೇಶದಲ್ಲಿ ಎಲ್ಲೆಡೆ ಪೂಜೆ ಪುನಸ್ಕಾರ ನಡೆಯುತ್ತಿದೆ. ಈ ನಡುವೆ ತೀರ್ಥಹಳ್ಳಿಯಲ್ಲಿ ವಿವಿಧ ಸಂಘ ಸಂಸ್ಥೆಗಳು, ಪ್ರಮುಖರು ರಾಮೇಶ್ವರನಿಗೆ ಪೂಜೆ ಸಲ್ಲಿಸಿ ದೇಶದ ಹೆಮ್ಮೆಯ ಯೋಜನೆ ಯಶಸ್ಸುಗೊಳಿಸಲು ಪೂಜೆ ಸಲ್ಲಿಸಲಾಯಿತು. ತೀರ್ಥಹಳ್ಳಿಯಲ್ಲಿ ಪ. ಪಂ ಸದಸ್ಯ ಸೊಪ್ಪುಗುಡ್ಡೆ ರಾಘವೇಂದ್ರರ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದು ಮಂಗಳಾರತಿ ನಂತರದ ಪ್ರಾರ್ಥನೆ ವೇಳೆ ರಾಮೇಶ್ವರ ದೇವರ ಬಲ ಭಾಗದಿಂದ ಪ್ರಸಾದವಾಗಿದ್ದು ಇಂದಿನ ಚಂದ್ರಯಾನ -3 ಯ ಯಶಸ್ಸಿಗೆ ದೇವರ ಆಶೀರ್ವಾದ ಸಿಕ್ಕಿದೆ.

ಸೊಪ್ಪುಗುಡ್ಡೆ ರಾಘವೇಂದ್ರ ಮಾತನಾಡಿ, ಇಸ್ರೋ ವಿಜ್ಞಾನಿಗಳು 600 ಕೋಟಿ ವೆಚ್ಚದಲ್ಲಿ 41 ದಿನಗಳ ಸತತ ಪ್ರಯತ್ನಕ್ಕೆ ಯಶಸ್ಸು ಸಿಗುವ ದಿನ ಇಂದಾಗಿದೆ. ಇಡೀ ವಿಶ್ವವೇ ನಮ್ಮ ದೇಶದ ಕಡೆ ನೋಡುತ್ತಿದೆ. ಭಾರತ ವಿಶ್ವಗುರು ಆಗುವತ್ತಾ ಹೋಗುತ್ತಿದೆ. ಇಂದಿನ ಚಂದ್ರಯಾನ – 3 ಯಶಸ್ವಿಯಾಗಿ ಉಡಾವಣೆಯಾದರೆ ಪ್ರಬಲ ದೇಶದಲ್ಲಿ ನಮ್ಮ ದೇಶವು ಒಂದಾಗಲಿದೆ. ಹಾಗಾಗಿ ನಮ್ಮ ರಾಮೇಶ್ವರ ದೇವಸ್ಥಾನದಲ್ಲಿ ಚಂದ್ರಯಾನ -3 ಯಶಸ್ವಿಯಾಗಲಿ ಎಂದು ಪೂಜೆ ಸಲ್ಲಿಸಿದ್ದೇವೆ ಎಂದರು.

ಪ್ರಸನ್ನ ಹೊಳ್ಳ ಮತ್ತು ಸಮಾನ ಮನಸ್ಕರಿಂದ ರುದ್ರಾಭಿಷೇಕ

ತೀರ್ಥಹಳ್ಳಿಯ ಇತಿಹಾಸ ಮತ್ತು ಪುರಾಣ ಪ್ರಸಿದ್ಧವಾದಂತಹ ಶ್ರೀ ರಾಮೇಶ್ವರನ ಸನ್ನಿಧಾನದಲ್ಲಿ ಈ ದಿನ ಪ್ರಸನ್ನಹೂಳ್ಳ ಮತ್ತು ಸಮಾನ ಮನಸ್ಕ ಯುವಕರು ರುದ್ರಾಭಿಷೇಕ ಮೂಲಕ ದೇವರಲ್ಲಿ ಪ್ರಾರ್ಥಿಸಿದರು.

ಇದನ್ನೂ ಓದಿ : 63ರ ಅಜ್ಜಿ ಲವ್ ಮಾಡಿ ವಂಚಿಸಿದ 70ರ ಅಜ್ಜ!

Categories
ಬೆಂಗಳೂರು

ಶ್ರಾವಣ ಮಾಸ ಬಂತು: ಇನ್ನು ಸಾಲು ಸಾಲು ಹಬ್ಬ!

ಶ್ರಾವಣ ಮಾಸ ಬಂತು: ಇನ್ನು ಸಾಲು ಸಾಲು ಹಬ್ಬ!
– ಮೂರ್ತಿ ತಯಾರಿಕರಿಗೆ ಕೈತುಂಬ ಕೆಲಸ
– ಹಬ್ಬದ ಸಂಭ್ರಮದಲ್ಲಿ ಜನ: ವ್ಯವಹಾರ ಚೇತರಿಕೆ
– ಹಳ್ಳಿ ಹಳ್ಳಿಯಲ್ಲಿ ಗಣೇಶ ಹಬ್ಬಕ್ಕೂ ಸಿದ್ಧತೆ ಜೋರು!

NAMMUR EXPRESS NEWS
ಬೆಂಗಳೂರು: ಶ್ರಾವಣ ಮಾಸ ಬಂದಿದ್ದು ಇನ್ನು ಹಬ್ಬಗಳ ಸಾಲು ಸಾಲು ಶುರುವಾಗಲಿದೆ. ನಾಗರ ಪಂಚಮಿಯಿಂದ ಶುರುವಾಗಿ ವರಮಹಾಲಕ್ಷ್ಮಿ, ಗಣೇಶ ಚತುರ್ಥಿಯಿಂದ ಹಿಡಿದು ನವರಾತ್ರಿಯಲ್ಲಿ ನವದುರ್ಗೆಯರ ಪೂಜೆಯವರೆಗೆ ಬಳಿಕ ದೀಪಾವಳಿ, ಹೊಸವರ್ಷ, ಸಂಕ್ರಾಂತಿವರೆಗೆ ಹಬ್ಬದ ಸಡಗರ ಇರಲಿದೆ. ಕುಶಲಕರ್ಮಿಗಳು ಶುಭ ಸಮಾರಂಭಗಳಿಗಾಗಿ ಮೂರ್ತಿಗಳನ್ನು ರಚಿಸಲು ಸಜ್ಜಾಗಿದ್ದಾರೆ. ಅಲಂಕಾರ, ದೇವರ ವಸ್ತುಗಳು, ಮೂರ್ತಿಗಳಿಗೆ ಡಿಮ್ಯಾಂಡ್ ಸೃಷ್ಟಿ ಆಗಿದೆ.

ಗಣೇಶ ಹಬ್ಬಕ್ಕೂ ಸಿದ್ಧತೆ ಜೋರು!

ಸೆ.19ರ ಗಣೇಶ ಚತುರ್ಥಿ ನಿಮಿತ್ತ ಈಗಾಗಲೇ ಗೌರಿ-ಗಣೇಶ ಮೂರ್ತಿಗಳನ್ನು ತಯಾರಿಸಲಾಗುತ್ತಿದೆ. ಎಲ್ಲಾ ಊರಲ್ಲೂ ಗಣೇಶ ಹಬ್ಬ ಇರುವುದರಿಂದ ಈಗಲೇ ಸಭೆ ಸಿದ್ಧತೆಗಳು ಶುರುವಾಗಿದೆ.

ಉದ್ಯಮ ಕ್ಷೇತ್ರದ ಚೇತರಿಕೆ ನಿರೀಕ್ಷೆ

ಉದ್ಯಮ ಕ್ಷೇತ್ರದಲ್ಲಿ ಹೊಸ ನಿರೀಕ್ಷೆ ಮಾಡಲಾಗಿದೆ. ಎಲ್ಲಾ ಹಬ್ಬದಲ್ಲೂ ಸಣ್ಣ ಅಂಗಡಿಯಿಂದ ಹಿಡಿದು ದೊಡ್ಡ ಅಂಗಡಿವರೆಗೂ ವ್ಯಾಪಾರ ನಿರೀಕ್ಷೆ ಮಾಡಲಾಗಿದೆ.

ಇದನ್ನೂ ಓದಿ : 63ರ ಅಜ್ಜಿ ಲವ್ ಮಾಡಿ ವಂಚಿಸಿದ 70ರ ಅಜ್ಜ!

Categories
ತೀರ್ಥಹಳ್ಳಿ

ತೀರ್ಥಹಳ್ಳಿ ವಿನಾಯಕ ಥಿಯೆಟರ್ ಕುಸಿದಿದ್ದು ಹೇಗೆ?

ತೀರ್ಥಹಳ್ಳಿ ವಿನಾಯಕ ಥಿಯೆಟರ್ ಕುಸಿದಿದ್ದು ಹೇಗೆ?
– ತಪ್ಪಿದ ದುರಂತ: ದೇವರು ದೊಡ್ಡವನು!
– ವಿನಾಯಕ ಚಿತ್ರಮಂದಿರ ದಿಢೀರ್ ಕುಸಿತ
– 20ಕ್ಕೂ ಹೆಚ್ಚು ಮಂದಿ ಅಪಾಯದಿಂದ ಪಾರು
– ಸಿನಿಮಾ ಗಳಿಕೆ ಇಲ್ಲ…ನಷ್ಟದ ಮೇಲೆ ನಷ್ಟ

NAMMUR EXPRESS
ತೀರ್ಥಹಳ್ಳಿ: ತೀರ್ಥಹಳ್ಳಿ ವಿನಾಯಕ ಥಿಯೇಟರ್ ಮುಂಭಾಗ ಕುಸಿದಿದ್ದು 20ಕ್ಕೂ ಹೆಚ್ಚು ಜನ ಪ್ರಾಣಾಪಾಯದಿಂದ ಪಾರಾಗಿ 8ಕ್ಕೂ ಹೆಚ್ಚು ಬೈಕ್ ಹಾನಿಯಾದ ಘಟನೆ ಮಂಗಳವಾರ ತಡ ರಾತ್ರಿ 10 ಗಂಟೆ ವೇಳೆಗೆ ನಡೆದಿದ್ದು, ಈ ವೇಳೆ ಜೈಲರ್ ಸಿನಿಮಾ ಪ್ರದರ್ಶನ ಆಗುತ್ತಿತ್ತು. ಒಂದು ವೇಳೆ ಟಿಕೆಟ್ ತೆಗೆಯುವ ಸಮಯ ಆಗಿದ್ದರೆ ದುರಂತ ನಡೆದೇ ಬಿಡುತ್ತಿತ್ತು. ಆದರೆ ದೇವರು ದೊಡ್ಡವನು.. ಎಲ್ಲವೂ ತಪ್ಪಿದೆ. ಚಿತ್ರಮಂದಿರದ ಮುಂಭಾಗದ ಕಟ್ಟಡ ಕುಸಿದು ಅಲ್ಲಿ ನಿಲುಗಡೆ ಮಾಡಿದ ಬೈಕುಗಳ ಮೇಲೆ ಬಿದ್ದು ಕಟ್ಟಡದ ಅಡಿ ಬೈಕ್ ಸಿಲುಕಿವೆ. ಅದೃಷ್ಟವಶಾದ್ ಆ ಸಂದರ್ಭದಲ್ಲಿ ಯಾರು ಇಲ್ಲದ ಕಾರಣ ದುರಂತ ತಪ್ಪಿದೆ.
ತೀರ್ಥಹಳ್ಳಿಯ ಪ್ರಸಿದ್ಧ ಸ್ಥಳ ಇದಾಗಿದ್ದು, ವಿನಾಯಕ ಚಿತ್ರಮಂದಿರದಲ್ಲಿ ಜೈಲರ್ ಚಲನಚಿತ್ರ ಪ್ರದರ್ಶನಗೊಳ್ಳುತ್ತಿತ್ತು. ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು, ಪೊಲೀಸರು ಆಗಮಿಸಿದ್ದಾರೆ.

ನೋಡಲು ಜನವೋ ಜನ!

ಸುದ್ದಿ ತಿಳಿಯುತ್ತಿದ್ದಂತೆ ಜನ ಗುಂಪು ಗುಂಪಾಗಿ ಸೇರಿದ್ದಾರೆ. ಎಲ್ಲರೂ ಗಾಬರಿಯಿಂದ ಆಗಮಿಸಿದ್ದಾರೆ. ಫೋಟೋಗಳು ಎಲ್ಲೆಡೆ ವೈರಲ್ ಆಗಿವೆ.

ನಷ್ಟದ ಹಾದಿಯಲ್ಲಿ ಕಾಂತಾರಾ ಕೈ ಹಿಡಿದಿತ್ತು!

ತೀರ್ಥಹಳ್ಳಿಯ ಎರಡು ಚಿತ್ರಮಂದಿರಗಳು ಅಷ್ಟೇನೂ ಲಾಭದಾಯಕವಾಗಿ ನಡೆಯುತ್ತಿಲ್ಲ. ಒಂದು ಕಡೆ ಒಳ್ಳೆ ಸಿನಿಮಾ ಕೊರತೆ, ಪೈರಸಿ ಹಾವಳಿ, ಸಿನಿಪ್ರಿಯರ ಸಂಖ್ಯೆ ಕಡಿಮೆ. ಈ ಹಿನ್ನೆಲೆ ಇತ್ತೀಚಿಗೆ ಚಾರ್ಲಿ, ಕಾಂತಾರಾ, ವಿಕ್ರಂತ ರೋಣ ಸಿನಿಮಾ ಸ್ವಲ್ಪ ಭರವಸೆ ಮೂಡಿಸಿದ್ದವು. ಒಂದು ಕಲಾ ಸೇವೆ ಕಾರಣಕ್ಕೆ ಚಿತ್ರಮಂದಿರ ನಡೆಯುತ್ತಿತ್ತು.

ಇದನ್ನೂ ಓದಿ : 63ರ ಅಜ್ಜಿ ಲವ್ ಮಾಡಿ ವಂಚಿಸಿದ 70ರ ಅಜ್ಜ!

Categories
ಕೊಪ್ಪ

ಕೊಪ್ಪದಲ್ಲಿ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ!

ಕೊಪ್ಪದಲ್ಲಿ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ!
– ಶಾಲೆಯ ವಸತಿ ಗೃಹದಲ್ಲೇ ಘಟನೆ
– ಮೊರಾರ್ಜಿ ವಸತಿ ಶಾಲೆ ಆತ್ಮಹತ್ಯೆ ನಡುವೆ ಮತ್ತೊಂದು ದುರಂತ
– ಶೃಂಗೇರಿಯಲ್ಲಿ ಪ್ರಿಯತಮೆ ಕೊಲೆ ಮಾಡಿ ಸಿಕ್ಕಿ ಬಿದ್ದ!

NAMMUR EXPRESS NEWS – ಕೊಪ್ಪ: ಕೊಪ್ಪ ಪಟ್ಟಣದ ಹೊರ ವಲಯದಲ್ಲಿರುವ ವೆಂಕಟೇಶ್ವರ ವಿದ್ಯಾ ಮಂದಿರ ವಸತಿ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳವಾರ ನಡೆದಿದೆ. ಕಂದಾಯ ಇಲಾಖೆಯಲ್ಲಿ ಗ್ರಾಮ ಆಡಳಿತಾಧಿಕಾರಿ (ವಿ.ಎ) ರಮೇಶಪ್ಪ ಎಂಬುವವರ ಮಗ ಶ್ರೀನಿವಾಸ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಜಿಎಸ್ ನಲ್ಲಿ ಒಂಬತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಮಂಗಳವಾರ ರಾತ್ರಿ ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲ ತಿಂಗಳ ಹಿಂದೆ ಮುರಾರ್ಜಿ ದೇಸಾಯಿ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆನ್ನಲ್ಲೆ ಈ ಘಟನೆ ನಡೆದಿದೆ.

ಪ್ರಿಯತಮೆ ಮರ್ಡರ್ ಮಾಡಿ ಹೂತು ಹಾಕಿದ್ದವ ಅರೆಸ್ಟ್!

ಮೂರು ತಿಂಗಳ ಹಿಂದೆ ಕೊಲೆ ಮಾಡಿ ಶವವನ್ನು ಮನೆಯ ಸಮೀಪ ಹೂತುಹಾಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನಲ್ಲಿ ನಡೆದಿದ್ದು ಪೊಲೀಸರು ಆರೋಪಿಯ ಕಾಲ್ ರೆಕಾರ್ಡ್ ಮೂಲಕ ಸೆರೆ ಹಿಡಿದಿದ್ದಾರೆ.
ವಾಸಂತಿ (42) ಕೊಲೆಯಾಗಿರುವ ಮಹಿಳೆ. ಎಪ್ರಿಲ್ 29ರ ಬೆಳಿಗ್ಗೆ, ಶೃಂಗೇರಿ ತಾಲ್ಲೂಕಿನ ತ್ಯಾವಣ ಸಮೀಪದ ವಾಸಂತಿ ಮನೆ ಬಿಟ್ಟು ಹೋಗಿದ್ದಳು. ಆ ಬಳಿಕ ಪುತ್ರ ನವೀನ್ ಇಲ್ಲೇ ಎಲ್ಲಾದರೂ ಸಂಬಂಧಿಗಳ ಮನೆಗೆ ಹೋಗಿರಬಹುದು ಎಂದು ಹುಡುಕಾಡಿದ್ದಾರೆ. ಹತ್ತು ದಿನಗಳ ಬಳಿಕವೂ ಕಾಣೆಯಾದ ತನ್ನ ತಾಯಿಯ ಕುರಿತಂತೆ ಸುಳಿವು ಸಿಗದ ಹಿನ್ನಲೆ, ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಕಳಸ ಮೂಲದ ಪ್ರಕಾಶ್ (29) ತ್ಯಾವಣದ ಪ್ಯಾಂಟೇಶನ್ ಒಂದರಲ್ಲಿ ಕೆಲಸಕ್ಕೆ ಇದ್ದ. ಕಳೆದ ಒಂದು ವರ್ಷದಿಂದ ಆರೋಪಿ ಪ್ರಕಾಶ್ ವಾಸಂತಿ ಜೊತೆಗೆ ಸಂಪರ್ಕದಲ್ಲಿದ್ದ. ಮಾರ್ಚ್ 17ನೇ ತಾರೀಖು ಪ್ರಕಾಶ್ ಬೇರೊಬ್ಬರ ಜೊತೆ ಮದುವೆಯಾಗಿದ್ದ ಆ ಬಳಿಕ ವಾಸಂತಿ ಪ್ರಕಾಶ್ ಗೆ, ತನ್ನನ್ನು ಭೇಟಿಯಾಗಲು ತಿಳಿಸಿದ್ದಾಳೆ. ನನ್ನ ಜೊತೆ ಸಂಬಂಧ ಹೊಂದಿದ್ದು, ಹೇಗೆ ಬೇರೆಯವರನ್ನ ಮದುವೆಯಾಗಿದ್ದೀಯಾ, ನಾನು ಈಗ ವಿಷ ಕುಡಿತೀನಿ ಎಂದು ಹೆದರಿಸಿದ್ದಾಳೆ. ಮಾತಿಗೆ ಮಾತು ಬೆಳೆದು ಇಬ್ಬರ ಮಧ್ಯೆ ಜಗಳ ಪ್ರಾರಂಭವಾಗಿದೆ. ಕೋಪಗೊಂಡ ಪ್ರಕಾಶ್ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಬಲವಾಗಿ ಹೊಡೆತ ಬಿದ್ದ ಹಿನ್ನಲೆ ವಾಸಂತಿ ಜ್ಞಾನ ತಪ್ಪಿದ್ದಾಳೆ. ಬಳಿಕ ಪ್ರಕಾಶ್ ಆಕೆಗೆ ನೀರು ಕುಡಿಸಲು ಪ್ರಯತ್ನಿಸಿದ್ದಾನೆ. ಆದ್ರೆ ಎದ್ದೇಳದ್ದನ್ನು ಕಂಡ ಪ್ರಕಾಶ್ ಗೆ ವಾಸಂತಿ ಸತ್ತಿರೋದು ವಿಚಾರ ತಿಳಿದಿದೆ.

ಇದನ್ನೂ ಓದಿ : 63ರ ಅಜ್ಜಿ ಲವ್ ಮಾಡಿ ವಂಚಿಸಿದ 70ರ ಅಜ್ಜ!

Categories
ಶಿವಮೊಗ್ಗ

ಪ್ರವಾಸದ ನೆಪದಲ್ಲಿ ಅಪ್ರಾಪ್ತಳ ರೇಪ್!

ಪ್ರವಾಸದ ನೆಪದಲ್ಲಿ ಅಪ್ರಾಪ್ತಳ ರೇಪ್!
– ಸಾಗರದ ಯುವತಿ ಮೇಲೆ ಇಬ್ಬರ ಅತ್ಯಾಚಾರ: ಕೇಸ್
– ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ವರ್ಗಾವಣೆ

NAMMUR EXPRESS NEWS
ಶಿವಮೊಗ್ಗ: ಪ್ರವಾಸಕ್ಕೆಂದು ಅಪ್ರಾಪ್ತ ಬಾಲಕಿಯನ್ನು ಕರೆದುಕೊಂಡು ಹೋಗಿ ಇಬ್ಬರು ಯುವಕರು ಅತ್ಯಾಚಾರ ಮಾಡಿದ ಘಟನೆ ನಡೆದಿದೆ. ಈ ಬಗ್ಗೆ ಸಾಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಗರ ತಾಲೂಕಿನ ಶಾಬಾಜ್ (26) ಅಜಯ್ (32) ಎಂಬ ಇಬ್ಬರು ಈ ಕೃತ್ಯ ವೆಸಗಿದ್ದಾರೆ ಎಂದು ಅವರ ಮೇಲೆ ಪೋಕ್ಸ್,ಅಟ್ರಾಸಿಟಿ ಕಾಯ್ದೆಯಡಿ ಕೇಸ್ ದಾಖಲಾಗಿದೆ. ಪರಿಶಿಷ್ಟ ಕುಟುಂಬಕ್ಕೆ ಸೇರಿದ ಬಾಲಕಿಗೆ ಪರಿಚಿತ ಇರುವ ಈ ದುಷ್ಟರು ಆಕೆಯನ್ನು ಪ್ರವಾಸದ ನೆಪದಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ.

ಶಾಲೆಗೆ ಹೋಗುವ ಈ ಹುಡುಗಿಯನ್ನು ಸಹೋದರರ ಭಾವನೆಯಿಂದ ಆತ್ಮೀಯತೆ ಬೆಳೆಸಿಕೊಂಡು ಯುವತಿಯ ಸಂಪರ್ಕದಲ್ಲಿದ್ದ ಇವರು ಆಗಸ್ಟ್ 19ರಂದು ಪ್ರವಾಸದ ನೆಪದಲ್ಲಿ ಶಿವಮೊಗ್ಗಕ್ಕೆ ಕರೆದುಕೊಂಡು ಬಂದಿದ್ದರು. ಶನಿವಾರ ಶಿವಮೊಗ್ಗದಲ್ಲಿ ಸುತ್ತಾಡಿಸಿದ ಬಳಿಕ ಆಕೆಯನ್ನು ಜನ ನಿಬಿಡವಾದ ಜಾಗಕ್ಕೆ ಕರೆದುಕೊಂಡು ಹೋಗಿ ಆಕೆಗೆ ಪ್ರಜ್ಞೆ ತಪ್ಪಿಸುವ ಪಾನೀಯ ನೀಡಿ ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದೆ. ಬಳಿಕ ಆಕೆಯನ್ನು ಸಾಗರಕ್ಕೆ ಮರಳಿ ತಂದು ಬಿಟ್ಟಿದ್ದಾರೆ ಆದರೆ, ಯಾವ ಕಾರಣಕ್ಕು ವಿಷಯವನ್ನು ಮನೆಯಲ್ಲಿ ತಿಳಿಸಬಾರದು, ತಿಳಿಸಿದರೆ ನಿನಗೇ ತೊಂದರೆ ಎಂದು ಹೆದರಿಸಿದ್ದಾರೆ. ಆದರೆ ಮನೆಯಲ್ಲಿ ಯುವತಿಯ ಸ್ಥಿತಿ ನೋಡಿ ವಿಚಾರಿಸಿದಾಗ ನಡೆದ ಘಟನೆ ವಿವರಿಸಿದ್ದಾಳೆ
ಪೋಷಕರು ಕೂಡಲೇ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ವರ್ಗಾವಣೆ

ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ಮುಂದಿನ ಆದೇಶದವರೆಗೆ ದಾವಣಗೆರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಮಾತೆ ವಿಕ್ರಮ್, ಐಪಿಎಸ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ, ಚಿಕ್ಕಮಗಳೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.

ಇದನ್ನೂ ಓದಿ : 63ರ ಅಜ್ಜಿ ಲವ್ ಮಾಡಿ ವಂಚಿಸಿದ 70ರ ಅಜ್ಜ!

Categories
ಶಿವಮೊಗ್ಗ

ಶಿವಮೊಗ್ಗ ಟಾಪ್ ನ್ಯೂಸ್

ನಟ ಪ್ರಕಾಶ್ ರಾಜ್ ವಿರುದ್ಧ ರಾಜ್ಯಪಾಲರಿಗೆ ದೂರು
– ಗಾಂಧೀಜಿ ಪ್ರತಿಮೆ ಧ್ವಂಸ: ಆರೋಪಿಗಳ ಪತ್ತೆಗೆ 3ಟೀಂ
– ಶಿವಮೊಗ್ಗದಲ್ಲಿ ದರೋಡೆ : ಮಂಗಳಮುಖಿ ಅರೆಸ್ಟ್!
– ಶಿವಮೊಗ್ಗ: ಉಪ ತಹಶೀಲ್ದಾರ್ ಲೋಕಾ ಬಲೆಗೆ!

NAMMUR EXPRESS NEWS
ಶಿವಮೊಗ್ಗ: ನಟ ಪ್ರಕಾಶ್ ರಾಜ್ ಚಂದ್ರಯಾನ 3 ಬಗ್ಗೆ ಅವಹೇಳನಕಾರಿ ಪೋಸ್ಟ್ ವಿಚಾರದಲ್ಲಿ ಲಕ್ಕವಳ್ಳಿ ಯುವಕನೋರ್ವ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಇ-ಮೇಲ್ ಮುಖಾಂತರ ರಾಜ್ಯಪಾಲರಿಗೆ ಪ್ರಮೋದ್ ದೂರು ನೀಡಿದ್ದು, ಪ್ರಕಾಶ್ ರಾಜ್ ಎಂಬುವ ಬಹುಭಾಷಾ ಚಲನಚಿತ್ರ ನಟ ಈತ ಉದ್ಧಟತನ ಮೆರೆಯುತ್ತಿದ್ದಾರೆ. ರಾಷ್ಟ್ರದ ಹೆಮ್ಮೆಯ ಇಸ್ರೋ ವಿಜ್ಞಾನಿಗಳ ಸಾಧನೆಗಳನ್ನು ವ್ಯಂಗ್ಯ ಮಾಡಿದ್ದಾರೆ ಎಂದು ದೂರಿನಲ್ಲಿ ದೂರಿದ್ದಾರೆ. ಈ ವ್ಯಂಗ್ಯ ಮಾಡಿರೋದನ್ನ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ನಟ ಹಂಚಿಕೊಂಡಿದ್ದಾರೆ. ಭಾರತದ ಗೌರವದ ಅಪಹಸ್ಯ ಇವರ ನಿಜವಾದ ಬಣ್ಣ ವನ್ನು ತೋರುತ್ತದೆ. ಇವರ ಹೇಳಿಕೆಯನ್ನು ದೇಶದ್ರೋಹಿ ಕೃತ್ಯ ಎಂದು ಪರಿಗಣಿಸಬೇಕಾಗಿ ಹಾಗೂ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.‌

ಗಾಂಧೀಜಿ ಪ್ರತಿಮೆ ಧ್ವಂಸ: ಆರೋಪಿಗಳ ಪತ್ತೆಗೆ 3 ಟೀಂ

ಹೊಳೆ ಹೊನ್ನೂರು ಸರ್ಕಲ್​ನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿರುವ ಘಟನೆ ಸಂಬಂಧ ಪೊಲೀಸ್ ಇಲಾಖೆ ಮೂರು ತಂಡವನ್ನು ರಚಿಸಿದ್ದು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದೆ.
ಹೊಳೆಹೊನ್ನೂರು ಪಟ್ಟಣದ ಗಾಂಧಿ ಸರ್ಕಲ್‌ ನಲ್ಲಿ ದುಷ್ಕರ್ಮಿಗಳು ಗಾಂಧೀಜಿಯವರ ಪ್ರತಿಮೆಯನ್ನು ಧ್ವಂಸಗೊಳಿಸಿದ್ದರು. ಈ ದುಷ್ಕೃತ್ಯ ಸಿಸಿ ಕ್ಯಾಮರಾದಲ್ಲಿಯು ಸೆರೆಯಾಗಿತ್ತು.ಪೊಲೀಸರು ಸಿಸಿಟಿವಿ ಫೂಟೇಜ್ ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ. ಬೈಕ್‌ನಲ್ಲಿ ಶಿವಮೊಗ್ಗ ಕಡೆಯಿಂದ ಬಂದ ಕೃತ್ಯ ಹಿಂಬದಿ ಸವಾರ ಬೈಕ್‌ನಿಂದ ಇಳಿದು ಪ್ರತಿಮೆ ದೂಡಿ ಹಾನಿ ಮಾಡಿದ್ದ. ಬಳಿಕ ಅದೇ ಬೈಕ್‌ನಲ್ಲಿ ಇಬ್ಬರೂ ಪರಾರಿಯಾಗಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯರವರು ಸಹ ಘಟನೆಯನ್ನು ಖಂಡಿಸಿದ್ದಾರೆ.

ಶಿವಮೊಗ್ಗದಲ್ಲಿ ದರೋಡೆ : ಮಂಗಳಮುಖಿ ಅರೆಸ್ಟ್!

ನಡುರಾತ್ರಿ ಡ್ರಾಪ್‌ ಕೇಳುವ ನೆಪದಲ್ಲಿ ಕಾರು ಹತ್ತಿದ್ದ ಮಂಗಳಮುಖಿಯೊಬ್ಬಳು ಚಾಲಕನಿಗೆ ಚಾಕು ತೋರಿಸಿ ಬೆದರಿಕೆಯೊಡ್ಡಿ ಚಿನ್ನದ ಸರ ಕಸಿದು ಪರಾರಿಯಾಗಿದ್ದಳು. ತನಿಖೆ ನಡೆಸಿದ ದೊಡ್ಡಪೇಟೆ ಠಾಣೆ ಪೊಲೀಸರು ಮಂಗಳಮುಖಿ ರವಿ ಅಲಿಯಾಸ್‌ ಸ್ವೀಟಿ ಎಂಬಾಕೆಯನ್ನು ಬಂಧಿಸಿದ್ದಾರೆ. ಆ.19ರಾತ್ರಿ 1 ಗಂಟೆ ಹೊತ್ತಿಗೆ ವ್ಯಕ್ತಿಯೊಬ್ಬರು ಎನ್‌.ಟಿ.ರಸ್ತೆಯಲ್ಲಿ ಕಾರಿನಲ್ಲಿ ತೆರಳುತ್ತಿದ್ದಾಗ ಮಂಗಳಮುಖಿಯೊಬ್ಬಳು ಕೈ ತೋರಿಸಿ ಕಾರು ಹತ್ತಿಕೊಂಡಿದ್ದಾಳೆ. ಸ್ವಲ್ಪ ದೂರ ತೆರಳುತ್ತಿದ್ದಂತೆ ಚಾಕು ತೆಗೆದು ವ್ಯಕ್ತಿಗೆ ಬೆದರಿಕೆ ಒಡ್ಡಿದ್ದಾಳೆ. ಕೊರಳಲ್ಲಿದ್ದ 92 ಸಾವಿರ ರೂ. ಮೌಲ್ಯದ 23 ಗ್ರಾಂ ತೂಕದ ಚಿನ್ನದ ಸರಿ ಕಸಿದು, ಕಾರಿನ ಡೋರ್‌ ತೆಗೆದು ಪರಾರಿಯಾಗಿದ್ದಳು. ಕ್ಷಿಪ್ರ ತನಿಖೆ ನಡೆಸಿದ ಪೊಲೀಸರು ಘಟನೆ ಸಂಬಂಧ ಕಾರು ಚಾಲಕ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದ. ತನಿಖೆ ನಡೆಸಿದ ಪೊಲೀಸರು ಆರ್‌.ಎಂ.ಎಲ್‌ ನಗರದ ರವಿ ಅಲಿಯಾಸ್‌ ಸ್ವೀಟಿ ಎಂಬ ಮಂಗಳಮುಖಿಯನ್ನು ಬಂಧಿಸಿದ್ದಾರೆ. ಆಕೆ ಬಳಿ ಇದ್ದ 92 ಸಾವಿರ ರೂ. ಮೌಲ್ಯದ ಬಂಗಾರದ ಸರವನ್ನು ವಶಕ್ಕೆ ಪಡೆಯಲಾಗಿದೆ

ಶಿವಮೊಗ್ಗ: ಉಪ ತಹಶೀಲ್ದಾರ್ ಲೋಕಾ ಬಲೆಗೆ!

ಶಿವಮೊಗ್ಗ: ಲೋಕಾಯುಕ್ತ ಡಿವೈಎಸ್ಪಿ ಉಮೇಶ್ ಈಶ್ವರ್ ನಾಯ್ಕ ನೇತೃತ್ವದಲ್ಲಿ ಖಡಕ್ ಕಾರ್ಯಾಚರಣೆ ನಡೆದಿದ್ದು ಉಪ ತಹಶೀಲ್ದಾರ್ ಮತ್ತು ಏಜೆಂಟ್ ಒಬ್ಬ ಲೋಕ ಬಲೆಗೆ ಬಿದ್ದಿದ್ದಾರೆ. ಶಿವಮೊಗ್ಗ ತಾಲೂಕಿನ ಹೊಳಲೂರಿನ ನಾಡ ಕಚೇರಿಯಲ್ಲಿ ಲಂಚ ಪಡೆಯುವ ವೇಳೆ ಲೋಕಾ ಬಲೆಗೆ ಉಪ ತಹಸೀಲ್ದಾರ್ ಪರಮೇಶ್ವರ್ ನಾಯ್ಕ್, ಮತ್ತು ಇವರಿಗೆ ಸಹಾಯ ಮಾಡಿದ್ದ ಏಜೆಂಟ್ ಒಬ್ಬ ಲೋಕ ಬಲೆಗೆ ಬಿದ್ದಾರೆ. ಲೋಕ ಬಲೆಗೆ ಬಿದ್ದ ಉಪ ತಹಶೀಲ್ದಾರ್ ಪರಮೇಶ್ವರ್ ನಾಯ್ಕ್ ಖಾತೆ ಬದಲಾವಣೆಗಾಗಿ 40 ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು. ಶಿವಮೊಗ್ಗ ತಾಲೂಕಿನ ಕ್ಯಾತನಕೊಪ್ಪ ಗ್ರಾಮದ ಶಿವರಾಜ್ ಬಳಿ 30 ಸಾವಿರ ಹಣ ಸ್ವೀಕರಿಸುವಾಗ ಲೋಕಾ ಯುಕ್ತ ಬಲೆಗೆ ಬಿದ್ದಿದ್ದಾರೆ.

ಇದನ್ನೂ ಓದಿ : 63ರ ಅಜ್ಜಿ ಲವ್ ಮಾಡಿ ವಂಚಿಸಿದ 70ರ ಅಜ್ಜ!