Categories
ರಾಜ್ಯ

ಸ್ವಾತಂತ್ರ್ಯ ದಿನದ ಇಂಟ್ರೆಸ್ಟಿಂಗ್ ಸ್ಟೋರಿ

ಎನ್. ಆರ್. ಪುರ: ಮೊಬೈಲ್ ಟವರ್ ಹತ್ತಿ ರಾಷ್ಟ್ರಧ್ವಜ ಹಾರಿಸಿದ ಯುವಕ!
– ಕಟೀಲು ಅಮ್ಮನಿಗೆ ದೇಶದ ಬಣ್ಣ: ಧ್ವಜವಂದನೆಗೈದ ಆನೆ ಮಹಾಲಕ್ಷ್ಮೀ
– ಸ್ವಾತಂತ್ರ್ಯ ದಿನದ ದಿನವೇ ಜೈಲಿಂದ 12 ಮಂದಿ ಬಿಡುಗಡೆ
– ಕೋಳಿ, ತರಕಾರಿಯಲ್ಲಿ ಮೂಡಿದ ರಾಷ್ಟ್ರ ಭಾವುಟದ ಬಣ್ಣ
– 600 ಅಡಿ ಬೆಟ್ಟದ ಮೇಲೆ ಹಾರಿತು ಭಾವುಟ

NAMMUR EXPRESS NEWS
ಚಿಕ್ಕಮಗಳೂರು : ದೇಶದ ಹಬ್ಬ ಸ್ವಾತಂತ್ರ್ಯ ದಿನವನ್ನು ವಿವಿಧ ಕಡೆ ವಿಭಿನ್ನ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ.
ಅದೇ ರೀತಿ ಚಿಕ್ಕಮಗಳೂರು ಜಿಲ್ಲೆ ಎನ್.ಆರ್ ಪುರ ತಾಲೂಕಿನ ಕಡಹಿನಬೈಲು ಎಂಬಲ್ಲಿ ಯುವಕನೊಬ್ಬ ಎಸ್ಎನ್ಎಲ್ ಟವರ್ ಮೇಲೆ ಹತ್ತಿ ದ್ವಜಾರೋಹಣ ಮಾಡಿದ್ದಾನೆ. ಹಿರೇಬಿಸು ಜೋಗಿ ಎನ್ನುವವರು ಟವರ್ ಮೇಲೆ ರಾಷ್ಟ್ರಧ್ವಜ ಹಾರಿಸಿದ್ದಾರೆ. 77ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಷ್ಟ್ರಧ್ವಜ ಹಾರಿಸಿದ್ದಾರೆ. ಎನ್ ಆರ್ ಪುರ ತಾಲೂಕಿನ ಕಡಹಿನ ಬೈಲು ಗ್ರಾಮ ಪಂಚಾಯಿತಿ ಹಿಂಭಾಗದಲ್ಲಿ ಟವರ್ ಮೇಲೆ ರಾಷ್ಟ್ರಧ್ವಜ ಹಾರಿಸಿದ್ದಾರೆ. ಕಳೆದ 13 ವರ್ಷಗಳಿಂದ ಇನ್ನೂರು ಅಡಿ ಟವರ್ ಮೇಲೆ ರಾಷ್ಟ್ರಧ್ವಜ ಹಾರಿಸಲಾಗುತ್ತಿದೆ.

ಶಿವಮೊಗ್ಗ ಕಾರಾಗೃಹದಿಂದ 12 ಕೈದಿಗಳ ಬಿಡುಗಡೆ

ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆ ಸನ್ನಡತೆ ಆಧಾರದ ಮೇಲೆ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ 12 ಮಂದಿ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಐವತ್ತು ವರ್ಷ ಮೇಲ್ಪಟ್ಟ ಹಾಗು ಶೇಕಡಾ 50 ರಷ್ಟು ಅವಧಿಯನ್ನು ಜೈಲಿನಲ್ಲಿ ಕಳೆದಿರುವ ಮಹಿಳಾ ಕೈದಿಯೂ ಇದ್ದಾರೆ 60 ವರ್ಷ ಮೇಲ್ಪಟ್ಟ ಮೂರು ಮಂದಿ ಸೇರಿದಂತೆ ಒಟ್ಟು 12 ಮಂದಿಯನ್ನು ಬಿಡುಗಡೆಗೊಳಿಸಲಾಗಿದೆ. ರಾಜ್ಯದಲ್ಲಿ ಒಟ್ಟು 70 ಕೈದಿಗಳನ್ನು ಸನ್ನಡತೆ ಅಡಿಯಲ್ಲಿ ಬಿಡುಗಡೆಗೊಳಿಸಲಾಗಿದೆ.

ಕೇಸರಿ, ಬಿಳಿ, ಹಸಿರು ಬಣ್ಣದಲ್ಲಿ ತ್ರಿರಂಗದ ಕೋಳಿಗಳು!

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಬಿಸಿರೋಡಿನ ಕೋಳಿ ಅಂಗಡಿಯೊಂದರಲ್ಲಿ 77ನೇ ಸ್ವಾತಂತ್ರೋತ್ಸವದ ಅಂಗವಾಗಿ ಕೇಸರಿ, ಬಿಳಿ, ಹಸಿರು ಬಣ್ಣದಲ್ಲಿ ತ್ರಿರಂಗದ ಕೋಳಿಗಳು ಕಂಗೊಳಿಸುವ ದೃಶ್ಯ ಕಂಡು ಬಂದಿದೆ.
ಬಿಸಿರೋಡಿನಲ್ಲಿರುವ ಅಜ್ಜಿ ಬೆಟ್ಟು ನಿವಾಸಿ ವಿದ್ಯಾ ಪ್ರಮೋದ್ ಅವರ ಮಗಳು ಪ್ರೀತಂ ಅವರ ಮಾಲಕತ್ವದ ನಂದನ್ ಚಿಕನ್ ಅಂಗಡಿಯಲ್ಲಿ ಕೋಳಿಗಳು ಎಲ್ಲರ ಗಮನ ಸೆಳೆದಿದೆ. ಮೂರು ಕೋಳಿಗಳಿಗೆ ಪ್ರೀತಂ ಅವರೇ ಸ್ವತಃ ಆಯಿಲ್ ಪೈಂಟ್ ನ್ನು ಹಚ್ಚಿದ್ದು, ಬಣ್ಣ ಹಚ್ಚಿರುವ ಈ ಕೋಳಿಗಳನ್ನು ಗ್ರಾಹಕರಿಗೆ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಕಟೀಲು ಅಮ್ಮನಿಗೆ ದೇಶದ ಬಣ್ಣ: ಧ್ವಜವಂದನೆಗೈದ ಆನೆ ಮಹಾಲಕ್ಷ್ಮೀ

ಕಟೀಲು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ದೇವಳದ ಆನೆ ಮಹಾಲಕ್ಷ್ಮೀ ರಾಷ್ಟ್ರ ಧ್ವಜವನ್ನು ಹಿಡಿದು ಎಲ್ಲರ ಗಮನ ಸೆಳೆದರೆ, ಕಟೀಲು ಅಮ್ಮನವರು ಕೇಸರಿ ಬಿಳಿ ಹಸುರು, ಬಣ್ಣದ ಹೂವುಗಳಿಂದ ವಿಶೇಷ ವಾಗಿ ಅಲಂಕಾರ ಮಾಡಿದ್ದು ಭಕ್ತರು ಕಣ್ಣುಂಬಿಕೊಂಡರು. ದೇವಳದ ಮತ್ತೊಂದು ಆಕರ್ಷಣೆಯಾಗಿರುವ ಆನೆ ಮಹಾಲಕ್ಷ್ಮೀ ರಾಷ್ಟ್ರಧ್ವಜವನ್ನು ಹಿಡಿದು ಭಾಗವಹಿಸಿದ್ದು ಮಾತ್ರವಲ್ಲದೆ, ಧ್ವಜ ವಂದನೆ ಗೈದಿರುದು ವಿಶೇಷವಾಗಿತ್ತು. ಕಟೀಲು ದೇವರಿಗೂ ಕೇಸರಿ ಬಿಳಿ ಹಸುರು, ಬಣ್ಣದ ಹೂವುಗಳಿಂದ ವಿಶೇಷ ವಾಗಿ ಅಲಂಕಾರ ಮಾಡಲಾಗಿದ್ದು ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಗಮನ ಸೆಳೆಯಿತು.

ಧ್ವಜಾರೋಹಣ ನೆರವೇರಿಸಿದ ಶತಾಯುಷಿ ಅಜ್ಜಿ

ಶಸ್ತ್ರಚಿಕಿತ್ಸೆಗೆ ಬಂದಿದ್ದ ಶತಾಯುಷಿ ಮಹಿಳೆಯೊಬ್ಬರು ಗುಣಮುಖರಾಗಿ ಆಸ್ಪತ್ರೆಯಲ್ಲಿ ಧ್ವಜಾರೋಹಣ ನೆರೆವೇರಿಸಿದ ಅಪರೂಪದ ಘಟನೆ ಬಾಗಲಕೋಟೆ ನಗರದ ವಾಸನದ ಆಸ್ಪತ್ರೆಯಲ್ಲಿ ಮಂಗಳವಾರ ನಡೆದಿದೆ.

600 ಅಡಿ ಬೆಟ್ಟದ ಮೇಲೆ ಹಾರಿದ ಭಾವುಟ!

ರಾಮನಗರದಲ್ಲಿ ಬರೊಬ್ಬರಿ 600 ಅಡಿ ಎತ್ತರದ ಬೆಟ್ಟದ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಲಾಗಿತ್ತು. ಇದೀಗ ಇಲ್ಲೊಬ್ಬ ಬೈಕ್ ಸವಾರ ಮೇಲೆ ರಾಷ್ಟ್ರಧ್ವಜ ಹಿಡಿದು ಸಂಭ್ರಮಿಸಿದ್ದಾನೆ.

ತರಕಾರಿಯಲ್ಲಿಮೂಡಿದ ಭಾರತದ ಭಾವುಟ!

ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ತರಕಾರಿಯಲ್ಲಿ ಭಾರತದ ಭಾವುಟದ ಬಣ್ಣದಿಂದ ತರಕಾರಿ ಅಂಗಡಿಯೊಂದರಲ್ಲಿ ಜೋಡಿಸಿದ್ದು ಗಮನ ಸೆಳೆಯಿತು.

ಇದನ್ನೂ ಓದಿ : ಜನರ ಕಿವಿಗೆ ಹೂ ಮುಡಿಸುತ್ತಿರುವ ಕಾಂಗ್ರೆಸ್ ಸರ್ಕಾರ!

[embedyt] https://www.youtube.com/watch?v=p9w93rFeg28%5B/embedyt%5D

Categories
ತೀರ್ಥಹಳ್ಳಿ

ತೀರ್ಥಹಳ್ಳಿ: ಅಂಗಡಿ, ವಾಹನ ನಿಲ್ದಾಣದಲ್ಲಿ ದೇಶಾಭಿಮಾನ

ತೀರ್ಥಹಳ್ಳಿ: ಅಂಗಡಿ, ವಾಹನ ನಿಲ್ದಾಣದಲ್ಲಿ ದೇಶಾಭಿಮಾನ
– ಆಟೋ, ಕಾರು, ಗೂಡ್ಸ್ ವಾಹನ ನಿಲ್ದಾಣ ಅಲಂಕಾರ
– ಮನೆ ಮನೆಯಲ್ಲಿ ಹರ್ ಘರ್ ತಿರಂಗಾ

NAMMUR EXPRESS NEWS
ತೀರ್ಥಹಳ್ಳಿ: ಸ್ವಾತಂತ್ರೋತ್ಸವದ ಅಂಗವಾಗಿ ತೀರ್ಥಹಳ್ಳಿಯ ವಿವಿಧ ಸಂಘ ಸಂಸ್ಥೆಗಳು, ವ್ಯಾಪಾರಿಗಳು ಭಾರತದ ಭಾವುಟ ಹಾರಿಸಿದರು. ಕಟ್ಟಡಗಳಲ್ಲಿ ಅಲಂಕಾರ ಬಾವುಟಗಳನ್ನು ಹಾರಿಸಲಾಯಿತು. ಜೊತೆಗೆ ಸಂಜೆ ವಿದ್ಯುತ್ ದೀಪಗಳಿಂದ ವಿವಿಧ ಕಚೇರಿಗಳು ಮತ್ತು ಅಂಗಡಿಗಳನ್ನು ಅಲಂಕಾರ ಮಾಡಲಾಗಿದೆ. ತೀರ್ಥಹಳ್ಳಿ ಪ್ರಸಿದ್ಧ ಅಂಗಡಿಗಳು, ಜ್ಯುವೆಲ್ಲರಿಗಳು, ಬಟ್ಟೆ ಅಂಗಡಿಗಳು ಸೇರಿ ಎಲ್ಲೆಡೆ ಭಾರತದ ಭಾವುಟ ಹಾರಾಡಿತು.

ಆಟೋ, ಕಾರು, ಗೂಡ್ಸ್ ವಾಹನ ನಿಲ್ದಾಣ ಅಲಂಕಾರ!

ತೀರ್ಥಹಳ್ಳಿ ಪಟ್ಟಣದ ವಿವಿಧ ಆಟೋ ನಿಲ್ದಾಣ, ಕಾರು ಮತ್ತು ಬಸ್ ನಿಲ್ದಾಣಗಳಲ್ಲಿ ಅಲಂಕಾರ ಮಾಡಲಾಗಿತ್ತು. ಆಟೋ ಚಾಲಕರು, ಕಾರು, ಗೂಡ್ಸ್ ಮತ್ತು ಬಸ್ ಚಾಲಕರು ಸೇರಿದಂತೆ , ಅಂಗಡಿಗಳು ಮಾಲೀಕರು ಸ್ವಾತಂತ್ರ್ಯ ಉತ್ಸವದಲ್ಲಿ ಭಾಗಿಯಾದರು. ತೀರ್ಥಹಳ್ಳಿಯ ಪಟ್ಟಣದ ಮನೆಗಳು ಸೇರಿದಂತೆ ಹಳ್ಳಿಗಳಲ್ಲೂ ಕೂಡ ಮನೆ ಮನೆಯಲ್ಲಿ ಭಾರತದ ಭಾವುಟ ರಾರಾಜಿಸಿತು. ಶಾಲಾ ಕಾಲೇಜುಗಳು ಗ್ರಾಮ ಪಂಚಾಯಿತಿ ಕಟ್ಟಡಗಳು, ಅಂಗನವಾಡಿಗಳಲ್ಲೂ ಕೂಡ ಭಾರತದ ಧ್ವಜವನ್ನ ಹಾರಿಸಲಾಯಿತು. ಈ ಮೂಲಕ ಎಲ್ಲರೂ ದೇಶಪ್ರೇಮವನ್ನು ಮೆರೆದರು.

ಇದನ್ನೂ ಓದಿ : ತೀರ್ಥಹಳ್ಳಿ ರೆಸಾರ್ಟ್ ಅಲ್ಲಿ ಸಿಕ್ತು ವಿದೇಶಿ ಮದ್ಯ, ಪ್ರಾಣಿಗಳ ಕೊಂಬು!

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಸ್ವಾತಂತ್ರ್ಯ ಸಡಗರ!

ತೀರ್ಥಹಳ್ಳಿಯಲ್ಲಿ ಸ್ವಾತಂತ್ರ್ಯ ಸಡಗರ!
– ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ನಡಿಗೆ
– ಆರಗ ಜ್ಞಾನೇಂದ್ರ ಸೇರಿ ಅನೇಕ ಗಣ್ಯರ ಹಾಜರ್

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಆಡಳಿತ, ಪಟ್ಟಣ ಪಂಚಾಯತ್ ಆಡಳಿತ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡಲಾಯಿತು. ಬೆಳಿಗ್ಗೆ ಎಲ್ಲಾ ಶಾಲೆ ಕಾಲೇಜು ವಿದ್ಯಾರ್ಥಿಗಳು ವಿವಿಧ ವೇಷಭೂಷಣ ಮತ್ತು ಬ್ಯಾಂಡ್ ಜತೆ ಪಥ ಸಂಚಲನ ನಡೆಸಿ ಬಳಿಕ ತೀರ್ಥಹಳ್ಳಿ ಅನಂತಮೂರ್ತಿ ಶಾಲೆ ಹಿಂಭಾಗದ ಮೈದಾನದಲ್ಲಿ ಧ್ವಜಾರೋಹಣ ಮಾಡಲಾಯಿತು. ಶಾಸಕ ಆರಗ ಜ್ಞಾನೇಂದ್ರ, ತಹಸೀಲ್ದಾರ್ ಲಿಂಗರಾಜ್, ಡಿವೈಎಸ್ಪಿ ಗಜಾನನ ವಾಮನ ಸುತಾರ, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಸುಶೀಲಾ ಶೆಟ್ಟಿ, ಉಪಾಧ್ಯಕ್ಷರಾದ ಹಮತ್ ಉಲ್ಲಾ ಅಸಾದಿ,, ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್, ಪ್ರಾಂಶುಪಾಲರಾದ ಸುಧಾ, ಮುಖ್ಯೋಪಾಧ್ಯಾಯ ದೇವೇಂದ್ರ ನಾಯ್ಕ್, ತಾ .ಪಂ.ಕಾರ್ಯನಿರ್ವಾಹಣ ಅಧಿಕಾರಿ ಶೈಲ ಮುಖ್ಯಾಧಿಕಾರಿ ಕುರಿಯಾ ಕೋಸ್ ಸೇರಿದಂತೆ ಪಟ್ಟಣ ಪಂಚಾಯತ್ ಸದಸ್ಯರು, ಜನಪ್ರತಿನಿಧಿಗಳು, ಹಲವರು ಇದ್ದರು.

ಸ್ವದೇಶಿ ವಸ್ತು ಬಳಕೆ ಮಾಡಲು ಆರಗ ಕರೆ

ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ, ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಅಗ್ನಿಪಥ್ ಯೋಜನೆ ಅಡಿಯಲ್ಲಿ ಇಬ್ಬರು ಸೇನೆಗೆ ಸೇರಿರುವುದು ತಾಲೂಕಿಗೆ ಕೀರ್ತಿ ಬಂದತಾಗಿದೆ. ವಿರೋಧ ಇದ್ದರೂ ಕೂಡಾ ಪ್ರಧಾನಿ ನರೇಂದ್ರ ಮೋದಿಯವರು ಯುವಕ ಯುವತಿಯರು ನಮ್ಮ ದೇಶ ಕಾಯುವ ಸೇನಾನಿಗಳಾಗಬೇಕೆಂದು ಅಗ್ನಿಪಥ್ ಯೋಜನೆಗೆ ಚಾಲನೆ ನೀಡಿದರು. ಈ ಪರಿಣಾಮ ಇಂದು ದೇಶದ ಯುವಕ ಯುವತಿಯರು ಸೇನೆಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ನಮ್ಮ ತಾಲೂಕಿನ ಇಬ್ಬರು ಅಗ್ನಿಪಥ ಯೋಜನೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇಬ್ಬರ ಭವಿಷ್ಯವು ಉಜ್ವಲವಾಗಿರಲಿ ಎಂದರು.

ಸ್ವಾತಂತ್ರೋತ್ಸವವನ್ನು ನಮ್ಮ ಮನೆಯ ಹಬ್ಬದಂತೆ ಆಚರಿಸುವ ಮನೋಸ್ಥೈರ್ಯವನ್ನು ಬೆಳಸಿಕೊಳ್ಳ ಬೇಕು. ಸ್ಪದೇಶಿ ವಸ್ತುಗಳ ಸದ್ದಳಕೆ ಮಾಡಿಕೊಳ್ಳಬೇಕು. ಮೈಸೂರು ಸ್ಯಾಂಡಲ್ ಸೋಪು ಹಾಗೂ ಇನ್ನಿತರ ವಸ್ತುಗಳನ್ನು ನಾವು ಸದಾಕಾಲ ಬಳೆಸಿಕೊಳ್ಳುವ ಮನಸ್ಸು ನಮ್ಮಲ್ಲಿರ ಬೇಕು. ಸ್ವಾತ೦ತ್ರೊತ್ಸವ ಬರಿ ಆಚರಣೆಯಾಗದೆ ನಮ್ಮ ನಿತ್ಯದ ಕಾಯಕವಾಗಬೇಕು
ಎಂದರು.

ಇದನ್ನೂ ಓದಿ : ತೀರ್ಥಹಳ್ಳಿ ರೆಸಾರ್ಟ್ ಅಲ್ಲಿ ಸಿಕ್ತು ವಿದೇಶಿ ಮದ್ಯ, ಪ್ರಾಣಿಗಳ ಕೊಂಬು!

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ಬೆಂಗಳೂರು

ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ!

ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ!
– ಹಸಿವು ಮುಕ್ತ ಕರ್ನಾಟಕ ನಮ್ಮ ಗುರಿ ಎಂದ ಸಿಎಂ
– ಅಶಾಂತಿ ಉಂಟು ಮಾಡೋದಕ್ಕೆ ಬಿಡಲ್ಲ, ಎ ಐ ಕ್ಷೇತ್ರದ ಮೇಲೆ ಕಡಿವಾಣ
– ಸಿಎಂ ಭಾಷಣ ಏನಿತ್ತು… ಭದ್ರತೆ ಹೇಗಿತ್ತು..?

NAMMUR EXPRESS NEWS
ಬೆಂಗಳೂರು: ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿನ ಮಾಣಿಕ್ ಶಾ ಗ್ರೌಂಡ್ ನಲ್ಲಿ ಸ್ವಾತಂತ್ರೋತ್ಸವದ ಧ್ವಜಾರೋಹಣ ನೇರವೇರಿಸಿದರು. ಸಿಎಂ ಅವರಿಗೆ ಪೊಲೀಸ್ ಪಡೆಗಳು, ಎನ್‌ಸಿಸಿ ಸೇರಿದಂತೆ ವಿವಿಧ ಪಡೆಗಳು ಗೌರವ ವಂದನೆ ಸಲ್ಲಿಸಿದ್ದಾರೆ. ಮಾಣಿಕ್ ಷಾ ಗ್ರೌಂಡ್ ನಲ್ಲಿ ನೂರಾರು ವಿದ್ಯಾರ್ಥಿಗಳಿಂದ ದೇಶ ಭಕ್ತಿ ಸಾರುವ ಸಾಂಸ್ಕೃತಿಕ ನೃತ್ಯಗಳಿಗೆ ಹೆಜ್ಜೆ ಹಾಕಿದ್ದಾರೆ. ಅನ್ನಬ್ರಹ್ಮ ರೈತ, ಸುಭದ್ರ ಕರ್ನಾಟಕದ ಅಭಿವೃದ್ಧಿಯೇ ಗುರಿ: ಹಿಂದಿನ ಸರ್ಕಾರದಲ್ಲಾದ ಲೋಪಗಳ ಬಗ್ಗೆ ತನಿಖೆಗೆ ಸೂಚಿಸಲಾಗಿದೆ. ಮನುಷ್ಯರ ಬುದ್ಧಿಮತ್ತೆಯು ಉದ್ಯೋಗವನ್ನು ಕಿತ್ತುಕೊಳ್ಳದಂತೆ ಕಾರ್ಯಯೋಜನೆ ರೂಪಿಸಬೇಕಿದೆ.

ಸಮಾಜದಲ್ಲಿ ನಕಾರಾತ್ಮಕ ಧೋರಣೆ ಹೆಚ್ಚಾಗುತ್ತಿದೆ. ಇದೆಲ್ಲವನನ್ನೂ ನಾವು ಮೆಟ್ಟಿ ನಿಲ್ಲಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಅನ್ನವನ್ನು ಕೊಡು, ಉಡಲು ಬಟ್ಟೆಯನ್ನು ಕೊಡು, ಮನೆಯನ್ನು ಕಟ್ಟಿಕೊಡು ಇರಲು ಎಂಬ ಮಾತಿನಂತೆ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಎಲ್ಲರ ಅಭಿವೃದ್ಧಿಯನ್ನು ಬಯಸುವುದೇ ರಾಜ್ಯ ಸರ್ಕಾರ ನೀತಿಯಾಗಿದೆ. ನಾಡಿನಲ್ಲಿ ಶಾಂತಿ, ಸೌಹಾರ್ದತೆ ಕಾಪಾಡುವುದಾಗಿದೆ. ಅನ್ನಬ್ರಹ್ಮ ರೈತರ ಅಭಿವೃದ್ಧಿಯಾಗಬೇಕಿದೆ. ಸುಭದ್ರ ಕರ್ನಾಟಕ, ಭಾರತವನ್ನು ನಿರ್ಮಿಸೋಣ. ನಮ್ಮ ಶಕ್ತಿಯಾದ ವೈವಿಧ್ಯತೆಯನ್ನು ಕಾಪಾಡಬೇಕಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಸರ್ಕಾರದ ಸಾಧನೆ ತೆರೆದಿಟ್ಟ ಸಿಎಂ

ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದ ಸಾಧನೆಗಳನ್ನು ಬಿಚ್ಚಿಟ್ಟರು. ಗ್ಯಾರಂಟಿ ಯೋಜನೆಗಳ ಬಗ್ಗೆ ಭಾಷಣದಲ್ಲಿ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಸಂಪತ್ತಿನ ಸಂಗ್ರಹ ಮತ್ತು ಹಂಚಿಕೆ ಹಾಗೂ ಮರುಹಂಚಿಕೆಗಳಲ್ಲಿ ಸಾಮಾಜಿಕ ನ್ಯಾಯವನ್ನು ಪಾಲಿಸುತ್ತಿದ್ದೇವೆ ಎಂದರು. ಅಭಿವೃದ್ಧಿಯ ಸ್ವಾತಂತ್ರ್ಯ ಎಂಬುದರಲ್ಲಿ ನಂಬಿಕೆಯಿಟ್ಟು ಈ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡುತ್ತಿದ್ದೇವೆ ಎಂದು ನುಡಿದರು.
ಭಾಷಣದಲ್ಲಿ ಹಿಂದಿನ ಬಿಜೆಪಿ ಸರ್ಕಾರವನ್ನು ಪರೋಕ್ಷವಾಗಿ ಟೀಕೆ ಮಾಡಿದ ಸಿದ್ದರಾಮಯ್ಯ, ಶಾಂತಿಯುತ ಸಮಾಜವಿದ್ದರೆ ಮಾತ್ರ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ನಮ್ಮ ಜನರಿಗೆ ಅರ್ಥವಾಗಿರುವುದರಿಂದ ದುಷ್ಟರ ಆಟಗಳು ಬಹಳ ಕಾಲ ನಡೆಯುವುದಿಲ್ಲ ಎಂಬುದನ್ನು ಕರ್ನಾಟಕದ ಜನರೇ ಸಾಬೀತು ಮಾಡಿದ್ದಾರೆ ಎಂದರು.

ಬೆಲೆ ಏರಿಕೆ, ನಿರುದ್ಯೋಗ, ಜಾತಿ-ಧರ್ಮಗಳ ಕಾರಣಕ್ಕಾಗಿ ತಾರತಮ್ಯ, ಭ್ರಷ್ಟಾಚಾರ ಮುಂತಾದ ಕಾರಣಗಳಿಗಾಗಿ ನಾಡಿನ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ರಾಜ್ಯದ ಅನೇಕ ಜಿಲ್ಲೆಗಳ ಜನರ ತಲಾದಾಯ ಹಿಂದೆ ಆಡಳಿತ ನಡೆಸಿದ್ದ ನಮ್ಮ ಹಿಂದಿನ ಸರ್ಕಾರದ ಅವಧಿಗೆ ಹೋಲಿಸಿದರೆ ಆ ನಂತರದ ಅವಧಿಯಲ್ಲಿ ಏರಿಕೆಯಾಗದೆ ಬಡತನ ಇನ್ನಷ್ಟು ಹೆಚ್ಚುತ್ತಿರುವುದು ನಮ್ಮ ಗಮನಕ್ಕೆ ಬಂದಿತ್ತು. ಇದನ್ನೆಲ್ಲ ಗಂಭೀರವಾಗಿ ಪರಿಗಣಿಸಿದ ನಮ್ಮ ಸರ್ಕಾರ ಜನರ ಆರ್ಥಿಕ, ಸಾಮಾಜಿಕ ಚೈತನ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಸಾರ್ವತ್ರಿಕ ಮೂಲ ಆದಾಯ ಎಂಬ ಹೊಸ ಆರ್ಥಿಕ ಪ್ರಮೇಯವನ್ನು ಅಳವಡಿಸಿಕೊಂಡು ಗ್ಯಾರಂಟಿ ಯೋಜನೆಗಳನ್ನು ರೂಪಿಸಿದೆ ಎಂದು ಹೇಳಿದರು.

1350 ಪೊಲೀಸರ ಭಾರೀ ಭದ್ರತೆ

ಕಾರ್ಯಕ್ರಮದ ಹಿನ್ನೆಲೆ ಕೆಎಸ್‌ಆರ್‌ಪಿ ಹಾಗೂ ಸಿಎಆರ್ ಸಹಿತ 38 ತುಕಡಿಗಳು ಭದ್ರತೆಗೆ ನಿಯೋಜನೆಗೊಂಡಿದ್ದು, 1,350ಕ್ಕೂ ಹೆಚ್ಚು ಪೊಲೀಸರು ಮೈದಾನದ ಸುತ್ತ ಬಿಗಿ ಭದ್ರತೆ ವಹಿಸಿದ್ದಾರೆ. 100 ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಕಣ್ಗಾವಲು ಹಾಕಲಾಗಿತ್ತು.

ಇದನ್ನೂ ಓದಿ : ತೀರ್ಥಹಳ್ಳಿ ರೆಸಾರ್ಟ್ ಅಲ್ಲಿ ಸಿಕ್ತು ವಿದೇಶಿ ಮದ್ಯ, ಪ್ರಾಣಿಗಳ ಕೊಂಬು!

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
Uncategorized

ಯುವ ಪೀಳಿಗೆ ದೇಶ ಸೇವೆಗೆ ಸಜ್ಜಾಗಬೇಕು : ಪ್ರಾಚಾರ್ಯ ವಿಮಲಾಕಾಂತ ಪಾಟೀಲ

ಯುವ ಪೀಳಿಗೆ ದೇಶ ಸೇವೆಗೆ ಸಜ್ಜಾಗಬೇಕು : ಪ್ರಾಚಾರ್ಯ ವಿಮಲಾಕಾಂತ ಪಾಟೀಲ

NAMMUR EXPRESS SINDAGI : ಸಿಂದಗಿ : ಇಂದಿನ ಸಮಾಜದಲ್ಲಿರುವ ಹಲವಾರು ಸಮಸ್ಯೆಗಳನ್ನು ನಿವಾರಿಸಲು ನಾವು ನಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ದೇಶ ಸೇವೆಗೆ ಮುಂದಾಗಬೇಕಿದೆ ಎಂದು ಪ್ರಾಚಾರ್ಯ ವಿಮಲಕಾಂತ ಪಾಟೀಲ ಹೇಳಿದರು. ಪಟ್ಟಣದ ಆರ್.ಡಿ.ಪಾಟೀಲ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜರುಗಿದ ಪವಿವ ಸಂಸ್ಥೆಯ ವಿವಿಧ ಅಂಗಸAಸ್ಥೆಗಳ ಸಹಯೋಗದಲ್ಲಿ ೭೭ನೇ ಸ್ವಾತಂತ್ರೊö್ಯÃತ್ಸವ ದಿನಾಚರಣೆಯ ಸಮಾರಂಭದಲ್ಲಿ ಧ್ವಜಾರೋಹಣ ನೇರವೇರಿಸಿ ಅವರು ಮಾತನಾಡಿದರು.

ವಿದ್ಯಾರ್ಥಿ ಜೀವನದಲ್ಲಿ ಚೆನ್ನಾಗಿ ಓದಿಕೊಳ್ಳುವುದರ ಜೊತೆಗೆ ಪ್ರಪಂಚ ಜ್ಞಾನದ ಜೊತೆಗೆ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ನಮ್ಮ ಮಹಾನ ಭಾರತದೇಶದ ರಕ್ಷಣೆ ಮತ್ತು ಅಭಿವೃದ್ಧಿಗೆ ಕೊಡುಗೆಯನ್ನು ನೀಡಬೇಕು. ಭಾರತವು ಜಗತ್ತಿನಲ್ಲಿ ಅತಿದೊಡ್ಡ ಜಾತ್ಯಾತೀತ ಮತ್ತು ಪ್ರಜಾಪ್ರಭುತ್ವ ಹೊಂದಿದ ದೇಶವಾಗಿದೆ. ಜಗತ್ತಿನಲ್ಲಿ ಎರಡನೇಯ ದೊಡ್ಡ ಸೇನಾ ಪಡೆಯನ್ನು ಹೊಂದಿರುವ ದೇಶವಾಗಿದೆ. ಮೊದಲ ಪ್ರಯತ್ನದಲ್ಲಿಯೇ ಮಂಗಳಯಾನ ಯಶಸ್ವಿಯಾಗಿದೆ. ಸ್ವತಂತ್ರ ಭಾರತದಲ್ಲಿ ಇಂದಿಗೂ ಸಹ ನಾನಾ ಕಡೆಗಳಲ್ಲಿ ಅಸಮಾನತೆ, ದೌರ್ಜನ್ಯ, ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು, ಸರ್ಕಾರದ ಮೇಲಿನ ಭ್ರಷ್ಟಾಚಾರ, ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಎದುರಿಸುತ್ತಿರುವ ಆಪಾದನೆ, ಪರಸ್ಪರ ಮಾತಿನ ಕೆಸರಾಟಗಳ ಬೆಳವಣಿಗೆಯನ್ನು ನೋಡಿದರೆ ವಿಷಾದನೀಯವೆನಿಸುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಪ್ರಾಚಾರ್ಯರಾದ ಡಿ.ಎಂ.ಪಾಟೀಲ, ಬಿ.ಜಿ.ಅವಟಿ, ಜೆ.ಸಿ.ನಂದಿಕೋಲ, ದಿವಾಕರ ಮಠ, ಶರಣು ಜೋಗೂರ, ಬಿ.ಎಂ.ಸಿAಗನಳ್ಳಿ, ಎನ್.ಸಿ.ಸಿ. ಅಧಿಕಾರಿ ರವಿ ಲಮಾಣಿ, ದೈಹಿಕ ಉಪನ್ಯಾಸಕರಾದ ರವಿ ಗೋಲಾ, ಗವಿಸಿದ್ದಪ್ಪ ಆನೆಗುಂದಿ ಸೇರಿದಂತೆ ವಿವಿಧ ಅಂಗ ಸಂಸ್ಥೆಗಳ ಬೋಧಕ ಬೋಧಕೇತರ ಸಿಬ್ಬಂದಿ, ಎನ್.ಎಸ್.ಎಸ್., ಎನ್.ಸಿ.ಸಿ. ವಿದ್ಯಾರ್ಥಿಗಳು ಇನ್ನಿತರರು ಇದ್ದರು.

ಇದನ್ನೂ ಓದಿ : ತೀರ್ಥಹಳ್ಳಿ ರೆಸಾರ್ಟ್ ಅಲ್ಲಿ ಸಿಕ್ತು ವಿದೇಶಿ ಮದ್ಯ, ಪ್ರಾಣಿಗಳ ಕೊಂಬು!

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ರಾಜ್ಯ

ಟಾಪ್ ನ್ಯೂಸ್ ಕರ್ನಾಟಕ

– ನಟ ಉಪೇಂದ್ರ ಕೇಸಿಗೆ ತಡೆ ನೀಡಿದ ಹೈಕೋರ್ಟ್
– ಚಿಕ್ಕಮಗಳೂರಲ್ಲಿ ಕಾರು ಬೈಕಿಗೆ ಗುದ್ದಿ 100 ಮೀಟರ್
ಎಳೆದೊಯ್ದು ಪರಾರಿ!
– ಬೈಕ್ ವೀಲಿಂಗ್ ಚಟಕ್ಕೆ ಯುವಕ ಬಲಿ!
– ಹಾಸ್ಟೆಲ್ ಊಟದಲ್ಲಿ ಹಲ್ಲಿ: ವಿದ್ಯಾರ್ಥಿಗಳು ಅಸ್ವಸ್ಥ
– ಭೂಕುಸಿತದಲ್ಲಿ ಸಿಲುಕಿದ ರಾಜ್ಯದ ಐವರು ಮಹಿಳೆಯರು!

NAMMUR EXPRESS NEWS
ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ರಿಲೀಫ್ ಸಿಕ್ಕಿದೆ. ಸಾಮಾಜಿಕ ಜಾಲತಾಣದ ಲೈವ್ ನಲ್ಲಿ ಹೇಳಿದ ಹೇಳಿಕೆಗೆ ತೀವ್ರ ಆಕ್ರೋಶ ಕೇಳಿಬಂದಿದ್ದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯವರಿಗೆ ಅವಮಾನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನಟ ಉಪೇಂದ್ರ ಅವರ ವಿರುದ್ಧ ದಾಖಲಾಗಿರುವ 2 ಎಫ್ಐಆರ್ ಗಳಿಗೆ ಕರ್ನಾಟಕ ಹೈಕೋರ್ಟ್ ಸೋಮವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ. ಉಪೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ನೇರಪ್ರಸಾರದಲ್ಲಿ ಮಾತನಾಡುವಾಗ ದಲಿತ ಸಮುದಾಯವನ್ನು ಹೀಗಳೆಯುವ ನುಡಿಗಟ್ಟು ಬಳಸಿದ್ದರು. ಈ ಹಿನ್ನಲೆ ಬೆಂಗಳೂರಿನ ದಕ್ಷಿಣ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಪೊಲೀಸ್ ಠಾಣೆಯಲ್ಲಿ ನಟ ಉಪೇಂದ್ರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಯ ಪೊಲೀಸರು ಎಸ್ಎ ಮತ್ತು ಎಸ್‌ಟಿ (ದೌರ್ಜನ್ಯ ನಿಷೇಧ) ಕಾಯಿದೆ ಸೆಕ್ಷನ್ 3(1)(ಆರ್)(ಎಸ್) ಅಡಿ ದಾಖಲಿಸಿದ್ದ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಉಪೇಂದ್ರ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ್‌ ಗೌಡ‌ ನೇತೃತ್ವದ ಪೀಠವು ಈ ಆದೇಶ ಮಾಡಿದೆ. ಕನ್ನಡ ನುಡಿಗಟ್ಟು ಬಳಕೆ ಮಾಡಿದ್ದಕ್ಕೆ ತಮ್ಮ ವಿರುದ್ಧ ಸುಳ್ಳು, ಕ್ಷುಲ್ಲಕ ಮತ್ತು ಪ್ರಚಾರದ ಉದ್ದೇಶದಿಂದ ಪ್ರಕರಣ ದಾಖಲಿಸಲಾಗಿದೆ. ತಾನು ದಲಿತರು ಅಥವಾ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಕ್ಕೆ ಸೇರಿದ ವ್ಯಕ್ತಿಗಳನ್ನು ಅವಮಾನಿಸಿಲ್ಲ. ದುರುದ್ದೇಶದಿಂದ ಪ್ರಕರಣ ದಾಖಲಿಸಲಾಗಿದೆ. ಈ ನಿಟ್ಟಿನಿಂದ ಪ್ರಕರಣದ ಮುಂದಿನ ಪ್ರಕ್ರಿಯೆಗೆ ತಡೆ ವಿಧಿಸಬೇಕು ಎಂದು ಮಧ್ಯಂತರ ಕೋರಿಕೆ ಸಲ್ಲಿಸಿದ್ದರು.

ಬೈಕ್‌ ಸವಾರ ರಸ್ತೆಯಲ್ಲಿ ಉಜ್ಜಿಕೊಂಡು ಹೋದರೂ ತಿರುಗಿ ನೋಡದ ಚಾಲಕ!

ಕಾರು ಬೈಕ್ ಗೆ ಡಿಕ್ಕಿಯಾಗಿ ಸುಮಾರು 100 ಮೀಟರ್ ವರೆಗೂ ಬೈಕ್ ನ್ನು ಎಳೆದೊಯ್ದ ಘಟನೆ ಚಿಕ್ಕಮಗಳೂರು ಪಟ್ಟಣದ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ನಡೆದಿದೆ. ಚಿಕ್ಕಮಗಳೂರು ನಗರದ ಬೈಪಾಸ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಘಟನೆಯ ದೃಶ್ಯ ಕಂಡು ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗುದ್ದಿದ ರಭಸಕ್ಕೆ ಬೈಕಿನಲ್ಲಿ ಬೆಂಕಿ ಹತ್ತಿದರೂ ಕಾರು ಚಾಲಕ ಕಾರು ನಿಲ್ಲಿಸುವ ಪ್ರಯತ್ನಕ್ಕೆ ಮುಂದಾಗಿಲ್ಲ, ಬೈಕ್ ಸವಾರ ರಸ್ತೆಯಲ್ಲಿ ಉಜ್ಜಿಕೊಂಡು ಹೋದರೂ ಕಾರು ಚಾಲಕ ತಿರುಗಿಯೂ ನೋಡಿಲ್ಲ.ಹಿಟ್ ಅಂಡ್ ರನ್ ಮಾಡಿರುವ ಕಾರು ಚಾಲಕನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಾರು ಚಾಲಕನ ಅತಿರೇಕದ ವರ್ತನೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಹಲ್ಲಿ ಬಿದ್ದ ಆಹಾರ ಸೇವಿಸಿ 30 ಮಂದಿ ವಿದ್ಯಾರ್ಥಿನಿಯರು ಅಸ್ವಸ್ಥ

ಹಲ್ಲಿ ಬಿದ್ದಿದ್ದ ಆಹಾರ ಸೇವಿಸಿದ 30 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ತಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ರಕ್ಕಸಗಿ ಗ್ರಾಮದಲ್ಲಿರುವ ಕಸ್ತೂರಬಾ ಗಾಂಧಿ ಬಾಲಕಿಯರ ಹಾಸ್ಟೆಲಿನಲ್ಲಿ ನಡೆದಿದೆ.
ಸೋಮವಾರ ಮಧ್ಯಾಹ್ನ ವಿದ್ಯಾರ್ಥಿನಿಯರು ಶಾಲೆಯಿಂದ ಬಂದ ಮೇಲೆ ಊಟ ಮಾಡಿದ್ದರು. ಬಳಿಕ ಹಲ್ಲಿ ಬಿದ್ದ ವಿಷಯ ಹರಡಿ ಹಲವರು ಆತಂಕಕ್ಕೊಳಗಾದರು. ಅವರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಹಾಸ್ಟೇಲ್ ಗೆ ವೈದ್ಯರನ್ನು ಕರೆಯಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಹೆಚ್ಚಿನವರು ಆತಂಕದ ಕಾರಣದಿಂದಲೇ ಅಸ್ವಸ್ಥ ಆಗಿದ್ದು ಎನ್ನಲಾಗಿದೆ. ಮತ್ತೆ ಕೆಲವರನ್ನು ಅಲ್ಲಿನ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಈಗ ಎಲ್ಲ ಮಕ್ಕಳ ಆರೋಗ್ಯ ಸ್ಥಿತಿ ನಿಯಂತ್ರಣದಲ್ಲಿದೆ.

ಬೈಕ್ ವ್ಹಿಲಿಂಗ್ ಚಟಕ್ಕೆ ಯುವಕ ಬಲಿ!

ಇತ್ತೀಚಿಗೆ ಬೈಕ್ ವೀಲಿಂಗ್, ರೀಲ್ಸ್ ಚಟ ಅನೇಕರ ಜೀವ, ಜೀವನ ಹಾಳು ಮಾಡುತ್ತಿದೆ. ಈಗಾಗಲೇ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ನಂದಿ ಗಿರಿಧಾಮಕ್ಕೆ ಹೋಗುವ ಮಾರ್ಗದಲ್ಲಿ ಬೈಕ್ ವೀಲಿಂಗ್ ಮಾಡಿ ಇನ್ನೊಂದು ಬೈಕಿಗೆಡಿಕ್ಕಿ ಹೊಡೆದು ಓರ್ವ ಸಾವನ್ನು ಕಂಡಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಭೂಕುಸಿತದಲ್ಲಿ ಸಿಲುಕಿದ ರಾಜ್ಯದ ಐವರು ಮಹಿಳೆಯರು!

ಕರ್ನಾಟಕ ಮೂಲದ ಐವರು ಮಹಿಳೆಯರು ಹಿಮಾಚಲದಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ಸಿಲುಕಿದ್ದಾರೆ. ಹಿಮಪಾತ ಆಗುತ್ತಿರುವಂತಹ ಹಿನ್ನೆಲೆಯಲ್ಲಿ ಕೇದಾರದಿಂದ 30 ಕಿಲೋಮೀಟರ್ ದೂರದಲ್ಲಿ ಸಿಲುಕಿಕೊಂಡಿದ್ದಾರೆ. ಚಿತ್ರದುರ್ಗದ ಬಿಜೆಪಿ ಮುಖಂಡರಾದ ರತ್ನಮ್ಮ, ಗೀತಾ, ಅಂಬಿಕ ಇನ್ನೂ ಇಬ್ಬರು ಮಹಿಳೆಯರು ಕೇದಾರನಾಥದಿಂದ ಬರಲು ಆಗದಿರುವ ಸ್ಥಿತಿಯಲ್ಲಿದ್ದಾರೆ. ಶೀಘ್ರವಾಗಿ ಕಳುಹಿಸಿಕೊಳ್ಳಲು ಸರ್ಕಾರಕ್ಕೆ ಮನವಿ ಮಾಡಿದ್ದಾರೆ

ಇದನ್ನೂ ಓದಿ : ತೀರ್ಥಹಳ್ಳಿ ರೆಸಾರ್ಟ್ ಅಲ್ಲಿ ಸಿಕ್ತು ವಿದೇಶಿ ಮದ್ಯ, ಪ್ರಾಣಿಗಳ ಕೊಂಬು!

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
Uncategorized

ಜಾತಿ, ಧರ್ಮ, ಮತ, ಪಂತಗಳಿಗಿಂತ ದೇಶ ಪ್ರೇಮ ದೊಡ್ಡದು : ಶಾಸಕ ಅಶೋಕ ಮನಗೂಳಿ

ಜಾತಿ, ಧರ್ಮ, ಮತ, ಪಂತಗಳಿಗಿಂತ ದೇಶ ಪ್ರೇಮ ದೊಡ್ಡದು : ಶಾಸಕ ಅಶೋಕ ಮನಗೂಳಿ
– ತಾಲೂಕು ಕ್ರೀಡಾಂಗಣದಲ್ಲಿ ನಡೆದ ಸ್ವತಂತ್ರ ದಿನಾಚರಣೆ
– ನಾವು ಜಾತಿ , ದ್ವೇಷ ರಾಜಕಾರಣ ಮಾಡಿಲ್ಲ
– ನುಡಿದಂತೆ ನಡೆದ ಕಾಂಗ್ರೆಸ್

ಸಿಂದಗಿ: ಜಾತಿ, ಧರ್ಮ, ಮತ, ಪಂತಗಳಿಗಿಂತ ದೇಶ ಪ್ರೇಮ ದೊಡ್ಡದು. ಸಂವಿಧಾನದಿಂದ ಭಾರತ ಬದಲಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡ 77ನೇ ಸ್ವತಂತ್ರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ಭಾರತವು ಇಂದು ಸಧೃಡವಾಗಿ, ಆರ್ಥಿಕವಾಗಿ ಸಬಲವಾಗಿದೆ ಎಂದರೆ ಅದಕ್ಕೆ ಕಾರಣ ಡಾ.ಬಿ.ಆರ್.ಅಂಬೇಡ್ಕರ್‌ರವರು ಬರೆದಿರುವ ಸಂವಿಧಾನ ಎಂದರು. ಇಂದು ನಾವೆಲ್ಲರೂ ದೇಶಕ್ಕಾಗಿ ಹೋರಾಡಿದ ಹೋರಾಟಗಾರರನ್ನು ಸ್ಮರಿಸಿಕೊಳ್ಳಬೇಕು. ಕಾಂಗ್ರೆಸ್ ಪಕ್ಷ ಭರವಸೆ ನೀಡದ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದಿದೆ. ಸಿಂದಗಿ ಮತಕ್ಷೇತ್ರವನ್ನು ಮಾದರಿ ಅಭಿವೃದ್ದಿಯ ಪಥದಲ್ಲಿ ನಡೆಸುವ ಭರವಸೆ ನೀಡುವೇ ತೋಟಗಾರಿಕೆ ಇಲಾಖೆ, ಕಡಣ ಬ್ರಿಡ್ಜ್ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸಂಪೂರ್ಣ ನೀರಾವರಿ ಯೋಜನೆನ್ನು ಅನುಷ್ಠಾನಕ್ಕೆ ತರುವ ಕಾರ್ಯವನ್ನು ಮಾಡುವೆ ಎಂದು ಭರವಸೆ ನೀಡಿದರು.

ತಾಲೂಕು ದಂಡಾಧಿಕಾರಿ ಪ್ರದೀಪ ಹಿರೇಮಠ ಮಾತನಾಡಿದರು. 80ವರ್ಷಕ್ಕೂ ಮೇಲ್ಪಟ್ಟು ಸರ್ಕಾರಿ ಪಿಂಚಣ ಪಡೆಯುತ್ತಿರುವ ಹಿರಿಯ ನಾಗರಿಕ ಫಲಾನುಭವಿಗಳಿಗೆ ಕಾರ್ಯಕ್ರಮದಲ್ಲಿ ಗೌರವ ಸನ್ಮಾನ ಮಾಡಲಾಯಿತು.
ಪಟ್ಟಣದ ವಿವಿಧ ಶಾಲೆಯ ಮಕ್ಕಳು ಛದ್ಮ ವೇಷ ಧರಿಸಿದ್ದರು. ಕಲಾ ನೃತ್ಯ ತಂಡಗಳಿAದ ಮನೋರಂಜನೆ ಕಾರ್ಯಕ್ರಮ ನೀಡಲಾಯಿತು. ಈ ವೇಳೆ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಬಾಬೂ ರಾಠೋಡ, ಸಿ.ಪಿ,ಐ ಡಿ.ಹುಲುಗಪ್ಪ, ಪುರಸಭೆ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಆಯ್.ಎಸ್.ಟಕ್ಕೆ ಇದ್ದರು. ದೈ.ಶಿಕ್ಷಕ ಸಿದ್ದಲಿಂಗ ಚೌಧರಿ ನಿರೂಪಿಸಿದರು. ನಾವು ದ್ವೇಷ ರಾಜಕಾರಣ ಮಾಡಲ್ಲ, ಜಾತಿ ರಾಜಕಾರಣ ಮಾಡಲ್ಲ, ಮತಕ್ಷೇತ್ರವನ್ನು ಅಭಿವೃದ್ದಿಗೊಳಿಸಿ ಮಾದರಿ ಕ್ಷೇತ್ರವನ್ನಾಗಿಸುವುದು ನನ್ನ ಗುರಿ. ಅಶೋಕ ಮನಗೂಳಿ ಶಾಸಕರು ಸಿಂದಗಿ

ಇದನ್ನೂ ಓದಿ : ತೀರ್ಥಹಳ್ಳಿ ರೆಸಾರ್ಟ್ ಅಲ್ಲಿ ಸಿಕ್ತು ವಿದೇಶಿ ಮದ್ಯ, ಪ್ರಾಣಿಗಳ ಕೊಂಬು!

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ರಾಷ್ಟ್ರೀಯ ವಾರ್ತೆ

10ನೇ ಬಾರಿಗೆ ಧ್ವಜಾರೋಹಣ ಮಾಡಿದ ನಮೋ!

10ನೇ ಬಾರಿಗೆ ಧ್ವಜಾರೋಹಣ ಮಾಡಿದ ನಮೋ!
– ಕೆಂಪುಕೋಟೆ ಮೇಲೆ ಭಾರತ ಧ್ವಜ ಹಾರಿಸಿದ ಮೋದಿ!
– ಭಾರತ ವಿಶ್ವದಲ್ಲೇ ಅತ್ಯುತ್ತಮ ಸಾಧನೆ ಎಂದು ಬಣ್ಣನೆ
– ಇನ್ನು 5 ವರ್ಷದಲ್ಲಿ ಭಾರತ ವಿಶ್ವಕ್ಕೆ ನಂ.1 ಆಗುತ್ತೆ
– ಮೋದಿ ಹೇಳಿದ್ದೇನು..?, ಇಲ್ಲಿದೆ ಕಂಪ್ಲೀಟ್ ಭಾಷಣ

NAMMUR EXPRESS NEWS
ನವದೆಹಲಿ : ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದ್ದು ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯ ಕೆಂಪುಕೋಟೆ ಮೇಲೆ ಸತತ 10ನೇ ಬಾರಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿ, ದೇಶವನ್ನು ಉದ್ದೇಶಿಸಿ ನಮೋ ಭಾಷಣ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನದಂದು ಜನರಿಗೆ ಶುಭಾಶಯ ಕೋರಿದ್ದಾರೆ. ಸ್ವಾತಂತ್ರ್ಯ ದಿನದ ಶುಭಾಶಯಗಳು. ನಮ್ಮ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಿಗೆ ನಾವು ಗೌರವ ಸಲ್ಲಿಸುತ್ತೇವೆ ಮತ್ತು ಅವರ ದೃಷ್ಟಿಯನ್ನು ಈಡೇರಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ ಎಂದಿದ್ದಾರೆ.

ಮಣಿಪುರ ಶಾಂತಿಯತ್ತ, ಸಮಧಾನದಿಂದಿರಿ ಸರ್ಕಾರ ನಿಮ್ಮ ಜತೆಗಿದೆ

ದೇಶ 140 ಕೋಟಿ ನನ್ನ ಪರಿವಾರದ ಸಹೋದರ ಸಹೋದರಿಯರಿಗೆ ಶುಭಾಶಯಗಳನ್ನು ಕೋರುತ್ತಾ ಮಾತು ಆರಂಭಿಸಿದ ಅವರು, ದೇಶದ ಸ್ವಾತಂತ್ರ್ಯದ ಸಂಭ್ರಮಾಚರಣೆಗೆ ಕೊಡುಗೆ ನೀಡಿದ ಮತ್ತು ತ್ಯಾಗ, ಬಲಿದಾನವಾದ ಮಹನೀಯರಿಗೆ ನಾನು ವಂದಿಸುತ್ತೇನೆ ಮತ್ತು ಅಭಿನಂದಿಸುತ್ತೇನೆ ಎಂದಿದ್ದಾರೆ. ಮಣಿಪುರದಲ್ಲಿ ಕೆಲ ದಿನಗಳ ಹಿಂದೆ ಹಿಂಸಾಚಾರ ನಡೆದಿತ್ತು, ಹಲವು ಜನರು ಪ್ರಾಣ ಕಳೆದುಕೊಂಡಿದ್ದರು. ಆದರೆ ಇದೀಗ ಶಾಂತಿಯತ್ತ ಹೆಜ್ಜೆ ಹಾಕಿದೆ. ಶಾಂತಿ ಸಮಾಧಾನದಿಂದಿರಲು ಅವರು ಕರೆ ನೀಡಿದರು. ಸರ್ಕಾರ ಅದಾ ನಿಮ್ಮಜತೆ ಇರಲಿದೆ ಎನ್ನುವ ಅಭಯ ನೀಡಿ ವಿಶ್ವಾಸ ತುಂಬುವ ಕೆಲಸ ಮಾಡಿದರು.
ದೇಶ ಎಲ್ಲಾ ಕ್ಷೇತ್ರ ಗಳಲ್ಲಿ ಪ್ರಗತಿಯತ್ತ ಸಾಗ್ತಿದೆ. ಸಹಕಾರಿ ಸಂಸ್ಥೆಗಳಿಂದ ಬಡವರ ಕಲ್ಯಾಣ ಕಾರ್ಯ ನಡೆತಿದೆ. ಮೀನುಗಾರರ ಕಲ್ಯಾಣ, ನಾವು ಬಡವರ ಕಲ್ಯಾಣದಲ್ಲಿ ತೊಡಗಿಸಿಕೊಂಡಿದ್ದೇವೆ ಎಂದರು.

ಬಡವರ ಅಭಿವೃದ್ಧಿಗೆ ಹಲವು ಯೋಜನೆ

ರೈತರಿಗೆ ಯೂರಿಯಾವನ್ನು ಸುಲಭವಾಗಿ ಕಡಿಮೆ ದರದಲ್ಲಿ ದೊರೆಯುವಂತೆ ಮಾಡಿದೆ. ಮುದ್ರಾ ಯೋಜನೆಯ ಲಾಭವನ್ನು ಕೋಟ್ಯಂತರ ಜನ ಲಾಭ ಪಢದುಕೊಂಡಿದ್ದಾರೆ. ದೇಶದ ತಿಜೋರಿ ಜನತಾ ದರ್ಶನಕ್ಕಾಗಿ ಮೀಸಲಿಡಲಾಗಿದೆ. ಬಡವರ ಅಭಿವೃದ್ಧಿಗೆ ಸುಮಾರು 4 ಲಕ್ಷ ಕೋಟಿ ಖರ್ಚು ಮಾಡಲಾಗುತ್ತಿದೆ. ವ್ಯವಸಾಯಕ್ಕಾಗಿ 8 ಕೋಟಿ ರೈತರು ಯೋಜನೆಯ ಲಾಭವನ್ನು ಪಡೆದಿದ್ದಾರೆ.

1800 ಮಂದಿಗೆ ವಿಶೇಷ ಆಹ್ವಾನ

ವಿಶ್ವಕರ್ಮ ಯೋಜನೆ ನೂತನ ಯೋಜನ ಮೂಲಕ ಓಬಿಸಿ ಸಮಾಜಗಳ ಅಭಿವೃದ್ಧಿಗೆ ಮುಂದಾಗಿರುವದನ್ನು ಮೋದಿಜಿ ಈ ಸಂದರ್ಭದಲ್ಲಿ ತಿಳಿಸಿದರು.ಈ ಸಮಾರಂಭಕ್ಕೆ ದೇಶಾದ್ಯಂತ ವಿವಿಧ ವೃತ್ತಿಗೆ ಸೇರಿದ 1800 ಮಂದಿಯನ್ನು ತಮ್ಮ ಸಂಗಾತಿಗಳೊಂದಿಗೆ ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು. 3 ಲಕ್ಷ ಕೋಟಿ ರಾಜ್ಯಗಳ ಅಭಿವೃದ್ಧಿಗೆ ಬಳಸಲಾಗುತ್ತಿದೆ. ಯೂರಿಯಾ ಸಬ್ಸಿಡಿ ಜಾಸ್ತಿ ಮಾಡಿದ್ದೇವೆ. ಆಯುಷ್ಮಾನ್ ಯೋಜನೆ ಕೋಟ್ಯಂತರ ಜನರ ಜೀವ ರಕ್ಷಣೆಗೆ ಮಾಡಿದೆ. ಆರೋಗ್ಯ ಸುಧಾರಿಸಿಕೊಳ್ಳಲು ಅನುಕೂಲ ಕಲ್ಪಿಸಿದೆ.

ಭಾಯಿಯೋ ಔರ್ ಬೆಹೆನೋ ಬಳಸಲಿಲ್ಲ!

ಪ್ರತಿ ಬಾರಿಯೂ ಪ್ರಧಾನಿ ಮೋದಿ ಭಾಷಣ ಆರಂಭಿಸುವಾಗ ಮಿತ್ರೋ, ಭಾಯಿಯೋ ಔರ್ ಬೆಹನೋ ಎಂದೇ ಸಂಬೋಧಿಸುತ್ತಿದ್ದರು. ಆದರೆ ಈ ಬಾರಿ ಆ ಈ ಪದಗಳನ್ನು ಬಳಕೆ ಮಾಡಿಲ್ಲ ಬದಲಾಗಿದೆ ‘ಪರಿವಾರ್‌ಜನ್’ ಎನ್ನುವ ಪದವನ್ನು ಬಳಕೆ ಮಾಡಿದ್ದಾರೆ

ಭಾರತದ ಹಳ್ಳಿಗಳ ಅಭಿವೃದ್ಧಿಗೆ ಪ್ಲಾನ್!

ಭಾರತೀಯ ಆರ್ಥಿಕತೆಯ ಬೆಳವಣಿಗೆ, ಸಾಮಾಜಿಕ ಕಲ್ಯಾಣ, ರಾಷ್ಟ್ರೀಯ ಭದ್ರತೆ ಮತ್ತು ಮಹಿಳಾ ಸಬಲೀಕರಣದಂತಹ ವಿಷಯಗಳ ಬಗ್ಗೆ ಪ್ರಸ್ತಾಪಿಸಿದರು. ಹಣದುಬ್ಬರ ತಗ್ಗಿಸುವ ಪ್ರಯತ್ನ ನನ್ನ ದೇಶದ ಜನರ ಮೇಲಿನ ಹಣದುಬ್ಬರದ ಹೊರೆಯನ್ನು ಕಡಿಮೆ ಮಾಡಲು ನಾನು ಈ ದಿಕ್ಕಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ನನ್ನ ಪ್ರಯತ್ನ ಮುಂದುವರಿಯುತ್ತದೆ. ಗ್ರಾಮದಿಂದ ಗ್ರಾಮಕ್ಕೆ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ, ಗ್ರಾಮದಿಂದ ಗ್ರಾಮಕ್ಕೆ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ, ಸರ್ಕಾರ ಯಾವ ಯೋಜನೆಗಳಿಗೆ ಅಡಿಗಲ್ಲು ಹಾಕುತ್ತದೋ ಅದು ನಮ್ಮ ಅವಧಿಯಲ್ಲಿಯೇ ಪೂರ್ಣಗೊಳ್ಳುತ್ತದೆ ಎಂದರು.

ಡಿಜಿಟಲ್ ಇಂಡಿಯಾ

ನಾವು ಭಾರತದ ಯುವ ಶಕ್ತಿಯಲ್ಲಿ ನಂಬಿಕೆ ಇಟ್ಟಿದ್ದೇವೆ. ಜಗತ್ತಿನ ಯುವಜನತೆ ಆಶ್ಚರ್ಯ ಪಡುತ್ತಿದ್ದಾರೆ. ಭಾರತ ಮಾಡಿದ ಅದ್ಭುತಗಳು ಕೇವಲ ದೆಹಲಿ, ಮುಂಬೈ ಮತ್ತು ಚೆನ್ನೈಗೆ ಮಾತ್ರ ಸೀಮಿತವಾಗಿಲ್ಲ.ಟೈರ್ || ಮತ್ತು ಟೈರ್ III ನಗರಗಳು ಸಹ ದಾಖಲೆಗಳನ್ನು ಸೃಷ್ಟಿಸುತ್ತಿವೆ. ನಮ್ಮ ಸಣ್ಣ ನಗರಗಳು ಗಾತ್ರ ಮತ್ತು ಜನಸಂಖ್ಯೆಯಲ್ಲಿ ಚಿಕ್ಕದಾಗಿರಬಹುದು. ಆದರೆ ಭರವಸೆ ಮತ್ತು ಆಕಾಂಕ್ಷೆ ಮತ್ತು ಪ್ರಯತ್ನ ಮತ್ತು ಪ್ರಭಾವ ಯಾವುದಕ್ಕೂ ಕಡಿಮೆ ಇಲ್ಲ. ಕೊರೊನಾ ನಂತರ ವಿಶ್ವ ಕ್ರಮವು ಬದಲಾಗುತ್ತಿದೆ ಇಂದು ದೇಶವು ಜಿ-20 ಶೃಂಗಸಭೆಯನ್ನು ಆಯೋಜಿಸುವ ಅವಕಾಶವನ್ನು ಪಡೆದುಕೊಂಡಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಕಳೆದ ಒಂದು ವರ್ಷದಿಂದ, ಜಿ 20ಯಂತಹ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ, ಇದು ದೇಶದ ಸಾಮರ್ಥ್ಯದ ಬಗ್ಗೆ ಜಗತ್ತಿಗೆ ಅರಿವು ಮೂಡಿಸಿದೆ ಎಂದರು.

ಇದನ್ನೂ ಓದಿ : ತೀರ್ಥಹಳ್ಳಿ ರೆಸಾರ್ಟ್ ಅಲ್ಲಿ ಸಿಕ್ತು ವಿದೇಶಿ ಮದ್ಯ, ಪ್ರಾಣಿಗಳ ಕೊಂಬು!

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ಕರಾವಳಿ

ಕರಾವಳಿಯ ಎರಡು ಜಿಲ್ಲೆಯಲ್ಲಿ ಸ್ವಾತಂತ್ರ್ಯದ ಹಬ್ಬ!

ಕರಾವಳಿಯ ಎರಡು ಜಿಲ್ಲೆಯಲ್ಲಿ ಸ್ವಾತಂತ್ರ್ಯದ ಹಬ್ಬ!
– ಉಡುಪಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಧ್ವಜಾರೋಹಣ
– ಮಂಗಳೂರಲ್ಲಿ ದಿನೇಶ್ ಗುಂಡೂರಾವ್ ಧ್ವಜ ವಂದನೆ

NAMMUR EXPRESS NEWS
ಸ್ವಾತಂತ್ರ ದಿನವನ್ನು ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಸಂಭ್ರಮ ಸಡಗರದಿಂದ ಜನತೆ ಆಚರಣೆ ಮಾಡಿದರು. ಹಳ್ಳಿ ಹಳ್ಳಿಯಲ್ಲೂ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಕಂಡು ಬರುತ್ತಿದೆ. ವಿವಿಧ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಪ್ರತಿ ಮನೆ ಮನೆಯಲ್ಲೂ ಹರ್ ಘರ್ ತಿರಂಗಾ ಹಾರಿಸಲಾಯಿತು.
ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಜಿಲ್ಲಾಧಿಕಾರಿಗಳು, ತಹಸೀಲ್ದಾರ್, ಆಯಾ ಕ್ಷೇತ್ರದ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು.

ಉಡುಪಿಯಲ್ಲಿ ಸ್ವಾತಂತ್ರ್ಯದ ಸಂಭ್ರಮ

ಉಡುಪಿಯ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ವರ್ ಧ್ವಜಾರೋಹಣ ನೆರವೇರಿಸಿದರು. ಬಳಿಕ ಸ್ವಾತಂತ್ರೋತ್ಸವದ ಸಂದೇಶ ನೀಡಿದರು. ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು, ಪಥ ಸಂಚಲನ ಆಕರ್ಷಕವಾಗಿತ್ತು. ಸರ್ಕಾರದ ಯೋಜನೆಗಳಡಿ ಪಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು. ಸ್ಥಳೀಯ ಶಾಸಕರು, ಅಧಿಕಾರಿಗಳು, ಇದ್ದರು.

ದಕ್ಷಿಣ ಕನ್ನಡದಲ್ಲಿ ಸ್ವಾತಂತ್ರ್ಯ ದಿನದ ಮಂಗಳೂರು ನಗರದ ನೆಹರೂ ಮೈದಾನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ, ಸಂದೇಶ ನೀಡಿದರು.ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಜಿಲ್ಲಾಧಿಕಾರಿ ಮುತ್ತೈ ಮುಗಿಲನ್ ಎಂ.ಪಿ. ನಗರ ಪೊಲೀಸ್‌ ಆಯುಕ್ತ ಕುಲದೀಪ್ ಕುಮಾರ್ ಜೈನ್, ಎಸ್ಪಿ ರಿಷ್ಕಂಡ್, ಶಾಸಕ ವೇದವ್ಯಾಸ ಕಾಮತ್ ಸೇರಿದಂತೆ ಅಧಿಕಾರಿಗಳು ಹಾಗೂ ಇತರ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಸೌಹಾರ್ದ ಕೆಡಿಸುವ ಶಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೌಹಾರ್ದ ಕೆಡಿಸುವ ವಿಚ್ಚಿದ್ರಕಾರಿ ಶಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುತ್ತಿದೆ. ಮತೀಯ ಗೂಂಡಾಗಿರಿ ನಡೆಯುವ ದಬ್ಬಾಳಿಕೆ, ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಕಡಿವಾಣ ಹಾಕುವ ಮೂಲಕ ಸಮಾಜದಲ್ಲಿ ಸಾಮರಸ್ಯದ ವಾತಾವರಣ ನಿರ್ಮಿಸಲಾಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ ಹೇಳಿದರು.

‘ರಾಷ್ಟ್ರೀಯ ವಿಪತ್ತು ಉಪಶಮನ ನಿಧಿಯಿಂದ ದಕ್ಷಿಣ ಕನ್ನಡ ಜಿಲ್ಲೆ ಸಹಿತ ಐದು ಜಿಲ್ಲೆಗಳಲ್ಲಿ ಭೂಕುಸಿತ ಹಾಗೂ ನೆರ ಅಪಾಯ ಪರಿಹಾರ ಕಾರ್ಯ ಕೈಗೊಳ್ಳಲಾಗುವುದು’ ಎಂದರು. ‘ಸಸಿಹಿತ್ತು ಕಿನಾರೆಯನ್ನು ಅಂತರರಾಷ್ಟ್ರೀಯ ಸರ್ಫಿಂಗ್ ತಾಣವನ್ನಾಗಿಸುವುದಕ್ಕಾಗಿ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ರೂಪಿಸಲಾಗುತ್ತಿದೆ ಕರಾವಳಿಯ ಕಿನಾರ ಪ್ರವಾಸೋದ್ಯಮ ಅಭಿವೃದ್ಧಿಗೆ ಕಾರ್ಯಪಡೆ ರಚಿಸಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಕಚೇಳು ಸಂಕೀರ್ಣದ ಬಾಕಿ ಕಾಮಗಾರಿಗಳನ್ನು ಈ ವರ್ಷವೇ ಪೂರ್ಣಗೊಳಿಸಿ, ಎಲ್ಲಾ ಸರ್ಕಾರಿ ಸೇವೆಗಳನ್ನು ಒಂದೇ ಸೂರಿನಲ್ಲಿ ಒದಗಿಸಲಾಗುವುದು’ ಎಂದರು. ‘ರಾಜ್ಯದ ಪವಿತ್ರ ತೀರ್ಥಕ್ಷೇತ್ರವಾದ ಧರ್ಮಸ್ಥಳದಲ್ಲಿ ಪುಟ್ಟ ವಿಮಾನ ನಿಲ್ದಾಣ ( ಏರ್ ಸ್ಟ್ರಿಪ್) ನಿರ್ಮಿಸಲಿದ್ದೇವೆ’ ಎಂದರು.

ಇದನ್ನೂ ಓದಿ : ತೀರ್ಥಹಳ್ಳಿ ರೆಸಾರ್ಟ್ ಅಲ್ಲಿ ಸಿಕ್ತು ವಿದೇಶಿ ಮದ್ಯ, ಪ್ರಾಣಿಗಳ ಕೊಂಬು!

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಸಂಭ್ರಮದ ಸ್ವಾತಂತ್ರ್ಯ ಉತ್ಸವ!

ತೀರ್ಥಹಳ್ಳಿಯಲ್ಲಿ ಸಂಭ್ರಮದ ಸ್ವಾತಂತ್ರ್ಯ ಉತ್ಸವ!
– ತಾಲೂಕು ಆಡಳಿತದಿಂದ ಮೆರವಣಿಗೆ: ಮಕ್ಕಳಲ್ಲಿ ಸಂಭ್ರಮ
– ಅಂಗಡಿ, ಕಚೇರಿಯಲ್ಲಿ ಹಾರಾಡಿದ ಭಾವುಟ

NAMMUR EXPRESS NEWS : ತೀರ್ಥಹಳ್ಳಿ ತಾಲೂಕಿನ ವಿವಿಧ ಕಡೆ ಸ್ವಾತಂತ್ರ್ಯ ಸಂಭ್ರಮವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು. ತಾಲೂಕು ಆಡಳಿತದಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಾವಿರಾರು ಮಕ್ಕಳು ಭಾಗವಹಿಸಿ ದೇಶ ಭಕ್ತಿ ಮೆರೆದರು. ತೀರ್ಥಹಳ್ಳಿ ಪಟ್ಟಣ ಮತ್ತು ಹಳ್ಳಿ ಹಳ್ಳಿಯಲ್ಲೂ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಕಂಡು ಬರುತ್ತಿದೆ. ಸರ್ಕಾರಿ ಕಚೇರಿಗಳು, ಖಾಸಗಿ ಕಚೇರಿಗಳು, ವಾಹನಗಳಲ್ಲಿ ದೇಶ ಪ್ರೇಮ ಕಂಡು ಬಂತು.

ಮಳಿಗೆಗಳಲ್ಲಿ ಸ್ವಾತಂತ್ರ್ಯ ಸಂಭ್ರಮ!

ತೀರ್ಥಹಳ್ಳಿಯ ಸೀಬಿನಕೆರೆಯಲ್ಲಿ ಅಚ್ಚೂರ್ ಆಗ್ರೋ ಸರ್ವಿಸ್, ಕ್ಯಾಪ್ಶನ್ ಟ್ರ್ಯಾಕ್ಟರ್ ಶೋ ರೂಂನಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಮಾಲೀಕ ರಂಜನ್ ಹೆಗ್ಡೆ, ಸಿಂಧೂ ಸೇರಿದಂತೆ ಸಿಬ್ಬಂದಿ ಇದ್ದರು.

ಗ್ರಾಮ ಪಂಚಾಯತ್ ಅಲ್ಲಿ ಸಡಗರ

ತೀರ್ಥಹಳ್ಳಿಯ ಮೇಲಿನಕುರುವಳ್ಳಿ ಗ್ರಾಮ ಪಂಚಾಯತ್ ಅಲ್ಲಿ ನೂತನ ಅಧ್ಯಕ್ಷ ಬಂಡೆ ವೆಂಕಟೇಶ್, ಉಪಾಧ್ಯಕ್ಷರಾದ ಅನಿತಾ ಪ್ರವೀಣ್ ಹಾಗೂ ಎಲ್ಲಾ ಸದಸ್ಯರು, ಸಿಬ್ಬಂದಿ ಸ್ವಾತಂತ್ರ್ಯ ಹಬ್ಬವನ್ನು ಆಚರಿಸಿದರು.

ಶಾಲೆಗಳಲ್ಲಿ ವಿವಿಧ ವೇಷ ತೊಟ್ಟ ಮಕ್ಕಳು!

ಶಾಲೆಗಳಲ್ಲಿ ವಿವಿಧ ಭಾರತ ಸ್ವಾತಂತ್ರ್ಯ ಹೋರಾಟಗಾರರ ವೇಷ ತೊಟ್ಟು ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಇದನ್ನೂ ಓದಿ : ತೀರ್ಥಹಳ್ಳಿ ರೆಸಾರ್ಟ್ ಅಲ್ಲಿ ಸಿಕ್ತು ವಿದೇಶಿ ಮದ್ಯ, ಪ್ರಾಣಿಗಳ ಕೊಂಬು!

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023