Categories
Uncategorized

ದೇಶ ಎಂದರೆ ನಾನು, ನಾನು ಎಂದರೆ ದೇಶ : ಶಿವಾನಂದ ಶಿವಾಚಾರ್ಯರು

ದೇಶ ಎಂದರೆ ನಾನು, ನಾನು ಎಂದರೆ ದೇಶ : ಶಿವಾನಂದ ಶಿವಾಚಾರ್ಯರು
– ಜ್ಞಾನ ಭಾರತಿ ವಿದ್ಯಾಮಂದಿರದಲ್ಲಿ ಧ್ವಜಾರೋಹಣ ನೆರವೇರಿಸಿದ ಶ್ರೀಗಳು
– ವಿಧ್ಯಾರ್ಥಿ ಜೀವನದಲ್ಲಿ ಗುರುವಿನ ಸ್ಥಾನ ಮಹತ್ವದ್ದು

ಸಿಂದಗಿ : ದೇಶ ಎಂದರೆ ನಾನು, ನಾನು ಎಂದರೆ ದೇಶ ಎಂಬ ಮನೋಭಾವನೆ ಎಲ್ಲರಲ್ಲಿ ಇರಬೇಕು ಎಂದು ಜ್ಞಾನ ಭಾರತಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶಿವಾನಂದ ಶಿವಾಚಾರ್ಯರು ಹೇಳಿದರು.ಆಗಸ್ಟ್ 15ರಂದು 76ನೇಯ ಸ್ವಾಂತಂತ್ರ್ಯ ದಿನಾಚರಣೆ ಪ್ರಯುಕ್ತ ಪಟ್ಟಣದ ಜ್ಞಾನ ಭಾರತಿ ವಿದ್ಯಾಮಂದಿರದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಜಾತಿ , ಧರ್ಮ , ಭೇದ ಭಾವವಿಲ್ಲದೆ ಜ್ಞಾನಾರ್ಜನೆ ನೀಡುವ ಜ್ಞಾನ ದೇವಾಲಯದಲ್ಲಿ ಗುರುವಿನ ಪಾತ್ರ ಮಹತ್ವದ್ದು. ಗುರುವಿಗೆ ಗೌರವ ಕೊಡುವುದು ನಮ್ಮ ದೇಶದ ಸಂಸ್ಕೃತಿ, ದೇಶ ಭಕ್ತಿಯನ್ನು ವಿದ್ಯಾರ್ಥಿಗಳ ಮನಸಲ್ಲಿ ಬಿತ್ತುವುದು ಗುರುವಿನ ಕರ್ತವ್ಯ ಎಂದರು.

ಈ ವೇಳೆ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಸಂಸ್ಥೆಯ ವಿಧ್ಯಾರ್ಥಿ ಶ್ರೇಯಸ್ ಹೊಸಮನಿಗೆ ಪ್ರಶಸ್ತಿ ಹಾಗೂ ಪ್ರಮಾಣ ಪತ್ರ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸತೀಶ ಹಿರೇಮಠ , ನಿರ್ದೇಶಕರಾದ ಮಹಾದೇವಿ ಹಿರೇಮಠ , ಮಲ್ಲಿಕಾರ್ಜುನ ಕೂಬಾಳ, ಪಂಪನಗೌಡ ಪಾಟೀಲ, ರವಿ ಪೂಜಾರಿ, ಪತ್ರಕರ್ತ ಗುರುರಾಜ ಮಠ, ಗುಂಡು ಕುಲಕರ್ಣಿ, ಶಾಂತವೀರ ಹಿರೇಮಠ ಇದ್ದರು. ಜಗನ್ನಾಥ ಪಾಟೀಲ ನಿರೂಪಿಸಿ ವಂದಿಸಿದರು.

ಇದನ್ನೂ ಓದಿ : ತೀರ್ಥಹಳ್ಳಿ ರೆಸಾರ್ಟ್ ಅಲ್ಲಿ ಸಿಕ್ತು ವಿದೇಶಿ ಮದ್ಯ, ಪ್ರಾಣಿಗಳ ಕೊಂಬು!

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ರಾಜ್ಯ

ಸ್ವಾತಂತ್ರ್ಯ ದಿನವೇ ಮರಾಠಿ ಭಾಷಿಕ ಪುಂಡರ ಕಿರಿಕ್!

ಸ್ವಾತಂತ್ರ್ಯ ದಿನವೇ ಮರಾಠಿ ಭಾಷಿಕ ಪುಂಡರ ಕಿರಿಕ್!
– ತ್ರಿವರ್ಣ ಧ್ವಜದ ಪಕ್ಕ ಭಗವಾ ಧ್ವಜ ಹಾರಿಸಲು ಯತ್ನ
– ಬೆಳಗಾವಿಯ ನಿಪ್ಪಾಣಿಯಲ್ಲಿ ನಡೆದ ಘಟನೆ
– ಮೈಸೂರಲ್ಲಿ ಸುಸ್ತಾಗಿ ಭಾಷಣ ನಿಲ್ಲಿಸಿದ ಸಚಿವ!

NAMMUR EXPRESS NEWS
ನಾಡಿನ ಎಲ್ಲೆಡೆ ನಾಡಿನಾಧ್ಯಂತ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ. ಈ ನಡುವೆ ಸ್ವಾತಂತ್ರ್ಯೋತ್ಸವ ದಿನದಂದು ಮರಾಠಿ ಭಾಷಿಕ ಪುಂಡರು ಕಿರಿಕ್ ತೆಗೆದಿದ್ದಾರೆ.ತ್ರಿವರ್ಣ ಧ್ವಜದ ಪಕ್ಕದಲ್ಲೇ ಭಗವಾ ಧ್ವಜ ಹಾರಿಸಲು ಯತ್ನಿಸಿದ್ದು, ಇದನ್ನು ಪೊಲೀಸರು ತಡೆದಿದ್ದಾರೆ.ಚಿಕ್ಕೋಡಿಯಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ ದಿನದಂದು ಮರಾಠಿ ಭಾಷಿಕ ಪುಂಡರು ಕಿರಿಕ್ ಮಾಡಿದ್ದಾರೆ. ಬೆಳಗಾವಿ ಜಿಲ್ಲೆ ನಿಪ್ಪಾಣಿ ನಗರಸಭೆ ಮೇಲೆ ಭಗವಾ ಧ್ವಜ ಹಾರಿಸಲು ಯತ್ನಿಸಿದ್ದಾರೆ. ಮಾಜಿ ಸಚಿವೆ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಸ್ಥಳೀಯ ಅಧಿಕಾರಿಗಳಿಂದ ಧ್ವಜಾರೋಹಣದ ಬಳಿಕ ಈ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆ ನಿಪ್ಪಾಣಿ ನಗರಸಭೆ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಬಳಿಕ. ಅದರ ಪಕ್ಕದಲ್ಲೇ ಮರಾಠಿ ಭಾಷಿಕ ನಿಪ್ಪಾಣಿ ನಗರಸಭಾ ಸದಸ್ಯರಾದ ವಿನಾಯಕ ವಾಡೆ ಹಾಗೂ ಸಂಜಯ ಸಾಂಗಾವಕರ್ ಅವರು ಭಗವಾ ಧ್ವಜ ಹಾರಿಸಲು ಮುಂದಾಗಿದ್ದಾರೆ. ಕೂಡಲೇ ಪೊಲೀಸರು ಅದನ್ನು ತಡೆದಿದ್ದು, ಧ್ವಜ ಹಾರಿಸಲು ಬಂದವರನ್ನ ತಡೆದು ತರಾಟೆಗೆ ತೆಗೆದುಕೊಂಡರು. ಈ ಇಬ್ಬರು ಎನ್.ಸಿ.ಪಿ. ಬೆಂಬಲಿತ ನಿಪ್ಪಾಣಿ ನಗರಸಭೆ ಸದಸ್ಯರು ಎಂದು ಹೇಳಲಾಗಿದೆ.

ಬಿಸಿಲಿನ ಝಳಕ್ಕೆ ಸಚಿವರು ಸುಸ್ತು!

ಮೈಸೂರಿನಲ್ಲಿ ಬನ್ನಿ ಮಂಟಪದಲ್ಲಿ ನಡೆದ ಸ್ವಾತಂತ್ರ್ಯ ಕಾರ್ಯಕ್ರಮದಲ್ಲಿ ಮೈಸೂರು ಉಸ್ತುವಾರಿ ಸಚಿವ ಎಚ್. ಸಿ. ಮಹದೇವಪ್ಪ ಸುಸ್ತಾಗಿ ಭಾಷಣ ಅರ್ಧಕ್ಕೆ ನಿಲ್ಲಿಸಿದ ಘಟನೆ ನಡೆದಿದೆ. ಬಳಿಕ ಸುಸ್ತು ನಿವಾರಿಸಿಕೊಂಡು ಕಾರ್ಯಕ್ರಮ ಮುಂದುವರಿಸಿದರು.

ಇದನ್ನೂ ಓದಿ : ತೀರ್ಥಹಳ್ಳಿ ರೆಸಾರ್ಟ್ ಅಲ್ಲಿ ಸಿಕ್ತು ವಿದೇಶಿ ಮದ್ಯ, ಪ್ರಾಣಿಗಳ ಕೊಂಬು!

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ರಾಷ್ಟ್ರೀಯ ವಾರ್ತೆ

ದೆಹಲಿ ಕೆಂಪುಕೋಟೆಯಲ್ಲಿ ಪ್ರಧಾನಿ ಧ್ವಜಾರೋಹಣ

76ನೇ ಸ್ವಾತಂತ್ರ್ಯ ಸಂಭ್ರಮ!
– ದೆಹಲಿ ಕೆಂಪುಕೋಟೆಯಲ್ಲಿ ಪ್ರಧಾನಿ ಧ್ವಜಾರೋಹಣ
– ಬೆಂಗಳೂರಲ್ಲಿ ಸಿದ್ದರಾಮಯ್ಯ ಧ್ವಜ ವಂದನೆ
– ಮನೆ ಮನೆ, ಹಳ್ಳಿ ಹಳ್ಳಿಯಲ್ಲೂ ಸ್ವಾತಂತ್ರ್ಯದ ಹಬ್ಬ
– ಸರ್ಕಾರಿ ಕಚೇರಿ, ಅಂಗಡಿ, ಕಚೇರಿಗಳಲ್ಲಿ ಹಾರಾಡಿದ ಭಾವುಟ

NAMMUR EXPRESS NEWS
ನವದೆಹಲಿ: ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮ ಭಾರತ. ದೇಶದ ಸ್ವಾತಂತ್ರ್ಯ ದಿನಾಚರಣೆಯನ್ನು ಇಡೀ ಭಾರತದ ಹಳ್ಳಿ ಹಳ್ಳಿಯಲ್ಲೂ ಜನತೆಗೆ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಬೆಳಿಗ್ಗೆಯೇ ಪ್ರಧಾನಿ ಮೋದಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಇನ್ನು ಇಡೀ ದೇಶದ ಮನೆ ಮನೆ, ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳು, ಸಂಘ ಸಂಸ್ಥೆಗಳಲ್ಲಿ, ಖಾಸಗಿ ಅಂಗಡಿ, ಕಚೇರಿಗಳಲ್ಲಿ ಸ್ವಾತಂತ್ರ್ಯ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುತ್ತಿದೆ. ಧ್ವಜರೋಹಣ ಜತೆಗೆ ವಿವಿಧ ಕಾರ್ಯಕ್ರಮ ಕೂಡ ಆಯೋಜನೆ ಮಾಡಲಾಗಿದೆ. ದಿನಾಚರಣೆ ಪ್ರಯುಕ್ತ ಸಂಪ್ರದಾಯದಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ (ಆಗಸ್ಟ್ 14) ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಕರುನಾಡಲ್ಲಿ ಸ್ವಾತಂತ್ರ್ಯ ಸಡಗರ!

ದೇಶದಲ್ಲಿ ಎಲ್ಲೆಡೆ ಭಾರತ ಮಾತೆಯ ಪೂಜೆಯನ್ನು ಜನ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ. ಇನ್ನು ಬೆಂಗಳೂರಿನ ಮಾಣಿಕ್ ಷಾ ಮೈದಾನದಲ್ಲಿ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಿದರು. ಬಳಿಕ ಜನರನ್ನು ಉದ್ದೇಶಿಸಿ ಮಾತನಾಡಿದರು. ಇಡೀ ಬೆಂಗಳೂರಲ್ಲಿ ಎಲ್ಲೆಡೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಜಿಲ್ಲೆ, ತಾಲೂಕುಗಳಲ್ಲಿಯೂ ಆಚರಣೆ!

ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕು, ಹಳ್ಳಿ ಹಳ್ಳಿಯಲ್ಲೂ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಕಂಡು ಬರುತ್ತಿದೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಜಿಲ್ಲಾಧಿಕಾರಿಗಳು, ಆಯಾ ಕ್ಷೇತ್ರದ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು.

ಇದನ್ನೂ ಓದಿ : ತೀರ್ಥಹಳ್ಳಿ ರೆಸಾರ್ಟ್ ಅಲ್ಲಿ ಸಿಕ್ತು ವಿದೇಶಿ ಮದ್ಯ, ಪ್ರಾಣಿಗಳ ಕೊಂಬು!

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ

ಸ್ವಾತಂತ್ರ್ಯ ಹಬ್ಬಕ್ಕೆ ತೀರ್ಥಹಳ್ಳಿ ರಂಗು!

ಸ್ವಾತಂತ್ರ್ಯ ಹಬ್ಬಕ್ಕೆ ತೀರ್ಥಹಳ್ಳಿ ರಂಗು!
– ಸರ್ಕಾರಿ ಕಚೇರಿಗಳಲ್ಲಿ ಆಚರಣೆಗೆ ಸಿದ್ಧತೆ
– ದೀಪದ ಅಲಂಕಾರ, ವಿವಿಧ ನಿಲ್ದಾಣಗಳು ಸಿಂಗಾರ
– ಹಳ್ಳಿ ಹಳ್ಳಿಗಳಲ್ಲೂ ಸ್ವಾತಂತ್ರ್ಯ ದಿನಾಚರಣೆ ಕ್ಷಣಗಣನೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಹಾಗೂ ತೀರ್ಥಹಳ್ಳಿ ತಾಲೂಕಿನ ಹಳ್ಳಿ ಹಳ್ಳಿಗಳಲ್ಲೂ ಸ್ವಾತಂತ್ರೋತ್ಸವ ಸಂಭ್ರಮಕ್ಕೆ ಕ್ಷಣಗಣನೆ ಜೋರಾಗಿದೆ. ತೀರ್ಥಹಳ್ಳಿ ಪಟ್ಟಣದ ಸರ್ಕಾರಿ ಕಚೇರಿಗಳು, ಗ್ರಾಮ ಪಂಚಾಯತ್ ಕಚೇರಿಗಳು, ಶಾಲಾ, ಕಾಲೇಜುಗಳು, ಅಂಗಡಿ ಮುಗಟ್ಟುಗಳಲ್ಲಿ ಅಲಂಕಾರಗೊಳ್ಳುತ್ತಿದೆ. ಇನ್ನು ಅನೇಕ ಸರ್ಕಾರಿ ಕಟ್ಟಡಗಳಲ್ಲಿ ಹಾಗೂ ಶೋ ರೂಂಗಳಲ್ಲಿ ವಿದ್ಯುತ್ ಅಲಂಕಾರ ಮಾಡಲಾಗಿದೆ. ತೀರ್ಥಹಳ್ಳಿ ತಾಲೂಕಿನ ಬಹುತೇಕ ಸಂಘ-ಸಂಸ್ಥೆಗಳು ಸ್ವತಂತ್ರೋತ್ಸವ ಆಚರಣೆಗೆ ಸಿದ್ಧತೆ ನಡೆಸಿದ್ದು ಸ್ವತಂತ್ರ ಸಂಭ್ರಮವನ್ನು ಆಚರಿಸಲು ಮುಂದಾಗಿವೆ. ಇನ್ನು ಬಸ್ ನಿಲ್ದಾಣಗಳು, ಆಟೋ ನಿಲ್ದಾಣಗಳು ಹಾಗೂ ಕಾರು ಹಾಗೂ ಇತರೆ ಗೂಡ್ಸ್ ವಾಹನ ನಿಲ್ದಾಣಗಳಲ್ಲೂ ಸಿದ್ಧತೆ ಜೋರಾಗಿದೆ.
ತೀರ್ಥಹಳ್ಳಿ ತಾಲೂಕಿನ ಹಳ್ಳಿ ಹಳ್ಳಿಗಳಲ್ಲೂ ದೇಶದ ಸಂಭ್ರಮದ ಹಬ್ಬವನ್ನು ಜನತೆ ಸಂಭ್ರಮದಿಂದ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇನ್ನು ಶಾಲಾ ಕಾಲೇಜುಗಳಲ್ಲಿ ವಿವಿಧ ಸ್ಪರ್ಧೆಗಳನ್ನು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.

 

 

ಹರ್ ಘರ್ ತಿರಂಗಾಕ್ಕೆ ಸಿದ್ಧತೆ

ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ಪ್ರತಿ ಮನೆ, ಕಚೇರಿ, ಅಂಗಡಿಗಳಲ್ಲಿ ಭಾವುಟ ಹಾರಿಸಲು ಎಲ್ಲ ರೀತಿಯ ಸಿದ್ಧತೆಗಳು ನಡೆದಿದೆ.

ಇದನ್ನೂ ಓದಿ : ತೀರ್ಥಹಳ್ಳಿ ರೆಸಾರ್ಟ್ ಅಲ್ಲಿ ಸಿಕ್ತು ವಿದೇಶಿ ಮದ್ಯ, ಪ್ರಾಣಿಗಳ ಕೊಂಬು!

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ

ಹಾರೋಗೊಳಿಗೆ: ಎಚ್.ಎ.ಮಯ್ಯದ್ದಿ ಅವರಿಗೆ ಒಲಿದ ಲಾಟರಿ ಅದೃಷ್ಠ

ಹಾರೋಗೊಳಿಗೆ: ಎಚ್.ಎ.ಮಯ್ಯದ್ದಿ ಅವರಿಗೆ ಒಲಿದ ಲಾಟರಿ ಅದೃಷ್ಠ
– ತೀವ್ರ ಕುತೂಹಲ ಮೂಡಿಸಿದ ಚುನಾವಣೆ
– ಸದಸ್ಯರು, ಮುಖಂಡರು, ಗ್ರಾಮಸ್ಥರಿಗೆ ಮಯ್ಯದ್ದಿ, ಭಾರತಿ ಅವರಿಂದ ಧನ್ಯವಾದ

NAMMUR EXPRESS NEWS
ತೀರ್ಥಹಳ್ಳಿ ತಾಲೂಕು ಹಾರೋಗೋಳಿಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಭಾರತಿ, ಉಪಾಧ್ಯಕ್ಷರಾಗಿ ಎಚ್.ಎ.ಮಯ್ಯದ್ದಿ ಅವರು ಆಯ್ಕೆ ಆಗಿದ್ದಾರೆ. ಅಚ್ಚರಿ ಅಂದರೆ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತರ ತಲಾ 3:3 ಸದಸ್ಯರ ಬಲಾಬಲವಾದಾಗ ಲಾಟರಿ ಮೂಲಕ ಎಚ್. ಎ ಮಯ್ಯದ್ದಿ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಸರ್ವರಿಗೂ ಮಯ್ಯದ್ದಿ ಧನ್ಯವಾದ

ಎಲ್ಲಾ ಸದಸ್ಯರು, ಕಾಂಗ್ರೆಸ್ ಮುಖಂಡರು, ಹಾರೋಗೊಳಿಗೆ, ಹರಳೀಮಠ, ಅಂದಗೆರೆ ಸೇರಿ ಎಲ್ಲಾ ಗ್ರಾಮಸ್ಥರಿಗೆ ಉಪಾಧ್ಯಕ್ಷರಾದ ಎಚ್.ಎ ಮಯ್ಯದ್ದಿ ಅವರು ಧನ್ಯವಾದ ಅರ್ಪಿಸಿದ್ದಾರೆ

ಇದನ್ನೂ ಓದಿ : ತೀರ್ಥಹಳ್ಳಿ ರೆಸಾರ್ಟ್ ಅಲ್ಲಿ ಸಿಕ್ತು ವಿದೇಶಿ ಮದ್ಯ, ಪ್ರಾಣಿಗಳ ಕೊಂಬು!

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

– ಕಲಾವಿದ, ಸಾಫ್ಟ್ ವೇರ್ ಎಂಜಿನಿಯರ್ ಆತ್ಮಹತ್ಯೆ
– ಗಾಂಜಾ ಮಾರಾಟ ಮಾಡುತ್ತಿದ್ದವರು, ಬಂಧನ ಗಾಂಜಾ ಸೇವಿಸಿ ಜನರಿಗೆ ತೊಂದರೆ ಕೊಡುತ್ತಿದ್ದ ಇಬ್ಬರ ಅಂದರ್
– ಆನ್ಲೈನ್ ಮೋಸದ ಜಾಲಕ್ಕೆ ಬಿದ್ದ ವ್ಯಕ್ತಿ
– ಬಾಲಕಿಯ ಅಪಹರಣ – ಆರೋಪಿ ಬಂಧನ

NAMMUR EXPRESS NEWS
ಚಾರ್ಮಾಡಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮೂಲತಃ ಕಕ್ಕಿಂಜೆ ನಿವಾಸಿಯಾಗಿರುವ, ಪ್ರಸ್ತುತ ಬಂಟ್ವಾಳ ತಾಲೂಕು ಸಜಿಪನಡು ಗ್ರಾಮದ ಲಕ್ಷ್ಮಣಕಟ್ಟೆ ಬಳಿಯ ನೌಫಲ್ ಎಂದು ಗುರುತಿಸಲಾಗಿದೆ. ಆರೋಪಿ ಪೊಲೀಸರನ್ನು ಕಂಡು ಸಂಶಯಾಸ್ಪದವಾಗಿ ವರ್ತಿಸಿದ್ದು ಈ ವೇಳೆ ವಿಚಾರಿಸಲು ಆತನ ಬಳಿ ಬಂದಾಗ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸ್ ಸಿಬ್ಬಂದಿ ಆತನನ್ನು ಬಂಧಿಸಿದ್ದಾರೆ. ಆತನ ಬಳಿ ಪ್ಲಾಸ್ಟಿಕ್ ಕೈಚೀಲದಲ್ಲಿ 150 ಗ್ರಾಂ ನಷ್ಟು ಗಾಂಜಾದ ಮೊಗ್ಗು, ಎಲೆ ಮತ್ತು ಬೀಜ ಇರುವುದನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಳ್ಳಲಾದ ವಸ್ತುಗಳ ಒಟ್ಟು ಮೌಲ್ಯ ಅಂದಾಜು 4 ಸಾವಿರ ರೂ.ಆಗಿದ್ದು, ಈ ಬಗ್ಗೆ ಎನ್ಡಿಪಿಎಸ್ ಕಾಯ್ದೆಯಡಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವ ಚಿತ್ರಕಲಾವಿದ ಆತ್ಮಹತ್ಯೆ!

ಬಂಟ್ವಾಳ: ಅನಾರೋಗ್ಯ, ನಿರುದ್ಯೋಗದ ಸಮಸ್ಯೆಯಿಂದ ಬೇಸತ್ತ ಯುವ ಚಿತ್ರಕಾರನೊಬ್ಬ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮದ ಮಿತ್ತಮಜಲು ಎಂಬಲ್ಲಿ ನಡೆದಿದೆ.
ಚಿತ್ರಕಾರ ಸಾಗರ್ ಆಚಾರ್ಯ (26) ಎಂಬಾತ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಆ.14ರಂದು ಮನೆಯಂಗಳದಲ್ಲಿ ಇರುವ ಸುಮಾರು 30ಅಡಿ ಆಳದ ಬಾವಿಗೆ ಹಾರಿ ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳಲು ಸ್ಪಷ್ಟವಾದ ಕಾರಣ ನಿಗೂಢವಾಗಿದೆಯಾದರೂ ಆತನ ಅನಾರೋಗ್ಯದ ಕಾರಣ ಜೀವನದಲ್ಲಿ ಮನನೊಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಅಂದಾಜಿಸಲಾಗಿದೆ. ಆದರೆ ಈತ ಕಳೆದ ಕೆಲವು ದಿನಗಳಿಂದ ಮಾನಸಿಕವಾಗಿ ನೊಂದಿದ್ದಲ್ಲದೆ, ನೆರೆಹೊರೆಯವರ ಸ್ನೇಹಿತರ ಜೊತೆ ಈತನ ನೋವನ್ನು ಹೇಳಿಕೊಂಡಿದ್ದ ಎಂದು ಹೇಳಲಾಗಿದೆ.

ಗಾಂಜಾ ಸೇವಿಸಿ ಜನರಿಗೆ ಕಿರಿಕಿರಿ:ಇಬ್ಬರ ಬಂಧನ

ಬಂಟ್ವಾಳ: ಗಾಂಜಾ ಸೇವಿಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸಜೀಪ ಮುನ್ನೂರು ಗ್ರಾಮದ ನಂದಾವರ ಕೋಟೆ ನಿವಾಸಿ ಮಹಮ್ಮದ್ ಶಾಕಿಬ್ ಹಾಗೂ ಬಿ.ಮೂಡ ಗ್ರಾಮದ ಶಾಂತಿ ಅಂಗಡಿ ನಿವಾಸಿ ಮಹಮ್ಮದ್ ಆರೀಫ್ ಬಂಧಿತ ಆರೋಪಿಗಳು. ತಾಲೂಕಿನ ಸಜೀಪ ಮುನ್ನೂರು ಗ್ರಾಮದ ನಂದಾವರ ಶಾಲಾ ಬಳಿ ಇಬ್ಬರು ಯುವಕರು ಮಾದಕ ವಸ್ತುವನ್ನು ಸೇವಿಸಿ ನಶೆ ಹೊಂದಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂಬ ಸ್ಥಳೀಯರು ನೀಡಿದ ದೂರಿನಂತೆ ಸ್ಥಳಕ್ಕೆ ಬೇಟಿ ನೀಡಿದ ಬಂಟ್ವಾಳ ನಗರ ಪೋಲೀಸ್ ಠಾಣಾಧಿಕಾರಿ ರಾಮಕೃಷ್ಣ ನೇತ್ರತ್ವದ ಪೋಲೀಸ್ ತಂಡ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡ ವೈದ್ಯಕೀಯ ತಪಾಸಣೆ ನಡೆಸಿದ್ದು ಗಾಂಜಾ ಸೇವನೆ ದೃಢಪಟ್ಟಿದೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಬೀಚ್ ರೆಸಾರ್ಟ್‌ನಲ್ಲೇ ನೇಣು ಬಿಗಿದು ಆತ್ಮಹತ್ಯೆ

ಬೀಚ್ ರೆಸಾರ್ಟ್‌ನಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸಾಫ್ಟ್‌ವೇರ್ ಎಂಜಿನಿಯರ್. ರೆಸಾರ್ಟ್ ಒಂದರಲ್ಲಿ ವಾಸ್ತವ್ಯ ಮಾಡಿದ್ದ ಬೆಂಗಳೂರು ಮೂಲದ ವ್ಯಕ್ತಿ ರೂಂನಲ್ಲಿಯೇ ನೇಣುಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ನಡೆದಿದೆ. ಬೆಂಗಳೂರು ಮೂಲದ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ರಿಷಿಕೇಶ ರೆಡ್ಡಿ (35) ವರ್ಷದ ವ್ಯಕ್ತಿಗೆ ಶರಣಾದ ಯುವಕ. ಈತ ಗೋಕರ್ಣದ ಓಂ ಬೀಚ್ ರೆಸಾರ್ಟ್ ನಲ್ಲಿ ಮೂರು ದಿನಗಳ ಕಾಲ ರೂ ಬಾಡಿಗೆಗೆ ಪಡೆದುಕೊಂಡಿದ್ದ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಗೋಕರ್ಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ನೇಣಿಗೆ ಶರಣಾದ ವ್ಯಕ್ತಿಯ ಮೃತ ದೇಹವನ್ನ ಗೋಕರ್ಣದ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದ್ದು, ಮೃತನ ಕುಟುಂಬಸ್ಥರು ಬಂದ ಬಳಿಕ ಶವ ಕುಟುಂಬದವರಿಗೆ ಒಪ್ಪಿಸಲಾಗುವುದು. ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತನ ಆತ್ಮಹತ್ಯೆಗೆ ನಿಖರವಾಗಿರುವ ಕಾರಣ ತಿಳಿದುಬಂದಿಲ್ಲ.

ಆನ್ಲೈನ್ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡ ವ್ಯಕ್ತಿ

ಯಲ್ಲಾಪುರ: ಮೆಸೇಜ್ ಲಿಂಕ್ ಒತ್ತಿ ವ್ಯಕ್ತಿಯೋರ್ವ ಹಣ ಕಳೆದುಕೊಂಡ ಪ್ರಕರಣ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ತಾಲೂಕಿನ ಜಿಗಳಿಹೊಂಡದ ಸಂತೋಷ ಶ್ರೀಪತಿ ಹೆಗಡೆ (39) ಆನ್ಲೈನ್ ವಂಚಕರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದಾನೆ. ಅಪರಿಚಿತ ವ್ಯಕ್ತಿಯಿಂದ ಸಂತೋಷ್ ಗೆ ಮೆಸೆಜ್ ಬಂದಿದ್ದು, ಮೆಸೇಜ್ ನಲ್ಲಿ ಬ್ಯಾಂಕಿನ ಲೋಗೋ ಇದ್ದಿದ್ದರಿಂದ ಅದನ್ನ ಒತ್ತಿದ್ದಾನೆ. ಇನ್ನು ಮೆಸೇಜ್ ಒಪನ್ ಆಗುತ್ತಿದ್ದಂತೆ ಆತನ ಕ್ರೆಡಿಟ್ ಕಾರ್ಡಿನಿಂದ ಎರಡು ಬಾರಿ ಸುಮಾರು  95,557ರೂ ಹಣ ಕಟ್ ಆಗುವ ಮೂಲಕ ವಂಚನೆಗೊಳಗಾಗಿದ್ದಾನೆ. ಇನ್ನು ಹಣ ಕಟ್ ಆಗುತ್ತಿದ್ದಂತೆ  ಸಂಶಯಗೊಂಡು ಬ್ಯಾಂಕಿಗೆ ಕರೆಮಾಡಿ ಕ್ರೆಡಿಟ್ ಕಾರ್ಡನ್ನು ಸ್ಥಗಿತಗೊಳಿಸಿದ್ದು, ಈ ಸಂಭಂದ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿದ್ದಾನೆ.

ಕಟಪಾಡಿ: ಬೈಕ್-ಕಾರು ಡಿಕ್ಕಿ ಇಬ್ಬರಿಗೆ ಗಂಭೀರ ಗಾಯ

ಕಾರೊಂದು ಡಿವೈಡರ್ ದಾಟಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಕಟಪಾಡಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿದೆ. ಗಾಯಾಳುಗಳ ಮಾಹಿತಿ ತಿಳಿದು ಬಂದಿಲ್ಲ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಸಮಾಜ ಸೇವಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸೇವಕ ಆಸ್ಟಿನ್ ಕಾಪು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಬಾಲಕಿಯ ಅಪಹರಣ – ಆರೋಪಿ ಬಂಧನ

ಮಂಗಳೂರಿನ ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಣ ಮಾಡಿದ ಘಟನೆ ನಡೆದಿದ್ದು, ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಬಾಲಕಿಯನ್ನು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿದ್ದಾರೆ.
ಮಂಗಳೂರು ಹೊರ ವಲಯದ ಕಸ್ಟಾ ಬೆಂಗ್ರೆಯ ಮೊಹಮ್ಮದ್ ಸಫ್ರ್ರಾಝ್ (22) ಬಂಧಿತ ಆರೋಪಿ.
ಆತನ ವಿರುದ್ಧ ಅತ್ಯಾಚಾರ ಆರೋಪ ಮತ್ತು ಪೊಕ್ಕೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಆ. 10 ರಂದು ಅಪಹರಿಸಲಾಗಿದ್ದು, ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನ್ನ ಪುತ್ರಿಯನ್ನು ಆರೋಪಿ ಪುಸಲಾಯಿಸಿ ಕರೆದುಕೊಂಡು ಹೋಗಿರುವುದಾಗಿ ಬಾಲಕಿಯ ತಂದೆ ದೂರು ನೀಡಿದ್ದರು. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಬಾಲಕಿಯನ್ನು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಮೊಹಮ್ಮದ್ ಸಫ್ರ್ರಾಝ್ ಹಳೆ ಆರೋಪಿಯಾಗಿದ್ದು, ಕಂಕನಾಡಿ ನಗರ ಮತ್ತು ಬೈಂದೂರು ಪೊಲೀಸ್ ಠಾಣೆಗಳಲ್ಲಿ ಆತನ ವಿರುದ್ಧ ಮನೆ ದರೋಡೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : ತೀರ್ಥಹಳ್ಳಿ ರೆಸಾರ್ಟ್ ಅಲ್ಲಿ ಸಿಕ್ತು ವಿದೇಶಿ ಮದ್ಯ, ಪ್ರಾಣಿಗಳ ಕೊಂಬು!

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ಚಿಕ್ಕಮಗಳೂರು

ಚಪಾತಿಗೆ ನಿದ್ದೆ ಮಾತ್ರೆ ಬೆರೆಸಿ ಗಂಡನ ಕೊಂದ ಹೆಂಡ್ತಿ!

ಚಪಾತಿಗೆ ನಿದ್ದೆ ಮಾತ್ರೆ ಬೆರೆಸಿ ಗಂಡನ ಕೊಂದ ಹೆಂಡ್ತಿ!
– ಪ್ರಿಯಕರನ ಜತೆ ಲವ್ವಿಡವ್ವಿಗೆ ಪತಿಯ ಕೊಲೆ
– ಚಿಕ್ಕಮಗಳೂರು ಜಿಲ್ಲೆ ಕಡೂರಲ್ಲಿ ನಡೆದ ಘಟನೆ
– ಮೂಡಿಗೆರೆಯಲ್ಲಿ ಆಸ್ತಿ ಹಣಕ್ಕಾಗಿ ತಂದೆ ಕೊಂದ ಮಗ
– ತಾಯಿ ಮೇಲೂ ಮಚ್ಚಿನಿಂದ ಹಲ್ಲೆ: ಗಂಭೀರ

NAMMUR EXPRESS NEWS
ಕಡೂರು: ಚಪಾತಿಗೆ ನಿದ್ದೆ ಮಾತ್ರೆ ಬೆರೆಸಿ ಗಂಡನ ಕೊಂದ ಹೆಂಡ್ತಿ. ಪ್ರಿಯಕರನ ಜತೆ ಲವ್ವಿಡವ್ವಿಗೆ ಪತಿಯ ಕೊಲೆ ಮಾಡಿದ ದುರಂತ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರಲ್ಲಿ ನಡೆದಿದೆ. 13 ವರ್ಷದ ಪ್ರೀತಿಗಾಗಿ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದು ನಾಟಕವಾಡಿದ್ದ ಪತ್ನಿಯ ನಿಜ ಬಣ್ಣ ತನಿಖೆಯಲ್ಲಿ ಬಯಲಾಗಿದ್ದು, ಯಗಟಿ ಪೊಲೀಸರ ಅತಿಥಿಯಾಗಿ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಏನಿದು ಘಟನೆ?:

ಕಡೂರು ತಾಲ್ಲೂಕಿನ ಹನುಮನಹಳ್ಳಿ ಗ್ರಾಮದ ಪಾವನ ಮತ್ತು ಸಂಜು ಬಂಧಿತ ಇಬ್ಬರು ಆರೋಪಿಗಳಾಗಿದ್ದು, ಪಾವನಳ ಪತಿ ನವೀನ್‌ಕುಮಾರ್(28) ಆ.6ರಂದು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆಂದು ಮೃತದೇಹ ಪತ್ತೆಯಾದ ಹಿನ್ನಲೆಯಲ್ಲಿ ಅನುಮಾನಸ್ಪದವಾಗಿ ಸಾವನ್ನಪಿದ್ದ. ಈ ಬಗ್ಗೆ ಶಂಕೆ ವ್ಯಕ್ತಪಡಿಸಿ ಯಗಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಬಳಿಕ ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಅಕ್ರಮ ಸಂಬಂಧದ ಸುಳಿವು ಸಿಕ್ಕ ಹಿನ್ನಲೆಯಲ್ಲಿ ಸಿಪಿಐ ಶಿವಕುಮಾರ್ ಮತ್ತು ಪಿಎಸೈ ರಂಗನಾಥ್ ನೇತೃತ್ವದ ಪೊಲೀಸರ ತಂಡ ತನಿಖೆಯನ್ನು ಚುರುಕುಗೊಳಿಸಿ ವಾರದೊಳಗೆ ಕೊಲೆಯ ಪ್ರಕರಣದಡಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಲೆ ಮಾಡಿದ್ದು ಹೀಗೆ…!

ಕಳೆದ 6 ವರ್ಷಗಳ ಹಿಂದೆ ನವೀನ್ ಕುಮಾರ್ ಜೊತೆ ಪಾವನ ಮದುವೆಯಾಗಿ 4 ವರ್ಷದ ಹೆಣ್ಣು ಮಗುವಿದೆ. ಆದರೆ ಪತ್ನಿ ಪಾವನ ಮತ್ತು ಪ್ರಿಯಕರ ಸಂಜು ಕಳೆದ 13 ವರ್ಷಗಳಿಂದ ಪ್ರೀತಿಸುತ್ತಿದ್ದ ಬಗ್ಗೆ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ತಮ್ಮ ಪ್ರೀತಿಗೆ ಗಂಡ ನವೀನ್ ಅಡ್ಡಿಯಾಗಿದ್ದರಿಂದ ಪ್ರಿಯಕರನ ಜೊತೆಗೂಡಿ ನಿದ್ದೆಮಾತ್ರೆಯನ್ನು ನೀರಿನಲ್ಲಿ ಕರಗಿಸಿ ಚಪಾತಿ ಹಿಟ್ಟಿಗೆ ಬೆರೆಸಿ ಊಟದ ಬಳಿಕ ನಿದ್ದೆ ಮಂಪರಿಗೆ ಜಾರಿದ ಬಳಿಕ ಸಿನಿಮಿಯ ಶೈಲಿಯಲ್ಲಿ ಪತಿಯನ್ನು ಪ್ರಿಯಕರನ ಬೈಕಿನಲ್ಲಿ ತಂದು ಯಗಟಿ ಸಮೀಪದ ದೊಡ್ಡಗುಂಡಿಯ ಕೆರೆಗೆ ಎಸೆದು ಏನೂ ಗೊತ್ತಿಲ್ಲದಂತೆ ನಾಟಕವಾಡಿದ್ದಾರೆ.

ಕೆರೆಯ ಬಳಿ ಪತ್ತೆಯಾದ ಬೈಕ್, ಬ್ಯಾಟರಿ, ಚಪ್ಪಲಿಗಳು ಹಾಗೂ ಮೃತ ನವೀನ್‌ಕುಮಾರ್ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದರು. ನಂತರ ಮೃತದೇಹವನ್ನು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು ವರದಿ ಬಂದ ನಂತರ ತನಿಖೆಯ ಕಾರ್ಯಚರಣೆ ಕೈಗೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ವಶಪಡಿಸಿಕೊಂಡ ಬಳಿಕ ಘಟನೆಯ ಬಗ್ಗೆ ತಪ್ಪನ್ನು ಒಪ್ಪಿಕೊಂಡಿದ್ದರು. ಶನಿವಾರದಂದು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಹಾಜರುಪಡಿಸಿದರು.
ತನಿಖೆಯ ಕಾರ್ಯಚರಣೆಯಲ್ಲಿ ಯಗಟಿಯ ಎಎಸೈ ನಂಜನಾಯ್ಕ, ಸಿಬ್ಬಂದಿಗಳಾದ ಪ್ರದೀಪ್, ಉಮೇಶ್, ಶ್ರೀನಿವಾಸ್, ಯೋಗೀಶ್, ಮಹೇಶ್ವರಪ್ಪ ಇದ್ದರು.

ತಂದೆಯನ್ನೇ ಕೊಂದ ಮಗ, ತಾಯಿ ಆಸ್ಪತ್ರೆಗೆ!

ಆಸ್ತಿ ಮಾರಿ ಬಂದ ಹಣದ ವಿಚಾರಕ್ಕೆ ಗಲಾಟೆ, ತಂದೆ ಹಾಗೂ ಮಧ್ಯವರ್ತಿಯನ್ನು ಮಗನೇ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮಧುಗುಂಡಿ ಗ್ರಾಮದಲ್ಲಿ ಆಸ್ತಿ ಮಾರಿ ಬಂದ ಹಣದ ವಿಚಾರಕ್ಕೆ ಗಲಾಟೆ ನಡೆದಿದ್ದು ಇಬ್ಬರ ಕೊಲೆಯಾಗಿದೆ. ಹಣದ ವಿಚಾರಕ್ಕೆ ಮಗ ತನ್ನ ಸ್ವಂತ ತಂದೆ, ತಾಯಿ, ಮಧ್ಯವರ್ತಿ ಸೇರಿ ಮೂವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ತಂದೆ ಭಾಸ್ಕರ್ ಗೌಡ, ಮಧ್ಯವರ್ತಿ ಕಾರ್ತಿಕ್ ಮೃತಪಟ್ಟಿದ್ದು ತಾಯಿ ಸ್ಥಿತಿ ಗಂಭೀರವಾಗಿದೆ. ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇದನ್ನೂ ಓದಿ : ತೀರ್ಥಹಳ್ಳಿ ರೆಸಾರ್ಟ್ ಅಲ್ಲಿ ಸಿಕ್ತು ವಿದೇಶಿ ಮದ್ಯ, ಪ್ರಾಣಿಗಳ ಕೊಂಬು!

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ರಾಜ್ಯ

ಮುಂದಿನ ಯುಗಾದಿಗೆ ಮತ್ತೊಂದು ದುರ್ಘಟನೆ?!

ಮುಂದಿನ ಯುಗಾದಿಗೆ ಮತ್ತೊಂದು ದುರ್ಘಟನೆ?!
– ದೇಶದ ಮಹಾನ್ ವ್ಯಕ್ತಿಗಳಿಗೆ ದೊಡ್ಡ ಕಂಟಕ : ಕೋಡಿಮಠ ಶ್ರೀ
– ರಾಜ್ಯದ ಕಾಂಗ್ರೆಸ್‌ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ

NAMMUR EXPRESS NEWS
ಮುಂದಿನ ವರ್ಷದ ಯುಗಾದಿ ವೇಳೆಗೆ ದೇಶದಲ್ಲಿ ಮತ್ತೊಂದು ದುರ್ಘಟನೆ ಸಂಭವಿಸುತ್ತದೆ ಎಂದು ಕೋಡಿಮಠದ ಪೀಠಾಧ್ಯಕ್ಷ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ ಭವಿಷ್ಯ ನುಡಿದಿದ್ದಾರೆ. ರಾಷ್ಟ್ರದ ಮಹಾನ್ ವ್ಯಕ್ತಿಗಳಿಗೆ ದೊಡ್ಡ ಕಂಟಕವಿದ್ದು, ಆಳುವವರು ಎಚ್ಚರ ವಹಿಸಿದರೆ ಅದನ್ನು ತಪ್ಪಿಸಬಹುದು ಎಂದು ಸ್ವಾಮೀಜಿ ಹೇಳಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹಾರನಹಳ್ಳಿಯಲ್ಲಿರುವ ಕೋಡಿಮಠದಲ್ಲಿ ಮಾತನಾಡಿ, “ದೇಶದಲ್ಲಿ ಮತ್ತೊಂದು ದುರ್ಘಟನೆ ನಡೆಯುತ್ತದೆ, ಜಗತ್ತಿನ ಸಾಮ್ರಾಟರೆಲ್ಲಾ ತಲ್ಲಣವಾಗುವ ಕಾಲ ಬರುತ್ತದೆ. ದೊಡ್ಡ ಪಟ್ಟಣಗಳಿಗೆ ಅಪಾಯದ ಸೂಚನೆಯಿದ್ದು, ದೊಡ್ಡ ದೊಡ್ಡ ಕಟ್ಟಡಗಳು ಕುಸಿಯುವ ಸಾಧ್ಯತೆಯಿದೆ. ಅಲ್ಲದೇ, 2024ರ ಯುಗಾದಿಯೊಳಗೆ ಮೂರು ಮಂದಿ ಮಹಾನ್ ವ್ಯಕ್ತಿಗಳಿಗೆ ಅಪಾಯವಿದೆ. ನಮ್ಮನ್ನು ಆಳುವವರು ಎಚ್ಚರ ವಹಿಸಿದರೆ ಈ ದುರ್ಘಟನೆ ತಪ್ಪಿಸಬಹುದು. ಕಾಲ ಬಂದಾಗ ನಾನೇ ಎಲ್ಲವನ್ನು ವಿವರಿಸುತ್ತೇನೆ. ಜೀವನ ಆಡಂಬರ ರಹಿತವಾಗಿರಬೇಕು. ಆಧ್ಯಾತ್ಮಿಕವಾದ ಚಿಂತನೆ ನಮ್ಮಲ್ಲಿರಬೇಕು” ಎಂದು ಸ್ವಾಮೀಜಿ ತಿಳಿಸಿದ್ದಾರೆ.

ಇನ್ನು ರಾಜ್ಯದ ಕಾಂಗ್ರೆಸ್‌ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ಆದ್ರೆ, ಕೆಲವರು ಬಹುಬೇಗ ಹಣ ಮಾಡುವ ಆಸೆ ಹೊಂದಿದ್ದಾರೆ. ಅದೇ ಅವರಿಗೆ ಆಪತ್ತು ತಂದುಕೊಡುತ್ತದೆ. ಆಘಾತಗಳು ಸಂಭವಿಸಲಿದೆ, ಆದ್ರೆ ಯಾವುದೇ ತೊಂದರೆಯಿಲ್ಲ. ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಆಗುವ ಸಂಭವವಿದೆ. ಹೀಗಾಗಿ, ಸರ್ಕಾರ ಜನರ ಹಿತಕ್ಕಾಗಿ ಬದಲಾಗಬೇಕಿದೆ’ ಎಂದವರು ಹೇಳಿದರು. ಮುಂದಿನ ಪ್ರಧಾನಿ ಯಾರಾಗಬೇಕೆಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರ ನೀಡಿದ ಅವರು, ಇಂತಹ ಪ್ರಶ್ನೆಗೆ ಉತ್ತರ ನೀಡುವುದು ಸಾಮಾನ್ಯವಾದ ಸಂಗತಿಯಲ್ಲ, ಅದನ್ನು ಸುಮ್ಮನೆ ಹೇಳುವುದಕ್ಕಾಗುವುದಿಲ್ಲ. ಅದರ ಬಗ್ಗೆ ಜಪ- ತಪಗಳನ್ನು ಮಾಡಬೇಕು. ಆಧ್ಯಾತ್ಮಚಿಂತನೆ ಮಾಡಬೇಕಿದೆ. ಪಂಚಾಗ್ನಿ, ಜಲಾಗ್ನಿ, ವಾಯಾಗ್ನಿ ಸೇರಿದಂತೆ 4 ಕಡೆ ಬೆಂಕಿಯನ್ನಿಟ್ಟು, ತಲೆಯ ಮೇಲೆ ಬೆಂಕಿಕುಂಡವಿಟ್ಟು ಧ್ಯಾನ ಮಾಡಬೇಕು ಎಂದಿದ್ದಾರೆ.

ಇದನ್ನೂ ಓದಿ : ತೀರ್ಥಹಳ್ಳಿ ರೆಸಾರ್ಟ್ ಅಲ್ಲಿ ಸಿಕ್ತು ವಿದೇಶಿ ಮದ್ಯ, ಪ್ರಾಣಿಗಳ ಕೊಂಬು!

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ತೀರ್ಥಹಳ್ಳಿ

ಜನರ ಕಿವಿಗೆ ಹೂ ಮುಡಿಸುತ್ತಿರುವ ಕಾಂಗ್ರೆಸ್ ಸರ್ಕಾರ!

ಜನರ ಕಿವಿಗೆ ಹೂ ಮುಡಿಸುತ್ತಿರುವ ಕಾಂಗ್ರೆಸ್ ಸರ್ಕಾರ!
– ವಿದ್ಯುತ್ ಕಡಿತ ಖಂಡಿಸಿ ತೀರ್ಥಹಳ್ಳಿಯಲ್ಲಿ ಪ್ರತಿಭಟನೆ
– ಕಾಂಗ್ರೆಸ್ ವಿರುದ್ಧ ಆರಗ ಜ್ಞಾನೇಂದ್ರ ಸಿಡಿಮಿಡಿ
– ಪ್ರತಿಯೊಬ್ಬರು ಸ್ವಾತಂತ್ರ್ಯ ಹಬ್ಬ ಆಚರಿಸಲು ಮನವಿ

NAMMUR EXPRESS NEWS
ತೀರ್ಥಹಳ್ಳಿ: ಕಾಂಗ್ರೆಸ್ ಸರ್ಕಾರ ಉಚಿತ ಭಾಗ್ಯದ ಹೆಸರಲ್ಲಿ ಜನರ ಕಿವಿಗೆ ಹೂ ಮುಡಿಸುತ್ತಿದೆ. ತೀರ್ಥಹಳ್ಳಿ ಸೇರಿದಂತೆ ಎಲ್ಲೆಡೆ ಈಗ ವಿದ್ಯುತ್ ಕಡಿತ ಸಮಸ್ಯೆ ಹೆಚ್ಚಾಗಿದೆ. ಇದರಿಂದ ರೈತರು ಸೇರಿದಂತೆ ಜನರಿಗೆ ತೊಂದರೆ ಆಗುತ್ತಿದೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ತೀರ್ಥಹಳ್ಳಿಯಲ್ಲಿ ನಡೆದ ಪ್ರತಿಭಟನೆ ಬಳಿಕ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಮಳೆಗಾಲದಲ್ಲಿ ಕೂಡ ಲೋಡ್ ಶೆಡ್ಡಿಂಗ್ ಮಾಡುತ್ತಿರುವಂತಹ ದುಸ್ಥಿತಿಗೆ ಇಳಿದಿದೆ. ಮಾರ್ಚ್ ಏಪ್ರಿಲ್ ತಿಂಗಳಿನಲ್ಲಿ ತುಂಗಾ ನದಿಯಲ್ಲಿ ನೀರು ಇಲ್ಲದಿದ್ದರೂ ನಾವು ವಿದ್ಯುತ್ ಕೊಟ್ಟಿದ್ದೆವು. ಬಿಜೆಪಿ ಸರಕಾರ ಲೋಡ್ ಶೆಡ್ಡಿಂಗ್ ಮಾಡದೆ ದಿನದ 24 ಗಂಟೆಯೂ ಕರೆಂಟ್ ಅನ್ನು ಕೊಟ್ಟಿದೆ. ಆದರೆ ಈಗ ವಿದ್ಯುತ್ ನೀಡದೆ ಜನರಿಗೆ ತೊಂದರೆ ಕೊಡುತ್ತಿದೆ.

ಬಿಟ್ಟಿ ಭಾಗ್ಯಗಳಿಗೆ ಸರ್ಕಾರ ಹಣ ಕೊಡುತ್ತಿದೆ. ಕಾಂಗ್ರೆಸ್ ಸರ್ಕಾರದ ಬಳಿ ದುಡ್ಡು ಇಲ್ಲ. ಬಿಟ್ಟಿ ಭಾಗ್ಯ ಯೋಜನೆ ಘೋಷಣೆ ಮಾಡಿ ಅಧಿಕಾರಕ್ಕೆ ಬಂದ ಮೇಲೆ ಸರ್ಕಾರ ನಡೆಸಲು ಆಗುತ್ತಿಲ್ಲ. ವಿದ್ಯುತ್ ಇಲ್ಲದೆ ರೈಸ್ ಮಿಲ್, ವರ್ಕ್ ಶಾಪಿನಂತಹ ಸಣ್ಣ ಸಣ್ಣ ಉದ್ಯಮಗಳ ಮೇಲೆ ಬಹಳ ದೊಡ್ಡ ಹೊಡೆತ ಬೀಳುತ್ತದೆ. ಕೆಪಿಸಿಗೆ ಎಸ್ಕಾಂ ಗಳು 9,000 ಕೋಟಿ ರೂ ಕೊಡಲು ಬಾಕಿ ಇದೆ. ಅಲ್ಲದೆ ಈಗ 200 ಯೂನಿಟ್ ವರೆಗೂ ವಿದ್ಯುತ್ ಫ್ರೀ ಎಂದು ಹೇಳಿದ್ದಾರೆ. ಈ ಲೋಡ್ ಶೆಟ್ಟಿಂಗ್ ಇಂದ 200 ಯೂನಿಟ್ ಉರಿಸಲು ಆಗುವುದಿಲ್ಲ. ವಿದ್ಯುತ್ ಕೊಡದೆ ಉಚಿತ ಕೊಡುವುದು ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನರಿಗೆ ಕಿವಿ ಮೇಲೆ ಹೂ ಇಡುವಂತಹ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ, ಕಾಂಗ್ರೆಸ್ ಅವರಿಗೆ ಸರಕಾರ ನಡೆಸಲು ಆಗುತ್ತಿಲ್ಲ. ಬಸ್ ಫ್ರೀ ಅಂತ 720 ಕೋಟಿ ಹೋದ ತಿಂಗಳು ಬಸ್ ನಿಗಮಕ್ಕೆ ಕಟ್ಟಬೇಕು, ಬಹುಷಃ ಮುಂದಿನ ತಿಂಗಳಿನಿಂದ ಕೆ ಎಸ್ ಆರ್ ಟಿ ಸಿ ಬಸ್ಸುಳಿಗೆ ಡೀಸೆಲ್ ಇಲ್ಲ, ಆ ನೌಕರರಿಗೆ ಸಂಬಳವನ್ನು ಕೊಡಲು ಆಗುತ್ತಿಲ್ಲ. ಇನ್ನೂ ಒಂದು ಎರಡು ತಿಂಗಳು ಕಳೆದರೆ ವಿದ್ಯುತ್ ಇಲಾಖೆಯಲ್ಲಿ ಕೆಲಸ ಮಾಡುವವರಿಗೂ ಸಂಬಳ ಕೊಡಲು ಇವರ ಬಳಿ ದುಡ್ಡಿಲ್ಲ ಎಂದು ಆರೋಪಿಸಿದರು.

ಕಾಂಗ್ರೆಸ್ ಗುರಿ ಲೋಕ ಸಭೆ ಚುನಾವಣೆ

ಕಾಂಗ್ರೆಸ್ ಪಕ್ಷದ ಮುಂದಿನ ಗುರಿ ಲೋಕಸಭೆಯಲ್ಲಿ ಗೆಲ್ಲುವುದು. ಈ ಕಾರಣಕ್ಕಾಗಿ ಅವರು ಮೀಟಿಂಗ್ ಮೇಲೆ ಮೀಟಿಂಗ್ ಮಾಡುತ್ತಿದ್ದಾರೆ. ಹೀಗಾಗಿ ಜನರ ತಲೆ ಮೇಲೆ ಚಪ್ಪಡಿ ಎಳೆಯುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಮಂತ್ರಿ ಸ್ಥಾನದಲ್ಲಿರುವವರು ಇದನ್ನು ಮಾಡಬಾರದು ಎಂದು ಆರಗ ಟೀಕಿಸಿದರು.

ಪ್ರತಿ ಮನೆಯಲ್ಲಿ ಹಾರಲಿ ತಿರಂಗಾ!

ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಹಾಗೆ ಪ್ರತಿಯೊಬ್ಬರು ತಮ್ಮ ಮನೆ, ಕಚೇರಿ, ಅಂಗಡಿಗಳಲ್ಲಿ ತಿರಂಗಾ ಹಾರಿಸಬೇಕು ಎಂದು ಆರಗ ಮನವಿ ಮಾಡಿದರು.

ಬಿಜೆಪಿಯಿಂದ ಪಟ್ಟಣದಲ್ಲಿ ಮೆರವಣಿಗೆ

ತೀರ್ಥಹಳ್ಳಿ ಪಟ್ಟಣದ ಬಿಜೆಪಿ ಕಚೇರಿಯಿಂದ ಆಗುಂಬೆ ಬಸ್ ನಿಲ್ದಾಣ ಅಲ್ಲಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು. ಬಿಜೆಪಿ ನಾಯಕರಾದ ಮದನ್, ರಾಘವೇಂದ್ರ ಬಾಳೆಬೈಲು, ಕವಿರಾಜ್ ಬೇಗುವಳ್ಳಿ, ಕುಕ್ಕೆ ಪ್ರಶಾಂತ್, ಚಂದವಳ್ಳಿ ಸೋಮಶೇಖರ್, ಶ್ರೀನಿವಾಸ್ ಕಾಸರವಳ್ಳಿ, ಸಾಲೆಕೊಪ್ಪ ರಾಮಚಂದ್ರ, ಸಂದೇಶ್ ಜವಳಿ, ಆರಗ ಜಗದೀಶ್, ಅಂಜೂರ ಕುಡುಮಲ್ಲಿಗೆ ಸೇರಿದಂತೆ ಅನೇಕ ನಾಯಕರು, ಮುಖಂಡರು ಇದ್ದರು.

ಇದನ್ನೂ ಓದಿ : ತೀರ್ಥಹಳ್ಳಿ ರೆಸಾರ್ಟ್ ಅಲ್ಲಿ ಸಿಕ್ತು ವಿದೇಶಿ ಮದ್ಯ, ಪ್ರಾಣಿಗಳ ಕೊಂಬು!

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Categories
ರಾಷ್ಟ್ರೀಯ ವಾರ್ತೆ

ಸ್ವಾತಂತ್ರ್ಯ ಸಂಭ್ರಮಕ್ಕೆ ದೇಶ ಸಜ್ಜು!

ಸ್ವಾತಂತ್ರ್ಯ ಸಂಭ್ರಮಕ್ಕೆ ದೇಶ ಸಜ್ಜು!
– ಇಂದು ಸಂಜೆ ರಾಷ್ಟ್ರಪತಿ ಭಾಷಣ
– ದೆಹಲಿ ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಭಾಷಣ

NAMMUR EXPRESS NEWS
ನವದೆಹಲಿ: ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ ಸ್ವಾತಂತ್ರೋತ್ಸವದ ಸಂಭ್ರಮದಲ್ಲಿದೆ. ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ಮಾಡಲು ಇಡೀ ದೇಶ ಸರ್ವ ಸನ್ನದ್ಧವಾಗಿದೆ. ಇಡೀ ದೇಶದಲ್ಲಿ ಎಲ್ಲೆಡೆ ಭಾರತ ಮಾತೆಯ ಪೂಜೆಗೆ ಜನ ಸಜ್ಜುಗೊಂಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸಂಪ್ರದಾಯದಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ (ಆಗಸ್ಟ್ 14) ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸೋಮವಾರ ಸಂಜೆ 7 ಗಂಟೆಗೆ ರಾಷ್ಟ್ರಪತಿಗಳ ಸ್ವಾತಂತ್ರೋತ್ಸವ ಸಂದೇಶ ಭಾಷಣ ನಡೆಯಲಿದೆ. ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನದ ಎಲ್ಲಾ ಚಾನೆಲ್ ಗಳಲ್ಲಿ ರಾಷ್ಟ್ರಪತಿಯವರ ಭಾಷಣ ನೇರ ಪ್ರಸಾರವಾಗಲಿದೆ. ರಾಷ್ಟ್ರಪತಿ ಹಿಂದಿಯಲ್ಲಿ ಮಾತನಾಡಲಿದ್ದು, ನೇರ ಪ್ರಸಾರದ ಬಳಿಕ ಭಾಷಣ ಇಂಗ್ಲಿಷ್ ಭಾಷೆಯಲ್ಲಿ ಮರು ಪ್ರಸಾರವಾಗಲಿದೆ. ರಾಷ್ಟ್ರಪತಿಗಳ ಭಾಷಣ ಹಿಂದಿ, ಇಂಗ್ಲಿಷ್ ನಲ್ಲಿ ಪ್ರಸಾರವಾದ ಬಳಿಕ ಪ್ರಾದೇಶಿಕ ದೂರ ದರ್ಶನ ವಾಹಿನಿಗಳು ಮತ್ತು ಆಕಾಶವಾಣಿಯಲ್ಲಿ ರಾತ್ರಿ 9:30ಕ್ಕೆ ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಾರಗೊಳ್ಳಲಿದೆ.

ಆಗಸ್ಟ್ 15 ಕ್ಕೆ ಪ್ರಧಾನಿಯಿಂದ ಭಾಷಣ!

ಆಗಸ್ಟ್ 15ಕ್ಕೆ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಕೆಂಪುಕೋಟೆಯಲ್ಲಿ ಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 7 ಗಂಟೆಗೆ ಕೆಂಪುಕೋಟೆ ಮೇಲೆ ಧ್ವಜಾರೋಹಣ ಮಾಡಲಿರುವ ಪ್ರಧಾನಿ, ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ದೇಶದ ವಿವಿಧ ಭಾಗಗಳಿಂದ 1,800 ಜನರು ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ರಕ್ಷಣಾ ಸಚಿವಾಲಯ ಭಾನುವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ : ತೀರ್ಥಹಳ್ಳಿ ರೆಸಾರ್ಟ್ ಅಲ್ಲಿ ಸಿಕ್ತು ವಿದೇಶಿ ಮದ್ಯ, ಪ್ರಾಣಿಗಳ ಕೊಂಬು!

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023