Categories
ಶಿವಮೊಗ್ಗ

ಆ.6ಕ್ಕೆ ಈಡಿಗ ಸಮುದಾಯದ ಚಿಂತನ ಮಂಥನ

ಆ.6ಕ್ಕೆ ಈಡಿಗ ಸಮುದಾಯದ ಚಿಂತನ ಮಂಥನ
– ಶ್ರೀ ನಾರಾಯಣಗುರು ವಿಚಾರ ವೇದಿಕೆಯಿಂದ ಆಯೋಜನೆ
– ಸಮುದಾಯದ ಶ್ರೀಗಳು ಹಾಜರ್

NAMMUR EXPRESS NEWS
ಶಿವಮೊಗ್ಗ: ಈಡಿಗ,ಧೀವರು,ಬಿಲ್ಲವ, ನಾಮದಾರಿ ಮುಂತಾದ 26 ಉಪ ಪಂಗಡಗಳನ್ನು ಒಗ್ಗೂಡಿಸುವ ಸಲುವಾಗಿ ಹಾಗೂ ಸಮಾಜದ ಸರ್ವೋತೊಮುಖ ಅಭಿವೃದ್ದಿ ಪಡಿಸಲು ಸಮಾಜ ಬಾಂಧವರ ಚಿಂತನ-ಮಂಥನ ಕಾರ್ಯಕ್ರಮ ಆ.6ಕ್ಕೆ ಶಿವಮೊಗ್ಗದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10.30ಕ್ಕೆ ಶಿವಮೊಗ್ಗ ಜಿಲ್ಲಾ ಅರ್ಯ ಈಡಿಗರ ಸಭಾ ಭವನದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಸಮುದಾಯದ ಶ್ರೀಗಳು ಭಾಗವಹಿಸಲಿದ್ದಾರೆ. ಸಮಾಜ ಭಾಂದವರು ಅತಿ‌ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸಮಾಜದ ಅಭಿವೃದ್ದಿ ಹಿತದೃಷ್ಠಿಯಿಂದ ನಿಮ್ಮ ಸಲಹೆ,ಸಹಕಾರ ನೀಡಬೇಕೆಂದು ಸಂಘಟನೆಯ ಪ್ರಮುಖರು ಮನವಿ ಮಾಡಿದ್ದಾರೆ.

ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ

HOW TO APPLY : NEET-UG COUNSELLING 2023

Categories
ಹೊಸನಗರ

ಹೊಸನಗರಕ್ಕೆ ವಿಧಾನಸಭೆ ಬೇಕು: ಮತ್ತೆ ಹೋರಾಟ?!

ಹೊಸನಗರಕ್ಕೆ ವಿಧಾನಸಭೆ ಬೇಕು: ಮತ್ತೆ ಹೋರಾಟ?!
– ಪ್ರತ್ಯೇಕ ವಿಧಾನ ಸಭಾ ಕ್ಷೇತ್ರ ರಚಿಸಲು ಸಿಎಂಗೆ ಪತ್ರ
– ಯಾವ ಸರ್ಕಾರ ಬಂದ್ರೂ ಈ ಕಡೆ ನೋಡೋದೇ ಇಲ್ಲ
– ನಾಡಿಗೆ ಬೆಳಕು ಕೊಟ್ಟವರ ಬದುಕು ಕತ್ತಲಲ್ಲಿ!

NAMMUR EXPRESS NEWS
ಹೊಸನಗರ: ಹೊಸನಗರ ಮುಳುಗಡೆ ಸಂತ್ರಸ್ಥ ತಾಲೂಕಾಗಿದ್ದು, ತನ್ನ ವಿಧಾನಸಭಾ ಕ್ಷೇತ್ರ ಕಳೆದುಕೊಂಡಿದ್ದು, ಜನಸಾಮಾನ್ಯರಿಗೆ ಶಾಪವಾಗಿ ಪರಿಣಮಿಸಿದೆ. ಯಾವುದೇ ಸರ್ಕಾರ ಬಂದ್ರೂ ಇಲ್ಲಿನ ಜನರ ಕಷ್ಟ ಕೇಳೋರಿಲ್ಲ.
ತೀರ್ಥಹಳ್ಳಿ ಮತ್ತು ಸಾಗರ ವಿಧಾನ ಸಭಾ ಕ್ಷೇತ್ರಕ್ಕೆ ಹರಿದು ಹಂಚಿ ಹೋಗಿರುವ ಕ್ಷೇತ್ರ ಸಮಸ್ಯೆಗಳ ಬೆಟ್ಟ ಹೊತ್ತುಕೊಂಡು ನಿಂತಿದೆ. ಕಾಂಗ್ರೆಸ್, ಬಿಜೆಪಿ, ದಳ ಯಾವುದೇ ಸರ್ಕಾರ ಬಂದರೂ ಇಲ್ಲಿನ ಜನರಿಗೆ ಕನಿಷ್ಠ ನ್ಯಾಯವೂ ಸಿಗುತ್ತಿಲ್ಲ.ಒಮ್ಮೆ ಪ್ರತ್ಯೇಕ ವಿಧಾನ ಸಭಾ ಹೋರಾಟದ ಕೂಗು ಕೇಳಿ ಬಂತಾದರೂ ಮತ್ತೆ ರಾಜಕೀಯದ ಮ್ಯಾಜಿಕ್ ಅದನ್ನು ಮುಚ್ಚಿ ಹಾಕಿತು. ಇದೀಗ ಮತ್ತೆ ಸಣ್ಣ ಹೋರಾಟದ ದನಿ ಕೇಳಿ ಬಂದಿದೆ.

ಸಿಎಂಗೆ ಪತ್ರ!: ಮುಂಬರುವ ವಿಧಾನಸಭಾ ಚುನಾವಣೆಯ ಒಳಗಾಗಿ ಹೊಸನಗರ ತಾಲೂಕು ವಿಧಾನಸಭಾ ಕ್ಷೇತ್ರ ಮಾನ್ಯತೆ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪತ್ರದ ಮೂಲಕ ತಾಲೂಕು ಗ್ರಾಮ ಪಂಚಾಯಿತಿ ಅಧ್ಯಕ್ಷರ ಒಕ್ಕೂಟ ಒತ್ತಾಯಿಸಿದೆ. ಈ ವಿಷಯಕ್ಕೆ ಸಂಬಂಸಿದಂತೆ ಒಕ್ಕೂಟದ ಅಧ್ಯಕ್ಷ ಎಚ್.ಬಿ.ಚಿದಂಬರ ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, ಹೊಸನಗರ ತಾಲೂಕಿನಲ್ಲಿ ಸುಮಾರು 29 ಸಾವಿರ ಕುಟುಂಬಗಳಿವೆ. ಒಂದೂವರೆ ಲಕ್ಷ ಜನಸಂಖ್ಯೆ ಹೊಂದಿದೆ. 2008ರಲ್ಲಿ ನಡೆದ ಕ್ಷೇತ್ರ ಪುನರ್ ವಿಂಗಡಣೆ ವೇಳೆ ಕ್ಷೇತ್ರ ಮರು ಹಂಚಿಕೆ ಅವೈಜ್ಞಾನಿಕವಾಗಿ ನಡೆದ ಕಾರಣಕ್ಕೆ ಕ್ಷೇತ್ರ ಕಳೆದುಕೊಳ್ಳುವಂತಾಯಿತು. ಇದರಿಂದ ಹೊಸ ನಗರ ತಾಲೂಕಿನ ಜನತೆ ರಾಜಕೀಯ ಸೇರಿದಂತೆ ಎಲ್ಲಾ ಕಾರಣಕ್ಕೆ ಉದ್ದೇಶಗಳಿಗೋಸ್ಕರ ಸಾಗರ ಹಾಗೂ ತೀರ್ಥಹಳ್ಳಿಯನ್ನು ಅವಲಂಬಿಸುವಂತಾಗಿದೆ. ಜನಸಾಮಾನ್ಯರಿಗೆ ತೀವ್ರ ಅನಾನುಕೂಲವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕಾನೂನು ಹಾಗೂ ಸಂಸದೀಯ ಸಚಿವಾಲಯ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. 2008ಕ್ಕೂ ಪೂರ್ವದಲ್ಲಿದ್ದ ಮಾದರಿಯಲ್ಲಿ ಹೊಸನಗರ ತಾಲೂಕನ್ನು ಮತ್ತೊಮ್ಮೆ ವಿಧಾನಸಭಾ ಕ್ಷೇತ್ರವನ್ನಾಗಿ ಪುನರಚನೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ನಾಡಿಗೆ ಬೆಳಕು ಕೊಟ್ಟವರ ಬದುಕು ಕತ್ತಲಿನಲ್ಲಿ!

ಹೊಸನಗರ ತಾಲೂಕು ಶರಾವತಿ ಮುಳುಗಡೆ ಪ್ರದೇಶ. ಸಾವಿರಾರು ಕುಟುಂಬಗಳು ನಾಡಿಗೆ ಬೆಳಕು ನೀಡಲು ತಮ್ಮ ಬದುಕನ್ನೇ ಕಳೆದುಕೊಂಡಿದ್ದಾರೆ. ಎರಡು ತಾಲೂಕುಗಳ ಮಧ್ಯದಲ್ಲಿ ಇರುವ ಹೊಸನಗರ ಅಭಿವೃದ್ಧಿಯಲ್ಲಿ ಭಾರೀ ಹಿಂದುಳಿದಿದೆ. ರಸ್ತೆ, ಸೌಲಭ್ಯ, ಪ್ರವಾಸೋದ್ಯಮ, ವಾಣಿಜ್ಯ, ಕೈಗಾರಿಕೆ, ಶಿಕ್ಷಣ, ತಂತ್ರಜ್ಞಾನ, ಮೊಬೈಲ್ ಸಂಪರ್ಕ, ಆಸ್ಪತ್ರೆ ಸೇರಿ ಎಲ್ಲಾ ಸೇವೆಯಲ್ಲಿ ಇಂದು ತಾಲೂಕು ಹಿಂದುಳಿದೆ. ಹೀಗಾಗಿ ಈಗ ಹೊಸನಗರ ತಾಲೂಕಿನ ಜನ ಹೋರಾಟಕ್ಕೆ ಸಿದ್ದವಾಗುತ್ತಿದ್ದಾರೆ.

ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ

HOW TO APPLY : NEET-UG COUNSELLING 2023

Categories
ಕರಾವಳಿ

Karavali top news today 5-8-2023

ಪರೀಕ್ಷೆಗೆ ಹೆದರಿ ನೇಣಿಗೆ ಕೊರಳೊಡ್ಡಿದ ವಿದ್ಯಾರ್ಥಿ!
– ಕಾರ್ಕಳ ಖಾಸಗಿ ಕಾಲೇಜಿನ ವಿದ್ಯಾರ್ಥಿ ದುರ್ಮರಣ
– ಸೌಜನ್ಯ ಕೇಸ್: ಪ್ರತಿಭಟನೆ ವೇಳೆ ಹಲ್ಲೆ ಆರೋಪ
– ಸೌಜನ್ಯ ಕುಟುಂಬದವರಿಂದ ದೂರು ದಾಖಲು
– ಮಂಗಳೂರು: ಗಾಂಜಾ ಮಾರಾಟಗಾರ ಅರೆಸ್ಟ್
– ಉಡುಪಿಯಲ್ಲಿ ಮುಸುಕುಧಾರಿ ಕಳ್ಳರ ಕರಾಮತ್ತು!

NAMMUR EXPRESS NEWS
ಕಾರ್ಕಳ: ಪರೀಕ್ಷೆಗೆ ಹೆದರಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕು ಮಿಯ್ಯಾರು ಗ್ರಾಮದಲ್ಲಿ ನಡೆದಿದೆ. ಮಿಯ್ಯಾರು ಗ್ರಾಮ ಬಲಿಪರಪಾಡಿ ನಿವಾಸಿ ರಂಜನ್ (17) ಕಾರ್ಕಳದ ಖಾಸಗಿ ಕಾಲೇಜುವೊಂದರಲ್ಲಿ E & C ಡಿಪ್ಲೋಮ ವಿದ್ಯಾಭ್ಯಾಸ ಮಾಡುತ್ತಿದ್ದ. ಆ.4ರಂದು ಸಂಜೆ ರಂಜನ್ ತಂದೆ ಕರ್ಣಾಕರ ರವರು ದೂಪದಕಟ್ಟೆಯಲ್ಲಿದ್ದಾಗ ಅವರ ಹೆಂಡತಿ ಫೋನ್ ಮಾಡಿ ರಂಜನ್ ಕಾಲೇಜಿನಿಂದ ಮನೆಗೆ ಬಂದು ರೂಮಿನ ಬಾಗಿಲು ಹಾಕಿಕೊಂಡಿದ್ದು ಬಾಗಿಲು ತೆರೆಯುತ್ತಿಲ್ಲ ಎಂದು ತಿಳಿಸಿದ್ದಾರೆ. ಕರ್ಣಾಕರ ಕೂಡಲೇ ಮನೆಗೆ ಬಂದು ಬಾಗಿಲು ಬಡಿದರೂ ರಂಜನ್ ಬಾಗಿಲು ತೆರೆಯದ ಕಾರಣ ಸಂಜೆ 5 ಗಂಟೆಗೆ ಕಿಟಿಕಿಯ ಗಾಜು ಒಡೆದು ನೋಡಿದಾಗ ರಂಜನ್ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡುರುವುದು ಬೆಳಕಿಗೆ ಬಂದಿದೆ.

ಸೌಜನ್ಯಾ ಕುಟುಂಬದವರ ಮೇಲೆ ಹಲ್ಲೆ: ದೂರು

ಧರ್ಮಸ್ಥಳ: ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತವೃಂದದ ನೇತೃತ್ವದಲ್ಲಿ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ಖಂಡಿಸಿ ಸೌಜನ್ಯಾ ಪ್ರಕರಣದ ಬಗ್ಗೆ ಮರು ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಶುಕ್ರವಾರ ಉಜಿರೆಯಲ್ಲಿ ನಡೆದ ಪ್ರತಿಭಟನೆಯ ವೇಳೆ ಸೌಜನ್ಯಾ ತಾಯಿ ಕುಸುಮಾವತಿಯವರ ಸಹೋದರನ ಮೇಲೆ ಹಲ್ಲೆ ನಡೆಸುವುದಕ್ಕೆ ಮುಂದಾದ ವ್ಯಕ್ತಿಯ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಈಗ ಪ್ರಕರಣ ದಾಖಲಾಗಿದೆ.

ಸೌಜನ್ಯಾ ತಾಯಿ ಕುಸುಮಾವತಿ ಮತ್ತು ಸಹೋದರ ಜಯರಾಂ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರತಿಭಟನಾ ಸಭೆಗೆ ಸೌಜನ್ಯಾ ತಾಯಿ ಮತ್ತು ಸೌಜನ್ಯಾ ತಂಗಿಯಂದಿರು ಆಗಮಿಸಿದ್ದರು. ಈ ವೇಳೆ ಸೌಜನ್ಯ ತಾಯಿ ನನಗೂ ವೇದಿಕೆ ಹತ್ತಬೇಕು ಎಂದು ಒತ್ತಾಯಿಸಿದಾಗ ಗಲಾಟೆಯಾಗಿದೆ. ಈ ವೇಳೆ ಹೆಗ್ಗಡೆ ಅನುಯಾಯಿಯೊಬ್ಬ ಪೋಲಿಸರ ಎದುರೇ ಸೌಜನ್ಯಾ ತಮ್ಮನ ಕಾಲರ್ ಹಿಡಿಯಲು ಪ್ರಯತ್ನಿಸಿದ್ದು, ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಪೊಲೀಸರು ಸೌಜನ್ಯ ಸಂಬಂಧಿಕರನ್ನು ಸ್ಥಳದಿಂದ ಬೇರೆ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು. ಇದೀಗ ದೂರು ದಾಖಲಾಗಿದೆ.

ಮಂಗಳೂರು: ಗಾಂಜಾ ಮಾರಾಟಗಾರ ಅರೆಸ್ಟ್

ಮಂಗಳೂರು: ಡ್ರಗ್ಸ್ ಫ್ರಿ ಮಂಗಳೂರು’ ಅಭಿಯಾನದ ಅಂಗವಾಗಿ ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಚರಣೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಮಂಗಳೂರು ನಗರದ ಕೋಡಿಕಲ್ ನಿವಾಸಿ ಮೊಹಮ್ಮದ್ ಅಝೀಝ್ ಯಾನೆ ಅಜೀಜ್ (40) ಬಂಧಿತ ಆರೋಪಿ. ಕಂಕನಾಡಿ- ಪಂಪ್‌ವೆಲ್ ಪರಿಸರದಲ್ಲಿ ದ್ವಿಚಕ್ರ ವಾಹನದಲ್ಲಿ ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದರು. ಆತನಿಂದ 50,000 ರೂಪಾಯಿ ಮೌಲ್ಯದ 2ಕೆ.ಜಿ. ತೂಕದ ಗಾಂಜಾ, ಸುಝುಕಿ ಆ್ಯಕ್ಸಸ್ ದ್ವಿಚಕ್ರ ವಾಹನ ಹಾಗೂ ಮೊಬೈಲ್ ಫೋನ್ ಸಹಿತ ಒಟ್ಟು ಒಂದು ಲಕ್ಷದ ಐದು ಸಾವಿರ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.

ಉಡುಪಿ: ಮುಸುಕುಧಾರಿಗಳಿಂದ ಮನೆ ಕಳ್ಳತನ!

ಉಡುಪಿಯ ಕರಾವಳಿ ಅಂಡರ್ ಪಾಸ್ ಸಮೀಪ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮೂರು ಮಂದಿ ಮುಸುಕುಧಾರಿ ಕಳ್ಳರು ತಮ್ಮ ಕೈ ಚಳಕವನ್ನು ತೋರಿದ್ದಾರೆ. ಕಳ್ಳರ ಕೃತ್ಯ ಮನೆಯ ಹೊರಗಡೆ ಅಳವಡಿಸಲಾಗಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಶ್ವಾನ ದಳ, ಬೆರಳಚ್ಚು ತಜ್ಞರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ

HOW TO APPLY : NEET-UG COUNSELLING 2023

Categories
ಶಿವಮೊಗ್ಗ

ಆನಂದಪುರ: ವ್ಯಕ್ತಿ ರೈಲಿಗೆ ಸಿಲುಕಿ ಅರ್ಧ ದೇಹ ತುಂಡು!

ಆನಂದಪುರ: ವ್ಯಕ್ತಿ ರೈಲಿಗೆ ಸಿಲುಕಿ ಅರ್ಧ ದೇಹ ತುಂಡು!
– ಶಿವಮೊಗ್ಗ: ಅಡ್ರೆಸ್ ಕೇಳಿ, ಬೈಕ್ ಸವಾರನ ಮುಖಕ್ಕೆ ಗುದ್ದಿದ ದುಷ್ಕರ್ಮಿಗಳು!
– ತೀರ್ಥಹಳ್ಳಿಯಲ್ಲಿ ಗನ್ ಶಾಟ್: ಓರ್ವ ಆಸ್ಪತ್ರೆಗೆ!

NAMMUR EXPRESS NEWS
ಸಾಗರ: ಸಾಗರ ತಾಲೂಕಿನ ಆನಂದಪುರ ಸಮೀಪದ ಎಡೆಹಳ್ಳಿ ಬಳಿ ವ್ಯಕ್ತಿ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.
ಸುಮಾರು 40 ರಿಂದ 45 ವರ್ಷ ಅಂದಾಜಿನ ವಯಸ್ಸಿನ ವ್ಯಕ್ತಿ ಸಾವನ್ನಪ್ಪಿದ್ದು, ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಬೆಂಗಳೂರಿನಿಂದ ತಾಳಗುಪ್ಪ ಕಡೆ ಬರುವ ರಾತ್ರಿ 9 ಗಂಟೆಯ ರೈಲಿಗೆ ವ್ಯಕ್ತಿ ಸಿಲುಕಿದ್ದು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ರೈಲ್ವೆ ಪೊಲೀಸ್ ತಂಡ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

ಬೊಮ್ಮನಕಟ್ಟೆ ಅಡ್ರೆಸ್ ಕೇಳಿ, ಬೈಕ್ ಸವಾರನ ಮುಖಕ್ಕೆ ಗುದ್ದಿದ ದುಷ್ಕರ್ಮಿಗಳು!

ಶಿವಮೊಗ್ಗ ನಗರದ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಳಾಸ ಕೇಳುವ ನೆಪದಲ್ಲಿ ಬೈಕ್ ಸವಾರನೊಬ್ಬನನ್ನ ಸುಲಿಗೆ ಮಾಡಲಾಗಿದೆ. ಶಿವಮೊಗ್ಗ ನಗರದ ರೈಲ್ವೆ ಸ್ಟೇಷನ್ ಸಮೀಪವೇ ಈ ಘಟನೆ ಸಂಭವಿಸಿದೆ.
ಆ.2ರಂದುಬಿದರೆಯಿಂದ ಬೈಕ್ ಸವಾರರೊಬ್ಬರು 100 ಅಡಿ ರಸ್ತೆಯಲ್ಲಿ ಬರುತ್ತಿದ್ದರು. ಈ ವೇಳೇ ಅವರನ್ನು ಹಿಂದಿನಿಂದ ಫಾಲೋ ಮಾಡಿದ್ದ ಇಬ್ಬರು ಬೊಮ್ಮನಕಟ್ಟೆ ಹೋಗುವುದು ಹೇಗೆ ಎಂದು ವಿಚಾರಿಸಿದ್ದಾರೆ. ಈ ವೇಳೆ, ದೂರುದಾರ ಬೈಕ್ ನಿಲ್ಲಿಸಿ ಅಡ್ರೆಸ್ ಹೇಳಿದ್ದಾರೆ.  ಅಷ್ಟರಲ್ಲಿ ಬೈಕ್‌ನಿಂದ ಇಳಿದ ದುಷ್ಕರ್ಮಿ, ಸಂತ್ರಸ್ತ ನಾಗರಾಜ್‌ ಬೈಕ್‌ ಕೀ ತೆಗೆದುಕೊಂಡು ಅವರ ಮುಖಕ್ಕೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಇನ್ನೊಬ್ಬ ದುಷ್ಕರ್ಮಿ ಚಾಕು ತೋರಿಸಿ ನಾಗರಾಜ್‌ರಿಂದ ಮೊಬೈಲ್ ಹಾಗೂ ಹಣ ಕಿತ್ತುಕೊಂಡಿದ್ದಾರೆ. 10000/- ರೂ ನಗದು ಹಣ ವೀವೋ ಕಂಪನಿಯ ಮೊಬೈಲ್ ಅನ್ನು ಕಿತ್ತುಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ದೌಡಾಯಿಸಿ ನಾಗರಾಜ್‌ರಿಗೆ ಮೆಗ್ಗಾನ್‌ನಲ್ಲಿದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆನಂತರ ನಾಗರಾಜ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

ತೀರ್ಥಹಳ್ಳಿಯಲ್ಲಿ ಕೋವಿ ಗುಂಡಿನ ಶಬ್ದ

ತೀರ್ಥಹಳ್ಳಿಯ ದಾಸನ ಗದ್ದೆಯ ಬಳಿ ಫೈರಿಂಗ್ ಆಗಿದ್ದು ಗುಂಡು ಹೊಡೆತ ಬಿದ್ದವನನ್ನು ಮಣಿಪಾಲಿಗೆ ಸಾಗಿಸಲಾಗಿದೆ ಎಂದು ವರದಿ ತಿಳಿದು ಬಂದಿದೆ.ತೀರ್ಥಹಳ್ಳಿಯ ಆರಗದ ಸಮೀಪದ ದಾಸನಗದ್ದೆ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ರಾಕೇಶ್ ಎಂಬುವರ ತೊಡೆಗೆ ಗುಂಡು ಹಾರಿದೆ. ಮಿಸ್ ಫೈರಿಂಗ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ಆದರೂ ಮಾಹಿತಿ ಪ್ರಕಾರ ತೋಟದಲ್ಲಿ ಶಬ್ದ ಕೇಳಿ ಬಂದ ಹಿನ್ನಲೆಯಲ್ಲಿ ಗನ್ ತೆಗೆದುಕೊಂಡು ಹೋಗಿದ್ದು ಮಿಸ್ ಫೈರಿಂಗ್ ಆದ ಕಾರಣ ತೊಡೆಗೆ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಘಟನೆ ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೆಲ ತಿಂಗಳು ಹಿಂದಷ್ಟೇ ಗನ್ ಶಾಟ್ ಪ್ರಕರಣದಲ್ಲಿ ಒಬ್ಬರ ಪ್ರಾಣ ಹೋಗಿತ್ತು.

ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ

HOW TO APPLY : NEET-UG COUNSELLING 2023

Categories
ವೈರಲ್ ವೀಡಿಯೊಗಳು

ಬಾಳೆಹಣ್ಣಿಗಾಗಿ ಅಂಗಡಿಗೆ ನುಗ್ಗಿದ ಗಜರಾಜ!

ಬಾಳೆಹಣ್ಣಿಗಾಗಿ ಅಂಗಡಿಗೆ ನುಗ್ಗಿದ ಗಜರಾಜ!
– ನಾಗರ ಹಾವನ್ನು ಮುದ್ದು ಮಾಡಿದ ಹಸು: ಮುಂದೇನಾಯ್ತು?… ನೀವೇ ನೋಡಿ..!

NAMMUR EXPRESS NEWS
ಚಾಮರಾಜ ನಗರ: ಕಾಡಾನೆಯೊಂದು ದಿನಸಿ ಮಳಿಗೆಯೊಂದರ ಬಾಗಿಲು ಮುರಿದು ಬಾಳೆಗೊನೆ ತಿನ್ನುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಈ ಘಟನೆ ಚಾಮರಾಜನಗರ ತಾಲ್ಲೂಕಿನ ಗಡಿ ಭಾಗದ ತಮಿಳುನಾಡಿನ ಹಾಸನೂರಿನಲ್ಲಿ ನಡೆದಿದೆ. ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಂಗಳೂರು- ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದೆ. ಚಾಮರಾಜನಗರ ತಾಲ್ಲೂಕಿನ ಪುಣಜನೂರಿನಿಂದ ತಮಿಳುನಾಡಿನ ಹಾಸನೂರು ನಡುವೆ ಕಾಡಾನೆಗಳು ರಸ್ತೆ ಬದಿಯಲ್ಲಿ ನಿಲ್ಲುವುದು ಸಾಮಾನ್ಯವಾಗಿದ್ದು, ಕಬ್ಬಿನ ಲಾರಿಗಳನ್ನು ಅಡ್ಡಗಟ್ಟಿ ಕಬ್ಬು ತಿನ್ನುತ್ತಿರುತ್ತಿವೆ.

ಗುರುವಾರ ರಾತ್ರಿ ಕಾಡಾನೆ ವೆಂಕಟೇಶ್ ಎಂಬುವವರಿಗೆ ಸೇರಿದ ಅಂಗಡಿಯ ಬಾಗಿಲು ಮುರಿದು ಒಳಗಡೆ ಸೊಂಡಿಲು ಹಾಕಿ ಬಾಳೆಗೊನೆ ತಿನ್ನುತ್ತಿರುವ ಚಿತ್ರ ವಿಡಿಯೊದಲ್ಲಿ ಸೆರೆಯಾಗಿದೆ.ಅರಣ್ಯ ಇಲಾಖೆ ಸಿಬ್ಬಂದಿ ವಾಹನದ ಸೈರನ್ ಮೊಳಗಿಸಿ ಆನೆಯನ್ನು ಓಡಿಸಲು ಯತ್ನಿಸಿದರು. ಸದ್ದು ಕೇಳಿ ಎಚ್ಚೆತ್ತ ಗ್ರಾಮಸ್ಥರೂ ಸ್ಥಳಕ್ಕೆ ಬಂದು ಕಿರುಚಾಡಲು ಆರಂಭಿಸುತ್ತಿದ್ದಂತೆ ಆನೆ ಜಾಗ ಖಾಲಿ ಮಾಡಿದೆ.

ಹಾವಿನ ಹೆಡೆ ಸವರಿದ ಹಸು: ಏನಾಯ್ತು?

ಹಾವು ಮತ್ತು ಹಸುವಿನ 17 ಸೆಕೆಂಡ್ ಗಳ ವಿಡಿಯೊದಲ್ಲಿ ಹಾವು ಮತ್ತು ಹಸು ಒಟ್ಟಿಗಿದ್ದು, ಹಸು ಹಾವಿನ ಹೆಡೆಯನ್ನು ತನ್ನ ನಾಲಿಗೆಯಿಂದ ಸವರಿದ ವಿಡಿಯೋ ವೈರಲ್ ಆಗಿದೆ. ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಇದರ ವಿಡಿಯೊ ತುಣುಕನ್ನು ಹಂಚಿಕೊಂಡಿದ್ದಾರೆ.ವಿಡಿಯೊ ಹಂಚಿಕೊಂಡ 15 ಗಂಟೆಗಳಲ್ಲಿ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗಿದ್ದು, 5 ಸಾವಿರಕ್ಕೂ ಹೆಚ್ಚು ಲೈಕ್ಸ್‌ಗಳು ಬಂದಿವೆ. ‘ಪರಿಸರವನ್ನು ಅನುಭವಿಸಿದರೆ ಮಾತ್ರ ಅರ್ಥವಾಗುತ್ತದೆ’ ಎಂದು ಟ್ವಿಟರ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ, ಇನ್ನೊಬ್ಬರು ‘ಇದು ಸಾಮರಸ್ಯದ ಪ್ರೀತಿಯಾಗಿದೆ. ಇಂದಿನ ಜಗತ್ತಿನಲ್ಲಿ ಪ್ರಾಣಿಗಳಿಂದ ಮನುಷ್ಯತ್ವವನ್ನು ಕಲಿಯಬೇಕಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ

HOW TO APPLY : NEET-UG COUNSELLING 2023

Categories
ಕರಾವಳಿ

ಕುಡಿದ ಮತ್ತಲ್ಲಿ ಮಹಿಳೆ ಸ್ನಾನದ ಚಿತ್ರೀಕರಣ: ಆರೋಪಿ ಅರೆಸ್ಟ್!

ಕುಡಿದ ಮತ್ತಲ್ಲಿ ಮಹಿಳೆ ಸ್ನಾನದ ಚಿತ್ರೀಕರಣ: ಆರೋಪಿ ಅರೆಸ್ಟ್!
– ಮಂಗಳೂರು ಸಮೀಪದ ಮುಲ್ಕಿ ಪಕ್ಷಿಕೆರೆಯಲ್ಲಿ ಘಟನೆ: ಬಜರಂಗದಳ ಕಾರ್ಯಕರ್ತರು ಹಿಡಿದರು
– ಬೆಳ್ತಂಗಡಿಯಲ್ಲಿ ಸ್ಮಾರ್ಟ್ ಕಳ್ಳ ಕೊನೆಗೂ ಸಿಕ್ಕಿ ಬಿದ್ದ!

NAMMUR EXPRESS NEWS
ಮಂಗಳೂರು: ನೆರೆ ಮನೆಯ ಮಹಿಳೆಯೊಬ್ಬರು ಬಚ್ಚಲು ಮನೆಯಲ್ಲಿ ಸ್ನಾನ ಮಾಡುತ್ತಿರುವಾಗ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡುತ್ತಿದ್ದ ಯುವಕನನ್ನು ಸ್ಥಳೀಯ ಬಜರಂಗದಳ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಮುಲ್ಕಿ ಸಮೀಪದ ಪಕ್ಷಿಕೆರೆ ಎಂಬಲ್ಲಿ ನಡೆದಿದೆ. ಆರೋಪಿ ಸುಮಂತ್ ( 22) ತನ್ನ ನೆರೆ ಮನೆಯ ಬಚ್ಚಲು ಕೋಣೆಯಲ್ಲಿ ಮಹಿಳೆಯೊಬ್ಬರು ಸ್ನಾನ ಮಾಡುವುದನ್ನು ವಿಡಿಯೋ ಮಾಡುತ್ತಿರುವಾಗ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡುವುದು ಗಮನಿಸಿ ಕಿರುಚಾಡಿದ್ದಾರೆ. ಕೂಡಲೇ ಒಟ್ಟಾದ ಸ್ಥಳೀಯ ಬಜರಂಗದಳ ಸಂಘಟನೆಯ ಕಾರ್ಯಕರ್ತರು ಸುಮಂತ್ ಪೂಜಾರಿ ಎಂಬಾತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಂಧಿತ ಆರೋಪಿ ಈ ಹಿಂದೆ ಬಜರಂಗದಳ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದು, ಆದರೆ ವಿಪರೀತ ಮದ್ಯದ ಚಟ ಇದ್ದ ಸುಮಂತ್ ಪೂಜಾರಿಯನ್ನು ಕೆಲ ಸಮಯಗಳ ಹಿಂದೆ ಸಂಘಟನೆಯಿಂದ ಹೊರದಬ್ಬಿದ್ದರು ಎಂದು ಪಕ್ಷಿಕೆರೆ ಬಜರಂಗದಳ ಮುಖಂಡರು ಸ್ಪಷ್ಟನೆ ನೀಡಿದ್ದಾರೆ. ಈ ವೀಡಿಯೋ ಚಿತ್ರೀಕರಣ ಮಾಡುವಾಗ ಕೂಡ ವಿಪರೀತವಾಗಿ ಕುಡಿದಿದ್ದ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಬಳಿಕ ಮುಲ್ಕಿ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಮಹಿಳೆ ಸ್ನಾನ ಮಾಡುವ ವೀಡಿಯೊ ಮಾಡಿದ್ದ ಮೊಬೈಲ್ ಸಹಿತ ಆತನನ್ನು ವಶಕ್ಕೆ ಪಡೆದು ಠಾಣೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.ಆರೋಪಿಯ ಸಂಬಂಧಿಯೊಬ್ಬರು ಠಾಣೆಗೆ ಧಾವಿಸಿ ಜಾಮೀನು ನೀಡಿದ್ದಾರೆ. ಪೊಲೀಸರು ಬಂಧಿತನಿಗೆ ಕಡಕ್ ಆಗಿ ವಾರ್ನಿಂಗ್ ನೀಡಿ 50000 ಸಾವಿರ ರೂಪಾಯಿಯ ಬಾಂಡ್ ಮತ್ತು ಆತನ ಬಳಿ ಮುಚ್ಚಳಿಕೆ ಬರೆಸಿ ಆತನನ್ನು ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ.

ಶಿಕ್ಷಕಿ ಬೆದರಿಸಿ ಒಂದು ಲಕ್ಷ ದರೋಡೆ: ಜೈಲು

ಬೆಳ್ತಂಗಡಿ: ಸಾಮಾಜಿಕ ಜಾಲತಾಣ ‘ಟೆಲಿಗ್ರಾಂ’ ಮೂಲಕ ಅಮಾಯಕ ಶಿಕ್ಷಕಿಯನ್ನು ಬೆದರಿಸಿ ಒಂದು ಲಕ್ಷ ರೂ ವಸೂಲಿ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಿನಿಮೀಯ ಶೈಲಿಯಲ್ಲಿ ವೇಣೂರು ಪೊಲೀಸರು ಆರೋಪಿಯನ್ನು ಸೆರೆ ಹಿಡಿದ ಘಟನೆ ಬುಧವಾರ ರಾತ್ರಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಸುಕ್ಕೇರಿ ಗ್ರಾಮದ ಅಂಟ್ರಿಂಜ ನಿವಾಸಿ ಅಶ್ವತ್ ಹೆಬ್ಬಾರ್ (23) ಬಂಧಿತ ಆರೋಪಿಯಾಗಿದ್ದಾನೆ.

ಏನಿದು ಘಟನೆ?:

ಬೆಳ್ತಂಗಡಿ ತಾಲೂಕಿನ ಸುಳ್ಳೇರಿ ಗ್ರಾಮದ ನಿವಾಸಿ, ಪೆರೋಡಿತ್ತಾಯ ಕಟ್ಟೆ ಶಾಲೆಯ ಶಿಕ್ಷಕಿ ಜ್ಯೋತಿ ಎಂಬವರಿಗೆ ಬೆದರಿಸಿ ಮೂರು ಲಕ್ಷ ರೂ. ನೀಡುವಂತೆ ಟೆಲಿಗ್ರಾಂ ನಕಲಿ ಖಾತೆಯ ಮೂಲಕ ವ್ಯಕ್ತಿಯೋರ್ವ ಬೇಡಿಕೆ ಇಟ್ಟಿದ್ದಾನೆ. ಹಣ ಕೊಡದೆ ಹೋದರೆ ನಿನ್ನ ಪತಿಯನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಶಿಕ್ಷಕಿ ಜ್ಯೋತಿ ವೇಣೂರು ಠಾಣೆಗೆ ತೆರಳಿ ದೂರು ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ವೇಣೂರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕಿ ಸೌಮ್ಯಾ ಜೆ. ನೇತೃತ್ವದ ತಂಡ, ಜ್ಯೋತಿಯಿಂದ ಒಂದು ಲಕ್ಷ ರೂ. ನೀಡುವುದಾಗಿ ಆರೋಪಿಗೆ ಟೆಲಿಗ್ರಾಂ ಸಂದೇಶ ಕಳುಹಿಸಿದ್ದಾರೆ. ಅದರಂತೆ ಆರೋಪಿ ಬುಧವಾರ ಸಂಜೆ ಅಳದಂಗಡಿ ಕೆದ್ದು ಸಮೀಪ ಹಣ ಎಸೆದು ಹೋಗುವಂತೆ ಸೂಚಿಸಿದ್ದ. ಬಳಿಕ ಅಲ್ಲಿ ಬೇಡ ಎಂದು ಮತ್ತೊಮ್ಮೆ ಸಂದೇಶ ರವಾನಿಸಿ ಬೇರೊಂದು ಸ್ಥಳ ಸೂಚಿಸಿದ್ದಾನೆ. ಹೀಗೆ ಪದೆ ಪದೆ ಮೂರರಿಂದ ನಾಲ್ಕುಬಾರಿ ಸ್ಥಳವನ್ನು ಬದಲಾಯಿಸುತ್ತಾ ಮೆಸೇಜ್ ಮಾಡುತ್ತಿದ್ದ ಆರೋಪಿ ಕೊನೆಯದಾಗಿ ಶಿರ್ಲಾಲು ಸವಣಾಲು ಕ್ರಾಸ್ ಬಳಿ ಹಣವನ್ನು ವಾಹನದಿಂದ ಎಸೆದು ಹೋಗುವಂತೆ ಸೂಚಿಸಿದ್ದಾನೆನ್ನಲಾಗಿದೆ. ಅದರಂತೆ ಜ್ಯೋತಿ ಹಣದ ಕಟ್ಟನ್ನು ಎಸೆದು ಹೋಗಿದ್ದರು. ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿ ಹಣವನ್ನು ಹೆಕ್ಕಿಕೊಳ್ಳುತ್ತಿದ್ದಂತೆ ಮೊದಲೇ ಕಾದು ಕುಳಿತಿದ್ದ ಪೊಲೀಸರು ಆತನನ್ನು ಹಿಡಿಯಲು ಯತ್ನಿಸಿದ್ದಾರೆ. ಆದ್ರೆ ಆತ ಪರಾರಿಯಾಗಿದ್ದಾನೆ.ಬಳಿಕ ತಡರಾತ್ರಿ ಆತನನ್ನು ಗುಂಡೇರಿ ಸಮೀಪ ಬಂಧಿಸಿದ್ದು ಝೆಡ್ ಆರೋಪಿಯಿಂದ ಒಂದು ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ ಬೈಕನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ

HOW TO APPLY : NEET-UG COUNSELLING 2023

Categories
ರಾಜ್ಯ

ಕೆಲಸ ಸಿಗದಿದ್ದಕ್ಕೆ ಕಳ್ಳನಾದ ಎಂಜಿನಿಯರ್!

ಕೆಲಸ ಸಿಗದಿದ್ದಕ್ಕೆ ಕಳ್ಳನಾದ ಎಂಜಿನಿಯರ್!
– ನೋಕಿಯಾ ಕಂಪನಿ ಕೆಲಸ ಮಾಡಿದ್ದ ಟೆಕ್ಕಿ
– ಬೆಳಗ್ಗೆ ಬೀಗ ಹಾಕಿದ ಮನೆಗಳ ಗುರುತು: ರಾತ್ರಿ ಕಳ್ಳತನ
– ಜಾಮೀನು ಕೂಡಿಸಲು ವಕೀಲರನ್ನೇ ಕಿಡ್ನಾಪ್ ಮಾಡಿದ ರೌಡಿಗಳು!

NAMMUR EXPRESS NEWS
ಬೆಂಗಳೂರು: ಮನೆ ಕಳವು ಮಾಡುತ್ತಿದ್ದ ನೋಕಿಯಾ ಕಂಪೆನಿಯ ಮಾಜಿ ನೌಕರ, ಎಂಜಿನಿಯ‌ರ್ ನನ್ನು ಬೆಂಗಳೂರು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಮಹಾಮನಿ (37) ಬಂಧಿತ. ಆರೋಪಿಯಿಂದ 29 ಲಕ್ಷ ರೂ. ಮೌಲ್ಯದ 512 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ತಮಿಳುನಾಡು ಮೂಲದ ಆರೋಪಿ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ (ಬಿಇ) ವ್ಯಾಸಂಗ ಮಾಡಿದ್ದು, ಚೆನ್ನೈನ ನೋಕಿಯಾ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ 2019ರಲ್ಲಿ ಕಂಪೆನಿಯವರು ಕೆಲಸದಿಂದ ತೆಗೆದು ಹಾಕಿದ ಬಳಿಕ ಯಾವುದೇ ಕೆಲಸ ಸಿಗದಿದ್ದರಿಂದ ಮನೆ ಕಳವು ಮಾಡುವುದನ್ನು ರೂಢಿಗತ ಮಾಡಿಕೊಂಡಿದ್ದ. ಬೆಳಗ್ಗೆ ವೇಳೆ ಬೀಗ ಹಾಕಿದ ಮನೆಗಳನ್ನು ಗುರುತಿಸಿ ರಾತ್ರಿ ವೇಳೆ ಕಬ್ಬಿಣದ ರಾಡ್‌ನಿಂದ ಮನೆ ಬಾಗಿಲು ಮೀಟಿ ಕಳವು ಮಾಡುತ್ತಿದ್ದ. ಈತನ ವಿರುದ್ಧ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡಿನ ವಿವಿಧ ಠಾಣೆಗಳಲ್ಲಿ ದರೋಡೆ, ಕನ್ನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ಹೇಳಿದರು.

2019ರಲ್ಲಿ ಠಾಣೆ ವ್ಯಾಪ್ತಿಯಲ್ಲಿ ಆರೋಪಿ ಎರಡು ಕಳವು ಕೃತ್ಯ ಎಸಗಿದ್ದ ಬಳಿಕ ನಗರದ ವಿವಿಧೆಡೆ ಕಳವು ಮಾಡಿ 2020ರಲ್ಲಿ ಎಚ್‌ಎಸ್ ಆರ್ ಲೇಔಟ್ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಕಳೆದ ಎರಡು ವರ್ಷಗಳಿಂದ ಜೈಲಿನಲ್ಲಿದ್ದ. ಹಳೇ ಪ್ರಕರಣದ ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ವಾರೆಂಟ್ ಪಡೆದು, ಪೊಲೀಸ್‌ ವಶಕ್ಕೆ ಪಡೆಯಲಾಗಿತ್ತು. ಈತನ ಮಾಹಿತಿ ಮೇರೆಗೆ ಚಿನ್ನಾಭರಣವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು. ಠಾಣಾಧಿಕಾರಿ ಪ್ರಶಾಂತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ಶಾಲೆಯ ಬಿಸಿಯೂಟದಲ್ಲಿ ಕೊಳೆತ ತರಕಾರಿ !

ಶಾಲೆಯ ಬಿಸಿಯೂಟಕ್ಕೆ ಕೊಳೆತ ತರಕಾರಿ ಬಳಸಿದ ಹಿನ್ನೆಲೆಯಲ್ಲಿ ಸರಕಾರಿ ಪ್ರಾಥಮಿಕ ಮಾದರಿ ಶಾಲೆ ಮುಖ್ಯಶಿಕ್ಷಕಿಯೋರ್ವರಿಗೆ ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ.
ಶಾಲೆಯಲ್ಲಿ ಕೊಳೆತ ತರಕಾರಿ ಬಳಸಿ ಬಿಸಿಯೂಟ ಬಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ಹಾಗೂ ಅಕ್ಷರ ದಾಸೋಹ ತಂಡ ಶಾಲೆಗೆ ಭೇಟಿ ನೀಡಿ ಚರ್ಚಿಸಿದರು ಎನ್ನಲಾಗಿದೆ.

ಜಾಮೀನು ಕೂಡಿಸಲು ವಕೀಲರನ್ನೇ ಕಿಡ್ನಾಪ್ ಮಾಡಿದ ರೌಡಿಗಳು!

ರೌಡಿಗಳು ತಮ್ಮ ಕಡೆಯವರ ಜಾಮೀನಿಗಾಗಿ ವಕೀಲರನ್ನೇ ಕಿಡ್ರಾಪ್ ಮಾಡಿದ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.
ಜೈಲಿನಲ್ಲಿರುವ ತಮ್ಮ ಕಡೆಯ ಎಂಟು ಮಂದಿಗೆ ಜಾಮೀನು ಕೊಡಿಸಲು ಮೂರು ಜನ ರೌಡಿಶೀಟರ್ ಗಳು ವಕೀಲರಾದ ಗಿರಿಧರ್ ಅವರನ್ನು ಕಿಡ್ನಾಪ್ ಮಾಡಿದ್ದಲ್ಲದೇ ವಕೀಲರಿಂದಲರ ಹತ್ತುಸಾವಿರ ರೂಪಾಯಿ ಹಣ ಕಸಿದುಕೊಂಡಿದ್ದಾರೆ. ವಕೀಲ ಗಿರಧರ್ ಅವರನ್ನು ಅವರ ಕಾರಿನಲ್ಲೇ ಅಪಹರಿಸಿ ಜೈಲಿನಲ್ಲಿರುವ ತಮ್ಮ ಕಡೆಯ ಎಂಟು ಜನರಿಗೂ ನೀವು ಬೇಲ್ ವ್ಯವಸ್ಥೆ ಮಾಡಬೇಕು ಎಂದು ಹೇಳಿದ್ದಲ್ಲದೆ ವಕೀಲರ ಬಟ್ಟೆ ಬಿಚ್ಚಿಸಿ ಕಾರಿನ ಜಾಕ್ ರಾಡ್ ಹಾಗೂ ಸ್ನಾನರ್ ಬಳಸಿ ಹಲ್ಲೆ ಮಾಡಲಾಗಿದೆ ಎಂದು ದೂರು ನೀಡಿದ್ದಾರೆ.

ನೀವು ಐದು ಲಕ್ಷ ರೂ. ಹಣ ತಂದು ಕೊಡಬೇಕು ಮತ್ತೆ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ ನಿಮ್ಮನ್ನು ಕೊಲ್ಲುವುದಾಗಿ ಬೆದರಿಕೆಯನ್ನೂ ಒಡ್ಡಿದ್ದಾರಂತೆ. ಬಳಿಕ ಗಿರಿಧರ್ ಅವರಿಂದ 10 ಸಾವಿರ ರೂ. ಕಸಿದುಕೊಂಡು ಬಿಟ್ಟು ಕಳಿಸಿದ್ದಾರೆ. ವಕೀಲರ ಮೇಲೆ ಹಲ್ಲೆ ಮತ್ತು ಹಣ ದೊಚಿದ ಪ್ರಮುಖ ಆರೋಪಿಗಳು ರೌಡಿಶೀಟರ್ ಗಳಾದ ರಾಜೇಶ್ ಅಲಿಯಾಸ್ ಕೋಳಿ ರಾಜೇಶ್, ಹರ್ಷಿತ್ ಅಲಿಯಾಸ್ ಆಪಲ್, ಜಾನ್ ಹಾಗೂ ಭರತ್ ವಿರುದ್ಧ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ ಕೂಡಲೇ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆಗೆ ಮುಂದಾದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆಂದು ತಿಳಿದುಬಂದಿದೆ.

ಇದನ್ನೂ ಓದಿ : ಯುವ ನಿಧಿ ಗ್ಯಾರಂಟಿ ಯೋಜನೆಗೆ ಯಾರು ಅರ್ಹರು?

HOW TO APPLY : NEET-UG COUNSELLING 2023

Categories
ಅಡಿಕೆ-ದರ

ಅಡಿಕೆ ದರ ಎಷ್ಟಿದೆ ? – ಕಾಳು ಮೆಣಸು ದರ ಜಾಸ್ತಿ ಆಯ್ತು!

ಅಡಿಕೆ ದರ ಎಷ್ಟಿದೆ?
– ಮಲೆನಾಡಲ್ಲಿ ದರ ಎಷ್ಟಿದೆ
– ಕಾಳು ಮೆಣಸು ದರ ಜಾಸ್ತಿ ಆಯ್ತು!

NAMMUR EXPRESS NEWS
ಬೆಟ್ಟೆ- 51658-53410
ಗೊರಬಲು- 26609-42299
ರಾಶಿ-44809-54609
ಸರಕು- 52419-81059
ಸಿಪ್ಪೆಗೋಟು – 13019-24253
ಚಾಲಿ – 34969-40999

ಕಾಳು ಮೆಣಸು: 610 ರೂ.

ಇದನ್ನೂ ಓದಿ : ಯುವ ನಿಧಿ ಗ್ಯಾರಂಟಿ ಯೋಜನೆಗೆ ಯಾರು ಅರ್ಹರು?

HOW TO APPLY : NEET-UG COUNSELLING 2023

Categories
ರಾಜ್ಯ

ಅಬ್ಬಾ…ಟೊಮ್ಯಾಟೊ ದರ ಇಳೀತಿದೆ!

ಅಬ್ಬಾ…ಟೊಮ್ಯಾಟೊ ದರ ಇಳೀತಿದೆ!
– ಧಾರಣೆ ದಿಢೀರ್ ಅರ್ಧಕ್ಕರ್ಧ ಕುಸಿತ: 50 ರೂ. ನತ್ತ ಬೆಲೆ
– ಮುಂದಿನ ವಾರ ಮತ್ತಷ್ಟು ಇಳಿಕೆ?

NAMMUR EXPRESS NEWS
ಕೋಲಾರ: ಕಳೆದ 15 ದಿನಗಳಿಂದ ಗಗನಮುಖಿಯಾಗಿದ್ದ ಟೊಮ್ಯಾಟೊ ಧಾರಣೆ ಏಕಾಏಕಿಯಾಗಿ ಅರ್ಧಕ್ಕರ್ಧ ಕುಸಿದಿದೆ. ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ಎರಡು ದಿನದ ಹಿಂದೆ ಇದ್ದ ಬೆಲೆ ಈಗ ಅರ್ಧಕ್ಕಿಳಿದಿದೆ. ಏಷ್ಯಾದ ಎರಡನೇ ಅತಿದೊಡ್ಡ ಟೊಮ್ಯಾಟೋ ಮಾರ್ಕೆಟ್ ಎಂದು ಗುರುತಿಸಲಾದ ಕೋಲಾರದ ಹೋಲ್‌ಸೇಲ್‌ ಮಾರ್ಕೆಟ್‌ನಲ್ಲಿ ಎರಡು ದಿನಗಳ ಹಿಂದೆ 15 ಕೆಜಿಯ ಬಾಕ್ಸ್ 2700 ರೂ.ಗೆ ಮಾರಾಟವಾಗಿತ್ತು. ಶುಕ್ರವಾರ ಅದೇ ಟೊಮ್ಯಾಟೋ 1480 ರೂ.ಗೆ ಹರಾಜಾಗಿದೆ. ಅಂದರೆ 100 ರೂ ಕೆಜಿಗೆ ಬರುತ್ತಿದೆ.

ಕೋಲಾರ ಮಾರುಕಟ್ಟೆಯಲ್ಲಿ 15 ಕೆಜಿ ಬಾಕ್ಸ್ 2700 ರೂ.ಗೆ ಮಾರಾಟವಾಗಿದ್ದು, ಇತಿಹಾಸದಲ್ಲೇ ಅತಿ ದೊಡ್ಡ ಮೊತ್ತ ಎಂದು ಗುರುತಿಸಲಾಗಿತ್ತು. ಅಂದರೆ ಒಂದು ಕೆಜಿಗೆ 180 ರೂ.ಗೆ ಮಾರಾಟವಾಗಿತ್ತು. ಇದಕ್ಕೆ ಪ್ರಮುಖ ಗ್ರಾಹಕರೇ ಉತ್ತರ ಭಾರತದವರು. ಉತ್ತರ ಪ್ರದೇಶ, ರಾಜಸ್ಥಾನ, ದಿಲ್ಲಿಯ ಬೇಡಿಕೆಗೆ ಅನುಗುಣವಾಗಿ ಈ ದರ ಒಂದೇ ಸಮನೆ ಏರಿಕೆಯಾಗಿತ್ತು.
ಮಾರುಕಟ್ಟೆಗೆ ಬರುತ್ತಿದ್ದ ಟೊಮ್ಯಾಟೋ ಪ್ರಮಾಣ ತುಂಬ ಕಡಿಮೆ ಇತ್ತು ಬೇಡಿಕೆ ತುಂಬ ಜಾಸ್ತಿ ಇತ್ತು.ಈಗ ಮತ್ತೊಂದು ಬೆಳೆ ಬೆಳೆದು ಮಾರುಕಟ್ಟೆಗೆ ಬರುವ ಹಂತವಾಗಿದ್ದು ಸಾಕಷ್ಟು ಪ್ರಮಾಣದಲ್ಲಿ ಟೊಮ್ಯಾಟೊ ಮಾರುಕಟ್ಟೆಗೆ ಬರಲು ಸಿದ್ಧರವಾಗಿದೆ. ಅದರಲ್ಲೂ ಮುಖ್ಯವಾಗಿ ಕೋಲಾರದ ಟೊಮ್ಯಾಟೋಗೆ ಭಾರಿ ಬೇಡಿಕೆ ಇದ್ದ ಉತ್ತರ ಭಾರತದಲ್ಲಿ ಕೂಡಾ ಈಗ ಸ್ಥಳೀಯವಾಗಿ ಟೊಮ್ಯಾಟೊ ಲಭ್ಯವಾಗುತ್ತಿದೆ. ಈ ಕಾರಣಕ್ಕಾಗಿ ಟೊಮ್ಯಾಟೊ ಬೆಲೆ ಇಳಿದಿದೆ ಎಂದು ವಿಶ್ಲೇಷಿಸಲಾಗಿದೆ. ಟೊಮ್ಯಾಟೊ ಧಾರಣೆ ಸಾಮಾನ್ಯ ಹಂತಕ್ಕೆ ಬರಲಿದೆ. ಈಗಾಗಲೇ ಸಾಮಾನ್ಯ ಟೊಮ್ಯಾಟೊಗಳ ಬೆಲೆ
ಮಾರುಕಟ್ಟೆಯಲ್ಲಿ 80ರಿಂದ 100 ರೂ. ಇದ್ದು ಇದು ಒಂದು ವಾರದಲ್ಲಿ 50 ರೂ. ಮಟ್ಟಕ್ಕೆ ಇಳಿಯಬಹುದು ಎಂಬ ನಿರೀಕ್ಷೆ ಇದೆ.

ಇದನ್ನೂ ಓದಿ : ಯುವ ನಿಧಿ ಗ್ಯಾರಂಟಿ ಯೋಜನೆಗೆ ಯಾರು ಅರ್ಹರು?

HOW TO APPLY : NEET-UG COUNSELLING 2023

Categories
ಉದ್ಯೋಗ ಸುದ್ದಿ

ಅಂಚೆ ಇಲಾಖೆಯಲ್ಲಿ 1714 ಹುದ್ದೆಗೆ ಅರ್ಜಿ

ಅಂಚೆ ಇಲಾಖೆಯಲ್ಲಿ 1714 ಹುದ್ದೆಗೆ ಅರ್ಜಿ
– ಅಂಚೆ ಇಲಾಖೆಯ ನೇಮಕಾತಿ..ಯಾರು ಅರ್ಜಿ ಹಾಕಬಹುದು?

NAMMUR EXPRESS NEWS
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಒಟ್ಟು 1714 ಗ್ರಾಮೀಣ ಡಾಕ್ ಸೇವಕ್ ಉದ್ಯೋಗ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಬ್ರಾಂಚ್ ಪೋಸ್ಟ್ ಮಾಸ್ಟರ್ (ಬಿಪಿಎಂ) ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ (ಎಬಿಪಿಎಂ) ಹುದ್ದೆಗಳ ನೇಮಕಾತಿ ನಡೆಯಲಿದೆ. 10 ನೇ ತರಗತಿ ಓದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಕರ್ನಾಟಕ ಅಂಚೆ ವೃತ್ತದಿಂದ ಒಟ್ಟು 1214 ಗ್ರಾಮೀಣ ಡಾಕ್ ಸೇವಕ್ (ಪಿಬಿಎಂ/ ಎಬಿಪಿಎಂ) ಹುದ್ದೆ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.
ಹುದ್ದೆ ವಿವರ: ಕರ್ನಾಟಕ ಅಂಚೆ ವೃತ್ತದಿಂದ ಒಟ್ಟು 1214 ಗ್ರಾಮೀಣ ಡಾಕ್ ಸೇವಕ್ (ಪಿಬಿಎಂ/ ಎಬಿಪಿಎಂ) ಹುದ್ದೆಗೆ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.

ಜಿಲ್ಲೆಯಲ್ಲಿರುವ ಹುದ್ದೆಗಳ ವಿವರ :

ಮಂಗಳೂರು- 52
ಮೈಸೂರು- 43
ನಂಜನಗೂಡು-41
ಪುತ್ತೂರು- 89
ರಾಯಚೂರು- 49
ಆರ್‌ಎಂಎಸ್‌ ಎಚ್‌ಬಿ- 44
ಆರ್ ಎಂ ಎಸ್ ಕ್ಯೂ- 6
ಶಿವಮೊಗ್ಗ-74
ಉಡುಪಿ-110
ವಿಜಯಪುರ- 65
ಯಾದಗಿರಿ- 33
ಬಾಗಲಕೋಟೆ- 29
ಬಳ್ಳಾರಿ – 43
ಶಿವಮೊಗ್ಗ-74
ಉಡುಪಿ-110
ವಿಜಯಪುರ- 65
ಯಾದಗಿರಿ- 33
ಬಾಗಲಕೋಟೆ- 29
ಬೆಳಗಾವಿ- 42
ಬೆಂಗಳೂರು ಪೂರ್ವ-11
ಬೆಂಗಳೂರು ದಕ್ಷಿಣ-4
ಬೆಂಗಳೂರು ಪಶ್ಚಿಮ-6
ಬೀದರ್- 49
ಚನ್ನಪಟ್ಟಣ 66
ಚಿಕ್ಕಮಗಳೂರು- 63
ಚಿತ್ರದುರ್ಗ -51
ದಾವಣಗೆರೆ- 47
ಧಾರವಾಡ- 36
ಗದಗ- 63
ಗೋಕಾಕ್-13
ಹಾಸನ್- 84
ಹಾವೇರಿ-33
ಕಾರವಾರ- 53
ಕೊಡಗು- 44
ಕೋಲಾರ- 75
ಚಿಕ್ಕೋಡಿ – 45
ಕಲ್ಬುರ್ಗಿ- 44
ಮಂಡ್ಯ -78

ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ತುಂಬಿರಬೇಕು. ಗರಿಷ್ಠ 40 ವರ್ಷಗಳಾಗಿರಬೇಕು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ, ವಿಶೇಷಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ. ವಿದ್ಯಾರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.

ವೇತನ: ಗ್ರಾಮೀಣ ಡಾಕ್ ಸೇವಕ್ ಬ್ರಾಂಚ್ ಪೋಸ್ಟ್ ಮಾಸ್ಟರ್ (ಬಿಪಿಎಂ) ಹುದ್ದೆಗೆ 12,000-29,380ರೂವರೆಗೆ ಗ್ರಾಮೀಣ ಡಾಕ್ ಸೇವಕ್ ಅಸಿಸ್ಟೆಂಟ್ ಬ್ರಾಂಟ್ ಪೋಸ್ಟ್ ಮಾಸ್ಟರ್ (ಎಬಿಪಿಎಂ) ಹುದ್ದೆಗೆ 10000-24470ರೂ. ವರೆಗೆ ವೇತನ ನಿಗದಿಪಡಿಸಲಾಗಿದೆ.ಆಯ್ಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಮೆರಿಟ್ ಪಟ್ಟಿ, ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲ ಚೇತನ, ತೃತೀಯ ಲಿಂಗಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಇತರೆ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ..

ಈ ಹುದ್ದೆ ಕುರಿತು ಸಂಪೂರ್ಣ ವಿವರಣೆ, ಅರ್ಜಿ ಸಲ್ಲಿಕೆ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು ಭಾರತೀಯ ಅಂಚೆ ಇಲಾಖೆಯ ಅಧಿಕೃತ ಜಾಲತಾಣವಾದ indiapost.gov.in ಗೆ ಭೇಟಿ ನೀಡಬಹುದಾಗಿದೆ. ಈ ಹುದ್ದೆಗೆ ಅಭ್ಯರ್ಥಿಗಳು ಆಗಸ್ಟ್ 3ರಿಂದ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್ 23 ಆಗಿದೆ. ಅರ್ಜಿ ತಪ್ಪು ಸರಿಪಡಿಸುವಿಕೆಗೆ ಆಗಸ್ಟ್ 24ರಿಂದ ಆಗಸ್ಟ್ 26ರ ವರೆಗೆ ಕಾಲ ಅವಕಾಶ ನೀಡಲಾಗಿದೆ

ಇದನ್ನೂ ಓದಿ : ಯುವ ನಿಧಿ ಗ್ಯಾರಂಟಿ ಯೋಜನೆಗೆ ಯಾರು ಅರ್ಹರು?

HOW TO APPLY : NEET-UG COUNSELLING 2023