Categories
ತೀರ್ಥಹಳ್ಳಿ

ತೀರ್ಥಹಳ್ಳಿ: ಬೆಂಕಿ ಹೊತ್ತಿ ಉರಿದ ಮರ!

ತೀರ್ಥಹಳ್ಳಿ: ಬೆಂಕಿ ಹೊತ್ತಿ ಉರಿದ ಮರ!
– ಹೈ ವೋಲ್ವೇಜ್ ವಿದ್ಯುತ್ ತಂತಿ ತಾಗಿ ರಸ್ತೆ ಬದಿಯಲ್ಲಿದ್ದ ಮರಕ್ಕೆ ಬೆಂಕಿ
– ಶಿವಮೊಗ್ಗ: ಕೇಸರಿ ಬಾವುಟ ತೆರವು: ಮತ್ತೆ ಕಟ್ಟಿದ ಹಿಂದೂ ಕಾರ್ಯಕರ್ತರು!
– ಶಿಕಾರಿಪುರ: ವಿಷ ಸೇವಿಸಿ ರೈತ ಆತ್ಮಹತ್ಯೆ

NAMMUR EXPRESS NEWS
ತೀರ್ಥಹಳ್ಳಿ: ಹೈ ವೋಲ್ವೇಜ್ ವಿದ್ಯುತ್ ತಂತಿ ತಾಗಿ ರಸ್ತೆ ಬದಿಯಲ್ಲಿದ್ದ ಮರವೊಂದಕ್ಕೆ ಬೆಂಕಿ ಹತ್ತಿ ಧಗಧಗ ಉರಿದ ಘಟನೆ ತೀರ್ಥಹಳ್ಳಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ 169ಎ ಮಾರ್ಗದಲ್ಲಿ ನಡೆದಿದೆ. ತೀರ್ಥಹಳ್ಳಿ ತಾಲೂಕಿನ ತೂದೂರು ಸಮೀಪ ಶನಿವಾರ ಬೆಳಿಗ್ಗೆ 4.30ರ ವೇಳೆಗೆ ಹೈ ವೋಲ್ವೇಜ್ ಲೈನ್ ತಾಗಿ ಬೆಂಕಿ ಹತ್ತಿಕೊಂಡಿದೆ. ಸ್ಥಳೀಯರು ಅಗ್ನಿಶಾಮಾಕ ಇಲಾಖೆಗೆ ತಿಳಿಸಿ ಬೆಂಕಿ ನಂದಿಸಿದ್ದಾರೆ ಎಂದು ತಿಳಿದುಬಂದಿದೆ. ಯಾವುದೇ ತೊಂದರೆ ಆಗಿಲ್ಲ.

ಕೇಸರಿ ಬಾವುಟ ತೆರವು: ಮತ್ತೆ ಕಟ್ಟಿದ ಹಿಂದೂ ಕಾರ್ಯಕರ್ತರು!

ಶಿವಮೊಗ್ಗ ನಗರದ ಅಮೀರ್ ಅಹ್ಮದ್ ಸರ್ಕಲ್ ನಲ್ಲಿ ಗಣೇಶ ವಿಸರ್ಜನೆ ವೇಳೆ ಕಟ್ಟಿದ್ದ ಕೇಸರಿ ಬಾವುಟವನ್ನು ತೆರದ ವಿಚಾರವಾಗಿ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ತೆರವು ಮಾಡಲಾಗಿದ್ದ ಕೇಸರಿ ಬಾವುಟವನ್ನು ಮತ್ತೆ ಪೊಲೀಸ್ ಬಿಗಿಭದ್ರತೆಯಲ್ಲಿ ಹಿಂದೂ ಕಾರ್ಯಕರ್ತರು ಕಟ್ಟಿದರು. ಕೇಸರಿ ಬಾವುಟ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ಕಾಲ ಗೊಂದಲ ಸೃಷ್ಟಿಯಾಗಿತ್ತು. ಮತ್ತೆ ಕೇಸರಿ ಬಾವುಟ ಕಟ್ಟಲು ಎಸ್ಪಿ ಮಿಥುನ್ ಕುಮಾರ್ ಅವಕಾಶ ನೀಡಿದ ಮೇಲೆ ಪರಿಸ್ಥಿತಿ ತಿಳಿಗೊಂಡಿತು. ಎಎ ಸರ್ಕಲ್ ಹಾಗೂ ಶಿವಪ್ಪ ನಾಯಕ ವೃತ್ತದ ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದ್ದು ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ವಿಷ ಸೇವಿಸಿ ಶಿಕಾರಿಪುರದಲ್ಲಿ ರೈತ

ಶಿಕಾರಿಪುರ : ಸಾಲಬಾಧೆಯಿಂದ ಮನನೊಂದು ರೈತರೊಬ್ಬರು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿಕಾರಿಪುರ ತಾಲೂಕು ಅರಳಿಹಳ್ಳಿ ಗ್ರಾಮದ ಮಂಜಪ್ಪ ಮೃತ ರೈತ. ಗ್ರಾಮದಲ್ಲಿ ಎರಡೂವರೆ ಎಕರೆ ಜಮೀನು ಹೊಂದಿದ್ದರು. ಕೃಷಿ ಚಟುವಟಿಕೆಗಾಗಿ ವಿವಿಧೆಡೆ ಸಾಲ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಸೆ.26ರಂದು ಮನೆಯಲ್ಲಿ ಯಾರು ಇಲ್ಲದ ವೇಳೆ ವಿಷ ಸೇವಿಸಿದ್ದರು. ತಕ್ಷಣ ಅವರನ್ನು ನ್ಯಾಮತಿಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Categories
ರಾಜ್ಯ

ಕರುನಾಡು ಕಾವೇರಿ ಕಿಚ್ಚು!

ಕರುನಾಡು ಕಾವೇರಿ ಕಿಚ್ಚು!
– ರಾಜಧಾನಿ ಸೇರಿ ರಾಜ್ಯದಲ್ಲಿ ಹೋರಾಟ
– ರಾಜ್ಯದಲ್ಲಿ ಏನೇನು ಆಯ್ತು… ಇಲ್ಲಿದೆ ಡೀಟೇಲ್ಸ್!

NAMMUR EXPRESS NEWS – ಬೆಂಗಳೂರು: ಕಾವೇರಿ ವಿವಾದ ಇದೀಗ ಹೋರಾಟದ ಕಿಚ್ಚು ಹಚ್ಚಿದೆ. ಶುಕ್ರವಾರ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾವೇರಿ ಕಿಚ್ಚು ಕಂಡು ಬಂದಿದ್ದು ವಿವಿಧ ಹೋರಾಟಗಾರರು, ಕನ್ನಡ ಪರ ಸಂಘಟನೆಗಳು ಬೀದಿಗೆ ಇಳಿದು ಪ್ರತಿಭಟನೆ ನಡೆಸಿವೆ. ಕರವೇ ಸೇರಿದಂತೆ ಅನೇಕ ರೈತ ಪರ ಸಂಘಟನೆಗಳ ಹೋರಾಟಕ್ಕೆ ಬಿಜೆಪಿ ನಾಯಕರು ಸಾಥ್ ನೀಡಿದ್ದಾರೆ. ಕರಾವಳಿ, ಮಲೆನಾಡು ಭಾಗದಲ್ಲಿ ಕೊಂಚ ನೀರಸ ಪ್ರತಿಕ್ರಿಯೆ ಕಂಡಿದ್ದು, ಉತ್ತರ ಕರ್ನಾಟಕ, ಮೈಸೂರು, ಬೆಂಗಳೂರು ಭಾಗದಲ್ಲಿ ಬಂದ್ ಯಶಸ್ವಿ ಆಗಿದೆ.

ಬಂದ್ ವೇಳೆ ಬುರ್ಖಾ ಧರಿಸಿ ತಲೆಯ ಮೇಲೆ ಬಿಂದಿಗೆ ಹೊತ್ತ ವಾಟಾಳ್!

ಪ್ರತಿಭಟನೆ ವೇಳೆ ಸದಾ ಒಂದಲ್ಲ ಒಂದು ಗೆಟಪ್‌ನಲ್ಲಿ ಕಾಣಿಸಕೊಳ್ಳುವ ವಾಟಾಳ್ ನಾಗರಾಜ್ ಕರ್ನಾಟಕ ಬಂದ್ ವೇಳೆ ಬುರ್ಖಾ ಧರಿಸಿ ತಲೆಯ ಮೇಲೆ ಬಿಂದಿಗೆ ಹೊತ್ತುಕೊಂಡು ವಿಭಿನ್ನವಾಗಿ ಪ್ರತಿಭಟನೆ ಮಾಡಿದರು. ಇನ್ನು ಬುರ್ಖಾ ಧರಿಸಿ ತಲೆಯ ಮೇಲೆ ಬಿಂದಿಗೆ ಹೊತ್ತುಕೊಂಡಿರುವುದ್ಯಾಕೆ ಎನ್ನುವುದರ ಬಗ್ಗೆ ವಾಟಾಳ್ ನಾಗರಾಜ್ ವಿವರಿಸಿದ್ದಾರೆ.
ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸದಂತೆ ಕರ್ನಾಟಕ ಜಲ ಸಂರಕ್ಷಣಾ ಸಮಿತಿಯ ವಾಟಾಳ್ ನಾಗರಾಜ್ ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದ್ದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಲವು ಸಂಘ-ಸಂಸ್ಥೆಗಳು ರಸ್ತೆಗಳಿದು ಪ್ರತಿಭಟನೆ ಮಾಡುತ್ತಿವೆ. ನಾನು ಧರಿಸಿದ ಬಟ್ಟೆಯ ಬಗ್ಗೆ ನಿಮಗೆ ಗೊತ್ತಾ? ಬುರ್ಖಾ ಬಗ್ಗೆ ವಿವರಿಸಿದ ವಾಟಾಳ್ ನಾಗರಾಜ್, ನ್ಯಾಯದೇವತೆ ಧರಿಸುವ ಬಟ್ಟೆ ಅಥವಾ ಬುರ್ಖಾ ಎಂದಾದರೂ ಕರೆಯಲಿ. ನ್ಯಾಯದೇವತೆಯ ಸಂದೇಶ ಸಾರುವ ಬುರ್ಖಾ ಧರಿಸಿದ್ದೇನೆ. ಮಹಿಳೆಯರ ಗೌರವದ ಸಂಕೇತ ಸಹ ಹೌದು ಎಂದು ವಿವರಿಸಿದರು.

44 ವಿಮಾನಗಳ ಹಾರಾಟ ರದ್ದು

ಕರ್ನಾಟಕ ಬಂದ್‌ನ ಬಿಸಿ ವಿಮಾನ ಸಂಚಾರಕ್ಕೂ ತಟ್ಟಿದ್ದು, ಸುಮಾರು 44 ವಿಮಾನಗಳ ಸಂಚಾರ ರದ್ದಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದ್ದು, ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಪ್ರತಿಭಟನೆಯ ಬಿಸಿ ತಟ್ಟಿದೆ. ಶುಕ್ರವಾರ ಬೆಂಗಳೂರಿಗೆ ಆಗಮಿಸುವ ಮತ್ತು ತೆರಳಬೇಕಿದ್ದ 44 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಕಾರ್ಯಾಚರಣೆಯ ಕಾರಣದಿಂದ ವಿಮಾನಗಳ ಹಾರಾಟ ರದ್ದಾಗಿದೆ. ಈ ಬಗ್ಗೆ ಪ್ರಯಾಣಿಕರಿಗೂ ತಕ್ಷಣ ಮಾಹಿತಿ ನೀಡಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ, ಕರ್ನಾಟಕ ಬಂದ್‌ ಹಿನ್ನೆಲೆ ಬಹಳಷ್ಟು ಪ್ರಯಾಣಿಕರು ತಮ್ಮ ಟಿಕೆಟ್‌ ಬುಕ್ಕಿಂಗ್‌ ರದ್ದು ಮಾಡಿರುವ ಕಾರಣಕ್ಕೆ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ದಿಲ್ಲಿ, ಮುಂಬೈ, ಕೊಲ್ಕತ್ತಾ, ಚೆನ್ನೈ ಸೇರಿ ಹಲವೆಡೆ ತೆರಳಬೇಕಿದ್ದ ವಿಮಾನಗಳು ರದ್ದಾಗಿವೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿದ್ದ 22 ವಿಮಾನಗಳು, ರಾಜಧಾನಿ ಬೆಂಗಳೂರಿನಿಂದ ವಿವಿಧೆಡೆ ತೆರಳಬೇಕಿದ್ದ 22 ವಿಮಾನಗಳು ಸೇರಿ ಒಟ್ಟು 44 ವಿಮಾನಗಳ ಹಾರಾಟ ರದ್ದಾಗಿದ್ದು, ಪ್ರಯಾಣಿಕರು ಪರದಾಡಿದರು.

ಸಹಜ ಸ್ಥಿತಿಗೆ ತಲುಪುತ್ತಿರುವ ಬೆಂಗಳೂರು

ಸಿಲಿಕಾನ್ ಸಿಟಿ ಬೆಂಗಳೂರು ಸಹಜ ಸ್ಥಿತಿಗೆ ಮರಳುತ್ತಿದೆ. ಸಂಜೆ 5 ಗಂಟೆ ಬಳಿಕ ಜನರ ಓಡಾಟ, ವಾಹನಗಳ ಸಂಚಾರದಲ್ಲಿ ಹೆಚ್ಚಳವಾಗುತ್ತಿದೆ. ಎಂ.ಜಿ.ರಸ್ತೆ, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ಯತಾಸ್ಥಿತಿಗೆ ಮರಳುತ್ತಿದೆ. ಅಂಗಡಿ ಮುಂಗಟ್ಟುಗಳು ಕೂಡ ಒಂದೊಂದಾಗಿಯೇ ತೆರೆಯುತ್ತಿವೆ.

ಮಂಡ್ಯ, ಮದ್ದೂರಲ್ಲಿ ಭಾರೀ ಪ್ರತಿಭಟನೆ

ಪ್ರತಿದಿನ 3000 ಕ್ಯೂಸೆಕ್ ನೀರು ಹರಿಸುವಂತೆ CWMA ಹೊರಡಿಸಿದ ಆದೇಶದ ವಿರುದ್ಧ ಮಂಡ್ಯದಲ್ಲಿ ರೈತರು ಆಕ್ರೋಶ ಹೊರಹಾಕುತ್ತಿದ್ದಾರೆ. ಸರ್ಕಾರ ಈ ವಿಚಾರವಾಗಿ ಮಾತನಾಡಬೇಕು. ಸಂಜೆ ಆರು ಗಂಟೆ ಒಳಗೆ ನಿಮ್ಮ ಅಭಿಪ್ರಾಯವನ್ನ ಸರ್ಕಾರ ತಿಳಿಸಬೇಕು. ಇಲ್ಲವಾದರೇ ಹೋರಾಟದ ರೂಪ ಬದಲಾಗುತ್ತದೆ. ಪ್ರಾಧಿಕಾರದ ಆದೇಶವನ್ನು ಖಂಡಿಸುತ್ತೇವೆ. ಪ್ರಾಧಿಕಾರವನ್ನ ರದ್ದು ಮಾಡಬೇಕು ಎಂದು ರೈತರು ಆಕ್ರೋಶ ಹೊರಹಾಕಿದ್ದು, ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಬೆಂಗಳೂರು ಮೈಸೂರು ಹೆದ್ದಾರಿ ತಡೆದು ಆಕ್ರೋಶ ಹೊರಹಾಕಿದರು.

ಬಂದ್ ಮಾಡಿ ಕ್ರಿಕೆಟ್ ಆಡುತ್ತಿರುವ ವ್ಯಾಪಾರಿಗಳು!

ಕಾವೇರಿ ನೀರಿಗಾಗಿ ಕರ್ನಾಟಕ ಬಂದ್‌ ನಡೆಸಲಾಗಿದ್ದು, ಶಿವಾಜಿನಗರದಲ್ಲಿ ಮುಚ್ಚಲ್ಪಟ್ಟಿದ್ದ ಅಂಗಡಿ ಮುಂಗಟ್ಟುಗಳು ಇನ್ನೂ ತೆರೆದಿಲ್ಲ. ಅಂಗಡಿಗಳನ್ನ ಬಂದ್‌ ಮಾಡಿ ವ್ಯಾಪಾರಸ್ಥರು ಕ್ರಿಕೆಟ್ ಆಡುತ್ತಿದ್ದಾರೆ. ಇವತ್ತು ಇಡೀ ದಿನ ಅಂಗಡಿಗಳನ್ನ ಓಪನ್ ಮಾಡುವುದಿಲ್ಲ. ಕಾವೇರಿ ಹೋರಾಟಕ್ಕೆ ನಮ್ಮಬೆಂಬಲ ಇದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಹಿಟ್ ಅಂಡ್ ರನ್: ವ್ಯಕ್ತಿ ಬಲಿ!

ತೀರ್ಥಹಳ್ಳಿಯಲ್ಲಿ ಹಿಟ್ ಅಂಡ್ ರನ್: ವ್ಯಕ್ತಿ ಬಲಿ!
– ಶೃಂಗೇರಿ ನದಿ ನೀರಿನ ಮಧ್ಯ ಸಿಕ್ಕಿಕೊಂಡ ಮೂವರು!
– ವಿವಾಹಿತೆಯ ನಗ್ನ ಪೋಟೋ ಕ್ಲಿಕ್ಕಿಸಿ ವೈರಲ್!

NAMMUR EXPRESS NEWS
ತೀರ್ಥಹಳ್ಳಿ: ಬಸ್ಸನ್ನು ಇಳಿದು ನಡೆದುಕೊಂಡು ಹೋಗುವಾಗ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ತೀರ್ಥಹಳ್ಳಿ ಬಳಿ ಶುಕ್ರವಾರ ನಡೆದಿದೆ. 407 ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ವೃದ್ಧರು ಸಾವನ್ನಪ್ಪಿರುವ ಘಟನೆ ರಂಜದಕಟ್ಟೆ ಬಳಿ ನಡೆದಿದೆ. ತೀರ್ಥಹಳ್ಳಿ ತಾಲೂಕಿನ ಆಲಗೇರಿ ಸಮೀಪದ ಹೊಳೆಮೊದ್ಲು ಗ್ರಾಮದ ಚನ್ನಪ್ಪ ಗೌಡ 65 ವರ್ಷ ಮೃತಪಟ್ಟ ದುರ್ದೈವಿ. ತೀರ್ಥಹಳ್ಳಿಯಿಂದ ಬಸ್ ಇಳಿದು ಊರಿಗೆ ಹೋಗುವಾಗ ರಂಜದಕಟ್ಟೆ ಬಳಿ ಈ ಘಟನೆ ಸಂಭವಿಸಿದೆ. ಕೂಡಲೇ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಹೆಬ್ರಿ ಸಮೀಪ ಮೃತಪಟ್ಟಿದ್ದಾರೆ.

ಶೃಂಗೇರಿ ನದಿ ನೀರಿನ ಮಧ್ಯ ಸಿಕ್ಕಿಕೊಂಡ ಮೂವರು!

ಶೃಂಗೇರಿ: ತುಂಗಾ ಹರಿಯುವ ನೀರಿನ ಮಧ್ಯೆ ಸಿಕ್ಕಿಕೊಂಡ ಕುಟುಂಬ ಪ್ರವಾಸಕ್ಕೆಂದು ಬಂದಿದ್ದ ಒಂದೇ ಕುಟುಂಬದ ಮೂವರು ತುಂಗಾ ನದಿಯಲ್ಲಿ ಸಿಕ್ಕಿಕೊಂಡು ದಡ ಸೇರಲಾಗದೆ ನದಿಯ ಮಧ್ಯೆ ಪರದಾಟ ನಡೆಸಿದ ಘಟನೆ ನಡೆದಿದೆ. ಬಳಿಕ ರಕ್ಷಣಾ ಕಾರ್ಯಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕುಟುಂಬದ ರಕ್ಷಣೆ ಮಾಡಿದ್ದಾರೆ.

ವಿವಾಹಿತೆಯ ನಗ್ನ ಪೋಟೋ ಕ್ಲಿಕ್ಕಿಸಿ ವೈರಲ್: ಅರೆಸ್ಟ್.!

ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಾಹಿತ ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡು ಪುತ್ತೂರಿನ ವ್ಯಕ್ತಿಯೊಬ್ಬ ಕೊನೆಗೆ ಮಹಿಳೆಯನ್ನೇ ಬ್ಲ್ಯಾಕ್ ಮೇಲ್ ಮಾಡಿ ಹಣ ಕೀಳಲು ಯತ್ನಿಸಿದ ಬಗ್ಗೆ ದೂರು ದಾಖಲಾಗಿದೆ. ಪ್ರಶಾಂತ ಭಟ್ ಮಾಣಿಲ ಎಂಬಾತ ಈ ಕೃತ್ಯವೆಸಗಿದ್ದು, ಈತ ಪುತ್ತೂರಿನ ಆರ್ಲಪದವು ಮೂಲದವನು ಎಂದು ತಿಳಿದುಬಂದಿದೆ. ಮಹಿಳೆಗೆ ಸಂಗೀತದಲ್ಲಿ ಆಸಕ್ತಿ ಇದ್ದು, ಕ್ಲಬ್ ಹೌಸ್ ಆ್ಯಪ್‌ನಲ್ಲಿ ಹಾಡುತ್ತಿದ್ದಳು. 2020 ರಲ್ಲಿ ಆ್ಯಪ್ ಮೂಲಕವೇ ಪ್ರಶಾಂತ ಭಟ್ ಪರಿಚಯ ಮಾಡಿಕೊಂಡಿದ್ದನು. ಪರಿಚಯ ಸ್ನೇಹಕ್ಕೆ ತಿರುಗಿ ಪ್ರೇಮಕ್ಕೆ ತಿರುಗಿದೆ.

2023ರ ಜನವರಿ ತಿಂಗಳಲ್ಲಿ ಪ್ರಶಾಂತ್ ಮಹಿಳೆಯನ್ನು ಭೇಟಿಯಾಗಿದ್ದನು. ಲಾಡ್ಜ್‌ಲ್ಲಿ ರೂಂ ಮಾಡಿ, ಬಲವಂತವಾಗಿ ಮಹಿಳೆಯ ಮೇಲೆ ಲೈಂಗಿಕ ಕ್ರಿಯೆ ನಡೆಸಿದ್ದ. ಅಲ್ಲದೇ ಅದೇ ಲಾಡ್ಡಿನಲ್ಲಿ ಮತ್ತೊಮ್ಮೆ ಇದೆ ಘಟನೆ ನಡೆದಿದೆ. ಈ ವೇಳೆ ಪ್ರಶಾಂತ ಆಕೆಯೊಂದಿಗೆ ಖಾಸಗಿ ಕ್ಷಣಗಳ ಫೋಟೋ ಸೆರೆ ಹಿಡಿದಿದ್ದಾನೆ. ಜತೆಗೆ ವಿಡಿಯೊ ಕಾಲ್ ಮಾಡಿ ಅಲ್ಲಿಯೂ ನಗ್ನ ದೃಶ್ಯಗಳನ್ನು ಸೆರೆ ಹಿಡಿದಿದ್ದಾನೆ ಎಂದು ದೂರಲಾಗಿದೆ. ಮಾತ್ರವಲ್ಲದೆ ಮಹಿಳೆಯಿಂದ ಹಣಕ್ಕೂ ಬೇಡಿಕೆ ಇಟ್ಟಿದ್ದು ಒಮ್ಮೆ 25 ಸಾವಿರ ಹಣ ನೀಡಿದ್ದಾಳೆ. ಬಳಿಕ ಆರೋಪಿಯು ಖಾಸಗಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿ ಏಳು ಲಕ್ಷ ರೂ. ಗಳಿಗೆ ಬೇಡಿಕೆ ಇಟ್ಟಿದ್ದಾನೆ.

Categories
ಮಲ್ನಾಡ್

ಮಲೆನಾಡಿನಲ್ಲಿ ಮಳೆಯ ಸಿಂಚನ..!

ಮಲೆನಾಡಿನಲ್ಲಿ ಮಳೆಯ ಸಿಂಚನ..!
– ವಾರದಿಂದ ಮಳೆ ಹೆಚ್ಚಳ: ದಿನವಿಡೀ ಮಳೆ
– ಬತ್ತಿದ ಮಲೆನಾಡಿನ ನದಿ, ಹಳ್ಳಗಳಲ್ಲಿ ನೀರು

NAMMUR EXPRESS NEWS
ತೀರ್ಥಹಳ್ಳಿ/ಶೃಂಗೇರಿ: ಮಲೆನಾಡಿನಲ್ಲಿ ಕಳೆದೊಂದು ವಾರದಿಂದ ಮಳೆ ಸೂಚನೆ ಕಂಡು ಬಂದಿದ್ದು, ಶುಕ್ರವಾರ ಭಾರೀ ಮಳೆಯಾಗಿದೆ. ಶುಕ್ರವಾರ ಬಹುತೇಕ ಕಡೆ ಹೆಚ್ಚು ಮಳೆಯಾಗಿದ್ದು, ಮಳೆ ನಿರೀಕ್ಷೆಯಲ್ಲಿದ್ದ ಜನತೆಗೆ ಖುಷಿ ನೀಡಿದೆ. ಈಗಾಗಲೇ ನದಿ, ಕೆರೆ, ಬಾವಿಗಳು ಬತ್ತಿ ಹೋಗಿರುವುದರಿಂದ ಮಳೆ ಆಗಬೇಕಿತ್ತು. ಹಿನ್ನೆಲೆಯಲ್ಲಿ ಮಳೆ ಆಗಮನ ಸಂತಸ ತಂದಿದೆ. ಇನ್ನು ತುಂಗ,ಭದ್ರಾ, ಮಾಲತಿ, ಶರಾವತಿ ಸೇರಿದಂತೆ ಯಾವ ನದಿಗಳನ್ನು ಕೂಡ ನೀರಿನ ಪ್ರಮಾಣ ಈ ಬಾರಿ ಹೆಚ್ಚಾಗಿಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಆತಂಕ ಜನರಲ್ಲಿ ಎದುರಾಗಲಿದೆ.

ಜೊತೆಗೆ ರೈತರಿಗೂ ಕೂಡ ತೋಟಗದ್ದೆಗಳಿಗೆ ನೀರಿನ ಹಾಹಾಕಾರ ಉಂಟಾಗಲಿದೆ. ಹೀಗಾಗಿ ಮಳೆ ಇನ್ನಷ್ಟು ದಿನ ಬಂದಲ್ಲಿ ನೀರಿನ ಕೊರತೆ ನೀಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಜೊತೆಗೆ ಮಳೆ ಬಾರದಿದ್ದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಕೂಡ ಹಳ್ಳಿ ಹಳ್ಳಿಗಳಲ್ಲಿ ಹಾಹಾಕಾರ ಉಂಟಾಗಲಿದೆ. ಹೀಗಾಗಿ ಮಳೆಯ ನಿರೀಕ್ಷೆಯಲ್ಲಿದ್ದ ಜನತೆಗೆ ಈಗ ಮಳೆ ಕೊಂಚ ಸಂತಸವನ್ನು ನೀಡಿದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ: ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ!

ತೀರ್ಥಹಳ್ಳಿ: ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ!
– ಮೋದಿ ಜನ್ಮ ದಿನದ ಅಂಗವಾಗಿ ಬಿಜೆಪಿಯಿಂದ ಕಾರ್ಯಕ್ರಮ
– ನಂಬಳ ಮುರುಳಿ ನೇತೃತ್ವದಲ್ಲಿ ನೂರಾರು ಮಂದಿಗೆ ಅನುಕೂಲ

NAMMUR EXPRESS NEWS
ತೀರ್ಥಹಳ್ಳಿ: ರೈತ ಮೋರ್ಚಾ, ಓಬಿಸಿ ಮೋರ್ಚಾ ಮತ್ತು ವೈದ್ಯಕೀಯ ಪ್ರಕೋಷ್ಟ ವತಿಯಿಂದ ಶಿವಮೊಗ್ಗದ ಪ್ರಖ್ಯಾತ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದೊಂದಿಗೆ ನರೇಂದ್ರ ಮೋದಿಜಿಯವರ 73ನೇ ಜನ್ಮ ದಿನಾಚರಣೆಯ ಅಂಗವಾಗಿ ತೀರ್ಥಹಳ್ಳಿಯ ಟಿ.ಎ.ಪಿ.ಸಿ.ಎಂ. ಸಿ. ಎಸ್ ಸಭಾಂಗಣದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಆರೋಗ್ಯ ಕಾರ್ಡ್ ನೊಂದಣಿ ಕಾರ್ಯಕ್ರಮವು ಸೆ.28ರ ಗುರುವಾರ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಡಾ.ನಾರಾಯಣ ಸ್ವಾಮಿ ನೆರವೇರಿಸಿದ್ದಾರೆ. ಅಧ್ಯಕ್ಷತೆಯನ್ನು ಬಿಜೆಪಿ ಮಂಡಲದ ಅಧ್ಯಕ್ಷರಾದ ಬಾಳೆಬೈಲು ರಾಘವೇಂದ್ರ ಅವರು ವಹಿಸಿದ್ದು ನಂತರ ಮಾತನಾಡಿ ಕೇಂದ್ರದಲ್ಲಿ ಮೋದಿ ಅವರ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ದೇಶದಲ್ಲಿ ಪರಿವರ್ತನೆಯಾಗುತ್ತಿದೆ. ದೇಶದಲ್ಲಿ ಮೋದಿ ಸರ್ಕಾರದ ಸಾಧನೆ ಅವಿಸ್ಮರಣೀಯ. ಆಯುಷ್ಮಾನ್ ಕಾರ್ಡ್ ಯೋಜನೆಯಲ್ಲಿ ಕೊಡುವಂತಹ ಆರೋಗ್ಯ ಕಾರ್ಡ್ 5 ಲಕ್ಷದವರೆಗೆ ಉಚಿತವಾದ ಚಿಕಿತ್ಸೆ ಕೊಡುವಂತಹ ಸೌಲಭ್ಯ ಒದಗಿಸಿರುತ್ತಾರೆ ಎಂದರು.

ಡಾ.ನಂದ ಕಿಶೋರ್ ಮಾತನಾಡಿ, ಜನರ ಸೇವೆಗಾಗಿ ವೈದ್ಯಕೀಯ ತಪಾಸಣಾ ಶಿಬಿರ ಮಾಡುತ್ತೇವೆ. ವೈದ್ಯಕೀಯ ಸೇವೆಯ ಸೌಲಭ್ಯ ಇದ್ದು ಹೆಚ್ಚಿನ ಜನರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು. ಈ ವೈದ್ಯಕೀಯ ಶಿಬಿರದ ಸಂಚಾಲಕರಾಗಿ ಮೇಳಿಗೆ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಾದ ನಂಬಳ ಮುರಳಿ ಅತ್ಯಂತ ಅಚ್ಚುಕಟ್ಟಾಗಿ ನಡೆಸಿದ್ದಾರೆ.

ಕಾರ್ಯಕ್ರಮದಲ್ಲಿ ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ಸಾಲೆಕೊಪ್ಪ ರಾಮಚಂದ್ರ, ಬಿಜೆಪಿ ಓಬಿಸಿ ಮೋರ್ಚಾದ ತೀರ್ಥಹಳ್ಳಿ ಮಂಡಲದ ಅಧ್ಯಕ್ಷರಾದ ಮಂಜುನಾಥ್, ಬಿಜೆಪಿ ಮುಖಂಡರಾದ ಬೇಗುವಳ್ಳಿ ಸತೀಶ್, ರೈತ ಮೋರ್ಚಾದ ಅಧ್ಯಕ್ಷರಾದ ಹೊಳೆಕೊಪ್ಪ ರವೀಂದ್ರ, ಮಕ್ಕಳ ತಜ್ಞರಾದ ಡಾ.ದಯಾನಂದ ಸರ್ಜಿ, ಮೂಳೆತಜ್ಞರಾದ ಡಾ.ಮಂಜುನಾಥ್, ಚಂದುಶ್ರೀ, ವೈದ್ಯಕೀಯ ಪ್ರಕೋಷ್ಠದ ಜವಾಬ್ದಾರಿ ವಹಿಸಿರುವಂತಹ ಡಾ. ನಂದ ಕಿಶೋರ್ ಉದ್ಘಾಟಕರಾದ ಡಾ. ನಾರಾಯಣಸ್ವಾಮಿ, ವೈದ್ಯರು ಹಾಗೂ ಸಿಬ್ಬಂದಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನೂರಾರು ಮಂದಿಗೆ ಅನುಕೂಲ..!

ತೀರ್ಥಹಳ್ಳಿಯ ಪಟ್ಟಣ ಸೇರಿ ತಾಲೂಕಿನ ಅನೇಕ ಭಾಗದಿಂದ ನೂರಾರು ಮಂದಿ ಆಗಮಿಸಿ ಉಚಿತ ಅರೋಗ್ಯ ತಪಾಸಣೆ ನಡೆಸಿದರು.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಕರ್ನಾಟಕ ಬಂದ್ ಬಿಸಿ ಇಲ್ಲ!

ತೀರ್ಥಹಳ್ಳಿಯಲ್ಲಿ ಕರ್ನಾಟಕ ಬಂದ್ ಬಿಸಿ ಇಲ್ಲ!
– ಕೆಲವು ಗಂಟೆ ಮಾತ್ರ ಕೆಲವೆಡೆ ಉದ್ಯಮ ಸ್ಥಗಿತ
– ಜನಜೀವನ, ಶಾಲಾ ಕಾಲೇಜು ಎಂದಿನಂತೆ ಕಾರ್ಯನಿರ್ವಹಣೆ

NAMMUR EXPRESS NEWS
ತೀರ್ಥಹಳ್ಳಿ: ರಾಜ್ಯಾದ್ಯಂತ ಕಾವೇರಿ ನದಿ ನೀರಿಗಾಗಿ ಹೋರಾಟ ಹಮ್ಮಿಕೊಂಡಿದ್ದು, ಎಲ್ಲೆಡೆ ಬಂದ್ ಕರೆ ನೀಡಲಾಗಿದ್ದು ತೀರ್ಥಹಳ್ಳಿಯಲ್ಲಿ ಕರ್ನಾಟಕ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾವೇರಿ ನದಿ ನೀರು ಬಿಟ್ಟಿದ್ದನ್ನು ಖಂಡಿಸಿ ಇತ್ತೀಚಿಗೆ ಕರವೇ ವತಿಯಿಂದ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರದ ಬಂದ್ ನೀರಸವಾಗಿದೆ. ತೀರ್ಥಹಳ್ಳಿ ಪಟ್ಟಣ ಸೇರಿ ತಾಲೂಕಿನ ಬಹುತೇಕ ಅಂಗಡಿ ಮುಗ್ಗಟ್ಟುಗಳು ತೆರೆದಿದ್ದು, ಬಸ್ ಸಂಚಾರ ಕೂಡ ಎಂದಿನಂತೆ ಇತ್ತು. ಇನ್ನು ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಇನ್ನು ಬ್ಯಾಂಕ್, ಹೋಟೆಲ್, ಆಟೋ ಸಂಚಾರ ಕೂಡ ಎಂದಿನಂತೆ ಇತ್ತು. ತೀರ್ಥಹಳ್ಳಿ ಪಟ್ಟಣದಲ್ಲಿ ಮಳೆಯ ಕಾರಣ ಕೊಂಚ ಜನರ ಸಂಖ್ಯೆ ಕಡಿಮೆ ಇತ್ತು. ಆದರೆ ಕರ್ನಾಟಕ ಬಂದ್ ತೀರ್ಥಹಳ್ಳಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇನ್ನು ಹಳ್ಳಿಗಳಲ್ಲೂ ಕೂಡ ಕರ್ನಾಟಕ ಬಂದ್ ಎಫೆಕ್ಟ್ ಉಂಟಾಗಿಲ್ಲ. ಇನ್ನು ಸರಣಿ ರಜೆ ಇದ್ದ ಕಾರಣ ಬೆಂಗಳೂರಿನಿಂದ ಅನೇಕ ಜನ ಈ ಕಡೆ ಆಗಮಿಸುತ್ತಿರುವುದು ಕಂಡುಬಂದಿದೆ.

Categories
ಶಿವಮೊಗ್ಗ

ಕರ್ನಾಟಕ ಬಂದ್: ಶಿವಮೊಗ್ಗ ಜಿಲ್ಲೆಯಲ್ಲಿ ನೀರಸ!

ಕರ್ನಾಟಕ ಬಂದ್: ಶಿವಮೊಗ್ಗ ಜಿಲ್ಲೆಯಲ್ಲಿ ನೀರಸ!
– ಜನಜೀವನ ಯಥಾ ಸ್ಥಿತಿ: ಅಂಗಡಿಗಳ ಬಾಗಿಲು ಮುಚ್ಚುವಂತೆ ಮನವಿ
– ಜನರ ಓಡಾಟ ಕೊಂಚ ಕಡಿಮೆ..ಶಾಲೆ ಕಾಲೇಜು ತೊಂದ್ರೆ ಇಲ್ಲ

NAMMUR EXPRESS NEWS
ಶಿವಮೊಗ್ಗ: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ, ಶುಕ್ರವಾರ ವಿವಿಧ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಶಿವಮೊಗ್ಗ ನಗರ ಸೇರಿ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಿವಮೊಗ್ಗ ಸೇರಿ ಎಲ್ಲಾ ತಾಲೂಕುಗಳಲ್ಲಿ ನಾಗರೀಕರ ದೈನಂದಿನ ಜನಜೀವನದ ಮೇಲೆ ಯಾವುದೇ ಪರಿಣಾಮ ಬೀರಿಲ್ಲವಾಗಿದೆ. ಸರ್ಕಾರಿ, ಖಾಸಗಿ ಬಸ್ ಗಳು, ಆಟೋ, ಟ್ಯಾಕ್ಸಿಗಳು ಸೇರಿದಂತೆ ಬಹುತೇಕ ಪ್ರಯಾಣಿಕ ವಾಹನಗಳ ಸಂಚಾರ ಎಂದಿನಂತಿತ್ತು. ಶಾಲಾ, ಕಾಲೇಜು, ಸರ್ಕಾರಿ, ಖಾಸಗಿ ಕಚೇರಿಗಳು ಕಾರ್ಯನಿರ್ವಹಿಸಿದವು. ವ್ಯಾಪಾರ, ವಹಿವಾಟಿಗೆ ಯಾವುದೇ ಅಡ್ಡಿಯಾಗಲಿಲ್ಲ. ಅಂಗಡಿ-ಮುಂಗಟ್ಟುಗಳು ತೆರೆದಿದ್ದವು. ಜನಜೀವನ ಎಂದಿನಂತಿತ್ತು. ಎಲ್ಲದಕ್ಕಿಂತ ಮುಖ್ಯವಾಗಿ, ನಗರದಲ್ಲಿ ಯಾವುದೇ ಸಂಘಟನೆಗಳು ಬಂದ್ ನಡೆಸುವ ಕುರಿತಂತೆ ನಾಗರೀಕರಿಗೆ ಮನವಿ ಮಾಡಿರಲಿಲ್ಲ.

ಸಂಘಟನೆಗಳ ಬೆಂಬಲ

ಕರ್ನಾಟಕ ಬಂದ್ ಬೆಂಬಲಿಸಿ ಕೆಲ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಬಸ್ ನಿಲ್ದಾಣದ ಎದುರು ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆ ಹಾಗೂ ಕರವೇ ಜಂಟಿಯಾಗಿ ಪ್ರತಿಭಟಿಸಿದರೆ, ಗೋಪಿ ವೃತ್ತದಲ್ಲಿ ಕರವೇಯ ಮತ್ತೊಂದು ಬಣ ಪ್ರತಿಭಟಿಸಿತು. ಜಿಲ್ಲಾಧಿಕಾರಿಗಳ ಕಚೇರಿ ಎದುರು ರೈತ ಸಂಘ ಧರಣಿ ನಡೆಸಿತು. ಉಳಿದಂತೆ ಜಿಲ್ಲೆಯ ಇತರೆ ನಗರ – ಪಟ್ಟಣಗಳಲ್ಲಿಯೂ ಕರ್ನಾಟಕ ಬಂದ್ ನೀರಸವಾಗಿದ್ದ ವರದಿಗಳು ಬಂದಿವೆ. ಕನ್ನಡ ಪರ ಸಂಘಟನೆಗಳು ಬಂದ್ ಬೆಂಬಲಿಸಿ ಪ್ರತಿಭಟನೆ ನಡೆಸಿವೆ.

ಅಂಗಡಿಗಳ ಬಾಗಿಲು ಮುಚ್ಚುವಂತೆ ಮನವಿ

ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶಿವಮೊಗ್ಗದ ನೆಹರು ರಸ್ತೆಯಲ್ಲಿ ಅಂಗಡಿ-ಮುಂಗಟ್ಟು ಬಂದ್ ಮಾಡುವಂತೆ ವರ್ತಕರಿಗೆ ಮನವಿ ಮಾಡಿಕೊಂಡ ಘಟನೆ ನಡೆಯಿತು. ಈ ವೇಳೆ ಕೆಲ ವರ್ತಕರು ಸ್ವಲ್ಪ ಸಮಯದವರೆಗೆ ಅಂಗಡಿ ಬಾಗಿಲು ಮುಚ್ಚಿದರು. ಮತ್ತೆ ಕೆಲ ವರ್ತಕರು ಕಾರ್ಯಕರ್ತರ ಜೊತೆ ವಾಗ್ದಾದ ನಡೆಸಿದ ಘಟನೆಯೂ ನಡೆದಿದೆ.

Categories
ಶಿವಮೊಗ್ಗ

ಡಾ.ಆರ್.ಎಂ.ಎಂ ಡಿಸಿಸಿ ಬ್ಯಾಂಕ್ ಸಾರಥಿ!

ಡಾ.ಆರ್.ಎಂ.ಎಂ ಡಿಸಿಸಿ ಬ್ಯಾಂಕ್ ಸಾರಥಿ!
– ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ನಾಯಕ
– ಶಿವಮೊಗ್ಗ ಜಿಲ್ಲೆಯಲ್ಲೇ ಸಹಕಾರ ಕ್ಷೇತ್ರಕ್ಕೆ ಮತ್ತೆ ಚೈತನ್ಯ

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಸೆ.29ರಂದು ಚುನಾವಣೆ ನಡೆದಿದ್ದು ಡಾ.ಆರ್.ಎಂ.ಮಂಜುನಾಥ ಗೌಡ ಮತ್ತೆ ಅಧ್ಯಕ್ಷಗಿರಿ ಪಡೆದಿದ್ದಾರೆ. ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಶುಕ್ರವಾರ ಮತ್ತೆ ಮಂಜುನಾಥ ಗೌಡ ಅಧಿಕಾರ ಹಿಡಿದಿದ್ದಾರೆ. ಇದೀಗ ಇಡೀ ಡಿಸಿಸಿ ಬ್ಯಾಂಕ್ ಸಿಬ್ಬಂದಿ ಮತ್ತು ಸಹಕಾರಿ ವಲಯ ಅಭಿನಂದನೆ ಸಲ್ಲಿಸುತ್ತಿದೆ

ಹೇಗಿತ್ತು ಮತ್ತೆ ಸಹಕಾರಿ ಹಾದಿ..?

ಎಂ.ಬಿ.ಚನ್ನವೀರಪ್ಪ ಅವರನ್ನು ಜುಲೈ ತಿಂಗಳಲ್ಲಿ ಅವಿಶ್ವಾಸ ಮಂಡನೆ ಮೂಲಕ ಪದಚ್ಯುತಗೊಳಿಸಿದಾಗಲೇ ಆರ್.ಎಂ.ಮಂಜುನಾಥ ಗೌಡ ಹೆಸರು ಕೇಳಿ ಬಂದಿತ್ತು. ಡಿಸಿಸಿ ಬ್ಯಾಂಕ್ ಕೆ.ಪಿ.ದುಗ್ಗಪ್ಪಗೌಡ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಇದಾದ ಬಳಿಕ ಸೆ.8ರಂದು ಕೆ.ಪಿ.ದುಗ್ಗಪ್ಪಗೌಡರನ್ನು ಅಪೆಕ್ಸ್ ಬ್ಯಾಂಕ್‌ನಲ್ಲಿ ಡಿಸಿಸಿ ಬ್ಯಾಂಕ್ ಪ್ರತಿನಿಧಿಯಾಗಿ ನೇಮಕ ಮಾಡಿ, ಆರ್.ಎಂ.ಮಂಜುನಾಥ ಗೌಡ ಅವರನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿತ್ತು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್‌. ಎಲ್.ಷಡಾಕ್ಷರಿ ಪ್ರಭಾರಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಸೇರಿದಂತೆ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯಲ್ಲಿರುವ ಬಹುತೇಕರೊಂದಿಗೆ ಆರ್‌ಎಂಎಂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ಡಾ.ಆರ್.ಎಂ.ಮಂಜುನಾಥ ಗೌಡ ರಾಜ್ಯದಲ್ಲೇ ಟಾಪ್ ನಾಯಕ. ಹಳ್ಳಿ ಹಳ್ಳಿಯಲ್ಲೂ ಸಹಕಾರ ಸಂಘಗಳ ಬೆಳವಣಿಗೆಗೆ ಕಾರಣರಾಗಿದ್ದಾರೆ. ಇದೀಗ ಮತ್ತೆ ಅವರಿಗೆ ಹುದ್ದೆ ಸಿಕ್ಕಿದ್ದು ಇಡೀ ಜಿಲ್ಲೆಯಲ್ಲಿ ಸಂತಸ ವ್ಯಕ್ತವಾಗುತ್ತಿದೆ.

Categories
ಚಿಕ್ಕಮಗಳೂರು

ಶೃಂಗೇರಿ ಡಿಗ್ರಿ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ!

ಶೃಂಗೇರಿ ಡಿಗ್ರಿ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ!
– ಪಾಲಕರು ಬುದ್ದಿವಾದ ಹೇಳಿದ್ದಕ್ಕೆ ವಿಷ ಸೇವಿಸಿ ಸಾವು
– ಹೆಜ್ಜೇನು ದಾಳಿ 10ಕ್ಕೂ ಹೆಚ್ಚು ಮಂದಿ ಅಸ್ವಸ್ಥ
– ತರೀಕೆರೆ ಸಮೀಪ ಬಸ್ ಅಪಘಾತ ಬಾಲಕ ಸಾವು

NAMMUR EXPRESS NEWS
ಶೃಂಗೇರಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶೃಂಗೇರಿಯ ವಿದ್ಯಾರ್ಥಿನಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಶೃಂಗೇರಿ ತಾಲ್ಲೂಕಿನ ಬೇಗಾರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಾವರಿಯ ಸುರಕ್ಷಾ (19) ಆತ್ಮಹತ್ಯೆ ಮಾಡಿಕೊಂಡವರು. ಶೃಂಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿನಿ ಶೃಂಗೇರಿ ಹಾಸ್ಟೆಲ್ ಅಲ್ಲಿದ್ದ ವಿದ್ಯಾರ್ಥಿನಿ ಹಬ್ಬಕ್ಕೆ ಮನೆಗೆ ತೆರಳಿದ್ದಾಗ, ಪಾಲಕರು ಬುದ್ದಿವಾದ ಹೇಳಿದ್ದಾರೆ. ಇದರಿಂದ ಮನನೊಂದು ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ದ್ವಿತೀಯ ಬಿ.ಎ ವ್ಯಾಸಂಗ ಮಾಡುತಿದ್ದ, ಅವರು ಸಚ್ಚಿದಾನಂದಪುರದ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಉಳಿದು ಕಾಲೇಜಿಗೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ. ಗೌರಿ-ಗಣೇಶ ಹಬ್ಬಕ್ಕೆ ಊರಿಗೆ ಹೋದಾಗ ಮನೆಯಲ್ಲಿ ವಿಷ ಸೇವಿಸಿದ್ದು, ಕೊಪ್ಪದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಆಸ್ಪತ್ರೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟಿದ್ದಾರೆ.

ಹೆಜ್ಜೇನು ದಾಳಿ 10ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಮೂಡಿಗೆರೆ : ಮೂಡಿಗೆರೆ ತಾಲೂಕಿನ ಕಲ್ಲಕ್ಕಿ ಎಸ್ಟೇಟ್ ನಲ್ಲಿ ಹೆಜ್ಜೇನು ದಾಳಿ ಮಾಡಿದ ಪರಿಣಾಮ ಹತ್ತಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಘಟನೆ ಗುರುವಾರ ನಡೆದಿದೆ. ಮೂಡಿಗೆರೆ ತಾಲೂಕಿನ ಬಾಳೂರು ಸಮೀಪದ ಕಲ್ಲಕ್ಕಿ ಎಸ್ಟೇಟ್ ನಲ್ಲಿ ಕೂಲಿ ಕಾರ್ಮಿಕರ ಮೇಲೆ ಏಕಾಏಕಿ ದಾಳಿ ನಡೆಸಿದ್ದು ಕಾರ್ಮಿಕರು ಭಯಭೀತರಾಗಿ ದಿಕ್ಕಾಪಾಲಾಗಿ ಓಡಿದ್ದಾರೆ. 10 ಜನರ ಮೇಲೆ ದಾಳಿ ನಡೆಸಿದೆ. ವಿನೋದ, ಪುಷ್ಪ, ಪ್ರೇಮ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಅವರಿಗೆ ಬಣಕಲ್ ನಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಜ್ಜೇನು ಕಡಿತಕ್ಕೊಳಗಾದ ಉಳಿದವರು ಚಿಕಿತ್ಸೆ ಪಡೆದು ಮನೆಗಳಿಗೆ ಮರಳಿದ್ದಾರೆ.

ತರೀಕೆರೆ ಸಮೀಪ ಬಸ್ ಅಪಘಾತ ಬಾಲಕ ಸಾವು

ತರೀಕೆರೆ: ಸಮೀಪ ಬೆಟ್ಟದಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಬೆಳಿಗ್ಗೆ ನಡೆದ ಬಸ್‌ ಅಪಘಾತದಲ್ಲಿ ಬಾಲಕನೊಬ್ಬ ಮೃತಪಟ್ಟು,11 ಜನರು ಗಾಯೊಂಡಿದ್ದಾರೆ. ಬೆಂಗಳೂರಿನಿಂದ ಶಿವಮೊಗ್ಗದ ಕಡೆಗೆ ಹೋಗುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಬಸ್ ಅಪಘಾತದಲ್ಲಿ ಗುಬ್ಬಿ ಮೂಲದ ಪ್ರಮೋದ್ (7) ಎಂಬ ಬಾಲಕ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಬಸ್‌ನಲ್ಲಿದ್ದ ಭಾಗ್ಯ, ಚಿಕ್ಕನರಸಿಂಹಯ್ಯ, ಮಣಿ, ರಂಗಯ್ಯ, ಅಂಬಿಕಾ, ನಾಗರಾಜ್‌, ನಿರ್ಮಲಾ, ಪಾಲಾಕ್ಷಮ್ಮ, ರವೀಂದ್ರ, ಸುರೇಶ್, ಸಚಿನ್ ಗಾಯಗೊಂಡು, ತರೀಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Categories
ಕರಾವಳಿ

ಕರಾವಳಿಯಲ್ಲಿ ಬಂದ್ ಬಿಸಿ ಇಲ್ಲ!

ಕರಾವಳಿಯಲ್ಲಿ ಬಂದ್ ಬಿಸಿ ಇಲ್ಲ!
– ಸಂಘಟನೆಗಳಿಂದ ನೈತಿಕ ಬೆಂಬಲ: ಸಹಜ ಸ್ಥಿತಿಯಲ್ಲಿ ಕರಾವಳಿ ಜನಜೀವನ
– ಖಾಸಗಿ ಬಸ್ ಸಂಚಾರ ಎಂದಿನಂತೆ ಕಾರ್ಯ ನಿರ್ವಹಣೆ
– ಶಾಲಾ ಕಾಲೇಜುಗಳಿಗೆ ರಜೆ ಇಲ್ಲ: ಅಲ್ಲಲ್ಲಿ ಪ್ರತಿಭಟನೆ

NAMMUR EXPRESS NEWS
ಉಡುಪಿ/ಮಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ಹಲವು ಸಂಘಟನೆಗಳು ಕರೆ ನೀಡಿದ್ದರೂ ಸಹ ಕರ್ನಾಟಕ ಬಂದ್ ಗೆ ಕರಾವಳಿಯಲ್ಲಿ ನೈತಿಕ ಬೆಂಬಲ ವ್ಯಕ್ತವಾಗಿದೆ. ಕಾವೇರಿ ವಿಚಾರವಾಗಿ ನಮ್ಮ ಸಹಾನುಭೂತಿಯಿದೆ, ಆದರೆ ಬಸ್ ಸಂಚಾರ ಬಂದ್ ಮಾಡುವುದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು ಸೇರಿ ಸಾರ್ವಜನಿಕ ಜೀವನಕ್ಕೆ ಕಷ್ಟವಾಗುವ ಕಾರಣ ನಾವು ನೈತಿಕ ಬೆಂಬಲ ಸೂಚಿಸುತ್ತೇವೆ. ಬಸ್ ಓಡಾಟ ಎಂದಿನಂತೆ ಇರಲಿದೆ ಎಂದು ಖಾಸಗಿ ಬಸ್ ಒಕ್ಕೂಟ ತಿಳಿಸಿ ಖಾಸಗಿ ಬಸ್ ಸಂಘಟನೆಯು ಕರ್ನಾಟಕ ಬಂದ್ ಗೆ ನೈತಿಕ ಬೆಂಬಲ ನೀಡಿದೆ. ಹಾಗಾಗಿ ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಗಳು ಎಂದಿನಂತೆ ಓಡಾಟ ನಡೆಸಲಿದೆ.
ಬೆಂಗಳೂರಿನಲ್ಲಿ ಹೋಟೆಲ್ ಉದ್ಯಮವು ಕರ್ನಾಟಕ ಬಂದ್ ಗೆ ಬೆಂಬಲ ನೀಡಿದೆಯಾದರೂ ಕರಾವಳಿಯಲ್ಲಿ ನೈತಿಕ ಬೆಂಬಲ ಮಾತ್ರ ನೀಡಿದೆ ಹಾಗಾಗಿ ಉಡುಪಿ- ಮಂಗಳೂರಿನಲ್ಲಿ ಹೋಟೆಲ್ ಗಳು ತೆರೆದಿವೆ.

ಶಾಲಾ ಕಾಲೇಜುಗಳಿಗೆ ರಜೆ ಇಲ್ಲ!

ಕಾವೇರಿ ನೀರಿನ ವಿಚಾರದಲ್ಲಿ ಕನ್ನಡ ಸಂಘಟನೆಗಳು ರಾಜ್ಯ ಬಂದ್ ಗೆ ಕರೆ ನೀಡಿದ್ದರೂ, ಕರಾವಳಿ ಭಾಗದಲ್ಲಿ ಇದರ ಬಿಸಿ ತಟ್ಟುವುದಿಲ್ಲ. ದಕ್ಷಿಣ ಕನ್ನಡ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾಹಿತಿ ನೀಡಿದ್ದಾರೆ.