Categories
ರಾಜ್ಯ

ಟಾಪ್ ನ್ಯೂಸ್ ಕರ್ನಾಟಕ

ಮೊಬೈಲ್ ಸ್ಫೋಟ: ಯುವತಿ ಸಾವು!
– ಮೊಬೈಲ್ ಚಾರ್ಜಿಗೆ ಹಾಕಿ ಮಾತನಾಡುವಾಗ ಸ್ಫೋಟ
– ತಂಜಾವೂರಿನ ಪಾಪನಾಸಂನಲ್ಲಿ ನಡೆದ ದುರಂತ
– ವ್ಯಕ್ತಿಯನ್ನು ಸೊಂಡಿಲಲ್ಲಿ ಎತ್ತಿ ಬಿಸಾಕಿದ ಆನೆ!
– ನೀರಿನ ಹರಿವು ಜಾಸ್ತಿಯಾಗಿ ತಂದೆ- ಮಗ ಸಾವು
– ಪಿಲಿಕುಳದಲ್ಲಿ ಚಿರತೆ ದಾಳಿಯಿಂದ ಎಮು ಪಕ್ಷಿ ಸಾವು

NAMMUR EXPRESS NEWS
ತಿರುಚಿ: ಮೊಬೈಲ್ ಫೋನ್ ಚಾರ್ಜ್ ಮಾಡುವಾಗ ಮೊಬೈಲ್ ಅಲ್ಲಿ ಮಾತನಾಡುವಾಗ ಸ್ಫೋಟಗೊಂಡ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ತಂಜಾವೂರಿನ ಪಾಪನಾಸಂನಲ್ಲಿ ಬುಧವಾರ ನಡೆದಿದೆ.
ತಂಜಾವೂರಿನ ಪಾಪನಾಸಂ ಬಳಿಯ ವಿಸಿತಾ ರಾಜಪುರಂ ಗ್ರಾಮದ ನಿವಾಸಿ ಪಿ ಗೋಕಿಲಾ (33) ತನ್ನ ಪತಿ ಪ್ರಭಾಕರನ್ ಅವರ ನಿಧನದ ನಂತರ ಈ ಪ್ರದೇಶದಲ್ಲಿ ಮೊಬೈಲ್ ಸೇವಾ ಕೇಂದ್ರವನ್ನು ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
ಬುಧವಾರ ಗೋಕಿಲಾ ಚಾರ್ಜಿಂಗ್ ಮಾಡುವಾಗ ಇಯರ್ ಫೋನ್ ಬಳಸಿ ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಿದ್ದರು. ಇದ್ದಕ್ಕಿದ್ದಂತೆ, ಮೊಬೈಲ್ ಫೋನ್ ಸ್ಫೋಟಗೊಂಡು ಇಡೀ ಅಂಗಡಿಯನ್ನು ಬೆಂಕಿ ಆವರಿಸಿದೆ. ಘಟನೆಯಲ್ಲಿ ಗೋಕಿಲಾ ಅವರಿಗೆ ತೀವ್ರ ಸುಟ್ಟ ಗಾಯಗಳಾದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಕರಾವಳಿಯಲ್ಲಿ ಕಾಡಾನೆ ದಾಳಿ: ವ್ಯಕ್ತಿಗೆ ಗಂಭೀರ ಗಾಯ

ಕಡಬ: ಕಾಡಾನೆ ದಾಳಿಯಿಂದ ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಐತ್ತೂರು ಗ್ರಾಮದಲ್ಲಿ ನಡೆದಿದೆ. ಕೂಲಿ ಕೆಲಸ ಬಿಟ್ಟು ಮನೆಯ ಕಡೆ ತೆರಳುತ್ತಿದ್ದ ಸಂದರ್ಭದಲ್ಲಿ ಗ್ರಾಮದ ನೆಲ್ಯಡ್ಕ ಶಾಲೆಗೆ ಹೊಂದಿಕೊಂಡಿರುವ ಕಾರ್ತಿಕೇಯ ಭಜನಾ ಮಂದಿರದ ಬಳಿ ಕಾಡಾನೆ ಹಠಾತ್ತಾಗಿ ಎದುರು ಬಂದು ಚೋಮ ಅವರನ್ನು ಸೊಂಡಿಲಿನಿಂದ ಎತ್ತಿ ಬಿಸಾಕಿದೆ. ಪರಿಣಾಮವಾಗಿ ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಕಡಬ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದೆ.

ನೀರಿನ ಹರಿವು ಜಾಸ್ತಿಯಾಗಿ ತಂದೆ- ಮಗ ಸಾವು.!

ದಾವಣಗೆರೆ : ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ದೇವರಬೆಳಕೆರೆ ಪಿಕಪ್ ಜಲಾಶಯದ ಹಿನ್ನೀರಿನಲ್ಲಿ ಸ್ನಾನ ಮಾಡುತ್ತಿದ್ದಾಗ ನೀರಿನ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ತಂದೆ-ಮಗ ಗುರುವಾರ ಮೃತಪಟ್ಟಿದ್ದಾರೆ. ಮೃತ ದುರ್ದೈವಿಗಳನ್ನು ಹರಿಹರ ತಾಲ್ಲೂಕಿನ ಮಿಟ್ಲಕಟ್ಟೆಯ ಚಂದ್ರಪ್ಪ ಹಾಗೂ ಅವರ ಪುತ್ರ ಶೌರ್ಯ ಎಂದು ತಿಳಿದು ಬಂದಿದೆ. ಮೃತ ಚಂದ್ರಪ್ಪ ಅವರ ಮಕ್ಕಳಾದ ಅಥರ್ವ ಮತ್ತು ಶೌರ್ಯ ಇಬ್ಬರು ಸ್ನಾನ ಮಾಡುತ್ತಿರುವಾಗ ಏಕಾಏಕಿ ನೀರಿನ ಹರಿವು ಜಾಸ್ತಿಯಾಗಿ ಇಬ್ಬರು ಮುಳುಗಿದ್ದಾರೆ. ಮಕ್ಕಳು ಮುಳುಗುತ್ತಿರುವುದನ್ನು ನೋಡಿದ ತಂದೆ ಚಂದ್ರಪ್ಪ ಶೌರ್ಯನನ್ನು ರಕ್ಷಿಸಲು ಹೋಗಿದ್ದಾರೆ. ದುರಾದೃಷ್ಟವಶಾತ್ ಇಬ್ಬರು ನೀರಿನಲ್ಲಿ ಮುಳುಗಿದ್ದಾರೆ. ಆದರೆ 13 ವರ್ಷದ ಅಥರ್ವನನ್ನು ಅಲ್ಲಿಯೇ ಇದ್ದ ಸ್ಥಳೀಯ ಯುವಕರೊಬ್ಬರು ರಕ್ಷಿಸಿದ್ದಾರೆ. ಮೃತ ಚಂದ್ರಪ್ಪ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದು, ವಿಹಾರಕ್ಕೆಂದು ಮಕ್ಕಳ ಜೊತೆ ಪಿಕಪ್‌ಗೆ ಬಂದಿದ್ದರು ಎಂದು ತಿಳಿದು ಬಂದಿದೆ. ವಿಷಯ ತಿಳಿದು ಘಟನಾ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಇಬ್ಬರ ಶವವನ್ನು ಹೊರತೆ ತೆಗೆದಿದ್ದಾರೆ.

ಪಿಲಿಕುಳದಲ್ಲಿ ಚಿರತೆ ದಾಳಿಯಿಂದ ಎಮು ಪಕ್ಷಿ ಸಾವು

ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದ ಅಧೀನದ ಮೃಗಾಲಯದಲ್ಲಿ ಏಕೈಕ ಎಮು ಪಕ್ಷಿ ಸಾವು ಪ್ರಕರಣದ ಬಗ್ಗೆ ಸಮಗ್ರ ಮಾಹಿತಿ ಪಡೆದು ತನಿಖೆ ನಡೆಸಲಾಗುವುದು ಎಂದು ಪಿಲಿಕುಳ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ, ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

Categories
ಚಿಕ್ಕಮಗಳೂರು

ಕಾಫಿ ನಾಡಿನ ಚಿಕ್ಕಮಗಳೂರಲ್ಲಿ ಬಂದ್ ಬಿಸಿ..!

ಕಾಫಿ ನಾಡಿನ ಚಿಕ್ಕಮಗಳೂರಲ್ಲಿ ಬಂದ್ ಬಿಸಿ..!
– ತುಂತುರು ಮಳೆ ನಡುವೆ ಹೋರಾಟ ಜೋರು
– ಚಿಕ್ಕಮಗಳೂರು ಬಸ್ ಸಂಪೂರ್ಣ ಬಂದ್
– ಜಿಲ್ಲೆಯ ಎಲ್ಲಾ ತಾಲೂಕಲ್ಲಿ ಮಿಶ್ರ ಪ್ರತಿಕ್ರಿಯೆ

NAMMUR EXPRESS NEWS
ಚಿಕ್ಕಮಗಳೂರು: ಕರ್ನಾಟಕ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ವರ್ತಕರು ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು. ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಸೇನೆ, ರೈತ ಸಂಘದ ಕಾರ್ಯಕರ್ತರು ಬಸ್ ಗಳ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಬಸ್‌ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿಲ್ಲ. ಕಾಲೇಜುಗಳಿಗೆ ವಿದ್ಯಾರ್ಥಿಗಳು ಬಂದಿದ್ದು, ಪ್ರತಿಭಟನೆ ತೀವ್ರಗೊಂಡ ಬಳಿಕ ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗಳಿಂದ ರಜೆ ನೀಡಲಾಗಿದೆ. ಮನೆಗೆ ವಾಪಸ್ ಹೋಗಲು ಬಸ್ ಗಳು ಇಲ್ಲದೆ ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲೇ ಉಳಿದಿದ್ದಾರೆ. ತುಂತುರು ಮಳೆ ಅರಂಭವಾಗಿದ್ದು, ಮಳೆಯ ನಡುವೆ ಹಮಾಲಿ ಸಂಘಟನೆಗಳು ಮೆರವಣಿಗೆ ನಡೆಸಿದರು.

ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಎನ್. ಅರ್. ಪುರ, ಶೃಂಗೇರಿ, ಕಡೂರು, ತರೀಕೆರೆ, ಅಜ್ಜ0ಪುರ, ಮೂಡಿಗೆರೆಯಲ್ಲೂ ಬಂದ್ ಬಿಸಿ ಉದ್ಯಮಿಗಳಿಗೆ ತಟ್ಟಿದೆ. ಆದರೆ ಮಳೆ ಬಂದ್ ಬಿಸಿಗೆ ತಣ್ಣೀರು ಎರಚಿದೆ. ಕೆಲವೆಡೆ ಎಂದಿನಂತೆ ವ್ಯವಹಾರ, ಅಂಗಡಿ ಓಪನ್ ಇದ್ದವು.

Categories
ತೀರ್ಥಹಳ್ಳಿ

ನಮ್ಮೂರ್ ಎಕ್ಸ್ ಪ್ರೆಸ್ ಸಹಾಯ ಹಸ್ತ

ಪರ್ಸ್ ಕಳೆದುಕೊಂಡಿದ್ದಾರೆ… ಸಿಕ್ಕವರು ತಲುಪಿಸಿ
– ತೀರ್ಥಹಳ್ಳಿಯಿಂದ ಅರಳಾಪುರ ಮಾರ್ಗದಲ್ಲಿ ಬಿದ್ದಿದೆ

NAMMUR EXPRESS NEWS
ತೀರ್ಥಹಳ್ಳಿ ಅರಳಾಪುರ ಗ್ರಾಮ ಪಂಚಾಯಿತಿಯ ಮುಂಡಿಗೆಮನೆಯಲ್ಲಿ ವಾಸವಾಗಿರುವ ಸತೀಶ್ ಬೈಸೆ ನಗರ ಇವರು ದಿನಾಂಕ 28-9-2023ರ ಗುರುವಾರ ಮುಂಡಿಗೆ ಮನೆಯಿಂದ ತುಪ್ಪದ ಮನೆ ಚಿಟ್ಟೆ ಬೈಲು ಮುಖಾಂತರ ತೀರ್ಥಹಳ್ಳಿಗೆ ತಮ್ಮ ಹೊಂಡಾ ಡಿಯೋ ಬೈಕ್ KA 14 EU 6994ರಲ್ಲಿ ಬರುವಾಗ ಪರ್ಸ್ ಬಿದ್ದು ಹೋಗಿದ್ದು ಆ ಪರ್ಸಿನಲ್ಲಿ ಡ್ರೈವಿಂಗ್ ಲೈಸನ್ಸ್ ಒರಿಜಿನಲ್ ಪಾನ್ ಕಾರ್ಡ್,ಚುನಾವಣಾ ಐಡೆಂಟಿ ಕಾರ್ಡುಗಳು ಇರುತ್ತದೆ. ದಯವಿಟ್ಟು ಸಿಕ್ಕಿದವರು ಕೆಳಗಿನ ನಂಬರ್ ತಲುಪಿಸಿ. – 9481307249

Categories
ತೀರ್ಥಹಳ್ಳಿ

ಅರಣ್ಯ ಇಲಾಖೆ ಅಧಿಕಾರಿಯಿಂದ ಶಿಷ್ಟಾಚಾರ ಉಲ್ಲಂಘನೆ!

ಅರಣ್ಯ ಇಲಾಖೆ ಅಧಿಕಾರಿಯಿಂದ ಶಿಷ್ಟಾಚಾರ ಉಲ್ಲಂಘನೆ!
– ಶೇಡ್ಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯಕ್ರಮ
– ಗ್ರಾಪಂ ಸದಸ್ಯರ ಮಹಾ ಒಕ್ಕೂಟದಿಂದ ಆಕ್ರೋಶ: ಮನವಿ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಅರಣ್ಯ ಇಲಾಖೆಯ ಫಾರೆಸ್ಟರ್ ಸಂಜಯ್‌ ರವರು ಗ್ರಾಮ ಪಂಚಾಯತಿ ಸದಸ್ಯರನ್ನು ಕಡೆಗಣಿಸಿರುವ ಬಗ್ಗೆ ತೀರ್ಥಹಳ್ಳಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಗ್ರಾಪಂ ಸದಸ್ಯರ ಮಹಾ ಒಕ್ಕೂಟದಿಂದ ಮನವಿ ಸಲ್ಲಿಸಲಾಗಿದ್ದು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗಿದೆ. ಅರಣ್ಯ ಇಲಾಖಾ ಕಾರ್ಯಕ್ರಮವಾದ ಶ್ರೀ ಸಿದ್ದಿ ವಿನಾಯಕ ಗ್ರಾಮ ಅರಣ್ಯ ಸಮಿತಿ, ಶೇಡ್ಡಾರ್,ತುಂಬ್ರಮನೆಯಲ್ಲಿ ದಿನಾಂಕ:26.09.2023 ನೇ ಮಂಗಳವಾರ ನಡೆದ ಸರ್ವ ಸದಸ್ಯರ ಮಹಾಮಂಡಳಿ ಸಭೆ ಸಮಗ್ರ ಪುನಃಶ್ಚತನ ತರಬೇತಿ ಕಾರ್ಯಾಗಾರದ ಆಹ್ವಾನ ಪತ್ರಿಕೆಯಲ್ಲಿ ಸ್ಥಳೀಯ ಸದಸ್ಯರಾದ ಸವಿತಾ ಕೋಂ ದಿಲೀಪ್‌ರವರ ಹೆಸರನ್ನು ನಮೂದಿಸದೇ ಕಡೆಗಣಿಸಿದ್ದಲ್ಲದೇ ಸ್ಥಳೀಯ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರುಗಳು ಸ್ಥಳೀಯ ಸದಸ್ಯೆಯಾದ ಸವಿತಾ ಕೋಂ ದಿಲೀಪ್‌ರವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವಂತೆ ವಿನಂತಿಸಿದರೂ ಉದ್ದೇಶ ಪೂರ್ವಕವಾಗಿ ಜನಪ್ರತಿನಿಧಿಯಾದಂತಹ ಗ್ರಾಮ ಪಂಚಾಯತಿ ಸದಸ್ಯರನ್ನು ಅವಮಾನಿಸುವುದಕ್ಕೋಸ್ಕರವೇ ಕಾರ್ಯಕ್ರಮಕ್ಕೆ ಕರೆಯದೇ ಸಭೆ ನಡೆಸಿರುತ್ತಾರೆ.

ನಂತರದಲ್ಲೂ ಉದ್ಧಟತನದ ಮಾತುಗಳನ್ನಾಡಿದ್ದಾರೆಂಬುದು ಸ್ಥಳೀಯ ಸದಸ್ಯರುಗಳು ನಮ್ಮ ಗಮನಕ್ಕೆ ತಂದಿದ್ದು ಜನಪ್ರತಿನಿಧಿಯಾದಂತಹ ಗ್ರಾಮ ಪಂಚಾಯತಿ ಸದಸ್ಯರನ್ನು ಅಧಿಕಾರಿಯಾಗಿ ಕಡೆಗಣಿಸಿ ಅವಮಾನಿಸಿರುವುದನ್ನು ನಮ್ಮ ಒಕ್ಕೂಟ ಖಂಡಿಸುತ್ತದೆ. ಹಾಗೆಯೇ ಉದ್ದೇಶ ಪೂರ್ವಕವಾಗಿ ಜನಪ್ರತಿನಿಧಿಗಳನ್ನು ಕಡೆಗಣಿಸಲು ಮುಂದಾಗಿರುವ ಫಾರೆಸ್ಟರ್ ಸಂಜಯ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒಕ್ಕೂಟ ಒತಾತಿಯಿಸುತ್ತಿದ್ದು ಹತ್ತು ದಿನಗಳ ಒಳಗೆ ಸೂಕ್ತ ಕ್ರಮ ಜರುಗಿಸದೇ ಹೋದಲ್ಲಿ ತಮ್ಮ ಕಚೇರಿಯ ಮುಂದೆ ನ್ಯಾಯಕ್ಕಾಗಿ ಪ್ರತಿಭಟನೆ ಮಾಡುವುದು ಅನಿವಾರ್ಯವಾಗಿದೆ ಎಂದು
ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟ ತೀರ್ಥಹಳ್ಳಿಯ ಅಧ್ಯಕ್ಷರಾದ ಅನಿಲ್ ಮನವಿ ಸಲ್ಲಿಸಿದ್ದಾರೆ. ಈ ವೇಳೆ ಹೆಬ್ಬುಲುಗೆ ಉಮೇಶ್, ಯುವ ಮುಖಂಡ ಪಣಿರಾಜ್ ಕಟ್ಟೆಹಕ್ಕಲು ಸೇರಿದಂತೆ ಹಲವರು ಹಾಜರಿದ್ದರು.

Categories
ತೀರ್ಥಹಳ್ಳಿ

ಬಿ.ಎಸ್ ವಿಶ್ವನಾಥನ್ ಅವರಿಗೆ ಸಾರ್ವಜನಿಕ ನುಡಿ ನಮನ!

ಬಿ.ಎಸ್ ವಿಶ್ವನಾಥನ್ ಅವರಿಗೆ ಸಾರ್ವಜನಿಕ ನುಡಿ ನಮನ!
– ತೀರ್ಥಹಳ್ಳಿಯ ಕೆಟಿಕೆಯಲ್ಲಿ ಶ್ರದ್ದಾಂಜಲಿ ಕಾರ್ಯಕ್ರಮ
– ತೀರ್ಥಹಳ್ಳಿಯ ಹಲವು ಸಂಘಟನೆಗಳಿಂದ ಸಂತಾಪ

NAMMUR EXPRESS NEWS
ತೀರ್ಥಹಳ್ಳಿ: ಇತ್ತೀಚಿಗೆ ಇಹಲೋಕ ತ್ಯಜಿಸಿದ ಧೀಮಂತ ವಿಶ್ವ ಸಹಕಾರಿ, ಸಹಕಾರಿ ಭೀಷ್ಮ , ತೀರ್ಥಹಳ್ಳಿಯ ಹೆಮ್ಮೆಯ ಪುತ್ರ ಡಾ. ಬಿ.ಎಸ್. ವಿಶ್ವನಾಥನ್ ಅವರಿಗೆ ನುಡಿ ನಮನ ಮತ್ತು ಶ್ರದ್ದಾಂಜಲಿ ಕಾರ್ಯಕ್ರಮವು ತೀರ್ಥಹಳ್ಳಿಯ ಕುಶಾವತಿಯ ಕೆ.ಟಿ.ಕೆ. ಕಲ್ಯಾಣ ಮಂದಿರದಲ್ಲಿ ಸೆ.27 ರಂದು ಬುಧವಾರ ಸಂಜೆ ನಡೆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗಣ್ಯರು ಅವರ ಸೇವೆಯನ್ನು ಸ್ಮರಿಸಿದರು. ತೀರ್ಥಹಳ್ಳಿ ತಾಲ್ಲೂಕು ಒಕ್ಕಲಿಗರ ಸಂಘ, ಪಟ್ಟಣ ಪಂಚಾಯತಿ, ತೀರ್ಥಹಳ್ಳಿ , ಮಲ್ನಾಡ್ ಕ್ಲಬ್ , ಪುರಂದರ ವೇದಿಕೆ,‌ ತೀರ್ಥಹಳ್ಳಿ , ತಾ. ಕನ್ನಡ ಸಾಹಿತ್ಯ ಪರಿಷತ್ತು, ತಾ. ಕಾರ್ಯನಿರತ ಪತ್ರಕರ್ತರ ಸಂಘ, ತುಂಗಾ ವಿದ್ಯಾವರ್ಧಕ ಸಂಘ (ರಿ), ತೀರ್ಥಹಳ್ಳಿ, ತಾ. ಕೃಷಿಕ ಸಮಾಜ, ತೀರ್ಥಹಳ್ಳಿ, ವಿಹಂಗಮ ಪರಿಸರ ಅಧ್ಯಯನ ಕೇಂದ್ರ,  ತುಳುನಾಡು ಸಿರಿ ಸೌಹಾರ್ದ ಸಹಕಾರಿ ಸಂಘ ತೀರ್ಥಹಳ್ಳಿ, ಮಲೆನಾಡು ಒಕ್ಕಲಿಗರ ಪತ್ತಿನ ಸೌಹಾರ್ದ ಸಹಕಾರ ಸಂಘ, ತೀರ್ಥಹಳ್ಳಿ, ತಾಲೂಕು ರೈತ ಸಂಘ, ರೋಟರಿ, ಲಯನ್ಸ್, ಜೇಸಿ ಸೇರಿದಂತೆ ತಾಲೂಕಿನ ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಮತ್ತು  ವಿಶ್ವನಾಥ್ ಅವರ ಹಿತೈಷಿಗಳಿಂದ ಸಂತಾಪ ವ್ಯಕ್ತವಾಯಿತು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ,ಅನೇಕ ಗಣ್ಯರನ್ನು ನಾವು ಇಂದು ಸ್ಮರಿಸುತ್ತೇವೆ. ಅದರಲ್ಲಿ ವಿಶ್ವನಾಥ್ ಅವರು ಒಬ್ಬರು. ಹಾಗಾಗಿ ಅವರನ್ನು ನಾವು ಬದುಕಿಸಿಡಬೇಕು. ದೈಹಿಕವಾಗಿ ನಾವು ಬದುಕಿಸಿಡಲು ಆಗುವುದಿಲ್ಲ, ಆದ್ದರಿಂದ ಅವರ ನಡವಳಿಕೆ,ಅವರ ಕೆಲಸಗಳನ್ನು ನಾವು ಎಲ್ಲರಿಗೂ ಪರಿಚಯಿಸಿ ಅವರು ನಮ್ಮ ನಡುವೆ ಬದುಕಿರುವಂತೆ ಮಾಡಬಹುದು ಎಂದರು. ಹಿರಿಯ ಪ್ರಗತಿಪರ ಚಿಂತಕ ಕಡಿದಾಳು ದಯಾನಂದ್ ರವರು ಮಾತನಾಡಿ, ಶಿಸ್ತು ಸಮಯ ಪ್ರಜ್ಞೆಯ ಮೂಲಕ ವ್ಯವಸ್ಥೆಗೆ ಬೇಕಾದ ಶಕ್ತಿ ನೀಡುತ್ತಿದ್ದರು, ಸಾಹಿತ್ಯ ಸಂಗೀತದ ಹವ್ಯಾಸ ರೂಢಿಸಿಕೊಂಡಿದ್ದ ಅನನ್ಯ ವ್ಯಕ್ತಿತ್ವ ಅವರದಾಗಿತ್ತು ಎಂದು ಹೇಳಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಮೇಶ್, ಕೌಲಾನಿ ಧರ್ಮಯ್ಯ, ನಾಗರಾಜ್ ಶೆಟ್ಟಿ, ಕೆಸ್ತೂರು ಮಂಜುನಾಥ್, ಕಡ್ತೂರು ದಿನೇಶ್, ಸಂದೇಶ್ ಜವಳಿ, ಟಿ ಜೆ ಸುಂದರೇಶ್, ಹಾಲಿಗೆ ನಾಗರಾಜ್, ಪ್ರಸನ್ನ ಕುಮಾರ್ ಹೆಚ್ ಸಿ, ಸೃಜನಿ ಟಿ ಗೌಡ, ಮೋಹನ್ ಮುನ್ನೂರು, ರಮೇಶ ಶೆಟ್ಟಿ, ಸರಳ ಲೋಕೇಶ್, ತನಿಕಲ್ ರಾಜಣ್ಣ ಸೇರಿದಂತೆ ಹಲವರು ಇದ್ದರು.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಇಂದು ಶಿವದೂತ ಪಂಜುರ್ಲಿ ಯಕ್ಷಗಾನ

ತೀರ್ಥಹಳ್ಳಿಯಲ್ಲಿ ಇಂದು ಶಿವದೂತ ಪಂಜುರ್ಲಿ ಯಕ್ಷಗಾನ
– ಶ್ರೀ ಸಿದ್ಧಿ ವಿನಾಯಕ ಯುವಕ ಸಂಘ ಛತ್ರಕೇರಿ ತೀರ್ಥಹಳ್ಳಿ ಆಯೋಜನೆ
– ಹುಂಚದಲ್ಲಿ ದೃಢಬಲ ಆಯುರ್ವೇದ ವಸತಿ ಶಿಬಿರ

NAMMUR EXPRESS NEWS
ಶ್ರೀ ಸಿದ್ಧಿ ವಿನಾಯಕ ಯುವಕ ಸಂಘ ಛತ್ರಕೇರಿ ತೀರ್ಥಹಳ್ಳಿ ಇವರ 40ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಸಂಜೆ 7:00 ಗಂಟೆಗೆ
ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ( ರಿ ) ನಡುೂರು ಮಂದಾರ್ತಿ ಮಂದಾರ್ತಿ ಇವರಿಂದ ಈ ವರ್ಷದ ಮಹೋನ್ನತ ಪುಣ್ಯ ಕಥಾನಕ “ಶಿವದೂತ ಪಂಜುರ್ಲಿ”
ಎಂಬ ಪುಣ್ಯ ಕಥಾವನ್ನು ಆಡಿ ತೋರಿಸಲಿದ್ದಾರೆ ಈ ಯಕ್ಷಗಾನ ಕಾಲಮಿತಿಯ ಯಕ್ಷಗಾನ ಕಾರ್ಯಕ್ರಮಕ್ಕೆ ಯಕ್ಷಗಾನ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ. ಶ್ರೀ ಸಿದ್ಧಿವಿನಾಯಕನ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಸಿದ್ಧಿ ವಿನಾಯಕ ಯುವಕ ಸಂಘದ ಸಮಿತಿಯವರು ಕೇಳಿಕೊಂಡಿದ್ದಾರೆ.

ಹೊಂಬುಜಾ ಜೈನ ಮಠದಲ್ಲಿ ಆಯುರ್ವೇದ ಶಿಬಿರ

ಹೊಸನಗರ: ಶ್ರೀ ಕ್ಷೇತ್ರ ಹೊಂಬುಜ ಜೈನ ಮಠದಲ್ಲಿ ದಿನಾಂಕ 23-09-2023 ರಿಂದ 30-09-2023ರ ವರೆಗೆ ದೃಢಬಲ ಆಯುರ್ವೇದ ವಸತಿ ಶಿಬಿರವು ನಡೆಯುತ್ತಿದೆ. ಆಪ್ತಾಸ್ ಆಯುರ್ವೇದ ಎಂಬ ಸಂಸ್ಥೆಯು, ಶ್ರೀ ಕ್ಷೇತ್ರ ಹೊಂಬುಜ ದ ಸಹಕಾರದಿಂದ ಆಯುರ್ವೇದದ ವೈದ್ಯ ವಿದ್ಯಾರ್ಥಿಗಳಿಗಾಗಿ (ಬಿ. ಎ. ಎಮ್.ಎಸ್. ತೃತೀಯ ವರ್ಷದ) ಈ ವಸತಿ ಶಿಬಿರವನ್ನು ಆಯೋಜಿಸಿದ್ದಾರೆ. ಈ ಶಿಬಿರದಲ್ಲಿ ಸುಮಾರು 30 ಕ್ಕೂ ಹೆಚ್ಚು ಆಯುರ್ವೇದ ರಂಗದ ಸಾಧಕರು, ಪ್ರಸಿದ್ಧ ವೈದ್ಯರು ಹಾಗೂ ಇನ್ನಿತರ ಗಣ್ಯರು, ಸಂಪನ್ಮೂಲ ವ್ಯಕ್ತಿಗಳಾಗಿ ಹಾಗೂ ಅಭ್ಯಾಗತರಾಗಿ ಆಗಮಿಸಲಿದ್ದಾರೆ. ಸುಮಾರು 120ಕ್ಕು ಮೀರಿ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸಿದ್ದಾರೆ.

Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

– ಗೂಗಲ್ ಪೇ ಸರಿ ಮಾಡುವ ನೆಪದಲ್ಲಿ 38 ಸಾವಿರ ರೂ. ಮೋಸ!
– ಕಾರ್ಕಳದಲ್ಲಿ ನಡೆದ ಘಟನೆ: ಹೇಗೆ ಮಾಡಿದ್ದು ಮೋಸ?
– ಮೂಡಬಿದಿರೆ: ಗಾಂಜಾ ಮಾರಾಟ: ಹುಡುಗರ ಬಂಧನ
– ಬಂಟ್ವಾಳ: ಖೋಟಾ ನೋಟು ಪ್ರಕರಣ; 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
– ಬೆಳ್ತಂಗಡಿ : ಕಡಿರುದ್ಯಾವರದಲ್ಲಿ ಆನೆ ದಾಳಿ

NAMMUR EXPRESS NEWS :
ಕಾರ್ಕಳ : ಗೂಗಲ್ ಪೇ ಸರಿ ಮಾಡುವ ನೆಪದಲ್ಲಿ 38 ಸಾವಿರ ರೂ. ವಂಚನೆ ಮಾಡಿರುವ ಘಟನೆ ಕಾರ್ಕಳದಿಂದ ವರದಿಯಾಗಿದೆ. ಕಾರ್ಕಳದ ಕಸಬಾದ ಚೋಲ್ಪಾಡಿ ನಿವಾಸಿ ಹರೀಶ್ ರಾಘವ ಹೆಗ್ಡೆ (66) ಎಂಬವರು ಆನ್‌ಲೈನ್ ವಂಚನೆಗೆ ಗುರಿಯಾಗಿ 38 ಸಾವಿರ ರೂ. ಕಳೆದುಕೊಂಡಿದ್ದಾರೆ. ತಮ್ಮಗೂಗಲ್ ಪೇ ಆಪ್‌ನಲ್ಲಿ ತೊಂದರೆ ಕಾಣಿಸಿಕೊಂಡ ಕಾರಣ ಅವರು ಸೆ. 4ರಂದು ಇಂಟರ್‌ನೆಟ್ ಮೂಲಕ ಹುಡುಕಿ ಗೂಗಲ್ ಪೇ ಗೆ ದೂರು ಸಲ್ಲಿದ್ದರು. ಅಂದೇ ರಾತ್ರಿ ಓರ್ವ ವ್ಯಕ್ತಿ 9330944212 ಮತ್ತು 9064210959 ಎಂಬ ಎರಡು ನಂಬರ್‌ಗಳಿಂದ ಅವರಿಗೆ ಕರೆಮಾಡಿ ಗೂಗಲ್ ಪೇಯಿಂದ ಕರೆ ಮಾಡುತ್ತಿರುವುದಾಗಿ ಹೇಳಿದ್ದಾನೆ. ಗೂಗಲ್ ಪೇ ಸಮಸ್ಯೆಯ ಬಗ್ಗೆ ವಿಚಾರಿಸಿ, ಬ್ಯಾಂಕ್ ಖಾತೆಯ ವಿವರ ಪಡೆದುಕೊಂಡು ಒಟಿಪಿ ಕೇಳಿ ಪಡೆದುಕೊಂಡು ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆಯಿಂದ 38 ಸಾವಿರ ರೂ. ಲಪಟಾಯಿಸಿದ್ದಾನೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಗಾಂಜಾ ಮಾರಾಟ ಮಾರುವ ಹುಡುಗರ ಬಂಧನ

ಮೂಡುಬಿದ್ರೆ : ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಯುವಕರನ್ನು ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ.ನೇತೃತ್ವದ ತಂಡವು ಬುಧವಾರ ವಶಕ್ಕೆ ಪಡೆದಿದೆ. ಬೆಳುವಾಯಿ ನಿವಾಸಿಗಳಾದ ಮಹಮ್ಮದ್ ಅಯಾನ್ (22), ಫರ್ಹಾನ್ ಖಾನ್ (18) ಹಾಗೂ ಶೇಖ್ ಮುಹಮ್ಮದ್ ಜುಬೈರ್ (19) 19) ಬಂಧಿತ ಆರೋಪಿಗಳು. ಮೂವರು ಆರೋಪಿಗಳು ಬೆಳುವಾಯಿ ಕಾಂತಾವಾರ ದ್ವಾರದ ಬಳಿ ಸ್ಕೂಟರ್ ನಲ್ಲಿ ನಿಷೇಧಿತ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದಾರೆಂದ ಖಚಿತ ಮಾಹಿತಿಯನ್ನು ಮೇರೆಗೆ ಸ್ಥಳಕ್ಕೆ ಧಾವಿಸಿದ್ದಾರೆ ಮೂವರು ವ್ಯಕ್ತಿಗಳ ಸಹಿತ 800 ಗ್ರಾಂ ಗಾಂಜಾ ಮತ್ತು ಸ್ಕೂಟರನ್ನು ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದಾರೆ. ಈ ಎಲ್ಲಾ ಸೊತ್ತುಗಳ ಒಟ್ಟು ಮೌಲ್ಯ 62,000 ಆಗಿರಬಹುದೆಂದು ಪೊಲೀಸರು ತಿಳಿಸಿದ್ದಾರೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರ ಮಾರ್ಗದರ್ಶನದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

ಖೋಟಾ ನೋಟು ಪ್ರಕರಣ; 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಬಂಟ್ವಾಳ: ಖೋಟಾ ನೋಟು ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಹಳೆಯ ಆರೋಪಿಯೋರ್ವನನ್ನು ಬಂಟ್ವಾಳ ನಗರ ಠಾಣಾ ಪೋಲಿಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಂಧಿತ ಆರೋಪಿಯನ್ನು ಪುತ್ತೂರು ತಾಲೂಕಿನ ನೆಲ್ಯಾಡಿ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ನಿವಾಸಿ ಇಬ್ರಾಹಿಂ (55) ಎಂದು ಗುರುತಿಸಲಾಗಿದೆ. 2004 ರಲ್ಲಿ ಕೋಟಾ ನೋಟು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಮೇಲೆ ಪ್ರಕರಣ ದಾಖಲಾಗಿತ್ತು. ಇನ್ನೊಬ್ಬ ಆರೋಪಿ ಶರಣಾಗತನಾಗಿದ್ದು, ಈತ ತಲೆಮರೆಸಿಕೊಂಡಿದ್ದ. ಇದೀಗ ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ಆನಂತಪದ್ಮನಾಭ ಮತ್ತು ಎಸ್.ಐ.ರಾಮಕೃಷ್ಣ ಅವರ ಮಾರ್ಗದರ್ಶನದಂತೆ ಸಿಬ್ಬಂದಿಗಳಾದ ಗಣೇಶ್ ಮತ್ತು ಗೋಪಾಲಕೃಷ್ಣ ಅವರು ನೆಲ್ಯಾಡಿಯಲ್ಲಿ ಬಂಧಿಸಿದ್ದಾರೆ. ಇದೀಗ ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಈತನಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

ಕಡಿರುದ್ಯಾವರದಲ್ಲಿ ಆನೆ ದಾಳಿ..!

ಬೆಳ್ತಂಗಡಿ: ಅಡಿರುದ್ಯಾವರ ಗ್ರಾಮದ ಹಣಿಯಲು ಪರಿಸರದಲ್ಲಿ ಕಾಡಾನೆಗಳು ಕಂಡುಬಂದಿದ್ದು ಮಂಗಳವಾರ ರಾತ್ರಿ ಕೃಷ್ಣ ಭಟ್ ಅವರ ತೋಟದ 10 ಅಡಿಕೆ ಗಿಡ, 40 ಬಾಳೆ ಗಿಡಗಳಿಗೆ ಹಾಗೂ ಗುಮ್ಮಣ್ಣ ಗೌಡ ಅವರ ಗದ್ದೆಗೆ ಹಾನಿ ಉಂಟುಮಾಡಿವೆ.
ಕಾಡಾನೆಗಳು ಕಂಡುಬಂದ ತತ್‌ಕ್ಷಣ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಸಿಬಂದಿ ಆಗಮಿಸಿ ಕಾಡಿಗೆ ಅಟ್ಟಿದ ಕಾರಣ ಹೆಚ್ಚಿನ ಹಾನಿ ತಪ್ಪಿದೆ. ಚಿಬಿದ್ರೆ ಗ್ರಾಮದ ಮದರ ಬೆಟ್ಟು ಶ್ರೀನಿವಾಸ ಹೆಬ್ಬಾರ್ ಅವರ ತೋಟಕ್ಕೆ ಕಳೆದ ವಾರ 2 ಬಾರಿ ಕಾಡಾನೆಗಳು ದಾಳಿ ಇಟ್ಟು 100ಕ್ಕಿಂತ ಅಧಿಕ ಅಡಿಕೆ ಮರ, 7 ತೆಂಗು ಹಾಗೂ 50 ಬಾಳೆ ಗಿಡಗಳನ್ನು ನಾಶ ಮಾಡಿವೆ.

Categories
ತೀರ್ಥಹಳ್ಳಿ

ಬಸವಾನಿ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸೇವೆ ಹೆಜ್ಜೆ!

ಬಸವಾನಿ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸೇವೆ ಹೆಜ್ಜೆ!
– ಸಂಘದಿಂದ ಹಲವಾರು ಸಮಾಜಮುಖಿ ಸೇವಾ ಕಾರ್ಯ: ತಂಡದ ಕಾರ್ಯಕ್ಕೆ ಗ್ರಾಮಸ್ಥರ ಮೆಚ್ಚುಗೆ
– ಒಂದಲ್ಲ ಒಂದು ಕಡೆ ಸಮಸ್ಯೆಗೆ ಸ್ಪಂದನೆ

NAMMUR EXPRESS NEWS
ತೀರ್ಥಹಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಬಿ. ಸಿ. ಟ್ರಸ್ಟ್ ತೀರ್ಥಹಳ್ಳಿ ತಾಲೂಕು ಇವರ ಸಹಬಾಗಿತ್ವದಲ್ಲಿ ಬಸವಾನಿ ಶೌರ್ಯ ವಿಪತ್ತು ನಿರ್ವಹಣಾ ತಂಡ ತಾಲೂಕಿನಲ್ಲೇ ತಮ್ಮ ಅಮೂಲ್ಯ ಸೇವೆ ಮೂಲಕ ಮಾದರಿಯಾಗಿದೆ. ಅಧ್ಯಕ್ಷರಾದ ಹೊಳೆಗದ್ದೆ ಮಂಜುನಾಥ, ಸದಸ್ಯರುಗಳಾದ ನಾಗರಾಜ, ಶಂಕರ, ಆದಿತ್ಯ, ಅಶ್ವತ, ಸುಧಾಕರ, ಗಿರೀಶ, ಉದಯ, ನಾರಾಯಣ, ಭರತ, ಚಂದ್ರಶೇಖರ, ಕಿರಣ, ರಾಘವೇಂದ್ರ, ಸುನಿಲರವರ ತುಂಬಾ ಉತ್ಸಾಹಿ ಯುವಕರ ತಂಡವು ಕಳೆದ 4 ತಿಂಗಳಿನಿಂದ ಪ್ರಾರಂಭಗೊಂಡಿದ್ದು, ಈಗ ಸುತ್ತಮುತ್ತಲಿನ ಊರಿಗೆ ಸಹಾಯ ಮಾಡುತ್ತಿದೆ.

ಸಾರ್ವಜನಿಕ ಕೆಲಸ ದೇವರ ಕೆಲಸ!

ಹಾರೋಗೋಳಿಗೆ, ಹೊಸ ಅಗ್ರಹಾರ, ಹರಳಿಮಠ, ಸುತ್ತಮುತ್ತಲಿನ ಗ್ರಾಮಗಳಲ್ಲಿ, ಮಳೆಗೆ ಹಾನಿ ಆದವರಿಗೆ ಸಹಾಯ ಮಾಡುವುದು, ಸಾರ್ವಜನಿಕ ರಸ್ತೆಗಳ ದುರಸ್ತಿ ಮಾಡುವುದು, ವಿಶೇಷವಾಗಿ ಶಾಲಾಮಕ್ಕಳಿಗೆ, ಅಂಗನವಾಡಿ ಮಕ್ಕಳಿಗೆ ನೋಟ್ಸ್ ಬುಕ್ಸ್ ವಿತರಣೆ, ಪೆನ್, ಪೆನ್ಸಿಲ್ ವಿತರಣೆ, ಕಲಿಕಾ ಸಾಮಾಗ್ರಿಗಳ ವಿತರಣೆ, ಶಾಲಾ ಸ್ವಚ್ಛತೆ, ಅಂಗನವಾಡಿಗಳ ಸ್ವಚ್ಛತೆ, ದೇವಸ್ಥಾನಗಳ ಸ್ವಚ್ಛತೆ, ಶಾಲಾ ಆವರದಲ್ಲಿ, ಅಂಗನವಾಡಿ ಆವರಣದಲ್ಲಿ, ದೇವಸ್ಥಾನದ ಆವರಣದಲ್ಲಿ, ಗಿಡಗಳನ್ನು ನೆಡುವುದು, ಗ್ರಾಮಪಂಚಾಯ್ತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು, ಮದ್ಯವ್ಯಸನಿಗಳಿಗೆ ಹಣ್ಣು ಹಂಪಲುಗಳನ್ನು ಹಂಚುವುದು, ಸಾರ್ವಜನಿಕ ಕಾರ್ಯಕ್ರಮದ ಅನ್ನಸಂತರ್ಪಣೆಗೆ ಸಿಹಿ ಹಂಚುವುದು, ಹೀಗೆ ಹತ್ತು ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಹೊಸ ಅಗ್ರಹಾರ, ಹರಳಿಮಠ, ಹಾರೋಗೋಳಿಗೆಯ ಸುತ್ತಮುತ್ತಲಿನ ಭಾಗದಲ್ಲಿ ಮಾದರಿ ಸೇವಾಸಂಸ್ಥೆಯಾಗಿ ಬಸವಾನಿ ಶೌರ್ಯ ವಿಪತ್ತು ನಿರ್ವಹಣಾ ತಂಡ ಹೊರಹೊಮ್ಮಿದೆ. ತಂಡದ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Categories
ರಾಜ್ಯ

ಶುಕ್ರವಾರ ಅಖಂಡ ಕರ್ನಾಟಕ ಬಂದ್..!

ಶುಕ್ರವಾರ ಅಖಂಡ ಕರ್ನಾಟಕ ಬಂದ್..!
– ಅಗತ್ಯ ಸೇವೆಗಳು ಹೊರತುಪಡಿಸಿ ಎಲ್ಲವು ಬಂದ್!
– ಏನಿರುತ್ತೆ? ಏನಿರಲ್ಲ! ಇಲ್ಲಿದೆ ಸಂಪೂರ್ಣ ಮಾಹಿತಿ
– ಶಾಲಾ, ಕಾಲೇಜು ಆಯಾ ಜಿಲ್ಲಾಧಿಕಾರಿಗಳ ಹೊಣೆ
– ಶಿವಣ್ಣ ನೇತೃತ್ವದಲ್ಲಿ ಕರ್ನಾಟಕ ಚಿತ್ರರಂಗ ಸಾಥ್

NAMMUR EXPRESS NEWS
ಬೆಂಗಳೂರು : ಶುಕ್ರವಾರ ಅಖಂಡ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಾರ್ವಜನಿಕರಿಗೆ ಅಗತ್ಯವಿರುವ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳು ಬಂದ್ ಅಗಲಿವೆ. ಯಾವ ಯಾವ ಸೇವೆಗಳು ಇರಲಿದ್ದು, ಯಾವ ಸೇವೆಗಳು ಬಂದ್ ಆಗುವುದರ ಮಾಹಿತಿ ಇಲ್ಲಿದೆ. ಅಖಂಡ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರ ಸಂಘ ಬೆಂಬಲ ಸೂಚಿಸಿದ್ದರಿಂದ ಎಲ್ಲ ಹೋಟೆಲ್ ಗಳು ಬಂದ್ ಇರಲಿವೆ, ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ನಾಳಿನ ಬಂದ್ ಗೆ ಬೆಂಬಲ ನೀಡಿರುವುದರಿಂದ ಚಿತ್ರಮಂದಿರಗಳು ಬಂದ್ ಇರಲಿವೆ. ಶಾಪಿಂಗ್ ಮಾಲ್ ಗಳು ಬಂದಾಗಲಿವೆ, ಆಟೋ, ಕ್ಯಾಬ್ ಓಲಾ, ಉಬರ್ಗಳು ಸೇರಿದಂತೆ ಖಾಸಗಿ ಸಾರಿಗೆ ವಾಹನಗಳು ಶುಕ್ರವಾರ ರಸ್ತೆಗೆ ಇಳಿವುದಿಲ್ಲ ಅಲ್ಲದೆ ಬೇಕರಿಗಳು ಸಹ ಕ್ಲೋಸ್ ಆಗಿರಲಿವೆ.

ಇನ್ನೂ ಅಗತ್ಯ ಸೇವೆಗಳು ಅಂದರೆ ತುರ್ತು ಸೇವೆಗಳಾದ ಆಸ್ಪತ್ರೆ, ಮೆಡಿಕಲ್ ಶಾಪ್ ಗಳು, ಅಂಬುಲೆನ್ಸ್ ಸೇವೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ನಂದಿನಿ ಹಾಲಿನ ಅಂಗಡಿಗಳು ತೆರೆದಿರುತ್ತವೆ.ಅದರಂತೆ ಶಾಲಾ ಕಾಲೇಜುಗಳು, ಮೆಟ್ರೋ ಸೇವೆಗಳ ಬಗ್ಗೆ, ಬಿಎಂಟಿಸಿ, ಕೆಎಸ್‌ಆರ್ಟಿಸಿ ಸಂಚಾರ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಕಾವೇರಿ ನೀರು ತಮಿಳುನಾಡಿಗೆ ಹಾರೈಸುತ್ತಿರುವುದನ್ನು ವಿರೋಧಿಸಿ ನಾಳೆ ಕನ್ನಡಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು, ಕರ್ನಾಟಕ ಬಂದ್ ಗೆ ಕರೆ ನೀಡಿವೆ ಅದರಂತೆ ಗುರುವಾರ ಬೆಂಗಳೂರಿನಲ್ಲಿ ವಾಟಾಳ್ ನಾಗರಾಜ್ ಸಿಟಿ ರೌಂಡ್ಸ್ ಹಾಕಲಿದ್ದಾರೆ.

ಕರ್ನಾಟಕ ಬಂದ್ ಗೆ ಬೆಂಬಲಿಸಲು ರಾಜ್ಯದ ಜನತೆಗೆ ಮನವಿ ಮಾಡಲಿದ್ದಾರೆ. ಮಧ್ಯಾಹ್ನ 12 ರಿಂದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸಿಟಿ ರೌಂಡ್ಸ್ ನಡೆಯಲಿದೆ. ಮೈಸೂರು ಬ್ಯಾಂಕ್ ವೃತ್ತದಿಂದ ಸಿಟಿ ರೌಂಡ್ಸ್ ಆರಂಭವಾಗಲಿದ್ದು, ತೆರೆದ ವಾಹನದಲ್ಲಿ ಇಡೀ ಬೆಂಗಳೂರು ನಗರದಾದ್ಯಂತ ಸಂಚರಿಸಿ ಜನರಲ್ಲಿ ಹಾಗೂ ಸಾರ್ವಜನಿಕರಲ್ಲಿ ಮನವಿ ಮಾಡಲಿದ್ದಾರೆ. ಎನ್ನಲಾಗುತ್ತಿದೆ. ಹೋಟೆಲ್ ಮಾಲೀಕರು, ಥಿಯೇಟರ್ ಮಾಲೀಕರು, ಮಾಲ್ ಮಾಲೀಕರು, ಅಂಗಡಿ ಮಾಲೀಕರು, ಕ್ಯಾಬ್, ಆಟೋ, ಬಿಎಂಟಿಸಿ, ಕೆ ಎಸ್ ಆರ್ ಟಿ ಸಿ, ಖಾಸಗಿ ಬಸ್ ಚಾಲಕರು, ಎಪಿಎಂಸಿಯ ಮಾಲೀಕರು, ಕಾರ್ಮಿಕರು, ಬೀದಿ ವ್ಯಾಪಾರಿಗಳನ್ನು ಭೇಟಿ ಮಾಡಿ ಕರ್ನಾಟಕ ಬಂದ್ ಗೆ ಬೆಂಬಲಿಸುವಂತೆ ಮನವಿ ಮಾಡಲಿದ್ದಾರೆ.
ಎಲ್ಲಾ ಜಿಲ್ಲೆಗಳಲ್ಲೂ ಬಂದ್ ಮಾಡಲು ಮನವಿ ಮಾಡಲಾಗಿದೆ.

ಕರ್ನಾಟಕ ಬಂದ್‌ಗೆ ಕನ್ನಡ ಚಿತ್ರರಂಗ ಬೆಂಬಲ

ಕನ್ನಡಪರ ಸಂಘಟನೆಗಳು ಶುಕ್ರವಾರ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು, ಈ ಹೋರಾಟಕ್ಕೆ ಕನ್ನಡ ಚಿತ್ರರಂಗ ಕೂಡ ಬೆಂಬಲ ಸೂಚಿಸಿತ್ತು. ಚಿತ್ರೋದ್ಯಮ ಬಂದ್ ಮಾಡುವ ಮೂಲಕ ಹೋರಾಟಕ್ಕೆ ಇಳಿಯುವುದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬುಧವಾರ ಹೇಳಿಕೆ ನೀಡಿತ್ತು. ಆದರೆ, ಈ ಹೋರಾಟದ ನೇತೃತ್ವವನ್ನು ವಹಿಸುವವರು ಯಾರು ಎನ್ನುವ ಪ್ರಶ್ನೆ ಕೂಡ ಮೂಡಿತ್ತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಶಿವರಾಜ್ ಕುಮಾರ್ ನಿವಾಸಕ್ಕೆ ಆಗಮಿಸಿ, ಶುಕ್ರವಾರದ ಹೋರಾಟಕ್ಕೆ ಮುಂದಾಳತ್ವ ವಹಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಹೀಗಾಗಿ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಶುಕ್ರವಾರ ಗುರುರಾಜ್ ಕಲ್ಯಾಣ ಮಂಟಪದ ಬಳಿ ಚಿತ್ರೋದ್ಯಮ ಹೋರಾಟಕ್ಕೆ ಇಳಿಯಲಿದೆ. ಸಾಕಷ್ಟು ವರ್ಷಗಳಿಂದ ಕಾವೇರಿ ನೀರಿಗಾಗಿ ಹೋರಾಟ ನಡೆಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಸೆ.29ರಂದು ಕರ್ನಾಟಕ ಬಂದ್ ಕರೆ ನೀಡಿದ್ದು, ಸೀರಿಯಲ್, ಸಿನಿಮಾ ಚಿತ್ರೀಕರಣ, ಚಿತ್ರ ಪ್ರದರ್ಶನ ಸೇರಿದಂತೆ ಎಲ್ಲಾ ಚಟುವಟಿಕೆಗಳು ಬಂದ್ ಮೂಲಕ ಚಿತ್ರೋದ್ಯಮ ಸಾಥ್ ನೀಡುತ್ತಿದೆ.

ಶುಕ್ರವಾರ ಪ್ರತಿಭಟನೆಯಲ್ಲಿ ಶಿವಣ್ಣ, ಉಪೇಂದ್ರ, ರಾಘಣ್ಣ, ನೆನಪಿರಲಿ ಪ್ರೇಮ್, ಅಜಯ್ ರಾವ್, ಪ್ರಜ್ವಲ್ ದೇವರಾಜ್, ರಂಗಾಯಣ ರಘು, ಸಾಧು ಕೋಕಿಲಾ ಸೇರಿದಂತೆ ಕಿರುತೆರೆ ನಟ ನಟಿಯರು ಭಾಗಿಯಾಗುವ ಸಾಧ್ಯತೆ ಇದೆ.
ಫಿಲ್ಡ್ ಚೇಂಬರ್ ಅಂಗ ಸಂಸ್ಥೆಗಳಾದ, ನಿರ್ಮಾಪಕರ ಸಂಘ, ಕಲಾವಿದರ ಸಂಘ, ನಿರ್ದೇಶಕರ ಸಂಘದಿಂದ, ಒಕ್ಕೂಟದಿಂದಲೂ ಕರ್ನಾಟಕ ಬೆಂಬಲಿಸಲಿದ್ದಾರೆ.

Categories
ತೀರ್ಥಹಳ್ಳಿ

ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸಹ್ಯಾದ್ರಿ ಶಾಲೆ ಮೇಲುಗೈ!

ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸಹ್ಯಾದ್ರಿ ಶಾಲೆ ಮೇಲುಗೈ!
– ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್: ಶುಭಾಶಯಗಳು

NAMMUR EXPRESS NEWS
ತೀರ್ಥಹಳ್ಳಿ: ಸಹ್ಯಾದ್ರಿ ಹಿ.ಪ್ರಾ ಶಾಲೆ, ಕುಶಾವತಿಯ ವಿದ್ಯಾರ್ಥಿನಿಯರು ಸೆ.27ರಂದು ನಡೆದ 14 ವರ್ಷ ವಯೋಮಿತಿಯ ತಾಲ್ಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ಬಾಲಕಿಯರ ಸಮಗ್ರ ಪ್ರಶಸ್ತಿಯನ್ನು ಪಡೆದು ಮೇಲುಗೈ ಸಾಧಿಸಿದ್ದಾರೆ.
ವಾಲಿಬಾಲ್, ಬಾಲ್ ಬ್ಯಾಡ್ಮಿಂಟನ್,ಗುಂಡುಎಸೆತ,ತಟ್ಟೆ ಎಸೆತ ,200 ಮೀಟರ್ ರ್ರನ್ನಿಂಗ್ ಅಲ್ಲಿ ಪ್ರಥಮ ಸ್ಥಾನ ಪಡೆದು ಮತ್ತು 100 ಮೀಟರ್ ರನ್ನಿಂಗ್ ತೃತೀಯ, 4*100 ಮೀಟರ್ ರಿಲೆ ದ್ವೀತಿಯ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಶಾಲೆಗೆ ಕೀರ್ತಿ ತಂದಿರುತ್ತಾರೆ, ಈ ವಿದ್ಯಾರ್ಥಿಗಳನ್ನು ಹಾಗೂ ಇವರಿಗೆ ತರಬೇತಿ ನೀಡಿದಂತಹ ಶ್ರೀಧರ್ ಹೆಚ್ ಆರ್ ರವರನ್ನು ಶಾಲೆಯ ಆಡಳಿತ ಮಂಡಳಿ, ಆಡಳಿತಾಧಿಕಾರಿ, ಮುಖ್ಯೋಪಾಧ್ಯಾಯಿನಿ,ಬೋಧಕ ಮತ್ತು ಬೋಧಕೇತರ ವರ್ಗದವರು ಹಾರ್ಧಿಕವಾಗಿ ಅಭಿನಂದಿಸಿ ಶುಭಹಾರೈಸಿದ್ದಾರೆ.