Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

– ಸೆ.15 ರ ವರೆಗೆ ಪ್ರವಾಸಿ ತಾಣಗಳ ಮೇಲೆ ನಿರ್ಬಂಧ
– ಉಡುಪಿ : ವಿಶೇಷ ಚೇತನ ವ್ಯಕ್ತಿಯ ರಕ್ಷಣೆ
– ಮಂಗಳೂರು : ಮಂಗಳೂರಿಗೂ ಬರಲಿದೆ ವಂದೇ ಭಾರತ್ ರೈಲು
– ಮಂಗಳೂರು : ಮಂಗಳೂರಿಂದ ಬೆಂಗಳೂರಿಗೆ ಹೆಚ್ಚುವರಿ ವಿಮಾನ ಸೌಲಭ್ಯ
– ಮಂಗಳೂರು : ಮಂಗಳೂರು ನಗರ ಪೊಲೀಸ್‌ ಕಮಿಷನರ್ ಆಗಿ ಅನುಪಮ್ ಅಗರ್ವಾಲ್‌ ನೇಮಕಗೊಂಡಿದ್ದಾರೆ.

ಉಡುಪಿ: ಜಿಲ್ಲೆಯ ಪ್ರವಾಸೋದ್ಯಮ ಸ್ಥಳ ಹಾಗೂ ಬೀಚ್, ಸಮುದ್ರತೀರ ಸಹಿತ ಮಳೆಗಾಲದಲ್ಲಿ ಅಪಾಯಕಾರಿ ಪ್ರದೇಶಗಳಿಗೆ ಪ್ರವಾಸಿಗರ ಭೇಟಿಗೆ ಜಿಲ್ಲಾಡಳಿತ ಹೇರಿರುವ ನಿರ್ಬಂಧವನ್ನು ಸೆ. 15ರ ವರೆಗೂ ವಿಸ್ತರಿಸಲಾಗಿದೆ.
ಸೆಪ್ಟೆಂಬರ್ ಮೊದಲ ವಾರದಲ್ಲಿ ಮಳೆ ಬರುವ ಸಾಧ್ಯತೆ ಇರುವುದರಿಂದ ಎಲ್ಲ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಿದ್ದೇವೆ ಈ ಬಗ್ಗೆ ಅಧಿಕಾರಿಗಳ ಜತೆಗೂ ಚರ್ಚೆ ನಡೆಸಲಿದ್ದೇವೆ. ಆಗುಂಬೆ ಘಾಟಿಯಲ್ಲಿ ದೊಡ್ಡ ವಾಹನ ಸಂಚಾರ ನಿಷೇಧ ತೆರವು ಸಂಬಂಧ ಶಿವಮೊಗ್ಗ ಜಿಲ್ಲಾಧಿಕಾರಿಯವರೊಂದಿಗೂ ಚರ್ಚೆ ಮಾಡಲಿದ್ದೇವೆ.
ಸೆ. 15ರ ವರೆಗೂ ಎಲ್ಲ ನಿರ್ಬಂಧ ಮುಂದುವರಿಯಲಿದೆ. ಅನಂತರ ಮಳೆಯ ಪರಿಸ್ಥಿತಿ ಅವಲೋಕಿಸಿ ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ| ವಿದ್ಯಾಕುಮಾರಿ ಅವರು ಮಾಹಿತಿ ನೀಡಿದ್ದಾರೆ

ವಿಶೇಷ ಚೇತನ ವ್ಯಕ್ತಿಯ ರಕ್ಷಣೆ

ಉಡುಪಿ: ಮಹಾರಾಷ್ಟ್ರದಿಂದ ಬ್ರಹ್ಮಾವರಕ್ಕೆ ಬಂದಿದ್ದ ವಿಶೇಷ ಚೇತನ ವ್ಯಕ್ತಿಯನ್ನು ರಕ್ಷಿಸಲಾಗಿದೆ. ಕೊಕ್ಕರ್ಣಿ ಸಮೀಪ ರಾತ್ರಿ ಹೊತ್ತು ರಕ್ಷಣೆಗಾಗಿ ಕಣ್ಣೀರಿ ಡುತ್ತಿದ್ದ ಮಾಹಿತಿ ಪಡೆದ ಸಂತೋಷ್ ಶೆಟ್ಟಿ ಕೆಂಜೂರು ಅವರು ವಿಶು ಶೆಟ್ಟಿ ಅವರ ಸಹಕಾರದೊಂದಿಗೆ ರಕ್ಷಿಸಿ ಉಳ್ಳೂರಿನ ವಿಶೇಷ ಚೇತನ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು. ಒಬ್ಬರು ಕೆಲಸಕ್ಕೆ ಕರೆತಂದು ದುಡಿಸಿ ನಡುಬೀದಿಯಲ್ಲಿ ಕೈ ಬಿಟ್ಟಿದ್ದಾರೆ ಎಂದು ವ್ಯಕ್ತಿ ತಿಳಿಸಿದ್ದಾರೆ. ಅವರ ಬಗ್ಗೆ ತಿಳಿದವರು ಬ್ರಹ್ಮಾವರ ಠಾಣೆ ಅಥವಾ ಸ್ಪಂದನ ಆಶ್ರಮವನ್ನು ಸಂಪರ್ಕಿಸುವಂತೆ ವಿಶು ಶೆಟ್ಟಿ ತಿಳಿಸಿದ್ದಾರೆ.

ಮಂಗಳೂರಿಗೂ ಬರಲಿದೆ ವಂದೇ ಭಾರತ್ ರೈಲು

ಮಂಗಳೂರು : ದೇಶದ ವಲಯದಲ್ಲಿ ಕ್ರಾಂತಿ ಎಬ್ಬಿಸಿದ ವಂದೇ ಭಾರತ್‌ ರೈಲು ಸೇವೆ ಇನ್ನು ಮಂಗಳೂರಿಗೂ ಲಾಭಿಸಲಿದೆ.
ಈ ರೈಲು ಶುಕ್ರವಾರ ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಿಂದ ಮಂಗಳೂರಿಗೆ ಹೊರಟಿದ್ದು ಈ ಮೂಲಕ ಪಾಲಕ್ಕಾಡ್ ವಿಭಾಗಕ್ಕೆ ಹಸ್ತಾಂತರಿಸಲಾಯಿತು. ಕೇರಳಕ್ಕೆ ರೈಲು ಮಂಜೂರು ಮಾಡಿರುವುದು ದೃಢಪಟ್ಟಿದೆ. ಮಾರ್ಗಗಳು ಇನ್ನೂ ಅಂತಿಮಗೊಂಡಿಲ್ಲ. ವರದಿಗಳ ಪ್ರಕಾರ, ಒಂದು ವಾರದ ಮಾರ್ಗಗಳನ್ನು ಖಚಿತಪಡಿಸುತ್ತದೆ. ಮಂಗಳೂರು-ತಿರುವನಂತಪುರಂ, ಮಂಗಳೂರು-ಎರ್ನಾಕುಲಂ, ಮಂಗಳೂರು ಕೊಯಮತ್ತೂರು ಮತ್ತು ಗೋವಾ ಎರ್ನಾಕುಲಂ ಸೇರಿದಂತೆ ಸಂಭಾವ್ಯ ಮಾರ್ಗಗಳನ್ನು ಪರಿಗಣಿಸಲಾಗಿದೆ ಎಂದು ಮೂಲಗಳಿಂದ ಮಾಹಿತಿ ತೋರೆತಿದೆ.
ಚೆನ್ನೈನಲ್ಲಿ ವಂದೇ ಭಾರತ್‌ ಲೋಕೋ ಪೈಲಟ್‌ಗಳಿಗೆ ತರಬೇತಿ ಕೂಡ ಪ್ರಾರಂಭವಾಗಿದೆ. ಮಂಗಳೂರಿನಲ್ಲಿ ಪಿಟ್‌ಲೈನ್ ಕೂಡ ಸ್ಥಾಪಿಸಲಾಗಿದೆ. ಅಲ್ಲಿಗೆ ಸೇವೆಯಲ್ಲಿರುವ ಮೊದಲ ಕೇರಳದ ವಂದೇ ಭಾರತ್‌ (20634) ತಿರುವನಂತಪುರದಿಂದ ಬೆಳಿಗ್ಗೆ 5:20 ಗಂಟೆಗೆ ಹೊರಟು ಮಧ್ಯಾಹ್ನ 1:20 ಗಂಟೆಗೆ ಕಾಸರಗೋಡು ತಲುಪುತ್ತದೆ. ವರದಿಗಳ ಪ್ರಕಾರ, ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ಮಂಗಳೂರಿನಿಂದ ಅದೇ ಸಮಯದಲ್ಲಿ ತನ್ನ ಪ್ರಯಾಣವನ್ನು ಪುನರಾರಂಭಿಸುತ್ತದೆ.

ಮಂಗಳೂರಿಂದ ಬೆಂಗಳೂರಿಗೆ ಹೆಚ್ಚುವರಿ ವಿಮಾನ ಸೌಲಭ್ಯ

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಸೆ. 7ರಿಂದ ಹೆಚ್ಚುವರಿ ವಿಮಾನ ಸಂಚಾರ ನಡೆಸಲಿದೆ. ವಾರದ ದಿನಗಳು ಹಾಗೂ ಭಾನುವಾರ ಐದು ಮತ್ತು ಶನಿವಾರ ಆರು ವಿಮಾನಗಳು ಮಂಗಳೂರು- ಬೆಂಗಳೂರು ನಡುವೆ ಸಂಚರಿಸಲಿವೆ ಪ್ರಸ್ತುತ ಎಲ್ಲ ದಿನಗಳಲ್ಲಿ ನಾಲ್ಕು ವಿಮಾನಗಳು ಬೆಂಗಳೂರು ನಡುವೆ ಸಂಚರಿಸುತ್ತಿವೆ. ಸೆ.7ರಿಂದ ಸಂಚರಿಸಲಿರುವ ಐದನೇ ದೈನಂದಿನ (1 5858) ವಿಮಾನವು ಮಂಗಳೂರಿಗೆ ಬೆಳಿಗ್ಗೆ 8.35ಕ್ಕೆ ಬರಲಿದೆ, GE 5347 ಸಂಖ್ಯೆಯ ವಿಮಾನವು 19.10ಕ್ಕೆ ಬೆಂಗಳೂರಿಗೆ ಹೊರಡಲಿದೆ.

ಮಂಗಳೂರು ನಗರ ಪೊಲೀಸ್‌ ಕಮಿಷನರ್ ಆಗಿ ಅನುಪಮ್ ಅಗರ್ವಾಲ್‌ ನೇಮಕಗೊಂಡಿದ್ದಾರೆ.

ಮಂಗಳೂರು: ರಾಜ್ಯ ಸರ್ಕಾರ ರಾತ್ರೋರಾತ್ರಿ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ನಡೆದಿದೆ. ಕಳೆದ ಎರಡು ದಿನಗಳ ಹಿಂದಷ್ಟೇ 2018, 2019 ಮತ್ತು 2020ರ ಬ್ಯಾಚ್‌ನ ಹತ್ತು ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿತ್ತು. ಈಗ ಮತ್ತೆ ರಾಜ್ಯದ 35 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಸ್ಥಳ ಕೂಡ ನಿಯೋಜನೆ ಮಾಡದೆಯೇ ವರ್ಗಾವಣೆ ಮಾಡಲಾಗಿದೆ. ಜೊತೆಗೆ ಖಡಕ್‌ ಅಧಿಕಾರಿ ಎಂದು ಹೆಸರುವಾಸಿಯಾಗಿರುವ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ: ಮಂಗಳೂರು ಪೊಲೀಸ್ ಕಮಿಷನರ್, ಕುಲೀಪ್ ಕುಮಾರ್ ಜೈನ್ ಕೂಡ ವರ್ಗಾವಣೆಗೊಂಡಿದ್ದು, ಮಂಗಳೂರು ನಗರ ಪೊಲೀಸ್‌ ಕಮಿಷನರ್ ಆಗಿ ಅನುಪಮ್ ಅಗರ್ವಾಲ್‌ ನೇಮಕಗೊಂಡಿದ್ದಾರೆ.

Categories
ಮಂಗಳೂರು

ಮಂಗಳೂರಿಗೆ ಬರಲಿದೆ ವಂದೇ ಮಾತರಂ ರೈಲು!

ಮಂಗಳೂರಿಗೆ ಬರಲಿದೆ ವಂದೇ ಮಾತರಂ ರೈಲು!
– ಯಾವಾಗ ಬರಲಿದೆ…ಯಾರಿಗೆ ಅನುಕೂಲ ಆಗಲಿದೆ?
– ಕರಾವಳಿ ಜನರ ಸಂತಸ: ಏನಿದು ಯೋಜನೆ…?

NAMMUR EXPRESS NEWS
ಮಂಗಳೂರು: ಮಂಗಳೂರಿನ ಜನರು ಖುಷಿ ಪಡುವ ಸುದ್ದಿ. ವಂದೇ ಭಾರತ್ ರೈಲು ಸೇವೆ ಇನ್ನು ಮಂಗಳೂರಿಗೂ ದೊರೆಯಲಿದೆ. ಈ ರೈಲು ಶುಕ್ರವಾರ ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಿಂದ ಮಂಗಳೂರಿಗೆ ಹೊರಟಿದ್ದು ಈ ಮೂಲಕ ಪಾಲಕ್ಕಾಡ್ ಹಸ್ತಾಂತರಿಸಲಾಯಿತು. ಎಂಜಿನಿಯರ್‌ಗಳಿಗೆ ವಿಭಾಗದ  ಕೇರಳಕ್ಕೆ ರೈಲು ಮಂಜೂರು ಮಾಡಿರುವುದು ದೃಢಪಟ್ಟಿದೆ. ರೈಲನ್ನು ಪಾಲಕ್ಕಾಡ್ ವಿಭಾಗಕ್ಕೆ ಹಸ್ತಾಂತರಿಸಲಾಗಿದ್ದರೂ, ಮಾರ್ಗಗಳು ಇನ್ನೂ ಅಂತಿಮಗೊಂಡಿಲ್ಲ. ವರದಿಗಳ ಪ್ರಕಾರ, ಒಂದು ವಾರದಲ್ಲಿ ಮಾರ್ಗಗಳನ್ನು ಖಚಿತಪಡಿಸಲಾಗುವುದು. ಮಂಗಳೂರು-ತಿರುವನಂತಪುರಂ, ಮಂಗಳೂರು- ಎರ್ನಾಕುಲಂ, ಮಂಗಳೂರು-ಕೊಯಮತ್ತೂರು ಮತ್ತು ಗೋವಾ-ಎರ್ನಾಕುಲಂ ಸೇರಿದಂತೆ ಸಂಭಾವ್ಯ ಮಾರ್ಗಗಳನ್ನು ಪರಿಗಣಿಸಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಚೆನ್ನೈನಲ್ಲಿ ವಂದೇ ಭಾರತ್ ಲೋಕೋ ಪೈಲಟ್‌ಗಳಿಗೆ ತರಬೇತಿ ಕೂಡ ಆರಂಭವಾಗಿದೆ. ಮಂಗಳೂರಿನಲ್ಲಿ ಪಿಟ್‌ಲೈನ್ ಕೂಡ ಸ್ಥಾಪಿಸಲಾಗಿದೆ. ಈಗಾಗಲೇ ಸೇವೆಯಲ್ಲಿರುವ ಮೊದಲ ಕೇರಳದ ವಂದೇ ಭಾರತ್ (20634) ತಿರುವನಂತಪುರದಿಂದ
ಬೆಳಿಗ್ಗೆ 5:20 ಕ್ಕೆ ಹೊರಟು ಮಧ್ಯಾಹ್ನ 1:20 ಕ್ಕೆ ಕಾಸರಗೋಡು ತಲುಪುತ್ತದೆ. ವರದಿಗಳ ಪ್ರಕಾರ, ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ಮಂಗಳೂರಿನಿಂದ ಅದೇ ಸಮಯದಲ್ಲಿ ತನ್ನ ಪ್ರಯಾಣವನ್ನು ಪುನರಾರಂಭಿಸುತ್ತದೆ.

Categories
ರಾಷ್ಟ್ರೀಯ ವಾರ್ತೆ

ದೇಶದ ಹೆಸರು ಬದಲಿಸಲು ಮುಂದಾಯ್ತಾ ಕೇಂದ್ರ ಸರ್ಕಾರ?

ದೇಶದ ಹೆಸರು ಬದಲಿಸಲು ಮುಂದಾಯ್ತಾ ಕೇಂದ್ರ ಸರ್ಕಾರ?
– ಚರ್ಚೆ ಹುಟ್ಟು ಹಾಕಿದ ರಾಷ್ಟ್ರಪತಿ ಭವನದ ಆಹ್ವಾನ ಪತ್ರಿಕೆ
– ವಿಶೇಷ ಅಧಿವೇಶನದಲ್ಲಿ ಪ್ರಸ್ತಾವ ಸ್ವೀಕಾರ ಸಾಧ್ಯತೆ!

NAMMUR EXPRESS NEWS
ನವದೆಹಲಿ: ಈ ಹಿಂದೆ ಯುಪಿಎ ಅಂತಿದ್ದ ವಿಪಕ್ಷಗಳ ಮೈತ್ರಿಕೂಟದ ಹೆಸರನ್ನು ಇಂಡಿಯಾ ಎಂದು ಮರುನಾಮಕರಣ ಮಾಡಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ, ಭಾರತದ ಹೆಸರನ್ನು ಬದಲಾಯಿಸಲು ಮುಂದಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ದಟ್ಟವಾಗಿ ಕೇಳಿಬರುತ್ತಿವೆ. ಅದಕ್ಕೆ ಪುಷ್ಠಿ ನೀಡುವಂತಹ ಕೆಲವು ಬೆಳವಣಿಗೆಗಳು ಸಹ ಇದೀಗ ನಡೆಯುತ್ತಿವೆ.
ದೇಶಕ್ಕೆ ರಿಪಬ್ಲಿಕ್ ಆಫ್ ಭಾರತ್ ಎಂದು ಮರುನಾಮಕರಣ ಮಾಡಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಇಂಡಿಯಾ ಎನ್ನುವ ಬದಲು ಭಾರತ ಎಂಬ ಹೆಸರನ್ನು ಮುಂಚೂಣಿಗೆ ತರುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಅದಕ್ಕೆ ಪುಷ್ಠಿ ನೀಡುವಂತೆ ರಾಷ್ಟ್ರಪತಿ ಭವನದ ಆಹ್ವಾನ ಪತ್ರದಲ್ಲಿ ದಿ ಪ್ರೆಸಿಡೆಂಟ್ ಆಫ್ ಭಾರತ್ ಎಂದು ಉಲ್ಲೇಖಿಸಲಾಗಿದೆ.ಸೆ. 9 ಮತ್ತು 10ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ G-20 ದೇಶಗಳ ಸಮಾವೇಶ ನಡೆಯಲಿದ್ದು, ರಾಷ್ಟ್ರಪತಿ ಭವನದ ಔತಣಕೂಟದ ಆಹ್ವಾನ ಪತ್ರಿಕೆಯಲ್ಲಿ ಪ್ರೆಸಿಡೆಂಟ್ ಆಫ್ ಭಾರತ್ ಎಂದು ಉಲ್ಲೇಖಿಸಲಾಗಿದೆ.

ವಿಶೇಷ ಅಧಿವೇಶನದಲ್ಲಿ ಪ್ರಸ್ತಾವ ಸ್ವೀಕಾರ ಸಾಧ್ಯತೆ :

ಸೆ.18ರಿಂದ 5 ದಿನ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ರಿಪಬ್ಲಿಕ್ ಆಫ್ ಭಾರತ್ ಎಂಬ ಪ್ರಸ್ತಾವ ಸ್ವೀಕಾರ ಸಾಧ್ಯತೆ ಇದೆ. ದಿ ಪ್ರೆಸಿಡೆಂಟ್ ಆಫ್ ಭಾರತ್ ಎಂದು ಆಹ್ವಾನ ಪತ್ರಿಕೆ ಮುದ್ರಣವಾಗಿರುವುದು ಇದಕ್ಕೆ ಪುಷ್ಠಿ ನೀಡಿದೆ. ಈ ಹೊಸ ಚರ್ಚೆಯ ಬಗ್ಗೆ ಈಗಾಗಲೇ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಆದರೆ, ದೇಶದ ಹೆಸರನ್ನು ‘ಇಂಡಿಯಾ’ ಬದಲು ಭಾರತ ಎನ್ನಲು ಬಿಜೆಪಿ ಸೇರಿದಂತೆ ಹಲವು ಪಕ್ಷಗಳ ಮುಖಂಡರು ಬೇಡಿಕೆ ಇಟ್ಟಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಅವ್ಯವಸ್ಥೆಯ ಆಗರವಾದ ಕ್ರೀಡಾಕೂಟ

ತೀರ್ಥಹಳ್ಳಿಯಲ್ಲಿ ಅವ್ಯವಸ್ಥೆಯ ಆಗರವಾದ ಕ್ರೀಡಾಕೂಟ
– ಕಾಟಾಚಾರಕ್ಕೆ ಹೋಬಳಿ, ತಾಲ್ಲೂಕು ಮಟ್ಟದ ಕ್ರೀಡಾಕೂಟ ಆಯೋಜನೆ
– ಸಾರ್ವಜನಿಕರ ಆಕ್ರೋಶ

NAMMUR EXPRESS NEWS
ತೀರ್ಥಹಳ್ಳಿ : ಜೂನಿಯರ್‌ ಕಾಲೇಜು ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ವಾಲಿಬಾಲ್‌ ಕ್ರೀಡಾಕೂಟ ಅವ್ಯವಸ್ಥೆಯ ಆಗರವಾಗಿತ್ತು. ಕ್ರೀಡಾಪಟುಗಳಿಗೆ ಮೂಲ ಸೌಕರ್ಯ ಒದಗಿಸುವಲ್ಲಿ ಆಡಳಿತ, ಕ್ಷೇತ್ರ ಶಿಕ್ಷಣಾ ಇಲಾಖೆ ವಿಫಲವಾಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ಕ್ರೀಡಾಕೂಟಕ್ಕೆ ಅಗತ್ಯವಾಗಿ ಬೇಕಿದ್ದ ವಾಲಿಬಾಲ್‌, ನಟ್‌, ಕೋರ್ಟ್‌, ಕ್ರೀಡಾ ಉಪಕರಣ ಇಲ್ಲದೆ ವಿದ್ಯಾರ್ಥಿಗಳೇ ತಯಾರಿ ಮಾಡಿಕೊಳ್ಳಬೇಕಾದ ಅನಿವಾರ್ಯ ನಿರ್ಮಾಣವಾಗಿತ್ತು. ಬಿಸಿಲಿನ ಬೇಗೆಗೆ ದಣಿವರಿಸಿಕೊಳ್ಳಲು ನೀರು ಕೂಡ ಆಯೋಜಕರು ವ್ಯವಸ್ಥೆ ಮಾಡದ ಹಿನ್ನಲೆಯಲ್ಲಿ ಸೇರಿದ್ದ ಕ್ರೀಡಾ ಪ್ರೇಮಿಗಳು ಶಪಿಸಿದರು.

ಕಾಟಾಚಾರಕ್ಕೆ ಅವಸರದ ಕ್ರೀಡಾಕೂಟ ನಡೆಸಿದ್ದಾರೆ. 5 ರಿಂದ 7ನೇ ತರಗತಿ ಮಕ್ಕಳ ಹೋಬಳಿ ಮತ್ತು ತಾಲ್ಲೂಕು ಮಟ್ಟದ ಕ್ರೀಡಾಕೂಟ ಏಕಕಾಲದಲ್ಲಿ ನಡೆಸುವ ಮೂಲಕ ವಿದ್ಯಾರ್ಥಿಗಳ ಕ್ರೀಡಾ ಸ್ಥೈರ್ಯ ಹಾಳುಗೆಡವಲಾಗಿದೆ. ಬೆಳಿಗ್ಗೆ 9 ರಿಂದ ಹೋಬಳಿ ಮಟ್ಟ ನಡೆಸಿ ನಂತರ ಮಧ್ಯಾಹ್ನದ ಹೊತ್ತಿಗೆ ತಾಲ್ಲೂಕು ಮಟ್ಟದ ವಾಲಿಬಾಲ್‌ ಪಂದ್ಯಾವಳಿ ನಡೆದಿದೆ. ಶಿಕ್ಷಣ ಇಲಾಖೆ ಇಂತಹ ಅವಸರದ ಧೋರಣೆ ಯಾಕೆ ಅನುಸರಿಸಬೇಕು ಎಂದು ಶಿಕ್ಷಕರು ಪ್ರಶ್ನಿಸಿದರು.

300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದ ಕ್ರೀಡಾಕೂಟದಲ್ಲಿ 4 ಕೋರ್ಟ್‌ ವ್ಯವಸ್ಥೆ ಮಾಡಲಾಗಿತ್ತು. ಅದರಲ್ಲಿ ಥ್ರೋಬಾಲ್‌ ಕೋರ್ಟ್‌ ಕೂಡ ಇದ್ದುದ್ದರಿಂದ ಮಕ್ಕಳಿಗೆ ಆಟವಾಡಲು ಸಮಸ್ಯೆಯಾಯಿತು. ಕಳೆಗುಂದಿದ ಹಳೆಯ ಬಾಲ್‌ಗಳನ್ನು ಆಟದಲ್ಲಿ ಬಳಸಿರುವುದು ವಿವಾದಕ್ಕೆ ಗುರಿಯಾಯಿತು. ಅಷ್ಟು ವಿದ್ಯಾರ್ಥಿಗಳು ಮಧ್ಯಾಹ್ನ ಆಟದ ನಡುವೆ ಊಟಕ್ಕೆಂದು ಸ್ಥಳೀಯ ಹೋಟಲ್‌ಗಳಿಗೆ ತೆರಳಿದ್ದರು. ಆದರೆ ಅಲ್ಲಿ ಊಟ ಸಿಗದೆ ಪರದಾಡುವಂತಾಯಿತು. ಗಾಯಾಳು ಕ್ರೀಡಾಪಟುಗಳಿಗೆ ಪ್ರಾಥಮಿಕ ಚಿಕಿತ್ಸಾ ಸೌಲಭ್ಯ ಕೂಡ ಸ್ಥಳದಲ್ಲಿ ಇಲ್ಲದಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಯಿತು.

ಸಾರ್ವಜನಿಕರ ಅನಿಸಿಕೆ :

1. 30 ವರ್ಷಗಳಿಂದ ಕ್ರೀಡೆ ಪ್ರೋತ್ಸಾಹಿಸಿಕೊಂಡು ಬಂದಿದ್ದೇನೆ. ಎಲ್ಲಿಯೂ ಇಂತಹ ಕ್ರೀಡಾಕೂಡ ಕಂಡಿರಲಿಲ್ಲ. ಸರ್ಕಾರ ಸಾಕಷ್ಟು ಹಣ ವ್ಯಯಿಸಿ ಮಕ್ಕಳನ್ನು ಹುರಿದುಂಬಿಸುತ್ತದೆ. ಇಲಾಖೆ ಕನಿಷ್ಟ ಜ್ಞಾನವಿಲ್ಲದೆ ಕಾಟಾಚಾರಕ್ಕೆ ಕ್ರೀಡಾಕೂಟ ನಡೆಸುವುದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.
– ಉಮರ್‌ ಫಾರುಕ್‌, ಗುಡ್ಡೇಕೇರಿ ನೇಚರ್‌ ಕ್ಲಬ್‌ ಕಾರ್ಯದರ್ಶಿ

2. ಸೆಪ್ಟೆಂಬರ್‌ 9 ರಂದು ಜಿಲ್ಲಾ ಮಟ್ಟದ ಕ್ರೀಡಾಕೂಟ ಇರುವುದರಿಂದ ಅವಸರದಲ್ಲಿ ಸ್ಥಳೀಯ ಕ್ರೀಡಾಕೂಟ ನಡೆಸಲಾಗಿದೆ. 3 ದಿನಗಳ ಹಿಂದೆ ಕ್ರೀಡೆ ಆಯೋಜನೆಗೊಂಡಿದ್ದರಿಂದ ದಾನಿಗಳನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಆರಂಭದಲ್ಲಿ ಕೆಲವು ಗೊಂದಲಗಳು ಆಗಿದ್ದು ಬಗೆಹರಿಸಲಾಗಿದೆ.
-ವೈ. ಗಣೇಶ್‌, ಕ್ಷೇತ್ರ ಶಿಕ್ಷಣಾಧಿಕಾರಿ

Categories
ರಾಜ್ಯ

ಮದ್ಯಪ್ರಿಯರಿಗೆ ಭರ್ಜರಿ ಸುದ್ದಿ.!

ಮದ್ಯಪ್ರಿಯರಿಗೆ ಭರ್ಜರಿ ಸುದ್ದಿ.!
– ರಾಜ್ಯಾದ್ಯಂತ ಸೂಪರ್ ಮಾರ್ಕೆಟ್, ಮಾಲ್ ಗಳಲ್ಲೂ ಮದ್ಯ ಮಾರಾಟಕ್ಕೆ ಚಿಂತನೆ

NAMMUR EXPRESS NEWS
ಬೆಂಗಳೂರು: ಗ್ಯಾರಂಟಿ ಯೋಜನೆ ಜಾರಿ ಮಾಡಿ ಆರ್ಥಿಕ ಹೊರೆಯಾಗಿರುವುದರಿಂದ ಆದಾಯ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದೆ. ಅಬಕಾರಿ ಮೂಲದಿಂದ ಹೆಚ್ಚಿನ ಆದಾಯ ಗಳಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಮಾಲ್ ಗಳು, ಸೂಪರ್ ಮಾರ್ಕೆಟ್ ಗಳಲ್ಲಿಯೂ ಚಿಲ್ಲರೆ ಮದ್ಯ ಮಾರಾಟ ಮಳಿಗೆಗಳನ್ನು ತೆರೆಯಲು ಪರವಾನಿಗೆ ನೀಡಲು ಚಿಂತನೆ ನಡೆಸಿದೆ.
ಸನ್ನದು ಶುಲ್ಕ ಹೆಚ್ಚಳ, ಹೊಸ ಸನ್ನದು ನೀಡುವುದು ಸೇರಿದಂತೆ ಹಲವು ಕ್ರಮಗಳ ಮೂಲಕ ಅಬಕಾರಿ ಇಲಾಖೆ ಆದಾಯ ವೃದ್ಧಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಇಲಾಖಾ ಮಟ್ಟದಲ್ಲಿ ಈ ಕುರಿತಾಗಿ ಪ್ರಾಥಮಿಕ ಹಂತದ ಚರ್ಚೆ ನಡೆಸಲಾಗಿದೆ.

ಹೊಸ ಪಬ್ ಗಳಿಗೆ ಲೈಸೆನ್ಸ್ ನೀಡಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಬಜೆಟ್ ನಲ್ಲಿ ಅಬಕಾರಿ ಇಲಾಖೆ 36,000 ಕೋಟಿ ಆದಾಯ ಸಂಗ್ರಹ ಗುರಿ ಹೊಂದಿದ್ದು, ಹೆಚ್ಚುವರಿ 4,000 ಕೋಟಿ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ. ಆದಾಯ ವೃದ್ಧಿಗಾಗಿ ಪ್ಲಾನ್ ಮಾಡಿಕೊಳ್ಳಲಾಗಿದ್ದು, ಮಾಲ್ ಗಳು, ಸೂಪರ್ ಮಾರ್ಕೆಟ್ ಗಳಲ್ಲಿಯೂ ಮದ್ಯ ಮಾರಾಟಕ್ಕೆ ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗಿದೆ.

Categories
ಶಿವಮೊಗ್ಗ

ಶಿವಮೊಗ್ಗ ಟಾಪ್ ನ್ಯೂಸ್

– ಡ್ರಾಪ್ ಕೊಡುವ ನೆಪದಲ್ಲಿ ಸುಲಿಗೆ ಇಬ್ಬರು ಯುವಕರ ಬಂಧನ.
-ಗಾಂಜಾ ಮಾರಾಟ ಐವರು ಯುವಕರ ಸೆರೆ.
-ಕೆಳದಿ ಕೆರೆಯಲ್ಲಿ ಶವ ಪತ್ತೆ!
-ಅನೈತಿಕ ಸಂಬಂಧ ಪ್ರಶ್ನಿಸಿದಕ್ಕೆ ಆಕ್ಸಿಡೆಂಟ್ ರೂಪದಲ್ಲಿ ಕೊಲೆ!
-ಸಿಗಂದೂರು ಲಾಂಚ್‌ ಸೇವೆ ಆರಂಭ.ನಿಟ್ಟುಸಿರು ಬಿಟ್ಟ ಸ್ಥಳೀಯರು, ಭಕ್ತರು.

ಭದ್ರಾವತಿ : ಡ್ರಾಪ್ ಕೊಡುವ ನೆಪದಲ್ಲಿ ವ್ಯಕ್ತಿಯೋರ್ವರ ಬಳಿಯಿದ್ದ ನಗನಾಣ್ಯ ಅಪಹರಿಸಿ ಪರಾರಿಯಾಗಿದ್ದ ಆರೋಪದ ಮೇರೆಗೆ, ಇಬ್ಬರನ್ನು ಭದ್ರಾವತಿ ನ್ಯೂಟೌನ್ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಭದ್ರಾವತಿ ತಾಲೂಕು ಸುಲ್ತಾನ್ ಮಟ್ಟಿ ಗ್ರಾಮದ ನಿವಾಸಿಗಳಾದ ಚೇತನ ಹಾಗೂ ಕೀರ್ತನ್ ಕೆ ಬಂಧಿತ ಯುವಕರೆಂದು ಗುರುತಿಸಲಾಗಿದೆ. ಆರೋಪಿತರಿಂದ 11,300 ನಗದು, 2 ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಬೈಕ್ ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಉತ್ತರ ಪ್ರದೇಶ ರಾಜ್ಯದ ಕಾರ್ಮಿಕ ರವೀಂದ್ರ ಯಾದವ್ ಅವರು ಮಾಚೇನಹಳ್ಳಿಗೆ ಹೋಗಲು ಭದ್ರಾವತಿ ಬಸ್ ನಿಲ್ದಾಣದ ಬಳಿ ಬಸ್ ಗೆ ಕಾದು ನಿಂತಿದ್ದರು. ಈ ವೇಳೆ ಬೈಕ್ ನಲ್ಲಿ ಸ್ಥಳಕ್ಕಾಗಮಿಸಿದ ಆರೋಪಿಗಳು ಡ್ರಾಪ್ ಕೊಡುವುದಾಗಿ ಬೈಕ್ ನಲ್ಲಿ ಹತ್ತಿಸಿಕೊಂಡಿದ್ದರು.

ಜೇಡಿಕಟ್ಟೆ ಗ್ರಾಮದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ರವೀಂದ್ರ ಯಾದವ್ ಗೆ ಬೆದರಿಸಿ ಅವರ ಬಳಿಯಿದ್ದ ನಗದು, ಎಟಿಎಂ ಕಾರ್ಡ್, ಮೊಬೈಲ್ ಫೋನ್ ಸುಲಿಗೆ ಮಾಡಿದ್ದರು. ಈ ಕುರಿತಂತೆ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ನಾಗರಾಜ್ ಕೆ.ಆರ್. ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್’ಪೆಕ್ಟರ್ ಶ್ರೀಶೈಲ ಕುಮಾರ್ ಜೆ, ಪಿಎಸ್ಐ ರಮೇಶ್ ಟಿ, ಭಾರತಿ, ಸಿಬ್ಬಂದಿಗಳಾದ ನವೀನ್, ಪ್ರವೀಣ್ ಕುಮಾರ್ ಅವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ

ಗಾಂಜಾ ಮಾರಾಟ ಐವರು ಯುವಕರ ಸೆರೆ.

ಭದ್ರಾವತಿ : ಗಾಂಜಾ ಮಾರಾಟ ಅಡ್ಡೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ, ಐವರು ಯುವಕರನ್ನು ಬಂಧಿಸಿದ ಘಟನೆ ಭದ್ರಾವತಿ ಪಟ್ಟಣದ ಹಳೇನಗರ ಪೊಲೀಸ್ ಠಾಣೆ ವ್ಯಾಪ್ತಿಯ ಭದ್ರಾ ರೈಸ್ ಮಿಲ್ ಸಮೀಪ ನಡೆದಿದೆ.
ಶಿವಮೊಗ್ಗದ ಆರ್.ಎಂ.ಎಲ್ ನಗರದ ನಿವಾಸಿ ಮಹಮ್ಮದ್ ಅಜರುದ್ದೀನ್ ಯಾನೆ ಅಜ್ಜು ಭದ್ರಾವತಿ ಮೋಮಿನ್ ಮೊಹಲ್ಲಾದ ಇಲಿಯಾಜ್ ಬೇಗ್ ಯಾನೆ ಇಲ್ಲು, ಸಮೀರ್ ಖಾನ್ ಯಾನೆ ಮೋಟಾ ಸಮೀರ್, ಕೇರಳ ರಾಜ್ಯದ ಮಲಪ್ಪುರಂನ ಸೈನುದ್ದೀನ್ ಯಾನೆ ಸೈನು , ಶಿವಮೊಗ್ಗದ ಜೆಪಿ ನಗರದ ಅರ್ಬಾಜ್ ಯಾನೆ ಹಜರತ್ ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.

ಕೆಳದಿ ಕೆರೆಯಲ್ಲಿ ಶವ ಪತ್ತೆ!

ಸಾಗರ : ಸಾಗರ ತಾಲೂಕಿನ ಕೆಳದಿ ಗ್ರಾಮಪಂಚಾಯಿತಿ ಕೆಳದಿ ಕೆರೆಯಲ್ಲಿ ಪುರುಷನ ಶವ ಪತ್ತೆಯಾಗಿದೆ ಮೂಲತಃ ಚಿಕ್ಕಬಳ್ಳಾಪುರದ ಚೆಲುವನೇನ ಹಳ್ಳಿವ್ಯಕ್ತಿ ಕಿಶೋರ್ ಮೂವತ್ತೆರಡು ವರ್ಷ ಬಂದಗದ್ದೆ
ಮಹಿಳೆಯನ್ನು ಮದುವೆ ಆಗಿದ್ದ ಎಂದು ಸ್ಥಳಿಯರ ಮಾಹಿತಿ ಸ್ಥಳಕ್ಕೆ ಸಾಗರದ ಗ್ರಾಮಾಂತರ ಪೋಲಿಸ್ ಬೇಟಿ ನೀಡಿ ಪರಿಶೀಲನೆ ನೆಡೆಸುತಿದ್ದಾರೆ ಎಂದು ಮಾಹಿತಿ.

ಅನೈತಿಕ ಸಂಬಂಧ ಪ್ರಶ್ನಿಸಿದಕ್ಕೆ ಆಕ್ಸಿಡೆಂಟ್ ರೂಪದಲ್ಲಿ ಕೊಲೆ!

ಶಿಕಾರಿಪುರ : ಅನೈತಿಕ ಸಂಬಂಧವನ್ನು ಪ್ರಶ್ನೆ ಮಾಡಿ, ಇನ್ನೊಬ್ಬರ ಸಂಸಾರ ಹಾಳು ಮಾಡಬೇಡ ಎಂದ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಕಾರು ಹತ್ತಿಸಿ ಕೊಲೆ ಮಾಡಿರುವ ಘಟನೆ ಬಗ್ಗೆ ಶಿರಾಳಕೊಪ್ಪ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ವರದಿಯಾಗಿದೆ. ಚಂದ್ರನಾಯ್ಕ್​ ಎಂಬವರು ಕೊಲೆಯಾದ ದುರ್ಧೈವಿ. ಈ ಮೊದಲು ಪ್ರಕರಣವನ್ನು ಹಿಟ್ ಆ್ಯಂಡ್ ರನ್ ಕೇಸ್ ಎಂದುಕೊಳ್ಳಲಾಗಿತ್ತು. ಆನಂತರ ಗಾಯಾಳು ಹೇಳಿದ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿದ್ದ ಪೊಲೀಸರು ಇದೊಂದು ಕೊಲೆ ಎಂದು ಪತ್ತೆಮಾಡಿದ್ದಾರೆ.

ಸಿಗಂದೂರು ಲಾಂಚ್‌ ಸೇವೆ ಆರಂಭ.ನಿಟ್ಟುಸಿರು ಬಿಟ್ಟ ಸ್ಥಳೀಯರು, ಭಕ್ತರು.

ತುಮರಿ : ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿದ್ದ ಮುಪ್ಪಾನೆ ಲಾಂಚ್‌ ಸೇವೆ ಪುನಾರಂಭವಾಗುತ್ತಿದೆ. ತುಮರಿ ಗ್ರಾಮ ಪಂಚಾಯಿತಿಯಿಂದ ಕಾರ್ಗಲ್‌ಗೆ ಸಂಪರ್ಕ ಕಲ್ಪಿಸುತ್ತಿತ್ತು. ಸೆ. 3ರಿಂದ ಎಂದಿನಂತೆ ಹಲ್ಲೆ, ಮುಪ್ಪಾನೆ ಲಾಂಚ್ ಕಾರ್ಯನಿರ್ವಹಿಸಲಿದೆ. ಆಗಸ್ಟ್ 25ರಂದು ಮುಪ್ಪಾನೆ ಲಾಂಚ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಇದರಿಂದ ಸೇವೆ ಸ್ಥಗಿತಗೊಂಡಿತ್ತು. ಲಾಂಚ್ ಸೇವೆ ಇಲ್ಲದೆ ಸ್ಥಳೀಯರು ಮತ್ತು ಪ್ರವಾಸಿಗರಿಗೆ ಸಮಸ್ಯೆಯಾಗಿತ್ತು. ಈಗ ಲಾಂಚ್‌ ಪುನಾರಂಭ ಆಗುತ್ತಿದ್ದು ಸ್ಥಳೀಯ ನಿವಾಸಿಗಳು, ಸಿಗಂದೂರು ಪ್ರವಾಸಿ ನಿಟ್ಟುಸಿರು ಬಿಡುವಂತಾಗಿದೆ.

Categories
ಶಿಕ್ಷಣ

ಎಸ್ಎಸ್ ಎಲ್ ಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ಎಸ್ಎಸ್ ಎಲ್ ಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್
– ಇನ್ಮುಂದೆ ವರ್ಷದಲ್ಲಿ ಮೂರು ಬಾರಿ ಪರೀಕ್ಷೆಗೆ ಅವಕಾಶ
– ಸಚಿವ ಮಧು ಬಂಗಾರಪ್ಪ ಘೋಷಣೆ

NAMMUR EXPRESS NEWS
ಬೆಂಗಳೂರು: ಕಲಿಕಾ ಚೇತರಿಕೆಯ ಕಾರಣದಿಂದಾಗಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮೂರು ಬಾರಿ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂಬುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಣೆ ಮಾಡಿದರು. ಮಂಗಳವಾರ ವಿಧಾನಸೌಧದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ಶಾಲಾ ಶಿಕ್ಷಕರಿಗೆ ಇಪ್ಪತ್ತು, ಪ್ರೌಢ ಶಾಲಾ ಶಿಕ್ಷಕರಿಗೆ 20, ವಿಶೇಷ ಶಿಕ್ಷಕರಿಗೆ ಇಬ್ಬರು ಸೇರಿದಂತೆ 31 ಉತ್ತಮ ಶಿಕ್ಷಕರಿಗೆ ರಾಜ್ಯ ಶಿಕ್ಷಕರ ಪ್ರಶಸ್ತಿಯನ್ನು ನೀಡಲಾಗಿದೆ ಎಂದರು.

ಶಾಲೆಗೆ ಹೋಗೋದಕ್ಕೆ ಮಕ್ಕಳಿಗೆ ಶಕ್ತಿ ಬೇಕು. ಮುಂಚೆ ಮೊಟ್ಟೆ ವಾರಕ್ಕೆ ಒಂದು ಕೊಡುತ್ತಿದ್ದೆವು. ಈಗ 1ನೇ ತರಗತಿಯಿಂದ 8ನೇ ತರಗತಿಯವರೆಗೆ ಒಂದು ಮೊಟ್ಟೆ ಕೊಡಲಾಗುತ್ತಿತ್ತು. 10ನೇ ತರಗತಿವರೆಗೆ ವಾರಕ್ಕೆ ಎರಡು ಮೊಟ್ಟೆಯನ್ನು ಕೊಡುವಂತ ನಿರ್ಧಾರವನ್ನು ಸಿಎಂ ಸಿದ್ಧರಾಮಯ್ಯ ಮಾಡಿದರು. 58 ಲಕ್ಷ ಮಕ್ಕಳಿಗೆ ಈಗ ರಾಜ್ಯ ಮಟ್ಟದಲ್ಲಿ ವಾರದಲ್ಲಿ ಎರಡು ದಿನ ಮೊಟ್ಟೆ ನೀಡಲಾಗುತ್ತಿದೆ ಎಂದರು.

ಶಿಕ್ಷಕರ ವರ್ಗಾವಣೆಯ ನಂತರ ಕೆಲವೆಡೆ ಶಿಕ್ಷಕರ ಕೊರತೆ ಉಂಟಾಯಿತು. ಸಿಎಂ ಸಿದ್ಧರಾಮಯ್ಯ ಅವರು ಈ ವಿಚಾರ ಗಮನಿಸಿ, ಅತಿಥಿ ಶಿಕ್ಷಕರ ನೇಮಕಕ್ಕೆ ಅವಕಾಶ ನೀಡಿದರು. 43 ಸಾವಿರ ಮಂದಿ ಈಗ ಅತಿಥಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಶಿಕ್ಷಕರ ದಿನಾಚರಣೆ ಇರೋದರಿಂದ ನಿಮ್ಮ ಮಕ್ಕಳು ಎಷ್ಟು ಒತ್ತಡದಲ್ಲಿ ಓದುತ್ತಿರುತ್ತಾರೆ. ಹೇಗೆ ಒತ್ತಡದಲ್ಲಿ ಇರುತ್ತದೆ ಎಂಬುದು ನನಗೆ ಗೊತ್ತಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಪಿಯುಸಿ, ಎಸ್ ಎಸ್ ಎಲ್ ಸಿ ಯನ್ನು ವರ್ಷದಲ್ಲಿ ಮೂರು ಬಾರಿ ಬರೆಯೋದಕ್ಕೆ ಅವಕಾಶ ನೀಡಲಾಗುತ್ತದೆ ಎಂದರು.

ಹತ್ತನೆ ತರಗತಿಯಲ್ಲಿ ಮೂರು ಬಾರಿ ತೆಗೆದುಕೊಳ್ಳಬಹುದು. ಯಾವುದೇ ಕಾರಣಕ್ಕೂ ಮಕ್ಕಳಿಗೆ ಒಂದು ವರ್ಷ ವ್ಯರ್ಥ ಆಗಬಾರದು ಅಂತ ವರ್ಷದಲ್ಲಿ ಮೂರು ಬಾರಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸುವಂತ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

Categories
ತೀರ್ಥಹಳ್ಳಿ

ಹಿಂದೂ ಧರ್ಮದಿಂದಲೇ ಎಲ್ಲಾ ಧರ್ಮ ಶಾಂತಿಯಿಂದ ನೆಲೆಗೊಂಡಿವೆ

ಹಿಂದೂ ಧರ್ಮದಿಂದಲೇ ಎಲ್ಲಾ ಧರ್ಮ ಶಾಂತಿಯಿಂದ ನೆಲೆಗೊಂಡಿವೆ
– ಜನಸಾಮಾನ್ಯರು ಇದನ್ನು ಹಗುರವಾಗಿ ಪರಿಗಣಿಸಬಾರದು
– ಶಾಸಕ ಆರಗ ಜ್ಞಾನೇಂದ್ರ ಹೇಳಿಕೆ

NAMMUR EXPRESS NEWS
ತೀರ್ಥಹಳ್ಳಿ : ವಿಕೃತ ಮನಸ್ಸಿನವರೆಲ್ಲಾ ಸೇರಿ ಐಎನ್ ಡಿಐಎ ಒಕ್ಕೂಟ ಮಾಡಿಕೊಂಡಿದ್ದಾರೆ. ಇತ್ತೀಚಿಗೆ ಕೇರಳ ಮುಸ್ಲಿಂ ಲೀಗ್ ನ ಸದಸ್ಯರು ಘೋಷಣೆ ಕೂಗಿದ್ದರು. ಹಿಂದುಗಳನ್ನು ಹೊಡೆದು, ದೇವಸ್ಥಾನದ ಮುಂದೆ ನೇಣಿಗೆ ಹಾಕಬೇಕು ಎಂದು ಕೂಗಿದ್ರು. ಜಮ್ಮು ಕಾಶ್ಮೀರದ ಓರ್ವ ಸದಸ್ಯ 370 ಆಕ್ಟ್ ರದ್ದು ಮಾಡಲು ಕೇಸ್ ಹಾಕ್ತಾರೆ. ಇಂತವರೆಲ್ಲಾ ಸೇರಿ ಮೋದಿ ಎದುರು ಒಕ್ಕೂಟ ಮಾಡಿ ಕೊಂಡಿದ್ದಾರೆ. ಇವರು ಅಧಿಕಾರಕ್ಕೆ ಬಂದ್ರೇ ಏನಾಗುತ್ತೇ ಎಂಬ ಸೂಚನೆ ಕೊಡ್ತಿದ್ದಾರೆ ಎಂದು ಮಾಜಿ ಗೃಹ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಸನಾತನ ಧರ್ಮದ ಬಗ್ಗೆ ತಮಿಳುನಾಡಿನ ಸಚಿವರ ಹೇಳಿಕೆ ಬಗ್ಗೆ ಮಾತನಾಡಿದ ಅವರು ತಮಿಳುನಾಡು ಸಚಿವ ಹಾಗೂ ಸಿಎಂ ಪುತ್ರ ಉದಯನಿಧಿ ಹೇಳಿಕೆ ಬಹಳ ಆಶ್ಚರ್ಯವಾಗಿದೆ. ಮದ ಬಂದ ಪ್ರಾಣಿಗಳ ರೀತಿ ವರ್ತನೆ ಮಾಡ್ತಿದ್ದಾರೆ. ಅವರದ್ದು ವಿಕೃತ ಸ್ವಭಾವ. ದೇಶದಲ್ಲಿ ಶೇ.80 ಕ್ಕಿಂತ ಹೆಚ್ಚು ಜನ ಸನಾತನ ಧರ್ಮಿಯರು ಇದ್ದಾರೆ. ಹಿಂದೂ ಧರ್ಮದಿಂದಲೇ ಎಲ್ಲಾ ಧರ್ಮ ಶಾಂತಿಯಿಂದ ನೆಲೆಗೊಂಡಿವೆ. ಆದರೂ, ಕೂಡ ಹಿಂದೂ ಧರ್ಮದ ಬಗ್ಗೆ ಮಾತಾಡ್ತಾರೆ. ಭಾವನಗಳಿಗೆ ಧಕ್ಕೆ ತಂದೂ ಬದುಕಬಹುದು ಎಂಬುದನ್ನು ನಾನು ಖಂಡಿಸುತ್ತೇನೆ ಎಂದರು. ಜನಸಾಮಾನ್ಯರು ಇದನ್ನು ಹಗುರವಾಗಿ ಪರಿಗಣಿಸಬಾರದು. ಐಎನ್ ಡಿಐಎ ಒಕ್ಕೂಟದಲ್ಲಿನ ಕಾಂಗ್ರೆಸ್ ಸಹಿತ ಎಲ್ಲಾ ಪಕ್ಷಗಳು ಈ ವಿಚಾರದಲ್ಲಿ ಉತ್ತರ ಕೊಡಬೇಕು ಎಂದು ಆರಗ ಜ್ಞಾನೇಂದ್ರ ಆಗ್ರಹಿಸಿದರು.

Categories
ರಾಜ್ಯ

ಕೃಷ್ಣ ನೀ ಬೇಗನೇ ಬಾರೋ…!

ಕೃಷ್ಣ ನೀ ಬೇಗನೇ ಬಾರೋ…!
– ರಾಜ್ಯದೆಲ್ಲೆಡೆ ಕೃಷ್ಣ ಜನ್ಮಾಷ್ಟಮಿ ಸಂಭ್ರಮ
– ಕೃಷ್ಣನ ವೇಷ ತೊಡಲು ಮಕ್ಕಳು ಸಜ್ಜು
– ದೇಗುಲಗಳಲ್ಲಿ ವಿಶೇಷ ಪೂಜೆಗೆ ಸಿದ್ಧತೆ

NAMMUR EXPRESS NEWS
ಶ್ರಾವಣ ಮಾಸ ಎಂದರೆ ಹಬ್ಬಗಳು ಶುರು. ಹಿಂದೂಗಳಾದ ನಾವು ಹಬ್ಬಗಳನ್ನು ಕುಟುಂಬ ಸಮೇತ ಅರ್ಥ ಪೂರ್ಣವಾಗಿ ಆಚರಿಸುತ್ತೇವೆ. ಅದರಲ್ಲೂ ಅದ್ದೂರಿಯಿಂದ ಆಚರಿಸುವ ಹಬ್ಬಗಳಲ್ಲಿ ಭಾದ್ರಪದ ಮಾಸದ 8 ನೇ ದಿನ ಬರುವ ಕೃಷ್ಣ ಜನ್ಮಾಷ್ಟಮಿ ಸಹ ಒಂದು. ಈ ಕೃಷ್ಣ ಜನ್ಮಾಷ್ಟಮಿಯನ್ನು ಶ್ರೀ ಹರಿಯ ಎಂಟನೇ ಅವತಾರ ಅದ ಶ್ರೀ ಕೃಷ್ಣ ಹುಟ್ಟಿದ ಜನ್ಮ ದಿನವನ್ನು ಈ ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸಲಾಗುತ್ತದೆ. ಜನ್ಮಾಷ್ಟಮಿಯನ್ನು ಗೋಕುಲಾಷ್ಟಮಿ ಎಂದು ಸಹ ಕರೆಯಲಾಗುತ್ತದೆ.

ಆಚರಣೆ ಹೇಗೆ..?

ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನದಂದು ಬಾಲಕೃಷ್ಣ ರೂಪದಲ್ಲಿ ಪೂಜಿಸಿ ಬಹಳ ವಿಜೃಂಭಣೆಯಿಂದ ಪೂಜಿಸಲಾಗುತ್ತದೆ. ಈ ಅಪೇಕ್ಷಿತ ಫಲ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ದಿನದಂದು ಶ್ರೀಕೃಷ್ಣನಿಗೆ ಹಾಲು ಮತ್ತು ಗಂಗಾಜಲದಿಂದ ಸ್ನಾನ ಮಾಡಿ ಪೂಜಿಸಲಾಗುತ್ತದೆ. ಇಂದು ಕೃಷ್ಣನಿಗೆ ನವಿಲು ಗರಿಗಳು, ಕೊಳಲು, ಕಿರೀಟ, ಶ್ರೀಗಂಧ, ವೈಜಯಂತಿ ಮಾಲೆ, ತುಳಸಿ ದಳ ಇತ್ಯಾದಿಗಳಿಂದ ಅಲಂಕರಿಸಲಾಗುತ್ತದೆ. ಭಕ್ತಿಯಿಂದ ಪೂಜಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ವಿಧ ಬಗ್ಗೆಯ ಖಾದ್ಯವನ್ನು ತಯಾರಿಸಿ ಬಾಲ ಕೃಷ್ಣನಿಗೆ ಅರ್ಪಿಸುತ್ತಾರೆ. ಈದಿನ ಕೃಷ್ಣನ ಬಾಲ ಲೀಲೆಗಳನ್ನು ನೆನೆದು ಬೇದ ಭಾವ ತೋರದೆ ಮೊಸರು ಕುಡಿಕೆ ಉತ್ಸವನ್ನು ಆಚರಿಸಿ ಸಂಭ್ರಮಿಸುತ್ತಾರೆ.

ಮಕ್ಕಳನ್ನು ಬಾಲಕೃಷ್ಣನ ರೂಪದಲ್ಲಿ ನೋಡುವ ಸುದಿನ.

ಈ ದಿನದ ವಿಶೇಷತೆ ಚಿಕ್ಕ ಚಿಕ್ಕ ಮಕ್ಕಳಿಗೆ ರಾಧಾ,ಬಾಲ ಕೃಷ್ಣನ ವೇಷಧರಿಸಿ ಹೆತ್ತವರು ಸಂಭ್ರಮಿಸುತ್ತಾರೆ. ಹಲವು ಸಂಘ ಸಂಸ್ಥೆಗಳು ಕೃಷ್ಣನ ವೇಷದ ಸ್ಪರ್ಧೆಯನ್ನು ಏರ್ಪಡಸಿ ವಿಜೇತರಿಗೆ ಆಕರ್ಷಕ ಬಹುಮಾನವನ್ನು ನೀಡಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಸಮಸ್ತ ಜನತೆಗೆ ಈ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು. ಆ ಕೃಷ್ಣ ಎಲ್ಲರಿಗೂ ಆರೋಗ್ಯ ಆಯಸನ್ನು ನೀಡಲಿ.

Categories
ರಾಷ್ಟ್ರೀಯ ವಾರ್ತೆ

ಪ್ರಧಾನಿ ಮೋದಿ ಒಂದು ರಜೆಯು ತೆಗೆದುಕೊಂಡಿಲ್ಲ..!

ಪ್ರಧಾನಿ ಮೋದಿ ಒಂದು ರಜೆಯು ತೆಗೆದುಕೊಂಡಿಲ್ಲ..!
– 9 ವರ್ಷ ಅಧಿಕಾರದಲ್ಲಿದ್ದರೂ ಕೂಡ ಒಂದು ರಜೆ ಇಲ್ಲ
– ಆರ್‌ಟಿಐ ಮಾಹಿತಿಯಲ್ಲಿ ಬಹಿರಂಗ

NAMMUR EXPRESS NEWS
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಾವು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ 9 ವರ್ಷಗಳಲ್ಲಿ ಒಂದೂ ರಜೆ ತೆಗೆದುಕೊಂಡಿಲ್ಲ ಎಂದು ತಿಳಿದು ಬಂದಿದೆ. ನರೇಂದ್ರ ಮೋದಿ ಅವರು 2014 ರಲ್ಲಿ ಪ್ರಧಾನಿ ಗಾದಿಗೆ ಏರಿದ್ದರು. ಒಂದೂ ರಜೆ ಇಲ್ಲದೇ ಪ್ರಧಾನಿಯವರು ಕೆಲಸ ಮಾಡಿದ್ದಾರೆಂದು ಪಿಎಂಒ ಹೇಳಿದೆ. ಪ್ರಧಾನ ಮಂತ್ರಿ ಕಚೇರಿಗೆ ಪ್ರಫುಲ್ ಎಸ್. ಸರ್ದಾ ಎನ್ನುವರು ಮಾಹಿತಿ ಹಕ್ಕು ಅಧಿನಿಯಮದಡಿ (ಆರ್‌ಟಿಐ) ಮಾಹಿತಿ ಕೋರಿದ್ದರು. ಅಲ್ಲದೇ ಪ್ರಧಾನಿಯವರು ತಾವು ಅಧಿಕಾರ ವಹಿಸಿಕೊಂಡ ನಂತರ ದೇಶ ವಿದೇಶಗಳಲ್ಲಿ 3000ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಜುಲೈ 31, 2023 ರಂದು ಸರ್ದಾ ಅವರು ಆರ್‌ಟಿಐ ಅರ್ಜಿ ಸಲ್ಲಿಸಿದ್ದರು. ಅವರು ಈ ಎರಡು ಮಾಹಿತಿಗಳನ್ನು ಕೇಳಿ ಅರ್ಜಿ ಸಲ್ಲಿಸಿದ್ದರು.ಈ ಆರ್‌ಟಿಐ ಅರ್ಜಿಯ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಪ್ರಧಾನಿ ಮೋದಿ ಅವರು ರಜೆ ತೆಗೆದುಕೊಳ್ಳದೇ ಕೆಲಸ ಮಾಡುತ್ತಾರೆ ಎಂಬುದನ್ನು ಪ್ರಶಂಶಿಸಿದ್ದಾರೆ.