Categories
ತೀರ್ಥಹಳ್ಳಿ

ಕೃಷ್ಣ ಜನ್ಮಾಷ್ಟಮಿ; ಮಕ್ಕಳ ಅಲಂಕಾರದ ಉಡುಪುಗಳಿಗೆ ಭರ್ಜರಿ ಬೇಡಿಕೆ

ಕೃಷ್ಣ ಜನ್ಮಾಷ್ಟಮಿ; ಮಕ್ಕಳ ಅಲಂಕಾರದ ಉಡುಪುಗಳಿಗೆ ಭರ್ಜರಿ ಬೇಡಿಕೆ
– ನಾನಾ ಬಗೆಗಳಲ್ಲಿ ಅಂಗಡಿಗಳಿಗೆ ಎಂಟ್ರಿ ನೀಡುತ್ತಿದೆ ಕೃಷ್ಣನ ಉಡುಪು
– ಅತ್ಯಾಕರ್ಷಕ ಕಿರೀಟ-ಕೊಳಲು ಖರೀದಿಯಲ್ಲಿ ಮುಗಿಬಿದ್ದ ಜನತೆ

NAMMUR EXPRESS NEWS
ತೀರ್ಥಹಳ್ಳಿ: ಕೃಷ್ಣ ಜನ್ಮಾಷ್ಟಮಿ ಬಂತೆಂದರೆ ಸಾಕು ಪೋಷಕರು ತಮ್ಮ ಮಕ್ಕಳಗೆ ಕೃಷ್ಣನ ವೇಷ ಧರಿಸಿ ಸಂಭ್ರಮಿಸುತ್ತಾರೆ. ಪ್ರತಿವರ್ಷದಂತೆ ಈ ವರ್ಷವೂ ಕೂಡ ಕೃಷ್ಣ ಜನ್ಮಾಷ್ಟಮಿಗೆ ನಾನಾ ಕಡೆ ಫ್ಯಾನ್ಸಿ ಡ್ರೆಸ್ ಹಾಗೂ ಫೋಟೊಶೂಟ್ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಪೋಷಕರು ಚಿಣ್ಣರಿಗೆ ಕೃಷ್ಣನ ಅವತಾರ ಮಾಡುವುದು ಕಾಮನ್ ಆಗಿದೆ. ಫ್ಯಾನ್ಸಿ ಸ್ಟೋರ್ ಹಾಗೂ ಬ್ಯೂಟಿ ಪಾರ್ಲರ್ ಗಳಲ್ಲಂತೂ ರಾಧಾ,ಕೃಷ್ಣರ ವೇಷ ಭೂಷಣಗಳದ್ದೇ ಹಾವಳಿ. ಎಲ್ಲಿ ನೋಡಿದರೂ ಮುತ್ತಿನ ಸರ, ಶಲ್ಯ, ಕೃಷ್ಣನ ಬಟ್ಟೆ, ಕೊಳಲು, ಕಿರೀಟ ಸೇರಿದಂತೆ ನಾನಾ ಬಗೆಯ ವಸ್ತುಗಳು ಕಣ್ಮನ ಸೆಳೆಯುತ್ತಿದ್ದು ಇದಕ್ಕೆ ಪೂರಕ ಎಂಬಂತೆ, ಅಂಗಡಿಗಳಲ್ಲಿ ಕೃಷ್ಣನ ಉಡುಪು ಹಾಗೂ ಕೃಷ್ಣ ಧರಿಸುವ ಆಕ್ಸೆಸರೀಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ.

ಪುಟ್ಟ ಮಕ್ಕಳನ್ನು ಕೃಷ್ಣನಂತೆ ಬಿಂಬಿಸುವ ಮಿನಿ ಧೋತಿ-ಶಲ್ಯ:

ದೋತಿ ಶಲ್ಯ ಧರಿಸಿದಾಗ ಪುಟ್ಟ ಮಕ್ಕಳನ್ನು ಮುದ್ದು ಕೃಷ್ಣನಂತೆ ಬಿಂಬಿಸುವ ಮಿನಿ ಸೈಝಿನ ಬಾರ್ಡರ್ ಧೋತಿ ಹಾಗೂ ಶಲ್ಯಗಳು ಈ ಕೃಷ್ಣ ಜನ್ಮಾಷ್ಟಮಿಗೆ ನಾನಾ ಬಗೆಯಲ್ಲಿ ಎಂಟ್ರಿ ನೀಡಿವೆ. ಚಿಕ್ಕ ಕಂದಮ್ಮಗಳಿಂದಿಡಿದು ದೊಡ್ಡ ಮಕ್ಕಳಿಗೂ ಇವು ಲಭ್ಯ.

ಕೃಷ್ಣನ ಡ್ರೆಸ್‌ಗೆ ಮ್ಯಾಚಿಂಗ್ ಆಕ್ಸೆಸರೀಸ್‌ಗಳು :

ಕೃಷ್ಣನ ಫ್ಯಾನ್ಸಿ ಡ್ರೆಸ್‌ಗೆ ಮ್ಯಾಚಿಂಗ್ ಮಾಡಬಹುದಾದ ಪುಟ್ಟ ಹಾರ, ನೆಕ್ಲೆಸ್,ಸೊಂಟದ ಪಟ್ಟಿ, ಕಿವಿಯೊಲೆ ಸೇರಿದಂತೆ ಬಾಲಕೃಷ್ಣನ ಅಲಂಕಾರಕ್ಕೆ ಬೇಕಾದಂತ ಸೆಟ್‌ ಗಳು ದೊರೆಯುತ್ತಿದ್ದು ಇವುಗಳಿಗೂ ಬೇಡಿಕೆ ಹೆಚ್ಚಿದೆ.

ಅತ್ಯಾಕರ್ಷಕ ಕಿರೀಟ-ಕೊಳಲು :

ಎಲ್ಲದಕ್ಕಿಂತ ಹೆಚ್ಚಾಗಿ ಬೇಡಿಕೆಯಲ್ಲಿರುವುದು ಪುಟ್ಟ ಕಿರೀಟಗಳು. ಇನ್ನು ನಾನಾ ವಿನ್ಯಾಸದ ಕೊಳಲುಗಳು ಆಗಮಿಸಿದ್ದು, ಜನತೆಯು ಮಕ್ಕಳಿಗೆ ಕೊಳಲು ಹಾಗೂ ಕಿರೀಟ ಖರೀದಿಸಲು ಮುಗಿಬಿದ್ದಿರುವಂತ ದೃಶ್ಯಗಳು ಕಂಡುಬರುತ್ತಿವೆ.

Categories
ತೀರ್ಥಹಳ್ಳಿ

ಗೃಹಲಕ್ಷ್ಮಿ ಯೋಜನೆ: ಅಕೌಂಟ್‌ಗೆ ಬಂತಾ 2000 ರೂಪಾಯಿ?

ಗೃಹಲಕ್ಷ್ಮಿ ಯೋಜನೆ: ಅಕೌಂಟ್‌ಗೆ ಬಂತಾ 2000 ರೂಪಾಯಿ?
– ಬ್ಯಾಂಕ್ ಮುಂದೆ ಗೃಹಲಕ್ಷ್ಮಿಯರ ಕ್ಯೂ!
– ಪಾಸ್ ಬುಕ್ ಎಂಟ್ರಿ ಮೆಷಿನ್ ಬಳಿ ಸರದಿ ಸಾಲು
– ಮಹಿಳೆಯರನ್ನು ನಿಯಂತ್ರಿಸಲು ಸೆಕ್ಯೂರಿಟಿ ಗಾರ್ಡ್ ಹರಸಾಹಸ

NAMMUR EXPRESS NEWS
ತೀರ್ಥಹಳ್ಳಿ: ಗೃಹಲಕ್ಷ್ಮಿ ಯೋಜನೆ ಈಗಾಗಲೇ ಜಾರಿಯಾಗಿದೆ. ಮನೆ ಯಜಮಾನಿ ಖಾತೆಗೆ ಮೊದಲ ತಿಂಗಳ 2 ಸಾವಿರ ರೂಪಾಯಿ ಜಮೆಯೂ ಆಗಿದೆ. ಆದರೆ ಅದೆಷ್ಟೋ ಗೃಹಲಕ್ಷ್ಮಿಯರಿಗೆ ಇನ್ನೂ ಹಣ ಬಂದಿಲ್ವಂತೆ! ಅದಕ್ಕೆ ಅವರೆಲ್ಲ ಬ್ಯಾಂಕ್ ಮುಂದೆ ಜಮಾಯಿಸಿದ್ದಾರೆ! ಗೃಹಲಕ್ಷ್ಮಿ ಯೋಜನೆ ಜಾರಿ ಎಫೆಕ್ಟಿಂದಾಗಿ ಖಾಸಗಿ ಬ್ಯಾಂಕ್ ಗಳ ಮುಂದೆ ಮಹಿಳೆಯರು ಸಾಲುಗಟ್ಟಿ ನಿಂತಿರುವುದು ಕಂಡುಬರುತ್ತಿದೆ. ಖಾತೆ ಬ್ಯಾಲೆನ್ಸ್ ಚೆಕ್ ಮಾಡಿಕೊಳ್ಳಲು ಬ್ಯಾಂಕಿಗೆ ಆಗಮಿಸುತ್ತಿರುವ ಗೃಹಲಕ್ಷ್ಮಿಯರು, ಕೈಯಲ್ಲಿ ಪಾಸ್ ಬುಕ್ ಹಿಡಿದು, ಪಾಸ್ ಬುಕ್ ಎಂಟ್ರಿ ಮೆಷಿನ್ ಬಳಿ ಸರದಿ ಸಾಲು ನಿಂತಿದ್ದಾರೆ.

ಮಹಿಳೆಯರನ್ನು ನಿಯಂತ್ರಿಸಲು ಸೆಕ್ಯೂರಿಟಿ ಗಾರ್ಡ್ ಹರಸಾಹಸ ಪಡುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆ ಈಗಾಗಲೇ ಜಾರಿಯಾಗಿದೆ. ಆದರೆ ತಮ್ಮ ಮೊಬೈಲಿಗೆ ಮೆಸೇಜ್ ಬಂದಿಲ್ಲ ಅಂತ ಮಹಿಳೆಯರು ಕಂಗಾಲಾಗಿದ್ದರು. ಹೀಗಾಗಿ ತಮ್ಮ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಹಣ ಬಂದಿದ್ಯೋ ಇಲ್ಲೋ ತಿಳಿದುಕೊಳ್ಳಲು ಬ್ಯಾಂಕ್ ಮುಂದೆ ಜಮಾಯಿಸಿದ್ದಾರೆ.
ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ: ರಾಜ್ಯದ ಗೃಹಲಕ್ಷ್ಮಿಯರಿಗೆ ಸರ್ಕಾರ ಗುಡ್‌ನ್ಯೂಸ್ ಕೊಟ್ಟಿದ್ದು, ಮತ್ತೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಕೊಟ್ಟಿದೆ. ಸೆಪ್ಟೆಂಬರ್ 10ರ ವರೆಗೂ ರೇಷನ್ ಕಾರ್ಡ್ ತಿದ್ದುಪಡಿಗೆ ಸರ್ಕಾರ ಅವಕಾಶವನ್ನು ನೀಡಿದೆ.

ಮನೆ ಮುಖ್ಯಸ್ಥೆಯಾಗಿ ಮಹಿಳೆಯರ ಹೆಸರನ್ನು ಬದಲಾಯಿಸಲು ಅವಕಾಶ ನೀಡಿರುವ ಸರ್ಕಾರ, ಹೆಸರು ತಿದ್ದುಪಡಿ ಹಾಗೂ ಹೆಸರು ಕೈಬಿಡಲು ಅಷ್ಟೇ ಅವಕಾಶ ನೀಡಿದೆ. ಇನ್ನು, ರೇಷನ್ ಕಾರ್ಡ್ನಲ್ಲಿ ಮನೆಯ ಒಡತಿ ಯಾರು ಇರಲಿಲ್ಲ ಎಂದರೆ ಹೊಸ ಹೆಸರು ರೇಷನ್ ಕಾರ್ಡ್‌ಗೆ ಸೇರಿಸಲು ಅವಕಾಶ ನೀಡಲಾಗಿದೆ. ರೇಷನ್ ಕಾರ್ಡ್, ಆಧಾರ್ ಕಾರ್ಡ್‌ನಲ್ಲಿ ಒಂದು ಹೆಸರು ಇದ್ದು, ಹೆಸರು ಮ್ಯಾಚ್ ಆಗ್ತಿಲ್ಲ ಎಂದರೇ ಕೂಡಲೇ ಅಂತವರು ತಮ್ಮ ಹೆಸರನ್ನು ಕಾರ್ಡ್‌ನಲ್ಲಿ ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದೆ. ಒಂದೊಮ್ಮೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿಲ್ಲ ಎಂದರೇ ಹೆಸರು ಕಾರ್ಡ್ ತಿದ್ದುಪಡಿ ಮಾಡಿದ ಬಳಿಕ ಗ್ಯಾರಂಟಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು.

Categories
ಶಿಕ್ಷಣ

ಅಕ್ಷರ, ಬದುಕು ಕಲಿಸಿದ ಗುರುಗಳಿಗೆ ನಮಸ್ಕಾರ!

ಅಕ್ಷರ, ಬದುಕು ಕಲಿಸಿದ ಗುರುಗಳಿಗೆ ನಮಸ್ಕಾರ!
– ಶಿಕ್ಷಕರ ದಿನದಂದು ಎಲ್ಲೆಡೆ ಗುರುಗಳಿಗೆ ನಮನ
– ಏನಿದು ವಿಶೇಷ… ಜಗತ್ತಿನ ಶಕ್ತಿ ಗುರುಗಳೇ ಹೇಗೆ?

NAMMUR EXPRESS NEWS :
ಗುರುರ್ಬ್ರಹ್ಮ ಗುರುರ್ವಿಷ್ಣು
ಗುರುರ್ದೇವೋ ಮಹೇಶ್ವರಃ
ಗುರು: ಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀ ಗುರವೇ ನಮಃ
ಗುರುವಿನಲ್ಲಿ ದೇವರನ್ನು ಕಾಣುತ್ತೇವೆ ಎಂಬುದಕ್ಕೆ ನಿದರ್ಶನವೆ ಈ ಶ್ಲೋಕ.
ದೇಶದ ಸಮೃದ್ಧಿಗೆ ಹಾಗೂ ಭದ್ರತೆಗೆ ತನ್ನದೆ ಆದ ಕೊಡುಗೆಯನ್ನೂ ಕೊಡುವ ಎಲ್ಲ ಗುರುಗಳಿಗೆ ಶಿಕ್ಷಕರ ದಿನಾಚರಣೆ ಶುಭಾಶಯಗಳು.
“ಮುಂದೆ ಗುರಿ ಇರಬೇಕು ಹಿಂದೆ ಗುರು ಇರ್ಬೇಕು”ಏಷ್ಟು ಅರ್ಥ ಪೂರ್ಣಾವಾದ ಮಾತು ಅಲ್ವಾ?. ಏನೇ ಒಂದು ಸಾಧನೆ ಮಾಡ್ಬೇಕು ಆಂದರೆ ಗುರಿಯ ಜೊತೆ ಗುರುವಿನ ಪಾಲು ಬಹು ದೊಡ್ಡದು. ಸೆ.5ಗುರುಗಳನ್ನು ನೆನೆಯುವ ದಿನ. ದೇಶದಲ್ಲಿ ಎಲ್ಲೆಡೆ ಗುರುಗಳನ್ನು ನೆನೆಯುವ ಕೆಲಸ ನಡೆಯುತ್ತಿದೆ. ಆದರೆ ಈ ಗುರು ನಮನ ಒಂದು ದಿನಕ್ಕೆ ಸೀಮಿತವಾಗಬಾರದು.

ಸೆ.5 ಏಕೆ ಶಿಕ್ಷಕರ ದಿನ ಆಚರಣೆ ಮಾಡ್ತಾರೆ?

ಶಿಕ್ಷಕರ ದಿನವನ್ನು ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಆಚರಿಸಲಾಗುತ್ತದೆ. ಇವರು ಸೆಪ್ಟೆಂಬರ್ 5, 1888 ರಂದು ತಿರುತ್ತಾನಿ ಪಟ್ಟಣದಲ್ಲಿ ಜನಿಸಿದರು. ಅತ್ಯುತ್ತಮ ಶಿಕ್ಷಕ, ತತ್ವಜ್ಞಾನಿ ಮತ್ತು ರಾಜ್ಯಪಾಲರೂ ಆಗಿದ್ದ ಇವರ ನೆನಪಿಗಾಗಿ ಶಿಕ್ಷಕರ ದಿನಾಚರಣೆಯನ್ನ ಆಚರಿಸಲಾಗುತ್ತದೆ.

ಒಬ್ಬ ಗುರುವಿನ ಪ್ರೇರಣೆಯೇ ಸಾಧನೆಗೆ ದಾರಿ

ಒಬ್ಬ ಗುರುವಿನಿಂದ ಎಂತಹ ವ್ಯಕ್ತಿಯನ್ನು ಸೃಷ್ಟಿ ಮಾಡುವ ಶಕ್ತಿಯು ಉಂಟು. ದೇಶ ಪ್ರೇಮದ ಸೆಳೆತದ ಗಡಿಯಲ್ಲಿ ಎದುರಾಳಿಗಳನ್ನು ಸದೆ ಬಡಿಯುವ ಸೈನಿಕರನ್ನು ಸೃಷ್ಟಿಸುವ , ದೇಶಕ್ಕೆ ಕೊಡುವ ಎಲ್ಲಾ ರಂಗದ ಶ್ರೇಷ್ಠರನ್ನು ನಮ್ಮ ಗುರುಗಳು ತಯಾರು ಮಾಡಿದ್ದಾರೆ. ಗುರುಕುಲ ಶಿಕ್ಷಣದಿಂದ ಹಿಡಿದು ಇಂದಿನ ಆಧುನಿಕ ಯುಗದ ಶಿಕ್ಷಣದವರೆಗೂ ಗುರುಗಳು ತಮ್ಮ ಜೀವನವನ್ನೂ ವಿದ್ಯಾರ್ಥಿ ಜೀವನ ರೂಪಿಸಲು ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಜೊತೆಗೆ ಬದುಕನ್ನು ಬಲಪಡಿಸುತ್ತಾರೆ. ಜೀವನದ ಪ್ರತಿಯೊಂದು ಅಂಶಗಳನ್ನು ತಿದ್ದಿ ತೀಡಿ ಮತ್ತು ಜವಾಬ್ದಾರಿ ಬಗ್ಗೆ ನಮಗೆ ಕಲಿಸುತ್ತಾರೆ. ವಿದ್ಯಾರ್ಥಿಗಳ ಬದುಕು ಯಾವಾಗಲೂ ಹಸನಾಗಿರಲಿ ಎಂದು ಹಾರೈಸುವ ಅವರ ಪ್ರಯತ್ನಗಳನ್ನು ಗುರುತಿ ಸಿ ಅವರಿಗೆ ಗೌರವವನ್ನು ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಇತ್ತೀಚಿಗೆ ಗುರುಗಳ ಬಗ್ಗೆ ಶಿಷ್ಯರಿಗೆ ಗೌರವ ಇಲ್ಲದಿರುವುದು ಎಲ್ಲಾ ಕಡೆ ಕಾಣುತಿದೆ. ಇದು ಸಂಸ್ಕೃತಿ, ಜೀವನದ ಅಧಪತನ ಎಂದ್ರೆ ತಪ್ಪಾಗಲಾರದು. ಒಬ್ಬ ಗುರುವಿಗೆ ಗೌರವ ಕೊಡದವರು ಏನನ್ನೂ ಸಾಧಿಸಲಾರ.

ಏನೇ ಇರಲಿ, ಅಕ್ಷರ ಬದುಕು ಕಲಿಸಿದ ಎಲ್ಲಾ ಗುರುಗಳಿಗೂ ನಮನಗಳು. ಕಷ್ಟದಲ್ಲಿರುವ ಗುರುಗಳಿಗೆ ಶಿಷ್ಯರು ಸಹಕಾರ ಮಾಡುವ ಮನೋಭಾವ ಬೆಳೆಸಿಕೊಳ್ಳಲಿ.

ಗುರುಗಳಿಗೆ ನಮಸ್ಕಾರಗಳು

– ನಮ್ಮೂರ್ ಎಕ್ಸ್ ಪ್ರೆಸ್ ಕರ್ನಾಟಕ

Categories
ತೀರ್ಥಹಳ್ಳಿ

ತೋಟಕ್ಕೆ ಪಲ್ಟಿಯಾದ ಕಾರು: ಪ್ರಯಾಣಿಕರು ಪಾರು!

ತೋಟಕ್ಕೆ ಪಲ್ಟಿಯಾದ ಕಾರು: ಪ್ರಯಾಣಿಕರು ಪಾರು!
– ತೀರ್ಥಹಳ್ಳಿಯ ಕಲ್ಮನೆ ಬಳಿ ಘಟನೆ
– ತೀರ್ಥಹಳ್ಳಿ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳ ಪುಂಡಾಟ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಆಗುಂಬೆ ಮಾರ್ಗದ ಕಲ್ಮನೆ ಬಳಿ ಕಾರೊಂದು ತೋಟಕ್ಕೆ ಪಲ್ಟಿಯಾಗಿ ಕಾರಲ್ಲಿ ಇದ್ದ ಮೂವರು ಜೀವಾಪಾಯದಿಂದ ಪಾರಾದ ಘಟನೆ ಸೋಮವಾರ ನಡೆದಿದೆ.
ಅತೀ ವೇಗದ ಚಾಲನೆ ಕಾರಣ ಎನ್ನಲಾಗಿದೆ. ಸ್ಥಳೀಯರು ಕಾರಿನ ಗ್ಲಾಸ್ ಒಡೆದು ಕಾರಲ್ಲಿದ್ದವರನ್ನು ಹೊರಗೆ ತೆಗೆದಿದ್ದಾರೆ.
ತರೀಕೆರೆ ಮೂಲದವರು ತಮ್ಮ ಮಗುವನ್ನು ಕಾರ್ಕಳಕ್ಕೆ ಬಿಟ್ಟು ಊರಿಗೆ ಹೋಗುವಾಗ ಘಟನೆ ನಡೆದಿದೆ.

ತೀರ್ಥಹಳ್ಳಿ ಬಸ್ ನಿಲ್ದಾಣದಲ್ಲಿ ಪುಂಡಾಟ!

ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣದಲ್ಲಿ ಹುಡುಗರ ಪುಂಡಾಟ ಮಿತಿ ಮೀರಿದ್ದು ಇನ್ನು ಪಿಯುಸಿ, ಡಿಗ್ರಿ ವಿದ್ಯಾರ್ಥಿಗಳು ಮದ್ಯಪಾನ ಮಾಡಿ ಗಲಾಟೆ ಮಾಡುತ್ತಿದ್ದ ವೇಳೆ ಪೊಲೀಸರು ವಶಕ್ಕೆ ಪಡೆದು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಬಸ್ ನಿಲ್ದಾಣದಲ್ಲಿ ಪುಂಡರ ಹಾವಳಿ ಹೆಚ್ಚಾಗಿದ್ದು ಅನೇಕರು ಕಾಲೇಜು, ಕೆಲಸಕ್ಕೆ ಹೋಗದೆ ಇಲ್ಲಿ ಬಂದು ಕುಳಿತಿರುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Categories
ತೀರ್ಥಹಳ್ಳಿ

ಕುಡಿಯುವ ನೀರು ಯೋಜನೆ ಮಾಹಿತಿ ರಹಸ್ಯ ಏಕೆ?

ಕುಡಿಯುವ ನೀರು ಯೋಜನೆ ಮಾಹಿತಿ ರಹಸ್ಯ ಏಕೆ?
– ಭೀಮನಕಟ್ಟೆ ಬಳಿ ಯೋಜನೆ ವಿರೋಧಿಸಿ ಪ್ರತಿಭಟನೆ
– ಹೋರಾಟಗಾರರಿಗೆ ರೈತ ಸಂಘ ಸಾಥ್

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕು, ಕಸಬಾ ಹೋಬಳಿ ಕೋಡ್ಲು ಗ್ರಾಮದ ಸ.ನಂ. 142ರಲ್ಲಿ, ಜಲ, ಜೀವನ್‌ ಮಿಷನ್‌ ಯೋಜನೆಯಡಿಯಲ್ಲಿ ಮುಲುಬಾಗಿಲು ಹಾಗೂ ಇತರೆ ಜನವಸತಿಗಳ ಬಹು ಗ್ರಾಮದ ಕುಡಿಯುವ ನೀರು ಅನುಷ್ಠಾನಗೊಳಿಸಲು 4-00 ಎಕರೆ ಜಮೀನು ಸ್ವತ್ತನ್ನು ಕಾರ್ಯಪಾಲಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಇವರಿಗೆ ವಾಟರ್ಟ್ರೀಟ್ ಮೆಂಟ್ ಪ್ಲಾಂಟ್ ಹಾಗೂ ಜಾಕ್ ವೆಲ್ ನಿರ್ಮಾಣದ ಉದ್ದೇಶಕ್ಕೆ ಜಮೀನು ಮಂಜೂರು ಮಾಡಲಾಗಿದೆ. ಮಾಲತಿ ನದಿ ಮತ್ತು ತುಂಗಾ ನದಿ ಸೇರುವ ಭೀಮೇಶ್ವರ ಸಂಗಮದಲ್ಲಿ ಜಾಗದಲ್ಲಿ ಜಾಕ್‌ವೆಲ್ ನಿರ್ಮಾಣ ಮಾಡುತ್ತಿರುವುದು ಈ ನದಿಯ ನೀರನ್ನು ಉಪಯೋಗಿಸಿಕೊಂಡು ಈ ಯೋಜನೆ ಅನುಷ್ಠಾನಗೊಳಿಸುತ್ತಿದ್ದು, ಒಟ್ಟು ಆರು ಗ್ರಾಮ ಪಂಚಾಯತ್ ವ್ಯಾಪ್ತಿಯ ರೈತರು ಮತ್ತು ಸಾರ್ವಜನಿಕರಿಗೆ ಮಾಲತಿ, ಮತ್ತು ಆಧಾರದಲ್ಲಿ ಕೃಷಿ ಚಟುವಟಿಕೆ ಮತ್ತುಕುಡಿಯಲು ಉಪಯೋಗಿಸಿಕೊಂಡು ಬಂದಿದ್ದು ಈ ಆರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮದ ರೈತರ ಕೃಷಿ ಚಟುವಟಿಕೆಗೆ ಮಾಲತಿ ಮತ್ತು ತುಂಗಾ ಅಧಾರವಾಗಿರುತ್ತದೆ. ಇಲ್ಲಿನ ವಾಸಿಗಳಿಗೆ ಗ್ರಾಮ ಪಂಚಾಯತ್‌ ವತಿಯಿಂದ ನೀರಿನ ಸೌಲಭ್ಯವನ್ನು ಮಾಲತಿ ಮತ್ತು ತುಂಗಾ ನದಿಯಿಂದ ನೀಡುತ್ತಿದ್ದಾರೆ.

ನದಿಯ ನೀರು ಕುಡಿಯುವ ಮೇಲ್ಕಂಡಂತೆ ಕೋಡು ಗ್ರಾಮದ ಸವರಿ 142ರಲ್ಲಿ 4-00 ಎಕರೆ ಜಮೀನು ಮಂಜೂರು ಮಾಡಿರುವ ಬಗ್ಗೆ ಆರ್ ಟಿ ಸಿ ಇಂಡೀಕರಣ ಗೊಂಡಿರುವುದಿಲ್ಲ. ಅದ್ದರಿಂದ ತಾವುಗಳು ದಯಾ ಮಾಡಿ, ಸದರಿ ಮಂಜೂರಾತಿ ಬಗ್ಗೆ ಮ್ಯುಟೇಷನ್ ದಾಖಲೆ ನಮೂದು ಮಾಡುವುದು ಮತ್ತು ಇತರೆ ದಾಖಲೆ ನಮೂದು ಮಾಡಬಾರದು ಎಂದು ಭೀಮೇಶ್ವರ ಸಂಗದು ಉಳಿಸಿ ಹೋರಾಟ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಈ ಯಾವ ಮಾಹಿತಿಗಳೂ ಸ್ಥಳೀಯ ರೈತ ಬಾಂಧವರಿಗೆ ತಿಳಿದಿರುವುದಿಲ್ಲ. ಇವರುಗಳ ನಡೆ ನುಡಿಯಿಂದ ರೈತ ಕುಟುಂಬಗಳಿಗೆ ಸಂದೇಹ ಬಂದು ಈ ಜಾಡನ್ನು ಹಿಡಿದು ಹೊರಟಾಗ ಅನೇಕ ರೈತ ವಿರೋಧಿ ಹೆಜ್ಜೆಗಳು ಕಂಡು ಬಂದಿರುತ್ತದೆ. ಎಚ್ಚೆತ್ತು ಕೊಂಡ ರೈತ ಬಾಂಧವರು ಪಕ್ಷಾತೀತವಾಗಿ ಸಂಘಟನೆಗೊಂಡು ಭೀಮೇಶ್ವರ ಸಂಗಮ ಉಳಿಸಿ ಹೋರಾಟ ಸಮಿತಿ ರಚಿಸಿಕೊಂಡಿರುತ್ತೇವೆ. ಭೀಮನಕಟ್ಟೆ ಸಂಗಮವನ್ನು ಈ ಕಾಮಗಾರಿಗೆ ಬಳಸಿಕೊಳ್ಳುವುದರಿಂದ ಪ್ರಕೃತಿ ದತ್ತವಾಗಿ ಸಿಕ್ಕಿರುವ ಪಾವಿತ್ರ್ಯತೆ ಕಳೆದು ಕೊಳ್ಳುವ ಭೀತಿ ಸುತ್ತುಮುತ್ತಲ ರೈತರಿಗೆ ಅಗಿದೆ. ಮಾಹಿತಿಯನ್ನು ನಿಯಮನುಸಾರ ನೀಡಿರುವುದಿಲ್ಲ. ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ದೊರಕಿಸಿಕೊಡಬೇಕು.

ಯೋಜನೆಯನ್ನು ಸುಮಾರು 20 ಕ್ಕೂ ಹೆಚ್ಚು ನದಿ ತಟದ ಗ್ರಾಮ ಪಂಚಾಯಿತಿಗಳನ್ನು ಒಳಗೊಂಡಿರುವ ನಮ್ಮ ತಾಲ್ಲೂಕಿನಲ್ಲಿ ಐದಾರು ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಅನುಷ್ಠಾನ ಮಾಡಿದ್ದೆ ಅದಲ್ಲಿ ನಮ್ಮ ತಾಲ್ಲೂಕಿಗೆ ಅನುಕೂಲ ಆಗುತ್ತದೆ. ಈ ಬಗ್ಗೆ ಗಮನಹರಿಸಬೇಕು ಎಂದು ಹೋರಾಟಗಾರರು ಅಗ್ರಹಿಸಿದ್ದಾರೆ.

ರಾಜಕೀಯ ಬಣ್ಣ ಬೇಡ: ಕೋಡ್ಲು ವೆಂಕಟೇಶ್

ಹೋರಾಟಕ್ಕೆ ಯಾವುದೇ ರಾಜಕೀಯ ಬಣ್ಣ ಕಟ್ಟುವುದು ಬೇಡ. ಸರ್ಕಾರದ ಯೋಜನೆ ಅನುಷ್ಠಾನವಾದರೆ ಎಂದರೆ ರಾಜಕಾರಣಿಗಳು ಮತ್ತು ಗುತ್ತಿಗೆದಾರರಿಗೆ ಇದರ ಲಾಭ ಹೆಚ್ಚಾಗಿ ಲಭಿಸುತ್ತದೆ. ಈ ಯೋಜನೆಯಲ್ಲಿಯೂ ಜನರು, ಗ್ರಾಮಸ್ಥರ ಉದ್ದಾರ ನಗಣ್ಯ. ಅಭಿವೃದ್ಧಿ ಕೇಂದ್ರೀಕೃತ ವ್ಯವಸ್ಥೆಯ ಮೂಲಕ ಜಾರಿಯಾಗುತ್ತಿದ್ದು ಇದೊಂದು ದೊಡ್ಡ ಮಾಫಿಯಾ ರೀತಿಯಲ್ಲಿ ಬೆಳೆದಿದೆ. ಮಲೆನಾಡಿನ ನಿಸರ್ಗ, ನೆಲ ದೋಚುವ ಹುನ್ನಾರ ಎಂದು ರೈತ ಸಂಘದ ಅಧ್ಯಕ್ಷ ಕೋಡ್ಲು ವೆಂಕಟೇಶ್‌ ದೂರಿದರು.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ರಾಮೇಶ್ವರ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಮಹಾರುದ್ರ ಹೋಮ

ತೀರ್ಥಹಳ್ಳಿ ರಾಮೇಶ್ವರ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಮಹಾರುದ್ರ ಹೋಮ
– ದೇವಸ್ಥಾನದ ಅಭಿವೃದ್ಧಿಗೆ ಬೇಕಿದೆ ಶಾಶ್ವತ ಸಮಿತಿ
– ತಹಸೀಲ್ದಾರ್ ನೇತೃತ್ವದಲ್ಲಿ ಸಮಿತಿ ರಚನೆಗೆ ಸಾರ್ವಜನಿಕರ ಒತ್ತಾಯ

NAMMUR EXPRESS NEWS
ತೀರ್ಥಹಳ್ಳಿ : ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರಾದ ಉಭಯ ಜಗದ್ಗುರುಗಳ ಪೂರ್ಣಾನುಗ್ರಹದಿಂದ ಶ್ರೀ ಶೋಭಕೃತ್‌ನಾಮ ಸಂವತ್ಸರದ ಶ್ರಾವಣ ಬಹುಳ ಏಕಾದಶಿ ದಿನಾಂಕ 10- 09-2023 ನೇ ಭಾನುವಾರ ಮತ್ತು ದ್ವಾದಶಿ ದಿನಾಂಕ 11- 09-2023 ನೇ ಸೋಮವಾರ ದಂದು ಶ್ರೀ ರಾಮೇಶ್ವರ ದೇವರ ಸನ್ನಿಧಿಯಲ್ಲಿ ಲೋಕಕಲ್ಯಾಣಾರ್ಥವಾಗಿ “ಮಹಾರುದ್ರ ಪುರಶ್ಚರಣ ಹೋಮ” ನಡೆಸಲು ಸಂಕಲ್ಪಿಸಲಾಗಿದೆ. ಭಕ್ತಾದಿಗಳು ಈ ದೇವತಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ತನು-ಮನ-ಧನದೊಂದಿಗೆ ಸಹಕರಿಸಿ, ಶ್ರೀ ಸ್ವಾಮಿಯ ತೀರ್ಥಪ್ರಸಾದವನ್ನು ಸ್ವೀಕರಿಸಿ, ಶ್ರೀ ರಾಮೇಶ್ವರ ದೇವರ ಕೃಪಾನುಗ್ರಹಕ್ಕೆ ಪಾತ್ರರಾಗಲು ಸಮಿತಿಯ ಸೊಪ್ಪುಗುಡ್ಡೆ ರಾಘವೇಂದ್ರ ಕೋರಿದ್ದಾರೆ.

ದೇವಸ್ಥಾನದಲ್ಲಿ ಕಾರ್ಯಕ್ರಮ ಏನಿರುತ್ತೆ? :

ದಿನಾಂಕ 10-09-2023 ನೇ ಭಾನುವಾರ ಶ್ರಾವಣ ಬಹುಳ ಏಕಾದಶಿ ಬೆಳಗ್ಗೆ ಗಂಟೆ 8-00 ಕ್ಕೆ “ಫಲನ್ಯಾಸ, ದೇವತಾ ಪ್ರಾರ್ಥನೆ” ತುಂಗಾ ನದಿಯಿಂದ “ಆಕ್ರೋದಕ ಅನಯನ” ಗಣಹೋಮ, “ಮಹಾರುದ್ರ ಪುರಶ್ಚರಣ” ಹೋಮ ಪ್ರಾರಂಭ, ಮಧ್ಯಾಹ್ನ ಗಂಟೆ 01- 30 ಕ್ಕೆ “ಮಹಾಮಂಗಳಾರತಿ” ದಿನಾಂಕ 11-09-2023 ನೇ ಸೋಮವಾರ ಶ್ರಾವಣ ಬಹುಳ ದ್ವಾದಶಿ ಬೆಳಗ್ಗೆ ಗಂಟೆ 08-00 ರಿಂದ “ಪುಣ್ಯಾಹ” “ಮಹಾರುದ್ರ ಪುರಶ್ಚರಣೆ ಹೋಮ” ಮಧ್ಯಾಹ್ನ ಗಂಟೆ 12-00 ಕ್ಕೆ ಪೂರ್ಣಾಹುತಿ, ಪ್ರಸಾದ ವಿನಿಯೋಗ” ನಂತರ ಸಾರ್ವಜನಿಕ “ಅನ್ನಸಂತರ್ಪಣೆ” ನೆಡೆಯಲಿದೆ. ರಾಮೇಶ್ವರ ದೇವಸ್ಥಾನದ ಅಭಿವೃದ್ಧಿಗಾಗಿ ಬೇಕಾಗಿದೆ ಶಾಶ್ವತ ಸಮಿತಿ

ತಹಸೀಲ್ದಾರ್ ಗಮನಿಸಲಿ :

ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನ ಈಗಾಗಲೇ ಪುನಃ ಪ್ರತಿಷ್ಠಾಪನೆ ಆಗಿ ಅಭಿವೃದ್ಧಿ ಆಗುತ್ತಿದೆ. ಅಭಿವೃದ್ಧಿ ಮಾಡುವ ಸಲುವಾಗಿ ಸ್ವಯಂ ಸೇವಕರಾಗಿ ಹಲವು ಮಂದಿ ಸಮಿತಿ ಎಂಬಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ದೇವಸ್ಥಾನದ ಅಭಿವೃದ್ಧಿ ಮಾಡಲು ಶಾಶ್ವತ ಸಮಿತಿಯ ಅಗತ್ಯವಿದ್ದು ಈ ಬಗ್ಗೆ ತಾಲೂಕು ತಹಸೀಲ್ದಾರ್ ಮತ್ತು ಶಾಸಕರು ಗಮನವಹಿಸಬೇಕಿದೆ. ರಾಮೇಶ್ವರ ದೇವಸ್ಥಾನ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು ದೇವಸ್ಥಾನದಿಂದ ವರ್ಷಕ್ಕೆ ಎಂಟರಿಂದ ಹತ್ತು ಲಕ್ಷ ಹಣವನ್ನು ಮುಜರಾಯಿ ಇಲಾಖೆಯವರು ಕಾಣಿಕೆ ಹುಂಡಿಯಿಂದ ತೆಗೆದುಕೊಂಡು ಹೋಗುತ್ತಾರೆ. ಆದರೆ ದೇವಸ್ಥಾನದ ಅಭಿವೃದ್ಧಿಗಾಗಿ ಸರ್ಕಾರದಿಂದ ಆದಾಯ ಬರುವುದಿಲ್ಲ. ಹಾಗೂ ದೇವಸ್ಥಾನವನ್ನು ನೋಡಿಕೊಳ್ಳಲು ಅಭಿವೃದ್ಧಿಯ ದೃಷ್ಠಿಯಿಂದ ಶಾಶ್ವತ ಸಮಿತಿಯೊಂದನ್ನು ತಹಸೀಲ್ದಾರ್ ನೇತೃತ್ವದಲ್ಲಿ ಮಾಡಬೇಕಿದೆ.
ಇತ್ತೀಚಿಗೆ ದೇವಸ್ಥಾನದಲ್ಲಿ ಹಲವು ಕಾರ್ಯಕ್ರಮಗಳು ನೆಡೆಯುತ್ತಿದ್ದು ಸರ್ಕಾರದಿಂದ ಯಾವುದೇ ಅನುದಾನ ಸಿಗುತ್ತಿಲ್ಲ. ದೇವಸ್ಥಾನದ ಹಣವನ್ನು ತೆಗೆದುಕೊಂಡು ಹೋಗುವ ಸರ್ಕಾರ ದೇವಸ್ಥಾನದ ಅಭಿವೃದ್ಧಿ ಕೂಡ ನೋಡಬೇಕಿದೆ. ಈ ಕಾರಣಕ್ಕೆ ಜಿಲ್ಲಾಧಿಕಾರಿಗಳು ತಹಸೀಲ್ದಾರ್ ನೇತೃತ್ವದಲ್ಲಿ ಸಮಿತಿ ರಚನೆಗೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

 

Categories
ಬೆಂಗಳೂರು ರಾಜ್ಯ

ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಬಿಗ್ ಶಾಕ್

ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಬಿಗ್ ಶಾಕ್
– ಹೆಚ್ಚುವರಿ ಅಕ್ಕಿ ಹಣ ಜಮಾಗೆ ಬ್ರೇಕ್!
– ಅನ್ನಭಾಗ್ಯ ಯೋಜನೆಗೆ ಹೊಸ ನಿಯಮ

NAMMUR EXPRESS NEWS
ಬೆಂಗಳೂರು: ರಾಜ್ಯ ಸರ್ಕಾರದಿಂದ ಅನ್ನಭಾಗ್ಯ ಫಲಾನುಭವಿಗಳಿಗೆ ಹೆಚ್ಚುವರಿ ಐದು ಕೆ.ಜಿ ಅಕ್ಕಿ ಸಿಗದ ಕಾರಣ, ಹಣ ಹಾಕೋದಾಗಿ ಘೋಷಣೆ ಮಾಡಲಾಗಿತ್ತು. ಅಲ್ಲದೇ ಜುಲೈ, ಆಗಸ್ಟ್ ತಿಂಗಳ ಹಣ ಕೂಡ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿತ್ತು. ಆದ್ರೇ ಈ ಹಣದ ನಿರೀಕ್ಷೆಯಲ್ಲಿದ್ದಂತ ರೇಷನ್ ಕಾರ್ಡ್ ದಾರರಿಗೆ ಮಾತ್ರ, ಕೆಲ ಕಾರಣಗಳಿಂದ ಹಣ ಜಮಾ ಮಾಡಲಾಗುತ್ತಿಲ್ಲ.

ಅದು ಯಾಕೆ.?

ಯಾರಿಗೆ ಅಂತ ಮುಂದೆ ಓದಿ. ರಾಜ್ಯ ಕಾಂಗ್ರೆಸ್ ಸರ್ಕಾರ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯ ಸುಮಾರು 29 ಲಕ್ಷ ಫಲಾನುಭವಿ ಕುಟುಂಬಗಳಿಗೆ ನೇರ ನಗದು ವರ್ಗಾವಣೆ ಮಾಡದೇ ಬ್ರೇಕ್ ಹಾಕಿದೆ. ಸರ್ಕಾರದ ವಿವಿಧ ತಾಂತ್ರಿಕ ಕಾರಣದ ನೆಪ ಹೇಳಿ, ಯೋಜನೆಯ ಅರ್ಹ ಫಲಾನುಭವಿ ಕುಟುಂಬಗಳಿಗೆ ಸವಲತ್ತು ನೀಡದೇ ಅರ್ಧ ಚಂದ್ರ ತೋರಿಸಿದೆ. ಅಲ್ಲದೇ ಫಲಾನುಭವಿಗಳ ಕುಟುಂಬದ ಗರಿಷ್ಠ ಸದಸ್ಯರ ಮಿತಿ ದಾಟಿ, ಸತತ ಮೂರು ತಿಂಗಳಿನಿಂದ ಪಡಿತರ ಪಡೆಯದ ಕುಟುಂಬಗಳಿಗೆ ಡಿಬಿಟಿ ಸವಲತ್ತು ಸ್ಥಗಿತಗೊಳಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವಂತ ಆಹಾರ ಇಲಾಖೆಯ ಹೆಚ್ಚುವರಿ ನಿರ್ದೇಶಕ ಜ್ಞಾನೇಂದ್ರ ಕುಮಾರ್ ಅವರು, ತಾಂತ್ರಿಕ ದೋಷದ ಕಾರಣ 29 ಲಕ್ಷ ರೇಷನ್ ಕಾರ್ಡ್ ಕುಟುಂಬಗಳಿಗೆ ಡಿಬಿಟಿ ಸ್ಥಗಿತಗೊಳಿಸಿದ್ದೇವೆ. ಈ ಸವಲತ್ತಿನಿಂದ ವಂಚಿತವಾಗಿರುವ ಫಲಾನುಭವಿ ಕುಟುಂಬಗಳು ಪಡಿತರ ಚೀಟಿಯಲ್ಲಿ ತಿದ್ದುಪಡಿಗೆ ಅರ್ಜಿ ಸಲ್ಲಿಸಿದ್ದರೇ ಸರಿಪಡಿಸಿ, ಸವಲತ್ತು ಕಲ್ಪಿಸುತ್ತೇವೆ ಎಂದು ಹೇಳಿದ್ದಾರೆ.

ಅನ್ನಭಾಗ್ಯ ಯೋಜನೆಗೆ ಹೊಸ ನಿಯಮ:

ಸತತ ಮೂರು ತಿಂಗಳಿಂದ ಪಡಿತರ ಪಡೆಯದ ಸುಮಾರು 5.40 ಲಕ್ಷ ಕುಟುಂಬಗಳಿಗೆ ಹಾಗೂ ಎಎವೈ ಯೋಜನೆಯ ಗರಿಷ್ಠ ಕುಟುಂಬ ಸದಸ್ಯರ ಮಿತಿ ದಾಟಿದಂತ 3.50 ಲಕ್ಷ ಕುಟುಂಬಗಳಿಗೆ ಡಿಬಿಟಿ ಮೂಲಕ ಹಣ ವರ್ಗಾಯಿಸಿಲ್ಲ. ಹಣ ತಡೆ ಹಿಡಿದಿರುವ ಸರ್ಕಾರ ಪಡಿತರ ಮಾತ್ರ ವಿತರಿಸುತ್ತಿದೆ. ಈ ಮೂಲಕ ಅನ್ನಭಾಗ್ಯ ಫಲಾನುಭವಿಗಳಾಗಿದ್ದಂತ ಇವರಿಗೆ, ಈ ನಿಯಮದಡಿ ಹೆಚ್ಚುವರಿ ಅಕ್ಕಿ ಹಣ ಖಾತೆಗೆ ಜಮಾ ಮಾಡಿಲ್ಲ. ಹೀಗಾಗಿ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಹೆಚ್ಚುವರಿ ಅಕ್ಕಿಯ ಹಣ ನಿರೀಕ್ಷೆಯಲ್ಲಿದ್ದಂತ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದೆ. ಮೂರು ತಿಂಗಳಿಂದ ರೇಷನ್ ತಗೊಳ್ಳದೇ ಇರೋರು, ಗರಿಷ್ಠ ಕುಟುಂಬದ ಮಿತಿಯನ್ನು ಮೀರಿದವರಿಗೆ ಹೆಚ್ಚುವರಿ ಅಕ್ಕಿ ಹಣ ಜಮಾಗೆ ಬ್ರೇಕ್ ಹಾಕಿದೆ.

Categories
ಮಲ್ನಾಡ್

ಮಲೆನಾಡಿನಲ್ಲಿ ಕೋಲ್ಡ್ ವೈರಸ್!

ಮಲೆನಾಡಿನಲ್ಲಿ ಕೋಲ್ಡ್ ವೈರಸ್!
– ನಿರ್ಲಕ್ಷ ಮಾಡಿದ್ರೆ ನಿಮಗೂ ಬರುತ್ತೆ ಜೊತೆಗಿದ್ದವರಿಗೂ ಬರುತ್ತೆ…
– ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಗುಣ ಆಗ್ತಿಲ್ಲ!?

NAMMUR EXPRESS NEWS
ಮಲೆನಾಡು :- ಮಲೆನಾಡ ಜಿಲ್ಲೆಯಾದ್ಯಂತ ಜ್ವರ ಶೀತ ವೈರಲ್ ಫೀವರ್ ಹರಡಲಿದೆ. ಆಸ್ಪತ್ರೆಗಳಲ್ಲಿ ವೈರಲ್ ಫೀವರ್ ಪ್ರಕರಣಗಳು ಹೆಚ್ಚಾಗಿ ದಿನನಿತ್ಯವೂ ಆಸ್ಪತ್ರೆಗಳು ರೋಗಿಗಳಿಂದ ತುಂಬಿಹೋಗಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆದರು ಗುಣಮುಖವಾಗುತ್ತಿಲ್ಲ, ಮಾತ್ರೆಗಳು ನಾಟುತ್ತಿಲ್ಲ, ಈ ಕಾರಣದಿಂದ ಅನಾರೋಗ್ಯದಿಂದ ಬಳಲುವರ ಸಂಖ್ಯೆ ಹೆಚ್ಚಾಗುತ್ತಿದೆ. ಮಾಸ್ಕ್ ಧರಿಸಿ ಇನ್ನೊಬ್ಬರಿಗೆ ತಗಲದಂತೆ ಎಚ್ಚರ ವಹಿಸಿ. ಶೀತ,ಜ್ವರ,ತಲೆನೋವು, ಮೈಕೈ ನೋವು, ಕಣ್ಣು ನೋವು, ಸೊಂಟ ನೋವು, ಗಂಟಲು ಉರಿ, ಬಾಯಿ ಒಣಗುವುದು, ಹೊಟ್ಟೆ ಉರಿ, ರೋಗದ ಲಕ್ಷಣ,ವಾತಾವರಣ ಏರುಪಾಯರಾದಂತೆಲ್ಲ ಅನಾರೋಗ್ಯದ ಸಮಸ್ಯೆ ಹೆಚ್ಚಾಗುತ್ತಿದೆ. ಡೆಂಗ್ಯೂ, ಚಿಕನ್ ಗುನ್ಯಾ,ಮಲೇರಿಯಾ,ವೈರಸ್ ಹೆಚ್ಚಾಗುತ್ತಿದ್ದು ಸ್ಥಳೀಯ ಆಸ್ಪತ್ರೆಗಳಲ್ಲಿ ರಕ್ತ ಪರಿಶೀಲನೆ ಮಾಡಿಸಿ ಆರೋಗ್ಯ ಕಾಪಾಡಿಕೊಳ್ಳಿ

 

Categories
ಶಿವಮೊಗ್ಗ

ನರೇಗಾ ದಿನಗೂಲಿ ನೌಕರರಿಗೆ ವೇತನ ವಿಳಂಬ!

ನರೇಗಾ ದಿನಗೂಲಿ ನೌಕರರಿಗೆ ವೇತನ ವಿಳಂಬ!
– ಜಿಪಂ ಕಚೇರಿ ಎದುರು ಪ್ರತಿಭಟನೆ
– ವೇತನ ಬಿಡುಗಡೆಗೊಳಿಸುವಂತೆ ಆಗ್ರಹ

NAMMUR EXPRESS NEWS
ಶಿವಮೊಗ್ಗ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ದಿನಗೂಲಿ ನೌಕರರ ವೇತನ ವಿಳಂಬವಾಗುತ್ತಿರುವ ಬಗ್ಗೆ ಜಿಪಂ ಕಚೇರಿಯಲ್ಲಿ ಪ್ರತಿಭಟನೆ ನಡೆದಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸಹಾಯಕ ಜಿಲ್ಲಾ ಕಾರ್ಯಕ್ರಮ ಸಂಯೋಜಕರು, ಜಿಲ್ಲಾ ಎಮ್.ಐ.ಎಸ್, ಸಂಯೋಜಕರು, ಜಿಲ್ಲಾ ಐಇಸಿ ಸಂಯೋಜಕರು, ಜಿಲ್ಲಾ ಅಕೌಂಟ್ ಮ್ಯಾನೇಜರ್, ತಾಲ್ಲೂಕು ಎಮ್.ಐ.ಎಸ್. ಸಂಯೋಜಕರು, ತಾಲ್ಲೂಕು ಸಂಯೋಜಕರು, ತಾಲ್ಲೂಕು ಆಡಳಿತ ಸಹಾಯಕರು, ತಾಂತ್ರಿಕ ಸಂಯೋಜಕರು (ಸಿವಿಲ್ ಮತ್ತು ಕೃಷಿ/ತೊಟಗಾರಿಕೆ), ತಾಂತ್ರಿಕ ಸಹಾಯಕರು (ಸಿಎಲ್, ಕೃಷಿ, ತೋಟಗಾರಿಕೆ ಹಾಗೂ ಅರಣ್ಯ ಇಲಾಖೆ ಹಾಗೂ ಡಾಟ ಎಂಟ್ರಿ ಆಪರೇಟರ್‌ಗಳು ಸೇವೆ ಸಲ್ಲಿಸುತ್ತಿದ್ದು, ಇವರಿಗೆ ಎಪ್ರಿಲ್ 2023 ರಿಂದ ಇಲ್ಲಿಯವರೆಗೆ ವೇತನ ಪಾವತಿ ಆಗಿರುವುದಿಲ್ಲ ಎಂದು ಆರೋಪಿಸಲಾಗಿದೆ.

ಪ್ರತಿಭಟನಾಕಾರರು ವೇತನ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಜಿಪಂ ಆವರಣದ ಮುಂದೆ ಧರಣಿ ಕುಳಿತಿದ್ದಾರೆ. ರಾಜ್ಯದಲ್ಲಿ 2500 ಜನ ನರೇಗಾ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದು ಜಿಲ್ಲೆಯಲ್ಲಿ 115 ಜನ ನರೇಗಾ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Categories
ಚಿಕ್ಕಮಗಳೂರು

ಗಾಂಜಾ ಮಾರಾಟ ವಿಚಾರದಲ್ಲಿ ಗ್ಯಾಂಗ್ ವಾರ್!

ಗಾಂಜಾ ಮಾರಾಟ ವಿಚಾರದಲ್ಲಿ ಗ್ಯಾಂಗ್ ವಾರ್!
– ಗಾಂಜಾ ಪೆಡ್ಲರ್‌ಗಳ ನಡುವೆ ಮಾರಾಮಾರಿ
– ಐವರ ಮೇಲೆ ಮಾರಣಾಂತಿಕ ಹಲ್ಲೆ: ಚಿಕ್ಕಮಗಳೂರುನಲ್ಲಿ ಘಟನೆ
– ಕಾಫಿ ನಾಡಲ್ಲಿ ಹೆಚ್ಚುತ್ತಿದೆ ಗಾಂಜಾ ದಂಧೆ!

NAMMUR EXPRESS NEWS
ಚಿಕ್ಕಮಗಳೂರು : ಗಾಂಜಾ ಮಾರಾಟ ವಿಚಾರವಾಗಿ ಪೆಡ್ಲರ್‌ಗಳ ನಡುವೆ ಮಾರಾಮಾರಿ ನಡೆದಿದ್ದು, ಕುಖ್ಯಾತ ಗಾಂಜಾ ಪೆಡ್ಲರ್ ಇಬ್ರಾಹಿಂ ಮೇಲೆ ಲಾಂಗ್, ಡ್ಯಾಗರ್‌ನಿಂದ ಮಾರಣಾಂತಿಕ ಹಲ್ಲೆ ಮಾಡಿರುವಂತಹ ಘಟನೆ ನಗರದ ಗೌರಿಕಾಲುವೆ ಬಳಿ ನಡೆದಿದೆ. ನದೀಂ ಸಹಚರರಾದ ಸಾದಿಕ್, ಜುಕರ್, ಜೀಷಾನ್ ಸೇರಿ ಐವರಿಂದ ಹಲ್ಲೆ ಮಾಡಲಾಗಿದೆ.

ಚಿಕ್ಕಮಗಳೂರು, ಸೆಪ್ಟೆಂಬರ್ 3ರಂದು ನದೀಂ ಸಹಚರರಾದ ಸಾದಿಕ್, ಜುಕರ್, ಜೀಷಾನ್ ಸೇರಿ ಐವರಿಂದ ಹಲ್ಲೆ ಮಾಡಲಾಗಿದೆ. ಸದ್ಯ ಗಾಯಾಳು ಇಬ್ರಾಹಿಂನನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ದಿನೇ ದಿನೇ ಹಚ್ಚುತ್ತಿರುವ ಗಾಂಜಾ ಪ್ರಕರಣಗಳು ಗಾಂಜಾ ಸಮೇತ ಸಿಕ್ಕಿರುವ ಘಟನೆಗಳು ನಡೆಯುತ್ತಿದೆ
ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.